Crime News: ದೆಹಲಿ ಪೊಲೀಸ್ ಸಹಾಯಕ ಆಯುಕ್ತರ ಪುತ್ರನನ್ನು ಕೊಂದ ಸ್ನೇಹಿತರು; ಕಾರಣವೇನು? - Vistara News

ದೇಶ

Crime News: ದೆಹಲಿ ಪೊಲೀಸ್ ಸಹಾಯಕ ಆಯುಕ್ತರ ಪುತ್ರನನ್ನು ಕೊಂದ ಸ್ನೇಹಿತರು; ಕಾರಣವೇನು?

Crime News: ದೆಹಲಿ ಪೊಲೀಸ್ ಸಹಾಯಕ ಆಯುಕ್ತ ಯಶ್‌ಪಾಲ್‌ ಸಿಂಗ್‌ ಅವರ ಪುತ್ರ ಲಕ್ಷ್ಯ ಚೌಹಾಣ್ (26) ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಣಕಾಸಿಗೆ ಸಂಬಂಧಿಸಿದ ವಿವಾದವೇ ಕೊಲೆಗೆ ಕಾರಣ ಎನ್ನಲಾಗಿದೆ.

VISTARANEWS.COM


on

crime news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೆಹಲಿ ಪೊಲೀಸ್ ಸಹಾಯಕ ಆಯುಕ್ತ (Delhi Police assistant commissioner) ಯಶ್‌ಪಾಲ್‌ ಸಿಂಗ್‌ ಅವರ ಪುತ್ರ ಲಕ್ಷ್ಯ ಚೌಹಾಣ್ (26) ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್‌ನಲ್ಲಿ ಘಟನೆ ನಡೆದಿದ್ದು, ಇಬ್ಬರು ಸ್ನೇಹಿತರು ಸೇರಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾರೆ. ಮೂವರು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಹರಿಯಾಣಕ್ಕೆ ತೆರಳಿದ್ದರು. ಈ ವೇಳೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime news).

ತಿಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಲಕ್ಷ್ಯ ಚೌಹಾಣ್ ಅವರನ್ನು ಇಬ್ಬರು ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಈ ಪೈಕಿ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ಪರಾರಿಯಾದ ಭಾರದ್ವಾಜ್‌ನ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಯ ಚೌಹಾಣ್ ಜನವರಿ 22ರಂದು ತಮ್ಮಿಬ್ಬರು ಸ್ನೇಹಿತರಾದ ಭಾರದ್ವಾಜ್ ಮತ್ತು ಅಭಿಷೇಕ್ ಅವರೊಂದಿಗೆ ಸೋನೆಪತ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾಗ ಈ ಘಟನೆ ನಡೆದಿತ್ತು. ಲಕ್ಷ್ಯ ಚೌಹಾಣ್ ಮನೆಗೆ ಹಿಂದಿರುಗದ ಕಾರಣ ಎಸಿಪಿ ಯಶ್‌ಪಾಲ್‌ ಸಿಂಗ್ ನಾಪತ್ತೆಯ ದೂರು ದಾಖಲಿಸಿದ್ದರು. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಸ್ನೇಹಿತರ ಮೇಲೆ ಸಂಶಯ ಮೂಡಿತ್ತು.

ಕಾರಣ ಏನು?

ತನಿಖೆಯ ವೇಳೆ ಲಕ್ಷ್ಯ ಚೌಹಾಣ್ ಮತ್ತು ಭಾರದ್ವಾಜ್ ನಡುವಿನ ಹಣಕಾಸಿನ ವಿವಾದವು ಬೆಳಕಿಗೆ ಬಂದಿದೆ. ಕೆಲವು ಸಮಯಗಳ ಹಿಂದೆ ಲಕ್ಷ್ಯ ಚೌಹಾಣ್ ಅವರು ಭಾರದ್ವಾಜ್ ಬಳಿಯಿಂದ ಸಾಲ ಪಡೆದುಕೊಂಡಿದ್ದರು. ಆದರೆ ಮರುಪಾವತಿ ಮಾಡಲು ನಿರಾಕರಿಸುತ್ತಲೇ ಬಂದಿದ್ದರು. ಮಾತ್ರವಲ್ಲ ಮರಳಿ ಕೇಳಿದಾಗೆಲ್ಲ ಕೆಟ್ಟದಾಗಿ ವರ್ತಿಸುತ್ತಿದ್ದರು. ಇದು ಇಬ್ಬರ ನಡುವೆ ವಾದ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಭಾರದ್ವಾಜ್‌ ತನ್ನ ಇನ್ನೊಬ್ಬ ಸ್ನೇಹಿತ ಅಭಿಷೇಕ್‌ ಬಳಿ ಹೇಳಿಕೊಂಡಿದ್ದ. ಹೀಗಾಗಿ ಇಬ್ಬರು ಸೇರಿ ಲಕ್ಷ್ಯ ಚೌಹಾನ್‌ನನ್ನು ಕಾಲುವೆ ತಳ್ಳಿ ಕೊಲೆ ಮಾಡಿದ್ದಾರೆ.

