Rahul Gandhi | ರಾಹುಲ್‌ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್‌ ಅಬ್ದುಲ್ಲಾ - Vistara News

ದೇಶ

Rahul Gandhi | ರಾಹುಲ್‌ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್‌ ಅಬ್ದುಲ್ಲಾ

ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರು ರಾಹುಲ್‌ ಗಾಂಧಿ (Rahul Gandhi) ಅವರನ್ನು ಭಗವಾನ್‌ ಶ್ರೀರಾಮನಿಗೆ ಹೋಲಿಸಿದ್ದರು. ಈಗ ಫಾರೂಕ್‌ ಅಬ್ದುಲ್ಲಾ ಅವರು ರಾಹುಲ್‌ ಗಾಂಧಿ ಅವರನ್ನು ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ.

VISTARANEWS.COM


on

Farooq Abdullah On Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಭಾರತ್‌ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿರುವ ಕಾರಣ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ (Rahul Gandhi) ಅವರು ಜಮ್ಮು-ಕಾಶ್ಮೀರ ತಲುಪಿದ್ದಾರೆ. ಇದರ ಬೆನ್ನಲ್ಲೇ, ನ್ಯಾಷನಲ್‌ ಕಾನ್ಫರೆನ್ಸ್‌ ವರಿಷ್ಠ, ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ರಾಹುಲ್‌ ಗಾಂಧಿ ಅವರನ್ನು ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರಿಗೆ ಹೋಲಿಸಿದ್ದಾರೆ.

ಜಮ್ಮು-ಕಾಶ್ಮೀರದ ಲಖನ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. “ಆದಿ ಶಂಕರಾಚಾರ್ಯರ ನಂತರ ರಾಹುಲ್‌ ಗಾಂಧಿ ಅವರು ಮಾತ್ರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಭಾರತದಾದ್ಯಂತ ದ್ವೇಷವನ್ನು ಹರಡಿಸಲಾಗುತ್ತಿದೆ. ಒಂದು ಕಾಲದಲ್ಲಿ ಗಾಂಧೀಜಿಯವರ ಭಾರತ ಹಾಗೂ ಶ್ರೀರಾಮನ ಭಾರತವು ಎಲ್ಲರೂ ಒಂದೇ ಎಂಬುದಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಆದರೆ, ರಾಹುಲ್‌ ಗಾಂಧಿಯವರು ಕೈಗೊಳ್ಳುತ್ತಿರುವ ಯಾತ್ರೆಯು ಭಾರತವನ್ನು ಒಗ್ಗೂಡಿಸುವುದಾಗಿದೆ” ಎಂದರು. ಇದಕ್ಕೂ ಮೊದಲು, ಕಾಂಗ್ರೆಸ್‌ ನಾಯಕರ ಸಲ್ಮಾನ್‌ ಖುರ್ಷಿದ್‌ ಅವರು ರಾಹುಲ್‌ ಗಾಂಧಿ ಅವರನ್ನು ಶ್ರೀರಾಮನಿಗೆ ಹೋಲಿಸಿದ್ದರು.

ಇದನ್ನೂ ಓದಿ | Congress BJP Spar | ರಾಹುಲ್‌ ಗಾಂಧಿಯನ್ನು ರಾಮನಿಗೆ ಹೋಲಿಸಿದ ಕಾಂಗ್ರೆಸ್‌, ಹಿಂದುಗಳ ಭಾವನೆಗಳಿಗೆ ಅವಮಾನ ಎಂದ ಬಿಜೆಪಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

BSP List: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿಯು 11 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಇದರ ಬೆನ್ನಲ್ಲೇ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಪತ್ನಿಗೂ ಮಾಯಾವತಿ ಅವರು ಟಿಕೆಟ್‌ ನೀಡಿದ್ದಾರೆ.

VISTARANEWS.COM


on

BSP Candidates List
Koo

ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಬಹುಜನ ಸಮಾಜ ಪಕ್ಷವು (BSP List) 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ವಾರಾಣಸಿಯಲ್ಲಿ (Varanasi) ನರೇಂದ್ರ ಮೋದಿ ಅವರ ವಿರುದ್ಧ ಅಥರ್‌ ಜಮಾಲ್‌ ಲರಿ (Athar Jamal Lari) ಅವರನ್ನು ಮಾಯಾವತಿ (Mayawati) ಅವರು ಕಣಕ್ಕಿಳಿಸಿದ್ದಾರೆ. ಮತ್ತೊಂದೆಡೆ, ಕೊಲೆ, ಸುಲಿಗೆ, ಅಪಹರಣ ಸೇರಿ ಹಲವು ಪ್ರಕರಣಗಳ ಆರೋಪಿ, ಜೈಲುಪಾಲಾಗಿರುವ ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿಗೂ ಬಿಎಸ್‌ಪಿ ಟಿಕೆಟ್‌ ಘೋಷಿಸಿದೆ.

