ದೆಹಲಿಯ ಅಶಿಸ್ತಿನ ಕೌನ್ಸಿಲರ್​​ಗಳು ಇವರು; ಹೊಡೆದಾಟ ಮಾಡಿಕೊಂಡು ಸುಸ್ತಾಗಿ ಪಾಲಿಕೆಯಲ್ಲೇ ಮಲಗಿದರು, ಮತ್ತೆ ಎದ್ದು ಜಗಳವಾಡಿದರು! - Vistara News

ದೇಶ

ದೆಹಲಿಯ ಅಶಿಸ್ತಿನ ಕೌನ್ಸಿಲರ್​​ಗಳು ಇವರು; ಹೊಡೆದಾಟ ಮಾಡಿಕೊಂಡು ಸುಸ್ತಾಗಿ ಪಾಲಿಕೆಯಲ್ಲೇ ಮಲಗಿದರು, ಮತ್ತೆ ಎದ್ದು ಜಗಳವಾಡಿದರು!

ಇಂದು ಮುಂಜಾನೆಯೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಆದರೆ ರಹಸ್ಯ ಮತದಾನದ ವೇಳೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್​ಗಳು ಬಂದು ಫೋಟೋ ತೆಗೆದಿದ್ದಾರೆ. ಹಾಗಾಗಿ ಈ ಮತದಾನವನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕು ಎಂದು ಬಿಜೆಪಿಗರು ಆಗ್ರಹಿಸಿದರು. ಎರಡೂ ಪಕ್ಷಗಳ ನಡುವೆ ಹೊಡೆದಾಟಕ್ಕೆ ಕಾರಣವಾಯಿತು.

VISTARANEWS.COM


on

Delhi councillors sleep inside MCD House After Fight
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೆಹಲಿ ಮಹಾನಗರ ಪಾಲಿಕೆ (Delhi MCD) ಚುನಾವಣೆ ಡಿಸೆಂಬರ್​​ನಲ್ಲಿ ಮುಕ್ತಾಯವಾದಾಗಿನಿಂದಲೂ ಆಪ್​ ಮತ್ತು ಬಿಜೆಪಿ ಕಿತ್ತಾಟ ನಡೆಯುತ್ತಲೇ ಇದೆ. ಮೇಯರ್​ ಆಯ್ಕೆ ಚುನಾವಣೆ ಸಂಬಂಧ ಹೊಡೆದಾಟ-ಗಲಾಟೆ ನಡೆದು ಅಂತಿಮವಾಗಿ ಫೆ.22ರಂದು ಮೇಯರ್​ ಆಯ್ಕೆಯೂ ಆಯಿತು. ಅದರ ಬೆನ್ನಲ್ಲೇ ಇಂದು ಸ್ಥಾಯಿ ಸಮಿತಿಗೆ ಆರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದಾಗ ಕೂಡ ಆಪ್​ ಮತ್ತು ಬಿಜೆಪಿ ಕೌನ್ಸಿಲರ್​ಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಸ್ಪರರು ಗುದ್ದಾಡಿಕೊಂಡು-ತಳ್ಳಾಡಿದ್ದಾರೆ. ಹೀಗೆ ಹೊಡೆದಾಟ ಮಾಡಿ, ಸುಸ್ತಾಗಿ ಪಾಲಿಕೆಯ ಸದನದೊಳಗೇ ಮಲಗಿ ನಿದ್ದೆ ಹೋಗಿದ್ದಾರೆ. ನಿದ್ದೆಯಿಂದ ಎದ್ದವರು ಮತ್ತೆ ಜಗಳ ಮಾಡಿಕೊಂಡಿದ್ದಾರೆ.

ಇಂದು ಮುಂಜಾನೆಯೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಆದರೆ ರಹಸ್ಯ ಮತದಾನದ ವೇಳೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್​ಗಳು ಬಂದು ಫೋಟೋ ತೆಗೆದಿದ್ದಾರೆ. ಹಾಗಾಗಿ ಈ ಮತದಾನವನ್ನು ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕು ಎಂದು ಬಿಜೆಪಿಗರು ಆಗ್ರಹಿಸಿದರು. ಅದೇ ಒಂದು ನೆಪವಾಗಿ ಎರಡೂ ಪಕ್ಷಗಳ ಕೌನ್ಸಿಲರ್​ಗಳು ಹಲ್ಲೆ ಮಾಡಿಕೊಂಡರು. ಅದರಲ್ಲೂ ಮಹಿಳಾ ಕೌನ್ಸಿಲರ್​ಗಳೇ ಮುಂದೆ ಬಂದು ಗುದ್ದಾಡಿಕೊಂಡು, ತಳ್ಳಾಡಿದ್ದಾರೆ. ಅದರಲ್ಲಿ ಕೆಲವರು ಕೆಳಗೆ ಕೂಡ ಬಿದ್ದಿದ್ದಾರೆ. ಈ ಮಧ್ಯೆ ಆಪ್​​ನ ಮೇಯರ್​ ಶೆಲ್ಲಿ ಒಬೆರಾಯ್​ ಕೂಡ ಬಿಜೆಪಿ ಕೌನ್ಸಿಲರ್​ಗಳ ವಿರುದ್ಧ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: Delhi MCD: ದೆಹಲಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಆಪ್​-ಬಿಜೆಪಿ ಮಾರಾಮಾರಿ; ಗುದ್ದಾಡಿ, ತಳ್ಳಾಡಿಕೊಂಡ ಕೌನ್ಸಿಲರ್​​ಗಳು

