CBI | ತನಿಖೆ ಕೈಗೊಳ್ಳಲು ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಬಿಹಾರ ಸರ್ಕಾರ - Vistara News

ದೇಶ

CBI | ತನಿಖೆ ಕೈಗೊಳ್ಳಲು ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆದ ಬಿಹಾರ ಸರ್ಕಾರ

ತಮ್ಮ ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಿಬಿಐ(CBI)ಗೆ ನೀಡಲಾಗಿದ್ದ ಅನುಮತಿಯನ್ನು ಬಿಹಾರ ಮೈತ್ರಿ ಸರ್ಕಾರ ಹಿಂಪಡೆದುಕೊಂಡಿದೆ.

VISTARANEWS.COM


on

Nitish Kumar on Bihar Hooch Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬಿಜೆಪಿ ಸಖ್ಯ ತೊರೆದು ಆರ್‌ಜೆಡಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು, ವಿಶೇಷವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಇನ್ನು ಮುಂದೆ ಬಿಹಾರದಲ್ಲಿ ಯಾವುದೇ ಪ್ರಕರಣವನ್ನು ಕೇಂದ್ರ ತನಿಖಾ ದಳ ನೇರವಾಗಿ ತನಿಖೆ ಮಾಡುವಂತಿಲ್ಲ. ಬದಲಿಗೆ ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದರೆ ಮಾತ್ರವೇ ಸಿಬಿಐ(CBI)ಗೆ ತನಿಖೆ ಮಾಡಲು ಅಧಿಕಾರ ದೊರೆಯಲಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ರಾಜಕೀಯ ಕಾರಣಕ್ಕಾಗಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಆರ್‌ಜೆಡಿ ಮತ್ತು ಜೆಡಿಯು ನೇತೃತ್ವದ ಕೂಟ ಸರ್ಕಾರವು, ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿವೆ. ಆ ಮೂಲಕ ಬಿಜೆಪಿಗೆ ಮತ್ತೊಂದು ಟಾಂಗ್ ನೀಡಿದೆ.

ರಾಜ್ಯ ಸರ್ಕಾರ ವ್ಯಾಪ್ತಿಯ ಯಾವುದೆ ಪ್ರಕರಣದ ತನಿಖೆಯನ್ನು ಕೈಗೊಳ್ಳಲು ಆಯಾ ರಾಜ್ಯ ಸರ್ಕಾರಗಳ ಅನುಮತಿ ಸಿಬಿಐಗೆ ಬೇಕಾಗುತ್ತದೆ. 1946ರ ದಿಲ್ಲಿ ಸ್ಪೇಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್(ಡಿಎಸ್‌ಪಿಇ) ಕಾಯಿದೆಯ ಸೆಕ್ಷನ್ 6 ಪ್ರಕಾರ, ರಾಜ್ಯಗಳ ವ್ಯಾಪ್ತಿಯಲ್ಲಿ ನೇರವಾಗಿ ಸಿಬಿಐ ತನಿಖೆ ಕೈಗೊಳ್ಳಲು ಬರುವುದಿಲ್ಲ. ಅದಕ್ಕೆ ಸಂಬಂಧಿಸಿದ ರಾಜ್ಯವು ಒಪ್ಪಿಗೆಯನ್ನು ನೀಡಬೇಕಾಗುತ್ತದೆ. ಈಗ ಬಿಹಾರ ವ್ಯಾಪ್ತಿಯ ಯಾವುದೇ ಪ್ರಕರಣವನ್ನು ಸಿಬಿಐ ನೇರವಾಗಿ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ.

9 ರಾಜ್ಯಗಳು ಹಿಂಪಡೆಯಲು ಒಪ್ಪಿಗೆ
ಸಿಬಿಐ ತನಿಖೆಗೆ ಅನುಮತಿ ನಿರಾಕರಿಸಿದ ಪಟ್ಟಿಗೆ ಈಗ ಒಂಭತ್ತು ರಾಜ್ಯಗಳು ಸೇರಿವೆ. ಈ ಮೊದಲು, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಪಂಜಾಬ್, ಮೇಘಾಲಯ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಸಿಬಿಐ ತನಿಖೆ ಕೈಗೊಳ್ಳಲು ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದುಕೊಂಡಿವೆ. ಈ ಪಟ್ಟಿಗೆ ಈಗ ಬಿಹಾರ ಕೂಡ ಸೇರ್ಪಡೆಯಾಗಿದೆ.

