Photos: ಅರಬ್ಬಿ ಸಮುದ್ರದಲ್ಲಿ ರುದ್ರ ಬಿರುಗಾಳಿ; ಆಕಾಶದಿಂದ ಬಿಪರ್​ಜಾಯ್​ ಫೋಟೋ ಸೆರೆಹಿಡಿದ ಗಗನಯಾತ್ರಿ ​ - Vistara News

ದೇಶ

Photos: ಅರಬ್ಬಿ ಸಮುದ್ರದಲ್ಲಿ ರುದ್ರ ಬಿರುಗಾಳಿ; ಆಕಾಶದಿಂದ ಬಿಪರ್​ಜಾಯ್​ ಫೋಟೋ ಸೆರೆಹಿಡಿದ ಗಗನಯಾತ್ರಿ ​

ಈ ಬಿಪರ್​ಜಾಯ್ ಚಂಡಮಾರುತವು 2023ರ ಜೂನ್ 6ರಂದು ಅರೇಬಿಯನ್​ ಸಮುದ್ರದಲ್ಲಿ ಎದ್ದಿದೆ. ಗಾಳಿಯವ ವೇಗ ಗಂಟೆಗೆ 125 ಕಿಮೀನಷ್ಟು ತೀವ್ರವಾಗಿದ್ದು, ಗಂಟೆಗೆ 15 ಕಿಮೀ ವೇಗದಲ್ಲಿ ವಾಯುವ್ಯದ ಕಡೆಗೆ ಚಲಿಸುತ್ತಿದೆ.

VISTARANEWS.COM


on

Cyclone Biparjoy Photo
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದ ಗುಜರಾತ್​​​ಗೆ ಇಂದು ಸಂಜೆ ಹೊತ್ತಿಗೆ ಬಿಪರ್​ಜಾಯ್ ಚಂಡಮಾರುತ (Cyclone Biparjoy) ಅಪ್ಪಳಿಸಲಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಗುಜರಾತ್​ ಕರಾವಳಿ ತೀರದ (Gujarat Coastal) ಸ್ಥಳಗಳಲ್ಲಿ ವಾಸವಾಗಿದ್ದ ಸುಮಾರು 74 ಸಾವಿರ ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಐದು ಶತಮಾನಗಳ, ಅಬ್ಬರದ ಚಂಡಮಾರುತ ಇದಾಗಿದ್ದು, ಉಂಟಾಗಲಿರುವ ಹಾನಿಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಚಂಡಮಾರುತದ ಅಬ್ಬರಕ್ಕೆ ಕರ್ನಾಟಕ ಕರಾವಳಿಯಲ್ಲೂ ಜೂ.19ರವರೆಗೆ ಭಯಂಕರ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ಅರಬ್ಬೀಸಮುದ್ರದಲ್ಲಿ ಪ್ರಕ್ಷುಬ್ಧತೆಯನ್ನು ಉಂಟು ಮಾಡಿ, ದೊಡ್ಡದೊಡ್ಡ ಅಲೆಗಳು ಏಳಲು ಕಾರಣವಾಗಿರುವ ಬಿಪರ್​ಜಾಯ್​ ಚಂಡಮಾರುತದ ಚಿತ್ರವನ್ನು ಗಗನಯಾತ್ರಿ ಸುಲ್ತಾನ್ ಅಲ್ನೆಯಾಡಿ ಎಂಬುವರು ಬಾಹ್ಯಾಕಾಶದಿಂದ ಸೆರೆಹಿಡಿದಿದ್ದಾರೆ. ಬಿಪರ್​ಜಾಯ್​ ಚಂಡಮಾರುತ ಅರಬ್ಬಿಸಮುದ್ರದ ಮೇಲೆ ಉಂಟು ಮಾಡಿರುವ ಸನ್ನಿವೇಶವನ್ನು ಈ ಫೋಟೋ ಬಿಚ್ಚಿಟ್ಟಿದೆ. ಸಾಗರದಲ್ಲಿ ಬಿಪರ್​ಜಾಯ್​ ಚಂಡಮಾರುತ ಉಂಟು ಮಾಡಿರುವ ಸುರುಳಿಯಾಕಾರವನ್ನು ತೋರಿಸಲಾಗಿದೆ. ಗಗನಯಾತ್ರಿ ಸುಲ್ತಾನ್ ಅಲ್ನೆಯಾಡಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಎರಡು ದಿನಗಳ ಹಿಂದೆ ಈ ಫೋಟೋ ತೆಗೆದಿದ್ದಾರೆ ಎನ್ನಲಾಗಿದೆ.