ಘಟನೆ ವಿವರ

ತನಿಖೆಯ ವೇಳೆ ಅಭಿಷೇಕ್‌ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಸೋಮವಾರ ಮಧ್ಯಾಹ್ನ ಭಾರದ್ವಾಜ್ ತನಗೆ ಕರೆ ಮಾಡಿ, ಸೋನಿಪತ್‌ನಲ್ಲಿ ನಡೆಯುವ ವಿವಾಹ ಸಮಾರಭವೊಂದಕ್ಕೆ ತನ್ನ ಮತ್ತು ಚೌಹಾಣ್ ಜತೆ ಭಾಗವಹಿಸುವಂತೆ ಕೇಳಿಕೊಂಡಿದ್ದ. ಅದರಂತೆ ಮೂವರು ಕಾರಿನಲ್ಲಿ ಹೊರಟಿದ್ದರು. ಮದುವೆ ಮುಗಿಸಿ ಹಿಂದಿರುಗುವಾಗ ಮೂತ್ರ ವಿಸರ್ಜನೆಗಾಗಿ ಮುನಾಕ್ ಕಾಲುವೆಯ ಬಳಿ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಭಾರದ್ವಾಜ್ ಮತ್ತು ಅಭಿಷೇಕ್ ಇಬ್ಬರೂ ಸೇರಿ ಚೌಹಾಣ್ ಅವರನ್ನು ಕಾಲುವೆಗೆ ತಳ್ಳಿ ತಮ್ಮ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.

ಇದನ್ನೂ ಓದಿ: Father Kills son : ಕುಡಿಯಲು ಹಣ ಕೊಡದ ಕೋಪ; ಮಗನನ್ನೇ ಗುಂಡಿಕ್ಕಿ ಕೊಂದ ಧೂರ್ತ ತಂದೆ

ಇದೀಗ ಅಭಿಷೇಕ್‌ನನ್ನು ಗುರುವಾರ ನರೇಲಾದಿಂದ ವಶಕ್ಕೆ ಪಡೆಯಲಾಗಿದೆ. “ಚೌಹಾಣ್ ಅವರನ್ನು ಸುಮಾರು 16 ಅಡಿ ಆಳದ ಮುನಾಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ನಾವು ಅಭಿಷೇಕ್‌ನನ್ನು ಬಂಧಿಸಿದ್ದೇವೆ. ಚೌಹಾಣ್ ಅವರ ಶವಕ್ಕಾಗಿ ಶೋಧ ಮುಂದುವರೆದಿದೆ. ಭಾರದ್ವಾಜ್ ಬಂಧನಕ್ಕೆ ಬಲೆ ಬೀಸಿದ್ದೇವೆʼʼ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Terrorist Attack: ಕೆಲವು ದಿನಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದು ಬಿಹಾರದ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಸರ್ಕಾರಿ ನೌಕರ ಮೊಹಮ್ಮದ್ ರಜಾಕ್ ಬಲಿಯಾಗಿದ್ದಾರೆ. ರಾಜೌರಿಯ ಶದ್ರಾ ಶರೀಫ್ ಪ್ರದೇಶದ ಮಸೀದಿಯಿಂದ ಹೊರಬಂದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತರ ಸಹೋದರ ಸೈನಿಕ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Terrorist Attack
Koo

ಶ್ರೀನಗರ: ಜಮ್ಮು-ಕಾಶ್ಮೀರ (Jammu and Kashmir)ದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಭಯೋತ್ಪಾದಕನ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ (Terrorist Attack). ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಸೋಮವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಸರ್ಕಾರಿ ನೌಕರ ಮೊಹಮ್ಮದ್ ರಜಾಕ್ ಬಲಿಯಾಗಿದ್ದಾರೆ. ರಾಜೌರಿಯ ಶದ್ರಾ ಶರೀಫ್ ಪ್ರದೇಶದ ಮಸೀದಿಯಿಂದ ಹೊರಬಂದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

40 ವರ್ಷದ ಮೊಹಮ್ಮದ್ ರಜಾಕ್ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮೃತ ರಝಾಕ್ ಅವರ ಸಹೋದರ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನ ಹತ್ಯೆಗೈದ ಉಗ್ರರು

ಕೆಲವು ದಿನಗಳ ಹಿಂದೆಯಷ್ಟೇ ಬಿಹಾರದ ಕಾರ್ಮಿಕರು ಜಮ್ಮ-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು. ಆ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಏಪ್ರಿಲ್‌ 17ರಂದು ಅನಂತನಾಗ್‌ (Anantnag) ಜಿಲ್ಲೆಯ ಜಬ್ಲಿಪೋರಾ ಗ್ರಾಮದ ಬಳಿ ವಲಸೆ ಕಾರ್ಮಿಕರೊಬ್ಬರನ್ನು (Migrant Worker) ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ (Terrorist Attack) ನಡೆಸಿದ್ದರು. ಗುಂಡಿನ ದಾಳಿಗೆ ಬಿಹಾರ ಮೂಲದ ರಾಜಾ ಶಾಹ್‌ ಎಂಬುವರು ಮೃತಪಟ್ಟಿದ್ದರು.

