SCO Meet: ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಸಭೆಗೆ ಪಾಕ್​​ ರಕ್ಷಣಾ ಸಚಿವರನ್ನು ಆಹ್ವಾನಿಸಿದ ಭಾರತ Vistara News
Connect with us

ದೇಶ

SCO Meet: ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಸಭೆಗೆ ಪಾಕ್​​ ರಕ್ಷಣಾ ಸಚಿವರನ್ನು ಆಹ್ವಾನಿಸಿದ ಭಾರತ

2022ರ ಸೆಪ್ಟೆಂಬರ್​​ ತಿಂಗಳಿನಲ್ಲಿ ಉಜ್ಬೇಕಿಸ್ತಾನದ ಸಮರಖಂಡದಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆದಿತ್ತು. 2023ರಲ್ಲಿ ಈ ಸಭೆಯ ಆತಿಥ್ಯ ವಹಿಸುವ ದೇಶ ಭಾರತ ಎಂದು ಅಲ್ಲೇ ಘೋಷಿಸಲಾಗಿತ್ತು. ಅಂತೆಯೇ ಈ ಸಲ ಭಾರತ ಶಾಂಘೈ ಸಹಕಾರ ಶೃಂಗದ ಅಧ್ಯಕ್ಷತೆ ವಹಿಸಲಿದೆ.

VISTARANEWS.COM


on

India invited Pakistan to SCO meet in New Delhi
Koo

ನವ ದೆಹಲಿ: ಪ್ರಸಕ್ತ ವರ್ಷದ ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ-SCO Meet) ಶೃಂಗದ ಆತಿಥ್ಯ ವಹಿಸಿರುವ ಭಾರತ, ಮುಂದಿನ ತಿಂಗಳು (ಏಪ್ರಿಲ್​) ದೆಹಲಿಯಲ್ಲಿ ನಡೆಯಲಿರುವ ಎಸ್​ಸಿಒ ಸಭೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್​​ರಿಗೆ ಆಮಂತ್ರಣ ನೀಡಿದೆ. ಎಸ್​ಇಒ ಶೃಂಗಸಭೆ ನಿಮಿತ್ತ ಈ ಸಂಘಟನೆಯಲ್ಲಿ ಇರುವ ದೇಶಗಳ ರಕ್ಷಣಾ ಸಚಿವರ ಸಭೆ ಏಪ್ರಿಲ್​ನಲ್ಲಿ ನವದೆಹಲಿಯಲ್ಲಿ ನಡೆಯಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ ಮೇ ತಿಂಗಳಲ್ಲಿ ಗೋವಾದಲ್ಲಿ ಜರುಗಲಿದೆ. ಮೇ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಸಭೆಗೂ ಭಾರತ ಈಗಾಗಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ಜರ್ದಾರಿಗೆ ಆಹ್ವಾನ ನೀಡಿದೆ. ಇದೆರಡೂ ಸಭೆಗಳಿಗೆ ಆಯಾ ಇಲಾಖೆಗಳ ಸಚಿವರನ್ನು ಕಳಿಸಬೇಕೋ, ಬೇಡವೋ ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.

2022ರ ಸೆಪ್ಟೆಂಬರ್​​ ತಿಂಗಳಿನಲ್ಲಿ ಉಜ್ಬೇಕಿಸ್ತಾನದ ಸಮರಖಂಡದಲ್ಲಿ ಶಾಂಘೈ ಸಹಕಾರ ಶೃಂಗಸಭೆ ನಡೆದಿತ್ತು. 2023ರಲ್ಲಿ ಈ ಸಭೆಯ ಆತಿಥ್ಯ ವಹಿಸುವ ದೇಶ ಭಾರತ ಎಂದು ಅಲ್ಲೇ ಘೋಷಿಸಲಾಗಿತ್ತು. ಅಂತೆಯೇ ಈ ಸಲ ಭಾರತ ಶಾಂಘೈ ಸಹಕಾರ ಶೃಂಗದ ಅಧ್ಯಕ್ಷತೆ ವಹಿಸಲಿದೆ. ಈ ಸಂಘಟನೆಯ ವ್ಯಾಪ್ತಿಯಲ್ಲಿ ಎಂಟು ದೇಶಗಳಾದ ಭಾರತ, ಚೀನಾ, ತಜಿಕಿಸ್ತಾನ್​, ರಷ್ಯಾ, ಉಜ್ಬೇಕಿಸ್ತಾನ್​, ಕಜಾಕಿಸ್ತಾನ್​, ಕಿರ್ಗಿಸ್ತಾನ್​, ಪಾಕಿಸ್ತಾನಗಳು ಇವೆ. ಯಾವ ದೇಶ ಆತಿಥ್ಯ ವಹಿಸುತ್ತದೆಯೋ ಆ ದೇಶ ಪೂರ್ವಭಾವಿ ಸಭೆಗಳನ್ನು ಆಯೋಜಿಸಿ, ಅದಕ್ಕೆ ಉಳಿದ ದೇಶಗಳ ಸಚಿವರನ್ನು ಆಹ್ವಾನಿಸಲೇಬೇಕು. ಅಂತೆಯೇ ಭಾರತ ತನ್ನ ಕರ್ತವ್ಯ ಮಾಡಿದೆ. ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ-ವ್ಯವಹಾರ ಇಲ್ಲ. ಅದು ಶತ್ರುದೇಶವೇ ಆಗಿದೆ. ಹಾಗಿದ್ದಾಗ್ಯೂ ಭಾರತ ಎರಡೂ ಸಭೆಗಳಿಗೆ ಪಾಕಿಸ್ತಾನಕ್ಕೆ ಆಹ್ವಾನ ನೀಡಿದೆ.

