Bansuri Swaraj: ರಾಜಕೀಯಕ್ಕೆ ಪ್ರವೇಶಿಸಿದ ಸುಷ್ಮಾ ಸ್ವರಾಜ್​ ಪುತ್ರಿ; ದೆಹಲಿ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕಿಯಾಗಿ ನೇಮಕ - Vistara News

ದೇಶ

Bansuri Swaraj: ರಾಜಕೀಯಕ್ಕೆ ಪ್ರವೇಶಿಸಿದ ಸುಷ್ಮಾ ಸ್ವರಾಜ್​ ಪುತ್ರಿ; ದೆಹಲಿ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕಿಯಾಗಿ ನೇಮಕ

ಸುಷ್ಮಾ ಸ್ವರಾಜ್​ ಪುತ್ರಿ ಬಾನ್ಸುರಿ ಸ್ವರಾಜ್​ ವಕೀಲೆಯಾಗಿದ್ದು, ಸುಪ್ರೀಂಕೋರ್ಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿನ್ನು ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆ.

VISTARANEWS.COM


on

bansuri swaraj daughter Of Sushma Swaraj appointed as co convener of legal cell of Delhi BJP
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಜಕಾರಣದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಸುಷ್ಮಾ ಸ್ವರಾಜ್​ ಪುತ್ರಿ ಬಾನ್ಸುರಿ ಸ್ವರಾಜ್ (Bansuri Swaraj)​ ಈಗ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ-ಸಂಚಾಲಕಿ (co-convener)ಯನ್ನಾಗಿ ಅವರನ್ನು ನೇಮಕ ಮಾಡಲಾಗಿದೆ. ಬಾನ್ಸುರಿ ಸ್ವರಾಜ್​ ವಕೀಲೆಯಾಗಿದ್ದು, ಅವರು ಸುಪ್ರೀಂಕೋರ್ಟ್​​ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರನ್ನು ಬಿಜೆಪಿಯ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್​ದೇವಾ ಅವರು ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ವೀರೇಂದ್ರ ಸಚ್​ದೇವಾ ಕೂಡ ಇತ್ತೀಚೆಗಷ್ಟೇ ದೆಹಲಿಯ ಪೂರ್ಣಕಾಲಿಕ ಅಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾಡಿದ ಮೊದಲ ನೇಮಕಾತಿ ಇದು.

ತಮ್ಮ ನೇಮಕಾತಿ ಪತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡ ಬಾನ್ಸುರಿ ಸ್ವರಾಜ್​ ಅವರು ‘ಭಾರತೀಯ ಜನತಾ ಪಾರ್ಟಿ ದೆಹಲಿಯ ರಾಜ್ಯ ಕಾನೂನು ಘಟಕದ ಸಹ-ಸಂಚಾಲಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ಜೆಪಿ ನಡ್ಡಾ, ಬಿಎಲ್​ ಸಂತೋಷ್​, ವಿರೇಂದ್ರ ಸಚ್​ದೇವಾ ಅವರಿಗೆ ಧನ್ಯವಾದಗಳು ಮತ್ತು ಇಡೀ ಪಕ್ಷಕ್ಕೆ ನನ್ನ ಕೃತಜ್ಞತೆಗಳು ಎಂದು ಹೇಳಿದ್ದಾರೆ. ಹಾಗೇ, ಪಿಟಿಐ ಮಾಧ್ಯಮದೊಂದಿಗೆ ಮಾತನಾಡಿ ‘ದೆಹಲಿ ಕಾನೂನು ಘಟಕದ ಸಹ ಸಂಚಾಲಕಿಯನ್ನಾಗಿ ನನ್ನನ್ನು ನೇಮಕ ಮಾಡುವ ಮೂಲಕ, ಬಿಜೆಪಿ ಪಕ್ಷಕ್ಕೆ ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ: Janardhan Reddy | ಸುಷ್ಮಾ ಸ್ವರಾಜ್‌ರನ್ನು ಬೆಂಬಲಿಸಿದ್ದರಿಂದ ಕೇಂದ್ರದ ಕಾಂಗ್ರೆಸ್‌ ಸರ್ಕಾರ ನನ್ನ ಮೇಲೆ ದಾಳಿ ಮಾಡಿಸಿ ಪೀಡಿಸಿತು ಎಂದ ಜನಾರ್ದನ ರೆಡ್ಡಿ