ಬಿಹಾರ ಮೂಲದ ರಾಜಾ ಶಾಹ್‌ ಅವರು ಕೆಲಸಕ್ಕೆಂದು ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದರು. ಇವರು ಜಬ್ಲಿಪೋರಾ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಉಗ್ರರು ಇವರ ಮೇಲೆ ಗುಂಡಿನ ದಾಳಿ ಮಾಡಿದ್ದು, ಇಡೀ ಕುಟುಂಬವೀಗ ದುಃಖತಪ್ತವಾಗಿದೆ. ರಾಜಾ ಶಾಹ್‌ ಅವರ ಹೊಟ್ಟೆ ಹಾಗೂ ಕುತ್ತಿಗೆಗೆ ಎರಡು ಗುಂಡು ತಗುಲಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿ ಖಂಡಿಸಿದ ಗುಲಾಂ ನಬಿ

ʼʼಬಿಹಾರ ಮೂಲದ ರಾಜಾ ಶಾಹ್‌ ಎಂಬ ವಲಸೆ ಕಾರ್ಮಿಕನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಕಣಿವೆಯಲ್ಲಿ ಇಂತಹ ಉಗ್ರ ಕೃತ್ಯಗಳು ನಿಲ್ಲಬೇಕು. ಕಾಶ್ಮೀರದ ಜನರಿಗೆ ಶಾಂತಿ ಬೇಕಾಗಿದೆ. ಆದರೆ, ಉಗ್ರರಿಗೆ ಶಾಂತಿ ನೆಲೆಸುವುದು ಬೇಕಾಗಿಲ್ಲ. ಇಂತಹ ಕೃತ್ಯಗಳ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕಿದೆ” ಎಂದು ಗುಲಾಂ ನಬಿ ಆಜಾದ್‌ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದಕರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದರು. ಉಗ್ರರ ಗುಂಡಿನ ದಾಳಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ ದಿಲ್​ರಂಜಿತ್​ ಸಿಂಗ್ ಎಂಬುವರು ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ಹೆರ್ಪೊರಾ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಮಿಕರ ರಕ್ಷಣೆ ಮಾಡಿದ್ದರು. ಮೇ 7ರಂದು ಇಲ್ಲಿ ಮತದಾನ ನಡೆಯಲಿದೆ. ಈ ವೇಳೆ ಮತ್ತೆ ಭಯೋತ್ಪಾದಕರ ಹಾವಳಿ ಆರಂಭವಾಗಿದ್ದು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: Azam Cheema: 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ ಅಜಮ್‌ ಚೀಮಾ ಸಾವು

Continue Reading

ದೇಶ

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ

Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ 2023-24 ರ 4 ತ್ರೈಮಾಸಿಕ (2024 ರ ಜನವರಿಯಿಂದ ಮಾರ್ಚ್) ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಪ್ರತಿ ಷೇರಿಗೆ 10 ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಲಾಗಿದೆ. 2024ರ ಜನವರಿಯಿಂದ ಮಾರ್ಚ್ ಅವಧಿಗೆ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂ.ಆಗಿದೆ.

VISTARANEWS.COM


on

Reliance Industries net profit of Rs 18,951 crore, declares interim dividend of Rs 10 per share
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ (Reliance Industries) 2023-24 ರ ನಾಲ್ಕನೇ ತ್ರೈಮಾಸಿಕ (2024 ರ ಜನವರಿಯಿಂದ ಮಾರ್ಚ್) ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಪ್ರತಿ ಷೇರಿಗೆ 10 ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: IPL 2024 : ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಸ್ಪಿನ್ನರ್​ ಯಜ್ವೇಂದ್ರ ಚಹಲ್​

ಮಾರ್ಚ್ 31, 2024ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯಾಚರಣೆಯಿಂದ ಬಂದಂಥ ಏಕೀಕೃತ ಆದಾಯವು 2.40 ಲಕ್ಷ ಕೋಟಿ ರೂಪಾಯಿ ಆಗಿದೆ. ರಿಲಯನ್ಸ್ ವರ್ಷದ ಹಿಂದಿನ ಇದೇ ಅವಧಿಯಲ್ಲಿ (2023ರ ಜನವರಿಯಿಂದ ಮಾರ್ಚ್) 2.16 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಆಗಿನ ಮೊತ್ತಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ. 2024ರ ಜನವರಿಯಿಂದ ಮಾರ್ಚ್ ಅವಧಿಗೆ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 19,299 ಕೋಟಿ ರೂಪಾಯಿ ಬಂದಿತ್ತು.

