Video: ದೆಹಲಿ ಏರ್​ಪೋರ್ಟ್​​ನಲ್ಲಿ ಇಂಡಿಗೋ ವಿಮಾನದ ಎದುರು ಕಾಂಗ್ರೆಸ್ ಪ್ರತಿಭಟನೆ; ಪವನ್​ ಖೇರಾರನ್ನು ಕೆಳಗೆ ಇಳಿಸಿದ್ದೇ ಕಾರಣ - Vistara News

ದೇಶ

Video: ದೆಹಲಿ ಏರ್​ಪೋರ್ಟ್​​ನಲ್ಲಿ ಇಂಡಿಗೋ ವಿಮಾನದ ಎದುರು ಕಾಂಗ್ರೆಸ್ ಪ್ರತಿಭಟನೆ; ಪವನ್​ ಖೇರಾರನ್ನು ಕೆಳಗೆ ಇಳಿಸಿದ್ದೇ ಕಾರಣ

ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್​ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ನರೇಂದ್ರ ಗೌತಮ್​ದಾಸ್​ ಮೋದಿ ಎಂದು ವ್ಯಂಗ್ಯ ಮಾಡಿದ್ದರು.

VISTARANEWS.COM


on

Congress Protest in Delhi Airport After Pawan Khera deboarded from Indigo plane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಯ್ಪುರಕ್ಕೆ ಹೊರಟಿದ್ದ ಕಾಂಗ್ರೆಸ್​ ಮುಖಂಡರ ನಿಯೋಗ, ದೆಹಲಿ ಏರ್​ಪೋರ್ಟ್​​ನಲ್ಲಿ ಇಂಡಿಗೊ ವಿಮಾನದ ಎದುರಲ್ಲಿ ಕುಳಿತು ಪ್ರತಿಭಟನೆ (Congress Protest) ನಡೆಸಿದೆ. ಕಾಂಗ್ರೆಸ್​ ನಾಯಕರಾದ ಪವನ್​ ಖೇರಾ, ಕೆ.ಸಿ.ವೇಣುಗೋಪಾಲ್​, ರಣದೀಪ್​ ಸಿಂಗ್ ಸುರ್ಜೇವಾಲಾ, ಸುಪ್ರಿಯಾ ಶ್ರೀನೇತ್​ ಮತ್ತು ಇತರರು ಇಂದು ರಾಯ್ಪುರಕ್ಕೆ ಹೊರಟಿದ್ದರು. ಇಂಡಿಗೊ ವಿಮಾನವನ್ನೂ ಹತ್ತಿದ್ದರು. ಆದರೆ ದೆಹಲಿ ಪೊಲೀಸರ ಸೂಚನೆ ಇದೆ ಎಂಬ ಕಾರಣ ನೀಡಿ, ಕಾಂಗ್ರೆಸ್ ಮುಖಂಡ ಪವನ್​ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಪವನ್​ ಖೇರಾರನ್ನು ವಿಮಾನದಿಂದ ಕೆಳಗೆ ಇಳಿಸುತ್ತಿದ್ದಂತೆ ಕಾಂಗ್ರೆಸ್​ನ ಉಳಿದ ಮುಖಂಡರೂ ಕೆಳಗೆ ಇಳಿದು, ಅಲ್ಲೇ ಕುಳಿತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಶುರು ಮಾಡಿದರು.

ಗೌತಮ್ ಅದಾನಿ ಷೇರು ಕುಸಿತಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪವನ್​ ಖೇರಾ, ಗೌತಮ್ ಅದಾನಿಯವರನ್ನು ನರೇಂದ್ರ ಮೋದಿಯವರೇ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ನರೇಂದ್ರ ದಾಮೋದರ್​ದಾಸ್​ ಮೋದಿ ಅಲ್ಲ, ನರೇಂದ್ರ ಗೌತಮ್​ದಾಸ್​ ಮೋದಿ ಎಂದು ವ್ಯಂಗ್ಯ ಮಾಡಿದ್ದರು. ಅದೇ ಕಾರಣಕ್ಕೆ ಬಿಜೆಪಿ ಈಗ ಪವನ್​ ಖೇರಾ ಅವರು ವಿಮಾನ ಹತ್ತಲು ಬಿಡುತ್ತಿಲ್ಲ. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆ ಎಂಬುದು ಕಾಂಗ್ರೆಸ್​ ಆರೋಪ.

