Delhi MCD Election | ಆಪ್​ ವಿರುದ್ಧ ಸೋತಿದ್ದರೂ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ - Vistara News

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election | ಆಪ್​ ವಿರುದ್ಧ ಸೋತಿದ್ದರೂ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಸ್ಥಾನಕ್ಕೆ ಮತ್ತು ಆಲೆ ಮೊಹಮ್ಮದ್​ ಇಕ್ಬಾಲ್​ ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳಾಗಿದ್ದಾರೆ.

VISTARANEWS.COM


on

Rekha Gupta is Delhi BJP Mayor candidate
ರೇಖಾ ಗುಪ್ತಾ ಮತ್ತು ಶೆಲ್ಲಿ ಓಬೆರಾಯ್​
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷದ ಎದುರು ಸೋತಿದ್ದ ಬಿಜೆಪಿ, ಅಷ್ಟು ಸುಲಭಕ್ಕೆ ಅಲ್ಲಿನ ಪಟ್ಟ ಬಿಟ್ಟುಕೊಡುವ ಹಾಗೆ ಕಾಣುತ್ತಿಲ್ಲ. ಡಿಸೆಂಬರ್​ 4ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಒಟ್ಟು 250 ವಾರ್ಡ್​ಗಳಿಗೆ ನಡೆದ ಎಲೆಕ್ಷನ್​​ನಲ್ಲಿ ಆಮ್​ ಆದ್ಮಿ ಪಕ್ಷ 134 ಸೀಟುಗಳನ್ನು ಗೆದ್ದಿದ್ದರೆ, ಬಿಜೆಪಿ 104 ವಾರ್ಡ್​ಗಳಲ್ಲಿ ಜಯಸಾಧಿಸಿತ್ತು. ಈ ಮೂಲಕ ಕಳೆದ 15ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇದ್ದ ಬಿಜೆಪಿ ಆಡಳಿತ ಕೊನೆಗೊಂಡಿತ್ತು.

ಗೆದ್ದ ಪಕ್ಷದಿಂದಲೇ ಮೇಯರ್​ ಮತ್ತು ಉಪಮೇಯರ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ದೆಹಲಿ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಆಮ್​ ಆದ್ಮಿ ಪಕ್ಷ ಜನವರಿ 6ರಂದು ಮೇಯರ್​ ಮತ್ತು ಉಪಮೇಯರ್​ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಿತ್ತು. ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಇದೇ ವೇಳೆ ಬಿಜೆಪಿ ಯೂಟರ್ನ್​ ಹೊಡೆದಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇದೀಗ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಂತೆ ಮೇಯರ್​ ಸ್ಥಾನಕ್ಕೆ ಬಿಜೆಪಿ ರೇಖಾ ಗುಪ್ತಾರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಉಪಮೇಯರ್ ಸ್ಥಾನಕ್ಕೆ ಕಮಲ್ ಬಾಗ್ರಿ ಅವರನ್ನು ಕಣಕ್ಕಿಳಿಸಿದೆ. ಇವರಿಬ್ಬರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇದರಲ್ಲಿ ರೇಖಾಗುಪ್ತಾ ಶಾಲಿಮಾರ್ ಬಾಘ್​​ನ ಕೌನ್ಸಿಲರ್​ ಆಗಿದ್ದು, ಮೂರು ಅವಧಿಗೆ ಆಡಳಿತ ನಡೆಸಿದ ಅನುಭವಿ. ಹಾಗೇ, ಕಮಲ್​ ಬಾಗ್ರಿಯವರು ರಾಮ್​ ನಗರ ವಾರ್ಡ್​​ನ ಕೌನ್ಸಿಲರ್​. ಮೇಯರ್​ ಹುದ್ದೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಗೆದ್ದ ಪಕ್ಷದವರೇ ಆಯ್ಕೆಯಾಗಬೇಕು ಎಂದೇನೂ ಇಲ್ಲ. ಹಾಗಾಗಿಯೇ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇನ್ನೊಂದೆಡೆ ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಅಭ್ಯರ್ಥಿಯಾಗಿದ್ದು, ಉಪಮೇಯರ್​ ಸ್ಥಾನಕ್ಕೆ ಆಲೆ ಮೊಹಮ್ಮದ್​ ಇಕ್ಬಾಲ್​ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

ಇದನ್ನೂ ಓದಿ: Delhi MCD Election | ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯಿಂದ ಆಪರೇಷನ್‌ ಕಮಲ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದಿಲ್ಲಿ ಪಾಲಿಕೆ ಚುನಾವಣೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ, ಆಪ್‌ಗೆ ಭಾರಿ ಮುನ್ನಡೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದರಿಂದ ಬಿಜೆಪಿ ಹಾಗೂ ಆಪ್‌ ನಡುವಿನ ಬಿಕ್ಕಟ್ಟು ಬಹುತೇಕ ಬಗೆಹರಿದಂತಾಗಿದೆ.

