ಕಾಂಗ್ರೆಸ್​ ಭಾರತ್​ ಜೋಡೋ ಯಾತ್ರೆ ಬ್ಯಾನರ್​​, ಬೋರ್ಡ್​​ಗಳ ಅಳವಡಿಕೆ ಬಗ್ಗೆ ಕೇರಳ ಹೈಕೋರ್ಟ್​ ಅಸಮಾಧಾನ ! - Vistara News

ದೇಶ

ಕಾಂಗ್ರೆಸ್​ ಭಾರತ್​ ಜೋಡೋ ಯಾತ್ರೆ ಬ್ಯಾನರ್​​, ಬೋರ್ಡ್​​ಗಳ ಅಳವಡಿಕೆ ಬಗ್ಗೆ ಕೇರಳ ಹೈಕೋರ್ಟ್​ ಅಸಮಾಧಾನ !

ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಕೇರಳ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ವಕೀಲ ಕೆ.ವಿಜಯನ್​ ಅರ್ಜಿ ಸಲ್ಲಿಸಿದ್ದರು.

VISTARANEWS.COM


on

Kerala High Court makes comments over Congress Bharat Jodo banners
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಕಾಂಗ್ರೆಸ್​​ನ ಭಾರತ್​ ಜೋಡೋ ಯಾತ್ರೆ ಕೇರಳಕ್ಕೆ ಕಾಲಿಟ್ಟಿದ್ದು, ಅಲ್ಲಿ ಕಾಂಗ್ರೆಸ್​ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಈ ಭಾರತ್ ಜೋಡೋ ಯಾತ್ರೆ ನಿಮಿತ್ತ ಹೆದ್ದಾರಿ ಅಕ್ಕಪಕ್ಕದಲ್ಲಿ ಕಾನೂನು ಬಾಹಿರವಾಗಿ ಬ್ಯಾನರ್​ಗಳನ್ನೆಲ್ಲ ಹಾಕುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ರಾಜ್ಯದಲ್ಲಿ ಭಾರತ್​ ಜೋಡೋ ಯಾತ್ರೆಯಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಪಾದಯಾತ್ರೆ ನಿಯಂತ್ರಣ ಮಾಡಬೇಕು. ಅವರಿಗೆ ನಿರ್ದಿಷ್ಟ ರಸ್ತೆಯನ್ನು ಮಾತ್ರ ಮೀಸಲಿಡಬೇಕು. ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ‘ನಿರ್ದಿಷ್ಟ ರಾಜಕೀಯ ಪಕ್ಷವೊಂದು ತಿರುವನಂತಪುರಂನಿಂದ ತ್ರಿಶೂರ್​ವರೆಗೆ, ಅದರಾಚೆಗೂ ಹೆದ್ದಾರಿಯ ಅಕ್ಕಪಕ್ಕವೆಲ್ಲ ಕಾನೂನು ಬಾಹಿರವಾಗಿ ಧ್ವಜಗಳು, ಬ್ಯಾನರ್​ಗಳ ಅಳವಡಿಕೆ ಮಾಡಲಾಗಿದೆ’ ಎಂದು ಕೋರ್ಟ್ ಹೇಳಿದೆ. ಇಲ್ಲೆಲ್ಲೂ ಕಾಂಗ್ರೆಸ್​ ಎಂದು ಅದು ಉಲ್ಲೇಖ ಮಾಡಿಲ್ಲ.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ಈ ವಿಚಾರಣೆ ನಡೆಸಿದೆ. ‘ರಸ್ತೆಯುದ್ದಕ್ಕೂ ಒಂದು ರಾಜಕೀಯ ಪಕ್ಷದ ಧ್ವಜ, ಬ್ಯಾನರ್​​ಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ, ಸಾಲಾಗಿ ಹಾಕುವುದು ಸರಿಯಲ್ಲ. ಇದರಿಂದ ಆ ಹೆದ್ದಾರಿ ಮೂಲಕ ಸಾಗುವ ವಾಹನ ಸಂಚಾರರ ಗಮನ ಅದರೆಡೆಗೆ ಸೆಳೆಯುತ್ತದೆ. ಅದೇನಿದೆ? ಅದರಲ್ಲೇನಿದೆ ಎಂದು ಓದಲು ಮುಂದಾಗುತ್ತಾರೆ. ಹೀಗಾದಾಗ ಅವರು ಡ್ರೈವಿಂಗ್ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು. ಇವಿಷ್ಟೇ ಅಲ್ಲ, ಇಷ್ಟು ದೊಡ್ಡ ಬ್ಯಾನರ್​​ಗಳು, ರಾಜಕೀಯ ನಾಯಕರ ಫೋಟೋಗಳಿರುವ ಬೋರ್ಡ್​​ಗಳೆಲ್ಲ ಸಡಿಲಗೊಂಡು ರಸ್ತೆಗೆ ಬಿದ್ದರೆ, ಆ ಕ್ಷಣದಲ್ಲಿ ಅಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದರೆ ದೊಡ್ಡ ಅಪಘಾತವೇ ಆಗುತ್ತದೆ. ಅದರಲ್ಲೂ ದ್ವಿಚಕ್ರವಾಹನ ಸವಾರರಿಗೇ ಅಪಾಯ ಹೆಚ್ಚು’ ಎಂಬುದನ್ನೂ ನ್ಯಾಯಮೂರ್ತಿ ದೇವನ್​ ರಾಮಚಂದ್ರನ್​ ಹೇಳಿದ್ದಾರೆ.