ಬಾಹ್ಯಾಕಾಶದಿಂದ ಚಿತ್ರೀಕರಿಸಲಾದ ಬಿಪರ್​ಜಾಯ್​ ಚಿತ್ರ

ಇದನ್ನೂ ಓದಿ: Weather Report : ಬಿಪರ್‌ ಜಾಯ್‌ ಎಫೆಕ್ಟ್;‌ ಕರಾವಳಿಯಲ್ಲಿ ಭಾರಿ ಮಳೆ ನಿರೀಕ್ಷೆ, 5 ದಿನ ಸಮುದ್ರಕ್ಕೆ ಇಳೀಬೇಡಿ

ಅಂದಹಾಗೇ, ಈ ಬಿಪರ್​ಜಾಯ್ ಚಂಡಮಾರುತವು 2023ರ ಜೂನ್ 6ರಂದು ಅರೇಬಿಯನ್​ ಸಮುದ್ರದಲ್ಲಿ ಎದ್ದಿದೆ. ಗಾಳಿಯವ ವೇಗ ಗಂಟೆಗೆ 125 ಕಿಮೀನಷ್ಟು ತೀವ್ರವಾಗಿದ್ದು, ಗಂಟೆಗೆ 15 ಕಿಮೀ ವೇಗದಲ್ಲಿ ವಾಯುವ್ಯದ ಕಡೆಗೆ ಚಲಿಸುತ್ತಿದೆ. ಇಂದು ಗುಜರಾತ್​ಗೆ ಅಪ್ಪಳಿಸಲಿದ್ದು, ಗಾಳಿಯ ತೀವ್ರತೆ ಗಂಟೆಗೆ 135 ಕಿಮೀವರೆಗೂ ತಲುಪಲಿದೆ. ಗುಜರಾತ್​ ಕರಾವಳಿಯಲ್ಲಿ ಭಾರಿ ಗಾಳಿ-ಮಳೆ, ಭೂಕುಸಿತ ಉಂಟಾಗುವ ಎಚ್ಚರಿಕೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಕೆ, ಗುಜರಾತ್​​ನ ಕಚ್​​, ಸೌರಾಷ್ಟ್ರದಲ್ಲೆಲ್ಲ ರೆಡ್​ ಅಲರ್ಟ್ ಘೋಷಣೆ ಮಾಡಿದೆ.

ಬಿಪರ್​ಜಾಯ್​ ಸೈಕ್ಲೋನ್​ನ ಫೋಟೋ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Parliament Sessions: ತಮ್ಮ ವಿರುದ್ಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷ ಸಂಸದರಿಗೆ‌ ಕುಡಿಯಲು ನೀರು ಕೊಟ್ಟ ಪ್ರಧಾನಿ ಮೋದಿ- ವಿಡಿಯೋ ಇದೆ

Parliament Sessions: ನೀಟ್‌ ಅಕ್ರಮ, ಮಣಪುರ ಹಿಂಸಾಚಾರ ಮೊದಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರು ಸದನದ ಬಾವಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಕ್ಷಣದಲ್ಲಿ ಪ್ರತಿಪಕ್ಷ ನಾಯಕರ ವರ್ತನೆ ಮಿತಿಮೀರುತ್ತಿದ್ದಂತೆ ಪ್ರಧಾನಿ ಮೋದಿ ತಮ್ಮ ಟೇಬಲ್‌ ಮೇಲಿದ್ದ ಒಂದು ಲೋಟ ನೀರನ್ನು ಅವರಿಗೆ ನೀಡಿದ್ದಾರೆ. ವಿರೋಧ ಪಕ್ಷದ ಸಂಸದರೊಬ್ಬರು ಅದನ್ನು ಸ್ವೀಕರಿಸಿದ್ದಾರೆ.