ಬಾನ್ಸುರಿ ಸ್ವರಾಜ್​ ಅವರು ಇಂಗ್ಲೆಂಡ್​ನ ವಾರ್ವಿಕ್​ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್​ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಲಂಡನ್​​ನ ಬಿಬಿಪಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. 2007ರಲ್ಲಿ ಬಾನ್ಸುರಿಯವರು ದೆಹಲಿ ಬಾರ್​ ಕೌನ್ಸಿಲ್​​ನಲ್ಲಿ ನೋಂದಾಯಿಸಿಕೊಂಡಿದ್ದು, ಕಾನೂನು ವೃತ್ತಿಯಲ್ಲಿ ಅವರಿಗೆ 16ವರ್ಷಗಳ ಅನುಭವ ಇದೆ. ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಕೆಲವು ಹೈಪ್ರೊಫೈಲ್​ ಕೇಸ್​​ಗೂ ಇವರು ನ್ಯಾಯವಾದಿಯಾಗಿದ್ದರು. ಈ ಹಿಂದೆಯೂ ಕಾನೂನು ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಕೆಲವು ಸಲಹೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಂತಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Lok Sabha Election: ಶ್ರೀನಗರದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ಸೋಮವಾರ ಶ್ರೀನಗರದಲ್ಲಿ ಮತದಾನ ನಡೆದಿದ್ದು, ಶೇ.35.97ರಷ್ಟು ಮತದಾನ ದಾಖಲಾಗಿದೆ. ಇದು 1996ರ ಲೋಕಸಭೆ ಚುನಾವಣೆ ಬಳಿಕ ದಾಖಲಾದ ಗರಿಷ್ಠ ಮತದಾನ ಎಂದು ಆಯೋಗ ತಿಳಿಸಿದೆ. ಇದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣ ಎನ್ನಲಾಗುತ್ತಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದಾದ ಬಳಿಕ ಕಣಿವೆಯಲ್ಲಿ ಭಾರಿ ಬದಲಾವಣೆ ಆಗಿದೆ, ಕಲ್ಲು ತೂರಾಟ ನಿಂತಿದೆ, ಸಚಿನ್‌ ತೆಂಡೂಲ್ಕರ್‌ ಅಲ್ಲಿನ ಬೀದಿಗಳಲ್ಲಿ ಕ್ರಿಕೆಟ್‌ ಆಡುವಷ್ಟು, ಜಿ-20 ಸಭೆ ಆಯೋಜಿಸುವಷ್ಟು ಬದಲಾಗಿದೆ. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದ (Jammu Kashmir) ಶ್ರೀನಗರದಲ್ಲಿ ಕಳೆದ 28 ವರ್ಷಗಳಲ್ಲಿಯೇ ಗರಿಷ್ಠ ಮತದಾನ (Lok Sabha Election) ದಾಖಲಾಗಿದೆ ಎಂದು ಚುನಾವಣೆ ಆಯೋಗ (Election Commission) ಮಾಹಿತಿ ನೀಡಿದೆ. ಇದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣ ಎನ್ನಲಾಗುತ್ತಿದೆ.

ಶ್ರೀನಗರದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ಸೋಮವಾರ ಶ್ರೀನಗರದಲ್ಲಿ ಮತದಾನ ನಡೆದಿದ್ದು, ಶೇ.35.97ರಷ್ಟು ಮತದಾನ ದಾಖಲಾಗಿದೆ. ಇದು 1996ರ ಲೋಕಸಭೆ ಚುನಾವಣೆ ಬಳಿಕ ದಾಖಲಾದ ಗರಿಷ್ಠ ಮತದಾನ ಎಂದು ಆಯೋಗ ತಿಳಿಸಿದೆ. ಶ್ರೀನಗರದಲ್ಲಿ 2019ರಲ್ಲಿ ಶೇ.14.43ರಷ್ಟು ಹಾಗೂ 2014ರಲ್ಲಿ ಶೇ.25.86ರಷ್ಟು ಮತದಾನ ದಾಖಲಾಗಿತ್ತು. ಶ್ರೀನಗರದಲ್ಲಿ 17.48 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದರು.

