ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ಮರಳುವ ಸೂಚನೆ ಕಾಣುತ್ತಿದೆ; ಎಐಸಿಸಿ ವಕ್ತಾರ ಹೀಗೆ ಹೇಳಲು ಕಾರಣವೇನು? - Vistara News

ದೇಶ

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ಮರಳುವ ಸೂಚನೆ ಕಾಣುತ್ತಿದೆ; ಎಐಸಿಸಿ ವಕ್ತಾರ ಹೀಗೆ ಹೇಳಲು ಕಾರಣವೇನು?

ಜ್ಯೋತಿರಾದಿತ್ಯ ಸಿಂಧಿಯಾ ಮೊದಲು ಕಾಂಗ್ರೆಸ್​ನಲ್ಲಿಯೇ ಇದ್ದರು. ಆದರೆ 2020ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ನಲ್ಲಿ ನಮ್ಮಂಥ ಕಿರಿಯ ನಾಯಕರಿಗೆ ಬೆಲೆ ಇಲ್ಲ ಎಂದು ಹೇಳಿ, ಕಮಲ ಹಿಡಿದಿದ್ದಾರೆ.

VISTARANEWS.COM


on

Flight delay problem, war rooms will set up in 6 metro Airports
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿಮ್ಲಾ: ಮಧ್ಯಪ್ರದೇಶಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತ ಕೋರಿದ್ದನ್ನು ನೋಡಿದ್ದರೆ, ಅವರು ವಾಪಸ್​ ಮನೆಗೆ ಮರಳುವ ಸಿದ್ಧತೆಯಲ್ಲಿ ಇದ್ದಾರೆ ಎಂದೆನಿಸುತ್ತದೆ ಎಂದು ಎಐಸಿಸಿ ವಕ್ತಾರ, ಹಿಮಾಚಲ ಪ್ರದೇಶ ಕಾಂಗ್ರೆಸ್​ ಪ್ರದೇಶ ಸಮಿತಿ ಅಧ್ಯಕ್ಷ ಕುಲದೀಪ್​ ಸಿಂಗ್​ ರಾಥೋಡ್​ ಹೇಳಿದ್ದಾರೆ.

ಸೆಪ್ಟೆಂಬರ್​ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಭಾರತ್​ ಜೋಡೋ ಯಾತ್ರೆ ಬುಧವಾರ ಮುಂಜಾನೆ (ನವೆಂಬರ್ 23) ಮಧ್ಯಪ್ರದೇಶಕ್ಕೆ ಕಾಲಿಟ್ಟಿದೆ. ಹೀಗೆ ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಕಾಲಿಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಮಧ್ಯಪ್ರದೇಶಕ್ಕೆ ಯಾರೇ ಬಂದರೂ ಅವರಿಗೆ ಸ್ವಾಗತ’ ಎಂದು ಹೇಳಿದ್ದರು. ಅದನ್ನೇ ಉಲ್ಲೇಖಿಸಿ, ಕುಲದೀಪ್​ ಸಿಂಗ್​ ರಾಥೋಡ್​ ಈ ಮಾತುಗಳನ್ನಾಡಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮೊದಲು ಕಾಂಗ್ರೆಸ್​​ನಲ್ಲಿ ಇದ್ದವರು. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಬಳಿಕ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಅವರೀಗ ಕೇಂದ್ರ ವಿಮಾನಯಾನ ಇಲಾಖೆ ಮತ್ತು ಉಕ್ಕು ಸಚಿವಾಲಯದ ಹೊಣೆ ಹೊತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಬಂದಾಗ ಅವರು ‘ಯಾರೇ ಬಂದರೂ ಸ್ವಾಗತ’ ಎಂದಿದ್ದು, ಮರಳಿ ಕಾಂಗ್ರೆಸ್​​ಗೆ ಕಾಲಿಡುವ ಸೂಚನೆ ಎಂದು ಕುಲದೀಪ್​ ರಾಥೋಡ್​ ವಿಶ್ಲೇಷಿಸಿದ್ದಾರೆ.

ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ನಡೆದ ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡಿದ ಕುಲದೀಪ್​ ಸಿಂಗ್ ರಾಥೋಡ್​, ‘ಗುಡ್ಡಗಾಡು ರಾಜ್ಯವಾದ ಹಿಮಾಚಲ ಪ್ರದೇಶದ ಜನರು ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ಚುನಾವಣೆಯಲ್ಲಿ ಜನ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಖಂಡಿತ ನಮ್ಮ ಪಕ್ಷವೇ ಸರ್ಕಾರ ರಚನೆ ಮಾಡಲಿದೆ ಎಂದೂ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Video | ಭಾರತ್​ ಜೋಡೋ ಯಾತ್ರೆಯಲ್ಲಿ ಮೊಳಗಿದ ನೇಪಾಳ ರಾಷ್ಟ್ರಗೀತೆ; ಮುಖಮುಖ ನೋಡಿಕೊಂಡ ಕಾಂಗ್ರೆಸ್ ನಾಯಕರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Election Results 2024: ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು; ಬಿಜೆಪಿಗೆ ಬಿಗ್‌ ರಿಲೀಫ್‌

Election Results 2024: ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಇದೀಗ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮಿರುವ ತೆಲುಗು ದೇಶಂ ಪಕ್ಷ (TDP)ದ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಜತೆಗೆ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಭಾ ಚುನಾವಣೆ (Election Results 2024)ಯ ಅಚ್ಚರಿಯ ಫಲಿತಾಂಶ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಇದೀಗ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮಿರುವ ತೆಲುಗು ದೇಶಂ ಪಕ್ಷ (TDP)ದ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಜತೆಗೆ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಸೇರುವ ವದಂತಿಯನ್ನು ತಳ್ಳಿ ಹಾಕಿರುವ ಟಿಡಿಪಿ, ಎನ್‌ಡಿಎಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದೆ. ಬುಧವಾರ ಸಂಜೆ ದೆಹಲಿಯಲ್ಲಿ ಆಯೋಜಿಸಿರುವ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಭಾಗವಹಿಸಲಿದ್ದಾರೆ ಎಂದೂ ಟಿಡಿಪಿ ತಿಳಿಸಿದೆ. ಆಂಧ್ರ ಪ್ರದೇಶದ 25 ಸೀಟುಗಳ ಪೈಕಿ 21 ಸ್ಥಾನಗಳನ್ನು ಎನ್‌ಡಿಎ ಗೆದ್ದುಕೊಂಡಿದೆ. ಈ ಪೈಕಿ ಟಿಡಿಪಿ ಅತಿ ಹೆಚ್ಚಿನ 16 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಮಿತ್ರ ಪಕ್ಷವಾದ ಜನಸೇನೆ 2 ಮತ್ತು ಬಿಜೆಪಿ 3 ಕಡೆ ಗೆದ್ದಿದೆ.

ಚಂದ್ರಬಾಬು ನಾಯ್ಡು ಹೇಳಿದ್ದೇನು?

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಂದ್ರಬಾಬು ನಾಯ್ಡು, “ಈ ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ನಾವು ಎನ್‌ಡಿಎಯಲ್ಲಿದ್ದೇವೆ. ನಾನು ಎನ್‌ಡಿಎ ಸಭೆಗೆ ಹೋಗುತ್ತಿದ್ದೇನೆ. ಮತದಾರರ ಬೆಂಬಲಕ್ಕೆ ಧನ್ಯವಾದಗಳು. ರಾಜಕೀಯದಲ್ಲಿ ಏರಿಳಿತಗಳು ಸಾಮಾನ್ಯ. ಇತಿಹಾಸದಲ್ಲಿ ಅನೇಕ ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ಜನರು ಸೋಲಿಸಿದ್ದಾರೆ. ಇದೊಂದು ಐತಿಹಾಸಿಕ ಚುನಾವಣೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಖಾತೆಗಳಿಗೆ ಬೇಡಿಕೆ?

ಇದೀಗ ಕಿಂಗ್‌ ಮೇಕರ್‌ ಆಗಿರುವ ಟಿಡಿಪಿ ಸರ್ಕಾರದಲ್ಲಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಖಾತೆಗಳ ಜತೆಗೆ ಸ್ಪೀಕರ್ ಹುದ್ದೆಯನ್ನು ಕೋರಬಹುದು ಎಂದು ಮೂಲಗಳು ತಿಳಿಸಿವೆ. ಜತೆಗೆ ಕೃಷಿ, ಜಲಶಕ್ತಿ, ಐಟಿ ಮತ್ತು ರಾಜ್ಯ ಹಣಕಾಸು ಖಾತೆಗಳಿಗೂ ಬೇಡಿಕೆ ಇಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಟಿಡಿಪಿ 5-6 ಖಾತೆಗಳಿಗಾಗಿ ಹಕ್ಕು ಮಂಡಿಸಲಿದೆ.

