Ayodhya Ram Mandir: ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ? ಅಯೋಧ್ಯೆ ರಾಮ ಮಂದಿರಕ್ಕೆ ಹೀಗೆ ತೆರಳಿ - Vistara News

ದೇಶ

Ayodhya Ram Mandir: ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ? ಅಯೋಧ್ಯೆ ರಾಮ ಮಂದಿರಕ್ಕೆ ಹೀಗೆ ತೆರಳಿ

Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ತೆರಳಿರುವ ಮಾರ್ಗಗಳ ಮಾಹಿತಿ ಇಲ್ಲಿದೆ.

VISTARANEWS.COM


on

airport
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠೆಗೆ (Pran prathishta) ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಈ ಸಮಾರಂಭ ನಡೆಯಲಿದ್ದು, ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಯೋಧ್ಯೆಯಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿವೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಸಿದ್ಧತೆಗಾಗಿ ನಗರವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಜನವರಿ 22ರಂದು ವಿಶೇಷ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ದೇಗುಲ ನಗರಿ ಅಯೋಧ್ಯೆಗೆ ನೀವೂ ತೆರಳಬೇಕು ಎಂದು ಆಯೋಚಿಸುತ್ತಿದ್ದೀರಾ? ಹಾಗಾದರೆ ಯಾವ ರೀತಿ ತೆರಳಬಹುದು ಎನ್ನುವುದರ ಮಾಹಿತಿ ಇಲ್ಲಿದೆ.

ಅಯೋಧ್ಯೆಗೆ ಯಾವ ರೀತಿ ತೆರಳಬಹುದು?

ವಿಮಾನ ಮಾರ್ಗ

ಇತ್ತೀಚೆಗೆ ಅಯೋಧ್ಯೆಯ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗಾಗಿ ತೆರೆದುಕೊಂಡಿದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅಯೋಧ್ಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಹಲವು ವಿಮಾನಯಾನ ಕಂಪೆನಿಗಳು ಭಾರತದ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನ ಸೇವೆಯನ್ನು ಪ್ರಕಟಿಸಿವೆ. ಪ್ರವಾಸಿಗರು ಮಹಾಯೋಗಿ ಗೋಕ್ರಖ್ನಾಥ್ ವಿಮಾನ ನಿಲ್ದಾಣ, ಗೋರಖ್‌ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಲಕ್ನೋ ಮತ್ತು ಪ್ರಯಾಗ್‌ರಾಜ್‌ ಅಥವಾ ವಾರಣಾಸಿ ವಿಮಾನ ನಿಲ್ದಾಣಗಳಿಗೆ ತೆರಳಿ ಅಲ್ಲಿಂದಲೂ ಅಯೋಧ್ಯೆ ತಲುಪಬಹುದು.

ರೈಲು ಮಾರ್ಗ

ಅಯೋಧ್ಯೆಯಲ್ಲಿ ಸುಸಜ್ಜಿತ ರೈಲು ನಿಲ್ದಾಣವೂ ನಿರ್ಮಾಣವಾಗಿದ್ದು, ಪ್ರಧಾನಿ ಮೋದಿ ಕಳೆದ ತಿಂಗಳು ಚಾಲನೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಅನುಗುಣವಾಗಿ ಮೀಸಲಾದ ಅಯೋಧ್ಯೆ ರೈಲ್ವೆ ಸ್ಟೇಷನ್‌ ವಿವಿಧ ವಲಯಗಳ ರೈಲ್ವೆಯಿಂದ ಉತ್ತಮ ಸಂಪರ್ಕ ಹೊಂದಿದೆ.

ರಸ್ತೆ ಮಾರ್ಗ

ಅಯೋಧ್ಯೆಗೆ ನಿಯಮಿತವಾಗಿ ಕಾರ್ಯನಿರ್ವಹಿಸುವ ಹಲವು ಸಾರ್ವಜನಿಕ ಮತ್ತು ಖಾಸಗಿ ಸೇವಾ ಬಸ್‌ಗಳು ಲಭ್ಯ. ಇವು ವಿವಿಧ ಪ್ರದೇಶಗಳಿಂದ ಅಯೋಧ್ಯೆಗೆ ಸಂಚರಿಸುತ್ತವೆ. ಉತ್ತರ ಪ್ರದೇಶದ ಸಾರಿಗೆ ನಿಗಮದ ಬಸ್‌ಗಳು ಲಕ್ನೋ, ಗೋರ್‌ಖ್‌ಪುರ, ದೆಹಲಿ ಮತ್ತು ಇತರ ಪ್ರಮುಖ ನಗರಗಳಿಂದ ಅಯೋಧ್ಯೆಗೆ ತೆರಳುತ್ತವೆ.

