ದೇಶ
India Canada Trade: ಭಾರತದ ಜತೆಗಿನ ವ್ಯಾಪಾರ ಮುಂದೂಡಿದ ಕೆನಡಾ; ಮೋದಿ ಖಂಡನೆ ಕಾರಣ?
India Canada Trade: ಭಾರತದ ಜತೆ ಮಾಡಿಕೊಳ್ಳಬೇಕಾದ ವ್ಯಾಪಾರ ಒಪ್ಪಂದವನ್ನು ಮುಂದೂಡಲಾಗಿದೆ ಎಂದು ಕೆನಡಾ ಘೋಷಿಸಿದೆ. ಅಚ್ಚರಿಯ ಘೋಷಣೆ ಹಿಂದೆ ಹತ್ತಾರು ಕಾರಣಗಳಿವೆ ಎಂದು ಹೇಳಲಾಗುತ್ತಿದೆ.
ನವದೆಹಲಿ/ಒಟ್ಟಾವ: ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪಾಲ್ಗೊಂಡು, ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿ ವಾಪಸಾದ ಕೆಲವೇ ದಿನಗಳಲ್ಲಿ ಭಾರತದ ಜತೆಗಿನ ವ್ಯಾಪಾರ ಒಪ್ಪಂದವನ್ನು (India Canada Trade) ಕೆನಡಾ ಮುಂದೂಡಿದೆ. “ಭಾರತದ ಜತೆಗಿನ ಟ್ರೇಡ್ ಮಿಷನ್‌ಅನ್ನು ಮುಂದೂಡಲಾಗಿದೆ” ಎಂದು ಕೆನಡಾ ವ್ಯಾಪಾರ ಸಚಿವೆ ಮೇರಿ ಎನ್‌ಜಿ (Mary Ng) ಅವರ ವಕ್ತಾರೆ ಶಾಂಟಿ ಕೊಸೆಂಟಿನೋ ಘೋಷಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್ ಟ್ರುಡೋ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತಕತೆ ನಡೆಸಿದ್ದರು. ಇದೇ ವೇಳೆ, “ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು” ಎಂದು ಹೇಳಿದ್ದರು. ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಆಗ್ರಹಿಸಿದ್ದರು. ಇದೇ ಕಾರಣಕ್ಕಾಗಿ ಕೆನಡಾ ಸರ್ಕಾರವು ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದೆ ಎಂದು ಹೇಳಲಾಗುತ್ತಿದೆ.
Canadian Trade Minister Mary Ng is postponing a trade mission to India planned for October, an official said on Friday, reports Reuters
— ANI (@ANI) September 15, 2023
"At this time, we are postponing the upcoming trade mission to India," said Shanti Cosentino, a spokesperson for the minister: Reuters pic.twitter.com/Umn9zxcwpf
ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಕೆನಡಾ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆದಿತ್ತು. ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಕೆನಡಾ ಸಚಿವೆ ಮೇರಿ ಎನ್‌ಜಿ ಅವರು ಜಂಟಿ ಪ್ರಕಟಣೆ ಹೊರಡಿಸಿದ್ದರು. ಭಾರತ ಹಾಗೂ ಕೆನಡಾ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಿವೆ. ವರ್ಷಾಂತ್ಯದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಘೋಷಣೆ ಮಾಡಿದ್ದರು. ಆದರೆ, “ಭಾರತದ ಜತೆಗಿನ ಒಪ್ಪಂದವನ್ನು ಕೆನಡಾ ಸರ್ಕಾರ ಮುಂದೂಡಿದೆ” ಎಂದು ಶಾಂಟಿ ಕೊಸೆಂಟಿನೋ ಘೋಷಿಸಿರುವುದು ಸಂಚಲನ ಮೂಡಿಸಿದೆ.