ಕಲ್ಲಿದ್ದಲು ತೆರಿಗೆ ಹಗರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಇ.ಡಿ ಅಧಿಕಾರಿಗಳು ಛತ್ತೀಸ್​ಗಢ್​​ನ ಹಲವು ಕಾಂಗ್ರೆಸ್​ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಮನೆ-ಕಚೇರಿಗಳ ಮೇಲಿನ ಇ.ಡಿ.ರೇಡ್ ವಿರೋಧಿಸಿ ಅಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು, ಪ್ರಮುಖರು ಎಲ್ಲ ಒಗ್ಗೂಡಿ ಇ.ಡಿ.ಕಚೇರಿ ಎದುರು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಪವನ್​ ಖೇರಾ ಮತ್ತು ಇತರ ನಾಯಕರೂ ಕೂಡ ಅಲ್ಲಿಗೇ ತೆರಳುತ್ತಿದ್ದರು. ಆದರೆ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗೆ ಇಳಿಸಿದ ಕಾರಣ, ಉಳಿದವರೂ ಇಳಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: J.P. Nadda: ಮೋದಿ ಸರ್ಕಾರ ಉಚಿತ ಘೋಷಣೆ ಮಾಡಲಿಲ್ಲ; ಅದಕ್ಕೇ ದೇಶ ಉತ್ತಮ ಸ್ಥಿತಿಯಲ್ಲಿದೆ: ಕಾಂಗ್ರೆಸ್‌ ಕುರಿತು ಜೆ.ಪಿ. ನಡ್ಡಾ ಟೀಕೆ

ಕಾಂಗ್ರೆಸ್​​ನಿಂದ ಪ್ರತಿಭಟನೆ

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇತ್​, ‘ನಾವೆಲ್ಲರೂ ರಾಯ್ಪುರಕ್ಕೆ ಹೋಗಲು ಇಂಡಿಗೋ 6ಇ 204 ವಿಮಾನ ಹತ್ತಿ ಕುಳಿತಿದ್ದೆವು. ಆದರೆ ಏಕಾಏಕಿ ನಮ್ಮ ಪವನ್ ಖೇರಾ ಬಳಿ ಬಂದು ವಿಮಾನದಿಂದ ಕೆಳಗೆ ಇಳಿಯುವಂತೆ ಹೇಳಲಾಯಿತು. ಕೇಳಿದ್ದಕ್ಕೆ, ಅವರ ಲಗೇಜ್​ಗೆ ಸಂಬಂಧಪಟ್ಟಂತೆ ಏನೋ ಗೊಂದಲವಾಗಿದೆ ಎಂದು ಹೇಳಿದರು. ಆದರೆ ವಾಸ್ತವದಲ್ಲಿ ಪವನ್​ ಖೇರಾ ಅವರು ಯಾವುದೇ ಲಗೇಜ್​ ಹೊಂದಿರಲೇ ಇಲ್ಲ. ಇನ್ನು ಅವರು ವಿಮಾನದಿಂದ ಇಳಿಯುತ್ತಿದ್ದಂತೆ ಸಿಐಎಸ್​ಎಫ್ (CISF)​​ನಿಂದ ನೋಟಿಸ್ ಕೂಡ ನೀಡಲಾಗಿದೆ. ಯಾರ ಆದೇಶದ ಕಾರಣಕ್ಕೆ? ಯಾವ ನಿಯಮದ ಅಡಿಯಲ್ಲಿ ಹೀಗೆ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇನ್ನೊಂದೆಡೆ ಈ ಬಗ್ಗೆ ಸ್ಪಷ್ಟನೆ ಕೊಟ್ಟ ದೆಹಲಿ ಪೊಲೀಸರು ‘ಪವನ್​ ಖೇರಾ ಅವರಿಗೆ ರಾಯ್ಪುರಕ್ಕೆ ಪ್ರಯಾಣಿಸಲು ಅವಕಾಶ ಕೊಡದಂತೆ, ಅಸ್ಸಾಂ ಪೊಲೀಸರು ನಮಗೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