ಇದನ್ನೂ ಓದಿ: Election Results 2024: ಮೋದಿ ಪಟ್ಟಾಭಿಷೇಕಕ್ಕೆ ಮೂಹೂರ್ತ ಫಿಕ್ಸ್‌: ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?

ಬೇಷರತ್ತು ಬೆಂಬಲ ಘೋಷಿಸಿದ ಜೆಡಿಯು

ಇತ್ತ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಕೂಡ ಎನ್‌ಡಿಎಗೆ ಬೇಷರತ್ತು ಬೆಂಬಲ ಸೂಚಿಸಿದೆ. ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಈ ಬಗ್ಗೆ ಮಾತನಾಡಿ, ಯಾವದೇ ಬೇಡಿಕೆ ಇಲ್ಲದೆ ಎನ್‌ಡಿಎಗೆ ಬೆಂಬಲ ನೀಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಎನ್‌ಡಿಎ ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ನಿತೀಶ್‌ ಕುಮಾರ್‌ ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕೆ.ಸಿ.ತ್ಯಾಗಿ, “ಎನ್‌ಡಿಎ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯಲ್ಲಿ ನಿತೀಶ್ ಕುಮಾರ್ ಭಾಗವಹಿಸುತ್ತಿದ್ದಾರೆ. ಈ ವೇಳೆ ಜೆಡಿಯು ಎನ್‌ಡಿಎಗೆ ಬೆಂಬಲ ನೀಡುವ ಮತ್ತು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಬಗ್ಗೆ ಪತ್ರವನ್ನು ಸಲ್ಲಿಸಲಿದೆ. ʼಇಂಡಿಯಾʼ ಮೈತ್ರಿಕೂಟಕ್ಕೆ ಮರಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Election Results 2024 : ಫಲಿತಾಂಶ ಬದಲಾಯಿಸಿದ್ದು ಮುಸ್ಲಿಂ ಮತಗಳೇ? ಈ ಬಾರಿ 15 ಮುಸ್ಲಿಂ ಸಂಸದರ ಆಯ್ಕೆ

Election Results 2024 : ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 543 ಸ್ಥಾನಗಳಲ್ಲಿ 15 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಸಂಸತ್​ ಪ್ರವೇಶಿಸಿದ್ದಾರೆ.

VISTARANEWS.COM


on

Election Results 2024
Koo

ಬೆಂಗಳೂರು: ಬಿಜೆಪಿ ಕೇಂದ್ರದಲ್ಲಿ ಸತತ ಮೂರನೇ ಸರ್ಕಾರವನ್ನು ರಚಿಸಲಿದೆ. ನರೇಂದ್ರ ಮೋದಿ ಅವರು ಜೂನ್ 8ಕ್ಕೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ (Election Results 2024) ಸರಳ ಬಹುಮತಕ್ಕೆ 32 ಸ್ಥಾನಗಳ ಕೊರತೆಯಿದೆ. ಎನ್​ಡಿಎ ಹಾಗೂ ಇಂಡಿ ಒಕ್ಕೂಟದ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಿದ್ದು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ಈ ಬಾರಿ ಚುನಾವಣಾ ಫಲಿತಾಂಶ ಬದಲಾವಣೆಗೆ ಮುಸ್ಲಿಂ ಮತದಾರರೇ ಕಾರಣ ಎಂಬ ಚರ್ಚೆ ನಡೆಯುತ್ತಿದೆ. ಇಂಡಿ ಒಕ್ಕೂಟ ಅದರಲ್ಲೂ ಕಾಂಗ್ರೆಸ್​ಗೆ ಮುಸ್ಲಿಂ ಮತದಾರರ ಸಾರಾಸಗಟಾಗಿ ಮತ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸದರ ಆಯ್ಕೆಯಾಗಿರವ ಪ್ರಮಾಣವೂ ಹೆಚ್ಚಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 543 ಸ್ಥಾನಗಳಲ್ಲಿ 15 ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಸಂಸತ್​ ಪ್ರವೇಶಿಸಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 78 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 15 ಮಂದಿ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ 115 ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಹರಾನ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ 64,542 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕೈರಾನಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಇಕ್ರಾ ಚೌಧರಿ ಅವರು ಬಿಜೆಪಿಯ ಪ್ರದೀಪ್ ಕುಮಾರ್ ಅವರನ್ನು 69,116 ಮತಗಳ ಅಂತರದಿಂದ ಸೋಲಿಸಿ ಸಂಸತ್​ ಪ್ರವೇಶಿಸಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಬಿಜೆಪಿಯ ಮಾಧವಿ ಲತಾ ಕೊಂಪೆಲ್ಲಾ ಅವರನ್ನು 3,38,087 ಮತಗಳ ಅಂತರದಿಂದ ಮಣಿಸಿದ್ದಾರೆ.