ಇದನ್ನೂ ಓದಿ: Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು
ಭಾರತದಲ್ಲಿ ಟ್ರುಡೋಗೆ ‘ಅವಮಾನ’ ಆರೋಪ
ಜಸ್ಟಿನ್ ಟ್ರುಡೋ ಅವರು ಭಾರತಕ್ಕೆ ಬಂದಾಗ ಅವಮಾನ ಮಾಡಲಾಗಿದೆ ಎಂದು ಅಲ್ಲಿನ ಪ್ರತಿಪಕ್ಷ ಆರೋಪಿಸಿತ್ತು. ವೇದಿಕೆಯಿಂದ ನಡೆಯುವಂತೆ ಮೋದಿ ಸೂಚಿಸಿದ್ದಾರೆ, ಕೆನಡಾ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದಾರೆ ಎಂದೆಲ್ಲ ಟೀಕಿಸಿತ್ತು. ಅದರಲ್ಲೂ, ಕೆನಡಾ ಪ್ರತಿಪಕ್ಷ ನಾಯಕ ಪಿಯರೆ ಪೊಲಿವ್ರೆ ಅವರು ಸೋಶಿಯಲ್ ಮೀಡಿಯಾದಲ್ಲಿ ʼಟೊರಾಂಟೊ ಸನ್ʼ ಪತ್ರಿಕೆಯ ಮುಖಪುಟವನ್ನು ಪೋಸ್ಟ್ ಮಾಡಿದ್ದರು.
Putting partisanship aside, no one likes to see a Canadian prime minister repeatedly humiliated & trampled upon by the rest of the world. pic.twitter.com/TOR3p4gKgn
— Pierre Poilievre (@PierrePoilievre) September 10, 2023
ಪತ್ರಿಕೆಯ ವರದಿ ಉಲ್ಲೇಖಿಸಿ ಪಿಯರೆ ಟೀಕಿಸಿದ್ದರು. ಮೋದಿಯವರು ಟ್ರುಡೊಗೆ ವೇದಿಕೆಯಿಂದಾಚೆಗೆ ದಾರಿ ತೋರಿಸುತ್ತಿದ್ದಾರೆ. ಪತ್ರಿಕೆ ಅದಕ್ಕೆ ʼದಿಸ್ ವೇ ಔಟ್ʼ ಎಂದು ಶೀರ್ಷಿಕೆ ನೀಡಿದೆ. ʼʼಸಹಭಾಗಿತ್ವ ಹಾಗಿರಲಿ, ಯಾರೂ ಕೂಡ ನಮ್ಮ ಪ್ರಧಾನಿ ಸತತ ಅವಮಾನಕ್ಕೆ ಒಳಗಾಗುವುದನ್ನು ಹೀಗೆ ನೋಡಲು ಬಯಸುವುದಿಲ್ಲʼʼ ಎಂದು ಪಿಯರೆ ಹೇಳಿದ್ದರು. ಇನ್ನು, ʼಜಿ20ಯಲ್ಲಿ ಟ್ರುಡೊಗೆ ಸ್ನೇಹಿತರೇ ಇರಲಿಲ್ಲʼ ಎಂದು ಪತ್ರಿಕೆ ಬರೆದಿತ್ತು. ಭಾರತದಲ್ಲಿ ಜಸ್ಟಿನ್ ಟ್ರುಡೋ ಪ್ರಯಾಣಿಸಬೇಕಿದ್ದ ವಿಮಾನ ಕೆಟ್ಟು ನಿಂತಾಗಲೂ ಪ್ರತಿಪಕ್ಷವು ಟೀಕಿಸಿತ್ತು.
ದೇಶ
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Parliament Special Session: ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರಿಗೆ ಬಿಜೆಪಿಯ ಸಂಸದ ರಮೇಶ್ ಬಿಧುರಿ ಅವರು ಭಯೋತ್ಪಾದಕ ಎಂದು ಕರೆದಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ (Lok Sabha) ಬಿಜೆಪಿ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರಿಂದ ‘ಉಗ್ರ’ (Terrorist) ಎಂದು ಕರೆಯಿಸಿಕೊಂಡಿದ್ದ ಬಿಎಸ್‌ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ(BSP MP Danish Ali) ಅವರನ್ನು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಲೋಕಸಭೆಯಲ್ಲಿ ಚಂದ್ರಯಾನ-3 (Chandrayaan 3) ಯಶಸ್ಸಿನ ಕುರಿತಾದ ಚರ್ಚೆ ನಡೆಯುತ್ತಿತ್ತು. ಈ ವೇಳೆ, ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ ಅವರು, ಡ್ಯಾನಿಶ್ ಅಲಿ ಅವರನ್ನು ಇಸ್ಲಾಮೋಫೋಬಿಕ್ ಆಗಿ ನಿಂದಿಸುತ್ತಿದ್ದರು. ಒಂದು ಹಂತದಲ್ಲಿ ಅವರನ್ನು ಭಯೋತ್ಪಾದಕ ಎಂದು ಕೂಡ ಕರೆದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ಸಂಜೆ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, ಬಿಜೆಪಿ ಸಂಸದರಿಂದ ನಿಂದನೆಗೊಳಗಾದ ಡ್ಯಾನಿಶ್ ಅಲಿಯನ್ನು ಭೇಟಿ ಮಾಡಿ, ಸಮಾಧಾನಪಡಿಸಿದರು. ಈ ಕುರಿತಾದ ಫೋಟೋಗಳನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದು, ನಫ್ರತ್ ಕೆ ಬಜಾರ್ ಮೇ, ಮೊಹಬ್ಬತ್ ಕಿ ದುಕಾನ್(ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಎಂದು ಬರೆಯಲಾಗಿದೆ(Parliament Special Session).