ಇಂದು ಬೆಳಗ್ಗೆ ಪಾಲಿಕೆಯಲ್ಲಿ ಆಪ್​-ಬಿಜೆಪಿ ಜಗಳ ಶುರುವಾಗಿ, ಅದು ಹೊಡೆದಾಟದ ಹಂತಕ್ಕೆ ಹೋಗುತ್ತಿದ್ದಂತೆ ಮೇಯರ್ ಶೆಲ್ಲಿ, ಸಭೆಯನ್ನು ಮುಂದೂಡಿದ್ದರು. ಅಷ್ಟಾದ ಮೇಲೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತೋ, ಇಲ್ಲವೋ? ಸದಸ್ಯರು ಆಯ್ಕೆಯಾದರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಅದೇನೇ ಆಗಲಿ, ಇವತ್ತೇ ಚುನಾವಣೆ ನಡೆಸುತ್ತೇವೆ ಎಂದು ಆಪ್​ ಹೇಳಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Costly wedding gift: ಮಗನಿಗೆ ಬಂಗಲೆ, ಸೊಸೆಗೆ ನೆಕ್ಲೇಸ್ ಗಿಫ್ಟ್‌ ಕೊಟ್ಟ ಅಂಬಾನಿ; ಬೆಲೆ ಕೇಳಿದರೆ ಅಚ್ಚರಿ!

Costly wedding gift: ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ವಿಶ್ವದ ಗಮನ ಸೆಳೆದಿರುವ ಉದ್ಯಮಿ ಮುಕೇಶ್, ನೀತಾ ಅಂಬಾನಿ ಇದೀಗ ದುಬಾರಿ ಉಡುಗೊರೆಗಳನ್ನು ನೀಡಿ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾರೆ.

VISTARANEWS.COM


on

By

Costly wedding gift
Koo

ಭಾರತದ (India) ಅತ್ಯಂತ ಶ್ರೀಮಂತ ಹಾಗೂ ವಿಶ್ವದ (world) 11ನೇ ಶ್ರೀಮಂತ ವ್ಯಕ್ತಿಯಾಗಿರುವ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ( Nita Ambani ) ಅವರ ಕೊನೆಯ ಪುತ್ರ ಅನಂತ್ ಅಂಬಾನಿ (Anant Ambani) ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆದಿತ್ತು. ಸುಮಾರು 1,259 ಕೋಟಿ ರೂ .ಖರ್ಚು ಮಾಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಕೇಶ್, ನೀತಾ ದಂಪತಿ ತಮ್ಮ ಮಕ್ಕಳಿಗೆ ಮದುವೆಯ ಉಡುಗೊರೆಯಾಗಿ (Costly wedding gift) ಏನು ಕೊಟ್ಟಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಮುಕೇಶ್ ಮತ್ತು ನೀತಾ ತಮ್ಮ ಮಕ್ಕಳಿಗಾಗಿ ಖರ್ಚು ಮಾಡುವಾಗ ಯಾವುದೇ ರೀತಿಯಲ್ಲಿ ಉಳಿತಾಯದ ಕಡೆ ಗಮನ ಹರಿಸುವುದಿಲ್ಲ. ಅವರು ಧಾರಾಳವಾಗಿ ಖರ್ಚುಗಳನ್ನು ಮಾಡುತ್ತಾರೆ ಎಂಬುದನ್ನು ಅನಂತ್ ಅಂಬಾನಿಯ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಮುಕೇಶ್, ನೀತಾ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಗಮನ ಸೆಳೆದಿದ್ದರು. ಇದೀಗ ಅವರ ಕಿರಿಯ ಸಹೋದರ ಅನಂತ್ ಅಂಬಾನಿ ಇತ್ತೀಚೆಗೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಪತ್ಯ ಜೀವನ ಪ್ರವೇಶ ಮಾಡುವುದನ್ನು ಘೋಷಿಸಿದ್ದರು. ಕಳೆದ ಜುಲೈ ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅನಂತ್, ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಮಾರ್ಚ್ ನಲ್ಲಿ ನಡೆಯಿತು. ಇದಕ್ಕಾಗಿ ಸುಮಾರು 1259 ಕೋಟಿ ರೂ. ಖರ್ಚು ಮಾಡಲಾಗಿತ್ತು.

