ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದೂ ‘ಜಿಹಾದ್​’; ವಿವಾದ ಹುಟ್ಟುಹಾಕಿದ ಕಾಂಗ್ರೆಸ್​ ಹಿರಿಯ ನಾಯಕ - Vistara News

ದೇಶ

ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದೂ ‘ಜಿಹಾದ್​’; ವಿವಾದ ಹುಟ್ಟುಹಾಕಿದ ಕಾಂಗ್ರೆಸ್​ ಹಿರಿಯ ನಾಯಕ

ತಮ್ಮ ಮಾತುಗಳಿಂದ ವಿವಾದ ಸೃಷ್ಟಿಯಾಗುತ್ತಿದೆ ಎಂಬುದನ್ನು ಅರಿತ ಶಿವರಾಜ್​ ಪಾಟೀಲ್​ ಸಮರ್ಥನೆ ನೀಡಲು ಮುಂದಾಗಿದ್ದಾರೆ. ಮಾಧ್ಯಮದವರದ್ದೇ ತಪ್ಪು ಎಂದು ಅವರು ಹೇಳಿದ್ದಾರೆ.

VISTARANEWS.COM


on

Shivaraj Patil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಲಕ್ಷ್ಮೀದೇವಿಯನ್ನು ಪೂಜಿಸಿದರೆ ಮಾತ್ರ ಶ್ರೀಮಂತರಾಗುತ್ತಾರೆ, ಸರಸ್ವತಿಯನ್ನು ಆರಾಧಿಸಿದರೆ ಮಾತ್ರ ವಿದ್ಯೆ ಒಲಿಯುತ್ತದೆ ಎಂದಾಗಿದ್ದರೆ, ಮುಸ್ಲಿಮರು ಹೇಗೆ ಶ್ರೀಮಂತರಾಗುತ್ತಿದ್ದರು? ವಿದ್ವಾಂಸರಾಗುತ್ತಿದ್ದರು? ಮುಸ್ಲಿಮರು ಯಾರೂ ಲಕ್ಷ್ಮೀ, ಸರಸ್ವತಿ ಪೂಜೆ ಮಾಡುವುದಿಲ್ಲ. ಹಾಗಿದ್ದರೂ ಅವರಲ್ಲಿ ಸಿರಿವಂತರು, ಪಂಡಿತರು ಇಲ್ಲವೇ? ಎಂದು ಬಿಜೆಪಿ ಶಾಸಕ ಲಲನ್​ ಪಾಸ್ವಾನ್​ ಪ್ರಶ್ನೆ ಮಾಡಿ ವಿವಾದ ಸೃಷ್ಟಿಸಿದ್ದರು.

ಈಗ ಕಾಂಗ್ರೆಸ್​ ಹಿರಿಯ ನಾಯಕ ಶಿವರಾಜ್​ ಪಾಟೀಲ್​ ಕೂಡ ಅಂಥದ್ದೆ ಒಂದು ವಿತಂಡವಾದ ಮುಂದಿಟ್ಟಿದ್ದಾರೆ. ‘ಜಿಹಾದ್​’ ಪರಿಕಲ್ಪನೆ ಇರುವುದು ಕೇವಲ ಇಸ್ಲಾಂನಲ್ಲಷ್ಟೇ ಅಲ್ಲ. ಹಿಂದುಗಳ ಭಗವದ್ಗೀತೆ, ಕ್ರಿಶ್ಚಿಯನ್​​​ರಲ್ಲೂ ಇದೆ. ಆಗ ಮಹಾಭಾರತದಲ್ಲಿ ಅರ್ಜುನನಿಗೆ ಕೃಷ್ಣಪರಮಾತ್ಮ ಬೋಧನೆ ಮಾಡಿದ್ದೂ ಕೂಡ ‘ಜಿಹಾದ್​’ ಅಲ್ಲವೇ? ಎಂದು ಕೇಳಿದ್ದಾರೆ.