ಜಿಯೋ ಇನ್ಫೋಕಾಮ್

ರಿಲಯನ್ಸ್ ಜಿಯೋ ನಿವ್ವಳ ಲಾಭ 5,337 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 13 ರಷ್ಟು ಹೆಚ್ಚಳವಾಗಿದೆ. 10.8 ಕೋಟಿಗೂ ಹೆಚ್ಚು ಚಂದಾದಾರರು ಜಿಯೋದ 5ಜಿ ನೆಟ್‌ವರ್ಕ್‌ಗೆ ಬದಲಾಗಿದ್ದಾರೆ. ಇನ್ನು ಜಿಯೋದ ಏರ್ ಫೈಬರ್ ಸೇವೆಯು 5,900 ನಗರಗಳು/ಪಟ್ಟಣಗಳಲ್ಲಿ ಸೇವೆ ಒದಗಿಸುತ್ತಿದೆ. ಜಿಯೋ ಪ್ರತಿ ಗ್ರಾಹಕರಿಂದ ಪಡೆಯುವಂತ ಸರಾಸರಿ ಆದಾಯವು (ಎಆರ್‌ಪಿಯು) 181.7 ರೂ. ಗೆ ಏರಿಕೆಯಾಗಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

ರಿಲಯನ್ಸ್ ರೀಟೇಲ್

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನ ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 11.7ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಬಂದಿದ್ದ 2,415 ಕೋಟಿ ರೂಪಾಯಿಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇಕಡಾ 11.7ರಷ್ಟು ಹೆಚ್ಚಳವಾಗಿ 2,698 ಕೋಟಿ ರೂಪಾಯಿಗೆ ತಲುಪಿದೆ. ಕಾರ್ಯಾಚರಣೆಯಿಂದ ಬರುವಂತ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 9.8 ರಷ್ಟು ಏರಿಕೆಯಾಗಿ, 67,610 ಕೋಟಿ ರೂಪಾಯಿ ಮುಟ್ಟಿದೆ. ಇಷ್ಟು ಉತ್ತಮವಾದ ಫಲಿತಾಂಶ ಬರುವುದಕ್ಕೆ ದಿನಸಿ, ಫ್ಯಾಷನ್, ಲೈಫ್‌ಸ್ಟೈಲ್ ಹಾಗೂ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿನ ಅತ್ಯುತ್ತಮ ಮಾರಾಟ ಕೊಡುಗೆ ನೀಡಿದೆ. ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,60,394 ಕೋಟಿ ರೂಪಾಯಿ ಬಂದಿತ್ತು.

ಮಾಧ್ಯಮ ವ್ಯವಹಾರ

ಮಾಧ್ಯಮ ವ್ಯವಹಾರದಲ್ಲಿ ತ್ರೈಮಾಸಿಕ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 63ರಷ್ಟು ಏರಿಕೆಯಾಗಿದ್ದು, 2,419 ಕೋಟಿ ರೂಪಾಯಿ ಬಂದಿದೆ. ಕ್ರೀಡೆ, ಸಿನಿಮಾ ಹಾಗೂ ಸುದ್ದಿ ವರ್ಟಿಕಲ್‌ಗಳು ಇಂತಹ ಆದಾಯ ತಂದುಕೊಂಡಿದೆ. ಸುದ್ದಿ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಆದಾಯ ಶೇಕಡಾ ಇಪ್ಪತ್ತೈದರಷ್ಟು ಹೆಚ್ಚಾಗಿದೆ. ವಯಾಕಾಮ್ 18 ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 83ರಷ್ಟು ಹೆಚ್ಚಾಗಿದೆ.

ರಿಲಯನ್ಸ್‌ನ ತೈಲದಿಂದ ರಾಸಾಯನಿಕ ತನಕ ವಿಭಾಗದಲ್ಲಿ ಆದಾಯವು ಶೇಕಡಾ 10.9ರಷ್ಟು ಏರಿಕೆಯಾಗಿ, 1,42,634 ಕೋಟಿ ರೂಪಾಯಿ ಬಂದಿದೆ. ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ 16,777 ಕೋಟಿ ರೂ. ಬಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 3ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾದ ಏ.22 ರಂದು ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಪ್ರತಿ ಷೇರಿನ ಮೌಲ್ಯ ದಿನದ ಕೊನೆಗೆ ಬಿಎಸ್ಇಯಲ್ಲಿ 2,960.60 ರೂಪಾಯಿಗೆ ತಲುಪಿದೆ.

Continue Reading

ದೇಶ

Anant-Radhika Wedding: ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ವಿವಾಹ ಸಮಾರಂಭಕ್ಕೆ ಸ್ಥಳ ನಿಗದಿ

Anant-Radhika Wedding: ಕಳೆದ ತಿಂಗಳು ಅದ್ಧೂರಿಯಾಗಿ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕಾರ್ಯಕ್ರಮ ನಡೆದಿತ್ತು. ಜುಲೈಯಲ್ಲಿ ಇವರ ವಿವಾಹ ನಡೆಯಲಿದೆ. ಇದೀಗ ವಿವಾಹ ನಡೆಯಲಿರುವ ಸ್ಥಳದ ಮಾಹಿತಿ ತಿಳಿದು ಬಂದಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ಈ ಪ್ರತಿಷ್ಠಿತ, ವೈಭವದ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Anant-Radhika Wedding
Koo

ನವದೆಹಲಿ: ಇತ್ತೀಚೆಗೆ ಅದ್ಧೂರಿಯಾಗಿ ವಿವಾಹಪೂರ್ವ ಕಾರ್ಯಕ್ರಮ ಆಚರಿಸಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಜುಲೈಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇದೀಗ ಈ ಪ್ರತಿಷ್ಠಿತ ವಿವಾಹ ನಡೆಯುವ ಸ್ಥಳದ ಮಾಹಿತಿ ಬಹಿರಂಗಗೊಂಡಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ (Stoke Park estate)ನಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ (Anant-Radhika Wedding).