ಇದನ್ನೂ ಓದಿ: Mukesh Ambani: ಪತ್ನಿ ನೀತಾ ಹಣೆಗೆ ಮುತ್ತಿಟ್ಟ ಮುಕೇಶ್ ಅಂಬಾನಿ: ರೊಮ್ಯಾಂಟಿಕ್‌ ಫೋಟೊಗಳು ವೈರಲ್‌!

ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಾಗಿ ಜಾಗತಿಕ ಐಕಾನ್ ರಿಹಾನ್ನಾ ಅವರನ್ನು ಕರೆದುಕೊಂಡು ಬರಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕಾಗಿ ಅವರು 66- 74 ಕೋಟಿ ರೂ. ಪಡೆದಿದ್ದರು. ಇನ್ನು ಮುಂದಿನ ಜುಲೈನಲ್ಲಿ ನಡೆಯುವ ವಿವಾಹ ಸಮಾರಂಭಕ್ಕಾಗಿ ಅಂಬಾನಿ ಕುಟುಂಬ ಮದುವೆ ವೆಚ್ಚವನ್ನು ದ್ವಿಗುಣಗೊಳಿಸಲು ಸಿದ್ಧರಾಗಿದ್ದಾರೆ.

ಅಂಬಾನಿ ಕುಟುಂಬದ ಇಶಾ ಅಂಬಾನಿಯ ಪತಿ ಆನಂದ್ ಪಿರಮಾಲ್ ಅವರು ಪಿರಮಲ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರು, ಹಾಗೆಯೇ ಆಕಾಶ್ ಅಂಬಾನಿಯ ಪತ್ನಿ ಶ್ಲೋಕಾ ಮೆಹ್ತಾ ಅವರು ವಜ್ರದ ಸಂಪತ್ತಿನ ವಾರಸುದಾರರು. ಅನಂತ್ ಅಂಬಾನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್ ಎನ್ಕೋರ್ ಹೆಲ್ತ್‌ಕೇರ್‌ನ ನಿರ್ದೇಶಕರಾಗಿದ್ದಾರೆ.

ಭವ್ಯವಾದ ಸಂಪ್ರದಾಯದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಕ್ಕಳಿಗೆ ಹಲವು ವಿಶೇಷ ಮತ್ತು ದುಬಾರಿ ಉಡುಗೊರೆಗಳನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ.


ಅನಂತ್ ಅಂಬಾನಿಗಾಗಿ ಬೀಚ್-ವಿಲ್ಲಾ

ಅನಂತ್ ಅಂಬಾನಿಗಾಗಿ ದುಬೈನಲ್ಲಿ 640 ಕೋಟಿ ರೂ. ಮೌಲ್ಯದ ಬೀಚ್-ವಿಲ್ಲಾವನ್ನು ಖರೀದಿ ಮಾಡಿದ್ದಾರೆ ಮುಕೇಶ್. 2022ರ ಏಪ್ರಿಲ್ ನಲ್ಲಿ ಮುಕೇಶ್ ಅಂಬಾನಿ ತನ್ನ ಕಿರಿಯ ಮಗ ಅನಂತ್‌ಗಾಗಿ ದುಬೈನ ದುಬಾರಿ ಜಿಲ್ಲೆಯಾದ ಪಾಮ್ ಜುಮೇರಾದಲ್ಲಿ ವಿಸ್ತಾರವಾದ ಬೀಚ್‌ಫ್ರಂಟ್ ವಿಲ್ಲಾವನ್ನು ಖರೀದಿ ಮಾಡಿದ್ದರು. ಇದು 10 ಬೆಡ್‌ರೂಮ್‌ಗಳನ್ನು ಹೊಂದಿದೆ. 70 ಮೀಟರ್‌ಗಳಷ್ಟು ವ್ಯಾಪಿಸಿರುವ ಖಾಸಗಿ ಬೀಚ್‌ ಅನ್ನು ಒಳಗೊಂಡಿರುವ ಇದರ ಮೌಲ್ಯ 640 ಕೋಟಿ ರೂ.