ಕಾಂಗ್ರೆಸ್​ ನಾಯಕ, ಮಾಜಿ ಕೇಂದ್ರ ಸಚಿವ ಮೋಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆಯನ್ನೊಳಗೊಂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್​ ಪಾಟೀಲ್, ‘ಮುಸ್ಲಿಮರ ಜಿಹಾದ್​​ ಬಗ್ಗೆ ಅನೇಕರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ಜಿಹಾದ್​ ಎಲ್ಲ ಕಡೆಗಳಲ್ಲೂ ಇದೆ. ಕೇವಲ ಇಸ್ಲಾಂನಲ್ಲಿ ಮಾತ್ರವಲ್ಲ. ಯಾವಾಗ ನಮ್ಮ ಆಶಯ, ಕಾಯಕಗಳು ಎಲ್ಲ ಸರಿಯಾಗಿಯೇ ಇದ್ದರೂ ಅದನ್ನು ಯಾರೂ ಅರ್ಥ ಮಾಡಿಕೊಳ್ಳದೆ, ನಮಗೆ ಸಹಕಾರ ನೀಡುವುದಿಲ್ಲವೋ, ಆಗ ಸಹಜವಾಗಿಯೇ ಅಲ್ಲಿ ಬಲಪ್ರದರ್ಶನ ಆಗುತ್ತದೆ. ಅದೇ ಹೋರಾಟ, ಜಿಹಾದ್​ ಎನ್ನಿಸಿಕೊಳ್ಳುತ್ತದೆ. ಹಾಗಾಗಿ ಜಿಹಾದ್​ ಇಸ್ಲಾಂನಲ್ಲಿ ಮಾತ್ರವಿದೆ ಎಂದುಕೊಳ್ಳಬಾರದು. ಭಗವದ್ಗೀತೆಯಲ್ಲೂ ಹೇಳಿದ್ದು ಜಿಹಾದ್​..ಕ್ರಿಶ್ಚಿಯನ್ ಧರ್ಮದಲ್ಲೂ ಜಿಹಾದ್​ ಇದೆ’ ಎಂದು ಶಿವರಾಜ್​ ಪಾಟೀಲ್​ ತಿಳಿಸಿದ್ದಾರೆ.

ಶಿವರಾಜ್​ ಪಾಟೀಲ್ ಈ ಮಾತಿಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ, ‘ಕಾಂಗ್ರೆಸ್​​ನದ್ದು ಹಿಂದು ವಿರೋಧಿ ಮತ್ತು ಮತಬ್ಯಾಂಕ್​ ರಾಜಕಾರಣ’ ಎಂದು ಹೇಳಿದ್ದಾರೆ. ಹಾಗೇ, ‘ಕಾಂಗ್ರೆಸ್ ಹಿಂದು/ಕೇಸರಿ ಭಯೋತ್ಪಾದನೆ ಸೃಷ್ಟಿಸಿತು. ರಾಮಮಂದಿರ ನಿರ್ಮಾಣವನ್ನು ವಿರೋಧಿಸಿತು. ಭಗವಂತ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿತು. ಹಿಂದುತ್ವವನ್ನು ಐಸಿಸ್​ಗೆ ಹೋಲಿಸಿತು ಎಂದು ಅವರು ಆಕ್ರೋಶಭರಿತರಾಗಿ ಟ್ವೀಟ್ ಮಾಡಿದ್ದಾರೆ.

ಪಾಟೀಲ್ ಸಮರ್ಥನೆ !
ತಮ್ಮ ಮಾತುಗಳಿಂದ ವಿವಾದ ಸೃಷ್ಟಿಯಾಗುತ್ತಿದೆ ಎಂಬುದನ್ನು ಅರಿತ ಶಿವರಾಜ್​ ಪಾಟೀಲ್​ ಸಮರ್ಥನೆ ನೀಡಲು ಮುಂದಾಗಿದ್ದಾರೆ. ‘ಕೃಷ್ಣ ಅರ್ಜುನನಿಗೆ ಬೋಧಿಸಿದ್ದು ಜಿಹಾದ್ ಎಂದು ನಾನು ಹೇಳಿಲ್ಲ. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸಿದ ವಿಚಾರಗಳನ್ನು ಜಿಹಾದ್​ ಎಂದು ಕರೆಯಲು ಸಾಧ್ಯವಿಲ್ಲ ಎಂದೇ ನಾನು ಹೇಳಿದ್ದೆ. ಅದನ್ನು ನೀವು ತಿರುಚಿದ್ದೀರಿ’ ಎಂದು ಮಾಧ್ಯಮದವರಿಗೇ ತಿರುಗಿ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ದೇವಿಯನ್ನು ಪೂಜಿಸದ ಮುಸ್ಲಿಮರಲ್ಲೂ ಶ್ರೀಮಂತರಿದ್ದಾರೆ; ಹಿಂದುಗಳ ನಂಬಿಕೆಗೆ ಬಿಜೆಪಿ ಶಾಸಕನಿಂದ ಅಪಮಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Uttar Pradesh: ರೆಸ್ಟ್‌ ಹೌಸ್‌ನಿಂದ ಇನ್ಸ್‌ಪೆಕ್ಟರ್‌ನನ್ನು ಹೊರಗೆ ಎಳೆದ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್‌ನ ಬನಿಯನ್‌ ಹರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇನ್ನು, ಇನ್ಸ್‌ಪೆಕ್ಟರ್‌ ಪತ್ನಿಯೂ ಅಷ್ಟೇ, ಮಹಿಳಾ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Uttar Pradesh
Koo