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಈಗ ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಗ್ಯಾಂಗ್‌ಸ್ಟರ್‌ ಪತ್ನಿಗೆ ಟಿಕೆಟ್‌

ಉತ್ತರ ಪ್ರದೇಶದ ಜೌನ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿಯು ಗ್ಯಾಂಗ್‌ಸ್ಟರ್‌ ಧನಂಜಯ್‌ ಸಿಂಗ್‌ ಪತ್ನಿ ಶ್ರೀಕಲಾ ಸಿಂಗ್‌ ಅವರಿಗೆ ಟಿಕೆಟ್‌ ನೀಡಿದೆ. ಇದು ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇನ್ನು, ಮೈನ್‌ಪುರಿಯಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿರುವ ಬಿಎಸ್‌ಪಿಯು, ಶಿವಪ್ರಸಾದ್‌ ಯಾದವ್‌ ಅವರಿಗೆ ಮಣೆ ಹಾಕಿದೆ. ಬರೇಲಿಯಲ್ಲಿ ಛೋಟಾಲಾಲ್‌ ಗಂಗ್ವಾರ್‌, ಬಂಡಾದಲ್ಲಿ ಮಯಾಂಕ್‌ ದ್ವಿವೇದಿ, ಘಾಜಿಪುರದಲ್ಲಿ ಉಮೇಶ್‌ ಕುಮಾರ್‌ ಸಿಂಗ್‌ ಸೇರಿ 11 ಕ್ಷೇತ್ರಗಳಲ್ಲಿ ಬಿಎಸ್‌ಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ

ಯಾರೀತ ಧನಂಜಯ್‌ ಸಿಂಗ್‌?

ಧನಂಜಯ್‌ ಸಿಂಗ್‌ ಉತ್ತರ ಪ್ರದೇಶ ಕಂಡ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾಗಿದ್ದಾನೆ. ಈತನ ವಿರುದ್ಧ 1991ರಿಂದ 2023ರ ಅವಧಿಯಲ್ಲಿ ದೆಹಲಿ, ಜೌನ್‌ಪುರ ಹಾಗೂ ಲಖನೌನಲ್ಲಿ ಕೊಲೆ, ಸುಲಿಗೆ, ಅಪಹರಣ, ಗಲಭೆ, ಅಪರಾಧಕ್ಕೆ ಪ್ರಚೋದನೆ ಸೇರಿ 46 ಪ್ರಕರಣಗಳು ದಾಖಲಾಗಿವೆ. ಇಂತಹ ಗ್ಯಾಂಗ್‌ಸ್ಟರ್‌ ಒಮ್ಮೆ ಶಾಸಕ ಹಾಗೂ ಒಮ್ಮೆ ಸಂಸದನಾಗಿ (ಜೌನ್‌ಪುರ ಕ್ಷೇತ್ರದ ಸಂಸದ) ಆಯ್ಕೆಯಾಗಿದ್ದ ಎಂಬುದೇ ವ್ಯವಸ್ಥೆಯ ಘೋರ ಅಣಕವಾಗಿದೆ. ನಮಾಮಿ ಗಂಗೆ ಯೋಜನೆಯ ಮ್ಯಾನೇಜರ್‌ ಒಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಈತನಿಗೆ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Lok Sabah Election : ಉತ್ತರ ದಿಲ್ಲಿಯಿಂದ ಕಾಂಗ್ರೆಸ್​ ಟಿಕೆಟ್ ಪಡೆದ ಕನ್ಹಯ್ಯ ಕುಮಾರ್​​

Continue Reading

ಕ್ರೈಂ

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

Rameshwaram Cafe Blast: ಬಾಂಬರ್‌ಗಳ ಟಾರ್ಗೆಟ್‌ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್‌ ಇಡಲು ಮೊದಲು ಪ್ಲಾನ್‌ ಮಾಡಿದ್ದರು. ಎಸ್ಇಜೆಡ್ ಏರಿಯಾದಲ್ಲಿ ಸ್ಫೋಟ ಮಾಡಬೇಕು ಅಂತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಟಾರ್ಗೆಟ್ ಮಾಡಿದ್ದರು.