ಈಗಾಗಲೇ ಬಾಲಿವುಡ್‌ನ ಖ್ಯಾತ ಕಲಾವಿದರಿಗೆಲ್ಲ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ. ಮದುವೆಯ ಸಿದ್ಧತೆಗಳೆಲ್ಲ ಈಗಾಗಲೇ ಆರಂಭವಾಗಿದ್ದು, ಅನಂತ್‌ ಅವರ ತಾಯಿ ನೀತಾ ಅಂಬಾನಿ ಎಲ್ಲದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಿ ವೆಡ್ಡಿಂಗ್‌ ಕಾರ್ಯಕ್ರಮವನ್ನೂ ನೀತಾ ಅಂಬಾನಿ ಅವರೇ ಯಶಸ್ವಿಯಾಗಿ ನಿರ್ವಹಿಸಿದ್ದರು.

ಸ್ಟೋಕ್ ಪಾರ್ಕ್‌ನಲ್ಲಿ ಆಯೋಜಿಸಲಾಗುವ ಈ ಸಮಾರಂಭದ ಥೀಮ್ ಇನ್ನೂ ಬಹಿರಂಗಗೊಂಡಿಲ್ಲ. ಇಲ್ಲಿ ಕಾಕ್‌ಟೈಲ್‌ ಅಥವಾ ಸಂಗೀತ್ ನೈಟ್ ಆಯೋಜಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಅನಂತ್ ಮತ್ತು ರಾಧಿಕಾ ದುಬೈಯ ಎರಡು ಪ್ರತಿಷ್ಠಿತ ಮಾಲ್‌ಗಳಲ್ಲಿ ಬಿಗಿ ಭದ್ರತೆಯ ನಡುವೆ ಶಾಪಿಂಗ್ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು.

ಅದ್ಧೂರಿ ಪ್ರೀ ವೆಡ್ಡಿಂಗ್‌

ಗುಜರಾತ್‌ನ ಜಾಮ್‌ನಗರದಲ್ಲಿ ಕಳೆದ ತಿಂಗಳು ಅದ್ಧೂರಿ ಪ್ರೀ ವೆಡ್ಡಿಂಗ್‌ ಸಮಾರಂಭ ಆಯೋಜಿಸಲಾಗಿತ್ತು. ಅಂದಾಜು 12,00 ಕೋಟಿ ರೂ.ಗಳಲ್ಲಿ ಈ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ಗಣ್ಯರ ಉಪಸ್ಥಿತಿ, ಬಾಲಿವುಡ್‌ ನಟ-ನಟಿಯರ ಹಾಡು, ನೃತ್ಯ, ಮೋಜು-ಮಸ್ತಿಯನ್ನು ಆಯೋಜಿಸಲಾಗಿತ್ತು. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಅನಂತ್ ಮತ್ತು ರಾಧಿಕಾ ಅವರ ವಿವಾಹ ನಿಶ್ಚಿತಾರ್ಥ ಆಪ್ತರ ಸಮ್ಮುಖದಲ್ಲಿ 2023ರ ಜನವರಿಯಲ್ಲಿ ಮುಂಬೈಯಲ್ಲಿ ಸಾಂಪ್ರದಾಯಿಕವಾಗಿ ನಡೆದಿತ್ತು. ವಿವಾಹ ನಡೆಯಲಿರುವ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ ಸುಮಾರು 900 ವರ್ಷಗಳ ಇತಿಹಾಸ ಹೊಂದಿದ್ದು, ಈ ಐತಿಹಾಸಿಕ ಸ್ಥಳದಲ್ಲಿ ಬಹಳ ವಿಶೇಷ ರೀತಿಯಲ್ಲೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಧು ಮೂಲಗಳು ಹೇಳಿವೆ.

ಇದನ್ನೂ ಓದಿ: Anant Ambani wedding: 2500 ಐಟಂ, 20 ಲೇಡಿ ಶೆಫ್‌ಗಳು… ಇನ್ನೂ ಇದೆ ಅನಂತ್‌ ಅಂಬಾನಿ- ರಾಧಿಕಾ ಮದುವೆ ವಿಶೇಷ!