नफ़रत के बाज़ार में मोहब्बत की दुकान pic.twitter.com/3IqLMFU0dx
— Rahul Gandhi (@RahulGandhi) September 22, 2023
ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು, ಭಾರತೀಯ ಜನತಾ ಪಾರ್ಟಿ ಹುಟ್ಟು ಹಾಕಿರುವ ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯಲಿದ್ದೇನೆ ಎಂದು ಹೇಳಿದ್ದರು. ಬಳಿಕ ಭಾರತ್ ಜೋಡೋ ಯಾತ್ರೆಯ ವೇಳೆ, ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ಘೋಷಣೆಯಾಗಿ ಹೊರ ಹೊಮ್ಮಿತು. ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ವೇಳೆ ಈ ಘೋಷವಾಕ್ಯವನ್ನು ಬಳಸುತ್ತಾರೆ.
Shri Rahul Gandhi reached to meet MP Danish Ali at his residence.
— Gautam Nautiyal (@Gnukpcc) September 22, 2023
Where BJP spreads hatred,
we will spread love there. 👍#ArrestRameshBidhuri | "दानिश अली" | #DanishAli | #RameshBidhuri | pic.twitter.com/K7qPQG7c6r
ರಾಹುಲ್ ಗಾಂಧಿ ಅವರು ಭೇಟಿಯಾಗುವ ಮುಂಚೆ ಡ್ಯಾನಿಶ್ ಅಲಿ ಅವರು, ಬಿಜೆಪಿ ಸಂಸದರಿಂದ ನಿಂದನೆಗೊಳಗಾದ ಬಳಿಕ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಎನ್‌ಡಿ ಟಿವಿ ಮುಂದೆ ಕಣ್ಣೀರಿಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Parliament Special Session: ಬಿಎಸ್ಪಿ ಸಂಸದ ಡ್ಯಾನಿಶ್ ಅಲಿಗೆ ‘ಉಗ್ರ’ ಎಂದು ಜರಿದ ಬಿಜೆಪಿ ಎಂಪಿ ಬಿಧುರಿ! ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ
ಚುನಾಯಿತ ಸಂಸದರನ್ನು ಅವರ ಸಮುದಾಯಕ್ಕೆ ಸೇರಿಸುವ ಮೂಲಕ ಅವರ ಮೇಲೆ ದಾಳಿ ಮಾಡಲು ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆಯೇ? ಇದರಿಂದ ಇಡೀ ದೇಶವೇ ತಲೆತಗ್ಗಿಸಿದೆ. ಆ ಸಂಸದ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಉತ್ತೇಜನ ನೀಡುತ್ತದೆಯೋ ಕಾದು ನೋಡಬೇಕು. ಬಿಧುರಿಯದ್ದು ಸಂಪೂರ್ಣವಾಗಿ ದ್ವೇಷ ಭಾಷಣವಾಗಿದೆ ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ. ಈ ಮಧ್ಯೆ, ನಿಂದನೆಯ ಮಾತುಗಳನ್ನಾಡಿರುವ ಬಿಜೆಪಿ ಸಂಸದ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಾರ್ಟಿಯು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದೆ. ಹಾಗೆಯೇ, ಕಲಾಪದ ಕಡಿತದಿಂದ ಉಗ್ರ ಪದವನ್ನು ತೆಗೆದ ಹಾಕಲಾಗಿದೆ. ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಒಳಗಾಗಿರುವ ಬಿಜೆಪಿಯು, ಸಂಸದ ರಮೇಶ್ ಬಿಧುರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಈ ನಡವಳಿಕೆ ಕುರಿತು ವಿವರಣೆ ನೀಡುವಂತೆ ಕೋರಿದೆ.
