Article 370: ಆರ್ಟಿಕಲ್‌ 370 ರದ್ದು ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌; ಮೋದಿ ಸರ್ಕಾರದ ನಿರ್ಧಾರಕ್ಕೆ ಜಯ - Vistara News

ಕೋರ್ಟ್

Article 370: ಆರ್ಟಿಕಲ್‌ 370 ರದ್ದು ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌; ಮೋದಿ ಸರ್ಕಾರದ ನಿರ್ಧಾರಕ್ಕೆ ಜಯ

ಆರ್ಟಿಕಲ್‌ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ಮೋದಿ ಸರ್ಕಾರಕ್ಕೆ ಐತಿಹಾಸಿಕ ಜಯ ಸಂದಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಆರ್ಟಿಕಲ್‌ 370 ತಾತ್ಕಾಲಿಕವಾಗಿದ್ದು, ಆ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರದಲ್ಲಿ ಐತಿಹಾಸಿಕ ಜಯ ದೊರೆತಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ನೇತೃತ್ವದ ಸಾಂವಿಧಾನಿಕ ಪೀಠವು ನಡೆಸಿದ ಸುದೀರ್ಘ ಅವಧಿಯ ವಿಚಾರಣೆಯನ್ನು ಅಂತಿಮಗೊಳಿಸಿ, ಈ ಬಗ್ಗೆ ತೀರ್ಪು ನೀಡಿದೆ. ಸೆಪ್ಟೆಂಬರ್ 5ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 16 ದಿನಗಳ ಕಾಲ ಸಮಗ್ರ ವಿಚಾರಣೆ ನಡೆದಿತ್ತು. ಅರ್ಜಿದಾರರು ಮತ್ತು ಸರ್ಕಾರ ಇಬ್ಬರೂ ತಮ್ಮ ವಾದಗಳನ್ನು ಮಂಡಿಸಿದ್ದರು. ಆರ್ಟಿಕಲ್ 370 ಅನ್ನು ರದ್ದುಗೊಳಿಸಲು ಬಳಸಿದ ಕಾರ್ಯವಿಧಾನದ ಸಾಂವಿಧಾನಿಕತೆ, ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಹಾಗೂ ನಂತರದ ರದ್ದತಿಯನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗಿತ್ತು.

ಆರ್ಟಿಕಲ್ 370 ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ದಾಖಲಾಗಿದ್ದವು. ದೂರಗಾಮಿ ಪರಿಣಾಮಗಳನ್ನು ಬೀರು ಮತ್ತು ಹೆಗ್ಗುರಾತಾಗಬಹುದಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೀರ್ಘ ಸಮಯದಿಂದ ನಡೆಸುತ್ತಾ ಬಂದಿದೆ. 16 ಮ್ಯಾರಥಾನ್ ದಿನಗಳ ವಿಚಾರಣೆಗಳು ಮತ್ತು ಎರಡೂ ಕಡೆಯವರು ಮಂಡಿಸಿದ ವಾದಗಳ ನಂತರ, ನ್ಯಾಯಾಲಯವು ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.

ಸಂವಿಧಾನ ಪೀಠದ ಪರಿಶೀಲನೆ

ಆರ್ಟಿಲ್ 370 ರದ್ಧತಿಯ ಕುರಿತಾದ ಎಲ್ಲ ಆಯಾಮಗಳನ್ನು, ಸಾಂವಿಧಾನಿಕ ನಿಲುವುಗಳನ್ನು ಪೀಠ ಪರಿಶೀಲಿಸಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದ ಮೇಲೆ ರಾಷ್ಟ್ರಪತಿ ಆಡಳಿತ, ಸಂಸತ್ತಿನ ಒಪ್ಪಿಗೆ, ರಾಜ್ಯ ಮರು ಸಂಘಟನೆಯಂಥ ಘಟನೆಗಳನ್ನು ಸಂವಿಧಾನ ಪೀಠವು ಪರಿಶೀಲಿಸಿದೆ. ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣ್ಯಂ, ದುಶ್ಯಂತ್ ದವೆ ಮತ್ತು ರಾಜೀವ್ ಧವನ್ ಸೇರಿದಂತೆ 18 ವಕೀಲರು ಕೇಂದ್ರದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿ ವಾದ ಮಂಡಿಸಿದರೆ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಇತರ ಕಾನೂನು ತಜ್ಞರು ಕೇಂದ್ರವನ್ನು ಪ್ರತಿನಿಧಿಸಿ, ಕೇಂದ್ರದ ನಿರ್ಧಾರವು ಸಂಪೂರ್ಣವಾಗಿ ತಾರ್ಕಿಕ ಮತ್ತು ಸೂಕ್ತವಾಗಿದೆ ಎಂದು ವಾದ ಮಂಡಿಸಿದ್ದರು.

ತೀರ್ಪಿನ ಕುರಿತ ಇನ್ನಷ್ಟು ವಿವರಗಳು ಇಲ್ಲಿ ಪ್ರಕಟವಾಗಲಿವೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ಇನ್ನೆಂದೂ ಸ್ಥಾಪಿತವಾಗದು ಎಂದ ಗುಲಾಂ ನಬಿ ಆಜಾದ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉಡುಪಿ

Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರ! ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯ

Forced Conversion : ಪ್ರೀತಿ ಹೆಸರಿನಲ್ಲಿ ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮತಾಂತಕ್ಕೆ ಒಲ್ಲೆ ಎಂದವಳ ಕಪಾಳಕ್ಕೆ ಹೊಡೆದು ಕಿರುಕುಳ ಕೊಟ್ಟ ವೈದ್ಯನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM


on

By

Conversion to Islam in the name of love
Koo

ಉಡುಪಿ: ಇಸ್ಲಾಂಗೆ ಮತಾಂತರವಾಗುವಂತೆ (Forced Conversion) ವೈದ್ಯನಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಸಹಪಾಠಿ ವೈದ್ಯ ವಿದ್ಯಾರ್ಥಿನಿಯಿಂದಲೇ ಈ ಸಂಬಂಧ ದೂರು ದಾಖಲಾಗಿದೆ. ಸದ್ಯ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ಡ್ಯಾನಿಷ್ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿಗಾಗಿ ವೈದ್ಯ ವಿದ್ಯಾರ್ಥಿಗಳು ದೆಹಲಿ ಮತ್ತು ರಾಜಸ್ಥಾನದಿಂದ ಮಣಿಪಾಲಕ್ಕೆ ಬಂದಿದ್ದರು. ಈ ನಡುವೆ ವೈದ್ಯ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದಾಗಲೇ ಮಹಮ್ಮದ್‌ ಡ್ಯಾನಿಷ್‌ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ. ಆದರೆ ಇಸ್ಲಾಂಗೆ ಮತಾಂತರವಾಗಬೇಕೆಂದು ಸಂತ್ರಸ್ತೆಗೆ ಷರತ್ತು ಹಾಕಿದ್ದ. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಆ.31ರಂದು ದೂರು ದಾಖಲಾಗಿತ್ತು.

ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇವರಿಬ್ಬರು ಕ್ಯಾಂಪಸ್‌ನಲ್ಲಿ ಪರಿಚಯವಾಗಿದ್ದರು. ಬಳಿಕ ಮಹಮ್ಮದ್‌ ಡ್ಯಾನಿಷ್‌ ಸಂತ್ರಸ್ತೆಯ ಫೋನ್ ನಂಬರ್ ಪಡೆದುಕೊಂಡು ಗೆಳೆತನ ಬೆಳೆಸಿದ್ದ. ನಂತರ 2024ರ ಜ.22 ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನಂತೆ.

ಇದನ್ನೂ ಓದಿ:Fraud Case: ಟ್ರೇಡಿಂಗ್‌ ಹೆಸ್ರಲ್ಲಿ ಕೋಟಿ ಕೋಟಿ ಗುಳುಂ; ಗುಜರಿ ವ್ಯಾಪಾರಿಗೆ ಖೋಟಾ ನೋಟು ಕೊಟ್ಟು ವಂಚನೆಗೆ ಯತ್ನ

2024ರ ಮಾ.11ರಂದು ಸಂತ್ರಸ್ತೆ ಯುವತಿ ಆರೋಪಿ ಮಹಮ್ಮದ್‌ ರೂಮಿಗೆ ತೆರಳಿದ್ದಳಂತೆ. ಆಗ ಆತ ಮತಾಂತರಕ್ಕೆ ಒತ್ತಾಯಿಸಿದ್ದನಂತೆ. ಮತಾಂತಕ್ಕೆ ನಿರಾಕರಿಸಿದಾಗ ಆರೋಪಿ ಮಹಮ್ಮದ್‌ ಸಂತ್ರಸ್ತೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾಳೆ. ಜತೆಗೆ ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದ ಎಂಬ ಆರೋಪವೂ ಇದೆ.

2024ರ ಆ.28 ರವರೆಗೂ ಫೋನ್‌ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣದ ಸಂಬಂಧ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ (27) ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೋರ್ಟ್‌ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

CM Siddaramaiah : ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್; ಸೆ.9ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

CM Siddaramaiah: ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.9ಕ್ಕೆ ಮತ್ತೆ ಮುಂದೂಡಿಕೆ ಮಾಡಲಾಗಿದೆ. ಮುಂದಿನ ಸೋಮವಾರದವರೆಗೂ ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್‌ ಸಿಕ್ಕಿದೆ.

VISTARANEWS.COM


on

By

CM Siddaramaiah
Koo

ಬೆಂಗಳೂರು: ಮುಂದಿನ ಸೋಮವಾರದವರೆಗೂ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಸೆ.9ಕ್ಕೆ ಮುಂದೂಡಿಕೆಯಾಗಿದೆ. ಕಳೆದ ವಿಚಾರಣೆಯಲ್ಲಿ ರಾಜ್ಯಪಾಲರ ಪರವಾಗಿ ವಕೀಲ ತುಷಾರ ಮೆಹ್ತಾ , ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ಹಾಗೂ ಪ್ರದೀಪ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು. ಸುದೀರ್ಘ ವಾದ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ (ಸೆ.2) ಮಧ್ಯಾಹ್ನಕ್ಕೆ ಮುಂದೂಡಿತ್ತು.

ಇಂದು ಸೋಮವಾರ (ಸೆ.2) ಮತ್ತೆ ಪ್ರತಿವಾದಿಗಳ ಪರ ಕೆಲ ವಕೀಲರಿಂದ ವಾದ ಮಂಡನೆ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ಆಗಮಿಸಿದ್ದರು. ದೂರದಾರ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್‌ ವಾದ ಆರಂಭಿಸಿದ್ದರು. 17A ಸಂಬಂಧಿಸಿದಂತೆ ಅನುಮತಿ ಬೇಕೋ, ಬೇಡವೋ ಎಂಬುದರ ಬಗ್ಗೆ ಹಿರಿಯ ವಕೀಲ ಕೆ.ಜಿ ರಾಘವನ್‌ ವಾದ ಮಂಡನೆ ಮಾಡಿದರು. 17-A ಮೇಲೆ ಪ್ರಾಸಿಕ್ಯೂಷನ್‌ಗೆ ಕೊಡುವಾಗ ಪ್ರಕರಣದ ಗಂಭೀರತೆ ಮತ್ತು ದಾಖಲೆ ಇದ್ದರೆ ಸಾಕು, ಪೊಲೀಸ್‌ ಅಧಿಕಾರಿಗಳು ಯಾವುದೇ ಮನವಿ ಕೂಡಾ ಸಲ್ಲಿಸುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ಕೆಲ ತಪ್ಪುಗಳು ಆಗಿವೆ.

ಅಂತಹ ಸಂದರ್ಭವನ್ನು ಸಹ 17-a ಅಡಿಯಲ್ಲಿ ಕೊಡಬಹುದು. The procedures is improper ಹೀಗಾಗಿ ತನಿಖೆ ಆಗಬೇಕು. ಖಾಸಗಿ ದೂರುದಾರ ನೇರವಾಗಿ ಯಾವಾಗ ಹೋಗಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ. ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ ಸಾರ್ವಜನಿಕ ಸೇವಕರಾಗಿ ಪ್ರಭಾವ ಬೀರಿದರೆ ಅದು ಸೆಕ್ಷನ್‌ 17A ಅಡಿ ಬರುತ್ತದೆ. ಸಿಎಂ ಮಾಡದಿದ್ದರೂ ಅವರ ಪ್ರಭಾವದಿಂದ ಆಗಿದ್ದರೂ ಈ ಕಾಯಿದೆ ಅಡಿಯಲ್ಲಿ ಬರುತ್ತೆ. ಅಧಿಕಾರಿಯನ್ನು ಉಪಯೋಗಿಸಿಕೊಂಡು ಆಗಿದ್ದರೂ ಅದು ಅಧಿಕಾರ ದುರುಪಯೋಗ ಆಗುತ್ತದೆ ಎಂದು ರಾಘವನ್ ವಾದಿಸಿದ್ದರು.