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಉತ್ತಮ ಮತದಾನವೂ ದಾಖಲಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಉಗ್ರರ ದಾಳಿ ಭೀತಿ, ಕಲ್ಲುತೂರಾಟ ಮಾಡುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಹೆಚ್ಚಿನ ಜನ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

ಸಂಜೆ 5 ಗಂಟೆ ಸುಮಾರಿಗೆ ಆಂಧ್ರಪ್ರದೇಶದಲ್ಲಿ ಶೇ.68.04, ಬಿಹಾರ ಶೇ.54.14, ಜಾರ್ಖಂಡ್ ಶೇ.63.14, ಮಧ್ಯಪ್ರದೇಶ ಶೇ.68.01, ಮಹಾರಾಷ್ಟ್ರ ಶೇ.52.49, ಒಡಿಶಾ ಶೇ.62.96, ತೆಲಂಗಾಣ ಶೇ.61.16, ಉತ್ತರ ಪ್ರದೇಶ ಶೇ.56.35, ಪಶ್ಚಿಮ ಬಂಗಾಳದಲ್ಲಿ ಶೇ.75.66ರಷ್ಟು ಮತದಾನ ದಾಖಲಾಗಿದೆ. ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು.

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್‌ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Lok Sabha Election: ನಾಲ್ಕನೇ ಹಂತದಲ್ಲಿ ಶೇ.62.31ರಷ್ಟು ಮತದಾನ; ಬಂಗಾಳದಲ್ಲಿ ಹೆಚ್ಚು

Continue Reading

ದೇಶ

Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಯಲ್ಲಿ ಸೋಮವಾರ ಭರ್ಜರಿ ರೋಡ್‌ ಶೋ ಕೈಗೊಂಡರು. ಸಾಂಪ್ರದಾಯಿಕ ಸ್ವಾಗತ, ಜನಪದ ನೃತ್ಯ, ಜೈ ಶ್ರೀರಾಮ್‌ ಘೋಷಣೆಗಳು ರೋಡ್‌ ಶೋ ಉದ್ದಕ್ಕೂ ಜೈಶ್ರೀರಾಮ್‌ ಘೋಷಣೆಗಳು ಮೊಳಗಿದವು.

VISTARANEWS.COM


on

Narendra Modi
Koo

ವಾರಾಣಸಿ: ದೇಶಾದ್ಯಂತ ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಯಲ್ಲಿ (Varanasi) ಬೃಹತ್‌ ರೋಡ್‌ ಶೋ ಮೂಲಕ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಸತತ ಮೂರನೇ ಬಾರಿಗೆ ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೋದಿ ಅವರು ಮಂಗಳವಾರ (ಏಪ್ರಿಲ್‌ 14) ನಾಮಪತ್ರ ಸಲ್ಲಿಸಿದ್ದು, ಇದಕ್ಕೂ ಮೊದಲು ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಮೋದಿ ರೋಡ್‌ ಶೋ ಫೋಟೊಗಳು ಇಲ್ಲಿವೆ.

