ಮಾರಕಾಸ್ತ್ರ ಹಿಡಿದು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದವನ ಹತ್ಯೆಗೈದ ಬಿಎಸ್​ಎಫ್​; ಈ ವರ್ಷದ ಮೊದಲ ಪ್ರಕರಣ - Vistara News

ದೇಶ

ಮಾರಕಾಸ್ತ್ರ ಹಿಡಿದು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದವನ ಹತ್ಯೆಗೈದ ಬಿಎಸ್​ಎಫ್​; ಈ ವರ್ಷದ ಮೊದಲ ಪ್ರಕರಣ

ಪಂಜಾಬ್​ನ ಗುರುದಾಸ್​ಪುರದ ಅಜ್ನಾಲಾ ವಲಯದ ಗಡಿ ಭಾಗದಲ್ಲಿರುವ ಚನ್ನಾ ಪೋಸ್ಟ್​​ ಸಮೀಪ ಮುಂಜಾನೆ 8ಗಂಟೆ ಹೊತ್ತಿಗೆ ಈತ ಕೈಯಲ್ಲಿ ಅಸ್ತ್ರಗಳನ್ನು ಹಿಡಿದುಕೊಂಡು ಬೇಲಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎನ್ನಲಾಗಿದೆ.

VISTARANEWS.COM


on

Intruder Shot Dead By BSF
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನೆರೆರಾಷ್ಟ್ರ ಪಾಕಿಸ್ತಾನದಿಂದ ಒಳನುಸುಳಿದ್ದವನೊಬ್ಬನನ್ನು ಭಾರತೀಯ ಗಡಿ ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಈತ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು, ಪಂಜಾಬ್ ಗಡಿಯಲ್ಲಿ ಇಂದು ಮುಂಜಾನೆ ಸಮಯದಲ್ಲಿ ಒಳನುಸುಳಿದ್ದ.

ಪಂಜಾಬ್​ನ ಗುರುದಾಸ್​ಪುರದ ಅಜ್ನಾಲಾ ವಲಯದ ಗಡಿ ಭಾಗದಲ್ಲಿರುವ ಚನ್ನಾ ಪೋಸ್ಟ್​​ ಸಮೀಪ ಮುಂಜಾನೆ 8ಗಂಟೆ ಹೊತ್ತಿಗೆ ಈತ ಕೈಯಲ್ಲಿ ಅಸ್ತ್ರಗಳನ್ನು ಹಿಡಿದುಕೊಂಡು ಬೇಲಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ನಂತರ ಅಲ್ಲಿಂದ ಒಳನುಸುಳಿ ಭಾರತದ ಭೂಭಾಗಕ್ಕೆ ಬಂದಿದ್ದ. ಕೂಡಲೇ ಅಲರ್ಟ್​ ಆದ ಗಡಿಭದ್ರತಾ ಪಡೆ ಸಿಬ್ಬಂದಿ ಗುಂಡು ಹೊಡೆದಿದ್ದಾರೆ.

ಅಂದಹಾಗೇ, ಇವನ ಬಳಿ ಸಿಕ್ಕಿದ್ದು ಅತ್ಯಾಧುನಿಕವಾದ ಪಂಪ್​ ಆ್ಯಕ್ಷನ್​ ಶಾಟ್​​ಗನ್​ ಎಂದು ಹೇಳಲಾಗಿದೆ. ಅಂದರೆ ಗನ್​ ಟ್ರಿಗರ್​ನ್ನು ಒಂದು ಸಲ ಒತ್ತಿದರೆ ಹಲವು ಗುಂಡುಗಳು ಹಾರುವಂಥದ್ದು. 2022ರಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂಜಾಬ್​ ಗಡಿಯಲ್ಲಿ ಒಳನುಸುಳಿದ್ದ ಇಬ್ಬರು ಪಾಕಿಸ್ತಾನಿಗಳನ್ನು ಬಿಎಸ್​ಎಫ್​ ಸಿಬ್ಬಂದಿ ಕೊಂದು ಹಾಕಿದ್ದರು. ಹಾಗೇ, 23 ನುಸುಳುಕೋರರನ್ನು ಬಂಧಿಸಿದ್ದರು. 2023ರಲ್ಲಿ ಇದು ಮೊದಲ ಒಳನುಸುಳುವಿಕೆ ಪ್ರಕರಣವಾಗಿದೆ.