ಲಡಾಖ್​ನಲ್ಲಿ ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಹನೀಫಾ 27,862 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಅಬ್ದುಲ್ ರಶೀದ್ ಶೇಖ್ 4.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮೊಹಿಬುಲ್ಲಾ 4,81,503 ಮತಗಳನ್ನು ಪಡೆಯುವ ಮೂಲಕ ರಾಂಪುರ ಸ್ಥಾನವನ್ನು ಗೆದ್ದರೆ, ಸಂಭಾಲ್​​ನಲ್ಲಿ ಜಿಯಾ ಉರ್ ರೆಹಮಾನ್ 1.2 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್-ರಾಜೌರಿ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್​ನ ಮಿಯಾನ್ ಅಲ್ತಾಫ್ ಅಹ್ಮದ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ 2,81,794 ಮತಗಳಿಂದ ಗೆದ್ದಿದ್ದಾರೆ. ಶ್ರೀನಗರದಲ್ಲಿ ಎನ್ಸಿ ಅಭ್ಯರ್ಥಿ ಅಗಾ ಸೈಯದ್ ರುಹುಲ್ಲಾ ಮೆಹ್ದಿ 3,56,866 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:Lakshmi Hebbalkar : ಉಡುಪಿ ಜಿಲ್ಲಾ ಕಾಂಗ್ರೆಸ್​​ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ‘ಗೋ ಬ್ಯಾಕ್​’ ಬಿಸಿ

ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯೂಸುಫ್ ಪಠಾಣ್ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಆರು ಬಾರಿಯ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು 85,022 ಮತಗಳಿಂದ ಸೋಲಿಸಿದ್ದಾರೆ.

ಫಲಿತಾಂಶ ಏನಾಯಿತು?

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 231 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ನೇತೃತ್ವದ ಎನ್ಡಿಎ 295 ಸ್ಥಾನಗಳನ್ನು ಗೆದ್ದಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ರಚಿಸಲು ಮಿತ್ರಪಕ್ಷಗಳ ಬೆಂಬಲವನ್ನು ಅವಲಂಬಿಸಬೇಕಾಗುತ್ತದೆ.

2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ 282 ಮತ್ತು 303 ಸ್ಥಾನಗಳನ್ನು ಗೆದ್ದಿತ್ತು. ಸರ್ಕಾರ ರಚಿಸಲು ಬೆಂಬಲವನ್ನು ಒಟ್ಟುಗೂಡಿಸುವ ಭರವಸೆಯಲ್ಲಿ ಭಾರತ ಬಣವು ಎನ್ಡಿಎ ಮಿತ್ರಪಕ್ಷಗಳೊಂದಿಗೆ ಮಾತುಕತೆಗಳನ್ನು ಕಳುಹಿಸುತ್ತಿದೆ ಎಂದು ವರದಿಯಾಗಿದೆ.

Continue Reading

ದೇಶ

Odisha Assembly Result 2024: ಬಿಜೆಡಿಗೆ ಆಘಾತಕಾರಿ ಸೋಲು; ಒಡಿಶಾ ಸಿಎಂ ರಾಜೀನಾಮೆ

Odisha Assembly Result 2024: ಬಿಜೆಡಿ ಪಕ್ಷ ಮುಖ್ಯಸ್ಥರೂ ಆಗಿರುವ ನವೀನ್‌ ಪಟ್ನಾಯಕ್‌ ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್‌ ದಾಸ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಭಾರೀ ಬಹುಮತ ಪಡೆದಿರುವ ಬಿಜೆಪಿ ಈ ಬಾರಿ ಸರ್ಕಾರ ರಚಿಸಲಿದ್ದು, ಇದುವರೆಗೆ ಮುಖ್ಯಮಂತ್ರಿ ಯಾರೆಂಬುದು ಘೋಷಣೆ ಆಗಿಲ್ಲ. ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಗೆದ್ದಿದೆ.