I ask my friends particularly from the BJP & my friends in media – how is this language by BJP MP #RameshBidhuri calling a fellow Member of Parliament Danish Ali a “Bharwa”, “Mull@h At@nkw@d¡” ,“Mull@h Ugr@wad¡” & “K@tw@” acceptable? This was
— Tehseen Poonawalla Official 🇮🇳 (@tehseenp) September 22, 2023
ON RECORD in the Lok Sabha ! Just… pic.twitter.com/ewVy0WCqqU
ಕರ್ನಾಟಕ
VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿ ಸೆಟ್ಟಾಯ್ತು, ಸೆ. 26ರವರೆಗೆ ನೀರು ಬಿಡೋದೂ ಫಿಕ್ಸಾಯ್ತು!
VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹೊಸ ರಾಜಕೀಯ ಶಕೆ ಆರಂಭವಾಗಿದೆ. ಕಾವೇರಿ ನೀರು ಬಿಡುಗಡೆ ಮುಂದುವರಿಸಲು ತೀರ್ಮಾನವಾಗಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್ 10 ನ್ಯೂಸ್
1.ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆ; ಕಾಂಗ್ರೆಸ್ ಮಣಿಸಲು ಅಮಿತ್ ಶಾ-ಕುಮಾರಸ್ವಾಮಿ ಪಣ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊನೆಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ (BJP-JDS Alliance) ಅಧಿಕೃತ ಮುದ್ರೆ ಬಿದ್ದಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!
2. ಸೆ.26ರವರೆಗೆ ಕಾವೇರಿ ನೀರು ಬಿಡುಗಡೆ ಫಿಕ್ಸ್; ಬಳಿಕ ಬಿಡುವುದಿಲ್ಲ ಎಂದು ಅಧಿವೇಶನ ಕರೆದು ನಿರ್ಣಯ?
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಕಾವೇರಿ ಬಿಕ್ಕಟ್ಟು ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸೆ. 26ರವರೆಗೆ ನೀರು ಬಿಡುಗಡೆ ಮಾಡುವುದು, ಮುಂದೆ ಮತ್ತೊಮ್ಮೆ ಆದೇಶ ನೀಡದಂತೆ ಅಧಿವೇಶನ ಕರೆದು ನೀರು ಬಿಡುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳುವುದೆಂದು ಚರ್ಚೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಕಾವೇರಿ ಹೋರಾಟಕ್ಕೆ ಧುಮುಕಿದ ಚುಂಚಶ್ರೀ, ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ
3. ಏಷ್ಯನ್ ಗೇಮ್ಸ್‌ಗೆ ಅರುಣಾಚಲದ ಅಥ್ಲಿಟ್‌ಗೆ ಚೀನಾ ಪ್ರವೇಶ ನಿರಾಕರಣೆ: ಏನಿದು ಹೊಸ ವಿವಾದ?
ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಏನಿದು ವಿವಾದ? ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕಕ್ಕೆ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಆಗ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡರು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್, ಎದುರಾಯ್ತು ಸಂಕಷ್ಟ
“ಸನಾತನ ಧರ್ಮವು ಕೊರೊನಾ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ತಮಿಳುನಾಡು ಸರ್ಕಾರ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಉಗ್ರ ಎಂದು ಜರಿದ ಬಿಜೆಪಿ ಎಂಪಿ, ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ
ಬಿಎಸ್‌ಪಿಯ ಸಂಸದ ಡ್ಯಾನಿಶ್ ಅಲಿ (BSP MP Danish Ali) ಅವರಿಗೆ ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರು ಸಂಸತ್ತಿನಲ್ಲಿ ‘ಉಗ್ರ’ (Terrorist) ಎಂದು ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮೊದಲ ಏಕದಿನ ಶುಭಾರಂಭ: ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ನಂ. 1 ಪಟ್ಟಕ್ಕೇರಿದ ಭಾರತ
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್, ಕೆ.ಎಲ್ ರಾಹುಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಸಖತ್ತಾಗಿ ಮಿಂಚಿದರು. ಈ ಗೆಲುವಿನಿಂದ ಭಾರತ ಏಕದಿನ ಕ್ರಿಕೆಟ್‌ನಲ್ಲೂ ನಂಬರ್ ಒನ್ ಸ್ಥಾನಕ್ಕೆ ಬಂತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಏಕದಿನ ವಿಶ್ವಕಪ್ ಬಹುಮಾನ ಎಷ್ಟು ಗೊತ್ತೆ? ಇಲ್ಲಿದೆ ಎಲ್ಲ ವಿವರ
8 ಯೋಗಿ ರಾಜ್ಯದಲ್ಲಿ ಎನ್‌ಕೌಂಟರ್‌ಗೆ ಮತ್ತೊಬ್ಬ ಪಾತಕಿ ಬಲಿ, ದುಷ್ಕರ್ಮಿಗಳಿಗೆ ನಡುಕ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರಿಮಿನಲ್‌ಗಳ ಎನ್‌ಕೌಂಟರ್ ಜಾಸ್ತಿಯಾಗಿವೆ. ಇದೀಗ ಮಹಿಳಾ ಪೊಲೀಸ್ ಪೇದೆಯೊಬ್ಬರ ಹತ್ಯೆಯ ಪ್ರಮುಖ ಆರೋಪಿಯಾದ ಅನೀಶ್ ಖಾನ್ ಎಂಬುವನನ್ನು ಎನ್‌ಕೌಂಟರ್ ಮಾಡಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮುಂದಿನ ಆಸ್ಕರ್ ರೇಸ್‌ನಲ್ಲಿ ಯಾವೆಲ್ಲ ಚಿತ್ರಗಳು ಇರಲಿವೆ?
2024ರ ಆಸ್ಕರ್ (Oscars 2024) ರೇಸ್‌ನಲ್ಲಿ ಯಾವೆಲ್ಲ ಭಾರತೀಯ ಸಿನಿಮಾಗಳು ಬರಬಹುದು ಎಂಬ ಚರ್ಚೆ ಶುರುವಾಗಿವೆ. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani), ʻಜ್ವಿಗಾಟೊʼ (Zwigato), ʻದಿ ಕೇರಳ ಸ್ಟೋರಿʼ ಹೆಸರು ಜೋರಾಗಿ ಕೇಳಿಬರುತ್ತಿದೆ ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ವ್ಯಾನ್‌ನಿಂದ ಜಿಗಿದು ಇಬ್ಬರು ಕೈದಿಗಳ ಪರಾರಿ, ಕತ್ತೆ ಕಾಯುತ್ತಿದ್ದ ಪೊಲೀಸರು!
ಉತ್ತರ ಪ್ರದೇಶದಲ್ಲಿ ಮೂವರು ಆರೋಪಿಗಳು ಪೊಲೀಸ್ ವ್ಯಾನ್‌ನಿಂದ ತಪ್ಪಿಸಿಕೊಂಡು ಓಡಿಹೋದ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಹಾಗೆಯೇ, ಉತ್ತರ ಪ್ರದೇಶ ಪೊಲೀಸರ ಕಾರ್ಯವೈಖರಿ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ಅವರೇನು ಕತ್ತೆ ಕಾಯ್ತಿದ್ರಾ ಎಂದು ಜನ ಕೇಳ್ತಿದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ದೇಶ
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
Money Guide: ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮ ಆಗಿರಬೇಕು ಎಂದಾದರೆ, ವೃತ್ತಿಯ ಆರಂಭದಿಂದಲೇ ಉಳಿತಾಯವನ್ನು ಆರಂಭಿಸಿ.