ಬಿಜೆಪಿಯು ತನ್ನ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕಾಗಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಬಿಹಾರ ಮೈತ್ರಿಕೂಟ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಆರ್‌ಜೆಡಿ ನಾಯಕ ಶಿವಾನಂದ ತಿವಾರಿ ಅವರು ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಕೇಂದ್ರ ಸಂಸ್ಥೆಗಳು, ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಎಲ್ಲ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Hepatitis-A:ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Hepatitis-A
Koo

ಕೇರಳ: ಕೊರೋನಾ ವೈರಸ್‌ನಿಂದ ವರ್ಷಾನುಗಟ್ಟಲೇ ಬಳಲಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ಕೇರಳ(Kerala)ದಲ್ಲಿ ಮತ್ತೊಂದು ವೈರಸ್‌(Virus) ಜನರ ನಿದ್ದೆಗೆಡಿಸಿದೆ. ಹೆಪಟಿಟಿಸ್‌-ಎ(Hepatitis-A) ಖಾಯಿಲೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಕೇರಳ ಗಡಿ ರಾಜ್ಯವಾಗಿರುವುದರಿಂದ ಕರ್ನಾಟಕದಲ್ಲೂ ಇದರ ಭೀತಿ ಹೆಚ್ಚಾಗಿದೆ.

ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಎಲ್ಲಾ ಜಿಲ್ಲ ಮತ್ತು ತಾಲೂಕು ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಣಪ್ಪುರಣನ ಚಲಿಯಾರ್‌ ಮತ್ತು ಪೋತುಕಲ್ಲು ಪ್ರದೇಶದಲ್ಲಿ ಹೆಪಟಿಟಿಸ್‌-ಎ ಗೆ ಜನ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ರೋಗಾಣುಗಳನ್ನು ತಡೆಯಲು ಮತ್ತು ಜನರಲ್ಲಿ ಅರಿವು ಮೂಡಿಸಲು ಶೀಘ್ರದಲ್ಲಿಯೇ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಪೋತುಕಲ್ಲು ಪ್ರದೇಶದಲ್ಲಿ ಈ ಖಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಹೊಸ ಕೇಸ್‌ಗಳು ಮತ್ತೆ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಚಲಿಯಾರ್‌ ಮತ್ತು ಪೋಲುಕಲ್ಲು ಪ್ರದೇಶದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಕೇವಲ ಬಿಸಿ ನೀರನ್ನಷ್ಟೇ ಗ್ರಾಹಕರಿಗೆ ನೀಡುವಂತೆ ಎಲ್ಲಾ ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಖಡಕ್‌ ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ:Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

ಹೆಪಟಿಟಿಸ್‌-ಎ ಅಂದರೆ ಏನು?

ಹೆಪಟೈಟಿಸ್ ಎ ವೈರಸ್ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಸಾಂಕ್ರಾಮಿಕ ವ್ಯಕ್ತಿಯೊಂದಿಗೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಈ ರೋಗವು ಮುಖ್ಯವಾಗಿ ರೋಗನಿರೋಧಕ ಶಕ್ತಿ ಇರದ ವ್ಯಕ್ತಿಗಳಲ್ಲಿ ಮತ್ತು ಎಚ್ಐವಿ ಮತ್ತು ಯಕೃತ್ತಿನ ಕಾಯಿಲೆಯಂತಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಬಹಳ ಬೇಗ ತಗುಲುತ್ತದೆ. ಆಯಾಸ, ಜ್ವರ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ಹಸಿವಿನ ಕೊರತೆ, ತುರಿಕೆ ಮತ್ತು ಕಾಮಾಲೆ ಸೇರಿವೆ. ಕಣ್ಣುಗಳು, ಮೂತ್ರ, ಚರ್ಮ ಮತ್ತು ಉಗುರುಗಳ ಬಿಳಿಯ ಹಳದಿ ಬಣ್ಣಕ್ಕೆ ತಿರುಗುವುದು ಇವೆಲ್ಲಾ ಈ ಖಾಯಿಲೆಯ ಲಕ್ಷಣಗಳು. ಕೇವಲ ಬಿಸಿ ನೀರು ಕುಡಿಯುವುದು, ಆಹಾರ ಸೇವೆನೆಗೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವುದರಿಂದ ಈ ಖಾಯಿಲೆಯನ್ನು ತಡೆಯಬಹುದಾಗಿದೆ.