ಶ್ಲೋಕಾ ಮೆಹ್ತಾಗೆ 451 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್

2019 ರಲ್ಲಿ ಶ್ಲೋಕಾ ಮೆಹ್ತಾ ಅವರೊಂದಿಗೆ ಆಕಾಶ್ ಅಂಬಾನಿ ಅವರ ವಿವಾಹದ ಸಂದರ್ಭದಲ್ಲಿ ನೀತಾ ಅಂಬಾನಿ ಅವರು ತಮ್ಮ ಸೊಸೆಗೆ ಮೌವಾದ್ ಎಲ್ ಅಪರೂಪದ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಮೌಲ್ಯ 451 ಕೋಟಿ ರೂ. 407.48 ಕ್ಯಾರೆಟ್ ಹಳದಿ ವಜ್ರವನ್ನು 18 ಕಾರಟ್ ಗುಲಾಬಿ ಚಿನ್ನದ ಕವಲುಗಳೊಂದಿಗೆ ಹೆಣೆದುಕೊಂಡಿರುವ 229.52 ಕ್ಯಾರೆಟ್ ಬಿಳಿ ವಜ್ರದ ನೆಕ್ಲೇಸ್‌ನಿಂದ ಅಲಂಕರಿಸಲಾಗಿತ್ತು.


ಅನಂತ್- ರಾಧಿಕಾಗೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗೆ 4.5 ಕೋಟಿ ರೂ. ನ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 2023ರಲ್ಲಿ ಅವರ ನಿಶ್ಚಿತಾರ್ಥದ ಮೊದಲು ರಾಧಿಕಾ ಮರ್ಚೆಂಟ್ ಅವರಿಗೆ ಸುಮಾರು 4.5 ಕೋಟಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಟ್ವಿನ್- ಟರ್ಬೋಚಾರ್ಜ್ಡ್ 6.0 ಲೀಟರ್ W12 ಎಂಜಿನ್ ಹೊಂದಿದ ಈ ಐಷಾರಾಮಿ ಕಾರು ಅತ್ಯಂತ ಸುಂದರವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.


ರಾಧಿಕಾ ಮರ್ಚೆಂಟ್‌ಗೆ ಮುತ್ತು ಮತ್ತು ವಜ್ರದ ಚೋಕರ್

ಜುಲೈ 2022 ರಲ್ಲಿ ನಡೆದ ಸಾಮಾಜಿಕ ಕಾರ್ಯಕ್ರಮದ ಸಂದರ್ಭದಲ್ಲಿ ರಾಧಿಕಾ ಮರ್ಚೆಂಟ್ ಅದ್ಭುತವಾದ ಮುತ್ತು ಮತ್ತು ವಜ್ರದ ಚೋಕರ್ ಅನ್ನು ಧರಿಸಿದ್ದರು, ಇದು ನೀತಾ ಅಂಬಾನಿ ಅವರು ಧರಿಸಿದ್ದ ಸೊಗಸಾದ ಚೋಕರ್ ಅನ್ನು ನೆನಪಿಸುತ್ತದೆ. ಇದರ ನಿಖರವಾದ ಮೌಲ್ಯವನ್ನು ಬಹಿರಂಗಪಡಿಸಲಾಗಿಲ್ಲವಾದರೂ ಇದು ನಿಸ್ಸಂದೇಹವಾಗಿ ತನ್ನ ಭಾವಿ ಸೊಸೆಗೆ ನೀತಾ ಅಂಬಾನಿಯಿಂದ ಅಮೂಲ್ಯವಾದ ಉಡುಗೊರೆಯಾಗಿದೆ ಎನ್ನಲಾಗುತ್ತದೆ.


ಇಶಾ ಅಂಬಾನಿಗಾಗಿ ಮದುವೆಗೆ 100 ಮಿಲಿಯನ್ ಡಾಲರ್ ಖರ್ಚು

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ವಿವಾಹ 2018 ರಲ್ಲಿ ನಡೆದಿದೆ. ಇದವಿಶ್ವದ ಅತ್ಯಂತ ಅದ್ದೂರಿ ವಿವಾಹಗಳಲ್ಲಿ ಒಂದಾಗಿದೆ. ಇದಕ್ಕಾಗಿ ಅಂಬಾನಿ ಕುಟುಂಬ ಸುಮಾರು 100 ಮಿಲಿಯನ್ ಡಾಲರ್ ಅಂದಾಜು 830 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಯೊಂದೂ ಆಮಂತ್ರಣ ಕಾರ್ಡ್ ನ ಬೆಲೆ 3 ಲಕ್ಷ ರೂ. ಎನ್ನಲಾಗಿದೆ. ಬಿಯಾನ್ಸ್ ಅವರ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 4 – 6 ಮಿಲಿಯನ್ ಸುಮಾರು ಅಂದಾಜು 33 – 50 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈ ಕಾರ್ಯಕ್ರಮಗಳು ಪ್ರಪಂಚದಾದ್ಯಂತದ ಪ್ರಸಿದ್ಧ ವ್ಯಕ್ತಿಗಳು ಮತ್ತು ಗಣ್ಯರನ್ನು ಆಕರ್ಷಿಸಿತು.

