Delhi MCD Election 2022| ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ; ಬಿಜೆಪಿ 132, ಆಪ್​ 117 ವಾರ್ಡ್‌ಗಳಲ್ಲಿ ಮುನ್ನಡೆ - Vistara News

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election 2022| ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ; ಬಿಜೆಪಿ 132, ಆಪ್​ 117 ವಾರ್ಡ್‌ಗಳಲ್ಲಿ ಮುನ್ನಡೆ

ದೆಹಲಿ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳಿಂದ ಬಿಜೆಪಿ ಆಡಳಿತ ಇದೆ. ಈ ಸಲ ಡಿಸೆಂಬರ್​ 4ರಂದು ಚುನಾವಣೆ ನಡೆದಿತ್ತು. ಎಕ್ಸಿಟ್​ ಪೋಲ್​ ಭವಿಷ್ಯವೆಲ್ಲ ಈ ಸಲ ಆಪ್​ ಪರವಾಗಿ ಇದೆ.

VISTARANEWS.COM


on

Delhi MCD Election Results BJP Leads in 130 Wards
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ನಡೆಯುತ್ತಿದ್ದು, ಸದ್ಯದ ಟ್ರೆಂಡ್​​ನಲ್ಲಿ, ಬಿಜೆಪಿ 132ವಾರ್ಡ್​ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಮ್​ ಆದ್ಮಿ ಪಕ್ಷ 117 ಮತ್ತು ಕಾಂಗ್ರೆಸ್ 6 ವಾರ್ಡ್​ಗಳಲ್ಲಿ ಮುಂದಿವೆ. ಇದು ಬೆಳಗ್ಗೆ 9.20ರ ಟ್ರೆಂಡ್‌.

ಒಟ್ಟು 250 ಸ್ಥಾನಗಳಿಗೆ ಡಿಸೆಂಬರ್​ 4ರಂದು ಚುನಾವಣೆ ನಡೆದಿದ್ದು, 1,349 ಮಂದಿ ಅಭ್ಯರ್ಥಿಗಳ ಹಣೆಬರಹ ಇಂದು ಹೊರಬೀಳಲಿದೆ. ಒಂದೊಂದು ಕ್ಷೇತ್ರದಲ್ಲಿ ಹೆಚ್ಚು ಕಡಿಮೆ 65 ಸಾವಿರ ಮತದಾರರಿದ್ದಾರೆ. ಇಂದು ನಡೆಯುತ್ತಿರುವ ಮತ ಎಣಿಕೆಗೆ ಪೊಲೀಸರಿಂದ ಭಾರಿ ಭದ್ರತೆ ಕಲ್ಪಿಸಲಾಗಿದೆ. 42 ಮತ ಎಣಿಕೆ ಕೇಂದ್ರಗಳ ಬಳಿ 10 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 ಅರೆಸೇನಾ ತುಕಡಿಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗಿದೆ.

ದೆಹಲಿ ಮಹಾನಗರ ಪಾಲಿಕೆ ಕಳೆದ 15 ವರ್ಷಗಳಿಂದಲೂ ಬಿಜೆಪಿ ಕೈಯಲ್ಲಿಯೇ ಇದ್ದು, ಈ ಸಲ ಎಕ್ಸಿಟ್​ ಪೋಲ್​ ಭವಿಷ್ಯ ಆಪ್​​ ಗೆಲ್ಲುತ್ತದೆ ಎಂದು ಹೇಳಿದೆ. ಮತ ಎಣಿಕೆ ಪ್ರಾರಂಭ ಆದಾಗಿನಿಂದಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪೂರ್ತಿ 250 ವಾರ್ಡ್​ಗಳ ಮತ ಎಣಿಕೆ ಮುಗಿದ ವಿನಃ ಗೆಲುವಿನ ಲೆಕ್ಕಾಚಾರ ಸಿಗದು. ಇಂದು ಸಂಜೆ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.