Continue Reading

ದೇಶ

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರ ಪತ್ನಿ ಅನಿತಾ ಗೋಯಲ್‌ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಹಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈಯ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ನರೇಶ್‌ ಗೋಯಲ್‌ ಅವರಿಗೆ ಇತ್ತೀಚೆಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಅನಿತಾ ಅವರ ಅಂತ್ಯಕ್ರಿಯೆ ಇಂದು ಮುಂಬೈಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

VISTARANEWS.COM


on

Anita Goyal
Koo

ಮುಂಬೈ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ (Naresh Goyal) ಅವರ ಪತ್ನಿ ಅನಿತಾ ಗೋಯಲ್‌ (Anita Goyal) ಇಂದು (ಮೇ 16) ಮುಂಜಾನೆ ಮೃತಪಟ್ಟಿದ್ದಾರೆ. ಹಲವು ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬೈಯ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ನರೇಶ್‌ ಗೋಯಲ್‌ ಅವರಿಗೆ ಇತ್ತೀಚೆಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಅನಿತಾ ಅವರ ಅಂತ್ಯಕ್ರಿಯೆ ಇಂದು ಮುಂಬೈಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನರೇಶ್‌ಗೂ ಕ್ಯಾನ್ಸರ್‌

ಇತ್ತ ನರೇಶ್‌ ಗೋಯಲ್‌ ಅವರಿಗೂ ಕ್ಯಾನ್ಸರ್‌ ಬಾಧಿಸಿದೆ. ಮೇ 3ರಂದು ನರೇಶ್ ಗೋಯಲ್ ಅವರ ವಕೀಲರು ಬಾಂಬೆ ಹೈಕೋರ್ಟ್‌ಗೆ ಜಾಮೀನಿಗಾಗಿ ಮನವಿ ಮಾಡಿದ್ದರು. ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದ ನ್ಯಾಯಾಲಯವು ಮೊದಲು ಗೋಯಲ್ ಅವರನ್ನು ಮೇ 6ರವರೆಗೆ ದಾಖಲಿಸಿರುವ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ನಿರ್ದೇಶಿಸಿತ್ತು.

“ನನ್ನ ಹೆಂಡತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ನನ್ನ ಮಗಳ ಆರೋಗ್ಯ ಕೂಡ ಹದಗೆಟ್ಟಿದೆ. ಜೈಲಿನಲ್ಲಿರುವ ನನ್ನ ಆರೋಗ್ಯ ಸ್ಥಿತಿಯೂ ಬಿಗಡಾಯಿಸಿದೆ. ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸಾಲಿನಲ್ಲಿ ನಿಲ್ಲಲು ಕೂಡ ನನಗೆ ಆಗುವುದಿಲ್ಲ. ನನ್ನ ಕಾಲು ಮಡಚಲು ಸಹ ಆಗುತ್ತಿಲ್ಲ. ಹಾಗಾಗಿ, ನಾನು ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದೇನೆ. ದಯಮಾಡಿ ನಾನು ಜೈಲಿನಲ್ಲೇ ಸಾಯಲು ಬಿಡಿ” ಎಂದು ನ್ಯಾಯಾಧೀಶರ ಎದುರು ನರೇಶ್‌ ಗೋಯಲ್‌ ಬಿಕ್ಕಳಿಸಿದ್ದರು ಎನ್ನಲಾಗಿದೆ. ನರೇಶ್‌ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಬಾಂಬೆ ಹೈಕೋರ್ಟ್‌ ಮೇ 6ರಂದು ಎರಡು ತಿಂಗಳ ಜಾಮೀನು ಮಂಜೂರು ಮಾಡಿತ್ತು.

ಏನಿದು ಪ್ರಕರಣ?

ನರೇಶ್‌ ಗೋಯಲ್‌ ಅವರು ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದು, ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಎದುರಿಸುತ್ತಿದ್ದು, ಇವರ ವಿರುದ್ಧ ಇ.ಡಿ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನರೇಶ್‌ ಗೋಯಲ್‌ ಅವರನ್ನು ಬಂಧಿಸಲಾಗಿತ್ತು.