ಒಬ್ಬ ಸಚಿವ ತನ್ನ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅದು ಅಪರಾಧವೇ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಈ ಕಾಯ್ದೆ ರಚಿಸಲಾಗಿದೆ. 17-a ಇರುವುದೇ ಆಡಳಿತದಲ್ಲಿ ಭ್ರಷ್ಟಾಚಾರ ತಡೆಯುವುದಕ್ಕೆ, ಹೀಗಾಗಿ ಇದನ್ನು ನಾವು ಸಣ್ಣ ವಿಚಾರ ಎಂದು ನೋಡಬಾರದು. ಇದನ್ನು ನಾವು ವಿವರವಾಗಿ ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಬೇಕು.

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಬಳಿಕ ನ್ಯಾಯಾಧೀಶರ ತನಿಖೆ ಆಗಬೇಕು. ಇಲ್ಲದಿದ್ದರೆ ಇಂತಹ ವರದಿಗಳು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುತ್ತಾರೆ. ಈ ವೇಳೆ ನೀವು ಕಮೀಷನರ್ ತನಿಖೆಗೆ ಸಮ್ಮತಿ ನೀಡುತ್ತೀರಾ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದಾಗ ಸಾರ್ವಜನಿಕ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಪ್ರಕರಣವನ್ನು ನೋಡಬೇಕು. ಸರ್ಕಾರ ನ್ಯಾಯಾಂಗ ಆಯೋಗ ರಚಿಸಿರುವುದೇ ತನಿಖೆ ನಡೆಸಬೇಕೆಂದು. ನ್ಯಾಯಾಲಯವು ತನಿಖೆ ನಡೆಸಬೇಕು ಎಂಬುದರ ಪರವಾಗಿರಬೇಕು. ಏಕೆಂದರೆ ಸಾರ್ವಜನಿಕ ಶುಚಿತ್ವ ಕಾಪಾಡುವುದು ಇಲ್ಲಿ ಅಗತ್ಯಇದೆ. ಇಲ್ಲಿ ಕ್ಲೀನ್‌ಚಿಟ್‌ ನೀಡಬಹುದು ಎಂದು ರಾಘವನ್‌ ವಾದಿಸಿದರು.

ಡಿಸಿಎಂ ಆಗಿದ್ದ ವೇಳೆ ಹಗರಣ

ಅರ್ಜಿದಾರರು (ಸಿದ್ದರಾಮಯ್ಯ) ಡಿಸಿಎಂ ಆಗಿದ್ದ ವೇಳೆ ಈ ಹಗರಣ ನಡೆದಿದೆ. ಕೆಸರೆ ಗ್ರಾಮದಲ್ಲಿದ್ದ ಲ್ಯಾಂಡ್‌ ಲಿಂಗ ಎಂಬಾತನಿಗೆ ಸೇರಿದ್ದು, ಅವರಿಗೆ ಮಲ್ಲಯ್ಯ, ಮೈಲರಾಯ್ಯ ಹಾಗೂ ದೇವರಾಜು ಎಂಬುವವರು ಮೂವರು ಮಕ್ಕಳಿದ್ದಾರೆ. ಮೈಲಾರಯ್ಯ ಅವರಿಗೆ ದೇವರಾಜ ಮತ್ತು ಮಲ್ಲಯ್ಯ ಜಮೀನನ್ನು ಮಾರಾಟ ಮಾಡಿದ್ದರು. ಇದರಲ್ಲಿ ಹಕ್ಕು ಖುಲಾಸೆಯೂ ಆಗಿದೆ. ಮೈಲಾರಯ್ಯ 3.16 ಎಕರೆ ಭೂಮಿಯ ಮಾಲೀಕರಾಗಿದ್ದರು. ಇಲ್ಲಿ ದೇವರಾಜು ಆಕ್ಷೇಪಾರ್ಹವಾದ ಭೂಮಿಯ ಡಿನೋಟಿಫಿಕೇಶನ್‌ ಕೋರಿದ್ದಾರೆ. ಭೂ ಪರಿವರ್ತನೆ ಮಾಡಲು ಮಲ್ಲಿಕಾರ್ಜುನಯ್ಯ ಎಂಬುವರು ಸಲ್ಲಿಸಿದ ಅರ್ಜಿ ವಕೀಲ ರಾಘವನ್ ಓದಿ ಹೇಳಿದರು.

ದೇವರಾಜು ಭೂ ಮಾಲೀಕರಾಗಿರಲ್ಲಿಲ್ಲ. ಆದರೆ 2004ರಲ್ಲಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿ ಮಾರಾಟ ಮಾಡಿದ್ದಾರೆ. ದೇವರಾಜ ಹೆಸರಿಗೆ ಡಿನೋಟಿಫಿಕೇಷನ್ ಕೇಳಿದ್ದರು. ಆದರೆ ಇದು ಮೈಲಾರಯ್ಯ ಹೆಸರಲ್ಲಿ ಜಮೀನು ಇದೆ. 1999 ನೋಟಿಫಿಕೇಷನ್ ಆದ ಜಮೀನಿಗೆ ಪರಿಹಾರ ಕೊಟ್ಟರು. ಇವರಿಗೆ ಮಾತ್ರ ಡಿನೋಟಿಫಿಕೇಷನ್ ಆಯಿತು ಎಂದು ದೇವನೂರು ಬಡವಾಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಉಲ್ಲೇಖಿಸಿದರು.

ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ರಾಘವನ್ ಮನವಿ

ಸರ್ಕಾರವೇ ಈ ಪ್ರಕರಣ ಸಂಬಂಧ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚಿಸಿದೆ. ಹೀಗಾಗಿ ರಾಜ್ಯಪಾಲರು 17 A ಅಡಿ ಅನುಮತಿ ನೀಡಿರುವುದು ಸರಿಯಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ರಾಘವನ್ ಮನವಿ ಮಾಡಿದ್ದರು. ಮೂರು ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4800 ಚದರಡಿ ಪರಿಹಾರ ನೀಡಬೇಕು. 1994ರ ನಿಯಮದ ಪ್ರಕಾರ ಎರಡು ಸೈಟಿಗಷ್ಟೇ ಅವಕಾಶವಿದೆ. ಮುಡಾ ವಶಪಡಿಸಿಕೊಂಡ ಮೇಲೆ ದೇವರಾಜು ಹೇಗೆ ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡುತ್ತಾರೆ? ಸರಳವಾದ ತನಿಖೆ ನಡೆಯಬೇಕಾದ ಈ ಪ್ರಕರಣಕ್ಕೆ ನ್ಯಾಯಾಲಯದ ಇಷ್ಟು ಸಮಯ ತೆಗೆದುಕೊಳ್ಳುವ ಅಗತ್ಯವೇನಿದೆ? ತನಿಖೆ ಆದ ಮೇಲೆ ಆಗಿದೀಯಾ, ಇಲ್ಲವೋ ಗೊತ್ತಾಗಲಿದೆ. ಈ ಪ್ರಕರಣವನ್ನು ಕಾಂಪ್ಲಿಕೇಟ್ ಮಾಡಿದ್ದೇವೆ.