ಆಪ್​-ಬಿಜೆಪಿ ಪೈಪೋಟಿ
ಇನ್ನು ದೆಹಲಿ ಮಹಾನಗರ ಪಾಲಿಕೆ ಆಡಳಿತ ಈ ಸಲ ಪಕ್ಕಾ ನಮಗೆ ಎಂದು ಬಿಜೆಪಿ ಮತ್ತು ಆಪ್​ ಪಕ್ಷಗಳವರು ಹೇಳಿಕೊಳ್ಳುತ್ತಿದ್ದಾರೆ. ಈ ಸಲವೂ ನಾವೇ ಗೆದ್ದು ಆಡಳಿತ ಹಿಡಿಯುತ್ತೇವೆ ಎಂದು ಬಿಜೆಪಿ ನಾಯಕ ಹರೀಶ್ ಖುರಾನಾ ಹೇಳಿದ್ದರೆ, ಇನ್ನೊಂದು ಕಡೆ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಹೂವುಗಳನ್ನು ಹಿಡಿದು ಸಿಎಂ ಅರವಿಂದ್ ಕೇಜ್ರಿವಾಲ್​ ನಿವಾಸಕ್ಕೆ ತೆರಳಿದ್ದಾರೆ. ಆಪ್​ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: MCD Election 2022 | ದೆಹಲಿ ಮಹಾನಗರ ಪಾಲಿಕೆಗೆ ಡಿಸೆಂಬರ್‌ 4ರಂದು ಚುನಾವಣೆ, ಬಿಜೆಪಿ, ಆಪ್‌ ಮಧ್ಯೆ ಪೈಪೋಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಿಲ್ಲಿ ಪಾಲಿಕೆ ಚುನಾವಣೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ, ಆಪ್‌ಗೆ ಭಾರಿ ಮುನ್ನಡೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದರಿಂದ ಬಿಜೆಪಿ ಹಾಗೂ ಆಪ್‌ ನಡುವಿನ ಬಿಕ್ಕಟ್ಟು ಬಹುತೇಕ ಬಗೆಹರಿದಂತಾಗಿದೆ.

VISTARANEWS.COM


on

Delhi Mayor Polls
Koo

ನವದೆಹಲಿ: ಮಹಾನಗರ ಪಾಲಿಕೆಯ ಮೇಯರ್‌ ಆಯ್ಕೆಯ ಕಗ್ಗಂಟಿನ (Delhi Mayor Polls) ವಿಚಾರದಲ್ಲಿ ಬಿಜೆಪಿ ವಿರುದ್ಧ ಆಪ್‌ಗೆ ಭಾರಿ ಮುನ್ನಡೆ ದೊರೆತಿದೆ. “ಮೇಯರ್‌ ಆಯ್ಕೆಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಪ್ರಸ್ತಾಪಿಸಿದ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೆಯೇ, ೨೪ ಗಂಟೆಯೊಳಗೆ ಮೇಯರ್‌ ಆಯ್ಕೆಗೆ ಚುನಾವಣೆ ನಡೆಸಿ ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಸೂಚಿಸಿದೆ.

“ದೆಹಲಿ ಮೇಯರ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ. ಇದರ ಕುರಿತು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದು ಆಪ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೇಯರ್‌ ಆಯ್ಕೆಗೆ ಜನವರಿ ೬, ೨೪ ಹಾಗೂ ಫೆಬ್ರವರಿ ೬ರಂದು ಸಭೆ ನಡೆಸಲಾಗಿತ್ತು. ಆದರೆ, ಬಿಜೆಪಿ-ಆಪ್‌ ಗಲಾಟೆಯಿಂದಾಗಿ ಆಯ್ಕೆ ಸಾಧ್ಯವಾಗಿರಲಿಲ್ಲ.

ಇದುವರೆಗೆ, ಪಾಲಿಕೆಯ ಸಭೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಮೊದಲು ಮತದಾನ ಮಾಡಲು ಅವಕಾಶ ನೀಡಿದ ಕಾರಣ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಮೊದಲು ಮತದಾನದ ಅವಕಾಶ ನೀಡಿದ ಕಾರಣ ಬೇಸತ್ತ ಆಪ್‌ ಕೋರ್ಟ್‌ ಮೊರೆ ಹೋಗಿದೆ.

ಇದನ್ನೂ ಓದಿ: Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Ruckus | ದೆಹಲಿಯಲ್ಲಿ ಬೀದಿಗೆ ಬಂದ ಬಿಜೆಪಿ, ಆಪ್‌ ಜಗಳ, ಮತ ಹಾಕಿದ ಜನರಿಗೇ ನಾಚಿಕೆಯಾಗುವಂತೆ ಕಿತ್ತಾಟ

ದೆಹಲಿ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಪ್‌ ಕೌನ್ಸಿಲರ್‌ಗಳ ಕಿತ್ತಾಟವು ಮುಗಿಲುಮುಟ್ಟಿದೆ. ಕೆಲ ದಿನಗಳ ಹಿಂದೆ ಪಾಲಿಕೆಯ ಕಚೇರಿಯಲ್ಲಿ ನಡೆದಿದ್ದ ಗಲಾಟೆ (Delhi MCD Ruckus) ಈಗ ಬೀದಿಗೆ ಬಂದಿದೆ.