ಲಖನೌ: ಮನೆಯಲ್ಲಿ ಮುದ್ದಾದ ಮಡದಿ ಇದ್ದರೂ ಹೊರಗೆ ಅಕ್ರಮ ಸಂಬಂಧ (Extra Marital Affair) ಇಟ್ಟುಕೊಳ್ಳುವ ಚಾಳಿ ತುಂಬ ಜನರಿಗೆ ಇರುತ್ತದೆ. ಇನ್ನು, ವ್ಯಕ್ತಿಗೆ ಮದುವೆಯಾಗಿದೆ ಎಂಬುದು ಗೊತ್ತಿದ್ದರೂ ಆತನ ಬಲೆಗೆ ಬೀಳುವ ಹೆಣ್ಣುಮಕ್ಕಳು ಇರುತ್ತಾರೆ ಇಲ್ಲವೇ ಹೆಣ್ಣುಮಕ್ಕಳೇ ಆತನನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳಿಗೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ (Uttar Pradesh) ವ್ಯಕ್ತಿಯೊಬ್ಬರು ಮನೆಯಲ್ಲಿ ಪತ್ನಿ ಇದ್ದರೂ, ಸರ್ಕಾರಿ ಗೆಸ್ಟ್‌ಹೌಸ್‌ನಲ್ಲಿ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ಕಾಲ ಕಳೆಯುವಾಗ ಸಿಕ್ಕಿಬಿದ್ದಿದ್ದಾರೆ. ಪತಿ ಹಾಗೂ ಮಹಿಳಾ ಇನ್ಸ್‌ಪೆಕ್ಟರ್‌ ಅವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿಯು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಹೌದು, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿರುವ ವ್ಯಕ್ತಿಯು ಮದುವೆಯಾಗಿದ್ದರೂ, ಮನೆಯಲ್ಲಿ ಪತ್ನಿ ಇದ್ದರೂ, ಆಗ್ರಾದಲ್ಲಿರುವ ಪೊಲೀಸ್‌ ರೆಸ್ಟ್‌ ಹೌಸ್‌ನಲ್ಲಿ ಮತ್ತೊಬ್ಬ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ಕಾಲ ಕಳೆಯುತ್ತಿದ್ದರು. ಈ ವಿಷಯ ತಿಳಿದ ವ್ಯಕ್ತಿಯ ಪತ್ನಿಯು ನೇರವಾಗಿ ಸರ್ಕಾರಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ್ದಾರೆ. ಅಲ್ಲಿ, ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಮಹಿಳಾ ಇನ್ಸ್‌ಪೆಕ್ಟರ್‌ ಒಟ್ಟಿಗೆ ಇರುವುದನ್ನು ಕಂಡು ಗಲಾಟೆ ಮಾಡಿದ್ದಾರೆ. ಏನಿದು ಹುಡುಗಾಟ ಎಂದು ಜೋರಾಗಿ ಪ್ರಶ್ನಿಸಿದ್ದಾರೆ.

ಇದೇ ವೇಳೆ ಇನ್ಸ್‌ಪೆಕ್ಟರ್‌ ಪತ್ನಿಯ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ರೆಸ್ಟ್‌ ಹೌಸ್‌ನಿಂದ ಇನ್ಸ್‌ಪೆಕ್ಟರ್‌ನನ್ನು ಹೊರಗೆ ಎಳೆದ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್‌ನ ಬನಿಯನ್‌ ಹರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇನ್ನು, ಇನ್ಸ್‌ಪೆಕ್ಟರ್‌ ಪತ್ನಿಯೂ ಅಷ್ಟೇ, ಮಹಿಳಾ ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೂ ಬೈದಿದ್ದಾರೆ, ರೆಸ್ಟ್‌ ಆವರಣದಲ್ಲಿಯೇ ಅವರ ಕೈ ಹಿಡಿದು ಎಳೆದಾಡಿದ್ದಾರೆ.