ಜಾಮ್‌ನಗರದ ವಿಶೇಷತೆ

ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭ ನಡೆದ ಜಾಮ್‌ನಗರಕ್ಕೂ ಅಂಬಾನಿ ಕುಟುಂಬಕ್ಕೂ ಬಿಡಿಸಲಾರದ ನಂಟಿದೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಅನಂತ್‌ ಈ ಹಿಂದೆ ತಿಳಿಸಿದ್ದರು.

Continue Reading

Lok Sabha Election 2024

Lok Sabha Election: ರಾಜಕೀಯ ಕುಟುಂಬಗಳಿಂದ ರಾಜಮನೆತನದವರೆಗೆ; ಬಿಜೆಪಿಯಿಂದ 68 ಮಹಿಳೆಯರು ಕಣಕ್ಕೆ

Lok Sabha election 2024: ಹಿಂದಿನ ಸಾಲಿಗಿಂತ ಈ ಬಾರಿ ಬಿಜೆಪಿ ಹೆಚ್ಚಿನ ಮಹಿಳೆಯರನ್ನು ಲೋಕಸಭಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಆದರೆ ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕುಟುಂಬ ರಾಜಕಾರಣದಿಂದ ಬಂದವರು. ಇವರಲ್ಲಿ ಪ್ರಮುಖರು ಯಾರಿದ್ದಾರೆ. ಈ ಕುರಿತ ಚಿತ್ರಣ ಇಲ್ಲಿದೆ.

VISTARANEWS.COM


on

By

Lok Sabha election-2024
Koo

ನವದೆಹಲಿ: ಲೋಕಸಭಾ ಚುನಾವಣೆ-2024ರಲ್ಲಿ (Lok Sabha election 2024) ಬಿಜೆಪಿ (bjp) ಈ ಬಾರಿ ಹಿಂದೆಂದಿಗಿಂತ ಹೆಚ್ಚು ಮಹಿಳೆಯರನ್ನು ಕಣಕ್ಕೆ ಇಳಿಸಿದೆ. ಆದರೂ ಈ ಪ್ರಮಾಣ ಶೇ. 16 ಮಾತ್ರ. ಇವರಲ್ಲಿ ಅರ್ಧದಷ್ಟು ಮಂದಿ ರಾಜಕೀಯ ಕುಟುಂಬಗಳ (political families) ಹಿನ್ನೆಲೆಯಿಂದ ಬಂದವರು. ಬಿಜೆಪಿ 417 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇವರಲ್ಲಿ ಕೇವಲ 68 ಮಂದಿ ಮಹಿಳೆಯರಿದ್ದಾರೆ. ಬಿಜೆಪಿಯ ಮಹಿಳಾ ಅಭ್ಯರ್ಥಿಗಳ ಪಟ್ಟಿಯಲ್ಲಿ 40 ಮಂದಿ ಆಳವಾಗಿ ಬೇರೂರಿರುವ ರಾಜಕೀಯ ಸಂಪರ್ಕ ಹೊಂದಿರುವ ಕುಟುಂಬಗಳಿಂದ ಬಂದವರಾಗಿದ್ದಾರೆ.

ಬಿಜೆಪಿಯು 417 ಸಂಸದೀಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ 68 ಮಂದಿ ಶೇ. 16ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಪಕ್ಷವು 2009ರಲ್ಲಿ 45, 2014ರಲ್ಲಿ 38 ಮತ್ತು 2019ರಲ್ಲಿ 55 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

ಕಣದಲ್ಲಿರುವ ಪ್ರಮುಖ ಮಹಿಳೆಯರು ಯಾರು?

ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ , ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಸೀತಾ ಸೊರೆನ್, ಮಾಜಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ, ಮಾಜಿ ಸಂಸದ ನಾಥೂರಾಂ ಮಿರ್ಧಾ ಅವರ ಮೊಮ್ಮಗಳು ಜ್ಯೋತಿ ಮಿರ್ಧಾ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಶಾಸಕ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ, ಮಾಜಿ ಕಲಹಂಡಿ ಸಂಸದ ಅರ್ಕಾ ಕೇಶರಿ ದೇವ್ ಅವರ ಪತ್ನಿ ಮಾಳವಿಕಾ ದೇವಿ, ತಿಪ್ರಾ ಮೋಥಾ ಪಕ್ಷದ ಸಂಸ್ಥಾಪಕ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರ ಸಹೋದರಿ ಕೃತಿ ಸಿಂಗ್ ದೆಬ್ಬರ್ಮಾ ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಬಿಜೆಪಿಯ ಪ್ರಮುಖ ಮಹಿಳಾ ಅಭ್ಯರ್ಥಿಗಳು.

ಕಣದಲ್ಲಿರುವ ಪ್ರಮುಖರು

ಸೀತಾ ಸೊರೆನ್ ರಾಜಕೀಯ ಕುಟುಂಬದಿಂದ ಬಂದವರಾದರೂ ಒಂದು ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದೇ ಶಕ್ತಿಯೊಂದಿಗೆ ಕಣಕ್ಕೆ ಇಳಿದಿದ್ದೇನೆ ಎಂದು ತಿಳಿಸಿದ್ದಾರೆ.