VISTARANEWS.COM


on

Delhi MCD Ruckus
Koo

ನವದೆಹಲಿ: ಮುನ್ಸಿಪಲ್‌ ಕಾರ್ಪೊರೇಷನ್‌ ಆಫ್‌ ದೆಹಲಿ (MCD)ಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಫ್‌ ಕೌನ್ಸಿಲರ್‌ಗಳ ಮಧ್ಯೆ ನಡೆಯುತ್ತಿರುವ ಗಲಾಟೆಯೀಗ (Delhi MCD Ruckus) ಬೀದಿಗೆ ಬಂದಿದೆ. ಮೇಯರ್‌ ಚುನಾವಣೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇಂತಹವರಿಗೆ ನಾವು ಮತ ಹಾಕಿದೆವಾ ಎಂದು ಜನ ಬೇಸರ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಕಾದಾಟ ತಾರಕಕ್ಕೇರಿದೆ.

ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಪ್ರತಿಭಟನೆ
ಲೆಫ್ಟಿನೆಂಟ್‌ ಗವರ್ನರ್‌ ಅವರು ಮಹಾನಗರ ಪಾಲಿಕೆಯ ಸ್ಪೀಕರ್‌ ಆಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ನೇಮಿಸಿದ ಕಾರಣ ಬಿಜೆಪಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕೌನ್ಸಿಲರ್‌ಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿಯ ಇಬ್ಬರು ಮಹಿಳಾ ಕೌನ್ಸಿಲರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಬೇಕಾಯಿತು.

ಏಕೆ ಇಷ್ಟೊಂದು ಗಲಾಟೆ?
ಜನವರಿ 6ರಂದು ನಡೆದ ಮೊದಲ ಸಭೆಯ ವೇಳೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.

ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Delhi Mayor Polls | ಮಾರಾಮಾರಿ ನಡುವೆ ದಿಲ್ಲಿ ಪಾಲಿಕೆ ಸಭೆ ಮುಂದೂಡಿಕೆ, ನಡೆಯಲಿಲ್ಲ ಮೇಯರ್ ಎಲೆಕ್ಷನ್!

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election | ಆಪ್​ ವಿರುದ್ಧ ಸೋತಿದ್ದರೂ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಸ್ಥಾನಕ್ಕೆ ಮತ್ತು ಆಲೆ ಮೊಹಮ್ಮದ್​ ಇಕ್ಬಾಲ್​ ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳಾಗಿದ್ದಾರೆ.

VISTARANEWS.COM


on

Rekha Gupta is Delhi BJP Mayor candidate
ರೇಖಾ ಗುಪ್ತಾ ಮತ್ತು ಶೆಲ್ಲಿ ಓಬೆರಾಯ್​
Koo

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷದ ಎದುರು ಸೋತಿದ್ದ ಬಿಜೆಪಿ, ಅಷ್ಟು ಸುಲಭಕ್ಕೆ ಅಲ್ಲಿನ ಪಟ್ಟ ಬಿಟ್ಟುಕೊಡುವ ಹಾಗೆ ಕಾಣುತ್ತಿಲ್ಲ. ಡಿಸೆಂಬರ್​ 4ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಒಟ್ಟು 250 ವಾರ್ಡ್​ಗಳಿಗೆ ನಡೆದ ಎಲೆಕ್ಷನ್​​ನಲ್ಲಿ ಆಮ್​ ಆದ್ಮಿ ಪಕ್ಷ 134 ಸೀಟುಗಳನ್ನು ಗೆದ್ದಿದ್ದರೆ, ಬಿಜೆಪಿ 104 ವಾರ್ಡ್​ಗಳಲ್ಲಿ ಜಯಸಾಧಿಸಿತ್ತು. ಈ ಮೂಲಕ ಕಳೆದ 15ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇದ್ದ ಬಿಜೆಪಿ ಆಡಳಿತ ಕೊನೆಗೊಂಡಿತ್ತು.