ಇದನ್ನೂ ಓದಿ: Asia Cup: ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ; ಬಿಸಿಸಿಐಗೆ ಎಚ್ಚರಿಕೆ ನೀಡಿದ ​ನಜಮ್ ಸೇಥಿ

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

ಮುಂಜಾನೆ ಹೊತ್ತಿಗೆ ಆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೆರೆಯವರು ಪೊಲೀಸರಿಗೆ ಕರೆ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ.

VISTARANEWS.COM


on

Edited by

6 die of suffocation in Delhi After Due to mosquito coil
Koo

ನವ ದೆಹಲಿ: ಸೊಳ್ಳೆಬತ್ತಿ ಹಾಸಿಗೆ (mosquito coil) ಮೇಲೆ ಬಿದ್ದು, ಅದರಿಂದ ಹೊಮ್ಮಿದ ವಿಷಪೂರಿತ ಹೊಗೆಯಿಂದ ಉಸಿರುಕಟ್ಟಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ವರದಿಯಾಗಿದ್ದು ದೆಹಲಿಯ ಈಶಾನ್ಯ ಭಾಗದಲ್ಲಿರುವ (New Delhi) ಶಾಸ್ತ್ರಿಪಾರ್ಕ್ ಏರಿಯಾದಿಂದ. ಸೊಳ್ಳೆಯಿಂದ ಪಾರಾಗಲು ಈ ಮನೆಯಲ್ಲಿ ಸೊಳ್ಳೆ ಬತ್ತಿ ಹಾಕಿಕೊಂಡು ಎಲ್ಲರೂ ಮಲಗಿದ್ದರು. ರಾತ್ರಿ ಯಾವಾಗಲೋ ಆ ಬತ್ತಿ ಹಾಸಿಗೆ ಮೇಲೆ ಬಿದ್ದಿದೆ. ಸಾಮಾನ್ಯವಾಗಿ ಸೊಳ್ಳೆ ಬತ್ತಿಯ ಹೊಗೆಯೇ ಘಾಟಾಗಿ ಇರುತ್ತದೆ. ಅದು ಹಾಸಿಗೆ ಮೇಲೆ ಬಿದ್ದು, ಹಾಸಿಗೆಯ ಬಟ್ಟೆಯ ಹೊಗೆಯೂ ಜತೆಗೆ ಸೇರಿ, ಆರೂ ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮುಂಜಾನೆ ಹೊತ್ತಿಗೆ ಆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೆರೆಯವರು ಪೊಲೀಸರಿಗೆ ಕರೆ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈಶಾನ್ಯ ದೆಹಲಿ ಜಿಲ್ಲೆಯ ಡಿಸಿಪಿ ಜಾಯ್​ ಟಿರ್ಕಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ಮಚ್ಚಿ ಮಾರ್ಕೆಟ್​ ಬಳಿಯಿರುವ ಮಾಜಾರ್ ವಾಲಾ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಬೆಳಗ್ಗೆ ಹೊತ್ತಿಗೆ ಶಾಸ್ತ್ರಿಪಾರ್ಕ್ ಪೊಲೀಸ್ ಸ್ಟೇಶನ್​ಗೆ ಕರೆಬಂತು. ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ತಕ್ಷಣವೇ ಅಲ್ಲಿಗೆ ತೆರಳಿದರು. ಮೃತದೇಹಗಳನ್ನೆಲ್ಲ ಜಗ್​ ಪ್ರವೇಶ್​ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Family suicide : ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮೃತರು ಮೈಸೂರಿನವರು