VISTARANEWS.COM


on

Rameshwaram Cafe
Koo

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ (Blast in bengaluru) ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಬಂಧಿಸಲಾಗಿರುವ ಇಬ್ಬರು ಪ್ರಮುಖ ಉಗ್ರರನ್ನು (cafe bombers) ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬೆಚ್ಚಿ ಬೀಳಿಸುವ ಕೆಲವು ಸಂಗತಿಗಳನ್ನು ಇವರು ಹೊರಗೆಡಹಿದ್ದಾರೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಐಟಿ ಬಿಟಿ ಹಬ್‌ (IT hub) ಮೇಲೆಯೇ ಇವರು ಬಾಂಬ್‌ ದಾಳಿ (Bomb Blast) ನಡೆಸಲು ಸ್ಕೆಚ್‌ ಹಾಕಿದ್ದರು ಎಂಬುದು ಗೊತ್ತಾಗಿದೆ.

ರಾಮೇಶ್ವರಂ ಕೆಫೆ (Rameshwaram Cafe Blast) ಬಾಂಬರ್‌ಗಳನ್ನು ಎನ್‌ಐಎ (NIA) ಸತತವಾಗಿ ಡ್ರಿಲ್‌ ಮಾಡುತ್ತಿದ್ದು ವಿಚಾರಣೆಯ ವೇಳೆ ಬಾಂಬರ್‌ಗಳು ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಾಂಬರ್‌ಗಳ ಟಾರ್ಗೆಟ್‌ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್‌ ಇಡಲು ಮೊದಲು ಪ್ಲಾನ್‌ ಮಾಡಿದ್ದರು. ಎಸ್ಇಜೆಡ್ ಏರಿಯಾದಲ್ಲಿ ಸ್ಫೋಟ ಮಾಡಬೇಕು ಅಂತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಟಾರ್ಗೆಟ್ ಮಾಡಿದ್ದರು.

ಅದಕ್ಕೆ ಕಾರಣವೂ ಇತ್ತು. ಎಸ್ಎಜೆಡ್ ಏರಿಯಾದಲ್ಲಿ ಸ್ಫೋಟ ನಡೆಸಿದರೆ ದೇಶ ಹಾಗೂ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಎಸ್ಇಜೆಡ್ ಏರಿಯಾದಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಸಾಕಷ್ಟು ಸುದ್ದಿಯಾಗಿ ತಮ್ಮ ಕೃತ್ಯ ಅಂತಾರಾಷ್ಟ್ರೀಯವಾಗಿ ಮಿಂಚುತ್ತದೆ ಎಂದು ಪಾತಕಿಗಳು ವೈಟ್‌ಫೀಲ್ಡ್‌ನ ಹಲವೆಡೆ ಓಡಾಡಿದ್ದರು.

ಅದರೆ ಐಟಿಬಿಟಿ ಏರಿಯಾದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಲ್ಲ‌ ಎಂದು ಅವರಿಗೆ ಮನವರಿಕೆಯಾಗಿತ್ತು. ಕಂಪನಿಗಳು ಇರುವ ಪ್ರದೇಶದಲ್ಲಿ ಟೈಟ್ ಸೆಕ್ಯುರಿಟಿ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಕಂಡುಬಂದಿದ್ದು, ಕಂಪನಿ ಕಂಪೌಂಡ್‌ಗಳ ಒಳಗೆ ಹೋಗುವುದು ಅಷ್ಟು ಸುಲಭವಲ್ಲ ಎಂದು ಅರ್ಥವಾಗಿತ್ತು. ನಂತರ ಫ್ಲಾನ್ ಚೇಂಜ್‌ ಮಾಡಿ, ಅದೇ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಬೇಕು ಎಂದು ತೀರ್ಮಾನಿಸಿದ್ದರು.

ಈ ವೇಳೆ ಅವರಿಗೆ ಕಂಡಿದ್ದು ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ. ಅತಿ ಹೆಚ್ಚು ಜನ ಸೇರುತ್ತಾರೆ, ಇಲ್ಲಿಗೂ ಟೆಕ್ಕಿಗಳು ಬರುತ್ತಾರೆ. ಕೆಫೆ ಎಂಟ್ರಿಯಾಗಲು ಯಾವುದೇ ಅಡೆತಡೆ ಇರುವುದಿಲ್ಲ. ಸೆಕ್ಯುರಿಟಿ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲ. ಆದ್ದರಿಂದ ಬಾಂಬ್ ಸ್ಫೋಟ ನಡೆಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳ ಎಂದು ಸೆಲೆಕ್ಟ್ ಮಾಡಿದ್ದರು. ಅಲ್ಲದೆ ಇದೇ ವೇಳೆ ರಾಮಮಂದಿರ ಕೂಡ ಉದ್ಘಾಟನೆಯಾಗಿದ್ದು, ಈ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು.