ಇದನ್ನೂ ಓದಿ: Taliban shames Pakistan | 71ರ ಯುದ್ಧದಲ್ಲಿ ಭಾರತಕ್ಕೆ ಶರಣಾದ ಚಿತ್ರ ತೋರಿಸಿ ಪಾಕಿಸ್ತಾನವನ್ನು ಅಣಕಿಸಿದ ತಾಲಿಬಾನ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌, ದೇವೇಗೌಡ ಅವರ ಆಶೀರ್ವಾದ ಪಡೆದ ಮೋದಿ

Narendra Modi: ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಮರಳಿ ಬಂದಿದ್ದು, ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೂಡಲೇ ಸೋಮವಾರ ಅವರು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್‌ ಸಿಂಗ್‌ ಮತ್ತು ಎಚ್‌.ಡಿ.ದೇವೇಗೌಡ ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆದುಕೊಂಡರು.

VISTARANEWS.COM


on

Narenda Modi
Koo

ನವದೆಹಲಿ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೂಡಲೇ ಅವರು ಸೋಮವಾರ (ಜೂನ್‌ 10) ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ (Pratibha Patil) ಮತ್ತು ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್‌ ಸಿಂಗ್‌ (Manmohan Singh) ಮತ್ತು ಎಚ್‌.ಡಿ.ದೇವೇಗೌಡ (HD Devegowda) ಅವರಿಗೆ ಕರೆ ಮಾಡಿ ಆಶೀರ್ವಾದ ಪಡೆದುಕೊಂಡರು.

ಜೂನ್‌ 9ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು 30 ಕ್ಯಾಬಿನೆಟ್ ದರ್ಜೆಯ ಸಚಿವರು ಸೇರಿದಂತೆ ಇತರ 71 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರತಿಭಾ ಪಾಟೀಲ್‌ ಮತ್ತು ಮನಮೋಹನ್‌ ಸಿಂಗ್ ಇಬ್ಬರೂ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಯಾಗಿದ್ದರು. ಕಾಂಗ್ರೆಸ್ ಬೆಂಬಲಿತ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದರು.

ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎಗೆ ದೇವೇಗೌಡ ಅವರ ಜೆಡಿಎಸ್‌ ಬೆಂಬಲ ನೀಡಿದೆ. ಕರ್ನಾಟಕದಲ್ಲಿ ಮೂರು ಕಡೆ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿಗಳ ಪೈಕಿ ಇಬ್ಬರು ಜಯ ಗಳಿಸಿದ್ದಾರೆ. ಈ ಪೈಕಿ ದೇವೇಗೌಡ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೋದಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ (ಸಂಪುಟ ದರ್ಜೆ)ಯ ಸಚಿವರಾಗಿ ಅವರು ನಿಯುಕ್ತಿಗೊಂಡಿದ್ದಾರೆ.

ರಾಜ್ಯಕ್ಕೆ 5 ಸಚಿವ ಸ್ಥಾನ

ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ (Modi 3.0 Cabinet) ರಾಜ್ಯದ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ. ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ. ಕರ್ನಾಟಕದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತೆ ಹಣಕಾಸು ಖಾತೆ ನೀಡಲಾಗಿದ್ದು, ಕಳೆದ ಬಾರಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಪ್ರಲ್ಹಾದ್‌ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ, ಮರು ಬಳಕೆ ಇಂಧನ ಖಾತೆ ನೀಡಲಾಗಿದೆ. ಇನ್ನು ಮಂಡ್ಯ ಸಂಸದ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಿಕ್ಕಿದೆ. ಕಳೆದ ಬಾರಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದ ಬೆಂ.ಉತ್ತರ ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ, ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

ಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಸೋಮವಾರ (ಜೂನ್‌ 10) ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.

Continue Reading

ದೇಶ

Rashtrapati Bhavan: ಮೋದಿ ಪ್ರಮಾಣ ವಚನ ಸಮಾರಂಭದ ವೇಳೆ ಕಾಣಿಸಿಕೊಂಡಿದ್ದು ಚಿರತೆಯಲ್ಲ; ಪೊಲೀಸರ ಸ್ಪಷ್ಟನೆ

Rashtrapati Bhavan: ಜೂನ್‌ 9ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಚಿರತೆಯೊಂದು ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಅನೇಕರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ದೆಹಲಿ ಪೊಲೀಸರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ? ನಿಜವಾಗಿಯೂ ಅಲ್ಲಿ ಚಿರತೆ ಓಡಾಡಿತ್ತೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Rashtrapati Bhavan
Koo