ಅತ್ಯುತ್ತಮ ಪರಿಸರ ವ್ಯವಸ್ಥೆ, ಉತ್ತಮ ರಸ್ತೆಗಳು, ಪಾದಚಾರಿ ಮಾರ್ಗಗಳು, ಮನರಂಜನಾ ಸ್ಥಳಗಳ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸಲಾಗಿದೆ. ಆದರೆ ಈಗ ಇಂಥ ಜಾಗಗಳೆಲ್ಲ ಫ್ಲೆಕ್ಸ್​, ಬ್ಯಾನರ್​, ಧ್ವಜಗಳು, ದೊಡ್ಡದೊಡ್ಡ ಬ್ಯಾನರ್​​ಗಳಿಂದಲೇ ತುಂಬಿಹೋಗಿವೆ. ಇದನ್ನು ಅಕ್ರಮ ಅಳವಡಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಹೀಗೆಲ್ಲ ಮಾಡುವುದರಿಂದ ನಗರದ ಸೌಂದರ್ಯವೂ ಹಾಳಾಗುತ್ತದೆ. ಸುರಕ್ಷಿತ ಕೂಡ ಅಲ್ಲ. ಹೀಗಿದ್ದಾಗ್ಯೂ ಅಧಿಕಾರಿಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಹಾಗೇ, ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: Bharat Jodo Yatra | ಕೇರಳದಲ್ಲಿ ರಾಹುಲ್‌ ಯಾತ್ರೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Chandrababu Naidu: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

VISTARANEWS.COM


on

Chandrababu Naidu
Koo

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಎನ್‌.ಚಂದ್ರಬಾಬು ನಾಯ್ಡು (Chandrababu Naidu) ಅವರು ಬುಧವಾರ (ಜೂನ್‌ 12) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ನರೇಂದ್ರ ಮೋದಿ ಅವರನ್ನು ವೇದಿಕೆಗೆ ಸ್ವಾಗತಿಸಿದ ಚಂದ್ರಬಾಬು ನಾಯ್ಡು ಅವರು, ಪ್ರಧಾನಿಗೆ ಹೂಗುಚ್ಛ ನೀಡಿದರು. ಇದಾದ ಬಳಿಕ ನರೇಂದ್ರ ಮೋದಿ (Narendra Modi) ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು. ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಅವರ ಟಿಡಿಪಿಯು ಬೆಂಬಲ ಸೂಚಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ನಟ, ಪವನ್‌ ಕಲ್ಯಾಣ್‌ ಸಹೋದರ ಚಿರಂಜೀವಿ, ತಮಿಳು ನಟ ರಜನಿಕಾಂತ್‌, ನಂದಮೂರಿ ಬಾಲಕೃಷ್ಣ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ನಿತೀಶ್‌ ಕೂಡ ಹೀಗೆಯೇ ಮಾಡಿದ್ದರು

ಕೆಲ ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಕೂಡ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು. ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್‌ ಸಿಂಗ್‌ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್‌ ಕುಮಾರ್‌ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್​ ಖಾನ್​ ಕಾಲು ಮುಟ್ಟಿ ನಮಸ್ಕರಿಸಿದ ಖ್ಯಾತ ನಿರ್ದೇಶಕ!