Continue Reading

ದೇಶ

Stock Market: ಷೇರು ಪೇಟೆ ತಲ್ಲಣ; ಏಕಾಏಕಿ 700 ಅಂಕ ಕುಸಿದ ನಿಫ್ಟಿ, ಸಾವಿರಾರು ಕೋಟಿ ರೂ. ನಷ್ಟ

Stock Market: ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್‌ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಇದರಿಂದ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದರು ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ವಹಿವಾಟು ಉತ್ತಮವಾಗಿತ್ತು. ಆದರೆ, ಶುಕ್ರವಾರ ದಿಢೀರನೆ ಕುಸಿತ ಕಂಡಿತು.

VISTARANEWS.COM


on

Stock Market
Koo

ಮುಂಬೈ: ಷೇರು ಮಾರುಕಟ್ಟೆಯಲ್ಲಿ (Stock Market) ಶುಕ್ರವಾರ (ಮೇ 3) ತಲ್ಲಣ ಸೃಷ್ಟಿಯಾಗಿದ್ದು, ಎನ್‌ಎಸ್‌ಇ ನಿಫ್ಟಿ (NSE Nifty) ಹಾಗೂ ಬಿಎಸ್‌ಇ ಸೆನ್ಸೆಕ್ಸ್‌ ಭಾರಿ ಕುಸಿತ ಕಂಡ ಕಾರಣ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಎನ್‌ಎಸ್‌ಇ ನಿಫ್ಟಿ 50 ಸುಮಾರು 172.35 ಪಾಯಿಂಟ್‌ಗಳ ಕುಸಿತ ಕಂಡರೆ, ಬಿಎಸ್‌ಇ ಸೆನ್ಸೆಕ್ಸ್‌ (BSE Sensex) 733 ಪಾಯಿಂಟ್‌ಗಳ ಕುಸಿತ ಕಂಡಿದೆ. ಆರಂಭದಲ್ಲಿ ಲಾಭ ಕಂಡ ಹೂಡಿಕೆದಾರರು ದಿನದ ಅಂತ್ಯಕ್ಕೆ ನಷ್ಟ ಅನುಭವಿಸಿದರು.

ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್‌ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾದರೂ ಎಲ್‌&ಟಿ. ಮಾರುತಿ ಸುಜುಕಿ, ರಿಲಯನ್ಸ್‌ ಇಂಡಸ್ಟ್ರೀಸ್‌, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್‌ ಸೇರಿ ಹಲವು ಕಂಪನಿಗಳು ಲಾಭ ಗಳಿಸಿವೆ. ಕೋಲ್‌ ಇಂಡಿಯಾ, ಗ್ರಾಸಿಂ ಇಂಡಸ್ಟ್ರೀಸ್‌, ಒಎನ್‌ಜಿಸಿ, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಹಾಗೂ ಹಿಂಡಾಲ್ಕೋ ಇಂಡಸ್ಟ್ರೀಸ್‌ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿವೆ.

ಶುಕ್ರವಾರ ಬೆಳಗ್ಗೆ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಲೇ ಸುಮಾರು 50 ಪಾಯಿಂಟ್‌ಗಳ ಏರಿಕೆಯಾಯಿತು. ಇದರಿಂದ ಹೂಡಿಕೆದಾರರಿಗೆ ಖುಷಿಯಾಯಿತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಪಾಯಿಂಟ್‌ಗಳ ಕುಸಿತ ಜಾಸ್ತಿಯಾಗುತ್ತಲೇ ಹೋಯಿತು. ಇದರಿಂದ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದರು ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ವಹಿವಾಟು ಉತ್ತಮವಾಗಿತ್ತು. ಆದರೆ, ಶುಕ್ರವಾರ ದಿಢೀರನೆ ಕುಸಿತ ಕಂಡಿತು.

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರಹ್‌ ರೋಹನ್ ಮೂರ್ತಿಗೆ 240 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ಏಕಾಗ್ರಹ್‌ ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಅಂದರೆ ಕಂಪನಿಯಲ್ಲಿ ಶೇಕಡಾ 0.04ರಷ್ಟು ಪಾಲನ್ನು ಹೊಂದಿದಂತಾಗಿದೆ ಎಂದು ಎಕ್ಸ್‌ಚೇಂಜ್‌ ಫೈಲಿಂಗ್ ಬಹಿರಂಗಪಡಿಸಿದೆ. ಈ ವ್ಯವಹಾರವನ್ನು ʼಆಫ್-ಮಾರ್ಕೆಟ್ʼನಲ್ಲಿ ನಡೆಸಲಾಯಿತು ಎಂದು ಫೈಲಿಂಗ್ ತಿಳಿಸಿದೆ.