ನವದೆಹಲಿ: ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಸಚಿವರು ಜೂನ್‌ 9ರಂದು ದೆಹಲಿಯ ರಾಷ್ಟ್ರಪತಿ ಭವನ (Rashtrapati Bhavan)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಈ ಪ್ರಮಾಣ ವಚನ ಸಮಾರಂಭದ ತುಣುಕೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾರ್ಯಕ್ರಮ ನಡೆಯುತ್ತಿರುವಾಗ ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡುತ್ತಿರುವುದು ಕಂಡು ಬಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಚಿರತೆ ಎಂದು ಕರೆದಿದ್ದರು. ಈ ಮೂಲಕ ವ್ಯಾಪಕ ಚರ್ಚೆ ನಡೆದಿತ್ತು. ಇದೀಗ ದೆಹಲಿ ಪೊಲೀಸರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಕೇವಲ ಬೆಕ್ಕು ಮತ್ತು ಯಾವುದೇ ಚಿರತೆ ಅಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ (Viral News).

ಬಿಜೆಪಿಯ ದುರ್ಗಾ ದಾಸ್ ಉಯಿಕೆ ಅವರು ಕೇಂದ್ರ ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ, ವೇದಿಕೆಯ ಹಿನ್ನೆಲೆಯಲ್ಲಿ ಪ್ರಾಣಿಯೊಂದು ಓಡಾಡಿತ್ತು. ಹೆಚ್ಚಿನವರು ಇದನ್ನು ಆಗ ಗಮನಿಸಿರಲಿಲ್ಲ. ಬಳಿಕ ಇದನ್ನು ವಿಡಿಯೊದಲ್ಲಿ ಗುರುತಿಸಿದ ನೆಟ್ಟಿಗರು ಇದನ್ನು ಚಿರತೆ ಎಂದು ಕರೆದಿದ್ದರು. ಹೀಗಾಗಿ ಈ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.

ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹಜವಾಗಿ ಬಿಗಿ ಭದ್ರತೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಪ್ರಮುಖ ಚಲನಚಿತ್ರ ನಟರು ಸಾಕ್ಷಿಗಳಾಗಿದ್ದರು. ಇಷ್ಟೆಲ್ಲ ಭದ್ರತೆ ನಡುವೆಯೂ ಚಿರತೆ ಕಾಣಿಸಿಕೊಂಡಿದೆ ಎಂಬ ವಿಚಾರವೇ ಅನೇಕರಲ್ಲಿ ಭಯ ಹುಟ್ಟಿಸಿತ್ತು.

ಪೊಲೀಸರ ಸ್ಪಷ್ಟನೆ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ದೆಹಲಿ ಪೊಲೀಸರು, ʼʼರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಸೆರೆಯಾದ ಪ್ರಾಣಿಯ ಚಿತ್ರವನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಚಿರತೆ ಎಂದು ಕರೆದಿವೆ. ಆದರೆ ಇದು ನಿಜವಲ್ಲ. ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ಮನೆಯ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಕಿವಿಗೋಡಬೇಡಿ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಕವಿದಿದ್ದ ಆತಂಕದ ಕಾರ್ಮೋಡವನ್ನು ನಿವಾರಿಸಿದ್ದಾರೆ.

ಇದನ್ನೂ ಓದಿ: PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

ನೆಟ್ಟಿಗರ ಚರ್ಚೆ

ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವಾಗಲೇ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಅನೇಕರು ಇದನ್ನು ನಂಬಿರಲಿಲ್ಲ. ಇನ್ನು ಕೆಲವರು, ವಿಸ್ತಾರವಾದ ರಾಜಪಥ ಹಾಗೂ ರಾಷ್ಟ್ರಪತಿ ಭವನದ ಆವರಣದಲ್ಲಿ ಚಿರತೆ ಬಂದು ಹುದುಗಿಕೊಂಡಿರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ʼಅಮೃತ್ ಉದ್ಯಾನ್ʼ ಎಂದು ಕರೆಯಲಾಗುವ ಉದ್ಯಾನ 15 ಎಕರೆಗಳಷ್ಟು ಹರಡಿದ್ದು, ಹಲವು ಕಡೆ ದಟ್ಟವಾದ ಕಾಡು ಇದೆ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್ ಇದರ ಮೂಲ ಆಕರ್ಷಣೆಗಳಾಗಿವೆ. ಹರ್ಬಲ್ ಗಾರ್ಡನ್, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಗಳು ಇಲ್ಲಿವೆ. ಹೀಗಾಗಿ ಇಲ್ಲಿಂದ ಚಿರತೆ ಕಣ್ತಪ್ಪಿಸಿ ಬಂದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು. ಸದ್ಯ ಗೊಂದಲ ನಿವಾರಣೆಯಾಗಿದೆ.