ಮಾರ್ಚ್ 1ರಂದು ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿತ್ತು. ಕೇವಲ ಸಿಸಿಟಿವಿ ಫೂಟೇಜ್‌ನ ಪ್ರಾಥಮಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಎನ್‌ಐಎ ದೇಶಾದ್ಯಂತ ಭಾರಿ ಪ್ರಮಾಣದ ತಲಾಶೆ ನಡೆಸಿತ್ತು. ಕೊನೆಗೂ ಕೋಲ್ಕತ್ತಾದಲ್ಲಿ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.

ಉಗ್ರರ ಕ್ಲೂ ಸಿಕ್ಕಿದ್ದು ಹೀಗೆ

ಉಗ್ರರು ಕೋಲ್ಕತ್ತಾದಲ್ಲಿಯೇ ಇದ್ದಾರೆ ಎಂಬುದು ಎನ್‌ಐಎಗೆ ಗೊತ್ತಾದದ್ದು ಹೇಗೆ? ಇದೂ ಕುತೂಹಲಕಾರಿಯಾಗಿದೆ. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದ ನಂತರ ಇಬ್ಬರೂ ರಾಜ್ಯದಿಂದ ಎಸ್ಕೇಪ್ ಆಗಿದ್ದರು. ತಮಿಳುನಾಡು, ಒಡಿಶಾಗಳಲ್ಲಿ ಸುತ್ತಾಡಿ ಪಶ್ಚಿಮ ಬಂಗಾಳ ಸೇರಿಕೊಂಡಿದ್ದರು. ಹಲವಾರು ದಿನ ಸುತ್ತಾಡಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು.

ಹ್ಯಾಂಡ್ಲರ್ ಮೂಲಕ ಇವರ ಬೇನಾಮಿ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತಿತ್ತು. ಶಂಕಿತರು ಬಳಸುತ್ತಿದ್ದ ಅಕೌಂಟ್ ಮಾಹಿತಿಯನ್ನು NIA ಸಂಗ್ರಹಿಸಿತ್ತು. ಇದೇ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಅಂತಿಮವಾಗಿ ಕೋಲ್ಕತ್ತಾದಲ್ಲಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಹಾಗಾಗಿ ಕೋಲ್ಕತ್ತಾದಲ್ಲಿ ತನಿಖಾ ತಂಡ ಬೀಡುಬಿಟ್ಟಿತ್ತು.

ನಂತರ ಅಲ್ಲಿನ ಲಾಡ್ಜ್‌ಗಳ ಲೆಡ್ಜರ್‌ಗಳು ಹಾಗೂ ಸಿಸಿಟಿವಿ ಫೂಟೇಜ್‌ಗಳನ್ನು ಇಟ್ಟುಕೊಂಡು ಪರಿಶೀಲಿಸಲಾಗಿತ್ತು. ನಕಲಿ ಗುರುತಿನ ದಾಖಲೆ ನೀಡಿ ಲಾಡ್ಜ್‌ನಲ್ಲಿ ವಾಸವಾಗಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಬಾಂಬರ್‌ಗಳಿಗೆ 10 ದಿನ ಎನ್‌ಐಎ ಕಸ್ಟಡಿ; ಮತ್ತಷ್ಟು ಗ್ರಿಲ್‌ ಮಾಡಲು ಪೊಲೀಸರು ಸಜ್ಜು

Continue Reading

ಉದ್ಯೋಗ

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

New Job Trend: ಕಳೆದ ಕೆಲವು ವರ್ಷಗಳಲ್ಲಿ ಉದ್ಯೋಗ ರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಉದ್ಯೋಗದಾತರು ಡ್ರೈ ಪ್ರಮೋಷನ್ ನೀಡಲು ಹೆಚ್ಚಿನ ಒಲವು ತೋರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದು ಕಳೆದ ವರ್ಷದಿಂದ ಶೇ. ೧೩ರಷ್ಟು ಹೆಚ್ಚಳವಾಗಿದೆ.