ನಾರಾಯಣಮೂರ್ತಿ ಅವರು ಈಗ ಇನ್ಫೋಸಿಸ್‌ನ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅದರ ಪ್ರಮುಖ ಷೇರುಪಾಲುದಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇನ್ಫೋಸಿಸ್​ನಲ್ಲಿ ಮೂರ್ತಿ ಅವರ ಬಳಿ 1.51 ಕೋಟಿ ಷೇರುಗಳಿದ್ದವು. ಈಗ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಕೊಟ್ಟ ಬಳಿಕ ಅವರ ಬಳಿ ಉಳಿರುವ ಷೇರುಗಳ ಸಂಖ್ಯೆ 1.36 ಕೋಟಿ. ಈ ಮೂಲಕ ಇನ್ಫೋಸಿಸ್​ನಲ್ಲಿ ಅವರು ಹೊಂದಿದ್ದ ಶೇ. 0.40ರಷ್ಟು ಷೇರುಪಾಲು ಶೇ. 0.36ಕ್ಕೆ ಇಳಿದಿದೆ.

ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Continue Reading

ಕ್ರೈಂ

Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

Crime News: ಗುಜರಾತ್‌ನ ವಡಾಲಿಯಲ್ಲಿ ಪತ್ನಿಯ ಪ್ರಿಯಕರ ಕಳುಹಿಸಿದ್ದ ಪಾರ್ಸೆಲ್‌ ಬಾಂಬ್‌ ಸ್ಫೋಟಗೊಂಡು ಪತಿ ಮತ್ತು ಮಗಳು ಮೃತಪಟ್ಟಿದ್ದಾರೆ. ಮೃತರನ್ನು 32 ವರ್ಷದ ಕೂಲಿ ಕಾರ್ಮಿಕ ಜೀತುಭಾಯಿ ಹೀರಾಭಾಯ್‌ ಮತ್ತು ಅವರ ಮಗಳು 12 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ತನ್ನ ಪ್ರೇಯಸಿಯನ್ನು ಮದುವೆಯಾದ ಜೀತುಭಾಯ್ ಅನ್ನು ಕೊಲ್ಲುವ ಉದ್ದೇಶದಿಂದಲೇ ಜಯಂತಿಭಾಯ್‌ ಬಾಲುಸಿಂಗ್‌ ಈ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Crime News
Koo

ಗಾಂಧಿನಗರ: ಪತ್ನಿಯ ಪ್ರಿಯಕರನ ರೋಷಕ್ಕೆ ಪತಿ ಮತ್ತು ಮಗಳು ಬಲಿಯಾಗಿದ್ದಾರೆ. ಪತ್ನಿಯ ಪ್ರಿಯಕರ ಕಳುಹಿಸಿದ್ದ ಪಾರ್ಸೆಲ್‌ ಬಾಂಬ್‌ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಗುಜರಾತ್‌ನ ವಡಾಲಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).

ಮೃತರನ್ನು 32 ವರ್ಷದ ಕೂಲಿ ಕಾರ್ಮಿಕ ಜೀತುಭಾಯಿ ಹೀರಾಭಾಯ್‌ ಮತ್ತು ಅವರ ಮಗಳು 12 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಬಾಂಬ್‌ ಸ್ಫೋಟಿಸಿ ಪಾರ್ಸೆಲ್‌ ತೆರೆದ ಜೀತುಭಾಯ್‌ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಭೂಮಿಕಾ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಳು. 31 ವರ್ಷದ ಜಯಂತಿಭಾಯ್‌ ಬಾಲುಸಿಂಗ್‌ ವಂಜಾರ ಆರೋಪಿ.