Continue Reading

ದೇಶ

Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Terror attack: ಸೌರವ್ ಗುಪ್ತಾ (21 ವರ್ಷ) ಉಗ್ರರ ಗುಂಡಿಗೆ ಬಲಿಯಾದವರಲ್ಲಿ ಒಬ್ಬರು. ಸೌರವ್ ಕಿಟಕಿಯ ಸೀಟಿನಲ್ಲಿ ಚಾಲಕನ ಹಿಂದೆಯೇ ಕುಳಿತಿದ್ದ. ಗುಂಡಿನ ಸದ್ದು ಕೇಳಿ ಹಾರಿಸಿದರೂ ಹೆದರದ ಸೌರವ್ ದಾಳಿಯ ಬಗ್ಗೆ ಇತರರಿಗೆ ತಿಳಿಸಲು ಎದ್ದು ನಿಂತಾಗ ಆತನ ಕತ್ತಿನ ಭಾಗಕ್ಕೆ ಗುಂಡು ಬಿದ್ದಿತ್ತು. ಆಗ ಅವರು ಜೀವ ತೆತ್ತಿದ್ದರು. ಗಂಡ ಕಣ್ಣೆದುರೇ ಬಲಿಯಾಗಿದ್ದನ್ನು ಕಂಡು ಪತ್ನಿ ಆಘಾತಗೊಂಡಿದ್ದರು.

VISTARANEWS.COM


on

Terror attack
Koo

ದೆಹಲಿ: ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾಕರು ಭಾನುವಾರ ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಮತ್ತಷ್ಟು ಹೃದಯಸ್ಪರ್ಶಿ ಕತೆಗಳು ಹೊರ ಬರುತ್ತಿವೆ. ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ಬಸ್‌ ಕಮರಿಗೆ ಉರುಳಿತ್ತು. ಗುಂಡೇಟು ಮತ್ತು ಅಪಘಾತದಿಂದಾಗಿ 9 ಮಂದಿ ಹಿಂದೂ ಪ್ರಯಾಣಿಕರು ಬಲಿಯಾಗಿದ್ದರು.

ಸೌರವ್ ಗುಪ್ತಾ (21 ವರ್ಷ) ಉಗ್ರರ ಗುಂಡಿಗೆ ಬಲಿಯಾದವರಲ್ಲಿ ಒಬ್ಬರು. ಸೌರವ್ ಕಿಟಕಿಯ ಸೀಟಿನಲ್ಲಿ ಚಾಲಕನ ಹಿಂದೆಯೇ ಕುಳಿತಿದ್ದ. ಗುಂಡಿನ ಸದ್ದು ಕೇಳಿ ಹಾರಿಸಿದರೂ ಹೆದರದ ಸೌರವ್ ದಾಳಿಯ ಬಗ್ಗೆ ಇತರರಿಗೆ ತಿಳಿಸಲು ಎದ್ದು ನಿಂತಾಗ ಆತನ ಕತ್ತಿನ ಭಾಗಕ್ಕೆ ಗುಂಡು ಬಿದ್ದಿತ್ತು. ಆಗ ಅವರು ಜೀವ ತೆತ್ತಿದ್ದರು. ಗಂಡ ಕಣ್ಣೆದುರೇ ಬಲಿಯಾಗಿದ್ದನ್ನು ಕಂಡು ಪತ್ನಿ ಆಘಾತಗೊಂಡಿದ್ದರು.