ಶ್ರೀರಾಮನ ಜೀವನ ಸಾರುವ ಸ್ಟ್ಯಾಂಪ್‌ ಬಿಡುಗಡೆ

ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆಯ ಸ್ಮರಣಾರ್ಥ ಮೋದಿ ಅವರು ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾಮಮಂದಿರ, ಭಗವಾನ್‌ ಗಣೇಶ, ಭಗವಾನ್‌ ಹನುಮಾನ್‌, ಜಟಾಯು, ಕೇವಟ್‌ರಾಜ್ ಹಾಗೂ ಶಬರಿ ಮಾತೆಯ ಆರು ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದರು. ಚಿನ್ನದ ಎಲೆಗಳ ಮೇಲೆ ಸೂರ್ಯನ ಕಿರಣ ಸ್ಪರ್ಶಿಸುವುದು, ಭಗವಾನ್‌ ಶ್ರೀರಾಮನ ಜೀವನ ವೃತ್ತಾಂತ ಸಾರುವ ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ರಾಮಮಂದಿರದ ಜತೆಗೆ ಚೌಪೈ ಮಂಗಲ ಭಗವಾನ್‌ ಅಮಂಗಲ ಹರಿಯ ವಿನ್ಯಾಸವೂ ಅಂಚೆ ಚೀಟಿಯಲ್ಲಿದೆ.

ಸೂರ್ಯದೇವ, ಸರಯೂ ನದಿ ಹಾಗೂ ದೇವಾಲಯದ ಸುತ್ತಮುತ್ತ ಇರುವ ವಾಸ್ತುಶಿಲ್ಪದ ಹಿರಿಯನ್ನೂ ಅಂಚೆ ಚೀಟಿಗಳು ಸಾರುತ್ತಿವೆ. ಸುಮಾರು 48 ಪುಟಗಳ ಪುಸ್ತಕದಲ್ಲಿ ಶ್ರೀರಾಮನು ಜಾಗತಿಕವಾಗಿ ಹೇಗೆ ಪ್ರಭಾವ ಬೀರಿದ್ದಾನೆ ಎಂಬುದನ್ನೂ ಅಂಚೆ ಚೀಟಿಗಳ ಮೂಲಕವೇ ತಿಳಿಸಲಾಗಿದೆ. 

ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

Viral Video: ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಆದರೆ ಅಧಿಕಾರ ಮಾತ್ರ ಹಿಂದೂಗಳಿಗೆ ಎಂದು ತೃಣಮೂಲ ಕಾಂಗ್ರೆಸ್‌ ವಿರುದ್ಧ ಆ ಪಕ್ಷದ ಮುಸ್ಲಿಂ ನಾಯಕರೇ ದನಿ ಎತ್ತಿದ್ದಾರೆ. ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದರು.

VISTARANEWS.COM


on

By

Viral Video
Koo

ಹಿಂದೂಗಳು (hindu) ಪಕ್ಷದ ಉನ್ನತ ಸ್ಥಾನಗಳನ್ನು ಕಸಿದುಕೊಳ್ಳುತ್ತಿದ್ದಾರೆ ಮತ್ತು ಮುಸ್ಲಿಮರು (muslim) ಬಾಂಬ್ ತಯಾರಿಸುವ ಕೊಳಕು ಕೆಲಸ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನ (TMC) ಅಲ್ಪಸಂಖ್ಯಾತ ಮೋರ್ಚಾ ನಾಯಕ ಮೊಹಮ್ಮದ್ ಯೂನಸ್ ಆರೋಪಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಚಾರ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೈಂಥಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಇದರ ವಿಡಿಯೋದಲ್ಲಿ ಯೂನಸ್ ಅವರು ಅಲ್ಪಸಂಖ್ಯಾತರು ಎಲ್ಲಿ ಕೆಲಸ ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಪಕ್ಷದ ಎಲ್ಲಾ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ನಾವು ಅವರ ಕಣ್ಣುಗಳಲ್ಲಿ ಇರುವುದನ್ನು ನಮ್ಮ ಅಸ್ತಿತ್ವವನ್ನು ಅವರಿಗೆ ತೋರಿಸಬೇಕಾಗಿದೆ ಎಂದು ಹೇಳಿದರು.