ಮೂಲಗಳ ಪ್ರಕಾರ, ಇನ್ಸ್‌ಪೆಕ್ಟರ್‌ ಆಗಿರುವ ಪತಿಯು ಮಹಿಳಾ ಇನ್ಸ್‌ಪೆಕ್ಟರ್‌ ಜತೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಮಹಿಳೆಗೆ ಅನುಮಾನ ಬಂದಿತ್ತು. ಇದೆಲ್ಲ ಸರಿ ಬರುವುದಿಲ್ಲ ಎಂಬುದಾಗಿ ಅವರು ಪತಿಯ ಮನವೊಲಿಸಲು ಯತ್ನಿಸಿದ್ದರು. ಎಷ್ಟು ಹೇಳಿದರೂ, ಮನೆ, ಕುಟುಂಬವನ್ನು ನಿರ್ಲಕ್ಷಿಸಿ, ಮಹಿಳಾ ಇನ್ಸ್‌ಪೆಕ್ಟರ್‌ ಜತೆ ಸುತ್ತಾಡುವುದು, ರೆಸ್ಟ್‌ ಹೌಸ್‌ಗಳಲ್ಲಿ ಕಾಲ ಕಳೆಯುವುದನ್ನು ಕಂಡು ಮಹಿಳೆಗೆ ರೋಸಿಹೋಗಿತ್ತು. ಕೊನೆಗೆ, ಒಂದು ದಿನ ರೆಡ್‌ ಹ್ಯಾಂಡ್‌ ಆಗಿ ಹಿಡಿದು, ಸರಿಯಾದ ಪಾಠ ಕಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Murder case : ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಕಿರಾತಕ

Continue Reading

ದೇಶ

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Ayodhya: ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್‌ ಅವರು ವಿಮಾನ ಇಳಿಯುತ್ತಲೇ ಡಾಂಬರ್‌ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Ayodhya
Koo

ಅಯೋಧ್ಯೆ: ರಾಮಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ವಿಮಾನಗಳಲ್ಲಿ ಪ್ರಯಾಣಿಸಿ ಅಯೋಧ್ಯೆ ತಲುಪುತ್ತಿದ್ದಾರೆ. ಶ್ರೀರಾಮನ ದರ್ಶನ ಪಡೆಯಲು ಜನ ಭಕ್ತಿ-ಭಾವದಿಂದ ಅಯೋಧ್ಯೆಗೆ ಆಗಮಿಸುತ್ತಾರೆ. ಜನಸಾಮಾನ್ಯರು ಮಾತ್ರವಲ್ಲ, ವಿಮಾನದ ಸಿಬ್ಬಂದಿಗೂ ರಾಮಮಂದಿರ, ಅಯೋಧ್ಯೆಯ ಮೇಲೆ ವಿಶೇಷ ಗೌರವ ಇದೆ. ಇದಕ್ಕೆ ನಿದರ್ಶನ ಎಂಬಂತೆ, ಆಕಾಂಕ್ಷಾ ಪಾರ್ಮರ್‌ ಎಂಬ ಇಂಡಿಗೋ ವಿಮಾನದ ಗಗನಸಖಿಯು ವಿಮಾನ ಅಯೋಧ್ಯೆ ತಲುಪುತ್ತಲೇ, ಕೆಳಗೆ ಇಳಿದು ನೆಲಕ್ಕೆ ನಮಸ್ಕಾರ ಮಾಡಿದ್ದಾರೆ. ರಾಮನ ಕಾರಣಕ್ಕಾಗಿ ಅಯೋಧ್ಯೆ ಪುಣ್ಯಭೂಮಿ ಎಂದು ಅವರು ಭಕ್ತಿ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.

ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್‌ ಅವರು ವಿಮಾನ ಇಳಿಯುತ್ತಲೇ ಡಾಂಬರ್‌ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಅಯೋಧ್ಯೆಯ ಭೂಮಿಗೆ ನಮಸ್ಕಾರ ಮಾಡುವುದು ಹೆಮ್ಮೆ ಅನಿಸುತ್ತಿದೆ. ಹಿಂದು ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಜೈ ಶ್ರೀರಾಮ್”‌ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಆಕಾಂಕ್ಷಾ ಅವರ ವಿಡಿಯೊವನ್ನು ಉದ್ಯಮಿ ಮೋಹನ್‌ದಾಸ್‌ ಪೈ ಹಂಚಿಕೊಂಡಿದ್ದಾರೆ. ಅಲ್ಲದೆ, ಆಕಾಂಕ್ಷಾ ಹಾಗೂ ಇಂಡಿಗೋ ಬಗ್ಗೆ ಹೆಮ್ಮೆ ಎನಿಸುತ್ತದೆ. ಭಗವಾನ್‌ ಶ್ರೀರಾಮನು 500 ವರ್ಷಗಳ ಬಳಿಕ ಅಯೋಧ್ಯೆಗೆ ಬಂದಿದ್ದು, ಅಂತಹ ರಾಮನನ್ನು ಆರಾಧಿಸುವ ಉದ್ಯೋಗಿಯನ್ನು ಹೊಂದಿರುವುದಕ್ಕೆ ಸಂಸ್ಥೆಯು ಹೆಮ್ಮೆಪಡಬೇಕು” ಎಂಬುದಾಗಿ ಮೋಹನ್‌ದಾಸ್‌ ಪೈ ಅವರು ಒಕ್ಕಣೆ ಬರೆದುಕೊಂಡಿದ್ದಾರೆ.