ಈ ಮನೆಯಲ್ಲಿ ಒಟ್ಟು ಒಂಭತ್ತು ಮಂದಿ ಇದ್ದರು. ಅದರಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಅವರೂ ಕೂಡ ಎಚ್ಚರ ತಪ್ಪಿದ್ದರು. ಆ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಒಬ್ಬರು ಪ್ರಾಥಮಿಕ ಚಿಕಿತ್ಸೆಗೇ ಚೇತರಿಸಿಕೊಂಡು, ಡಿಸ್​ಚಾರ್ಜ್ ಆಗಿದ್ದಾರೆ. ಇನ್ನಿಬ್ಬರಿಗೆ ಸುಟ್ಟಗಾಯಗಳೂ ಆಗಿದ್ದು ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಜಾಯ್​ ಟಿರ್ಕಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು, ನಾಲ್ವರು ಪುರುಷರು, ಒಬ್ಬಳು ಮಹಿಳೆ ಸೇರಿದ್ದಾರೆ.

Continue Reading

ಕೋರ್ಟ್

Supreme Court: ದ್ವೇಷ ಭಾಷಣ ತಡೆಗೆ ಸರ್ಕಾರಕ್ಕೆ ಶಕ್ತಿ ಇಲ್ಲವೇ?: ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಗರಂ

Supreme Court: ದ್ವೇಷ ಭಾಷಣ ತಡೆಗೆ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ. ಈ ವಿಷಯದಲ್ಲಿ ಸರ್ಕಾರವು ಶಕ್ತಿಹೀನವಾಗಿದೆ ಎಂದು ಆರೋಪಿಸಿದೆ.

VISTARANEWS.COM


on

Edited by

is State is Impotent why did stop hate speech asks supreme Court
Koo

ನವದೆಹಲಿ: ಕಾಲಮಿತಿಯೊಳಗೇ ದೇಶಾದ್ಯಂತ ದ್ವೇಷ ಭಾಷಣವನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರವು ಶಕ್ತಿಹೀನವಾಗಿದೆ(State is Impotent) ಎಂದು ಸುಪ್ರೀಂ ಕೋರ್ಟ್‌ (Supreme Court) ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ರ್ಯಾಲಿಗಳಲ್ಲಿ ದ್ವೇಷದ ಭಾಷಣಗಳ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ಮಹಾರಾಷ್ಟ್ರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಜೋಸಫ್ ಅವರು, ಈ ವಿಷಯದಲ್ಲಿ ಮೌನವಾಗಿರುವುದಾದರೆ ನಮಗೆ ಸರ್ಕಾರವೇಕೆ ಬೇಕು ಎಂದು ಪ್ರಶ್ನಿಸಿದರು.

ಭಾತೃತ್ವ ಮತ್ತು ಸಹಿಷ್ಣುತೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಜಸ್ಟೀಸ್ ಜೋಸೆಫ್,
ಪ್ರತಿದಿನ ನೀವು ನ್ಯಾಯಾಲಯದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬರೂ ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾರೆಂದು ಭಾವಿಸೋಣ, ಮನುಷ್ಯನಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಘನತೆ. ನಿತ್ಯವೂ ಅದನ್ನು ಹಾಳುಮಾಡುತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗು ಎಂಬಂತೆ ಕೆಲವು ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ವ್ಯಕ್ತಿಗಳು ನಿಜವಾಗಿಯೂ ಈ ದೇಶವನ್ನು ಆರಿಸಿಕೊಂಡರು. ಅವರು ನಮ್ಮ ಸಹೋದರ ಮತ್ತು ಸಹೋದರಿಯರಂತೆ. ಒಂದೊಮ್ಮೆ ನಾವು ಸೂಪರ್ ಪವರ್ ಆಗಲು ಬಯಸಿದರೆ, ಮೊದಲು ದೇಶದಲ್ಲಿ ಕಾನೂನು ಅನುಷ್ಠಾನ ನಡೆಯಬೇಕು ಎಂದು ಅವರು ಹೇಳಿದರು.

ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು, ಅರ್ಜಿದಾರರು ಈ ಪ್ರಕರಣದಲ್ಲಿ ಸೆಲೆಕ್ಟಿವ್ ಆಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಅರ್ಜಿದಾರರಾಗಿರುವ ವ್ಯಕ್ತಿ ತನ್ನ ಸ್ವಂತ ರಾಜ್ಯದ (ಕೇರಳ) ನ್ಯಾಯಾಲಯದ ಮುಂದೆ ನಿದರ್ಶನಗಳನ್ನು ಕೋರುತ್ತಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮಾತ್ರ ದ್ವೇಷ ಭಾಷಣಗಳ ಪ್ರಕರಣಗಳನ್ನು ಪರಿಗಣಿಸಬಾರದು. ಆದರೆ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇದೇ ರೀತಿಯ ನಿದರ್ಶನಗಳನ್ನು ನೋಡಬೇಕು ಎಂಬ ಸಂಗತಿಯನ್ನು ಕೋರ್ಟ್ ಗಮನಕ್ಕೆ ತರಲಾಯಿತು.