Continue Reading

ಪ್ರಮುಖ ಸುದ್ದಿ

salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

salaries of prime minister ಸಂಬಳದ ವಿಷಯಕ್ಕೆ ಬಂದಾಗ ಎಲ್ಲರ ತಲೆಯಲ್ಲಿಯೂ ಒಂದು ಯೋಚನೆ ಇರುತ್ತದೆ. ಈ ದೇಶದ ಆಡಳಿತವನ್ನು ನಡೆಸುವ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳಿಗೆ ಸಂಬಳ ಎಷ್ಟಿರಬಹುದು ಎಂದು. ಅವರ ಸಂಬಳ, ಸಿಗುವ ಸವಲತ್ತುಗಳ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ ನೋಡಿ. ಪ್ರಧಾನಿ ಮತ್ತು ರಾಷ್ಟ್ರಪತಿಗೆ ಇರುವ ಸೌಕರ್ಯದ ಮಾಹಿತಿಯನ್ನು ತಿಳಿದುಕೊಂಡಿರಿ.

VISTARANEWS.COM


on

salaries of prime minister
Koo

ದೆಹಲಿ: ನೀವು ಯಾವುದಾದರೂ ಕೆಲಸದಲ್ಲಿ ಇದ್ದರೆ ನಿಮಗೆಷ್ಟು ಸಂಬಳ ಕೊಡುತ್ತಾರೆ ಎಂದು ಯಾರಾದರೂ ಕೇಳಿಯೇ ಕೇಳುತ್ತಾರೆ. ಕೆಲಸಕ್ಕಿಂತ ಹೆಚ್ಚಾಗಿ ಸಂಬಳವೇ ಎಲ್ಲರ ಕಣ್ಣನ್ನು ಸೆಳೆಯುತ್ತದೆ. ಇನ್ನು ಕೆಲವರಿಗೆ ಹೀಗೆ ಕೇಳುವುದು ಒಂದು ಕುತೂಹಲವಾಗಿರುತ್ತದೆ. ಸಣ್ಣಪುಟ್ಟ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಬಿಡದವರು ಇನ್ನು ದೇಶದ ಆಡಳಿತದ ಚುಕ್ಕಾಣಿ ಹಿಡಿದವರನ್ನು ಬಿಡುತ್ತಾರಾ….? ದೇಶದಲ್ಲಿ ಹಲವಾರು ಉನ್ನತ ಹುದ್ದೆಗಳಿವೆ. ಅದರಲ್ಲಿ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಬಹಳ ಮುಖ್ಯವಾದ ಹುದ್ದೆಗಳಾಗಿವೆ. ಸಾಮಾನ್ಯ ಹುದ್ದೆಗಳನ್ನು ಪಡೆದಿರುವವರಿಗೆ ತಿಂಗಳಿಗೆ ಕೈತುಂಬಾ ಸಂಬಳ ಬರುತ್ತದೆ. ಹಾಗಾದ್ರೆ ದೇಶದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಹುದ್ದೆಗೆ ಎಷ್ಟು ಸಂಬಳವಿರಬಹುದು (salaries of prime minister) ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿವರ ಇಲ್ಲಿದೆ ನೋಡಿ.

ರಾಷ್ಟ್ರಪತಿ

ದೇಶದ ಮೂರು ಉನ್ನತ ಹುದ್ದೆಗಳಲ್ಲಿ ರಾಷ್ಟ್ರಪತಿ ಹುದ್ದೆ ಒಂದು. 2018ರಲ್ಲಿ ಭಾರತದ ರಾಷ್ಟ್ರಪತಿಗಳ ವೇತನವನ್ನು ತಿಂಗಳಿಗೆ 1.50 ಲಕ್ಷದಿಂದ 5 ಲಕ್ಷಕ್ಕೆ ಪರಿಷ್ಕರಿಸಲಾಯಿತು.  ಹಾಗೇ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ನಲ್ಲಿ ಭಾರತೀಯ ರಾಷ್ಟ್ರಪತಿಗಳ ಗೌರವಧನವನ್ನು ಜನವರಿ 2006ರಿಂದ ಜಾರಿಗೆ ಬರುವಂತೆ ಕೊನೆಯ ಬಾರಿಗೆ ಪರಿಷ್ಕರಿಸಲಾಗಿರುವುದಾಗಿ ತಿಳಿಸಿದ್ದರು. ಹಾಗಾಗಿ ಗೃಹ ವ್ಯವಹಾರ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ  ರಾಷ್ಟ್ರಪತಿಗಳ ಸವಲತ್ತಿನ ವಿವರ ಹೀಗಿದೆ:

-ರಾಷ್ಟ್ರಪತಿ ವಿಮಾನ, ರೈಲು ಅಥವಾ ಸ್ಟೀಮರ್ ಗಳ ಮೂಲಕ ದೇಶದ ಯಾವ ಪ್ರದೇಶಕ್ಕೂ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಹಾಗೇ ಅವರ ಜೊತೆ ಸಹಾಯಕ್ಕಾಗಿ ಒಬ್ಬ ವ್ಯಕ್ತಿಯನ್ನು ಕರೆತರಬಹುದಾಗಿದೆ. ಅವರ ಖರ್ಚನ್ನು ಸರ್ಕಾರವೇ ಭರಿಸುತ್ತದೆ.

-ರಾಷ್ಟ್ರಪತಿ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

-ಸುಸಜ್ಜಿತ ಬಾಡಿಗೆ ಮುಕ್ತ ಮನೆ, ಎರಡು ಉಚಿತ ಲ್ಯಾಂಡ್ ಲೈನ್ ಗಳು ( ಇದರಲ್ಲಿ ಒಂದು ಇಂಟರ್ ನೆಟ್ ಸಂಪರ್ಕಕ್ಕಾಗಿ ), ಮೊಬೈಲ್ ಫೋನ್, ಮನೆಯ ನಿರ್ವಹಣೆಯ ಜೊತೆಗೆ ಐದು ವೈಯಕ್ತಿಕ ಸಿಬ್ಬಂದಿಗಳನ್ನು ನೀಡಲಾಗುತ್ತದೆ.

-ಒಂದು ವೇಳೆ ರಾಷ್ಟ್ರಪತಿ, ಹುದ್ದೆಯಲ್ಲಿರುವಾಗಲೇ ಮರಣ ಹೊಂದಿದರೆ ಅವರ ಸಂಗಾತಿಗೆ ನಿವೃತ್ತಿಯ ವೇಳೆ ರಾಷ್ಟ್ರಪತಿಗೆ ನೀಡಲಾಗುವಂತಹ ಕುಟುಂಬ ಪಿಂಚಣಿಯನ್ನು ಐವತ್ತು ಪ್ರತಿಶತ ಪಿಂಚಣಿ ದರದಲ್ಲಿ ಜೀವಮಾನವಿಡೀ ನೀಡಲಾಗುವುದು.

-ಹಾಗೇ ರಾಷ್ಟ್ರಪತಿಯ ಸಂಗಾತಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಸಹ ನೀಡಲಾಗುವುದು.

ಉಪರಾಷ್ಟ್ರಪತಿ

ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಉಪರಾಷ್ಟ್ರಪತಿಯ ಗೌರವಧನವನ್ನು ತಿಂಗಳಿಗೆ 1.25 ಲಕ್ಷದಿಂದ 4 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದಕ್ಕೆ ಸಂಬಂಧಿಸಿದ ಸವಲತ್ತುಗಳ ವಿವರ ಇಲ್ಲಿದೆ:

– ಉಪರಾಷ್ಟ್ರಪತಿಯು ಉಚಿತ ವಸತಿ, ವೈಯಕ್ತಿಕ ಭದ್ರತೆ, ವೈದ್ಯಕೀಯ ಆರೈಕೆ, ರೈಲು ಮತ್ತು ವಿಮಾನ ಪ್ರಯಾಣ, ಸ್ಥಿರ ದೂರವಾಣಿ ಸಂಪರ್ಕ, ಮೊಬೈಲ್ ಫೋನ್ ಸೇವೆ ಮತ್ತು ಸಿಬ್ಬಂದಿಯನ್ನು ಪಡೆಯಬಹುದಾಗಿದೆ.

-ನಿವೃತ್ತಿಯ ನಂತರ ಅವರು ಖಾಸಗಿ ಕಾರ್ಯದರ್ಶಿ, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ, ವೈಯಕ್ತಿಕ ಸಹಾಯಕ ಮತ್ತು ಇಬ್ಬರು ಪ್ಯೂನ್ ಗಳನ್ನು ಒಳಗೊಂಡಿರುವ ಕಾರ್ಯದರ್ಶಿ ಸಿಬ್ಬಂದಿಯನ್ನು ಹೊಂದಬಹುದಾಗಿದೆ. ಮತ್ತು ಅಂತಹ ಕಾರ್ಯದರ್ಶಿ ಸಿಬ್ಬಂದಿಗಳ ನಿರ್ವಹಣೆಗಾಗಿ ಅವರು ಸಂಬಳವನ್ನು ನೀಡಬೇಕಾಗುತ್ತದೆಯಂತೆ.