VISTARANEWS.COM


on

Odisha Assembly election 2024
Koo

ಭುವನೇಶ್ವರ: ಲೋಕಸಭೆ ಚುನಾವಣೆ(Lok Sabha Election 2024)ಯಷ್ಟೇ ಈ ಬಾರಿ ಒಡಿಶಾ ವಿಧಾನಸಭೆ(Odisha Assembly Result 2024) ಚುನಾವಣೆಯೂ ದೇಶದ ಗಮನ ಸೆಳೆದಿತ್ತು. ನಿನ್ನೆ ಇಲ್ಲಿಯ ಫಲಿತಾಂಶ ಹೊರ ಬಿದ್ದಿದ್ದು, ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ 24 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡಿದ್ದು, ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಹೀಗಾಗಿ ಇಂದು ನವೀನ್‌ ಪಟ್ನಾಯಕ್‌ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಡಿ ಪಕ್ಷ ಮುಖ್ಯಸ್ಥರೂ ಆಗಿರುವ ನವೀನ್‌ ಪಟ್ನಾಯಕ್‌ ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್‌ ದಾಸ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಭಾರೀ ಬಹುಮತ ಪಡೆದಿರುವ ಬಿಜೆಪಿ ಈ ಬಾರಿ ಸರ್ಕಾರ ರಚಿಸಲಿದ್ದು, ಇದುವರೆಗೆ ಮುಖ್ಯಮಂತ್ರಿ ಯಾರೆಂಬುದು ಘೋಷಣೆ ಆಗಿಲ್ಲ. ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಗೆದ್ದಿದೆ.

ಇನ್ನು ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗಿತ್ತು. ಎಕ್ಸಿಟ್‌ ಪೋಲ್‌ ರಿಸಲ್ಟ್‌ ಪ್ರಕಾರ ಬಿಜೆಡಿ ಈ ಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್‌ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್‌ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಅಂದಾಜಿಸಿತ್ತು ಇಂದಿನ ಈ ಫಲಿತಾಂಶ ಎಲ್ಲಾ ಎಕ್ಸಿಟ್‌ ಪೋಲ್‌ ಫಲಿತಾಂಶವನ್ನು ತಲೆಕೆಳಗಾಗಿಸಿವೆ.

2019ರ ಚಿತ್ರಣ

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳಕ್ಕೆ 117, ಬಿಜೆಪಿಗೆ 23 ಮತ್ತು ಕಾಂಗ್ರೆಸ್‌ಗೆ 9 ಸ್ಥಾನ ಸಿಕ್ಕಿತ್ತು. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಸತತ ಐದನೇ ಅವಧಿಗೆ ಮರು ಆಯ್ಕೆಯಾಗಿದ್ದರು.

ಬಿಜೆಡಿಯ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ. ಬಿಜೆಪಿಯು 2000 ಮತ್ತು 2009ರ ನಡುವೆ ಬಿಜೆಡಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತ್ತು. ಆ ಅವಧಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದವು. 2009ರ ಚುನಾವಣೆಗೂ ಮೊದಲು ಮೈತ್ರಿ ಮುರಿದು ಬಿದ್ದು, ಬಿಜೆಪಿ ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಯಿತು.

ಇದನ್ನೂ ಓದಿ: Election Results 2024: ಸರ್ಕಾರ ರಚನೆಯ ಕಸರತ್ತು; ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್

Continue Reading

Lok Sabha Election 2024

Election Results 2024: ಮೋದಿ ಪಟ್ಟಾಭಿಷೇಕಕ್ಕೆ ಮೂಹೂರ್ತ ಫಿಕ್ಸ್‌: ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?