2003 ರಲ್ಲಿ ಮತ್ತೆ ಡಿನೋಟಿಫಿಕೇಷನ್ ಆಗುತ್ತದೆ. 2005ರಲ್ಲಿ ದೇವರಾಜ ಅವರು ಮಲ್ಲಿಕಾರ್ಜುನಯ್ಯಗೆ ಜಮೀನು ಮಾರಾಟ ಮಾಡುತ್ತಾರೆ. ಬಳಿಕ ಮಲ್ಲಿಕಾರ್ಜುನಯ್ಯ ಸಹೋದರಿ ಪಾವರ್ತಮ್ಮರಿಗೆ ಗಿಫ್ಟ್ ಕೊಡುತ್ತಾರೆ. ಪಾರ್ವತಮ್ಮ ನನಗೆ ಪರ್ಯಾಯ ನಿವೇಶನ ಕೊಡಿ ಎಂದು ಮನವಿ ಮಾಡಿದ್ದಾರೆ. ಇಲ್ಲಿ ಅರ್ಜಿದಾರರ ಬಾಮೈದನಿಂದ ಸಿಎಂ ಪತ್ನಿ ಪಾರ್ವತಿ ಹೆಸರಿಗೆ ದಾನ ಪತ್ರ ರಿಜಿಸ್ಟರ್ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಹಾರ ಕೇಳುತ್ತಾರೆ. ಸಾಮಾನ್ಯ ಅರ್ಜಿದಾರರಂತೆ ಅರ್ಜಿ ಹಾಕಿದ್ದಾರೆ. 2015ರಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ. ಸಿಎಂ ಪತ್ನಿ ಅಲ್ಲದೇ ಬೇರೆ ಯಾರಾದರೂ ಈ ಸ್ಥಾನದಲ್ಲಿದ್ದರೆ ಕೋರ್ಟ್ ಆದೇಶ ಪಡೆದು ಮುಡಾ ಸಂಪರ್ಕಿಸಬೇಕಿತ್ತು. ಇಲ್ಲಿ ಪಾರ್ವತಿ ಅವರು ಸಿಎಂ ಪತ್ನಿ ಆಗಿರುವುದರಿಂದ ಅದ್ಯಾವುದೂ ನಡೆದಿಲ್ಲ. ಮಾಲೀಕರೇ ಅಲ್ಲದವರಿಗೆ ಯಾವ ರೀತಿ ನಿವೇಶನ ಕೊಟ್ಟರು. ಈ ಪ್ರಕರಣದಲ್ಲಿ ಆಗಿರುವ ಎಲ್ಲ ವ್ಯವಹಾರಗಳು ದುರುದ್ದೇಶ ಪೂರಕವಾಗಿವೆ ಎಂದು ರಾಘವನ್‌ ಲಾ ಪಾಯಿಂಟ್‌ ಹಾಕಿದರು.

ಮಾಲೀಕನೇ ಅಲ್ಲದವನಿಂದ ಡಿನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಕೆ

ಡಿನೋಟಿಫಿಕೇಷನ್ ಕೇಳಿ ಅರ್ಜಿ ಸಲ್ಲಿಸಿದ್ದು ದೇವರಾಜು, ಆದರೆ ದೇವರಾಜು ಆಗ ಜಮೀನಿನ ಮಾಲೀಕನೇ ಅಲ್ಲ. 20.08.1997 ರಂದು ಅಂತಿಮ ಭೂಸ್ವಾಧೀನ ಅಧಿಸೂಚನೆಯಾಯಿತು. 30.03.1998 ರಂದು ಜಮೀನಿಗೆ ಪರಿಹಾರವೂ ನಿಗದಿಯಾಯಿತು. 18.05.1998 ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯಿತು. 25.08.2004 ರಂದು ದೇವರಾಜು ಈ ಜಮೀನನ್ನು ಬಿ.ಎಂ.ಮಲ್ಲಿಕಾರ್ಜುನ್ ಗೆ ಮಾರಾಟ ಮಾಡಿದ್ದರು. ನಂತರ ಭೂಪರಿವರ್ತನೆಗೂ ಮುನ್ನ ನಿವೇಶನ ಸ್ಥಳ ತನಿಖೆ ಮಾಡಲಾಯಿತು. ಭೂಪರಿವರ್ತನೆ ವೇಳೆಗಾಗಲೇ ಭೂಸ್ವಾಧೀನಗೊಂಡು ಸೈಟ್ ಹಂಚಲಾಗಿತ್ತು. ಈ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯವಿದೆ. ತನಿಖೆಯನ್ನು ತಡೆಹಿಡಿಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇಕೆ ಎಂಬುದೇ ಅಚ್ಚರಿ. ಸಾಮಾನ್ಯ ದೂರು ಬಂದರೂ ಇಂತಹ ವಿಚಾರದಲ್ಲಿ ತನಿಖೆ ಆಗಬೇಕು ಎಂದು ರಾಘವನ್ ವಾದ ಮಂಡಿಸಿದ್ದರು.

40-60 ಫಾರ್ಮುಲಾ ಸೆಟಲ್ಮೆಂಟ್‌ಗೆ ಒಪ್ಪದ ಪಾರ್ವತಮ್ಮ

ಮುಡಾ ಪ್ರಾಧಿಕಾರದ 40-60 ಫಾರ್ಮುಲಾ ಸೆಟಲ್ಮೆಂಟ್‌ಗೆ ಒಪ್ಪದ ಪಾರ್ವತಮ್ಮ (ಸಿದ್ದರಾಮಯ್ಯ ಪತ್ನಿ) ಜಮೀನು ಕೊಡಿಸುಂತೆ ಪತ್ರ ಕೊಟ್ಟಿದ್ದರು. ಲೇಔಟ್ ಅಭಿವೃದ್ಧಿ ಪಡಿಸಿರುವುದರಿಂದ ಅವರಿಗೆ ಬದಲಿ ನಿವೇಶನ ಕೊಡಲು ಒಪ್ಪಿಗೆ ಸೂಚಿಸಿದ್ದರು. ಒಂದು ಕಡೆ ಪರಿಹಾರ ಕೊಟ್ಟಿದ್ದಾರೆ, ಮತ್ತೊಂದು ಕಡೆ 14 ನಿವೇಶನಗಳನ್ನು ಪಡೆದಿದ್ದಾರೆ. ಕಡಿಮೆ ಬೆಲೆಯ ಜಮೀನು ಕೊಟ್ಟು, ಹೆಚ್ಚು ಬೆಲೆ ಬಾಳುವ ಜಮೀನು ಪಡೆಯಲು ಮುಂದಾಗಿದ್ದಾರೆ. ಕೆಸರೆ ಜಮೀನು ಕೊಟ್ಟು ವಿಜಯನಗರ ನಿವೇಶನ ಪಡೆಯಲು ಮನವಿ ನೀಡಿದ್ದಾರೆ. ಅಧಿಕಾರಿಗಳು ಸಹ ಇದಕ್ಕೆ ಮೌನ ವಹಿಸಿದ್ದಾರೆ. ಇದರಲ್ಲಿ ಎಲ್ಲವೂ ಅನುಮಾನಕ್ಕೆ ಕಾರಣವಾಗಿವೆ. ಹೀಗಾಗಿ ಈ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆಗಬೇಕೆಂದು ರಾಘವನ್‌ ವಾದಿಸಿದರು.