ಇದನ್ನೂ ಓದಿ:Assault Case: ತುರ್ತು ಚಿಕಿತ್ಸೆಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ತಡೆಗಟ್ಟಿ ಹಲ್ಲೆ ಮಾಡಿದ ಕ್ರೂರಿಗಳು!

ಪ್ರಧಾನ ಮಂತ್ರಿ

ಭಾರತದ ಪ್ರಧಾನ ಮಂತ್ರಿಗಳು ತಿಂಗಳಿಗೆ 1.66 ಲಕ್ಷ ರೂ. ಸಂಬಳವನ್ನು ಪಡೆಯುತ್ತಾರೆ. ಇತರ ಭತ್ಯೆಗಳು ಬೇರೆ ಇರುತ್ತವೆ. ಅವರಿಗೆ ನೀಡಲಾದ ಸವಲತ್ತುಗಳ ವಿವರ ಇಲ್ಲಿದೆ:

-ಅವರ ಭದ್ರತೆಗೆ ವೈಯಕ್ತಿಕ ಸಿಬ್ಬಂದಿಗಳ ವಿಶೇಷ ರಕ್ಷಣಾ ತಡವನ್ನು ನಿಯೋಜಿಸಲಾಗುತ್ತದೆ.

-ಪ್ರಧಾನಿಯವರು ಪ್ರಯಾಣಿಸಲು ಒಂದು ವಿಶೇಷವಾದ ವಿಮಾನ –ಏರ್ ಇಂಡಿಯಾ ಒನ್ ಅನ್ನು ನೀಡಲಾಗುತ್ತದೆ.

– ರೇಸ್ ಕೋರ್ಸ್ ರಸ್ತೆಯ 7 ರಲ್ಲಿ ಅವರಿಗೆ ಅಧಿಕೃತ ನಿವಾಸವನ್ನು ನೀಡಲಾಗುತ್ತದೆ.

  • – ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಸಾರಿಗೆ ಸೌಲಭ್ಯ ಇತ್ಯಾದಿ ಸೌಕರ್ಯಗಳು ಪ್ರಧಾನಿಗಿರುತ್ತವೆ.
  • – ನಿವೃತ್ತಿಯ ಬಳಿಕವೂ ಪ್ರಧಾನಿಯಾಗಿದ್ದವರು ಮತ್ತು ಅವರ ಕುಟುಂಬಕ್ಕೆ ಉಚಿತ ಸೌಕರ್ಯ ಮುಂದುವರಿಯುತ್ತವೆ.
Continue Reading

Lok Sabha Election 2024

Somnath Bharti: ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಆಪ್‌ ನಾಯಕ ಯೂ ಟರ್ನ್‌; ನೀಡಿದ ಸಮರ್ಥನೆ ಏನು?

Somnath Bharti: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ದೆಹಲಿಯ ಆಮ್‌ ಆದ್ಮಿ ಪಾರ್ಟಿ ನಾಯಕ ಸೋಮನಾಥ ಭಾರ್ತಿ ಈಗ ಯೂ ಟರ್ನ್‌ ಹೊಡೆದಿದ್ದಾರೆ. ತಲೆ ಬೋಳಿಸಿಕೊಳ್ಳಲು ನಿರಾಕರಿಸಿದ್ದಾರೆ. ಜತೆಗೆ ಸಮರ್ಥನೆಯನ್ನೂ ನೀಡಿದ್ದಾರೆ. ಅವರು ಹೇಳಿದ್ದೇನು?

VISTARANEWS.COM


on

Somnath Bharti
Koo

ನವದೆಹಲಿ: ಬಿಜೆಪಿ ನೃತೃತ್ವದ ಎನ್‌ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ದೆಹಲಿಯ ಆಮ್‌ ಆದ್ಮಿ ಪಾರ್ಟಿ (Aam Aadmi Party) ನಾಯಕ ಸೋಮನಾಥ ಭಾರ್ತಿ (Somnath Bharti) ಈಗ ಯೂ ಟರ್ನ್‌ ಹೊಡೆದಿದ್ದಾರೆ. ತಲೆ ಬೋಳಿಸಿಕೊಳ್ಳಲು ನಿರಾಕರಿಸಿದ್ದಾರೆ.