ಇದನ್ನೂ ಓದಿ: Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ

ಕೇರಳದಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಲಾಗುತ್ತಿದೆ ಎಂದು ಸಂಗತಿಯನ್ನು ಹೈಲೈಟ್ ಮಾಡಿದ ತುಷಾರ್ ಮಹ್ತಾ ಅವರು, ನ್ಯಾಯಾಲಯವು ಈ ಬಗ್ಗೆ ಯಾಕೆ ಸ್ವಯಂ ಆಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಫೆಬ್ರವರಿ 5 ರಂದು ಮುಂಬೈನಲ್ಲಿ ಹಿಂದೂ ಜನ ಆಕ್ರೋಶ್ ಸಭಾ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಡಿಯೋಗ್ರಾಫ್ ಮಾಡಿ ವರದಿ ಸಲ್ಲಿಸುವಂತೆ ಫೆಬ್ರವರಿ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

Continue Reading

ದೇಶ

Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!

ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್​ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು.

VISTARANEWS.COM


on

Edited by

MLA scrapes off the asphalt Of Road In Uttar Pradesh Video Viral
Koo

ಗಾಝಿಪುರ: ಕಳಪೆಯಾದ ರಸ್ತೆಯನ್ನು ನೋಡಿ ಶಾಸಕರೊಬ್ಬರು ಕೆಂಡಾಮಂಡಲರಾಗಿ, ತಮ್ಮ ಬೂಟು ಕಾಲಿನಿಂದ ಆ ರಸ್ತೆಯನ್ನು ಕೆದರಿ, ಜಲ್ಲಿಕಲ್ಲು, ಡಾಂಬರುಗಳನ್ನೆಲ್ಲ ತೆಗೆದು ತೋರಿಸಿದ ಘಟನೆ ಉತ್ತರ ಪ್ರದೇಶದ ಗಾಝಿಪುರದಲ್ಲಿ ನಡೆದಿದೆ. ಶಾಸಕರ ಆಕ್ರೋಶ ಮತ್ತು ಅವರು ಕಾಲಿನಿಂದಲೇ ರಸ್ತೆಯನ್ನು ಕೆದರಿದ, ಗುತ್ತಿಗೆದಾರನಿಗೆ ಬಾಯಿಗೆ ಬಂದಂತೆ ಬೈದಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುಹೇಲ್​ದೇವ್​ ಭಾರತೀಯ ಸಮಾಜ ಪಾರ್ಟಿ ಶಾಸಕ ಬೇದಿರಾಮ್​ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಗಾಝಿಪುರಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿ ಒಂದು ಕಡೆ ಹಾಳಾದ ರಸ್ತೆಯನ್ನು ನೋಡಿದ ಅವರು ಉಗ್ರಸ್ವರೂಪ ತಾಳಿದ್ದಾರೆ. ‘ಇದಕ್ಕೆ ಯಾರಾದರೂ ರಸ್ತೆ ಎನ್ನುತ್ತಾರಾ? ಇಲ್ಲಿ ಕಾರು ಸಂಚಾರ ಮಾಡಬಹುದಾ?’ ಎಂದು ಕೋಪದಿಂದ ಗುತ್ತಿಗೆದಾರನ ಬಳಿ ಪ್ರಶ್ನಿಸಿದ್ದಾರೆ.