VISTARANEWS.COM


on

Parliament Sessions
Koo

ಹೊಸದಿಲ್ಲಿ: ನಿನ್ನೆ ಸಂಸತ್‌ ಅಧಿವೇಶನ(Parliament Sessions)ದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಜವಾಹರ ಲಾಲ್‌ ನೆಹರು ಅವರಿಂದ ಹಿಡಿದು ಸೀತಾರಾಮ್‌ ಕೇಸರಿ ಅವರ ತನಕ ಉದಾಹರಣೆ, ನಿದರ್ಶನ, ಕತೆಗಳು, ಉಪಕತೆಗಳ ಮೂಲಕ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್‌ ಗಾಂಧಿ (Rahul Gandhi), ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಈ ವೇಳೆ ನರೇಂದ್ರ ಮೋದಿ ಅವರನ್ನು ಪ್ರತಿಪಕ್ಷದ ಸಂಸದರು ಪದೇ ಪದೇ ಅಡ್ಡಿಪಡಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ತಮ್ಮ ಮಾತಿಗೆ ಅಡ್ಡಿಯಾಗುತ್ತಿದ್ದ ಪ್ರತಿ ಪಕ್ಷ ಸಂಸದರಿಗೆ ಮೋದಿ ಒಂದು ಲೋಟ ನೀರು ಕೊಟ್ಟಿರುವ ಘಟನೆಯೂ ನಿನ್ನೆ ನಡೆದಿತ್ತು. ಇದೀಗ ಈ ವಿಡಿಯೋ ಸಮಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ.

ನೀಟ್‌ ಅಕ್ರಮ, ಮಣಪುರ ಹಿಂಸಾಚಾರ ಮೊದಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರು ಸದನದ ಬಾವಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಕ್ಷಣದಲ್ಲಿ ಪ್ರತಿಪಕ್ಷ ನಾಯಕರ ವರ್ತನೆ ಮಿತಿಮೀರುತ್ತಿದ್ದಂತೆ ಪ್ರಧಾನಿ ಮೋದಿ ತಮ್ಮ ಟೇಬಲ್‌ ಮೇಲಿದ್ದ ಒಂದು ಲೋಟ ನೀರನ್ನು ಅವರಿಗೆ ನೀಡಿದ್ದಾರೆ. ವಿರೋಧ ಪಕ್ಷದ ಸಂಸದರೊಬ್ಬರು ಅದನ್ನು ಸ್ವೀಕರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ಇದನ್ನು ಪ್ರಧಾನಿಯವರ ಸದ್ಭಾವನೆ ಮತ್ತು ಸಂಯಮದ ಸಂಕೇತವೆಂದು ಎಂದು ನೆಟ್ಟಿಗರು ಕರೆದಿದ್ದಾರೆ. ಅನೇಕರು ಪ್ರಧಾನಿಯ “ಬಾಸ್ ನಡೆ” ಯನ್ನು ಶ್ಲಾಘಿಸಿದರು.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸುವ ವಿರೋಧ ಪಕ್ಷದ ಸಂಸದರಿಗೆ ನೀರು ಕುಡಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಭಾಷಣದ ಕೊನೆಯಲ್ಲಿ, “ನನ್ನ ದನಿ ಇನ್ನೂ ಗಟ್ಟಿ ಇದೆ. ಸಂಕಲ್ಪವೂ ಅಷ್ಟೇ ದೃಢವಾಗಿದೆ. ಈ ಮೋದಿ ಯಾರಿಗೂ ಹೆದರುವುದಿಲ್ಲ” ಎಂದು ಅಬ್ಬರಿಸಿದ ಪ್ರಧಾನಿ, ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ ಎಂದು ಹೇಳಿದರು.

ಪ್ರತಿಪಕ್ಷಗಳ ಆಗ್ರಹದ ಮಧ್ಯೆಯೇ ನರೇಂದ್ರ ಮೋದಿ ಅವರು ನೀಟ್‌ ಅಕ್ರಮದ ಕುರಿತು ಮಾತನಾಡಿದರು. “ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್‌ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯೋಚಿಸಬೇಕಾದ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಲೋಕಸಭೆ ಚುನಾವಣೆ ಗೆಲುವಿನ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ:Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Continue Reading

ಪರಿಸರ

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Cheetah Safari: ಬೆಂಗಳೂರಿನಲ್ಲೇ ಇರುವ, ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ ಆರಂಭಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Cheetah Safari
Koo