ಹಣವನ್ನು ಉಳಿತಾಯ (Money Saving) ಮಾಡುವುದೂ ಒಂದು ಕಲೆ. ದುಡಿಮೆಯ ದಿನಗಳಲ್ಲಿ ಒಂದಿಷ್ಟು ಹಣವನ್ನು ಉಳಿತಾಯದ ಮಾಡಿದರೆ, ನಿವೃತ್ತಿಯ ದಿನಗಳನ್ನು (Retirement Life) ನೆಮ್ಮದಿಯಾಗಿ ಕಳೆಯಬಹುದು. ಇಲ್ಲದಿದ್ದರೆ, ದುಡಿಯುವ ಕಸುವು ಇಲ್ಲದ ಸಮಯದಲ್ಲಿ ಹಣಕ್ಕಾಗಿ ಪರದಾಡಬೇಕಾಗುತ್ತದೆ. ಹಾಗಾಗಿ, ನಿಮ್ಮ ವೃತ್ತಿಯ ಆರಂಭದ ದಿನಗಳಿಂದಲೇ ನಿವೃತ್ತಿಯ ಬಗ್ಗೆ ಪ್ಲ್ಯಾನ್ ಮಾಡಿ(Plan for Retirement life), ಹಣವನ್ನು ಉಳಿತಾಯ ಮಾಡಬೇಕು. ನಿವೃತ್ತಿಯ ಅಂಚಿಗೆ ಬರುವಷ್ಟರಲ್ಲಿ ದೊಡ್ಡ ಮೊತ್ತದ ಉಳಿತಾಯ ನಿಮಗಾಗಿ ಕಾಯುತ್ತಿರುತ್ತದೆ. ಹಾಗಾಗಿ, ಈಗನಿಂದಲೇ ನೀವು ಉಳಿತಾಯ ಮತ್ತು ನಿವೃತ್ತಿಯ ದಿನಗಳಿಗಾಗಿ ಹೂಡಿಕೆಯ ಪ್ಲ್ಯಾನ್ ಮಾಡುವುದು ಶುರು ಮಾಡಿ(Money Guide).
ನಿವೃತ್ತಿಗಾಗಿ ಹಣ ಉಳಿಸುವ ಮಾರ್ಗಗಳು….
1.ಉಳಿತಾಯ ಬೇಗ ಆರಂಭಿಸಿ
ಉತ್ತಮ ನಿವೃತ್ತಿ ಜೀವನಕ್ಕಾಗಿ ವೃತ್ತಿ ಆರಂಭದ ದಿನಗಳಿಂದಲೇ ಉಳಿತಾಯವನ್ನು ಆರಂಭಿಸಬೇಕು. ಚಿಕ್ಕ ಮೊತ್ತದ ಸೇವಿಂಗ್ ಕೂಡ ನಿವೃತ್ತಿ ಹೊತ್ತಿಗೆ ಬಹುದೊಡ್ಡ ಮೊತ್ತವಾಗಿ ಬದಲಾಗಿರುತ್ತದೆ.
2.ಟಾರ್ಗೆಟ್ ಸೆಟ್ ಮಾಡಿಕೊಳ್ಳಿ
ನಿಮ್ಮ ನಿರೀಕ್ಷಿತ ವೆಚ್ಚಗಳು ಮತ್ತು ಜೀವನಶೈಲಿಯ ಆಧಾರದ ಮೇಲೆ ನಿವೃತ್ತಿಗಾಗಿ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಹಣದುಬ್ಬರ ಮತ್ತು ಆರೋಗ್ಯ ವೆಚ್ಚಗಳಂತಹ ಅಂಶಗಳನ್ನು ಪರಿಗಣಿಸಿ ಸೇವಿಂಗ್ ಆರಂಭಿಸಿ. ಸ್ಪಷ್ಟವಾದ ನಿವೃತ್ತಿ ಗುರಿಯನ್ನು ಹಾಕಿಕೊಳ್ಳುವುದರಿಂದ ಹಣ ಉಳಿಕೆಯಲ್ಲಿ ಸ್ಪಷ್ಟತೆ ದೊರೆಯುತ್ತದೆ.
3.ರಿಟೈರ್‌ಮೆಂಟ್ ಬಜೆಟ್ ತಯಾರಿಸಿ
ನಿಮ್ಮ ಸದ್ಯದ ಆದಾಯ ಮತ್ತು ವೆಚ್ಚದ ಅನುಸಾರ ನಿಮ್ಮ ನಿವೃತ್ತಿಯ ಬಜೆಟ್ ತಯಾರಿಸಿ. ಅನವಶ್ಯವಾಗಿ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂದು ಗುರುತಿಸಿಕೊಳ್ಳಿ ಮತ್ತು ಅಂಥ ಹಣವನ್ನು ಉಳಿಕೆಯ ಪಟ್ಟಿಗೆ ಸೇರಿಸಿ. ಈ ಮೂಲಕ ರಿಟೈರ್ ಫಂಡ್ ಕ್ರೋಡೀಕರಿಸಬಹುದು.