MDH, Everest Spices: ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

VISTARANEWS.COM


on

MDH, Everest Spices
Koo

ನವದೆಹಲಿ: ಕ್ಯಾನ್ಸರ್‌(Cancer)ಕಾರಕ ರಾಸಾಯನಿಕ ಹೊಂದಿದೆ ಎಂದು ಹಾಂಗ್‌ಕಾಂಗ್‌, ನೇಪಾಳ ಮತ್ತು ಸಿಂಗಾಪುರದಲ್ಲಿ ನಿಷೇಧಿಸ್ಪಟ್ಟಿರುವ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (FSSAI) ಕ್ಲೀನ್‌ಚಿಟ್‌ ನೀಡಿದೆ. ಈ ಎರಡು ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸುಮಾರು 34ಮಾದರಿಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ಸಿಂಗಾಪುರ, ಹಾಂಕಾಂಗ್‌ ಮತ್ತು ಜಪಾನ್‌ನಲ್ಲಿ ಬ್ಯಾನ್‌ ಮಾಡಲಾಗಿತ್ತು.  ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಹೇಳಿತ್ತು. ಅದಾದ ಬಳಿಕ ಹಾಂಕಾಂಗ್‌ನಲ್ಲೂ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ  ಅಮೆರಿಕವೂ ಕ್ರಮಕ್ಕೆ ಮುಂದಾಗಿತ್ತು. ಅಮೆರಿಕದ ಫುಡ್ ಆ್ಯಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್ (Food and Drug Administration) ಎಂಡಿಎಚ್ ಮತ್ತು ಎವರೆಸ್ಟ್‌ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಹಾಗಾಗಿ ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ.

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

ವಿವಾದದ ಬಳಿಕ ಎವರೆಸ್ಟ್ ಸಂಸ್ಥೆ ಪ್ರತಿಕ್ರಿಯಿಸಿ, ʼʼತನ್ನ ಮಸಾಲೆಗಳು ಸೇವನೆಗೆ ಸುರಕ್ಷಿತʼʼ ಎಂದು ಹೇಳಿತ್ತು. ಆದರೆ ಎಂಡಿಎಚ್ ಇದುವರೆಗೆ ತನ್ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ಅಮೆರಿಕ, ಯುರೋಪ್‌, ಇಂಗ್ಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

Continue Reading

ದೇಶ

Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Aam Aadmi Party:ಕೆನಡಾದಲ್ಲಿ BKI ಮುಖಂಡ ಹರ್ಜೀತ್‌ ಸಿಂಗ್‌ ಭಜ್ವಾನನ್ನು ಪಂಜಾಬ್‌ನ ಆಪ್‌ ಶಾಸಕ ಕುಲ್ತಾರ್‌ ಸಿಂಗ್‌ ಸಂದ್ವಾನ್‌ ಭೇಟಿ ಆಗಿ ಮಾತುಕತೆ ನಡೆಸಿರುವ ಫೋಟೋವೊಂದು ಬಹಳ ಸದ್ದು ಮಾಡುತ್ತಿದೆ. ಇವರಿಬ್ಬರು 2022 ಸೆಪ್ಟೆಂಬರ್‌ನಲ್ಲಿ ಕೆನಡಾದ ಮಾಂಟ್ರೀಲ್‌ನಲ್ಲಿ ಭೇಟಿ ಆಗಿದ್ದರು. ಇನ್ನು ಪ್ರತ್ಯಕ್ಷದರ್ಶಿಯ ನೀಡಿರುವ ಮಾಹಿತಿ ಪ್ರಕಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮತ್ತು ದಿಲ್ಲಿ ಮುಖ್ಯಮಂತ್ರಿ ಕೂಡ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.

VISTARANEWS.COM


on

Aam Aadmi Party
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ನಡೆಯುತ್ತಿರುವಾಗಲೇ ಆಮ್‌ ಆದ್ಮಿ ಪಕ್ಷ(Aam Aadmi Party) ದಿನಕ್ಕೊಂದು ವಿವಾದಕೀಡಾಗುತ್ತಿದೆ. ಇದೀಗ ಮತ್ತೊಂದು ವಿವಾದವನ್ನು ಆಪ್‌ ಮೈಮೇಲೆ ಎಳೆದುಕೊಂಡಿದೆ. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಬಬ್ಬರ್‌ ಖಾಲ್ಸಾ(BKI) ಮುಖ್ಯಸ್ಥನ ಜೊತೆ ಪಕ್ಷದ ಮುಖಂಡರು ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಆಪ್‌ ಕೆನಾಡಾ ಮೂಲದಿಂದ ದೇಣಿಗೆ ಸಂಗ್ರಹಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ.