VISTARANEWS.COM


on

By

New Job Trend
Koo

ಕಚೇರಿಗೆ (office) ಹೋಗಿ ಕೆಲಸ ಮಾಡುವುದರಿಂದ ಸಾಕಷ್ಟು ಲಾಭವಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ವರ್ಷದಿಂದ ವರ್ಷಕ್ಕೆ ವೇತನ ಹೆಚ್ಚಳ (salary increment), ಬಡ್ತಿ (Promotion) ಸಿಗುತ್ತೆ ಎನ್ನುವ ಉದ್ದೇಶವೂ ಇದರ ಹಿಂದೆ ಇತ್ತು. ಆದರೆ ವಿಶ್ವವನ್ನೇ ಬಾಧಿಸಿದ ಕೋವಿಡ್ ಸಾಂಕ್ರಾಮಿಕದ ಬಳಿಕ ಎಲ್ಲವೂ ಬದಲಾಗಿದೆ. ಅದರಲ್ಲೂ ಒಂದೆರಡು ವರ್ಷಗಳಿಂದ ಉದ್ಯೋಗ ಕ್ಷೇತ್ರಗಳಲ್ಲಿ (job place) ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಕಚೇರಿಗಳಲ್ಲಿ ಜವಾಬ್ದಾರಿಗಳು ಬದಲಾಗುತ್ತಿದೆ, ಕೆಲಸದ ಒತ್ತಡವೂ ಹೆಚ್ಚಾಗಿದೆ. ಆದರೆ ಬಡ್ತಿ ಸಿಗುತ್ತಿಲ್ಲ, ಸಂಬಳ ಏರುತ್ತಿಲ್ಲ. ಈ ನಡುವೆ ಇದೀಗ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ವೊಂದು (New Job Trend) ಉದ್ಭವವಾಗಿದೆ.

ಇತ್ತೀಚೆಗೆ ವರ್ಕ್ ಫ್ರಮ್ ಹೋಮ್ (work from home) ಅವಕಾಶಗಳು ಹೆಚ್ಚಾಗಿದೆ. ಉದ್ಯೋಗಿಗಳೂ ಮನೆಯಲ್ಲೇ ಇರುವುದು ಉತ್ತಮ. ಮನೆ, ಕಚೇರಿ ಜವಾಬ್ದಾರಿ ಎರಡನ್ನೂ ನಿಭಾಯಿಸಬಹುದು ಎಂದುಕೊಂಡು ಇದ್ದರು. ಆದರೆ ನಿಧಾನಕ್ಕೆ ಕಚೇರಿಗಳು ಉದ್ಯೋಗಿಗಳಿಗೆ ಕಚೇರಿಗೆ ಬರುವುದನ್ನು ಕಡ್ಡಾಯಗೊಳಿಸಿತ್ತು.

ವರ್ಕ್ ಫ್ರಮ್ ಹೋಮ್ ಪರಿಸ್ಥಿತಿ ಬದಲಾದ ಮೇಲೆ ಉದ್ಯೋಗ ಸ್ಥಳದಲ್ಲೂ ಸಾಕಷ್ಟು ಬದಲಾವಣೆಗಳು ಆಯಿತು. ಕಳೆದೆರಡು ವರ್ಷಗಳಲ್ಲಿ ವೇತನ ಹೆಚ್ಚಳವಾಗದೆ, ಬಡ್ತಿಯೂ ಸಿಗದೇ ಬೇಸರ ಪಟ್ಟುಕೊಂಡಿದ್ದ ಹಲವಾರು ಉದ್ಯೋಗಿಗಳು ಕಂಪೆನಿ ಕಷ್ಟದಲ್ಲಿದೆ, ನಷ್ಟದಲ್ಲಿದೆ ಎಂದು ಸುಮ್ಮನಿದ್ದರು. ಆದರೆ ಈಗ ಬಡ್ತಿ ಏನೋ ಸಿಗುತ್ತಿದೆ ಆದರೆ ಸಂಬಳ ಮಾತ್ರ ಕೇಳಬಾರದು.