ಸ್ವಂತ ಬೂತ್‌ಗಳಲ್ಲಿ ಗೆಲ್ಲಲು ಸಾಧ್ಯವಿಲ್ಲದವರು ಪಕ್ಷವನ್ನು ಮುನ್ನಡೆಸಲು ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಹಿಂದೂಗಳು ಎಲ್ಲಾ ಕೋರ್ ಕಮಿಟಿಗಳ ಚುಕ್ಕಾಣಿ ಹಿಡಿದಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬ್ ತಯಾರಿಕೆಯಿಂದ ಪ್ರಾರಂಭಿಸಿ ನಾವು ಮುಸ್ಲಿಮರು ಎಲ್ಲಾ ಕೊಳಕು ಕೆಲಸಗಳನ್ನು ಮಾಡುತ್ತೇವೆ ಎಂದಿರುವ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಚಿಂತನೆಯೂ ನಡೆಯುತ್ತಿದೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಧ್ರುಬಾ ಸಹಾ, ಅವರು ಬಾಂಬ್‌ಗಳನ್ನು ತಯಾರಿಸುತ್ತಾರೆ, ಬೂತ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ಟಿಎಂಸಿಯ ಗೆಲುವನ್ನು ಖಚಿತಪಡಿಸಿಕೊಳ್ಳಲು ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕೊಲ್ಲುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಅವರು ಜನರನ್ನು ಇಸ್ಲಾಂಗೆ ಮತಾಂತರಿಸುವಂತೆ ಮುಕ್ತ ಕರೆ ನೀಡಿರುವುದನ್ನೂ ಬಿಜೆಪಿ ನಾಯಕ ಸಹಾ ಪ್ರಸ್ತಾಪಿಸಿದ್ದಾರೆ.

ಫಿರ್ಹಾದ್ ಹಕೀಮ್ ಅವರು ಇತ್ತೀಚೆಗೆ ನಡೆದ ಅಖಿಲ ಭಾರತ ಕುರಾನ್ ಸ್ಪರ್ಧೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಹುಟ್ಟದೇ ಇರುವವರು ದುರದೃಷ್ಟದಿಂದ ಜನಿಸಿದರು, ನಾವು ಅವರಿಗೆ ಮತಾಂತರಕ್ಕೆ ಕರೆಯುತ್ತೇವೆ. ಅಲ್ಲಾನನ್ನು ಸಂತೋಷಪಡಿಸಿ ಎಂದು ಹೇಳುತ್ತೇವೆ ಎಂದಿದ್ದರು.

ಮುಸ್ಲಿಮೇತರರಲ್ಲಿ ನಾವು ಇಸ್ಲಾಂ ಧರ್ಮವನ್ನು ಹರಡಬೇಕಾಗಿದೆ. ನಾವು ಯಾರನ್ನಾದರೂ ಇಸ್ಲಾಮಿನ ಹಾದಿಯಲ್ಲಿ ತರಲು ಸಾಧ್ಯವಾದರೆ, ನಂಬಿಕೆಯ ಹರಡುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ನಿಜವಾದ ಮುಸ್ಲಿಮರೆಂದು ಸಾಬೀತುಪಡಿಸುತ್ತೇವೆ ಎಂದು ಅವರು ತಿಳಿಸಿದ್ದರು. ಸಾವಿರಾರು ಜನರು ನಾವು ಧರಿಸುವ ಸ್ಕಲ್ ಕ್ಯಾಪ್ ಧರಿಸಿ ಕುಳಿತಾಗ ನಾವು ಶಕ್ತಿಯನ್ನು ಪ್ರದರ್ಶಿಸಿದಂತಾಗುತ್ತದೆ. ಇದು ಏಕತೆಯನ್ನು ತೋರಿಸುತ್ತದೆ ಮತ್ತು ಯಾರೂ ನಮ್ಮನ್ನು ಬಗ್ಗುಬಡಿಯಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದರು.