‘ಗಾಝಿಪುರದಲ್ಲಿ ಹಲವು ಕಡೆಗಳಲ್ಲಿ ರಸ್ತೆ ಸರಿಯಿಲ್ಲ ಎಂದು ಸ್ಥಳೀಯರು ದೂರು ಕೊಟ್ಟ ಕಾರಣಕ್ಕೆ, ಪರಿಶೀಲನೆ ನಡೆಸಲು ಅಲ್ಲಿಗೆ ತೆರಳಿದ್ದೆ. ಆದರೆ ನಾನು ಅಲ್ಲಿಗೆ ಹೋದರೆ ಪಿಡಬ್ಲ್ಯೂಡಿ ಇಲಾಖೆಯ ಯಾವ ಅಧಿಕಾರಿಯೂ ಇರಲಿಲ್ಲ. ಹೀಗಾಗಿ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಏನೆಂದು ತೋರಿಸಿದ್ದೇನೆ. ಅದಾದ ಮೇಲೆ ಪಿಡಬ್ಲ್ಯೂಡಿ ಉನ್ನತ ಅಧಿಕಾರಿಯೊಂದಿಗೆ ಮಾತಾಡಿದ್ದೇನೆ. ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಲಾಗಿದ್ದರೂ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಲ್ಲ. ಒಂದು ವರ್ಷ ಬಿಡಿ, ಆರು ತಿಂಗಳೂ ಕೂಡ ರಸ್ತೆ ಬಾಳಿಕೆಗೆ ಬರುವುದಿಲ್ಲ’ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೇ, ಶಾಸಕ ಬೇದಿರಾಮ್ ಅವರು ಭೇಟಿಕೊಟ್ಟಿದ್ದು ಗಾಝಿಪುರದ ಜಖಾನಿಯನ್​ ಏರಿಯಾದಲ್ಲಿ ನಿರ್ಮಿಸಲಾದ, ಜಂಗೀಪುರ- ಬಹರಿಯಾಬಾದ್-ಯೂಸುಫ್‌ಪುರ್ ಸಂಪರ್ಕ ರಸ್ತೆಗೆ. ಇಲ್ಲಿ 4.5 ಕಿಮೀಗಳಷ್ಟು ದೂರವನ್ನು 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿತ್ತು. ಆದರೆ ಈಗಲೇ ಹಾಳಾಗಿದೆ. ಹೀಗಾಗಿ ಸ್ಥಳೀಯರು ಒಟ್ಟಾಗಿ ಅಲ್ಲಿನ ಶಾಸಕರಿಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಹಾಳಾದ ರಸ್ತೆಯ ಚಿತ್ರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಪಿಲಿಬಿತ್​​ನಲ್ಲಿ ನಾಗರಿಕರೊಬ್ಬರು ರಸ್ತೆಯನ್ನು ತಮ್ಮ ಕೈಗಳಿಂದಲೇ ಕಿತ್ತು ಹಾಕಿದ್ದರು. ರಸ್ತೆ ಮೇಲ್ಮೈಯೆಲ್ಲ ಕಿತ್ತುಬಂದಿದ್ದನ್ನು ತೋರಿಸಿದ್ದರು. ಅದೆಷ್ಟು ಕಳಪೆಯಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ನೋಡಿ ಎಂದು ವಿಡಿಯೊ ಮೂಲಕ ತೋರಿಸಿದ್ದರು. ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.

Continue Reading

ಕ್ರೈಂ

Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ

ಸೇನಾ ನಿವೃತ್ತ ಅಧಿಕಾರಿಗೆ ಮೊದಲು ಮಹಿಳೆಯೊಬ್ಬಳು ಟೆಕ್ಸ್ಟ್​ ಮೆಸೇಜ್ ಮಾಡಿದ್ದಾಳೆ. ಅದರಲ್ಲಿ ಅವಳು ಪಾರ್ಟ್​ ಟೈಂ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಅದರೊಂದಿಗೆ ಆಕೆ ತಾನು ಥೈಲ್ಯಾಂಡ್​ನವಳು ಎಂಬ ವಿವರಣೆ ಕೊಟ್ಟಿದ್ದು, ಜತೆಗೊಂದು ಲಿಂಕ್​ ಕಳಿಸಿದ್ದಾಳೆ. ಆ ಲಿಂಕ್​ನ್ನು ಯಾವಾಗ ಸೇನಾ ನಿವೃತ್ತ ಅಧಿಕಾರಿ ಕ್ಲಿಕ್ ಮಾಡಿದರೋ, ಆಗಲೇ ಅವರು ವಂಚಕರ ಬಲೆಗೆ ಬಿದ್ದರು!

VISTARANEWS.COM


on

Edited by

Indian Army veteran Lost over Rs 1 crore to Money For Likes
Koo

ಪುಣೆ: ಮಹಾರಾಷ್ಟ್ರದ ಪುಣೆಯ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಆನ್​ಲೈನ್​ ವಂಚನೆ ಜಾಲದಲ್ಲಿ ಸಿಲುಕಿ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘Money For Likes’ ಸ್ಕ್ಯಾಮ್​​ ಎಂಬ ಹೊಸಬಗೆಯ ಸೈಬರ್​ ವಂಚನೆಗೆ ಒಳಗಾಗಿ ಅವರು 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ನಿವೃತ್ತ ಸೇನಾ ಅಧಿಕಾರಿ ಕೊಟ್ಟ ದೂರನ್ನು ದಾಖಲಿಸಿಕೊಂಡ ಪೊಲೀಸರು ಎಫ್​ಐಆರ್ ದಾಖಲಿಸಿ ಈಗ ತನಿಖೆ ನಡೆಸುತ್ತಿದ್ದಾರೆ.