ಕೆನಡಾದಲ್ಲಿ BKI ಮುಖಂಡ ಹರ್ಜೀತ್‌ ಸಿಂಗ್‌ ಭಜ್ವಾನನ್ನು ಪಂಜಾಬ್‌ನ ಆಪ್‌ ಶಾಸಕ ಕುಲ್ತಾರ್‌ ಸಿಂಗ್‌ ಸಂದ್ವಾನ್‌ ಭೇಟಿ ಆಗಿ ಮಾತುಕತೆ ನಡೆಸಿರುವ ಫೋಟೋವೊಂದು ಬಹಳ ಸದ್ದು ಮಾಡುತ್ತಿದೆ. ಇವರಿಬ್ಬರು 2022 ಸೆಪ್ಟೆಂಬರ್‌ನಲ್ಲಿ ಕೆನಡಾದ ಮಾಂಟ್ರೀಲ್‌ನಲ್ಲಿ ಭೇಟಿ ಆಗಿದ್ದರು. ಇನ್ನು ಪ್ರತ್ಯಕ್ಷದರ್ಶಿಯ ನೀಡಿರುವ ಮಾಹಿತಿ ಪ್ರಕಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮತ್ತು ದಿಲ್ಲಿ ಮುಖ್ಯಮಂತ್ರಿ ಕೂಡ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.

BKI ನಿಂದ ಆಪ್‌ಗೆ 5 ಮಿಲಿಯನ್‌ ಡಾಲರ್‌ ದೇಣಿಗೆ

ಮೂಲಗಳ ಮಾಹಿತಿ ಪ್ರಕಾರ, BKI ಆಮ್‌ ಆದ್ಮಿ ಪಕ್ಷಕ್ಕೆ 5 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿತ್ತು. ಇದಕ್ಕೆ ಬದಲಾಗಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಅರೆಸ್ಟ್‌ ಮಾಡದಂತೆ ಆಪ್‌ ಸರ್ಕಾರ ಒಪ್ಪಿತ್ತು. ಭಜ್ವಾ ಕೆನಾಡದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಯಾಗಿದ್ದು, ಪ್ರತ್ಯೇಕ ರಾಷ್ಟ್ರಕ್ಕಾಗಿ ಸಿಖ್ಖರನ್ನು ಪ್ರಚೋದಿಸುವುದೇ ಇವನ ಪ್ರಮುಖ ಕೆಲಸವಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಎದುರು ಈ ಖಲಿಸ್ತಾನಿ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಗಮನಸೆಳೆದಿದ್ದ.

ಇನ್ನು ಆಪ್‌ ವಿದೇಶಿ ದೇಣಿಗೆ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಕೇಸ್‌ ದಾಖಲಿಸಿಕೊಂಡಿತ್ತು.

2014 ಮತ್ತು 2022 ರ ನಡುವೆ ಚುನಾವಣೆಗೆ ಹಣ ನೀಡಲು ಖಲಿಸ್ತಾನಿ ಗುಂಪುಗಳು ಕೇಜ್ರಿವಾಲ್ ಅವರ ಎಎಪಿಗೆ USD 16 ಮಿಲಿಯನ್ (ಅಂದಾಜು 133.54 ಕೋಟಿ ರೂ.) ನೀಡಿವೆ ಎಂದು ಎಸ್‌ಎಫ್‌ಜೆ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನೂನ್ ಹೇಳಿದ್ದ ವೀಡಿಯೊ ಬಹಳ ಸುದ್ದಿ ಆಗಿತ್ತು. ಈ ಹಣಕಾಸಿನ ನೆರವಿನ ಬದಲಾಗಿ ಶಿಕ್ಷೆಗೊಳಗಾದ ಭಯೋತ್ಪಾದಕ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಕೇಜ್ರಿವಾಲ್‌ ಒಪ್ಪಿದ್ದರು ಎಂದೂ ಆತ ಹೇಳಿದ್ದ. ಭುಲ್ಲರ್ 1993 ರಲ್ಲಿ ದೆಹಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದನು, ಆ ದಾಳಿ ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿತು ಮತ್ತು 31 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಪನ್ನುನ್ ಪ್ರಕಾರ, ವಿದೇಶಿ ದೇಣಿಗೆ ಸಂಗ್ರಹಿಸಲು ಕೇಜ್ರಿವಾಲ್ ಮೂರು ತಂಡಗಳನ್ನು ಹೊಂದಿದ್ದು, ಅದರ ಪ್ರಮುಖ ಕಿಂಗ್‌ ಪಿನ್‌ ಸ್ವತಃ ಅವರೇ ಆಗಿದ್ದಾರೆ. ಇನ್ನುಳಿದಂತೆ ತಂಡ 1 ರಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಂದಿನ ಎಎಪಿ ನಾಯಕ ಗುರುಪ್ರೀತ್ ಘುಗ್ಗಿ ಇದ್ದಾರೆ. ಘುಗ್ಗಿ ಅವರು ಬಬ್ಬರ್ ಖಾಲ್ಸಾ ಅಂತರಾಷ್ಟ್ರೀಯ ಕಾರ್ಯಕರ್ತ ರಾಜಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದರು

Continue Reading

ದೇಶ

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

IndiGo Flight: ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

IndiGo Flight
Koo

ಮುಂಬೈ: ಬಸ್‌, ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ನೋಡಿದ್ದೇವೆ. ಹಲವರು ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸುವುದನ್ನು ಗಮನಿಸಿದ್ದೇವೆ. ಇದೀಗ ವಿಮಾನದ ಸರದಿ. ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA)ದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಮುಂಬೈಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight)ದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ (ಮೇ 21) ಟೇಕ್ ಆಫ್ ಆಗುವ ಮೊದಲು ಓವರ್ ಬುಕ್ ಮಾಡಿದ್ದ ಪ್ರಯಾಣಿಕನನ್ನು ಸಿಬ್ಬಂದಿ ಗುರುತಿಸಿದ್ದು, ನಂತರ ಆತನನ್ನು ಇಳಿಸಿ ಸ್ವಲ್ಪ ತಡವಾಗಿ ವಿಮಾನ ಹೊರಡಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ವಿವರ

ಮಂಗಳವಾರ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.50ಕ್ಕೆ ಇಂಡಿಗೊ 6ಇ 6543 (6E 6543) ವಿಮಾನ ಹಾರಲು ಸಿದ್ಧತೆ ನಡೆಸಿತ್ತು. ಇನ್ನೇನು ಹಾರಾಟ ನಡೆಸಬೇಕು ಎನ್ನುವಷ್ಟರಲ್ಲಿ ವಿಮಾನದ ಹಿಂಭಾಗದಲ್ಲಿ ಪುರುಷ ಪ್ರಯಾಣಿಕರೊಬ್ಬ ನಿಂತಿರುವ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಎಚ್ಚರಿಕೆ ನೀಡಿದ್ದರು. ಬಳಿಕ ವಿಮಾನವನ್ನು ನಿಲ್ದಾಣದಲ್ಲೇ ಲ್ಯಾಂಡ್‌ ಮಾಡಲಾಯಿತು.

ಅಧಿಕಾರಿಗಳು ಹೇಳೋದೇನು?

ಘಟನೆಯ ಬಗ್ಗೆ ಮಾತನಾಡಿದ ಇಂಡಿಗೊ ಏರ್‌ಲೈನ್ಸ್‌ ವಕ್ತಾರರು, “ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣ. ವಿಮಾನ ಹೊರಡುವ ಮೊದಲು ದೋಷವನ್ನು ಗಮನಿಸಲಾಯಿತು ಮತ್ತು ನಿಂತಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಇದರಿಂದ ವಿಮಾನದ ನಿರ್ಗಮಕ್ಕೆ ಸ್ವಲ್ಪ ವಿಳಂಬವಾಯಿತು. ಇಂಡಿಗೊ ತನ್ನ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಘಟನೆಗೆ ವಿಷಾಧ ವ್ಯಕ್ತಪಡಿಸುತ್ತದೆʼʼ ಎಂದು ಹೇಳಿದ್ದಾರೆ.