ಇಸ್ಲಾಂ ಧರ್ಮದಲ್ಲಿ ಜನಿಸಿದ ಕಾರಣ ಪ್ರವಾದಿ ಮತ್ತು ಅಲ್ಲಾ ನಮಗೆ ಜನ್ನತ್‌ಗೆ ಸ್ಪಷ್ಟವಾದ ಮಾರ್ಗವನ್ನು ಒದಗಿಸಿದ್ದಾರೆ. ನಾವು ಯಾವುದೇ ಪಾಪಗಳನ್ನು ಮಾಡದಿದ್ದರೆ, ನಾವು ನೇರವಾಗಿ ಜನ್ನತ್‌ಗೆ ಹೋಗುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral Video: ರೈಲ್ವೆ ಸೇತುವೆ ಮೇಲೆ ಫೋಟೊಶೂಟ್‌; ರೈಲು ಬಂದಾಗ 90 ಅಡಿ ಆಳಕ್ಕೆ ಜಿಗಿದ ದಂಪತಿ!

ಸಾರ್ವಜನಿಕ ಥಳಿತಕ್ಕೆ ಸಮರ್ಥನೆ

ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯ ಮೇಲೆ ತಾಲಿಬಾನ್ ಮಾದರಿಯ ಸಾರ್ವಜನಿಕ ಥಳಿತವನ್ನು ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಥಳಿಸಲಾಗಿತ್ತು.

ಪತಿ ಇಲ್ಲದ ಸಮಯದಲ್ಲಿ ಮಹಿಳೆ ಅನೈತಿಕ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಗ್ರಾಮಸ್ಥರು ಸಭೆ ನಡೆಸಿ ಸಾಮೂಹಿಕವಾಗಿ ಆಕೆಯನ್ನು ಥಳಿಸಿದ್ದರು. ಘಟನೆ ನಡೆದ ಪ್ರದೇಶ ‘ಮುಸ್ಲಿಂ ರಾಷ್ಟ್ರ’ ಎಂದು ಹಮೀದುಲ್ ರೆಹಮಾನ್ ಹೇಳಿಕೊಂಡಿದ್ದರು.

Continue Reading

ದೇಶ

House Arrest: ಯುಪಿ ಶಾಸಕ ರಾಜಾಭಯ್ಯಾರ ತಂದೆಗೆ ಗೃಹ ಬಂಧನ

House Arrest: ಭದ್ರಿ ಮಹಲ್‌ನ ಹೊರಗೆ ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹೊರಗೆ ನೋಟಿಸ್ ಅಂಟಿಸಿದ್ದಾರೆ. ಮೊಹರಂ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಉದಯ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಮೂರು ದಿನಗಳ ಕಾಲ ಅವರ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

VISTARANEWS.COM


on

House arrest
Koo

ಲಖನೌ: ಉತ್ತರಪ್ರದೇಶದ ಜನಸತ್ತಾ ದಳ(Jana Sattha Dal)ದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ(Raja Bhayya’s Father) ಅವರ ತಂದೆ ಉದಯ್ ಪ್ರತಾಪ್ ಸಿಂಗ್(Uday Prathap Singh) ಅವರನ್ನು ಸೋಮವಾರ ಜಿಲ್ಲಾ ಪೊಲೀಸರು ಬೇಟಿಯಲ್ಲಿರುವ ಅವರ ಅರಮನೆಯ ಭದ್ರಿ ಮಹಲ್‌ನಲ್ಲಿ ಗೃಹಬಂಧನದಲ್ಲಿ ಇರಿಸಿದ್ದಾರೆ. ಮುಂಬರುವ ಮೊಹಾರಂ ಹಬ್ಬ(Moharram) ಇರುವ ಕಾರಣ ಗೃಹ ಬಂಧನ(House Arrest)ದಲ್ಲಿಡಲಾಗಿತ್ತು.