1992ರಿಂದ ಪ್ರಾರಂಭವಾದ ಜೆಟ್​ ಏರ್​ವೇಸ್‌, ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಖಾಸಗಿ ಏರ್​ಲೈನ್​ ಆಗಿತ್ತು. ಲಾಭದಲ್ಲೇ ನಡೆಯುತ್ತಿತ್ತು. ಆದರೆ 2019ರಲ್ಲಿ ಕಂಪನಿ ದಿವಾಳಿ ಘೋಷಣೆ ಮಾಡಿದ್ದಲ್ಲದೆ, ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು. 2021ರ ಜೂನ್​​ನಲ್ಲಿ ಜೆಟ್ ಏರ್​ ವೇ ಸ್‌ಅನ್ನು ಜಲನ್-ಕಾಲ್ರಾಕ್ ಒಕ್ಕೂಟ ಸ್ವಾಧೀನ ಪಡಿಸಿಕೊಂಡಿತು. ಅಲ್ಲದೆ, ಮತ್ತೆ ಜೆಟ್‌ ಏರ್‌ವೇಸ್‌ ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಜೆಟ್‌ ಏರ್‌ವೇಸ್‌, ನರೇಶ್ ಗೋಯಲ್‌‌ ಹಾಗೂ ಅವರ ಸಂಬಂಧಿಕರಿಗೆ ಸೇರಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.

ಇದನ್ನೂ ಓದಿ: Jet Airways: ಕೆನರಾ ಬ್ಯಾಂಕ್​ಗೆ 538 ಕೋಟಿ ರೂ. ವಂಚನೆ; ಜೆಟ್​ ಏರ್​ ವೇ ಸಂಸ್ಥಾಪಕನ ವಿರುದ್ಧ ಸಿಬಿಐ ತನಿಖೆ ಪ್ರಾರಂಭ

Continue Reading

ಮಹಿಳೆ

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

ಭಾರತೀಯ ರೈಲ್ವೇಯ (Indian Railway) ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Indian Railway
Koo

ಮನೆಯ ಮಗಳು ರೈಲಿನಲ್ಲಿ (Indian Railway) ಒಬ್ಬಳೇ ಪ್ರಯಾಣ (Solo trip) ಮಾಡಬೇಕಾದ ಅನಿವಾರ್ಯತೆ ಬಂದಾಗ ಪೋಷಕರಿಗೆ ಒಂದು ಕ್ಷಣ ಗಾಬರಿಯಾಗುವುದು ಸಹಜ. ಇನ್ನು ಮಹಿಳೆಯರಿಗೂ ಅಷ್ಟೇ.. ಏಕಾಂಗಿಯಾಗಿ ರೈಲು ಪ್ರಯಾಣ (solo women travellers) ಮಾಡಬೇಕಾದ ಸಂದರ್ಭ ಬಂದರೆ ಕೊಂಚ ಆತಂಕವಂತೂ ಮನದಲ್ಲಿ ಇದ್ದೇ ಇರುತ್ತದೆ. ಆದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಬೇಕಾದರೆ ಈ ಚಿಂತೆ ಬೇಕಾಗಿಲ್ಲ.

ಭಾರತೀಯ ರೈಲ್ವೇಯ ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

1989ರಲ್ಲಿ ಜಾರಿಗೆ ಬಂದ ಈ ವಿಶೇಷ ಕಾನೂನು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 139 ರಲ್ಲಿ ವಿವರಿಸಲಾಗಿದೆ. ಒಂಟಿ ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಮಕ್ಕಳೊಂದಿಗೆ ಇರುವವರಿಗೆ ಇದು ರಕ್ಷಣೆ ನೀಡುತ್ತದೆ. ಉದಾಹರಣೆಗೆ ಈ ವಿಭಾಗದ ಪ್ರಕಾರ ಒಬ್ಬ ಮಹಿಳೆ ಪುರುಷ ಪ್ರಯಾಣಿಕರಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಆಕೆ ತನ್ನ ಮಗುವಿನೊಂದಿಗೆ ಇದ್ದರೆ ಅವಳು ರೈಲು ಪಾಸ್ ಅಥವಾ ಟಿಕೆಟ್ ಇಲ್ಲದೆ ಕಂಡುಬಂದರೆ ರಾತ್ರಿಯಲ್ಲಿ ರೈಲಿನಿಂದ ಇಳಿಯಲು ಆದೇಶಿಸಲಾಗುವುದಿಲ್ಲ.

ಹದಿಹರೆಯದ ಹುಡುಗಿ ಅಥವಾ ಮಹಿಳೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಟಿಕೆಟ್ ಹೊಂದಿಲ್ಲದಿದ್ದರೆ ಟಿಟಿಇ ಅವರನ್ನು ರೈಲಿನಿಂದ ಹೊರಹಾಕಲು ಅನುಮತಿ ಇಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ.