ಇದನ್ನೂ ಓದಿ: Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

ಹೌದು ‘ಡ್ರೈ ಪ್ರಮೋಷನ್’ ಉದ್ಯೋಗ ಕ್ಷೇತ್ರದಲ್ಲಿ ಬೆಳೆದ ಹೊಸ ಟ್ರೆಂಡ್. ಈ ಹೊಸ ಉದ್ಯೋಗ ಪ್ರವೃತ್ತಿಯು ಇದೀಗ ಉದ್ಯೋಗಿಗಳನ್ನು ಚಿಂತೆಗೀಡು ಮಾಡುತ್ತಿದೆ. ಇದು ಹೆಚ್ಚಿನ ಉದ್ಯೋಗಿಗಳಿಗೆ ಬೇಸರವನ್ನು ತರಿಸಿದ್ದರೂ ಅವರು ಯಾವುದೇ ಚೌಕಾಶಿ ಮಾಡುತ್ತಿಲ್ಲ. ಉದ್ಯೋಗ ರಂಗದಲ್ಲಿ ಬೆಳೆಯುತ್ತಿರುವ ಈ ಅಭ್ಯಾಸ ಮುಂದಿನ ದಿನಗಳಲ್ಲಿ ಕೆಲಸಗಾರರು ಕ್ಷೀಣಿಸುವುದರ ಪ್ರತಿಬಿಂಬವಾಗಿದೆ ಎನ್ನುತ್ತಾರೆ ತಜ್ಞರು.

ಹೇಗೆ ಬದಲಾಯಿತು?

ನಿರಂತರ ವಿಕಾಸಗೊಳ್ಳುವ ಜಾಗತಿಕ ಉದ್ಯೋಗ ಮಾರುಕಟ್ಟೆಯು ಕೆಲವು ದಶಕಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಮನೆಯಿಂದ ಕೆಲಸ ಹಂಚಿಕೊಂಡ ಮೇಲೆಯಂತೂ ಎಲ್ಲವೂ ವೇಗವಾಗಿ ಬದಲಾಯಿತು. ಆದರೆ ವರ್ಕ್ ಫ್ರಮ್ ಹೋಂ ಎನ್ನುವುದು ಸದ್ದಿಲ್ಲದೆ ಪ್ರಾಮುಖ್ಯತೆಯನ್ನು ಪಡೆಯಿತು.


ಏನಿದು ಡ್ರೈ ಪ್ರಮೋಷನ್?

ಡ್ರೈ ಪ್ರಮೋಷನ್ ಎಂದರೆ ಸಂಬಳದಲ್ಲಿ ಯಾವುದೇ ಹೆಚ್ಚಳವಿಲ್ಲದೆ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡುವುದು. ಅಂದರೆ ನಿಮ್ಮ ಹುದ್ದೆ ಬದಲಾಗುತ್ತದೆ. ಕೆಲಸದ ಹೊರೆಯೂ ಹೆಚ್ಚಾಗುತ್ತದೆ, ಜವಾಬ್ದಾರಿಗಳು ಹೆಚ್ಚಾತ್ತವೆ. ಆದರೆ ಈ ಬದಲಾವಣೆಗಳಿಗೆ ಯಾವುದೇ ಹಣಕಾಸು ಪರಿಹಾರ ಸಿಗುವುದಿಲ್ಲ!

ಸಾಮಾನ್ಯವಾಗಿ ಬಡ್ತಿ ಸಿಕ್ಕಿದಾಗ ಸಂಬಳದಲ್ಲೂ ನಿರ್ದಿಷ್ಟ ಪ್ರಮಾಣದ ಏರಿಕೆಯಾಗುತ್ತದೆ. ಆದರೆ ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆಯ ಹೊಸ ಟ್ರೆಂಡ್ ನಲ್ಲಿ ಯಾವುದೇ ರೀತಿಯಲ್ಲಿ ವೇತನ ಹೆಚ್ಚಳ ಮಾಡದೇ ಕೇವಲ ಬಡ್ತಿ ನೀಡಲಾಗುತ್ತದೆ.

ಜವಾಬ್ದಾರಿ ಬದಲಾವಣೆ ಮಾತ್ರ!

ಇತ್ತೀಚಿನ ಅಂಕಿ ಅಂಶವೊಂದರ ಪ್ರಕಾರ ಶೇ. 13ಕ್ಕಿಂತ ಹೆಚ್ಚು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಹಣದ ಬದಲಿಗೆ ಹೊಸ ಉದ್ಯೋಗ ಪದೋನ್ನತಿ ನೀಡಲು ನಿರ್ಧರಿಸಿತ್ತು ಎಂದು ಹೇಳಿದೆ. 2018ರಲ್ಲಿ ಇದು ಕೇವಲ ಶೇ. 8 ರಷ್ಟಿತ್ತು. ಆದರೆ ಇದೀಗ ಏಕಾಏಕಿ ಇದು ಶೇ. 13ಕ್ಕಿಂತಲೂ ಹೆಚ್ಚಾಗಿದೆ.