ಆಸ್ತಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಮುಡಾ ಪ್ರಾಧಿಕಾರ ವಿವೇಚನೆ ಬಳಸಿಲ್ಲ. ಎಲ್ಲಾ ವಿಚಾರಗಳನ್ನು ಗಾಳಿಗೆ ತೂರಿರುವುದರಿಂದ ತನಿಖೆ ನಡೆಯಬೇಕಿದೆ. ಪ್ರಾಧಿಕಾರ ಇಷ್ಟು ನಡು ಬಗ್ಗಿಸಿರುವುದನ್ನು ನಾನು ಹಿಂದೆಂದೂ ನೋಡಿಲ್ಲ. 2017-21ರಿಂದ ಯಾವುದೇ ಬೆಳವಣಿಗೆಯಾಗುವುದಿಲ್ಲ. 2021ರ ಡಿಸೆಂಬರ್‌ನಲ್ಲಿ 38 ಸಾವಿರ ಚದರ ಅಡಿ ಜಾಗವನ್ನು ಸಿಎಂ ಪತ್ನಿಗೆ ಮುಡಾ ಹಂಚಿಕೆ ಮಾಡುತ್ತೆ. ಅದಕ್ಕೆ 2017ರಲ್ಲಿ ತೆಗೆದುಕೊಂಡ ನಿರ್ಣಯವನ್ನು ಲಿಂಕ್ ಮಾಡಿದೆ.

ಸುಣ್ಣಕ್ಕೆ ಬೆಣ್ಣೆಯ ಬೆಲೆ – ರಾಘವನ್‌ ಪ್ರಶ್ನೆ

ಒಂದು ತಪ್ಪಾದರೆ ಸರಿ, ಪದೆಪದೇ ತಪ್ಪಾದರೆ ದುರುದ್ದೇಶವಿದೆ ಎಂದರ್ಥ. 1998ರಲ್ಲಿ 3.16 ಎಕರೆಗೆ 3.24 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ ಸಿಎಂ ಪತ್ನಿಗೆ 3.24 ಲಕ್ಷ ರೂಪಾಯಿಯ ಪರಿಹಾರ ಕೊಡುತ್ತಿದ್ದೀರಾ. 14 ಸೈಟಿನ ಮೌಲ್ಯ ಎಷ್ಟಿದೆ, ಸುಣ್ಣಕ್ಕೆ ಬೆಣ್ಣೆಯ ಬೆಲೆ ನೀಡುತ್ತಿದ್ದೀರಾ ಎಂದು ರಾಘವನ್ ಪ್ರಶ್ನೆ ಮಾಡಿದರು. 1998 ರ ಭೂಸ್ವಾಧೀನಕ್ಕೆ 2015ರ ನೋಟಿಫಿಕೇಷನ್ ಅನ್ವಯಿಸಿದ್ದೀರಿ. ಮಾಲೀಕರೇ ಡಿನೋಟಿಫಿಕೇಷನ್ ಮಾಡಿದ್ದೀರಿ. ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದೀರಿ. ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು. ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದೀರಿ. ಈ ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂದು ಅರ್ಜಿದಾರರ ಪರ ರಾಘವನ್‌ ವಿವರಿಸಿದರು.

ಒಂದು ಸೈಟ್‌ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಿರುವುದು ಎಷ್ಟು ಸರಿ?

2015ರಲ್ಲಿ 50 :50 ಅನುಪಾತದಲ್ಲಿ ಹಂಚಿಕೆ ಮಾಡುವಂತೆ ನಿಯಮ ರೂಪಿಸಲಾಯಿತು. 23.6.2014ರಲ್ಲಿ ಸಿಎಂ ಪತ್ನಿ ಮನವಿ ಸಲ್ಲಿಸಿದ್ದರು. 1998 ರ ಭೂಸ್ವಾಧೀನಕ್ಕೆ 2015 ರ 50 50 ನಿಯಮ ಅನ್ವಯಿಸಲು ಸಾಧ್ಯವೇ? 2017 ಡಿಸೆಂಬರ್ ತಿಂಗಳಿನಲ್ಲಿ ಸಿಎಂ ಪತ್ನಿಗೆ 50 :50 ಹಂಚಿಕೆ ನಿರ್ಣಯಿಸಲಾಯಿತು. ಸಿಎಂ ಗೂ ಮುಡಾ ಹಗರಣಕ್ಕೂ ಸಂಬಂಧವಿದೆಯೇ ಎಂದರೆ ಹೌದು ಎನ್ನುತ್ತೇನೆ. ಸಿಎಂ ಹಾಗೂ 2017 ರಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಕ್ಕೂ ಸಂಬಂಧವಿದೆ. ಒಂದು ಸೈಟ್‌ಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಿದ್ದಾರೆ. ಇಂತಹ ಕೃತ್ಯಕ್ಕೆ ತನಿಖೆ ಅವಶ್ಯಕತೆ ಇಲ್ಲವೆಂದು ಹೇಳಲು ಸಾಧ್ಯವೇ? 2017 ರ ನಿರ್ಣಯಕ್ಕೂ ಅಧಿಕಾರದಲ್ಲಿದ್ದದ್ದಕ್ಕೂ ಸಂಬಂಧವಿದೆ. ವಿಸ್ತೃತವಾದ ನೆಲೆಯಲ್ಲಿ ಪ್ರಕರಣವನ್ನು ನೋಡಬೇಕು ಎಂದು ಹಿರಿಯ ವಕೀಲ ರಾಘವನ್ ವಾದ ಮುಕ್ತಾಯಗೊಳಿಸಿದರು.

ಬಳಿಕ ನ್ಯಾಯಮೂರ್ತಿಗಳು ಸೆ.9ಕ್ಕೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಿದರು. ಸೆ.9ರಂದು ಎಜಿ ಶಶಿಕಿರಣ್‌ ಆಡಟ್ಟು ವಾದ ಮಂಡಿಸಲಿದ್ದು, ಸೆ.12ರಂದು ಸಿಎಂ ಪರ ಅಭಿಷೇಕ್‌ ಸಿಂಗ್ವಿ ವಾದ ಮಾಡಲಿದ್ದಾರೆ.