ಗೆದ್ದ ಪಕ್ಷದಿಂದಲೇ ಮೇಯರ್​ ಮತ್ತು ಉಪಮೇಯರ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ದೆಹಲಿ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಆಮ್​ ಆದ್ಮಿ ಪಕ್ಷ ಜನವರಿ 6ರಂದು ಮೇಯರ್​ ಮತ್ತು ಉಪಮೇಯರ್​ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಿತ್ತು. ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಇದೇ ವೇಳೆ ಬಿಜೆಪಿ ಯೂಟರ್ನ್​ ಹೊಡೆದಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇದೀಗ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಂತೆ ಮೇಯರ್​ ಸ್ಥಾನಕ್ಕೆ ಬಿಜೆಪಿ ರೇಖಾ ಗುಪ್ತಾರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಉಪಮೇಯರ್ ಸ್ಥಾನಕ್ಕೆ ಕಮಲ್ ಬಾಗ್ರಿ ಅವರನ್ನು ಕಣಕ್ಕಿಳಿಸಿದೆ. ಇವರಿಬ್ಬರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇದರಲ್ಲಿ ರೇಖಾಗುಪ್ತಾ ಶಾಲಿಮಾರ್ ಬಾಘ್​​ನ ಕೌನ್ಸಿಲರ್​ ಆಗಿದ್ದು, ಮೂರು ಅವಧಿಗೆ ಆಡಳಿತ ನಡೆಸಿದ ಅನುಭವಿ. ಹಾಗೇ, ಕಮಲ್​ ಬಾಗ್ರಿಯವರು ರಾಮ್​ ನಗರ ವಾರ್ಡ್​​ನ ಕೌನ್ಸಿಲರ್​. ಮೇಯರ್​ ಹುದ್ದೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಗೆದ್ದ ಪಕ್ಷದವರೇ ಆಯ್ಕೆಯಾಗಬೇಕು ಎಂದೇನೂ ಇಲ್ಲ. ಹಾಗಾಗಿಯೇ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇನ್ನೊಂದೆಡೆ ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಅಭ್ಯರ್ಥಿಯಾಗಿದ್ದು, ಉಪಮೇಯರ್​ ಸ್ಥಾನಕ್ಕೆ ಆಲೆ ಮೊಹಮ್ಮದ್​ ಇಕ್ಬಾಲ್​ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

ಇದನ್ನೂ ಓದಿ: Delhi MCD Election | ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯಿಂದ ಆಪರೇಷನ್‌ ಕಮಲ?

Continue Reading

ದಿಲ್ಲಿ ಪಾಲಿಕೆ ಚುನಾವಣೆ

BJP Poaching AAP | ದೆಹಲಿಯ ಒಬ್ಬ ಕೌನ್ಸಿಲರ್‌ಗೆ ಬಿಜೆಪಿ 10 ಕೋಟಿ ರೂ. ಆಫರ್‌, ಆಪ್‌ ಗಂಭೀರ ಆರೋಪ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ “ಕುದುರೆ ವ್ಯಾಪಾರ”ದ (BJP Poaching AAP) ಆರೋಪ ಮಾಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಬಿಜೆಪಿಯ ೧೫ ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. “ಆಪ್‌ನ ೧೦ ಕೌನ್ಸಿಲರ್‌ಗಳ ಖರೀದಿಗೆ ಬಿಜೆಪಿ ೧೦೦ ಕೋಟಿ ರೂಪಾಯಿಯ ಆಫರ್‌ (BJP Poaching AAP) ನೀಡಿದೆ” ಎಂದು ಆಪ್‌ ಕೌನ್ಸಿಲರ್‌ಗಳು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ.