ಬೆಂಗಳೂರು ಆಧುನಿಕ ಪ್ರವಾಸಿಗರ ಸ್ವರ್ಗ. ಇಲ್ಲೇ ಸುತ್ತಾಡಿದರೂ ಮುಗಿಯದಷ್ಟು ಸ್ಥಳಗಳಿವೆ. ಎಲ್ಲ ಬಗೆಯ ಪ್ರವಾಸಿಗರಿಗೂ ಖುಷಿಯಿಂದ ಕಾಲ ಕಳೆಯಬಹುದಾದಂತಹ ಜಾಗಗಳಿವೆ. ಇಂತಹ ಜಾಗಗಳ ಪೈಕಿ ಮಕ್ಕಳಾದಿಯಾಗಿ ಮುದುಕರವರೆಗೂ ನೋಡಬಹುದಾದ ತಾಣ ಎಂದರೆ ಅದು ಬನ್ನೇರುಘಟ್ಟ. ಬೆಂಗಳೂರಿನಲ್ಲೇ ಇರುವ ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ (Cheetah Safari) ಆರಂಭಿಸಿದೆ.

Cheetah

ದಕ್ಷಿಣ ಭಾರತದಲ್ಲೇ ಮೊದಲು

ದಕ್ಷಿಣ ಭಾರತದಲ್ಲೇ ಇದು ಮೊದಲನೆಯದಾಗಿದ್ದು, ನಮ್ಮ ಬಾರತದ ಅತ್ಯಂತ ದೊಡ್ಡ ಚಿರತೆ ಸಫಾರಿ ಇದಾಗಿದೆ. 20 ಹೆಕ್ಟೇರ್‌ ಕಾಡಿನಲ್ಲಿ ಈ ಸಫಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಇದರಲ್ಲಿ ಚಿರತೆ ವೀಕ್ಷಣೆಯ ಸಾಧ್ಯತೆ ಅತ್ಯಂತ ಹೆಚ್ಚಿದೆ. ರಕ್ಷಣೆಗಾಗಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಬನ್ನೇರುಘಟ್ಟ ವನ್ಯಜೀವಿಧಾಮ ಕೈಗೊಂಡಿದ್ದು, ಸುರಕ್ಷತಾ ಬೇಲಿಗಳನ್ನು ಎಲ್ಲಡೆ ಹಾಕಲಾಗಿದೆ. ಹಾಗೂ ಯಾವುದೇ ತೊಂದರೆಯಾಗದಂತೆ ಸಫಾರಿಯನ್ನು ಮಾಡಿ ಬರಲು ಅನುಕೂಲಕರ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಬೆಂಗಳೂರಿನ ಹೊರವಲಯಗಳಲ್ಲಿ ಅನೇಕ ಕಡೆ, ಚಿರತೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಚಿರತೆಗಳನ್ನು ಅವುಗಳ ಆವಾಸ ಸ್ಥಾನದಲ್ಲೇ ನೋಡುವ ರೋಮಾಂಚನ ವನ್ಯಜೀವಿ ಪ್ರಿಯರಿಗಷ್ಟೇ ಗೊತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಚಿರತೆಗಳ ದರ್ಶನಕ್ಕಾಗಿಯೇ ವಿಶೇಷವಾಗಿ ಈ ಸಫಾರಿ ಆಯೋಜಿಸಲಾಗಿದೆ. ತುಂಬ ಹತ್ತಿರದಿಂದ ಚಿರತೆಗಳನ್ನು ಕಾಣುವ ಸೌಭಾಗ್ಯ ಈ ಸಫಾರಿಯಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಇದನ್ನು ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಚಿರತೆ ಸಂತತಿ ಹೇರಳ