ಏನಿದು ಮುಡಾ ಪ್ರಕರಣ?

ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿಟ್ಟಿದೆ. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್​ ನೋಟಿಸ್ ನೀಡಿದ್ದರು. ​ ಸಿಎಂಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್ ಕುಮಾರ್ ಎಸ್.ಪಿ, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಗಳನ್ನು ಸಲ್ಲಿಸಿದ್ದರು.

ಮೈಸೂರಿನ ಸ್ನೇಹಮಯಿ ಕೃಷ್ಣ ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಯಾಂಡಲ್ ವುಡ್

Pavitra Gowda : ರೇಣುಕಾ ಸ್ವಾಮಿ ಕೊಲೆ ಕೇಸ್‌; ಪವಿತ್ರಾಗೌಡ ಸಲ್ಲಿಸಿದ ಜಾಮೀನು ಅರ್ಜಿ ವಜಾ

Renuka swamy Murder case : ರೇಣುಕಾ ಸ್ವಾಮಿ ಕೊಲೆ ಕೇಸ್‌ ಎ1 ಆರೋಪಿ ಆಗಿರುವ ಪವಿತ್ರಾಗೌಡ (Pavitra Gowda) ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ. ಈ ಮೂಲಕ ಪವಿತ್ರಾಗೆ ಜೈಲುವಾಸ ಮುಂದುವರಿದಿದೆ.

VISTARANEWS.COM


on

By

Renuka Swamy murder case Pavithra Gowdas bail plea rejected
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಪವಿತ್ರಾಗೌಡ (Pavitra Gowda) ಪರ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ ವಜಾಗೊಳಿಸಿ ಸಿಸಿಎಚ್‌ (CCH)57ನೇ ನ್ಯಾಯಾಲಯದ ನ್ಯಾಯಾಧೀಶರಾದ ಜೈ ಶಂಕರ್‌ ಆದೇಶ ಹೊರಡಿಸಿದ್ದಾರೆ. ಎ1 ಆರೋಪಿ‌ ಪವಿತ್ರಾಗೌಡ ಪರ ಅನುಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಂಡಿದೆ.

ದರ್ಶನ್- ಪವಿತ್ರಾ ದೂರದೂರವಾದರೂ ಒಂದಾಯಿತು ಇವರಿಬ್ಬರ ಮನೆಯ ಶ್ವಾನಗಳು

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬಳ್ಳಾರಿ ಜೈಲಿಗೆ (Bellary Jail) ನಟ ದರ್ಶನ್ (Actor Darshan) ಸ್ಥಳಾಂತರಗೊಂಡಿದ್ದರೂ ಪವಿತ್ರಾ ಗೌಡ (Pavitra Gowda) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಹೀಗಾಗಿ ದರ್ಶನ್ ಮತ್ತು ಪವಿತ್ರಾ ದೂರದೂರವಾಗಿದ್ದಾರೆ. ಆದರೆ ಇವರಿಬ್ಬರ ಶ್ವಾನಗಳು ಮಾತ್ರ ಇದೀಗ ಒಂದಾಗಿವೆ.

ದರ್ಶನ್ ಮತ್ತು ಪವಿತ್ರ ಗೌಡ ಜೈಲು ಸೇರುತ್ತಿದ್ದ ಹಾಗೆ ಇವರ ಶ್ವಾನಗಳು ಒಂದಾಗಿದ್ದವು. ಪವಿತ್ರಗೌಡ ಮನೆಯಲ್ಲಿದ್ದ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಈಗ ದರ್ಶನ್ ಮತ್ತು ಪವಿತ್ರಾ ಗೌಡ ಮನೆಯ ಶ್ವಾನಗಳು ಸ್ನೇಹಿತರಾಗಿದೆ.


ಪವಿತ್ರಾ ಗೌಡ ಮನೆಯಲ್ಲಿದ್ದ ವೈಟ್ ಫ್ರೆಂಚ್ ಬುಲ್ ಡಾಗ್ ಮತ್ತು ಬೆಲ್ಜಿಯಂ ಮಲಿನಾಯ್ಸ್ ತಳಿಯ ಶ್ವಾನಗಳು ಮನೆಯೊಡತಿ ಇಲ್ಲದೆ ಸೊರಗಿದ್ದವು. ಅವುಗಳನ್ನು ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ರಕ್ಷಣೆ ಮಾಡಿತ್ತು. ಬಳಿಕ ಅಧಿಕಾರಿಗಳು ಅವುಗಳನ್ನು ದರ್ಶನ್ ಮನೆಗೆ ಬಿಟ್ಟಿದ್ದಾರೆ.

ಶ್ವಾನ ಪ್ರೇಮಿಯಾಗಿದ್ದ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಮನೆಯಲ್ಲಿ ವಿವಿಧ ತಳಿಯ 3 ಶ್ವಾನಗಳಿದ್ದವು. ಅವುಗಳಲ್ಲಿ ಒಂದನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ. ಒಲಿದ ಎರಡು ಶ್ವಾನಗಳನ್ನು ಪವನ್ ನೋಡಿಕೊಳ್ಳುತ್ತಿದ್ದ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದಾರೆ. ಬಳಿಕ ಶ್ವಾನಗಳನ್ನು ನೋಡಿಕೊಳ್ಳುವವರಿಲ್ಲದೆ ಅವುಗಳು ಸೊರಗಿದ್ದವು.

Actor Darshan
Actor Darshan


ದರ್ಶನ್ ಮನೆಗೆ ಎಂಟ್ರಿ

ಪವಿತ್ರಾ ಮತ್ತು ಪವನ್ ಜೈಲು ಸೇರಿದ್ದರಿಂದ ಸರಿಯಾಗಿ ಆಹಾರ ಇಲ್ಲದೆ ಬಲಹೀನವಾಗಿದ್ದ ಶ್ವಾನಗಳ ದೃಶ್ಯ ಕಣ್ಣೀರು ತರಿಸುವಂತ್ತಿತ್ತು. ಇದನ್ನು ತಿಳಿದು ಅಲರ್ಟ್ ಆದ ಪೀಪಲ್ಸ್ ಫಾರ್ ಅನಿಮಲ್ಸ್ ಟೀಂ ಈ ವಿಚಾರವನ್ನು ಆರ್.ಆರ್. ನಗರದ ಪೊಲೀಸರ ಗಮನಕ್ಕೆ ತಂದಿದ್ದರು.