VISTARANEWS.COM


on

Delhi Mayor Polls
Koo

ನವದೆಹಲಿ: ಮಹಾನಗರ ಪಾಲಿಕೆಯ ಮೇಯರ್‌ ಆಯ್ಕೆಯ ಕಗ್ಗಂಟಿನ (Delhi Mayor Polls) ವಿಚಾರದಲ್ಲಿ ಬಿಜೆಪಿ ವಿರುದ್ಧ ಆಪ್‌ಗೆ ಭಾರಿ ಮುನ್ನಡೆ ದೊರೆತಿದೆ. “ಮೇಯರ್‌ ಆಯ್ಕೆಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಪ್ರಸ್ತಾಪಿಸಿದ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೆಯೇ, ೨೪ ಗಂಟೆಯೊಳಗೆ ಮೇಯರ್‌ ಆಯ್ಕೆಗೆ ಚುನಾವಣೆ ನಡೆಸಿ ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಸೂಚಿಸಿದೆ.

“ದೆಹಲಿ ಮೇಯರ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ. ಇದರ ಕುರಿತು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದು ಆಪ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೇಯರ್‌ ಆಯ್ಕೆಗೆ ಜನವರಿ ೬, ೨೪ ಹಾಗೂ ಫೆಬ್ರವರಿ ೬ರಂದು ಸಭೆ ನಡೆಸಲಾಗಿತ್ತು. ಆದರೆ, ಬಿಜೆಪಿ-ಆಪ್‌ ಗಲಾಟೆಯಿಂದಾಗಿ ಆಯ್ಕೆ ಸಾಧ್ಯವಾಗಿರಲಿಲ್ಲ.

ಇದುವರೆಗೆ, ಪಾಲಿಕೆಯ ಸಭೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಮೊದಲು ಮತದಾನ ಮಾಡಲು ಅವಕಾಶ ನೀಡಿದ ಕಾರಣ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಮೊದಲು ಮತದಾನದ ಅವಕಾಶ ನೀಡಿದ ಕಾರಣ ಬೇಸತ್ತ ಆಪ್‌ ಕೋರ್ಟ್‌ ಮೊರೆ ಹೋಗಿದೆ.

ಇದನ್ನೂ ಓದಿ: Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Ruckus | ದೆಹಲಿಯಲ್ಲಿ ಬೀದಿಗೆ ಬಂದ ಬಿಜೆಪಿ, ಆಪ್‌ ಜಗಳ, ಮತ ಹಾಕಿದ ಜನರಿಗೇ ನಾಚಿಕೆಯಾಗುವಂತೆ ಕಿತ್ತಾಟ

ದೆಹಲಿ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಪ್‌ ಕೌನ್ಸಿಲರ್‌ಗಳ ಕಿತ್ತಾಟವು ಮುಗಿಲುಮುಟ್ಟಿದೆ. ಕೆಲ ದಿನಗಳ ಹಿಂದೆ ಪಾಲಿಕೆಯ ಕಚೇರಿಯಲ್ಲಿ ನಡೆದಿದ್ದ ಗಲಾಟೆ (Delhi MCD Ruckus) ಈಗ ಬೀದಿಗೆ ಬಂದಿದೆ.

VISTARANEWS.COM


on

Delhi MCD Ruckus
Koo

ನವದೆಹಲಿ: ಮುನ್ಸಿಪಲ್‌ ಕಾರ್ಪೊರೇಷನ್‌ ಆಫ್‌ ದೆಹಲಿ (MCD)ಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಫ್‌ ಕೌನ್ಸಿಲರ್‌ಗಳ ಮಧ್ಯೆ ನಡೆಯುತ್ತಿರುವ ಗಲಾಟೆಯೀಗ (Delhi MCD Ruckus) ಬೀದಿಗೆ ಬಂದಿದೆ. ಮೇಯರ್‌ ಚುನಾವಣೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇಂತಹವರಿಗೆ ನಾವು ಮತ ಹಾಕಿದೆವಾ ಎಂದು ಜನ ಬೇಸರ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಕಾದಾಟ ತಾರಕಕ್ಕೇರಿದೆ.

ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಪ್ರತಿಭಟನೆ
ಲೆಫ್ಟಿನೆಂಟ್‌ ಗವರ್ನರ್‌ ಅವರು ಮಹಾನಗರ ಪಾಲಿಕೆಯ ಸ್ಪೀಕರ್‌ ಆಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ನೇಮಿಸಿದ ಕಾರಣ ಬಿಜೆಪಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕೌನ್ಸಿಲರ್‌ಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿಯ ಇಬ್ಬರು ಮಹಿಳಾ ಕೌನ್ಸಿಲರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಬೇಕಾಯಿತು.

ಏಕೆ ಇಷ್ಟೊಂದು ಗಲಾಟೆ?
ಜನವರಿ 6ರಂದು ನಡೆದ ಮೊದಲ ಸಭೆಯ ವೇಳೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.

ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Delhi Mayor Polls | ಮಾರಾಮಾರಿ ನಡುವೆ ದಿಲ್ಲಿ ಪಾಲಿಕೆ ಸಭೆ ಮುಂದೂಡಿಕೆ, ನಡೆಯಲಿಲ್ಲ ಮೇಯರ್ ಎಲೆಕ್ಷನ್!

Continue Reading

ದಿಲ್ಲಿ ಪಾಲಿಕೆ ಚುನಾವಣೆ

BJP Poaching AAP | ದೆಹಲಿಯ ಒಬ್ಬ ಕೌನ್ಸಿಲರ್‌ಗೆ ಬಿಜೆಪಿ 10 ಕೋಟಿ ರೂ. ಆಫರ್‌, ಆಪ್‌ ಗಂಭೀರ ಆರೋಪ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ “ಕುದುರೆ ವ್ಯಾಪಾರ”ದ (BJP Poaching AAP) ಆರೋಪ ಮಾಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಬಿಜೆಪಿಯ ೧೫ ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. “ಆಪ್‌ನ ೧೦ ಕೌನ್ಸಿಲರ್‌ಗಳ ಖರೀದಿಗೆ ಬಿಜೆಪಿ ೧೦೦ ಕೋಟಿ ರೂಪಾಯಿಯ ಆಫರ್‌ (BJP Poaching AAP) ನೀಡಿದೆ” ಎಂದು ಆಪ್‌ ಕೌನ್ಸಿಲರ್‌ಗಳು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ.

“ಪಾಲಿಕೆ ಚುನಾವಣೆಯಲ್ಲಿ ಸೋತ ಬಿಜೆಪಿಯು ಹೊಲಸು ರಾಜಕಾರಣ ಮಾಡುತ್ತಿದೆ. ಹಣಬಲದಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆಪ್‌ನ ಒಬ್ಬ ಕೌನ್ಸಿಲರ್‌ಗೆ ೧೦ ಕೋಟಿ ರೂ. ಆಫರ್‌ ನೀಡಿದೆ. ಒಬ್ಬ ಕೌನ್ಸಿಲರ್‌ಗೆ ತಲಾ ೧೦ ಕೋಟಿ ರೂ. ನೀಡಿ, ಒಟ್ಟು ೧೦ ಕೌನ್ಸಿಲರ್‌ಗಳನ್ನು ಸೆಳೆಯುವ ತಂತ್ರ ಬಿಜೆಪಿಯದ್ದಾಗಿದೆ. ಹಾಗೆಯೇ, ಒಂದು ಕ್ರಾಸ್‌ ವೋಟಿಂಗ್‌ಗೆ ೫೦ ಲಕ್ಷ ರೂ. ಫಿಕ್ಸ್‌ ಮಾಡಿದೆ. ಆ ಮೂಲಕ ದೆಹಲಿ ಪಾಲಿಕೆಯಲ್ಲಿ ಆಪ್‌ ಆಡಳಿತ ನಡೆಸುವುದನ್ನು ತಡೆಯಲು ಬಿಜೆಪಿ ಎಲ್ಲ ಪ್ರಯತ್ನ ಮಾಡುತ್ತಿದೆ” ಎಂದು ಆಪ್‌ ಕೌನ್ಸಿಲರ್‌ಗಳಾದ ಡಾ.ರೊನಾಕ್ಷಿ ಶರ್ಮಾ, ಅರುಣ್‌ ನವಾರಿಯಾ ಹಾಗೂ ಜ್ಯೋತಿ ರಾಣಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಬಿಜೆಪಿ ಕೂಡ ಆಪ್‌ ವಿರುದ್ಧ ಇದೇ ಆರೋಪ ಮಾಡಿದೆ. ಬಿಜೆಪಿ ಕೌನ್ಸಿಲರ್‌ಗಳಿಗೆ ಆಪ್‌ ಆಮಿಷ ಒಡ್ಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮಹಾನಗರ ಪಾಲಿಕೆಯ ೨೫೦ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಪ್‌ ೧೩೪, ಬಿಜೆಪಿ ೧೦೪ ಹಾಗೂ ಕಾಂಗ್ರೆಸ್‌ ೯ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | Delhi MCD Election| ದೆಹಲಿ ಮಹಾನಗರ ಪಾಲಿಕೆ ಆಪ್​ ಮಡಿಲಿಗೆ; ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election | ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯಿಂದ ಆಪರೇಷನ್‌ ಕಮಲ?