ಭದ್ರಿ ಮಹಲ್‌ನ ಹೊರಗೆ ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹೊರಗೆ ನೋಟಿಸ್ ಅಂಟಿಸಿದ್ದಾರೆ. ಮೊಹರಂ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಘರ್ಷಣೆ ಉಂಟಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಉದಯ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಂಡಿದೆ. ಅವರನ್ನು ಮೂರು ದಿನಗಳ ಕಾಲ ಅವರ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಉದಯ್ ಪ್ರತಾಪ್ ಸಿಂಗ್ ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದಿದ್ದಾರೆ, “ಆಡಳಿತವು ಇದಕ್ಕೆ ಪರಿಹಾರವನ್ನು ಕಂಡುಕೊಂಡಿದೆ. ಮುಸಲ್ಮಾನರನ್ನು ವಿರೋಧಿಸುವವರನ್ನು ಬಂಧಿಸಿ ಸರ್ಕಾರ ಬಂಧಿಸುತ್ತಿದೆ. ಶೇಖ್‌ಪುರದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಿಂದೂಗಳ ಭಂಡಾರವನ್ನು (ಸಾರ್ವಜನಿಕ ಔತಣ) ಆಡಳಿತವು ಹೊಸ ಪದ್ಧತಿ ಎಂದು ಕರೆದು ನಿಲ್ಲಿಸಿತು, ಆದರೆ ಮಜಿಲ್‌ಗಾಂವ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಮುಸ್ಲಿಮರು ಹೊಸ ಗೇಟ್ ಸ್ಥಾಪಿಸುವುದನ್ನು ಅವರು ತಡೆಯುತ್ತಿಲ್ಲ ಎಂದು ಟ್ವೀಟ್‌ ಮಾಡಿ ಕಿಡಿ ಕಾರಿದ್ದಾರೆ.

2012ರಲ್ಲಿ ಮೊಹರಂ ದಿನದಂದು ಶೇಖ್‌ಪುರ ಗ್ರಾಮದ ರಸ್ತೆಬದಿಯಲ್ಲಿ ಮಂಗವೊಂದನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅಂದಿನಿಂದ, ಗ್ರಾಮಸ್ಥರು ಅಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದರು ಮತ್ತು ಸಿಂಗ್ ಅವರ ಆಶ್ರಯದಲ್ಲಿ ಮೊಹರಂನಲ್ಲಿ ಹನುಮಾನ್ ಪಠಣ ಮತ್ತು ಭಂಡಾರವನ್ನು ಆಯೋಜಿಸಲು ಪ್ರಾರಂಭಿಸಿದರು.

ಮೊಹರಂ ದಿನದಂದು ಮಾತ್ರ ಭಂಡಾರ ನಡೆಯುವುದು ವಿಶೇಷ. ಎರಡು ಆರಂಭಿಕ ವರ್ಷಗಳಲ್ಲಿ, ಭಂಡಾರ ಮತ್ತು ಮೊಹರಂ ಮೆರವಣಿಗೆಗಳು ಏಕಕಾಲದಲ್ಲಿ ನಡೆದವು. 2015ರಲ್ಲಿ ದೇವಸ್ಥಾನದಲ್ಲಿ ಭಂಡಾರ ಮತ್ತು ಧ್ವಜಗಳನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ತಾಜಿಯಾ ಮೆರವಣಿಗೆ ನಡೆಸಿರಲಿಲ್ಲ. ವಿಷಯ ತಾರಕಕ್ಕೇರಿದಾಗ ಆಡಳಿತ ಮಧ್ಯ ಪ್ರವೇಶಿಸಬೇಕಾಯಿತು.

2016 ರಲ್ಲಿ, ಜಿಲ್ಲಾಡಳಿತವು ಭಂಡಾರಕ್ಕೆ ಅನುಮತಿಯನ್ನು ತಡೆಹಿಡಿದು ಶೇಖ್‌ಪುರದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು. ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಡಿಎಂ ಅವರ ವಿವೇಚನೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು, ಹೀಗಾಗಿ ರಾಜಾ ಉದಯ್ ಪ್ರತಾಪ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂಜಾಗೃತಾ ಕ್ರಮವಾಗಿ ಪ್ರತಿ ಮೊಹರಂಗೆ ಅವರನ್ನು ಗೃಹಬಂಧನದಲ್ಲಿ ಇಡುವುದು ವಾಡಿಕೆ. ಈ ಬಾರಿ ಶಾಂತಿ ಕಾಪಾಡಲು ಅವರ ಮಹಲ್ ಸುತ್ತಲೂ ಹಲವು ಪೊಲೀಸ್ ಠಾಣೆಗಳ ಪಡೆಗಳನ್ನು ನಿಯೋಜಿಸಲಾಗಿದೆ. ಜುಲೈ 17 ರಂದು ಮುಹರಂ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ! ಬಂಗಾರ ದರ ಇಳಿಕೆ?