ಲೈಕ್ಸ್​ಗಾಗಿ ಹಣ ಎಂಬುದು ಒಂದು ಹೊಸ ಮಾದರಿಯ ಸೈಬರ್​ ವಂಚನೆಯಾಗಿದೆ. ಯೂಟ್ಯೂಬ್​, ವಾಟ್ಸ್​ಆ್ಯಪ್​, ಲಿಂಕ್ಡ್​ ಇನ್​ ಗಳಲ್ಲೆಲ್ಲ ಈ ಜಾಲ ಹಬ್ಬಿದೆ. ‘ನೀವು ನಮ್ಮ ಪೋಸ್ಟ್​/ವಿಡಿಯೊಗಳಿಗೆ ಲೈಕ್ಸ್​ ಕೊಟ್ಟರೆ, ನಾವದಕ್ಕೆ ಹಣ ಕೊಡುತ್ತೇವೆ’ ಎಂದು ಇವರ ಮಾತು ಶುರುವಾಗುತ್ತದೆ. ಒಂದು ಲೈಕ್ಸ್​ಗೆ 50/100/150..ಹೀಗೆ ಇಂತಿಷ್ಟು ಎಂದು ಹಣ ಫಿಕ್ಸ್​ ಮಾಡುತ್ತಾರೆ. ಬರುಬರುತ್ತ ಪ್ರೀಪೇಯ್ಡ್​ ಟಾಸ್ಕ್​ಗಾಗಿ ನೀವು ಇಷ್ಟು ಹಣವನ್ನು ನಮಗೆ ಮೊದಲು ಕೊಡಬೇಕು. ನಂತರ ಅದನ್ನೂ ಸೇರಿಸಿ, ನಿಮಗೆ ಹೆಚ್ಚಿನ ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಅದನ್ನು ನಂಬಿ, ಅವರು ಕೊಡುವ ಹಣಕ್ಕಾಗಿ ನೀವೇನಾದರೂ ಅವರ ವಿಡಿಯೊ/ಪೋಸ್ಟ್​ಗಳಿಗೆ ಲೈಕ್ಸ್​ ಬಟನ್​ ಒತ್ತಲು ಶುರು ಮಾಡಿದಿರೋ, ನೀವು ವಂಚನೆಯ ಬಲೆಗೆ ಬಿದ್ದಿರಿ ಎಂದೇ ಅರ್ಥ. ಈ ನಿವೃತ್ತ ಸೇನಾ ಅಧಿಕಾರಿಗೆ ಆಗಿದ್ದೂ ಅದೇ.. 65 ವರ್ಷದ ಅವರು, ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಸೈಬರ್​ ವಂಚಕರಿಗೆ ಸುರಿದಿದ್ದಾರೆ.

ಸೇನಾ ನಿವೃತ್ತ ಅಧಿಕಾರಿಗೆ ಮೊದಲು ಮಹಿಳೆಯೊಬ್ಬಳು ಟೆಕ್ಸ್ಟ್​ ಮೆಸೇಜ್ ಮಾಡಿದ್ದಾಳೆ. ಅದರಲ್ಲಿ ಅವಳು ಪಾರ್ಟ್​ ಟೈಂ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಅದರೊಂದಿಗೆ ಆಕೆ ತಾನು ಥೈಲ್ಯಾಂಡ್​ನವಳು ಎಂಬ ವಿವರಣೆ ಕೊಟ್ಟಿದ್ದು, ಜತೆಗೊಂದು ಲಿಂಕ್​ ಕಳಿಸಿದ್ದಾಳೆ. ಈ ಲಿಂಕ್ ಓಪನ್​ ಮಾಡಿ, ವಿಡಿಯೊಕ್ಕೆ ಲೈಕ್​ ಕೊಟ್ಟರೆ ನಿಮಗೆ 50 ರೂಪಾಯಿ ಸಿಗುತ್ತದೆ ಎಂದು ಮೆಸೇಜ್​ನಲ್ಲಿ ಒಕ್ಕಣೆ ಬರೆದಿತ್ತು. ಹಾಗೇ, ತನ್ನ ಪ್ರತಿ ವಿಡಿಯೊಕ್ಕೂ ಲೈಕ್ಸ್ ಕೊಡಿ, ನೀವು ಕೊಡುವ ಪ್ರತಿ ಲೈಕ್ಸ್​ಗೂ ತಲಾ 50 ರೂಪಾಯಿ ನೀಡಲಾಗುವುದು. ನೀವು ವಿಡಿಯೊಕ್ಕೆ ಲೈಕ್ಸ್​ ಕೊಟ್ಟ ಸ್ಕ್ರೀನ್​ ಶಾಟ್​, ನಿಮ್ಮ ಬ್ಯಾಂಕ್​ ಅಕೌಂಟ್​ ಮತ್ತು ವಿಳಾಸದ ವಿವರವನ್ನು ನನಗೆ ಕಳಿಸಿಕೊಡಿ ಎಂದೂ ಆ ಮೆಸೇಜ್​ನಲ್ಲಿ ಬರೆಯಲಾಗಿತ್ತು. ಸೇನಾ ನಿವೃತ್ತ ಅಧಿಕಾರಿ ತಕ್ಷಣವೇ ಆ ಲಿಂಕ್​ ಪ್ರೆಸ್ ಮಾಡಿ ಲೈಕ್ಸ್ ಕೊಟ್ಟರು. ಆಕೆ ಕೇಳಿದ್ದನ್ನೆಲ್ಲ ಕೊಟ್ಟರು. ಅವರಿಗೆ 150 ರೂಪಾಯಿ ಸ್ವಾಗತ ಇನಾಮು (Welcome Bonus) ಕೂಡ ಬಂತು. ಅಷ್ಟೇ ಅಲ್ಲ ಅವರು ಕೊಟ್ಟ ಫೋನ್​ನಂಬರ್​ನ್ನು Employee Trial Group ಎಂಬ ಮೆಸೆಂಜರ್​ ಗ್ರೂಪ್​ಗೆ ಸೇರಿಸಲಾಯಿತು. ಅಲ್ಲಿಗೆ ಅವರು ಸಂಪೂರ್ಣವಾಗಿ ನಂಬಿಬಿಟ್ಟರು ಮತ್ತು ಈ ಲೈಕ್ಸ್​ ಜಾಲದ ಮತ್ತಷ್ಟು ಆಳಕ್ಕೆ ಹೋಗಲು ಶುರು ಮಾಡಿದರು.