ವಿವಾದ ಉಂಟಾಗಿದ್ದೇಕೆ?

ಇಂಡಿಗೋ ವಿಮಾನದ ಸಿಬ್ಬಂದಿಯು ಅಯೋಧ್ಯೆ ಭೂಮಿಗೆ ನಮಸ್ಕಾರ ಮಾಡಿರುವ ವಿಡಿಯೊ ಹಂಚಿಕೊಂಡು, ಮೆಚ್ಚುಗೆಯ ಮಾತುಗಳನ್ನು ಆಡಿದ ಮೋಹನ್‌ದಾಸ್‌ ಪೈ ಹಾಗೂ ಗಗನಸಖಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದೆಲ್ಲ ಗಿಮಿಕ್‌, ರೀಲ್ಸ್‌ಗಾಗಿ ಇಂತಹ ವಿಡಿಯೊ ಮಾಡುತ್ತಾರೆ, ಮೊದಲೇ ಪ್ಲಾನ್‌ ಮಾಡಿ, ರೆಕಾರ್ಡ್‌ ಮಾಡಿದ ವಿಡಿಯೊ ಇದು, ಇಂತಹ ನಾಟಕದ ವಿಡಿಯೊವನ್ನು ಮೋಹನ್‌ ದಾಸ್‌ ಪೈ ಬೆಂಬಲಿಸಬಾರದು, ಅಷ್ಟೊಂದು ಭಕ್ತಿ ಇದ್ದರೆ ದೇವಾಲಯಕ್ಕೆ ಹೋಗಲಿ, ಗಗನಸಖಿಯಾದವರು ಹೇಗೆ ವರ್ತಿಸಬೇಕು ಎಂಬುದು ಮೊದಲು ಗೊತ್ತಿರಬೇಕು” ಎಂಬುದು ಸೇರಿ ಹತ್ತಾರು ರೀತಿಯಲ್ಲಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Continue Reading

ಕರ್ನಾಟಕ

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Wayanad Landslide: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ತೊಂದರೆಗೊಳಗಾದ ಜನರ ಸಂಕಷ್ಟಕ್ಕೆ ನೆರೆಯ ಕರ್ನಾಟಕ ಮಿಡಿದಿದೆ. ರಾಜ್ಯ ಸರ್ಕಾರದ 100 ಮನೆಗಳ ನಿರ್ಮಾಣದ ನೆರವಿನ ಜತೆಗೆ ಕರುನಾಡಿನ ನೂರಾರು ಸಂಘ-ಸಂಸ್ಥೆಗಳು ಕೂಡ ಹಲವು ರೀತಿಯಲ್ಲಿ ಕೇರಳ ಜನರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದಿವೆ.

VISTARANEWS.COM


on

Wayanad Landslide
Koo

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭೂಕುಸಿತ (Wayanad Landslide) ಸಂಭವಿಸುತ್ತಲೇ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕರ್ನಾಟಕ (Karnataka) ಕೈಜೋಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಯನಾಡಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಭರವಸೆ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಕೈಗಾರಿಕೋದ್ಯಮಿಗಳು, ಖಾಸಗಿ ಸಂಘ ಸಂಸ್ಥೆಗಳೂ ಕೂಡ ವಿವಿಧ ರೂಪದಲ್ಲಿ ನೆರವಾಗಲು ಮುಂದಾಗಿವೆ.