Election Results 2024: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು (Election Results 2024) ಎನ್‌ಡಿಎ ಸರಳ ಬಹುಮತ ಪಡೆದುಕೊಂಡಿದೆ. ಇದೀಗ ಎನ್‌ಡಿಎ ಸರ್ಕಾರ ರಚನೆಯ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಇಂದು (ಜೂನ್‌ 5) ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ. ಈ ಮಧ್ಯೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಜೂನ್‌ 8ರಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Election results 2024
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು (Election Results 2024) ಎನ್‌ಡಿಎ ಸರಳ ಬಹುಮತ ಪಡೆದುಕೊಂಡಿದೆ. ಇದೀಗ ಎನ್‌ಡಿಎ ಸರ್ಕಾರ ರಚನೆಯ ಕಸರತ್ತು ಆರಂಭಿಸಿದೆ. ಅದರ ಭಾಗವಾಗಿ ಇಂದು (ಜೂನ್‌ 5) ದೆಹಲಿಯಲ್ಲಿ ಮಹತ್ವದ ಸಭೆ ನಡೆದಿದೆ. ಈ ಮಧ್ಯೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಜೂನ್‌ 8ರಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಎನ್‌ಡಿಎ ಒಟ್ಟು 291 ಸ್ಥಾನ ಗೆದ್ದಿದ್ದು, ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಲಿದೆ. ಈಗಾಗಲೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ ಮತ್ತಿತರ ಮಿತ್ರ ಪಕ್ಷಗಳ ನಾಯಕರು ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಮೋದಿ ಜೂ. 8ರಂದು ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಗೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಿಂದ 4 ಮಂದಿಗೆ ಸಚಿವ ಸ್ಥಾನ ಫಿಕ್ಸ್?‌

ಈ ಸಂದರ್ಭದಲ್ಲಿ ರಾಜ್ಯದಿಂದ ಆರಿಸಿ ಬಂದಿರುವ ಸಂಸದರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಎನ್‌ಡಿಎ ಬಯಸಿದೆ ಎನ್ನಲಾಗಿದೆ.

ಪ್ರಹ್ಲಾದ ಜೋಶಿ (Prahlad Joshi) ಅವರು ಎನ್‌ಡಿಎ ಮೂರನೆಯ ಅವಧಿಯಲ್ಲೂ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರರ್ಗಳತೆ ಹೊಂದಿರುವ ಪ್ರಹ್ಲಾದ್‌ ಜೋಶಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ನಾಲ್ಕನೇ ಬಾರಿಗೆ ಹುಬ್ಬಳ್ಳಿ- ಧಾರವಾಡದ ಸಂಸದರಾಗಿ ಆಯ್ಕೆಯಾಗಿರುವ ಜೋಶಿ, ಬ್ರಾಹ್ಮಣ ಕೋಟಾವನ್ನು ತುಂಬಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೂ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಮಾಜಿ ಸಿಎಂ ಆಗಿ ಅನುಭವ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತುಗಾರಿಕೆ, ಆರ್ಥಿಕತೆಯ ವಿಚಾರಗಳಲ್ಲಿ ವಿಶೇಷ ಜ್ಞಾನ ಹೊಂದಿರುವಿಕೆಯ ಜೊತೆಗೆ ಲಿಂಗಾಯತ ಕೋಟಾ ಕೂಡ ಬೊಮ್ಮಾಯಿ ಅವರಿಗೆ ನೆರವಾಗಲಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದ ʼಹೃದಯವಂತʼ ಡಾಕ್ಟರ್ ಸಿ.ಎನ್‌ ಮಂಜುನಾಥ್‌ (Dr CN Manjunath) ಅವರೂ ಸಚಿವ ಸ್ಥಾನ ಪಡೆಯಬಲ್ಲವರ ಯಾದಿಯಲ್ಲಿ ಇದ್ದಾರೆ ಎನ್ನಲಾಗಿದೆ. ಮಂಜುನಾಥ್‌ ಅವರ ಹಿರಿತನ, ಆರೋಗ್ಯ ಕ್ಷೇತ್ರದ ಅನುಭವ ಸರಕಾರದಲ್ಲಿ ನೆರವಾಗಲಿದೆ ಎಂಬ ಮುಂದಾಲೋಚನೆ. ಜೊತೆಗೆ, ಹಲವು ಬಾರಿಯ ಸಂಸದರಾಗಿರುವ, ಕಾಂಗ್ರೆಸ್‌ನ ಹೆಬ್ಬಂಡೆ ಡಿ.ಕೆ ಸುರೇಶ್‌ (DK Suresh) ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ ಹೆಗ್ಗಳಿಕೆ ಜತೆಗಿದೆ.