ಪೀಪಲ್ಸ್ ಫಾರ್ ಅನಿಮಲ್ಸ್ ನ‌ ಲೀನಾ ಮತ್ತು ಹರೀಶ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಿಬಿಎಂಪಿ ಪಶುಸಂಗೋಪನಾ‌ ಇಲಾಖೆಗೆ ಮಾಹಿತಿ ನೀಡಿರುವ ಪೊಲೀಸರು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಪವಿತ್ರಾ ಮನೆಯಲ್ಲಿದ್ದ ಎರಡು ಶ್ವಾನವನ್ನು ದರ್ಶನ್ ಮನೆಗೆ ಸ್ಥಳಾಂತರಿಸಿದ್ದಾರೆ. ದರ್ಶನ್ ಮನೆಯಲ್ಲಿ ಶ್ವಾನಗಳನ್ನು ನೋಡಿಕೊಳ್ಳಲು ಕೇರ್ ಟೇಕರ್ ಗಳು ಇರುವುದರಿಂದ ಈ ಶ್ವಾನಗಳನ್ನು ದರ್ಶನ್ ಮನೆಗೆ ಸ್ಥಳಾಂತರಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

CM Siddaramaiah: ಸಿದ್ದರಾಮಯ್ಯಗೆ ಮುಡಾ ಪರೀಕ್ಷೆ! ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ದೂರದಾರರಿಂದ ಒತ್ತಾಯ

CM Siddaramaiah: 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಮಂಡಿಸಿದರು.

VISTARANEWS.COM


on

By

CM Siddaramaiah MUDA case Complainants demand probe by independent agency instead of govt
Koo

ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಶನಿವಾರ (ಆ.31) ಸುದೀರ್ಘವಾಗಿ ಮುಂದುವರಿದಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ಮೊದಲಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಲಾ ಪಾಯಿಂಟ್‌ಗಳನ್ನು ಹಾಕಿ ತಮ್ಮ ವಾದ ಮಂಡಿಸಿದ್ದರು.

ಬಳಿಕ ಸ್ನೇಹಮಯಿ‌ಕೃಷ್ಣ ಪರ ಹಿರಿಯ ವಕೀಲ‌ ಮಣೀಂಧರ್ ಸಿಂಗ್ ವಾದ ಆರಂಭಿಸಿ, ಸರ್ಕಾರದ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಬೇಕಿದ್ದು ಮನವಿ ಮಾಡಿದರು. 1992 ಲ್ಯಾಂಡ್ ಅಕ್ವಿಜೇಷನ್ ಪ್ರಕ್ರಿಯೆ ಶುರುವಾಗಿದೆ. ಅಂತಿಮ ನೋಟಿಫಿಕೇಷನ್ 1997ರಲ್ಲಿ ಮುಗಿದಿದೆ. ಲ್ಯಾಂಡ್ ಅಕ್ವಿಜೇಷನ್, ಪರಿಹಾರದ ಹಣ, ನಂತರದ‌ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಣೀಂದರ್ ಸಿಂಗ್ ವಾದ ಶುರು ಮಾಡಿದರು. ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ವರ್ಗಾವಣೆಯ ಕುರಿತು ವಿವರಣೆ ನೀಡಿದರು. 1997ರಲ್ಲಿ ಅಂತಿಮ ನೋಟಿಫಿಕೇಷನ್ ಆಗಿದ್ದು ವಶಕ್ಕೆ ಪಡೆಯಲಾಗಿದೆ.

1998ರಲ್ಲಿ ಈ ಭೂಮಿ ಮುಡಾ ವಶದಲ್ಲಿ ಇತ್ತು. ಇದು ರೆವಿನ್ಯೂ ರೆಕಾರ್ಡ್‌ನಲ್ಲಿ ಎಂಟ್ರಿ ಆಗಿದೆ. ಎಲ್ಲ ಪ್ರಕ್ರಿಯೆಗಳು ಕಾನೂನು ಬಾಹಿರವಾಗಿದೆ. ಇದೆಲ್ಲಾ ತನಿಖೆಯಿಂದ ಹೊರಬರಬೇಕಿದೆ. 2001-02 ರಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ. ಸೈಟ್‌ಗಳನ್ನು ಮಾರಾಟ ಮಾಡಲಾಗಿದೆ. ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ ನೋಟ್‌ನಲ್ಲಿ ರಿಟ್ ಅರ್ಜಿ ಎಂದು ಉಲ್ಲೇಖಿಸಲಾಗಿದೆ. ಸಿಎಂ ಪತ್ನಿಗೆ 14 ನಿವೇಶನ ಹಂಚಲು ಬೇರೆ ಕೇಸ್ ಗಳ ಹೈಕೋರ್ಟ್ ಆದೇಶ ಉಲ್ಲೇಖಿಸಿದ್ದಾರೆ. ಆದರೆ ರಿಟ್ ಅರ್ಜಿಗಳ ಸಂಪೂರ್ಣ ವಿವರಗಳೇ ಇದರಲ್ಲಿ ಇಲ್ಲ.

1998ರಲ್ಲಿ ಭೂಮಿ ಸ್ವಾಧೀನ ಬಳಿಕ ಮುಡಾ ಮಾಲೀಕತ್ವದಲ್ಲಿತ್ತು. ಭೂಸ್ವಾಧೀನವನ್ನು ಯಾರೂ ಪ್ರಶ್ನಿಸಿ ಕೋರ್ಟ್‌ಗೆ ಹೋಗಿಲ್ಲ. ಪರಿಹಾರವನ್ನೂ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಇದಾದ ಮೇಲಿನ ಡಿನೋಟಿಫಿಕೇಷನ್ ಭೂಮಿ ಕಬಳಿಸಲು ಮಾಡಿದ ವಂಚನೆ ಯಾಗಿತ್ತು. ಆಗ ಆ ಜಮೀನಿನ ಮೌಲ್ಯ ಕೇವಲ 3 ಲಕ್ಷ 24 ಸಾವಿರ ಮೌಲ್ಯವಾಗಿತ್ತು ಎಂದು ಮಣೀಂದರ್ ಸಿಂಗ್ ವಾದಿಸಿದರು. ನಮ್ಮ ವಾದ ಈ ಮುಡಾ ಹಗರಣದ ಕುರಿತು ತನಿಖೆ ನಡೆಸಬೇಕು ಎಂಬುದಕಷ್ಟೇ. ಪ್ರಕರಣದ ಪ್ರೈಮಾಫಸಿಯನ್ನು ಪರಿಗಣಿಸಿ ತನಿಖೆಗೆ ಅವಕಾಶ ಕೊಡುವಂತೆ ಮನವಿ ಮಾಡಿದರು.

ರೆವಿನ್ಯು ಭೂಮಿ ಹೇಗಾಯಿತು?