ಘಟನೆಯ ವಿವರ

ಜೀತುಭಾಯ್‌ ಹೀರಾಭಾಯ್‌ ಪತ್ನಿಯ ಪ್ರಿಯಕರ ಜಯಂತಿಭಾಯ್‌ ಬಾಲುಸಿಂಗ್‌ ಆಟೋ ರಿಕ್ಷಾದಲ್ಲಿ ಪಾರ್ಸಲ್‌ ಬಾಂಬ್‌ ಕಳುಹಿಸಿದ್ದ. ಪಾರ್ಸಲ್‌ ಟೇಪ್‌ ರೆಕಾರ್ಡ್‌ ರೀತಿಯಲ್ಲಿ ಇದ್ದ ಕಾರಣ ಜೀತುಭಾಯ್‌ ಹೀರಾಭಾಯ್‌ ಅದನ್ನು ಆನ್‌ ಮಾಡಿದಾಗ ಸ್ಫೋಟಗೊಂಡಿತ್ತು. ಘಟನೆ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್‌ ಆಫೀಸರ್‌, ʼʼಆಟೋ ರಿಕ್ಷಾ ಚಾಲಕ ಪಾರ್ಸಲ್‌ ಅನ್ನು ಡೆಲಿವರಿ ಮಾಡುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ. ಆಟೋ ರಿಕ್ಷಾ ಚಾಲಕನ ಹೇಳಿಕೆ ಆಧಾರದಲ್ಲಿ ಆರೋಪಿಯನ್ನು ಗುರುತಿಸಲಾಗಿದ್ದು, ಸ್ಫೋಟ ನಡೆದು ಕೆಲವೇ ಗಂಟೆಗಳಲ್ಲಿ ಜಯಂತಿ ಭಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಪ್ರೇಯಸಿಯನ್ನು ಮದುವೆಯಾದ ಜೀತುಭಾಯ್ ಅನ್ನು ಕೊಲ್ಲುವ ಉದ್ದೇಶದಿಂದಲೇ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಬ್‌ ಸ್ಫೋಟದಲ್ಲಿ ಜೀತುಭಾಯ್ ಅವರ 9 ಮತ್ತು 10 ವರ್ಷ ಇಬ್ಬರು ಪುತ್ರಿಯರೂ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬಾಕೆಯ ಸ್ಥಿತಿ ಗಂಭೀರವಾಗಿದ್ದು, ತುರ್ತು ಚಿಕಿತ್ಸಾ ಘಟಕ್ಕಕ್ಕೆ ದಾಖಲಿಸಲಾಗಿದೆ.

ಇದನ್ನೂ ಓದಿ: Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ

17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Continue Reading

ದೇಶ

Gratuity: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್;‌ ಗ್ರಾಚ್ಯುಟಿ, ಶಿಕ್ಷಣ ಭತ್ಯೆ ಶೀಘ್ರವೇ 25% ಹೆಚ್ಚಳ!

Gratuity: ಎರಡು ತಿಂಗಳ ಹಿಂದಷ್ಟೇ ನೌಕರರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಏರಿಕೆ ಮಾಡಿದ್ದ ಕೇಂದ್ರ ಸರ್ಕಾರವೀಗ ನೌಕರರ ಗ್ರಾಚ್ಯುಟಿ, ಮಕ್ಕಳ ಶಿಕ್ಷಣ ಭತ್ಯೆಯನ್ನೂ ಶೇ.25ರಷ್ಟು ಏರಿಕೆ ಮಾಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Gratuity
Koo

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು (Central Government) ಮತ್ತೊಂದು ಗುಡ್‌ ನ್ಯೂಸ್‌ ನೀಡಲು ಸಜ್ಜಾಗಿದೆ. ಕಳೆದ ಜನವರಿಯಲ್ಲಿಯೇ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದ್ದ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ನೌಕರರ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್‌ ಸಬ್ಸಿಸಿ, ನಿವೃತ್ತಿ ಗ್ರಾಚ್ಯುಟಿ (Gratuity) ಹಾಗೂ ಸಾವಿನ ಗ್ರಾಚ್ಯುಟಿಯನ್ನು ಶೇ.25ರಷ್ಟು ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ. ಇದರಿಂದ ಲಕ್ಷಾಂತರ ನೌಕರರು (Government Employees) ಸೌಲಭ್ಯಗಳನ್ನು ಪಡೆಯಲಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವಾಗುತ್ತಲೇ ಅವರ ಮಕ್ಕಳ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್‌ ಸಬ್ಸಿಡಿ ಕೂಡ ಜಾಸ್ತಿಯಾಗುತ್ತದೆ. ಅದರಂತೆ, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಕುರಿತು ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ. ಹೊಸ ಆದೇಶದ ಬಳಿಕ ರಿಟೈರ್‌ಮೆಂಟ್‌ ಗ್ರಾಚ್ಯುಟಿ ಮೊತ್ತವು ಶೇ.25ರಷ್ಟು ಅಂದರೆ, 20 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

Cash

ಕೇಂದ್ರ ಸರ್ಕಾರಿ ನೌಕರರಿಗೆ ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಬಂಪರ್‌ ಕೊಡುಗೆ ನೀಡಿತ್ತು. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಏರಿಕೆ ಮಾಡಿತ್ತು. ಇದರೊಂದಿಗೆ ನೌಕರರಿಗೆ ನೀಡುತ್ತಿರುವ ತುಟ್ಟಿಭತ್ಯೆಯು ಶೇ.50ರಷ್ಟು ಆಗಿದೆ. ತುಟ್ಟಿ ಭತ್ಯೆಯ ಜತೆಗೆ ಕೇಂದ್ರ ಸರ್ಕಾರವು ಮನೆ ಬಾಡಿಗೆ ಅಲೋವನ್ಸ್‌ (HRA) ಕೂಡ ಏರಿಕೆ ಮಾಡಿತ್ತು. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,868 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಖರ್ಚುವಾಗಲಿದೆ. 2024ರ ಜನವರಿ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳವು ಅನ್ವಯವಾಗಿದೆ.

ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುತ್ತದೆ. ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಇದು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿದೆ ಎಂದು ತಿಳಿದುಬಂದಿತ್ತು.

2023ರ ಮಾರ್ಚ್‌ನಲ್ಲೂ ಕೇಂದ್ರ ಸರ್ಕಾರವು ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿತ್ತು. ಇದರಿಂದ ನೌಕರರಿಗೆ ಸಿಗುವ ತುಟ್ಟಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿತ್ತು. ಅಲ್ಲದೆ, ಕಳೆದ ವರ್ಷದ ಜುಲೈನಲ್ಲಿ ನೌಕರರು ಹಾಗೂ ಪಿಂಚಣಿದಾರರಿಗೆ ನೀಡುವ ತುಟ್ಟಿಭತ್ಯೆಯನ್ನು ಶೇ.42ರಿಂದ ಶೇ.46ಕ್ಕೆ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

Continue Reading
Advertisement
Costly wedding gift
ವಾಣಿಜ್ಯ36 seconds ago

Costly wedding gift: ಮಗನಿಗೆ ಬಂಗಲೆ, ಸೊಸೆಗೆ ನೆಕ್ಲೇಸ್ ಗಿಫ್ಟ್‌ ಕೊಟ್ಟ ಅಂಬಾನಿ; ಬೆಲೆ ಕೇಳಿದರೆ ಅಚ್ಚರಿ!

kareena kapoor out from yash starrer toxic
ಬಾಲಿವುಡ್10 mins ago

Kareena Kapoor:‌ ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾದಿಂದ ಕರೀನಾ ಕಪೂರ್‌ ಔಟ್?

Shrirasthu Shubhamasthu serial will be end
ಕಿರುತೆರೆ11 mins ago

Shrirasthu Shubhamasthu: ಅಂತ್ಯ ಹಾಡಲಿದೆಯಾ ‘ಶ್ರೀರಸ್ತು ಶುಭಮಸ್ತು’? ಶಾರ್ವರಿ ರಹಸ್ಯ ಬಯಲಾಗೇ ಬಿಡ್ತಾ?

Stock Market
ದೇಶ15 mins ago

Stock Market: ಷೇರು ಪೇಟೆ ತಲ್ಲಣ; ಏಕಾಏಕಿ 700 ಅಂಕ ಕುಸಿದ ನಿಫ್ಟಿ, ಸಾವಿರಾರು ಕೋಟಿ ರೂ. ನಷ್ಟ

Bengaluru Rains
ಮಳೆ23 mins ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Smrithi Irani
ರಾಜಕೀಯ25 mins ago

Smirthi Irani: ಅಮೇಥಿಯಲ್ಲಿ ಕಾಂಗ್ರೆಸ್‌ ಸೋಲನ್ನು ಒಪ್ಪಿಕೊಂಡಿದೆ; ಸ್ಮೃತಿ ಇರಾನಿ ವ್ಯಂಗ್ಯ

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ28 mins ago

Prajwal Revanna Case: ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಯಾರು? ಎಸ್‌ಐಟಿಗೆ ಸಾಕ್ಷಿ ಕೊಟ್ಟ ದೇವರಾಜೇಗೌಡ!

RCB vS GT:
ಕ್ರೀಡೆ32 mins ago

RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

English Alphabet
ಬೆಂಗಳೂರು37 mins ago

English Alphabet: ಇಂಗ್ಲಿಷ್‌ನಲ್ಲಿ ಹೊಸ ಅಕ್ಷರ ವಿನ್ಯಾಸಕ್ಕಾಗಿ ಲಿಸಾ ಸ್ಕೂಲ್‌ ಆಫ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ಪ್ರಯತ್ನ

Crime News
ಕ್ರೈಂ38 mins ago

Crime News: ಪತ್ನಿಯ ಪ್ರಿಯಕರನ ದ್ವೇಷಕ್ಕೆ ಬಲಿಯಾಯ್ತು ಎರಡು ಜೀವ; ಪಾರ್ಸಲ್‌ ಬಾಂಬ್‌ ಸ್ಫೋಟಕ್ಕೆ ಅಪ್ಪ-ಮಗಳು ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ23 mins ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ12 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ22 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