ವಾರಾಣಸಿಯ ಬನಾರಸ್‌ ವಿವಿ ಗೇಟ್‌ನಿಂದ ಕಾಶಿ ವಿಶ್ವನಾಥ ಧಾಮದ 4ನೇ ಗೇಟ್‌ವರೆಗೆ 6 ಕಿಲೋಮೀಟರ್‌ ರೋಡ್‌ ಶೋ ಕೈಗೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ರೋಡ್‌ ಶೋಗೆ ಸಿಎಂ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಿದರು.
ಮರಾಠಿ, ಗುಜರಾತಿ, ಬೆಂಗಾಲಿ, ಮಾರ್ವಾಡಿ, ತಮಿಳು ಸೇರಿ ಹಲವು ಸಮುದಾಯಗಳು, ಸಾಂಸ್ಕೃತಿಕ ಹಿನ್ನೆಲೆಯವರು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.
ಮೋದಿ ರೋಡ್‌ ಶೋ ಉದ್ದಕ್ಕೂ ಜೈ ಶ್ರೀರಾಮ್‌ ಎಂಬುದು ಸೇರಿ ಹಲವು ಘೋಷಣೆಗಳು ಮೊಳಗಿದವು.
ರೋಡ್‌ ಶೋ ಬಳಿಕ ಕಾಶಿ ವಿಶ್ವನಾಥ ದೇಗುಲದಲ್ಲಿ ಮೋದಿ ವಿಶೇಷ ಪ್ರಾರ್ಥನೆ.
ಕೇಸರಿ ದಿರಸು ಧರಿಸಿದ ಕಲಾವಿದರು ರೋಡ್‌ ಶೋಗೆ ಹೊಸ ಮೆರುಗು ತಂದರು.

ಇದನ್ನೂ ಓದಿ: PM Narendra Modi: “ಪಾಕ್‌ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು

Continue Reading

ಪ್ರಮುಖ ಸುದ್ದಿ

Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

Dust Storm: ಭಯಾನಕ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

VISTARANEWS.COM


on

Dust Storm
Koo

ಮುಂಬೈ: ಇಲ್ಲಿನ ಘಾಟ್​ಕೋಪರ್​ನಲ್ಲಿ ಧೂಳು ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಜಾಹೀರಾತು ಫಲಕ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್​​ಡಿಆರ್​) ಒಂದು ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುತ್ತಿದೆ. ಧೂಳು ಗಾಳಿಗೆ ಅನೇಕ ಕಡೆ ಅನಾಹುತಗಳು ಸಂಭವಿಸಿವೆ.

ಭಯಾನಕ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ಈ ಹಿಂದೆ ಮೇ 13 ರಂದು ನಗರದ ಕೆಲವು ಭಾಗಗಳಿಗೆ ಯೆಲ್ಲೊ ಅಲರ್ಟ್​ (Yellow Alret) ಎಚ್ಚರಿಕೆ ನೀಡಿತ್ತು. ವಿಶೇಷವಾಗಿ ಥಾಣೆ ಮತ್ತು ರಾಯಗಡ್ ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು ಮತ್ತು ಶುಷ್ಕ, ವೇಗದ ಗಾಳಿಯ ಎಚ್ಚರಿಕೆ ನೀಡಿತ್ತು.

2024 ರ ಮೇ 16 ರಿಂದ ವಾಯುವ್ಯ ಭಾರತದಲ್ಲಿ ಹೊಸ ಶಾಖದ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. 2. 2024 ರ ಮೇ 17 ರವರೆಗೆ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ಪ್ರತ್ಯೇಕ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಕ್ಸ್ ನಲ್ಲಿ ಪೋಸ್ಟ್​ನಲ್ಲಿ ತಿಳಿಸಿತ್ತು.

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

ಹೋರ್ಡಿಂಗ್ ಬಿದ್ದ ಕಾರಣ ಪೂಜಾ ಜಂಕ್ಷನ್ (ವಡಾಲಾ) ನಾರ್ತ್ ಬೌಂಡ್ ಮತ್ತು ಫ್ರೀವೇ ಟನಲ್ ಟ್ರಾಂಬೆ ಸೌತ್ ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮುಂಬೈ ಮೆಟ್ರೋದ ಸಂಚಾರಕ್ಕೂ ಸಮಸ್ಯೆಯಾಗಿದೆ. ಭಾರೀ ಗಾಳಿಯಿಂದಾಗಿ, ಏರ್ಪೋರ್ಟ್ ರಸ್ತೆ ಮೆಟ್ರೋ ನಿಲ್ದಾಣದ ಬಳಿಯ ಒಹೆಚ್ಇಯಲ್ಲಿ ಬಟ್ಟೆ ಸಿಲುಕಿಕೊಂಡಿತು/ ಇದರ ಪರಿಣಾಮವಾಗಿ ಮೆಟ್ರೋ ಸೇವೆಗೆ ಅಡ್ಡಿಯಾಯಿತು. ರೈಲುಗಳು ಈಗ ನಿಗದಿತ ಸಮಯಕ್ಕೆ ತಲುಪಲಿಲ್ಲ ಎಂದು ಹೇಳಿದ್ದರು.