Continue Reading

ದೇಶ

Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

Kedarnath Temple: ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ ಎಂಬುದಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kedarnath Temple
Koo

ಮುಂಬೈ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿರುವ ರತ್ನಭಂಡಾರವನ್ನು ತೆಗೆಯಲಾಗಿದ್ದು, ಕೆ.ಜಿಗಟ್ಟಲೆ ಚಿನ್ನ, ಬೆಳ್ಳಿಯ ಆಭರಣಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ, ಉತ್ತರಾಖಂಡದಲ್ಲಿರುವ ಐತಿಹಾಸಿಕ ಕೇದಾರನಾಥ ದೇವಾಲಯದಲ್ಲಿದ್ದ (Kedarnath Temple) ಸುಮಾರು 228 ಕೆ.ಜಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (Swami Avimukteshwaranand) ಅವರೇ ಈ ಕುರಿತು ಆರೋಪ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಶಿವಸೇನೆ ನಾಯಕ (UBT) ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣದ ಕುರಿತು ಚಿಂತನೆ ನಡೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. “ಕೇದಾರನಾಥ ದೇವಾಲಯದಲ್ಲಿ ಚಿನ್ನದ ಹಗರಣ ನಡೆದಿದೆ. ಈ ಕುರಿತು ಯಾರೂ ಏಕೆ ಮಾತನಾಡುವುದಿಲ್ಲ? ಕೇದಾರನಾಥ ದೇವಾಲಯದಲ್ಲಿಯೇ ಹಗರಣ ನಡೆದಿರುವಾಗ, ದೆಹಲಿಯಲ್ಲಿ ದೇವಾಲಯ ನಿರ್ಮಿಸಲಾಗುತ್ತದೆಯೇ? ಆ ಮೂಲಕ ಇಲ್ಲೂ ಹಗರಣ ಮಾಡಲಾಗುತ್ತದೆಯೇ” ಎಂದು ಪ್ರಶ್ನಿಸಿದರು.

“ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನವನ್ನು ಮಂಗಮಾಯ ಮಾಡಲಾಗಿದೆ. ಆದರೆ, ಇದುವರೆಗೆ ತನಿಖೆ ಆರಂಭವಾಗಿಲ್ಲ. ಇದಕ್ಕೆಲ್ಲ ಯಾರು ಹೊಣೆ? ಈಗ ಅವರು ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ನಡೆಯಬಾರದು” ಎಂಬುದಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಖಾರವಾಗಿ ಹೇಳಿದರು. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಕೇದಾರನಾಥ ದೇವಾಲಯವೂ ಒಂದಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಹಿಂದುಗಳು ಭೇಟಿ ನೀಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಕೇದಾರನಾಥ ಯಾತ್ರೆ ಆರಂಭವಾಗಿದೆ.

ಉದ್ಧವ್‌ ಠಾಕ್ರೆ ಮತ್ತೆ ಸಿಎಂ ಆಗಲಿ

ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಕುರಿತು ಮಾತನಾಡಿದ ಅವರು, “ನಾವೆಲ್ಲರೂ ಸನಾತನ ಧರ್ಮವನ್ನು ಅನುಸರಿಸುವವರು. ನಮಗೆ ಪಾಪ ಹಾಗೂ ಪುಣ್ಯದ ವ್ಯಾಖ್ಯಾನ ಗೊತ್ತಿದೆ. ಜಗತ್ತಿನಲ್ಲೇ ದೊಡ್ಡ ಪಾಪ ಎಂದರೆ ಅದು ಮೋಸ ಮಾಡುವುದು. ಉದ್ಧವ್‌ ಠಾಕ್ರೆ ಅವರಿಗೆ ಅಂತಹ ಮೋಸ ಆಗಿದೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೂ ನಮಗಾದ ನೋವು ಕಡಿಮೆಯಾಗುವುದಿಲ್ಲ. ಉದ್ಧವ್‌ ಠಾಕ್ರೆ ಅವರಿಗೆ ಮೋಸ ಆಗಿದ್ದಕ್ಕೆ ಮಹಾರಾಷ್ಟ್ರದ ಜನರಿಗೂ ನೋವಾಗಿದೆ. ಕಳೆದ ಚುನಾವಣೆಯಲ್ಲೂ ಇದರ ಪ್ರತಿಬಿಂಬ ಗೋಚರವಾಗಿದೆ” ಎಂದು ಹೇಳಿದರು. ಉದ್ಧವ್‌ ಠಾಕ್ರೆ ಅವರ ಶಿವಸೇನೆಯು ಇಬ್ಭಾಗವಾಗಿ, ಏಕನಾಥ್‌ ಶಿಂಧೆ ಅವರು ಬಿಜೆಪಿ ಜತೆ ಕೈಜೋಡಿಸಿ, ಸರ್ಕಾರ ರಚಿಸಿದ ಕುರಿತು ಅವರು ಹೇಳಿದರು.