ಬನ್ನೇರುಘಟ್ಟದ ಈ ಭಾಗದಲ್ಲಿ ಚಿರತೆಗಳ ಸಂತತಿ ಹೇರಳಾಗಿದ್ದು, ಹಲವು ವರ್ಷಗಳಿಂದ ಇದು ಸಮತೋಲನವನ್ನು ಕಾಯ್ದುಕೊಂಡಿದೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಿಗೆ ದಾಳಿ ಮಾಡುತ್ತಿದ್ದ ಚಿರತೆಗಳನ್ನು ರಕ್ಷಿಸಿ ಇಲ್ಲಿಗೆ ತರಲಾಗಿದ್ದು ಈ ಸಂಖ್ಯೆ ಇದೀಗ ವೃದ್ಧಿಸಿದೆ. ಹಾಗೂ ಬನ್ನೇರುಘಟ್ಟದ ಈ ವ್ಯಾಪ್ತಿಯ ನೈಸರ್ಗಿಕ ಪರಿಸರದಲ್ಲಿ ಓಡಾಡಿಕೊಂಡಿದ್ದು, ತಮ್ಮ ಎಂದಿನ ಶೈಲಿಯ ಬದುಕನ್ನು ಕಾಣುತ್ತಿವೆ. ಹೀಗಾಗಿ, ಅವುಗಳ ನೈಸರ್ಗಿಕವಾದ ಸಹಜ ಬದುಕನ್ನು ಹತ್ತಿರದಿಂದ ಕಾಣಲು ಈ ಸಫಾರಿ ಅತ್ಯಂತ ಸೂಕ್ತವಾದ ಮಾಧ್ಯಮವಾಗಿದೆ.
ಬನ್ನೇರುಘಟ್ಟದಲ್ಲಿ ಮೃಗಾಲಯವೂ ಇದ್ದು, ಅಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಬಹುದಾದರೂ, ಈ ಸಫಾರಿಯಲ್ಲಿ, ಅವುಗಳ ನೈಸರ್ಗಿಕ ಪರಿಸರದಲ್ಲೇ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನದ ಇನ್ನೊಂದು ಬಹುಮುಖ್ಯ ವಿಶೇಷತೆ ಎಂದರೆ ಇಲ್ಲಿನ ಚಿಟ್ಟೆ ಪಾರ್ಕ್‌. ಸುಮಾರು 7.5 ಎಕರೆ ಪ್ರದೇಶದವನ್ನು ಚಿಟ್ಟೆ ಪಾರ್ಕ್‌ ಆಗಿ ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿ ನಾನಾ ಬಗೆಯ ಚಿಟ್ಟೆಗಳನ್ನು ವೀಕ್ಷಿಸಬಹುದು. ಬನ್ನೇರುಘಟ್ಟದಲ್ಲಿಯೇ ರಾತ್ರಿ ಕಳೆಯಬೇಕೆಂದರೆ, ಇಲ್ಲಿ ಟೆಂಟೆಡ್‌ ಕಾಟೇಜ್‌, ಹಟ್‌ಗಳ ಸೌಲಭ್ಯಗಳೂ ಇವೆ. ಸದ್ಯದಲ್ಲೇ ಬನ್ನೇರುಘಟ್ಟದ ಜೀವವೈವಿಧ್ಯದ ವಿಶೇಷ ವೀಕ್ಷಣೆಗಾಗಿ ಸ್ಕೈವಾಕ್‌ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರತಿ ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮುಚ್ಚಿರುತ್ತದೆ. ಇದನ್ನು ಹೊರತುಪಡಿಸಿ ಪ್ರತಿದಿನ 9.30ರಿಂದ ಸಂಜೆ 5ರವರೆಗೆ ಪ್ರವಾಸಿಗರಿಗಾಗಿ ಇದು ತೆರೆದಿರುತ್ತದೆ.

Continue Reading

ಪ್ರಮುಖ ಸುದ್ದಿ

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

Hathras Stampede: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮೃತರ ಸಂಖ್ಯೆ 116ಕ್ಕೆ ತಲುಪಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಮಂಗಳವಾರ ನಡೆದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, ಮೃತರ ಸಂಖ್ಯೆ 116ಕ್ಕೆ ತಲುಪಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ʼʼಭೋಲೆ ಬಾಬಾ ಅವರಿಗಾಗಿ ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಅವರು ಕ್ಯಾಂಪಸ್ ಒಳಗೆ ಕಂಡುಬಂದಿಲ್ಲʼʼ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದರು.

ಸತ್ಯಂಗ ಮುಗಿಸಿ ಭೋಲೆ ಬಾಬಾ ಅವರು ಅಪರಾಹ್ನ 3.30ರ ಸುಮಾರಿಗೆ ಸ್ಥಳದಿಂದ ಹೊರಡುವಾಗ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

“ಒಟ್ಟು 23 ಶವಗಳನ್ನು ಅಲಿಗಢಕ್ಕೆ ತರಲಾಗಿದೆ. ಹತ್ರಾಸ್ ಘಟನೆಯಲ್ಲಿ ಗಾಯಗೊಂಡ ಮೂವರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಆಸ್ಪತ್ರೆಯ ಆಡಳಿತದೊಂದಿಗೆ ಮಾತನಾಡಿದ್ದೇವೆʼʼ ಎಂದು ಅಲಿಗಢ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ವಿಶಾಕ್ ಜಿ. ಅಯ್ಯರ್ ಮಾಹಿತಿ ನೀಡಿದರು.