ಇದನ್ನೂ ಓದಿ: Fraud Case: ಜಸ್ಟ್‌ ವಾಟ್ಸ್ಆ್ಯಪ್‌ ಕಾಲ್‌ನಲ್ಲೇ ಲಕ್ಷ ಲಕ್ಷ ಲೂಟಿ ಮಾಡಿದ ಸೈಬರ್‌ ಕಳ್ಳರು; ಏನಿದು ವಂಚನೆ ಕಹಾನಿ?

ವಂಚಕರು ಹೇಗಿದ್ದಾರೆಂದರೆ ಅವರು ತಮ್ಮ ಹೊಸ ‘ಗಿರಾಕಿ’ಯ ನಂಬಿಕೆ ಗಳಿಸಿಕೊಳ್ಳಲು ಖತರ್ನಾಕ್ ಐಡಿಯಾಗಳನ್ನು ಮಾಡಿದರು. Employee Trial Group ಎಂಬ ಗ್ರೂಪ್​ಗೆ ಸೇನಾ ನಿವೃತ್ತ ಅಧಕಾರಿ ಸೇರುತ್ತಿದ್ದಂತೆ ಇನ್ನೂ ಹಲವರು ತಮ್ಮ ತಮ್ಮ ವಿಡಿಯೊಗಳ ಲಿಂಕ್​ ಕಳಿಸಿ, ಲೈಕ್​ ಕೊಡುವಂತೆ ಕೇಳತೊಡಗಿದರು. ಅದಾದ ಮೇಲೆ ಪ್ರೀಪೇಯ್ಡ್​​ಗಾಗಿ 1000 ರೂಪಾಯಿ ತುಂಬಿ, ಅದು ಮುಗಿದ ಬಳಿಕ 1480 ರೂಪಾಯಿ ವಾಪಸ್ ಕೊಡುತ್ತೇವೆ ಎಂದರು. ಅದಕ್ಕೊಪ್ಪಿ ಇವರು ಹಾಗೇ ಮಾಡಿದರು. ಹಣವೂ ಬಂತು. ಕೆಲ ದಿನಗಳ ಬಳಿಕ ನಿವೃತ್ತ ಸೇನಾಧಿಕಾರಿ ಬಳಿ 3000 ರೂಪಾಯಿ ಪಾವತಿಸಿಕೊಂಡು, 4000 ರೂಪಾಯಿ ಮರುಪಾವತಿ ಮಾಡಿದರು. ಅವರನ್ನು ವಿಐಪಿ ಗ್ರೂಪ್​ಗೆ ಸೇರ್ಪಡೆಗೊಳಿಸಿದರು. ಇದೆಲ್ಲವನ್ನೂ ಅವರು ತಮ್ಮಿಂದ ವಂಚನೆಗೆ ಒಳಗಾಗುತ್ತಿರುವವರ ನಂಬಿಕೆ ಗಳಿಸಿಕೊಳ್ಳಲು ಮಾಡುತ್ತಿದ್ದರು. ಹೀಗೆ ತುಂಬ ದಿನ ಕಳೆಯಿತು.