ಮೈಸೂರು ಜಿಲ್ಲಾಡಳಿತವು ವೈದ್ಯರ ತಂಡದೊಂದಿಗೆ 15 ಫ್ರೀಜರ್‌ ಬಾಕ್ಸ್‌ಗಳು, ನಾಲ್ಕು ಟ್ರಾಕ್ಟರ್‌ ಮೌಂಟೆಡ್‌ ಕಂಪ್ರೆಸರ್‌ ಮತ್ತು ಜಾಕ್‌ ಹ್ಯಾಮರ್‌, 500 ಬಾಡಿ ಬ್ಯಾಗ್‌ಗಳು, ತುರ್ತು ಸಂದರ್ಭಗಳಲ್ಲಿ ಬಳಸುವ 15 ದೀಪಗಳ ವ್ಯವಸ್ಥೆ, 40 ಸ್ಟ್ರೆಚರ್‌ಗಳು, 288 ಗಮ್‌ಬೂಟ್‌ಗಳು, 5 ಸ್ಟೀಲ್‌ ಕಟ್ಟರ್‌ಗಳು, 10 ಗ್ಯಾಸ್‌ ಕಟ್ಟರ್‌ಗಳು, 2040 ನ್ಯಾಪ್‌ಕಿನ್‌ಗಳು, 1000 ಗ್ಲೋವ್‌ಗಳು, 2050 ಮಾಸ್ಕ್‌ಗಳು, 1000 ಬಾಟಲ್‌ ಸ್ಯಾನಿಟೈಸರ್‌ಗಳು ಹಾಗೂ ಆರೋಗ್ಯ ಇಲಾಖೆಯ ಔಷಧಗಳನ್ನು ಒದಗಿಸಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (KIAL) ವತಿಯಿಂದ 250 ಎಂ.ಎಲ್‌. ನ 1008 ನೀರಿನ ಬಾಟಲ್‌ಗಳು, 100 ರೇನ್‌ಕೋಟ್‌ಗಳು, 500 ಬಾಟಲ್‌ ಸ್ಯಾನಿಟೈಸರ್‌ಗಳು, 15 ಟೆಂಟ್‌ಗಳು, 1000 ಪಿಪಿಇ ಕಿಟ್‌ಗಳು, 5000 ಗ್ಲೋವ್‌ಗಳು, 3೦೦೦ 3- ಪ್ಲೈ ಮಾಸ್ಕ್‌ಗಳು ಹಾಗೂ 8000 N-95 ಮಾಸ್ಕ್‌ಗಳನ್ನು ಕಳುಹಿಸಲಾಗಿದೆ.

ವೋಲ್ವೋ ಸಂಸ್ಥೆಯಿಂದ 2000 ಪ್ಯಾಕ್‌ ಸ್ಯಾನಿಟರಿ ಪ್ಯಾಡ್‌ಗಳು, 100 PPE ಕಿಟ್‌ಗಳು ಹಾಗೂ ಎರಡು ಟ್ರಕ್‌ಗಳನ್ನು ಒದಗಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಸಂಘ(ELCIA) ದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್‌ ಫೌಂಡೇಷನ್‌ ವತಿಯಿಂದ 40 ಸ್ಟ್ರೆಚರ್‌ಗಳು, 250 ಬಾಡಿ ಬ್ಯಾಗ್‌ಗಳು, 1000 N-95 ಮಾಸ್ಕ್‌ಗಳು, 500 ಬಾಟಲ್‌ ಸ್ಯಾನಿಟೈಸರ್‌ಗಳು, 1000 ಗ್ಲೋವ್‌ಗಳನ್ನು ಒದಗಿಸಲಾಗಿದೆ.

ಹಲವು ಸಂಸ್ಥೆಗಳಿಂದಲೂ ನೆರವು

ಬಯೋಕಾನ್‌ ಮತ್ತು ಭಾಗೀದಾರ ಸಂಸ್ಥೆಗಳಾದ ನಾರಾಯಣ ಹೆಲ್ತ್‌ ಮತ್ತು ಸಿಂಜೀನ್‌ ಸಂಸ್ಥೆಗಳಿಂದ 2,200 ಮಾಸ್ಕ್‌ಗಳು, 100 ಗುಣಮಟ್ಟದ ರೇನ್‌ ಕೋಟ್‌ಗಳು, 400 ಲೀಟರ್‌ ಸ್ಯಾನಿಟೈಸರ್‌, 5 ಕಾರ್ಟನ್‌ಗಳಷ್ಟು ಬೆಡ್‌ಶೀಟ್‌ ಮತ್ತು ಬಟ್ಟೆ ಹಾಗೂ 250 ಪಿಪಿಇ ಕಿಟ್‌ಗಳನ್ನು ಕಳುಹಿಸಲಾಗಿದೆ.