ಸೀಟು ಖಾಲಿ ಇರುವುದನ್ನು ತಪ್ಪಿಸಲು ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಓವರ್ ಬುಕ್ ಮಾಡುತ್ತವೆ. ಹೀಗೆ ಟಿಕೆಟ್‌ ಓವರ್‌ ಬುಕ್‌ ಮಾಡಿದ್ದರಿಂದ ಈ ಎಡವಟ್ಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಈ ವಿಮಾನ 8.41ಕ್ಕೆ ನಿಲ್ದಾಣದಿಂದ ಹೊರಟಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

ನಿಯಮ ಏನು ಹೇಳುತ್ತದೆ?

ಈ ಹಿಂದೆ ಬುಕ್‌ ಮಾಡಲಾದ ಟಿಕೆಟ್‌ನಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಿದ ಘಟನೆಯೂ ನಡೆದಿತ್ತು. ಇನ್ನು 2016ರ ನಿಯಮದ ಪ್ರಕಾರ, ನಿಗದಿತ ವಿಮಾನದ ನಿರ್ಗಮನದ ಒಂದು ಗಂಟೆಯೊಳಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದರೆ ವಿಮಾನಯಾನ ಸಂಸ್ಥೆ ಪರಿಹಾರ ನೀಡಬೇಕಾಗಿಲ್ಲ. ಆದಾಗ್ಯೂ ವಿಮಾನ ಯಾನವು ಬೋರ್ಡಿಂಗ್ ನಿರಾಕರಿಸಿದ 24 ಗಂಟೆಗಳ ಒಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದ್ದರೆ ವಿಮಾನಯಾನ ಇಂಧನ ಶುಲ್ಕದ ಜತೆಗೆ ಕಾಯ್ದಿರಿಸಿದ ಒನ್-ವೇ ಮೂಲ ಶುಲ್ಕದ ಶೇ. 200ರಷ್ಟು ಮೊತ್ತವನ್ನು ಪಾವತಿಸಬೇಕು. ಇದರ ಗರಿಷ್ಠ ಮೊತ್ತ 10,000 ರೂ.

Continue Reading

ದೇಶ

Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

Bangladesh MP Missing: ಅವಾಮಿ ಲೀಗ್‌ ಪಕ್ಷದಿಂದ ಮೂರು ಬಾರಿ ಸಂಸದರಾಗಿ ಗೆದ್ದಿರುವ ಅನ್ವರುಲ್‌ ಅಜೀಂ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಆಗಾಗ ಹೆಚ್ಚಿನ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದರು. ಇದಾದ ಬಳಿಕ ಅವರು ತಮ್ಮ ಕುಟುಂಬಸ್ಥರ ಜತೆ ಸಂಪರ್ಕ ಕಳೆದುಕೊಂಡಿದ್ದಾರೆ. ಅದೂ ಅಲ್ಲದೇ ಮೇ 14 ರ ನಂತರ ಅವರ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ದಿಲ್ಲಿ ಮತ್ತು ಕೋಲ್ಕತ್ತಾದಲ್ಲಿರುವ ತಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿದ್ದಾರೆ

VISTARANEWS.COM


on

Bangladesh MP Missing
Koo

ಕೋಲ್ಕತ್ತಾ: ಚಿಕಿತ್ಸೆಗೆಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ(Kolkata)ಕ್ಕೆ ಚಿಕಿತ್ಸೆಗೆಂದು ಬರುತ್ತಿದ್ದ ಬಾಂಗ್ಲಾದೇಶ(Bangladesh MP Missing)ದ ಸಂಸದನೋರ್ವ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ. ಸಂಸದ ಅನ್ವರುಲ್‌ ಅಜೀಂ(Anwarul Azim) ಮೇ 12ರಂದು ಕೋಲ್ಕತ್ತಾಗೆ ಆಗಮಿಸಿದ್ದರು. ಇದಾದ ಬಳಿಕ ಅವರು ತಮ್ಮ ಕುಟುಂಬಸ್ಥರ ಜೊತೆ ಸಂಪರ್ಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅಜೀಂ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.