ಒಂದು ದಿನ ಪ್ರೀಪೇಯ್ಡ್​ಗಾಗಿ ದೊಡ್ಡಮೊತ್ತದ ಹಣವನ್ನು ವಂಚಕರು ಕೇಳಿದರು. ಇಷ್ಟು ದಿನ ಹಣ ವಾಪಸ್​ ಬಂದಿತ್ತಲ್ಲ, ಸೇನಾ ನಿವೃತ್ತಾಧಿಕಾರಿ ಕಣ್ಮುಚ್ಚಿ ಅದನ್ನು ಪಾವತಿಸಿದರು. ಆದರೆ ನಂತರ ಅದನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಏನೋ ತಾಂತ್ರಿಕ ತೊಂದರೆಯ ನೆಪ ಹೇಳಿದ ವಂಚಕರು ಇನ್ನಷ್ಟು ಹಣ ಪಾವತಿ ಮಾಡುವಂತೆ ಹೇಳಿದರು. ಸುಮಾರು ಒಂದು ವಾರ ಅವರು ಹೀಗೇ ಮಾಡಿದರು. ಪ್ರತಿಸಲವೂ ಅವರು ಬೇರೆಬೇರೆ ಬ್ಯಾಂಕ್​ ಅಕೌಂಟ್ ನಂಬರ್ ಕೊಡುತ್ತಿದ್ದರು. ಸೇನಾ ನಿವೃತ್ತಾಧಿಕಾರಿ ಒಂದು ವಾರದಲ್ಲಿ 13 ಬ್ಯಾಂಕ್​ ಅಕೌಂಟ್​ಗಳಿಗೆ 26 ಬಾರಿ ಹಣ ಹಾಕಿದ್ದಾರೆ. ಈ ಮೂಲಕ 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ತಮಗೆ ವಂಚನೆಯಾಗಿದೆ ಎಂದು ಅವರಿಗೆ ಅರ್ಥವಾಗುವಷ್ಟರಲ್ಲಿ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿದ್ದರು. ಇಷ್ಟೆಲ್ಲ ಆಗಿ, ಕಳೆದ ತಿಂಗಳು ಅಂದರೆ ಫೆಬ್ರವರಿ ಕೊನೆಯಲ್ಲಿ ಸೇನಾ ನಿವೃತ್ತ ಅಧಿಕಾರಿ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದಾರೆ.

Continue Reading
Advertisement
6 die of suffocation in Delhi After Due to mosquito coil
ದೇಶ11 mins ago

ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ

Gas tragedy
ಕರ್ನಾಟಕ11 mins ago

Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

Dakshina Kannada District 1st PUC result 2023 declared; here how to check
ಶಿಕ್ಷಣ30 mins ago

1st PUC Result 2023 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

Producer K Manju from Padmanabha Nagar assembly constituency Entry into the political arena
ರಾಜಕೀಯ33 mins ago

K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?

is State is Impotent? why did stop hate speech, asks supreme Court
ಕೋರ್ಟ್35 mins ago

Supreme Court: ದ್ವೇಷ ಭಾಷಣ ತಡೆಗೆ ಸರ್ಕಾರಕ್ಕೆ ಶಕ್ತಿ ಇಲ್ಲವೇ?: ಕೇಂದ್ರ ವಿರುದ್ಧ ಸುಪ್ರೀಂ ಕೋರ್ಟ್ ಗರಂ

karnataka election AT Ramaswamy and NY Gopalakrishna resigns
ಕರ್ನಾಟಕ44 mins ago

Karnataka Election: ಜೆಡಿಎಸ್‌, ಬಿಜೆಪಿಯ ತಲಾ ಒಂದು ವಿಕೆಟ್‌ ಪತನ: A.T. ರಾಮಸ್ವಾಮಿ, N.Y. ಗೋಪಾಲಕೃಷ್ಣ ರಾಜೀನಾಮೆ

T Chandrasekhar Former city council president Hiriyur
ಕರ್ನಾಟಕ55 mins ago

Hiriyur News: ಕಾಂಗ್ರೆಸ್ ಸೇರಿದ ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್; ಬಿಜೆಪಿಗೆ ಆಘಾತ

MLA scrapes off the asphalt Of Road In Uttar Pradesh Video Viral
ದೇಶ57 mins ago

Viral Video: ರಸ್ತೆ ಅಂತಾರಾ ಇದಕ್ಕೆ?-ಆಕ್ರೋಶದಿಂದ ಕೂಗುತ್ತ, ತಮ್ಮ ಬೂಟು ಕಾಲಿನಿಂದ ಡಾಂಬರು ಕೆದರಿದ ಶಾಸಕ!

IPL 2023: Dhoni injured; Doubt for the first game
ಕ್ರಿಕೆಟ್58 mins ago

IPL 2023: ಧೋನಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ; ಸ್ಟೋಕ್ಸ್​ ನಾಯಕತ್ವ ಸಾಧ್ಯತೆ

WinLife Trust shivamogga
ಆರೋಗ್ಯ1 hour ago

Shivamogga News: ವಿನ್‌ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ10 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ2 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ20 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!