ಇದನ್ನೂ ಓದಿ: Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Continue Reading

ದೇಶ

Made In Bihar: ರಷ್ಯಾ ಸೈನ್ಯಕ್ಕೆ ಬಿಹಾರದಿಂದ ಸೇಫ್ಟಿ ಶೂ ಪೂರೈಕೆ; ವಾರ್ಷಿಕ 100 ಕೋಟಿ ರೂ. ವ್ಯವಹಾರ

Made In Bihar: ರಷ್ಯಾ ಸೈನಿಕರು ಬಿಹಾರದ ಹಾಜಿಪುರದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ ಶೂಗಳನ್ನು ಬಳಸುತ್ತಿದ್ದಾರೆ. ಹೌದು, ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ ಕಂಪನಿ ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

VISTARANEWS.COM


on

Made In Bihar
Koo

ಪಟನಾ: ರಷ್ಯಾ ಸೇನೆ (Russian soldiers)ಯು ಉಕ್ರೇನ್‌ ವಿರುದ್ಧ ಯುದ್ಧ ಮುಂದುವರಿಸಿದೆ. ವಿಶೇಷ ಎಂದರೆ ಈ ಕಾರ್ಯಾಚರಣೆಗೆ ರಷ್ಯಾ ಸೈನಿಕರು ಬಿಹಾರದ ಹಾಜಿಪುರ (Hajipur)ದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ (Made In Bihar) ಶೂಗಳನ್ನು ಬಳಸುತ್ತಿದ್ದಾರೆ.

ಕೃಷಿ ಉತ್ಪಾದನೆಗೆ ಹೆಸರುವಾಸಿಯಾದ ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ (Competence Exports) ಖಾಸಗಿ ಕಂಪನಿಯಾಗಿದ್ದು, ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

ಈ ಬಗ್ಗೆ ಮಾತನಾಡಿದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, “ನಾವು 2018ರಲ್ಲಿ ಹಾಜಿಪುರದಲ್ಲಿ ಈ ಕಂಪನಿ ಆರಂಭಿಸಿದೆವು. ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿ. ಹಾಜಿಪುರದಲ್ಲಿ ನಾವು ರಷ್ಯಾಕ್ಕೆ ರಫ್ತು ಮಾಡಬಹುದಾದ ಸೇಫ್ಟಿ ಶೂಗಳನ್ನು ತಯಾರಿಸುತ್ತೇವೆ. ರಷ್ಯಾದ ಜತೆಗೆ ಯುರೋಪ್‌ಗೂ ರಫ್ತು ಮಾಡುತ್ತಿದ್ದೇವೆ. ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ರಷ್ಯಾ ಸೈನ್ಯಕ್ಕೆ ಪೂರೈಸುವ ಸೇಫ್ಟಿ ಶೂ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, “ಈ ಶೂಗಳು ಹಗುರವಾಗಿರಬೇಕು. ಜಾರದಂತಿರಬೇಕು. ಸೋಲ್‌ನಲ್ಲಿ ವೈಶಿಷ್ಟ್ಯ ಹೊಂದಿರಬೇಕು ಮತ್ತು -40 ಡಿಗ್ರಿ ಸೆಲ್ಸಿಯಸ್‌ನಂತಹ ವಾತಾವರಣಕ್ಕೂ ಹೊಂದಿಕೆಯಾಗುವಂತಿರಬೇಕು. ಈ ರೀತಿಯಲ್ಲಿ ನಾವು ಶೂ ತಯಾರಿಸುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ

“ಬಿಹಾರದಲ್ಲಿ ವಿಶ್ವ ದರ್ಜೆಯ ಕಾರ್ಖಾನೆಯನ್ನು ಆರಂಭಿಸುವುದು ಮತ್ತು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವುದು ಕಂಪನಿಯ ಎಂ.ಡಿ. ದಾನೇಶ್ ಪ್ರಸಾದ್ ಅವರ ಮಹತ್ವಾಕಾಂಕ್ಷೆ. ಸದ್ಯ ನಮ್ಮಲ್ಲಿರುವ 300 ಉದ್ಯೋಗಿಗಳಲ್ಲಿ ಶೇ. 70ರಷ್ಟು ಮಹಿಳೆಯರುʼʼ ಎಂದು ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.