ನರೇಂದ್ರ ಮೋದಿ ಸ್ವಂತ ಬಲದ ಮೇಲೆ ಪ್ರಧಾನ ಮಂತ್ರಿಯಾಗಿಲ್ಲ. ಅವರು ಮಿತ್ರ ಪಕ್ಷಗಳ ಸಹಾಯದಿಂದ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಹೀಗಾಗಿ ತಲೆ ಬೋಳಿಸುವುದಿಲ್ಲ ಎಂದು ಅವರು ಸಮರ್ಥನೆ ನೀಡಿದ್ದಾರೆ. ʼʼಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ಆದರೆ ಅವರು ಈಗ ಸ್ವಂತ ಬಲದಿಂದ ಪ್ರಧಾನಿ ಹುದ್ದೆಗೆ ಏರಿಲ್ಲ. ಮಿತ್ರಪಕ್ಷಗಳ ಸಹಾಯದಿಂದ ಪ್ರಧಾನಿಯಾಗಿದ್ದಾರೆʼʼ ಎಂದು ಸೋಮನಾಥ ಭಾರ್ತಿ ಹೇಳಿದ್ದಾರೆ.

ʼʼನನ್ನ ಹೇಳಿಕೆಯನ್ನು ಯಾವ ಕಾರಣಕ್ಕೂ ತಿರುಚುವುದಿಲ್ಲ. ಮೋದಿ ಅವರು ಸ್ವಂತ ಬಲದಿಂದ ಪ್ರಧಾನಿಯಾಗದಿದ್ದರೆ ಅದು ಅವರ ಗೆಲುವು ಎಂದು ಪರಿಗಣಿಸಲು ಆಗುವುದಿಲ್ಲ. ಹೀಗಾಗಿ ನಾನು ಹೇಳಿದ ಪ್ರಕಾರ ಅವರು ಸ್ವತಂತ್ರವಾಗಿ ಜಯ ಗಳಿಸಿಲ್ಲ. ಹೀಗಾಗಿ ನಾನು ತಲೆಬೋಳಿಸಬೇಕಾಗಿಲ್ಲʼʼ ಎಂದೂ ವಿವರಿಸಿದ್ದಾರೆ.

ಜೂನ್‌ 1ರಂದು ಚುನಾವಣೋತ್ತರ ಪ್ರಕಟವಾದ ಬಳಿಕ ಸೋಮನಾಥ ಭಾರ್ತಿ ಪ್ರತಿಜ್ಞೆ ಕೈಗೊಂಡಿದ್ದರು. ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಎಕ್ಸಿಟ್‌ ಪೋಲ್‌ ಸಮೀಕ್ಷೆ ಸುಳ್ಳಾಗುತ್ತದೆ ಎಂದಿದ್ದ ಅವರು, ʼʼಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ! ಎಲ್ಲ ಎಕ್ಸಿಟ್ ಪೋಲ್‌ಗಳು ಜೂನ್ 4ರಂದು ತಪ್ಪಾಗುತ್ತವೆ ಮತ್ತು ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದಿಲ್ಲ. ದೆಹಲಿಯಲ್ಲಿ ಎಲ್ಲ ಏಳು ಸ್ಥಾನಗಳಲ್ಲಿ ಇಂಡಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಜೂನ್‌ 9ರಂದು ಈ ಪ್ರತಿಜ್ಞೆಯನ್ನು ಎಕ್ಸ್‌ ಮೂಲಕ ನೆನಪಿಸಿದ ದೆಹಲಿಯ ಬಿಜೆಪಿ ನಾಯಕ ಪ್ರವೀಣ್‌ ಶಂಕರ್‌ ಕಪೂರ್‌ ಅವರು ಕೂಡಲೇ ತಲೆ ಬೋಳಿಸುವಂತೆ ಸೋಮನಾಥ ಭಾರ್ತಿ ಅವರಲ್ಲಿ ಹೇಳಿದ್ದರು. ʼʼನಮಗೆ ಗೊತ್ತು ಆಮ್‌ ಆದ್ಮಿ ಪಾರ್ಟಿ (ಆಪ್‌)ಯವರು ಯಾವತ್ತೂ ತಮ್ಮ ಮಾತನ್ನು ಉಳಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ನಾನು ಸೋಮನಾಥ ಭಾರ್ತಿ ಅವರಲ್ಲಿ ತಲೆ ಬೋಳಿಸಿಕೊಳ್ಳಲು ನೆನಪಿಸಿಕೊಳ್ಳುತ್ತಿದ್ದೇನೆ. ಮಾತು ಉಳಿಸಿಕೊಡದಿದ್ದರೆ ಅವರು ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆದುಕೊಳ್ಳಬೇಕುʼʼ ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ.