ದೆಹಲಿ ಮಹಾನಗರ ಪಾಲಿಕೆ (Delhi MCD Election) ಚುನಾವಣೆಯಲ್ಲಿ ಸೋಲುಂಡ ಬೆನ್ನಲ್ಲೇ ಬಿಜೆಪಿಯು ಆಪ್‌ ಕೌನ್ಸಿಲರ್‌ಗಳ ಖರೀದಿಗೆ ಯತ್ನಿಸುತ್ತಿದೆ ಎಂದು ಆಪ್‌ ಗಂಭೀರ ಆರೋಪ ಮಾಡಿದೆ.

VISTARANEWS.COM


on

Delhi Liquor Policy Case judicial custody of Manish Sisodia Extended
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (Delhi MCD Election) ಸೋಲನುಭವಿಸಿದ ಬಿಜೆಪಿಯು ಆಪರೇಷನ್‌ ಕಮಲಕ್ಕೆ ಮುಂದಾಗಿದೆ ಎಂದು ಆಮ್‌ ಆದ್ಮಿ ಪಕ್ಷವು ಗಂಭೀರ ಆರೋಪ ಮಾಡಿದೆ. “ಬಿಜೆಪಿಯು ತನ್ನ ಅಸಲಿ ಆಟ ಶುರು ಮಾಡಿದೆ. ಆಪ್‌ ಕೌನ್ಸಿಲರ್‌ಗಳಿಗೆ ಬಿಜೆಪಿಯಿಂದ ಕರೆಗಳು ಬರುತ್ತಿವೆ” ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಆರೋಪಿಸಿದ್ದಾರೆ.

“ಬಿಜೆಪಿಯಿಂದ ಬರುವ ಪ್ರತಿಯೊಂದು ಕರೆಗಳನ್ನು ರೆಕಾರ್ಡ್‌ ಮಾಡುವಂತೆ ನಮ್ಮ ಪಕ್ಷದ ಕೌನ್ಸಿಲರ್‌ಗಳಿಗೆ ಸೂಚಿಸಲಾಗಿದೆ. ಬಿಜೆಪಿಯ ಯಾವುದೇ ಆಟವೂ ನಡೆಯುವುದಿಲ್ಲ. ನಮ್ಮ ಪಕ್ಷದ ಒಬ್ಬರೇ ಒಬ್ಬ ಕೌನ್ಸಿಲರ್‌ಗಳು ಮಾರಾಟವಾಗುವುದಿಲ್ಲ. ಸೋಲಿನ ಹತಾಶೆಯಿಂದಾಗಿ ಬಿಜೆಪಿಯು ಇಂತಹ ಕೃತ್ಯಕ್ಕೆ ಕೈಹಾಕಿದೆ. ಇದರಲ್ಲಿ ಅದು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ” ಎಂದು ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ೧೫ ವರ್ಷದಿಂದ ಪಾರುಪತ್ಯ ಸಾಧಿಸಿದ್ದ ಬಿಜೆಪಿಯನ್ನು ಸೋಲಿಸಿ ಆಪ್‌ ಗೆಲುವು ಸಾಧಿಸಿದೆ. ೨೫೦ ವಾರ್ಡ್‌ಗಳಲ್ಲಿ ಆಪ್‌ ೧೩೪, ಬಿಜೆಪಿ ೧೦೪, ಕಾಂಗ್ರೆಸ್‌ ೯ ಹಾಗೂ ೩ ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ | Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್‌ ಕೋಟೆ ಭೇದಿಸಿದ ಆಪ್‌, ಗೆಲುವಿಗೆ ಪ್ರಮುಖ ಕಾರಣಗಳೇನು?

Continue Reading
Advertisement
Family Drama Film Review
ಸಿನಿಮಾ2 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ26 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ40 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ55 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