Continue Reading

ದೇಶ

Chandrayaan 4: ಚಂದ್ರಯಾನ 4ಕ್ಕೆ ಇಸ್ರೋ ಸಜ್ಜು; ಚಂದ್ರನ ವಿಶೇಷ ಸ್ಥಳದಲ್ಲಿ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್!

Chandrayaan 4: ಚಂದ್ರಯಾನ 3ರ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ. ಚಂದ್ರಯಾನ 3 ಮಿಷನ್‌ನ ಯಶಸ್ಸು ಇಸ್ರೋ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸುವ ಜತೆಗೆ ಜಾಗತಿಕ ಖ್ಯಾತಿಯನ್ನೂ ತಂದುಕೊಟ್ಟಿದೆ. ಇದರ ಬೆನ್ನಲ್ಲೇ, ಚಂದ್ರಯಾನ 4 ಕೈಗೊಳ್ಳಲು ಇಸ್ರೋ ಸಜ್ಜಾಗಿದೆ. ನೌಕೆ ಇಳಿಯುವ ಜಾಗವನ್ನೂ ಈಗ ಘೋಷಣೆ ಮಾಡಿದೆ.

VISTARANEWS.COM


on

Chandrayaan 4
Koo

ಬೆಂಗಳೂರು: ಚಂದ್ರಯಾನ 3 ಮಿಷನ್‌ (Chandrayaan 3) ಮೂಲಕ ಇತಿಹಾಸ ಸೃಷ್ಟಿಸಿರುವ ಇಸ್ರೋ (ISRO) ಈಗ ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಚಂದ್ರಯಾನ 3 ಮಿಷನ್‌ ಕೈಗೊಂಡು ಜಗತ್ತಿನಲ್ಲೇ ದಕ್ಷಿಣ ಧ್ರುವಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾದ ಬಳಿಕ ಇಸ್ರೋ ಈಗ ಚಂದ್ರಯಾನ 4 ಮಿಷನ್‌ಗೆ ಸಜ್ಜಾಗಿದೆ. ಅಷ್ಟೇ ಅಲ್ಲ, ಚಂದ್ರಯಾನ 4 ಮಿಷನ್‌ನ (Chandrayaan 4) ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳದಲ್ಲಿ ಎಲ್ಲಿ ಇಳಿಯಬೇಕು ಎಂಬುದನ್ನೂ ಇಸ್ರೋ ಘೋಷಿಸಿದೆ.

ಚಂದ್ರಯಾನ 4 ಮಿಷನ್‌ ಕುರಿತು ಸ್ಪೇಸ್‌ ಅಪ್ಲಿಕೇಷನ್ಸ್‌ ಸೆಂಟರ್‌ನ (SAC) ನಿರ್ದೇಶಕ ನೀಲೇಶ್‌ ದೇಸಾಯಿ (Nilesh Desai) ಅವರು ಮಾಹಿತಿ ನೀಡಿದ್ದಾರೆ. “ಚಂದ್ರಯಾನ 4 ಮಿಷನ್‌ನ ಬಾಹ್ಯಾಕಾಶ ನೌಕೆಯು ಚಂದ್ರಯಾನ 3ರ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಸಾಫ್ಟ್‌ ಲ್ಯಾಂಡ್‌ ಆದ, ಶಿವಶಕ್ತಿ ಪಾಯಿಂಟ್‌ ಎಂದೇ ಖ್ಯಾತಿಯಾದ ಪ್ರದೇಶದ ಬಳಿಯೇ ಲ್ಯಾಂಡ್‌ ಆಗಲಿದೆ. ಚಂದ್ರಯಾನ 4ರಲ್ಲಿ ಚಂದ್ರನ ಅಂಗಳದಿಂದ ಕಲ್ಲು ಹಾಗೂ ಮಣ್ಣನ್ನು ಭಾರತಕ್ಕೆ ತರುವುದು ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.