ಇದನ್ನೂ ಓದಿ: Mohan Bhagwat: ಮಣಿಪುರ ಹಿಂಸೆ ನಿಲ್ಲಿಸಿ; ಅಧಿಕಾರ ಹಿಡಿದ ಮೋದಿಗೆ ಟಾಸ್ಕ್‌ ಕೊಟ್ಟ ಮೋಹನ್‌ ಭಾಗವತ್!

ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 292 ಸೀಟುಗಳನ್ನು ಪಡೆದುಕೊಂಡು ಅಧಿಕಾರವನ್ನು ಉಳಿಸಿಕೊಂಡಿದೆ. ಈ ಪೈಕಿ ಬಿಜೆಪಿ 240 ಸ್ಥಾನಗಳಲ್ಲಿ ಜಯ ಗಳಿಸಿದೆ. ವಿಶೇಷ ಎಂದರೆ ದೆಹಲಿಯಲ್ಲಿ ಬಿಜೆಪಿ ಕ್ಲೀನ್‌ ಸ್ವಿಪ್‌ ಮಾಡಿದ್ದು, 7 ಸ್ಥಾನಗಳಲ್ಲಿಯೂ ಜಯಭೇರಿ ಬಾರಿಸಿದೆ.

Continue Reading
Advertisement
T20 World Cup 2024
ಕ್ರಿಕೆಟ್35 seconds ago

T20 World Cup 2024: ಪಾಕ್​ಗೆ ಇನ್ನೂ ಇದೇ ಸೂಪರ್-8 ಅವಕಾಶ? ಇಲ್ಲಿದೆ ಲೆಕ್ಕಾಚಾರ

Narenda Modi
Lok Sabha Election 202410 mins ago

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌, ದೇವೇಗೌಡ ಅವರ ಆಶೀರ್ವಾದ ಪಡೆದ ಮೋದಿ

Smartphone Charging Tips
ತಂತ್ರಜ್ಞಾನ28 mins ago

Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

Bengaluru Crime News
ಬೆಂಗಳೂರು33 mins ago

ಬೈಕ್‌ ಮರೆತು ಬಂದಿದ್ದನ್ನು ಪ್ರಶ್ನಿಸಿದ ಮಗನನ್ನೇ ಕೊಂದ ತಂದೆ; ಕುಡಿದ ಮತ್ತಲ್ಲಿ ನಡೆಯಿತು ದುರಂತ!

RSA vs BAN
ಕ್ರೀಡೆ34 mins ago

RSA vs BAN: ಹ್ಯಾಟ್ರಿಕ್​ ಗೆಲುವು ಸಾಧಿಸಿ ಸೂಪರ್​-8 ಹಂತಕ್ಕೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ

Delhi Tour
ಲೈಫ್‌ಸ್ಟೈಲ್36 mins ago

Delhi Tour: ದೆಹಲಿಗೆ ಪ್ರವಾಸಕ್ಕೆ ಹೋದಾಗ ಮಿಸ್ ಮಾಡದೇ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!

Rashtrapati Bhavan
ದೇಶ47 mins ago

Rashtrapati Bhavan: ಮೋದಿ ಪ್ರಮಾಣ ವಚನ ಸಮಾರಂಭದ ವೇಳೆ ಕಾಣಿಸಿಕೊಂಡಿದ್ದು ಚಿರತೆಯಲ್ಲ; ಪೊಲೀಸರ ಸ್ಪಷ್ಟನೆ

salaries of prime minister
ಪ್ರಮುಖ ಸುದ್ದಿ48 mins ago

salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

Vastu Tips
ಧಾರ್ಮಿಕ59 mins ago

Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ವಾಸ್ತು ಸಲಹೆ ಪಾಲಿಸಿ

Shakti Scheme
ಕರ್ನಾಟಕ1 hour ago

Shakti Scheme: ಉಚಿತ ಪ್ರಯಾಣದ ಶಕ್ತಿ ಯೋಜನೆಗೆ 1 ವರ್ಷ; ಖರ್ಚಾಗಿದ್ದೆಷ್ಟು? ಉಪಯೋಗ ಪಡೆದವರೆಷ್ಟು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