ರಾಜಮಂಡ್ರಿಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವೆ ಮತ್ತು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ. ಪುರಂದೇಶ್ವರಿ ಅವರು ಪ್ರಸಿದ್ಧ ನಟ ಮತ್ತು ಎನ್‌.ಟಿ. ರಾಮರಾವ್ ಅವರ ಪುತ್ರಿ.

ಮಹಾರಾಷ್ಟ್ರದಲ್ಲಿ ಆರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು ಹಾಲಿ ಸಂಸದೆ ಭಾರತಿ ಪವಾರ್ ಮತ್ತೆ ದಿಂಡೂರಿನಲ್ಲಿ ಸ್ಪರ್ಧಿಸಿದ್ದಾರೆ. ಇವರ ಮಾವ ಎಂಟು ಬಾರಿ ಶಾಸಕರಾಗಿದ್ದರು ಮತ್ತು ಮಹಾರಾಷ್ಟ್ರ ಸಚಿವರಾಗಿದ್ದರು. ಮಗ ಕೂಡ ಶಾಸಕರಾಗಿದ್ದಾರೆ.

ಬಿಜೆಪಿ ಸಂಸದೆ, ಆರು ಬಾರಿ ಶಾಸಕ ಮತ್ತು ಬುಡಕಟ್ಟು ನಾಯಕರಾಗಿದ್ದ ವಿಜಯ್ ಗವಿತ್ ಅವರ ಪುತ್ರಿ ಹೀನಾ ಗವಿತ್ ಈಗ ನಂದೂರ್ಬಾರ್‌ನಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ, ಹಿರಿಯ ನಾಯಕಿ ಪಂಕಜಾ ಮುಂಡೆ ಬೀಡಿನಿಂದ ಸ್ಪರ್ಧಿಸುತ್ತಿದ್ದಾರೆ.

ಸಂಸದೆ ರಕ್ಷಾ ಖಡ್ಸೆ ಮತ್ತೆ ರೇವರ್ ನಿಂದ ಸ್ಪರ್ಧಿಸಿದ್ದಾರೆ. ಇವರ ಮಾವ ಏಕನಾಥ್ ಖಾಡ್ಸೆ 2020ರಲ್ಲಿ ಬಿಜೆಪಿ ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲಿದ್ದಾರೆ.

ಜಲಗಾಂವ್‌ನಲ್ಲಿ ಎಂಎಲ್ಸಿ ಸ್ಮಿತಾ ವಾಘ್ ಅವರನ್ನು ಕಣಕ್ಕಿಳಿಸಲು ಹಾಲಿ ಸಂಸದ ಉನ್ಮೇಶ್ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅವರ ಪತಿ ಉದಯ್ ವಾಘ್ ಬಿಜೆಪಿ ಜಲಗಾಂವ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಮರಾವತಿಯಿಂದ ಹಾಲಿ ಸಂಸದ ನವನೀತ್ ರಾಣಾ ಮತ್ತೆ ಸ್ಪರ್ಧಿಸಿದ್ದಾರೆ.

ಹೊಸ ಮುಖವಾಗಿರುವ ಅನಿತಾ ಅವರ ಪತಿ ಮಧ್ಯಪ್ರದೇಶದ ಅರಣ್ಯ ಸಚಿವ ಮತ್ತು ಮೂರು ಬಾರಿ ಶಾಸಕ ನಗರ್ ಸಿಂಗ್ ಚೌಹಾಣ್. ಮತ್ತೊಂದು ಹೊಸ ಮುಖ ಲತಾ ವಾಂಖೆಡೆ ಸಾಗರ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಅವರ ಪತಿ ನಂದಕಿಶೋರ್ ಅಲಿಯಾಸ್ ಗುಡ್ಡು ವಾಂಖೆಡೆ ಕೂಡ ರಾಜಕೀಯದಲ್ಲಿದ್ದಾರೆ.

ಬಿಜೆಪಿ ಸಂಸದ ಹಿಮಾದ್ರಿ ಸಿಂಗ್ – ಮಾಜಿ ಸಂಸದರಾದ ದಲ್ವಿರ್ ಸಿಂಗ್ ಮತ್ತು ರಾಜೇಶ್ ನಂದಿನಿ ಸಿಂಗ್ ಅವರ ಪುತ್ರಿ ಶಹದೋಲ್‌ನಿಂದ ಮತ್ತೊಂದು ಅವಧಿಯನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಪತಿ ನರೇಂದ್ರ ಮರಾವಿ ಕೂಡ ಬಿಜೆಪಿ ನಾಯಕರಾಗಿದ್ದಾರೆ.

ರಾಜಮನೆತನದವರು

2019 ರಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಇದುವರೆಗೆ ಐದು ಮಹಿಳಾ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ದೇವಿ ಜಾತವ್ (ಧೋಲ್ಪುರ್ ಕರೌಲಿ), ಪ್ರಿಯಾಂಕಾ ಬಾಲನ್ (ಶ್ರೀಗಂಗಾನಗರ), ಮಂಜು ಶರ್ಮಾ (ಜೈಪುರ), ಜ್ಯೋತಿ ಮಿರ್ಧಾ (ನಾಗೌರ್) ಮತ್ತು ಮಹಿಮಾ ವಿಶ್ವರಾಜ್ ಸಿಂಗ್ (ರಾಜಸಮಂದ್). ಮಹಿಮಾ ವಿಶ್ವರಾಜ್ ಸಿಂಗ್ ಮೇವಾರ್‌ನ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.