“ಚಂದ್ರನ ಅಂಗಳದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ಕೈಗೊಳ್ಳಲು ಸಾಧ್ಯವಿರುವ ಪ್ರದೇಶಗಳಿಂದ ಕಲ್ಲು ಹಾಗೂ ಮಣ್ಣಿನ ಮಾದರಿಗಳನ್ನು ತಂದು, ಅದರ ಕುರಿತು ಅಧ್ಯಯನ ಮಾಡಲಾಗುತ್ತದೆ. ಇದು ಚಂದ್ರನ ಅಂಗಳದ ಕಾಲಮಾನದ ಪ್ರಕಾರ ಒಂದು ದಿನ ಆದರೆ, ಭೂಮಿಯ 14 ದಿನ ಕಾರ್ಯಾಚರಣೆ ಕೈಗೊಳ್ಳಲಿದೆ. ಹಲವು ಸವಾಲುಗಳ ಮಧ್ಯೆ ಯಶಸ್ಸು ಸಾಧಿಸಲು ಇಸ್ರೋ ಹೊರಟಿದೆ” ಎಂದು ಮಾಹಿತಿ ನೀಡಿದರು.

2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಜಗತ್ತಿನ ಮೊದಲ ಮಿಷನ್‌ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.

ಅಷ್ಟೇ ಅಲ್ಲ, ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್‌ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ. ಚಂದ್ರಯಾನ 3 ಮಿಷನ್‌ನ ಯಶಸ್ಸು ಇಸ್ರೋ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸುವ ಜತೆಗೆ ಜಾಗತಿಕ ಖ್ಯಾತಿಯನ್ನೂ ತಂದುಕೊಟ್ಟಿದೆ. ಚಂದ್ರಯಾನ 4 ಮಿಷನ್‌ ಕೈಗೊಳ್ಳಲು ಇಷ್ಟೊಂದು ಆತ್ಮವಿಶ್ವಾಸ, ಉತ್ಸಾಹ ಬರಲು ಚಂದ್ರಯಾನ 3 ಮಿಷನ್‌ನ ಯಶಸ್ಸೇ ಕಾರಣವಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Continue Reading
Advertisement
IPL 2024
ಪ್ರಮುಖ ಸುದ್ದಿ6 mins ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ12 mins ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ13 mins ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ1 hour ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು1 hour ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Muhammad Waseem
ಕ್ರೀಡೆ2 hours ago

Muhammad Waseem : ಇತಿಹಾಸ ಸೃಷ್ಟಿಸಿದ ಯುಎಇ ಕ್ರಿಕೆಟ್​ ತಂಡದ ನಾಯಕ ವಸೀಮ್​

Narendra Modi
ದೇಶ2 hours ago

Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Pratibha Puraskar
ಕರ್ನಾಟಕ2 hours ago

Pratibha Puraskar: ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ; ಮೇ 31 ಕೊನೆಯ ದಿನ

HD Revanna Bail Revanna will not leave the country condition imposed by the court
ಕ್ರೈಂ3 hours ago

HD Revanna Bail: ರೇವಣ್ಣಗೆ ಜಾಮೀನು; ನಾಳೆ 11 ದಿನದ ವನವಾಸದಿಂದ ಮುಕ್ತಿ; ಬೇಲ್‌ ಸಿಗಲು ಕಾರಣವೇನು?

Dust Storm
ಪ್ರಮುಖ ಸುದ್ದಿ3 hours ago

Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ4 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ5 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ5 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ5 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ6 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ12 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ17 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ18 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