ಈವರೆಗೆ ಒಟ್ಟು 116 ಮಂದಿ ಮೃತಪಟ್ಟಿದ್ದಾರೆ. 19 ಶವಗಳನ್ನು ಗುರುತಿಸಲಾಗಿದೆ. ಉಳಿದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆʼʼ ಎಂದು ಹತ್ರಾಸ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಮಂಜೀತ್ ಸಿಂಗ್ ಹೇಳಿದರು.

ಹೆಣಗಳ ರಾಶಿ ನೋಡಿ ಪೊಲೀಸ್‌ಗೆ ಹೃದಯಾಘಾತ; ಸಾವು

ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಎಂಬ ಪೊಲೀಸ್‌ ಕಾನ್ಸ್‌ಟೇಬಲ್‌ ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ರಜನೀಶ್ ಮೃತದೇಹಗಳ ರಾಶಿಯನ್ನು ನೋಡಿ ಆಘಾತಗೊಂಡು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ಭೋಲೆ ಬಾಬಾ ನೇತೃತ್ವದಲ್ಲಿ ‘ಸತ್ಸಂಗ’ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ವಿಶೇಷವಾಗಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆಯೋಜನೆಗೆ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಕಾರ್ಯಕ್ರಮ ನಡೆದ ಜಾಗ ಇಕ್ಕಟ್ಟಿನಿಂದ ಕೂಡಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Continue Reading

ಪ್ರಮುಖ ಸುದ್ದಿ

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

IPS Transfer: ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

VISTARANEWS.COM


on

IPS transfer
Koo

ಬೆಂಗಳೂರು: ರಾಜ್ಯದ 25 ಐಪಿಎಸ್‌ ಅಧಿಕಾರಿಗಳನ್ನು (IPS Officers) ನಾನಾ ಕಡೆಗಳಿಗೆ ವರ್ಗಾವಣೆ (IPS Transfer) ಮಾಡಿ ಸರ್ಕಾರ (Karnataka Govt) ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ:

ಲಾಭೂರಾಮ್ : ಐಜಿಪಿ ಕೇಂದ್ರ ವಲಯ
ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)
ಡಾ.ಕೆ ತ್ಯಾಗರಾಜನ್ : ಐಜಿಪಿ ,ಐಎಸ್ ಡಿ.
ಎನ್ ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.
ಬಿ ರಮೇಶ್ : ಡಿಐಜಿಪಿ ಈಸ್ಟರ್ನ್ ರೇಂಜ್ ದಾವಣಗೆರೆ .
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತರು ಮೈಸೂರು ನಗರ
ರೇಣುಕಾ ಸುಕುಮಾರ್ : ಎಐಜಿಪಿ ( ಡಿಜಿ ಕಛೇರಿ)
ಸಿಕೆ ಬಾಬಾ: ಎಸ್‌ಪಿ ಬೆಂಗಳೂರು ಗ್ರಾಮಾಂತರ.
ಎನ್ ವಿಷ್ಣುವರ್ಧನ್ : ಎಸ್‌ಪಿ ಮೈಸೂರು ಜಿಲ್ಲೆ.
ಸುಮನ್ ಡಿ ಪೆನ್ನೆಕರ್ : ಎಸ್ ಪಿ , ಬಿಎಂಟಿಎಫ್.
ಸಿ.ಬಿ ರಿಷ್ಯಂತ್: ಎಸ್ ಪಿ ವೇರ್ ಲೆಸ್ .
ಚನ್ನಬಸವಣ್ಣ : ಎಐಜಿಪಿ, (ಆಡಳಿತ ) ಡಿಜಿ ಕಛೇರಿ.
ನಾರಾಯಣ್ ಎಂ, : ಎಸ್ ಪಿ ಉತ್ತರ ಕನ್ನಡ.
ಸಾರ ಫಾತಿಮಾ: ಡಿಸಿಪಿ ಆಗ್ನೇಯ ವಿಭಾಗ , ಬೆಂಗಳೂರು ನಗರ
ಅರುಣಾಂಗ್ಷು ಗಿರಿ : ( Arunngshu giri ) SP ,CID
ನಾಗೇಶ್ ಡಿ ಎಲ್ : ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ .
ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ.
ಪ್ರದೀಪ್ ಗುಂಟಿ: ಎಸ್ ಪಿ ಬೀದರ್ ಜಿಲ್ಲೆ.
ಯತೀಶ್ ಎನ್ : ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ.
ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಮಂಡ್ಯ ಜಿಲ್ಲೆ.
ಡಾ ಶೋಭಾ ರಾಣಿ ವಿ.ಜೆ. ಎಸ್ ಪಿ .ಬಳ್ಳಾರಿ ಜಿಲ್ಲೆ.
ಡಾ ಕವಿತಾ ಟಿ: ಎಸ್ ಪಿ ಚಾಮರಾಜನಗರ ಜಿಲ್ಲೆ.
ನಿಖಿಲ್ ಬಿ : ಎಸ್ ಪಿ ಕೋಲಾರ ಜಿಲ್ಲೆ.
ಕುಶಾಲ್ ಚೌಕ್ಸಿ : ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.
ಮಹಾನಿಂಗ್ ನಂದಗಾವಿ ಡಿಸಿಪಿ ( ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ

ಇದನ್ನೂ ಓದಿ: BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Continue Reading
Advertisement
Actor Darshan his brother-in-law homeless
ಕ್ರೈಂ2 mins ago

Actor Darshan: ಒಂದೇ ಸೆಲ್‌ನಲ್ಲಿದ್ದರೂ ಶಿಷ್ಯನ ಮಾತನಾಡಿಸದ ದರ್ಶನ್‌, ʼಸಾಕು ನಿಮ್ಮ ಸಹವಾಸʼ ಎಂದ ಡಿ ಬಾಸ್

Virat- Anushka
ಕ್ರೀಡೆ15 mins ago

Virat- Anushka: ಬೆರಿಲ್ ಚಂಡಮಾರುತದ ದೃಶ್ಯವನ್ನು ವಿಡಿಯೊ ಕಾಲ್​ ಮೂಲಕ ಪತ್ನಿ ಅನುಷ್ಕಾಗೆ ತೊರಿಸಿದ ಕೊಹ್ಲಿ; ವಿಡಿಯೊ ವೈರಲ್​ 

Parliament Sessions
ದೇಶ30 mins ago

Parliament Sessions: ತಮ್ಮ ವಿರುದ್ಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷ ಸಂಸದರಿಗೆ‌ ಕುಡಿಯಲು ನೀರು ಕೊಟ್ಟ ಪ್ರಧಾನಿ ಮೋದಿ- ವಿಡಿಯೋ ಇದೆ

Nanna Devaru Serial Mayuri And NarasimhaRaju Grand Son Acting
ಕಿರುತೆರೆ37 mins ago

Nanna Devaru Serial: ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ ಮಯೂರಿ;  ‘ನನ್ನ ದೇವ್ರು’ ಧಾರಾವಾಹಿಗೆ ನರಸಿಂಹರಾಜು ಮೊಮ್ಮಗ ಹೀರೊ!

Safe Drive Tips
ಆಟೋಮೊಬೈಲ್40 mins ago

Safe Drive Tips: ಮಳೆಯಲ್ಲಿ ಬೈಕ್ ಓಡಿಸುವಾಗ ಈ ಸಂಗತಿಗಳು ಗಮನದಲ್ಲಿರಲಿ

India T20I schedule
ಕ್ರೀಡೆ49 mins ago

India T20I schedule: 2026ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಆಡಲಿದೆ 34 ಟಿ20 ಪಂದ್ಯ

high beam lights
ಕರ್ನಾಟಕ51 mins ago

High Beam Lights‌: ರಾತ್ರಿ ಹೈ ಬೀಮ್‌ ಲೈಟ್‌ ಹಾಕಿಕೊಂಡು ವಾಹನ ಚಲಾಯಿಸುತ್ತೀರಾ? ಕೇಸು ಬೀಳುತ್ತೆ ಎಚ್ಚರ!

Cheetah Safari
ಪರಿಸರ1 hour ago

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Viral News
Latest1 hour ago

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Hathras Stampede
ಪ್ರಮುಖ ಸುದ್ದಿ1 hour ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ14 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