ಅವಾಮಿ ಲೀಗ್‌ ಪಕ್ಷದಿಂದ ಮೂರು ಬಾರಿ ಸಂಸದರಾಗಿ ಗೆದ್ದಿರುವ ಅನ್ವರುಲ್‌ ಅಜೀಂ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಆಗಾಗ ಹೆಚ್ಚಿನ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದರು. ಇದಾದ ಬಳಿಕ ಅವರು ತಮ್ಮ ಕುಟುಂಬಸ್ಥರ ಜತೆ ಸಂಪರ್ಕ ಕಳೆದುಕೊಂಡಿದ್ದಾರೆ. ಅದೂ ಅಲ್ಲದೇ ಮೇ 14 ರ ನಂತರ ಅವರ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ದಿಲ್ಲಿ ಮತ್ತು ಕೋಲ್ಕತ್ತಾದಲ್ಲಿರುವ ತಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿದ್ದಾರೆ. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಜೀಂಗಾಗಿ ಹುಡುಕಾಟ ಶುರುವಾಗಿದೆ. ಅಲ್ಲದೇ ಬಾಂಗ್ಲಾದೇಶ ರಾಯಭಾರ ಕಚೇರಿ ಕೂಡ ತನಿಖೆ ಕೈಗೆತ್ತಿಕೊಂಡಿದೆ. ಇದಾಗ್ಯೂ ಅಜೀಂ ಪತ್ತೆಯಾಗಿಲ್ಲ.

ಘಟನೆ ವಿವರ:

ದೀರ್ಘಾಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಜೀಂ ದರ್ಶನಾ ಗಡಿ ಮೂಲಕ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಅದೇ ದಿನ ಬಾರಾನಗರ್‌ನಲ್ಲಿರುವ ಅವರ ಸ್ನೇಹಿತಿ ಗೋಪಾಲ್‌ ಬಿಸ್ವಾಸ್‌ ಮನೆಗೆ ತೆರಳಿದ್ದರು.ಎರಡು ದಿನಗಳ ನಂತರ ಮೇ 14ರಂದು ಅವರು ಸ್ನೇಹಿತನ ಮನೆಯಿಂದ ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಅವತೇ ಅಥವಾ ಮರುದಿನ ವಾಪಾಸ್‌ ಬರುವುದಾಗಿ ಗೋಪಾಲ್‌ ಬಿಸ್ವಾಸ್‌ಗೆ ಅಜೀಂ ಹೇಳಿ ಹೋಗಿದ್ದರು. ಇದಾದ ಬಳಿಕ ಅವರು ವಾಪಾಸ್‌ ಮರಳಿ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಗೋಪಾಲ್‌ ಪೊಲೀಸರಿಗೆ ದೂರು ನೀಡಿ ಘಟನೆ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಅಜೀಂ ಬಾಂಗ್ಲಾದೇಶ ಮಾತ್ರವಲ್ಲದೇ ಭಾರತದ ಸಿಮ್‌ ಕೂಡ ಹೊಂದಿದ್ದಾರೆ. ಅವರ ಎರಡೂ ನಂಬರ್‌ ಸ್ವಿಚ್‌ ಆಫ್‌ ಬರ್ತಿದೆ. ಅವರು ತಮ್ಮ ಜೊತೆಗೆ ತಂದಿದ್ದ ಎಲ್ಲಾ ವಸ್ತುಗಳನ್ನು ತಮ್ಮ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಗೋಪಾಲ್‌ ಹೇಳಿದ್ದಾರೆ. ಮತೊಂದೆಎ ಅಜೀಂ ಪುತ್ರಿ ಮುಮ್ತರಿನ್‌ ಫಿರ್ದೋದ್‌ ತಮ್ಮ ತಂದೆ ಕಣ್ಮರೆ ಆಗಿರುವ ಬಗ್ಗೆ ಢಾಕಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.


Continue Reading
Advertisement
Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್14 mins ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್19 mins ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ24 mins ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್35 mins ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

AR Rahman says his mother thought his Oscar statuettes were made of gold
ಬಾಲಿವುಡ್39 mins ago

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Phone tapping case Let Ashok file a complaint to Home Minister DK Shivakumar hits back at phone tapping allegations
ರಾಜಕೀಯ49 mins ago

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Cannes 2024 Chidananda S Naik bows in Cannes with Kannada folk tale
ಸಿನಿಮಾ58 mins ago

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Turbulence
ವಿದೇಶ1 hour ago

Singapore Airlines: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

MDH, Everest Spices
ದೇಶ2 hours ago

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

drink and drive RTO check
ಬೆಂಗಳೂರು2 hours ago

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ19 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