ಮಹಿಳೆಯ ಬಳಿ ಹಣವಿದ್ದರೆ ದಂಡ ಪಾವತಿಸಿ ಪ್ರಯಾಣ ಮುಂದುವರಿಸಬಹುದು. ಮಹಿಳೆಗೆ ಹಣದ ಕೊರತೆಯಿರುವ ಸಂದರ್ಭಗಳಲ್ಲಿ ಸಹ ಟಿಟಿಇ ಅವರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲು ಅನುಮತಿ ಇಲ್ಲ. ಆದರೆ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ಒಂಟಿಯಾಗಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕಾದ ಪ್ರಮುಖ ಪ್ರಯಾಣಿಕರ ನಿಯಮಗಳಲ್ಲಿ ಇದು ಒಂದು. ಮಹಿಳಾ ಪ್ರಯಾಣಿಕರಿಗಾಗಿ ಅಧಿಕಾರಿಗಳು ಜಾರಿಗೆ ತಂದಿರುವ ಇನ್ನೂ ಕೆಲವು ನಿಯಮಗಳನ್ನು ಇಲ್ಲಿವೆ.


ಮಹಿಳಾ ಸುರಕ್ಷತೆಗಾಗಿ ಭಾರತೀಯ ರೈಲ್ವೇಯಲ್ಲಿ ಹಲವು ನಿಯಮಗಳು ಜಾರಿಯಲ್ಲಿವೆ
1. ಭಾರತೀಯ ರೈಲ್ವೆ ಕಾಯಿದೆ 1989 ರ ಸೆಕ್ಷನ್ 311 ರ ಅಡಿಯಲ್ಲಿ ಮಿಲಿಟರಿ ಸಿಬ್ಬಂದಿಗೆ ಮಹಿಳಾ ಕಂಪಾರ್ಟ್‌ಮೆಂಟ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

2. ಅಧಿಕಾರಿಗಳೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಇದ್ದಾಗ ಮಾತ್ರ ಮಹಿಳೆಯನ್ನು ಹೊರಹೋಗುವಂತೆ ಹೇಳಬಹುದು.

3. ಸೆಕ್ಷನ್ 162 ರ ಪ್ರಕಾರ 12 ವರ್ಷದೊಳಗಿನ ಹುಡುಗರು ಮಹಿಳಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು.

4. ಮಹಿಳಾ ಕೋಚ್‌ಗೆ ಪ್ರವೇಶಿಸುವ ಯಾವುದೇ ಪುರುಷ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

5. ಮಹಿಳೆಯರಿಗಾಗಿ ದೂರದ ಮೇಲ್/ ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ವರ್ಗದಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಗರೀಬ್ ರಥ/ರಾಜಧಾನಿ/ ದುರೊಂಟೊ/ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಹಂತದ AC (3AC) ಕೋಚ್‌ಗಳಲ್ಲಿ ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ. ಅವರ ವಯಸ್ಸನ್ನು ಲೆಕ್ಕಿಸದೆ ಅಥವಾ ಅವರು ಏಕಾಂಗಿಯಾಗಿ ಅಥವಾ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಇದನ್ನು ಮಾಡಲಾಗುತ್ತದೆ.

6. ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಸಿಸಿಟಿವಿಗಳು ಮತ್ತು ಮೇಲ್ವಿಚಾರಣಾ ಕೊಠಡಿಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಿದೆ.

7. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) 2020ರ ಅಕ್ಟೋಬರ್ 17ರಂದು ‘ಮೇರಿ ಸಹೇಲಿ’ ಎಂಬ ಪ್ಯಾನ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

8. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಬೋರ್ಡಿಂಗ್‌ನಿಂದ ಡಿ-ಬೋರ್ಡಿಂಗ್‌ವರೆಗಿನ ಸಂಪೂರ್ಣ ಪ್ರಯಾಣಕ್ಕಾಗಿ ವರ್ಧಿತ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

9. ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವವರಿಗೆ ಭದ್ರತೆಯನ್ನು ಒದಗಿಸುವುದು ಉಪಕ್ರಮದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

Continue Reading

ದೇಶ

Sachin Tendulkar: ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Sachin Tendulkar:ಮಹಾರಾಷ್ಟ್ರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗಿನ ಜಾವ 1:30ಕ್ಕೆ ತನ್ನ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು. ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