4.ರಿಟೈರ್‌ಮೆಂಟ್ ಅಕೌಂಟ್!
ಭಾರತದಲ್ಲಿ ನಾನಾ ಅಕೌಂಟ್‌ಗಳು ಚಾಲ್ತಿಯಲ್ಲಿವೆ. ಅವುಗಳ ಮೂಲಕ ರಿಟೈರ್ಮೆಂಟ್ ಪ್ಲ್ಯಾನ್ ಮಾಡಬಹುದು. ಇಪಿಎಫ್, ಪಿಪಿಎಫ್, ಎನ್‌ಪಿಎಸ್, ಎಫ್‌ಡಿ ಇತ್ಯಾದಿ ಖಾತೆಗಳ ಮೂಲಕ ಸೇವಿಂಗ್ ಹೆಚ್ಚಿಸುತ್ತಾ ಹೋದಂತೆ ನಿವೃತ್ತಿ ಸಮಯದಯಲ್ಲಿ ತುಂಬಾ ಸಹಕಾರಿಯಾಗುತ್ತದೆ.
5.ಹೂಡಿಕೆ ಮಾಡಿ
ಷೇರುಗಳು, ನಿರ್ದಿಷ್ಟ ಆದಾಯ ತರುವ ಹೂಡಿಕೆಗಳು, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ನೀವು ಯಾವುದೇ ರೀತಿಯ ಹೂಡಿಕೆಯ ಸಾಧನವನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಅದಕ್ಕಿಂತ ಮುಂಚೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದುವರಿಯರಿ.
6.ಅನವಶ್ಯ ವೆಚ್ಚ ಬೇಡ
ನಿಮ್ಮ ನಿವೃತ್ತಿಯ ದಿನಗಳು ಅತ್ಯುತ್ತಮವಾಗಿರಬೇಕು ಎಂದಾದರೆ, ಈಗಿನಿಂದಲೂ ಅನವಶ್ಯ ವೆಚ್ಚಗಳನ್ನು ದೂರ ಮಾಡಿ. ನಿಮ್ಮ ರಿಟೈರ್ಮೆಂಟ್ ಖಾತೆಗಳಿಗೆ ಆಟೋಮೆಟಿಕ್ ಆಗಿ ದುಡ್ಡು ಪೇ ಆಗುವ ಹಾಗೆ ಮಾಡಿ. ನಿಮ್ಮ ಸಂಬಳದಲ್ಲಿ ಇನ್‌ಕ್ರಿಮೆಂಟ್ ಆದಾಗಲೆಲ್ಲ. ಈ ರೀತಿಯ ಪರಿಹಾರವನ್ನು ಕಂಡುಕೊಳ್ಳಬಹುದು.
7.ಪರ್ಯಾಯ ಉಳಿತಾಯ
ಮ್ಯೂಚವಲ್ ಫಂಡ್ಸ್, ಷೇರುಗಳು, ಬಾಂಡ್‌ಗಳಂಥ ಪರ್ಯಾಯ ಉಳಿತಾಯದ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕೇವಲ ಹಣವನ್ನು ಫಿಕ್ಸೆಡ್ ಡಿಪಾಸೆಟ್ ಮಾಡುವುದು ಮಾತ್ರವೇ ಉಳಿತಾಯದ ಮಾರ್ಗವಲ್ಲ. ಉಳಿತಾಯದ ಜತೆಗೆ ಹಣ ಹೆಚ್ಚಾಗುವ ಮಾರ್ಗಗಳಿವೆ. ಅವುಗಳನ್ನು ಶೋಧಿಸಬಹುದು. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.