ಮಾಳವಿಕಾ ಕೇಶರಿ ದೇವ್ ಅವರು ಕಲಹಂಡಿ ಜಿಲ್ಲೆಯ ಹಿಂದಿನ ರಾಜಮನೆತನದ ಸಂಪರ್ಕವನ್ನು ಹೊಂದಿದ್ದಾರೆ. 2019ರಲ್ಲಿ ಅಸ್ಕಾದಿಂದ ಸ್ಪರ್ಧಿಸಿ ಸೋತಿದ್ದ ಅನಿತಾ ಪ್ರಿಯದರ್ಶಿನಿ ಮತ್ತೆ ಅದೇ ಸ್ಥಾನದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ರಾಜಕೀಯ ಹಿನ್ನೆಲೆಯುಳ್ಳವರು

ಜಾರ್ಖಂಡ್ ಮೂರು ಮಹಿಳಾ ಅಭ್ಯರ್ಥಿಗಳಾದ ಸೀತಾ ಸೊರೆನ್, ಗೀತಾ ಕೊಡ ಮತ್ತು ಅನ್ನಪೂರ್ಣ ದೇವಿ ಅವರು ದುಮ್ಕಾ, ಸಿಂಗ್‌ಭೂಮ್ ಮತ್ತು ಕೊಡರ್ಮಾದಿಂದ ಸ್ಪರ್ಧಿಸಿದ್ದಾರೆ. ಈ ಮೂವರೂ ಅಭ್ಯರ್ಥಿಗಳು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ರೇಖಾ ವರ್ಮಾ (ಧಾರುಹರ) ಮತ್ತು ಮೇನಕಾ ಗಾಂಧಿ (ಸುಲ್ತಾನ್‌ಪುರ) ಕೂಡ ರಾಜಕೀಯದಲ್ಲಿ ಕುಟುಂಬ ಸದಸ್ಯರನ್ನು ಹೊಂದಿದ್ದರು. ಹಿಂದಿನವರು 2014 ರಿಂದ ಧರುಹರಾದಿಂದ ಹಾಲಿ ಸಂಸದರಾಗಿದ್ದರೆ, ನಂತರದವರು 1989ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.

Continue Reading
Advertisement
Shakti Scheme
ಕರ್ನಾಟಕ3 hours ago

Shakti Scheme: ಸಿಎಂ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ಹಾರ ಅರ್ಪಣೆ; ಕಾನೂನು‌ ವಿದ್ಯಾರ್ಥಿನಿಯಿಂದ ವಿಭಿನ್ನವಾಗಿ ಕೃತಜ್ಞತೆ

IPL 2024
ಕ್ರೀಡೆ3 hours ago

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

Gurulinga Shivacharya Swamiji
ಕರ್ನಾಟಕ3 hours ago

Gurulinga Shivacharya Swamiji: ಕಾರು ಅಪಘಾತದಲ್ಲಿ ಬಂಗರಗಾ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Actor Darshan election campaign for Mandya Lok Sabha constituency Congress candidate star Chandru
ಮಂಡ್ಯ4 hours ago

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ನೀಡಿ, ಗೆಲ್ಲಿಸಿ: ನಟ ದರ್ಶನ್ ಮನವಿ

Tulsi Gowda
ಪ್ರಮುಖ ಸುದ್ದಿ4 hours ago

Tulsi Gowda: ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ

IPL 2024
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

Terrorist Attack
ದೇಶ4 hours ago

Terrorist Attack: ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿ

Reliance Industries net profit of Rs 18,951 crore, declares interim dividend of Rs 10 per share
ದೇಶ4 hours ago

Reliance Industries: ರಿಲಯನ್ಸ್ ಇಂಡಸ್ಟ್ರೀಸ್‌ಗೆ 18,951 ಕೋಟಿ ರೂ. ನಿವ್ವಳ ಲಾಭ; ಷೇರಿಗೆ 10 ರೂ. ಮಧ್ಯಂತರ ಲಾಭಾಂಶ

Hardik Pandya
ಪ್ರಮುಖ ಸುದ್ದಿ4 hours ago

Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

Rain News
ಕರ್ನಾಟಕ4 hours ago

Rain News: ಪ್ರತ್ಯೇಕ ಮಳೆ ಅವಘಡ; ಬೀದರ್‌ನಲ್ಲಿ ಸಿಡಿಲು ಬಡಿದು ಇಬ್ಬರು ಯುವಕರ ದುರ್ಮರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru karaga 2024
ಬೆಂಗಳೂರು10 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ11 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು14 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು15 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ22 hours ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20242 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

ಟ್ರೆಂಡಿಂಗ್‌