ಕಂಪೆನಿಯುವ ಕಳೆದ ವರ್ಷ 15 ಲಕ್ಷ ಜೋಡಿ ಶೂಗಳನ್ನು ರಫ್ತು ಮಾಡಿದೆ. ಇದರ ಮೌಲ್ಯ ಸುಮಾರು 100 ಕೋಟಿ ರೂ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ʼʼಬಿಹಾರ ಸರ್ಕಾರವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಜತೆಗೆ ರಸ್ತೆ ಮತ್ತು ಸಂವಹನದಂತಹ ಮೂಲಸೌಕರ್ಯಗಳಲ್ಲಿ ಸುಧಾರಣೆಯ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ನಮ್ಮನ್ನು ತಲುಪಲು ಸಾಧ್ಯವಾಗುತ್ತದೆʼʼ ಎಂದು ಶಿಬ್ ಕುಮಾರ್ ರಾಯ್ ಅಭಿಪ್ರಾಯಪಟ್ಟಿದ್ದಾರೆ. “ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಕೌಶಲ್ಯ ಹೊಂದಿದ ಯುವ ಜನತೆಯನ್ನು ಸಿದ್ಧ ಪಡಿಸುತ್ತೇವೆʼʼ ಎಂದಿದ್ದಾರೆ.

ಸದ್ಯ ಹಾಜಿಪುರ ಘಟಕವು ಸೇಫ್ಟಿ ಶೂಗಳಲ್ಲದೆ ಐಷಾರಾಮಿ ಡಿಸೈನರ್ ಶೂಗಳನ್ನು ಯುರೋಪಿಯನ್ ಮಾರುಕಟ್ಟೆಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡುತ್ತಿದೆ. “ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಉನ್ನತ ಮಟ್ಟದ ಶೂಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಾವು ಇತ್ತೀಚೆಗೆ ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇವೆ ” ಎಂದು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ತಿಳಿಸಿದ್ದಾರೆ. ಮುಂದಿನ ತಿಂಗಳು ಕೆಲವು ವಿದೇಶಿ ಕಂಪನಿಗಳು ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

Continue Reading
Advertisement
Former MLA Rupali Naika visited the flood affected area of Karwar taluk
ಉತ್ತರ ಕನ್ನಡ20 seconds ago

Uttara kannada News: ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಭೇಟಿ

7th Pay Commission
ಕರ್ನಾಟಕ16 mins ago

7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

ಕ್ರಿಕೆಟ್22 mins ago

KL Rahul : ಕೆ. ಎಲ್ ರಾಹುಲ್​ ಎಲ್​ಎಸ್​ಜಿ ತಂಡದಿಂದ ಹೊರಕ್ಕೆ, ಆಂತರಿಕ ಗುಟ್ಟು ಬಿಟ್ಟುಕೊಟ್ಟ ಅಮಿತ್ ಮಿಶ್ರಾ

Assembly Session
ಕರ್ನಾಟಕ32 mins ago

Assembly Session: ಜುಲೈ 18ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ

Viral Video
ವೈರಲ್ ನ್ಯೂಸ್44 mins ago

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

ಕ್ರಿಕೆಟ್52 mins ago

IND vs PAK : ಪಾಕಿಸ್ತಾನಕ್ಕೆ ಬರದಿರುವುದಕ್ಕೆ ಲಿಖಿತ ಕಾರಣ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದ ಪಿಸಿಬಿ

Dengue Fever
ಕರ್ನಾಟಕ1 hour ago

Dengue Fever: ರಾಜ್ಯದಲ್ಲಿ ಸೋಮವಾರ 435 ಡೆಂಗ್ಯೂ ಪ್ರಕರಣ ಪತ್ತೆ; ಹಾಸನದಲ್ಲಿ ಬಾಲಕ ಸಾವು

7th Pay Commission
ಕರ್ನಾಟಕ1 hour ago

7th Pay Commission: 7ನೇ ವೇತನ ಆಯೋಗದ‌ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್; ನೌಕರರಿಗೆ ಗುಡ್‌ ನ್ಯೂಸ್

Hit and Run Case
Latest1 hour ago

Hit and Run Case: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Harbhajan Singh
ಕ್ರಿಕೆಟ್1 hour ago

Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ11 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ16 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