8.ತೆರಿಗೆ ಮಾಹಿತಿ ಇರಲಿ
ತೆರಿಗೆ ಕಾನೂನುಗಳು, ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿ ಯೋಜನೆ ತಂತ್ರಗಳಲ್ಲಿನ ಬದಲಾವಣೆಗಳ ಬಗ್ಗೆ ನಿಮಗೆ ಅಪ್‌ಡೇಟೆಡ್ ಮಾಹಿತಿ ಇರುವುದು ಉತ್ತಮ. ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮಾಡಲು ಈ ರೀತಿಯ ಅಪ್‌ಡೇಟೆಡ್ ಮಾಹಿತಿ ಇದ್ದರೆ ಬೆಸ್ಟ್ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
9.ರಿಟೈರ್ಮೆಂಟ್ ಫಂಡ್ ಮುಟ್ಟಬೇಡಿ
ಯಾವುದೇ ಕಾರಣಕ್ಕೂ ನಿಮ್ಮ ನಿವೃತ್ತಿ ಉಳಿತಾಯವನ್ನು ಇತರ ವೆಚ್ಚಗಳಿಗಾಗಿ ಬಳಸಲು ಹೋಗಲೇಡಿ. ಉಳಿತಾಯದ ಹಣವನ್ನು ಬಳಸಲಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ಮತ್ತೆ ನೀವು ಹಣವಿಲ್ಲದೇ ಪರದಾಡಬೇಕಾಗುತ್ತದೆ. ಹಾಗಾಗಿ, ಎಂಥದ್ದೇ ಸಂದರ್ಭದಲ್ಲಿ ನಿವೃತ್ತಿಗಾಗಿ ತೆಗೆದಿಟ್ಟ ಅಥವಾ ಸೇವಿಂಗ್ ಮಾಡಿದ ಹಣವನ್ನು ಸದ್ಯದ ವೆಚ್ಚಕ್ಕೆ ಬಳಸಲು ಮುಂದಾಗಬೇಡಿ.
ಈ ಸುದ್ದಿಯನ್ನೂ ಓದಿ: Money Guide: ಪಿಪಿಎಫ್, ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್ ಖಾತೆ ಸ್ಥಗಿತವಾಗದಂತೆ ನೋಡಿಕೊಳ್ಳಿ
10.ತುರ್ತು ನಿಧಿ ಇರಲಿ
ಅನಿರೀಕ್ಷಿತ ವೆಚ್ಚಗಳಿಗಾಗಿ ತುರ್ತು ನಿಧಿಯನ್ನು ನಿರ್ವಹಣೆ ಮಾಡುವುದು ಉತ್ತಮ. ಯಾಕೆಂದರೆ, ತುರ್ತು ನಿಧಿ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಸೇವಿಂಗ್ಸ್ ಅನ್ನು ವೆಚ್ಚಗಳಿಗೆ ಬಳಸಲು ಮುಂದಾಗುವುದಿಲ್ಲ. ಇಲ್ಲದಿದ್ದರೆ, ಉಳಿತಾಯದ ಹಣವನ್ನೇ ನೀವು ತುರ್ತು ಅಗತ್ಯಗಳಿಗೆ ಬಳಸುತ್ತೀರಿ. ಆಗ ನಿಮ್ಮ ನಿವೃತ್ತಿಯ ಎಲ್ಲ ಪ್ಲ್ಯಾನ್ ಹಾಳಾಗುತ್ತದೆ.
ಗ್ಯಾಜೆಟ್ಸ್
Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್
Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.
ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.
ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.
ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?
ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.
ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಪ್ರಮುಖ ಸುದ್ದಿ19 hours ago
Lina Mukherjee: ಇಸ್ಲಾಮಿಕ್ ದೇಶದಲ್ಲಿ ಹಂದಿ ಮಾಂಸ ತಿಂದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ!
-
ಪ್ರಮುಖ ಸುದ್ದಿ11 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಉಡುಪಿ17 hours ago
FB Profile Deleted: 20ಕ್ಕೂ ಅಧಿಕ ಹಿಂದು ಜಾಗರಣ ವೇದಿಕೆ ನಾಯಕರ ಫೇಸ್ ಬುಕ್ ಪ್ರೊಫೈಲ್ ಏಕಕಾಲದಲ್ಲಿ ಡಿಲೀಟ್!
-
ಸುವಚನ41 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್13 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ12 hours ago
Prisoners Escape: ವ್ಯಾನ್‌ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕ್ರೈಂ12 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ಉತ್ತರ ಕನ್ನಡ13 hours ago
ದೇವಾಲಯದ ಅವಶೇಷಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕರು; ಹಿಂದು ಸಂಘಟನೆಗಳು ಕಿಡಿ