ಈ ವೇಳೆ ಲಿಖಿತ ವಾದವನ್ನು ಮಂಡಿಸುತ್ತಿದ್ದೀರಾ ಎಂದು ಮಣೀಂದರ್ ಸಿಂಗ್‌ಗೆ ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು. ಅಭಿವೃದ್ಧಿಪಡಿಸಿದ ಭೂಮಿ, ರೆವಿನ್ಯು ಭೂಮಿ ಹೇಗಾಯಿತು?ಎಂದು ಜಡ್ಜ್‌ ಪ್ರಶ್ನಿಸಿದಾಗ, ಅದು ಮ್ಯಾಜಿಕ್.. ಹೇಗೆ ಆಯಿತು ಎಂಬುದು ತನಿಖೆಯಿಂದ ತಿಳಿಯಬೇಕು ಎಂದು ಮಣೀಂದರ್ ಸಿಂಗ್ ಉತ್ತರಿಸಿದರು. ಭೂಮಿಯ ಪ್ರಾಥಮಿಕ ಅಧಿಸೂಚನೆಯಾಗದೆ ಕೇಸ್‌ನ ತೀರ್ಪನ್ನು ಈ ಕೇಸ್‌ಗೆ ಬಳಸಲಾಗಿದೆ. ಸ್ವಾಧೀನವೇ ಆಗದೇ ಜಮೀನು ಬಳಸಿಕೊಳ್ಳುವುದಕ್ಕೂ, ಪ್ರಕ್ರಿಯೆ ಪಾಲಿಸಿ ಸ್ವಾಧೀನಕ್ಕೂ ವ್ಯತ್ಯಾಸವಿದೆ. ಅಲ್ಲಿ ಬಳಸಿದ ಮಾನದಂಡವನ್ನು ಈ ಕೇಸ್‌ಗೆ ಬಳಸಿಕೊಳ್ಳಲಾಗಿದೆ ಎಂದು ಮಣೀಂದರ್ ಸಿಂಗ್ ವಾದಿಸಿದ್ದರು.

ತನಿಖಾಧಿಕಾರಿ ಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ಕ್ಯಾಬಿನೆಟ್ ಇಂತಹ ಕೃತ್ಯಕ್ಕೆ ಸಮರ್ಥನೆ ನೀಡುತ್ತಿದೆ.
ತನಿಖೆ ನಡೆಯದಿದ್ದರೆ ಇದು ದೊಡ್ಡ ದುರಂತವಾಗಲಿದೆ. 2004 ರಲ್ಲಿ 3.24 ಲಕ್ಷ ರೂ. ಇದ್ದ ಜಮೀನಿನ ಮೌಲ್ಯ ಈಗ 55 ಕೋಟಿ ರೂ. ಇದೆ. ಹೀಗಾಗಿ ಅಕ್ರಮವೆಸಗಲು ಸಂಚು ನಡೆದಿದೆ. ಜನರ ಹಣವನ್ನು ಜನಸೇವಕನೇ ಲೂಟಿ‌ ಮಾಡುವ ಸಂಚು ನಡೆದಿದೆ ಎಂದು ಕಟುವಾಗಿ ವಾದ ಮಂಡಿಸಿದರು.

ಮುಲಾಯಂ ಸಿಂಗ್ ಪ್ರಕರಣದ ತೀರ್ಪು ಸೇರಿದಂತೆ ಹಲವು ತೀರ್ಪುಗಳ ಉಲ್ಲೇಖಿಸಿದ ಮಣೀಂದರ್ ಸಿಂಗ್ ವಾದ ಮಂಡನೆ ಮುಂದುವರಿಸಿದರು. ಸರ್ಕಾರ ಈಗಾಗಲೇ ಈ ಕೇಸ್ ಸಂಬಂಧ ಒಂದು ನಿಲುವು ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳು ಈ ಕೇಸಿನಲ್ಲಿವೆ. ಜನಸಾಮಾನ್ಯರೂ ಕೂಡಾ ಭೂಸ್ವಾಧೀನದಿಂದ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಶಾಲೆ ಇದ್ದರೂ ಭೂಸ್ವಾಧೀನದಿಂದ ಬಿಡುಗಡೆ ಮಾಡುವುದಿಲ್ಲ. ಆದರೆ ಈ ಕೇಸಿನಲ್ಲಿ ಮೂಡಾ ಬಡಾವಣೆ ಅಭಿವೃದ್ದಿಯಾಗಿದ್ದರೂ ಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ 9 ಪರ್ಸೆಂಟ್ ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ ಎಂದು ಇಂದೋರ್ ಡೆವಲಪ್ಮೆಂಟ್ ಕೇಸ್ ಉಲ್ಲೇಖಿಸಿ ಮಣೀಂದರ್ ಸಿಂಗ್ ಮಾತಿಗಿಳಿದರು.

ಬಳಿಕ ಮಣೀಂದರ್ ಸಿಂಗ್ ಮುಂದಿನ ವಾದ ಸೋಮವಾರ ಮಂಡಿಸುವುದಾಗಿ ಮನವಿ ಮಾಡಿದರು. ಹೀಗಾಗಿ ಮುಂದಿನ ವಿಚಾರಣೆಯನ್ನೂ ಹೈಕೋರ್ಟ್ ಮಧ್ಯಾಹ್ನ 2.30 ಕ್ಕೆ ಮುಂದೂಡಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
TA Sharavana
ಕರ್ನಾಟಕ4 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ6 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ6 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು7 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ9 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ10 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Road Accident
ರಾಯಚೂರು11 hours ago

Road Accident : ಸ್ಕೂಲ್‌ ಬಸ್‌-ಸಾರಿಗೆ ಬಸ್‌ ಡಿಕ್ಕಿ; ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಮಕ್ಕಳಿಬ್ಬರು ಬಲಿ, ತುಂಡಾಯ್ತು ಮಕ್ಕಳ ಕಾಲುಗಳು

Road Accident
ಚಿಕ್ಕಬಳ್ಳಾಪುರ11 hours ago

Road Accident : ಕಂಟ್ರೋಲ್ ತಪ್ಪಿ‌ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್‌, ಅಡುಗೆ ಭಟ್ಟ ದಾರುಣ ಸಾವು

One and a half year old boy dies of suffocation after swallowing bottle cap in Shivamogga
ಶಿವಮೊಗ್ಗ11 hours ago

Child Death: ಶಿವಮೊಗ್ಗದಲ್ಲಿ ಜ್ಯೂಸ್‌ ಬಾಟೆಲ್‌ನ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಉಸಿರುಗಟ್ಟಿ ಸಾವು

Karnataka Weather Forecast
ಮಳೆ12 hours ago

Karnataka Weather : ಗೌರಿ-ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!ನಿರಂತರ ಗಾಳಿ ಜತೆಗೆ ಭಾರಿ‌ ವರ್ಷಧಾರೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್5 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