Sachin Tendulkar
Koo

ಮುಂಬೈ: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಭದ್ರತಾ ಸಿಬ್ಬಂದಿ(VVIP Security guard) ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ್ ಪ್ರಕಾಶ್ ಕಾಪ್ಡೆ (39) ಮೃತ ದುರ್ದೈವಿ. ಸಚಿನ್ ಅವರ ವಿವಿಐಪಿ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಪ್ಡೆ, ಇತ್ತೀಚೆಗಷ್ಟೇ ಕರ್ತವ್ಯಕ್ಕೆ ರಜೆ ಪಡೆದು ಊರಿಗೆ ತೆರಳಿದ್ದರು. ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗಿನ ಜಾವ 1:30ಕ್ಕೆ ತನ್ನ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು. ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

ಆದರೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಕಾಶ್ ಅವರ ಪೋಷಕರು, ಪತ್ನಿ, ಮಕ್ಕಳು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿವಿಐಪಿ ಭದ್ರತಾ ಸಿಬ್ಬಂದಿಯ ಆತ್ಮಹತ್ಯೆಯ ಬಗ್ಗೆಯೂ ಎಸ್‌ಆರ್‌ಪಿಎಫ್ ತನಿಖೆ ನಡೆಸುತ್ತಿದೆ.

ಪ್ರಕಾಶ್ ಕಾಪ್ಡೆ ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಪೋಷಕರು, ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕಾಶ್ ಕಾಪ್ಡೆ ಮೃತದೇಹ, ರಿವಾಲ್ವರ್ , ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಾಮ್ನೆರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಶಿಂಧೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆದಿರುವ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಗೆ, ಭಾರತ ಸರ್ಕಾರವು ಭಾರತ ರತ್ನ ಗೌರವ ನೀಡಿದೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹಾಗೂ ಶತಕ ಸಿಡಿಸಿರುವ ದಾಖಲೆ ಈಗಲೂ ತೆಂಡೂಲ್ಕರ್‌ ಹೆಸರಲ್ಲಿದೆ.

Continue Reading
Advertisement
Suspicious Case in Bengaluru
ಬೆಂಗಳೂರು30 mins ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Star Suvarna HuAnthiya UhuuAnthiya new celebrity game show
ಕಿರುತೆರೆ34 mins ago

Star Suvarna: ಕಿರುತೆರೆಗೆ ಬರ್ತಿದೆ ಹೊಸ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’: ಪ್ರಸಾರ ಯಾವಾಗ?

Hepatitis-A
ದೇಶ34 mins ago

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Anita Goyal
ದೇಶ35 mins ago

Anita Goyal: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಪತ್ನಿ ಅನಿತಾ ಗೋಯಲ್‌ ನಿಧನ

hunsur road accident
ಕ್ರೈಂ43 mins ago

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

A Movie Re-ReleaseActress Chandni relives memories
ಸ್ಯಾಂಡಲ್ ವುಡ್50 mins ago

A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

Sunil Chhetri
ಕ್ರೀಡೆ1 hour ago

Sunil Chhetri: 20 ವರ್ಷಗಳ ಫುಟ್ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಸುನೀಲ್‌ ಚೆಟ್ರಿ; ಕುವೈತ್ ವಿರುದ್ಧ ಅಂತಿಮ ಪಂದ್ಯ

Aishwarya Rai Injured heads to Cannes Film Festival with daughter
ಬಾಲಿವುಡ್1 hour ago

Cannes 2024: ಐಶ್ವರ್ಯಾ ರೈ ಕೈಗೆ ಪೆಟ್ಟು: ಮಗಳ ಜತೆ ಕಾನ್ ಫಿಲ್ಮ್ ಫೆಸ್ಟಿವಲ್‌ನತ್ತ ಹೊರಟ ನಟಿ!

Robert Fico
ವಿದೇಶ1 hour ago

Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ ನಡೆಸಿದ್ದು ಓರ್ವ ಕವಿ; ಯಾಕೀ ದ್ವೇಷ?

self harming gym trainer
ಕ್ರೈಂ1 hour ago

Self Harming: ಪತ್ನಿಗೆ ಹೆದರಿಸಲು ಹೋಗಿ ಉರುಳು ಬಿಗಿದು ಸತ್ತ ಜಿಮ್‌ ಟ್ರೇನರ್; ವಿಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