ಕಡಿಮೆ ಹೆಚ್ಚಳ

ಖಾಸಗಿ ಸಲಹಾ ಸಂಸ್ಥೆಯೊಂದು ಮರ್ಸರ್‌ನ 900 ಕಂಪನಿಗಳ ಸಮೀಕ್ಷೆ ನಡೆಸಿದ್ದು, 2023ಕ್ಕೆ ಹೋಲಿಸಿದರೆ ಹೆಚ್ಚಿನ ಉದ್ಯೋಗದಾತರು 2024ರಲ್ಲಿ ತೀರ ಕಡಿಮೆ ಸಂಬಳ ಹೆಚ್ಚಳ ಮಾಡಿದ್ದಾರೆ. ಕಂಪನಿಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಪಾಲನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.


ಜವಾಬ್ದಾರಿ ಹೆಚ್ಚಳ

ಈ ಮೊದಲು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದ ಕಂಪನಿಗಳು ಬಳಿಕ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಗಣನೀಯ ಪ್ರಮಾಣದಲ್ಲಿ ಸಂಬಳ ಏರಿಕೆಗಳನ್ನು ಮಾಡಲು ಒತ್ತಾಯಿಸಲ್ಪಟ್ಟವು. ಆದರೂ ಕೆಲವು ಉದ್ಯೋಗದಾತರು ತಮ್ಮ ಪರಿಹಾರವನ್ನು ಹೆಚ್ಚಿಸದೆ ಅಸ್ತಿತ್ವದಲ್ಲಿರುವ ಸಿಬ್ಬಂದಿಗೆ ವಜಾಗೊಳಿಸಿದ ಕಾರ್ಮಿಕರ ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡಿ ವೇತನ ಹೆಚ್ಚಳ ಮಾಡದೆ ಕೇವಲ ಬಡ್ತಿಯನ್ನಷ್ಟೇ ನೀಡುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗಿದೆ. ಕಳೆದ ವರ್ಷ ಹಂಚಿಕೊಂಡ ರೆಡ್ಡಿಟ್ ಥ್ರೆಡ್‌ನಲ್ಲಿ, ಬಳಕೆದಾರರು ತಮ್ಮ ಮ್ಯಾನೇಜರ್ ಅವರು ಸಾಮಾನ್ಯವಾಗಿ ಜೂನಿಯರ್‌ಗಿಂತ ಹೆಚ್ಚು ಕೆಲಸ ಮಾಡುವುದರಿಂದ ಮ್ಯಾನೇಜ್‌ಮೆಂಟ್ ಅವರ ಶೀರ್ಷಿಕೆಯಲ್ಲಿ ಜೂನಿಯರ್ ಅನ್ನು ತೊಡೆದುಹಾಕಲು ನಿರ್ಧರಿಸಿತ್ತು ಎಂದು ಹೇಳಿದ್ದರು. ಆದರೂ ಅದು ಸಂಬಳ ಹೆಚ್ಚಿಸಿದೆಯೇ ಎಂದು ಕೇಳಿದ್ದಕ್ಕೆ ಅದರ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದಿದ್ದರು.

ಲಾಭ ಏನು?

ಡ್ರೈ ಪ್ರಮೋಷನ್ ಬಗ್ಗೆ ಮಾತನಾಡಿರುವ ಮತ್ತೊಬ್ಬ ಬಳಕೆದಾರ, ಹೆಚ್ಚುವರಿ ಹಣವಿಲ್ಲದೆ ಉತ್ತಮ ಶೀರ್ಷಿಕೆ ನೀಡುವುದರಿಂದ ಒಂದು ಲಾಭವಿದೆ. ಇದರಿಂದ ಬೇರೆ ಕಡೆ ಉತ್ತಮ ಉದ್ಯೋಗ ಹುಡುಕಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

Continue Reading

ದೇಶ

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

Boat Capsize: ಜಮ್ಮು-ಕಾಶ್ಮೀರದ ಜೇಲಂ ನದಿಯಲ್ಲಿ ಮಂಗಳವಾರ ಬೆಳಗ್ಗೆ ದೋಣಿ ದುರಂತ ಸಂಭವಿಸಿದೆ. ಮಕ್ಕಳು, ಮಹಿಳೆಯರು ಸೇರಿ ಹಲವರು ಮಂದಿ ದೋಣಿಯಲ್ಲಿ ಸಂಚರಿಸುವಾಗ ಅದು ಮಗುಚಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗಿದೆ.