ಮಾಜಿ ಸಿಎಂ, ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಮೈತ್ರಿ ಖೋಟಾದಲ್ಲಿ ಸಚಿವ ಸ್ಥಾನ ಫಿಕ್ಸ್ ಆಗಿದೆ ಎನ್ನಲಾಗಿದೆ. ಜೆಡಿಎಸ್‌ ಎರಡು ಸ್ಥಾನಗಳ ಬೆಂಬಲ ಈಗ ಎನ್‌ಡಿಎಗೆ ಮಹತ್ವದ್ದಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಜೆಡಿಎಸ್‌ ಮೈತ್ರಿಯನ್ನು ಬೆಂಬಲಿಸುವುದು ಎನ್‌ಡಿಗೆ ಮೈತ್ರಿ ಧರ್ಮವಾಗಿದೆ ಎನ್ನಲಾಗಿದೆ. ಜತೆಗೆ ಒಕ್ಕಲಿಗ ಕೋಟಾ ಕೂಡ ತುಂಬಲಿದೆ ಎನ್ನುವ ಲೆಕ್ಕಾಚಾರ ಕೇಳಿ ಬಂದಿದೆ.

ಇನ್ನೂ ಓದಿ: Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?

Continue Reading
Advertisement
Election Results 2024
Lok Sabha Election 20247 mins ago

Election Results 2024: ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು; ಬಿಜೆಪಿಗೆ ಬಿಗ್‌ ರಿಲೀಫ್‌

Election Results 2024
ಪ್ರಮುಖ ಸುದ್ದಿ23 mins ago

Election Results 2024 : ಫಲಿತಾಂಶ ಬದಲಾಯಿಸಿದ್ದು ಮುಸ್ಲಿಂ ಮತಗಳೇ? ಈ ಬಾರಿ 15 ಮುಸ್ಲಿಂ ಸಂಸದರ ಆಯ್ಕೆ

prajwal revanna case
ಪ್ರಮುಖ ಸುದ್ದಿ35 mins ago

‌Prajwal Revanna Case: ಪ್ರಜ್ವಲ್ ರೇವಣ್ಣ‌ ಮನೆಯಲ್ಲಿ ಪತ್ತೆಯಾಯ್ತು ಸಂಶಯಾಸ್ಪದ ಕಲೆ ಇರುವ ಬೆಡ್‌ಶೀಟ್!

Odisha Assembly election 2024
ದೇಶ41 mins ago

Odisha Assembly Result 2024: ಬಿಜೆಡಿಗೆ ಆಘಾತಕಾರಿ ಸೋಲು; ಒಡಿಶಾ ಸಿಎಂ ರಾಜೀನಾಮೆ

Election results 2024
Lok Sabha Election 202457 mins ago

Election Results 2024: ಮೋದಿ ಪಟ್ಟಾಭಿಷೇಕಕ್ಕೆ ಮೂಹೂರ್ತ ಫಿಕ್ಸ್‌: ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?

Lakshmi Hebbalkar
ಪ್ರಮುಖ ಸುದ್ದಿ58 mins ago

Lakshmi Hebbalkar : ಉಡುಪಿ ಜಿಲ್ಲಾ ಕಾಂಗ್ರೆಸ್​​ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ‘ಗೋ ಬ್ಯಾಕ್​’ ಬಿಸಿ

Pradeep Eshwar
ಪ್ರಮುಖ ಸುದ್ದಿ1 hour ago

Pradeep Eshwar: ಕೈ ಅಭ್ಯರ್ಥಿ ಸೋಲಲು ಪ್ರದೀಪ್ ಈಶ್ವರ್ ಕಾರಣ; ಸ್ವಪಕ್ಷದ ಶಾಸಕನ ವಿರುದ್ಧವೇ ತಿರುಗಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತರು!

Stock Market
ದೇಶ1 hour ago

Stock Market: ಮೋದಿ ಪ್ರಧಾನಿ ಆಗುವುದು ಖಾತರಿ ಆಗುತ್ತಿದ್ದಂತೆ ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ!

Gold Rate Today
ಚಿನ್ನದ ದರ1 hour ago

Gold Rate Today: ಮತ್ತೆ ಇಳಿದ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Prajwal Revanna
ಪ್ರಮುಖ ಸುದ್ದಿ2 hours ago

Prajwal Revanna case : ಪ್ರಜ್ವಲ್​ನ ಪುರುಷತ್ವ ಸಾಮರ್ಥ್ಯ ಪರೀಕ್ಷೆ ನಡೆಸಲು ಕೋರ್ಟ್​ ಸಮ್ಮತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ1 day ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