ಆಶಯ ಟ್ರಸ್ಟ್ ಹಾಗೂ ಉತ್ತಿಷ್ಠ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ 1,000 ಬ್ಲಾಂಕೆಟ್‌ ಮತ್ತು ಟಾರ್ಪಾಲಿನ್‌ಗಳು ಹಾಗೂ ಎರಡು ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಅವರು 25 ಲಕ್ಷ ರೂ. ಆರ್ಥಿಕ ನೆರವು ಒದಗಿಸಿದ್ದಾರೆ. ವಯನಾಡಿಗೆ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಸಲಕರಣೆಗಳು ಮತ್ತಿತರ ನೆರವು ಒದಗಿಸಿ ಮಾನವೀಯತೆ ಮೆರೆದ ಎಲ್ಲ ಸಂಸ್ಥೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

Continue Reading

ವೈರಲ್ ನ್ಯೂಸ್

Viral Video: ಪ್ರವಾಹದಲ್ಲಿ ಸಿಲುಕಿದ ನಾಯಿಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ ರವಾನೆ; ಮಾನವೀಯತೆ ಅಂದ್ರೆ ಇದು!

Viral Video: ಭಾರಿ ಮಳೆಯಿಂದಾಗಿ ಮೂರು ದಿನಗಳ ಹಿಂದೆ ಮೆಟ್ಟೂರು ಡ್ಯಾಮ್‌ನಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಕಾರಣ ಪ್ರವಾಹ ಉಂಟಾಗಿದೆ. ಹಾಗಾಗಿ, ನದಿಯ ಪಾತ್ರದಲ್ಲಿಯೇ ಏಳು ನಾಯಿಗಳು ಉಳಿದುಕೊಂಡಿವೆ. ಮೂರು ದಿನಗಳಿಂದ ನಾಯಿಗಳಿಗೆ ತಿನ್ನಲು ಏನೂ ಸಿಕ್ಕಿರಲಿಲ್ಲ. ಆದರೆ, ರಕ್ಷಣಾ ಸಿಬ್ಬಂದಿಯು ಡ್ರೋನ್‌ ಮೂಲಕ ನಾಯಿಗಳಿಗೆ ಆಹಾರ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

VISTARANEWS.COM


on

Viral Video
Koo

ಚೆನ್ನೈ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ (Wayanad Landslide) ಸಾವಿನ ಸಂಖ್ಯೆ 360 ದಾಟಿದೆ. ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಹಗಲು-ರಾತ್ರಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸೇನೆ ಸೇರಿ ನೂರಾರು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯು ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಇನ್ನು, ಜನ ಕೂಡ ಮಾನವೀಯತೆಯಿಂದ ಪರಿಹಾರ ನಿಧಿಗೆ ಹಣ ಕಳುಹಿಸುತ್ತಿದ್ದಾರೆ. ಆ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇನ್ನು, ತಮಿಳುನಾಡಿನಲ್ಲಿ (Tamil Nadu) ಕೂಡ ಪ್ರವಾಹ ಉಂಟಾಗಿದ್ದು, ಹೀಗೆ ಪ್ರವಾಹದಲ್ಲಿ ಸಿಲುಕಿದ 7 ಶ್ವಾನಗಳಿಗೆ ಡ್ರೋನ್‌ ಮೂಲಕ ಬಿರಿಯಾನಿ, ಮಾಂಸವನ್ನು ರವಾನಿಸುವ ಮೂಲಕ ಭದ್ರತಾ ಸಿಬ್ಬಂದಿಯು ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಮೆಟ್ಟೂರು ಡ್ಯಾಮ್‌ ಬಳಿಯ ಕಾವೇರಿ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದು, ಸಣ್ಣದೊಂದು ದ್ವೀಪ ಸೃಷ್ಟಿಯಾಗಿದೆ. ಈ ದ್ವೀಪದ ಪ್ರದೇಶದಲ್ಲಿ ಏಳು ನಾಯಿಗಳು ಉಳಿದುಕೊಂಡಿವೆ. ಇದು ಅಗ್ನಿಶಾಮಕ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಅಗ್ನಿಶಾಮಕ ಸಿಬ್ಬಂದಿಯು ಡ್ರೋನ್‌ಗಳಿಗಾಗಿ ಜಿಯೋಟೆಕ್ನೋವ್ಯಾಲಿ ಎಂಬ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಜಿಯೋಟೆಕ್ನೋವ್ಯಾಲಿ ಕಂಪನಿಯಿಂದ ಸುಮಾರು 30 ಕೆ.ಜಿ ತೂಕದ ವಸ್ತುಗಳನ್ನು ಸಾಗಣೆ ಮಾಡುವ ಡ್ರೋನ್‌ ತರಿಸಿಕೊಂಡು, ಶ್ವಾನಗಳಿಗೆ ಮಾಂಸವನ್ನು ರವಾನಿಸಿದ್ದಾರೆ.