VISTARANEWS.COM


on

Boat Capsize
Koo

ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಜೇಲಂ ನದಿಯಲ್ಲಿ (Jhelum River) ಮಂಗಳವಾರ (ಏಪ್ರಿಲ್‌ 16) ಬೆಳಗ್ಗೆ ದೋಣಿಯೊಂದು ಮುಳುಗಿದ್ದು (Boat Capsize), ನಾಲ್ವರು ಶಾಲಾ ಮಕ್ಕಳು ಸೇರಿ ಹಲವರು ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಮಕ್ಕಳು ಸೇರಿ ಹಲವರು ಮಂದಿ ಸಂಚರಿಸುತ್ತಿದ್ದರು. ಇದೇ ವೇಳೆ ದೋಣಿಯು ಮಗುಚಿದೆ. ಹಲವು ಮಂದಿ ನೀರಿನಲ್ಲಿ ಮುಳುಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರು ಶಾಲಾ ಮಕ್ಕಳು ಮೃತಪಟ್ಟರೆ, ಮೂವರು ನಾಪತ್ತೆಯಾಗಿದ್ದಾರೆ. ಇದುವರೆಗೆ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜೇಲಂ ನದಿಯು ಉಕ್ಕಿ ಹರಿಯುತ್ತಿದೆ. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ಹಡಗು ಮಗುಚಿದೆ.

ಅಗತ್ಯಕ್ಕಿಂತ ಹೆಚ್ಚಿನ ಜನ ದೋಣಿಯಲ್ಲಿದ್ದ ಕಾರಣ ದುರಂತ ಸಂಭವಿಸಿದೆಯೋ, ನೀರಿನ ಸೆಳವಿಗೆ ಸಿಲುಕಿ ಮಗುಚಿದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆಗೆ ಸ್ಥಳೀಯರೂ ನೆರವು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಡಗು ಮುಳುಗಿ 94 ಜನರ ದುರ್ಮರಣ, 26 ಮಂದಿ ನಾಪತ್ತೆ; ಕಾಲರಾ ಭೀತಿ ತೆಗೆಯಿತು ಪ್ರಾಣ!

Continue Reading
Advertisement
Theft Case in Bengaluru
ಬೆಂಗಳೂರು3 mins ago

Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

actor prakash Rai
ವೈರಲ್ ನ್ಯೂಸ್28 mins ago

Actor Prakash Rai: “ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ; ನಿರ್ದಿಗಂತಕ್ಕೆ ಹಣದ ಹೊಳೆ!” ಸಿಡಿದೆದ್ದ ಜೆಡಿಎಸ್‌ನಿಂದ ನಟ ಪ್ರಕಾಶ್‌ ರೈಗೆ ಚಾಟಿ

IPL 2024
ಕ್ರೀಡೆ30 mins ago

IPL 2024: ಸ್ಟ್ರೈಕ್ ರೇಟ್​ ಮೂಲಕ ನೂತನ ದಾಖಲೆ ಬರೆದ ಅಬ್ದುಲ್​ ಸಮದ್

Breast Cancer
ಲೈಫ್‌ಸ್ಟೈಲ್34 mins ago

Breast Cancer: ಮಹಿಳೆಯರೇ ಹುಷಾರ್‌; 2040ರ ವೇಳೆಗೆ ಸ್ತನ ಕ್ಯಾನ್ಸರ್‌ಗೆ 10 ಲಕ್ಷ ಜನ ಬಲಿಯಾಗಲಿದ್ದಾರಂತೆ!

BSP Candidates List
ಪ್ರಮುಖ ಸುದ್ದಿ34 mins ago

BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

Road Accident in Hubballi
ಹುಬ್ಬಳ್ಳಿ48 mins ago

Road Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತಕ್ಕೆ ಮೂವರು ಬಲಿ, ಮತ್ತೋರ್ವ ಗಂಭೀರ

Rameshwaram Cafe
ಕ್ರೈಂ1 hour ago

Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!

New Job Trend
ಉದ್ಯೋಗ1 hour ago

New Job Trend: ಉದ್ಯೋಗ ಕ್ಷೇತ್ರದಲ್ಲೊಂದು ಹೊಸ ಟ್ರೆಂಡ್; ಏನಿದು ಡ್ರೈ ಪ್ರಮೋಷನ್?

Boat Capsize
ದೇಶ1 hour ago

Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

IPL 2024
ಕ್ರಿಕೆಟ್1 hour ago

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ6 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 202423 hours ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ2 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ3 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ4 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