“ಪಾಲಿಕೆ ಚುನಾವಣೆಯಲ್ಲಿ ಸೋತ ಬಿಜೆಪಿಯು ಹೊಲಸು ರಾಜಕಾರಣ ಮಾಡುತ್ತಿದೆ. ಹಣಬಲದಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆಪ್‌ನ ಒಬ್ಬ ಕೌನ್ಸಿಲರ್‌ಗೆ ೧೦ ಕೋಟಿ ರೂ. ಆಫರ್‌ ನೀಡಿದೆ. ಒಬ್ಬ ಕೌನ್ಸಿಲರ್‌ಗೆ ತಲಾ ೧೦ ಕೋಟಿ ರೂ. ನೀಡಿ, ಒಟ್ಟು ೧೦ ಕೌನ್ಸಿಲರ್‌ಗಳನ್ನು ಸೆಳೆಯುವ ತಂತ್ರ ಬಿಜೆಪಿಯದ್ದಾಗಿದೆ. ಹಾಗೆಯೇ, ಒಂದು ಕ್ರಾಸ್‌ ವೋಟಿಂಗ್‌ಗೆ ೫೦ ಲಕ್ಷ ರೂ. ಫಿಕ್ಸ್‌ ಮಾಡಿದೆ. ಆ ಮೂಲಕ ದೆಹಲಿ ಪಾಲಿಕೆಯಲ್ಲಿ ಆಪ್‌ ಆಡಳಿತ ನಡೆಸುವುದನ್ನು ತಡೆಯಲು ಬಿಜೆಪಿ ಎಲ್ಲ ಪ್ರಯತ್ನ ಮಾಡುತ್ತಿದೆ” ಎಂದು ಆಪ್‌ ಕೌನ್ಸಿಲರ್‌ಗಳಾದ ಡಾ.ರೊನಾಕ್ಷಿ ಶರ್ಮಾ, ಅರುಣ್‌ ನವಾರಿಯಾ ಹಾಗೂ ಜ್ಯೋತಿ ರಾಣಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಬಿಜೆಪಿ ಕೂಡ ಆಪ್‌ ವಿರುದ್ಧ ಇದೇ ಆರೋಪ ಮಾಡಿದೆ. ಬಿಜೆಪಿ ಕೌನ್ಸಿಲರ್‌ಗಳಿಗೆ ಆಪ್‌ ಆಮಿಷ ಒಡ್ಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮಹಾನಗರ ಪಾಲಿಕೆಯ ೨೫೦ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಪ್‌ ೧೩೪, ಬಿಜೆಪಿ ೧೦೪ ಹಾಗೂ ಕಾಂಗ್ರೆಸ್‌ ೯ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | Delhi MCD Election| ದೆಹಲಿ ಮಹಾನಗರ ಪಾಲಿಕೆ ಆಪ್​ ಮಡಿಲಿಗೆ; ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ

Continue Reading
Advertisement
Jai Shri Ram Slogan
ಕರ್ನಾಟಕ21 mins ago

Jai Shri Ram Slogan: ಜೈ ಶ್ರೀರಾಮ್ ಘೋಷಣೆ ಕೂಗಿದ್ರೆ ಬೂಟುಗಾಲಲ್ಲಿ ಒದೆಯಿರಿ ಎಂದಿದ್ದ ಕೈ ಮುಖಂಡ ಅಮಾನತು

Paytm
ಪ್ರಮುಖ ಸುದ್ದಿ29 mins ago

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Ballari DC Prashanth kumar Mishra pressmeet about MLC election
ಬಳ್ಳಾರಿ36 mins ago

MLC Election: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ; ಮೇ 9ಕ್ಕೆ ಅಧಿಸೂಚನೆ ಪ್ರಕಟ

HD Revanna
ಕರ್ನಾಟಕ47 mins ago

HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!

IPL 2024
Latest59 mins ago

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

Ballari DC Prashanth kumar Mishra pressmeet about lok sabha election
ಬಳ್ಳಾರಿ1 hour ago

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Shivamogga BJP
ಶಿವಮೊಗ್ಗ1 hour ago

Lok Sabha Election 2024: ಶಿವಮೊಗ್ಗದಲ್ಲಿ ಪ್ರಚಾರದ ವೇಳೆ ಕಿರಿಕ್; ಬಿಜೆಪಿ ವಾಹನ ಹಿಮ್ಮೆಟ್ಟಿಸಿದ ಈಶ್ವರಪ್ಪ ಅಭಿಮಾನಿಗಳು

HD Revanna
ಕರ್ನಾಟಕ2 hours ago

HD Revanna: ರೇವಣ್ಣ ಬಂಧನ ಬೆನ್ನಲ್ಲೇ ಕುಮಾರಸ್ವಾಮಿ ಮೀಟಿಂಗ್;‌ ಮಗನ ಬಳಿಕ ತಂದೆಯೂ ಅಮಾನತು?

Terrorist Attack
ಪ್ರಮುಖ ಸುದ್ದಿ2 hours ago

Terrorist Attack : ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ: ನಾಲ್ವರು ವಾಯುಪಡೆ ಸಿಬ್ಬಂದಿಗೆ ಗಾಯ

HD Revanna
ಕರ್ನಾಟಕ2 hours ago

HD Revanna: ರೇವಣ್ಣ ಬಂಧನದ ಬೆನ್ನಲ್ಲೇ ಪೊಲೀಸರಿಗೆ ಪ್ರಜ್ವಲ್‌ ಶರಣಾಗತಿ? ಸಿ.ಎಸ್.ಪುಟ್ಟರಾಜು ಮಹತ್ವದ ಹೇಳಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