ಭಾರಿ ಮಳೆಯಿಂದಾಗಿ ಮೂರು ದಿನಗಳ ಹಿಂದೆ ಮೆಟ್ಟೂರು ಡ್ಯಾಮ್‌ನಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಕಾರಣ ಪ್ರವಾಹ ಉಂಟಾಗಿದೆ. ಹಾಗಾಗಿ, ನದಿಯ ಪಾತ್ರದಲ್ಲಿಯೇ ಏಳು ನಾಯಿಗಳು ಉಳಿದುಕೊಂಡಿವೆ. ಮೂರು ದಿನಗಳಿಂದ ನಾಯಿಗಳಿಗೆ ತಿನ್ನಲು ಏನೂ ಸಿಕ್ಕಿರಲಿಲ್ಲ. ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಒಂದು ನಾಯಿ ಮಾತ್ರ ಕಾಣಿಸಿದೆ. ಬಳಿಕ ಅವರು ಡ್ರೋನ್‌ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಿದಾಗ ಏಳು ನಾಯಿಗಳು ಇರುವುದು ಗೊತ್ತಾಗಿದೆ. ಆಗ, ಡ್ರೋನ್‌ ಮೂಲಕ ನಾಯಿಗಳಿಗೆ ಮಾಂಸ, ಬಿರಿಯಾನಿಯನ್ನು ರವಾನಿಸಲಾಗಿದೆ.

ನಾಯಿಗಳ ರಕ್ಷಣೆಗೂ ಪ್ಲಾನ್‌

ಅಗ್ನಿಶಾಮಕ ಸಿಬ್ಬಂದಿಯು ನಾಯಿಗಳನ್ನು ರಕ್ಷಣೆ ಮಾಡಲು ಕೂಡ ಪ್ಲಾನ್‌ ಮಾಡಿವೆ. ಭಾನುವಾರ (ಆಗಸ್ಟ್‌ 4) ಡ್ರೋನ್‌ಗಳ ಮೂಲಕ ನಾಯಿಗಳ ಇರುವಿಕೆ ಪತ್ತೆ ಹಚ್ಚಿ, ಅವುಗಳಿಗೆ ಇನ್ನಷ್ಟು ಆಹಾರ ರವಾನಿಸುವ ಸಿಬ್ಬಂದಿಯು, ಬಳಿಕ ಅವುಗಳನ್ನು ರಕ್ಷಿಸಲು ಯೋಜನೆ ರೂಪಿಸಿದ್ದಾರೆ. ನಾಯಿಗಳ ರಕ್ಷಣೆಗಾಗಿ ಪಂಜರವನ್ನು ಕಳುಹಿಸಲಾಗುತ್ತದೆ. ಪಂಜರಗಳಲ್ಲಿ ನಾಯಿಗಳು ಪ್ರವೇಶಿಸುತ್ತಲೇ, ಲಾಕ್‌ ಮಾಡಿಕೊಂಡು, ಅವುಗಳನ್ನು ಏರ್‌ಲಿಫ್ಟ್‌ ಮಾಡುವ ಯೋಜನೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಯ ಮಾನವೀಯತೆಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Continue Reading
Advertisement
Paris Olympics 2024
ಪ್ರಮುಖ ಸುದ್ದಿ20 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

karnataka weather Forecast
ಮಳೆ20 mins ago

Karnataka Weather : ಮುಂದುವರಿಯಲಿದೆ ವಿಪರೀತ ಮಳೆ; ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Shravan 2024
Latest20 mins ago

Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?

Dina Bhavishya
ಭವಿಷ್ಯ50 mins ago

Dina Bhavishya : ಕೌಟುಂಬಿಕ ಕಲಹಗಳಿಗೆ ಧ್ವನಿ ಆಗ್ಬೇಡಿ; ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು

Uttar Pradesh
ದೇಶ6 hours ago

ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Wasim Jaffer
ಕ್ರೀಡೆ6 hours ago

Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

Ayodhya
ದೇಶ6 hours ago

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Wayanad Landslide
ಕರ್ನಾಟಕ7 hours ago

Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Kavya Maran
ಕ್ರಿಕೆಟ್8 hours ago

Kavya Maran : ಐಪಿಎಲ್​ ಆಟಗಾರರ ಹರಾಜಿನ ನಿಯಮಗಳ ಬಗ್ಗೆ ಕಾವ್ಯಾ ಮಾರನ್ ಇಟ್ಟಿರುವ ಬೇಡಿಕೆಗಳು ಇವು…

Champions Trophy 2025
ಪ್ರಮುಖ ಸುದ್ದಿ8 hours ago

Champions Trophy 2025 : ಚಾಂಪಿಯನ್ಸ್​ ಟ್ರೋಫಿಗಾಗಿ 544 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಐಸಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ17 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