ಸೌರವ್ ಗುಪ್ತಾ ಅವರು ಪತ್ನಿ ಶಿವಾನಿ ಗುಪ್ತಾ ಜೊತೆ ವೈಷ್ಣೋದೇವಿ ದೇಗುಲ ತೀರ್ಥಯಾತ್ರೆಗಾಗಿ ಜಮ್ಮುವಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಸೌರವ್ ಪತ್ನಿ ಸುರಕ್ಷಿತವಾಗಿ ಪಾರಾಗಿದ್ದಾಳೆ. ಆದರೆ ಬಸ್ಸು ಕಮರಿಗೆ ಬಿದ್ದ ಕಾರಣ ಶಿವಾನಿ ಗುಪ್ತಾ ಅವರ ಕಾಲುಗಳು ಮತ್ತು ಮುಖಕ್ಕೆ ಗಂಭೀರವಾದ ಪೆಟ್ಟಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಶಿವಾನಿ ಕಣ್ಮುಂದೆಯೇ ಪತಿ ಗುಂಡಿಗೆ ಬಲಿಯಾಗಿದ್ದಾರೆ. ಆಕೆ, ಪತಿ ಪ್ರಾಣ ಬಿಡುವುದನ್ನು ತನ್ನ ಕಣ್ಣುಗಳಿಂದ ನೋಡಿ ಶಾಕ್ ಆಗಿದ್ದಾಳೆ. ಈ ದಂಪತಿಗೆ ಮದುವೆಯಾಗಿ 2 ವರ್ಷಗಳಾಗಿವೆಯಂತೆ. ಆದರೂ ಇನ್ನೂ ಮಕ್ಕಳಾಗದ ಕಾರಣ ಮಗುವಿಗಾಗಿ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಭೇಟಿ ನೀಡಲು ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.

ಸೌರವ್ 3 ವರ್ಷದ ಮಗುವಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ. ಈಗ ಆತ ತನ್ನ ಹೆಂಡತಿ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಸಹೋದರ ಮತ್ತು ತಂದೆಯನ್ನು ಅಗಲಿದ್ದಾನೆ. ಸೌರವ್ ಮತ್ತು ಆತನ ತಂದೆ ರಫ್ತು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಸೌರವ್ ದೇಹವನ್ನು ಅವರ ತಂದೆ ಕುಲದೀಪ್ ಗುಪ್ತಾ ಮತ್ತು ಇತರ ಕುಟುಂಬ ಸದಸ್ಯರು ದೆಹಲಿಗೆ ಸಾಗಿಸಿ, ಈಶಾನ್ಯ ದೆಹಲಿಯ ಮಂಡೋಲಿಯಲ್ಲಿರುವ ಮನೆಯ ಬಳಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!

ಈ ದಾಳಿಯಲ್ಲಿ ಒಟ್ಟು ಒಂಬತ್ತು ಜನರು ಸಾವನಪ್ಪಿದ್ದು, 42 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಭಯೋತ್ಪಾದಕರ ಗುಂಪು ಲಷ್ಕರ್-ಎ-ತೊಯ್ಬಾ ಕೈವಾಡವಿದೆ ಎಂದು ನಂಬಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ದಾಳಿಯ ಬಗ್ಗೆ ತನಿಖೆ ನಡೆಸಲು ಪೊಲೀಸರು 11 ತಂಡಗಳನ್ನು ರಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

Continue Reading

ವಿದೇಶ

Kuwait Fire: ಕುವೈತ್‌ನಲ್ಲಿ ಭೀಕರ ಅಗ್ನಿ ದುರಂತಕ್ಕೆ 41 ಭಾರತೀಯರ ಬಲಿ; ದಕ್ಷಿಣ ಭಾರತದವರೇ ಹೆಚ್ಚು!

Kuwait Fire: ಕುವೈತ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಗಂಭೀರ ಸ್ಥಿತಿಯಲ್ಲಿರುವ ಕೆಲವರು ಸೇರಿದಂತೆ ಗಾಯಗೊಂಡ ಎಲ್ಲರನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡದ ಬೆಂಕಿಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

VISTARANEWS.COM


on

Kuwait Fire
Koo

ಕುವೈತ್‌ ಸಿಟಿ: ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Kuwait Fire) ಮೃತಪಟ್ಟ ಎಲ್ಲ 41 ಮಂದಿಯೂ ಭಾರತೀಯರೇ ಎಂಬ ಮಾಹಿತಿ ಲಭ್ಯವಾಗಿದೆ. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ (Fire Accident In Kuwait) ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಇದರಿಂದಾಗಿ 41 ಭಾರತೀಯರು (Indians) ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ದುರ್ಘಟನೆ ಸಂಭವಿಸುತ್ತಲೇ ಕುವೈತ್‌ ಪ್ರಧಾನಿ ಶೇಖ್‌ ಫಹಾದ್‌ ಯುಸುಫ್‌ ಸೌದ್‌ ಅಲ್‌-ಸಬಾಹ್‌ ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕುವೈತ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ. ಸುಮಾರು 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ಅಗತ್ಯ ನೆರವು ನೀಡಲು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್​ಮೆಂಟ್​ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತಪಟ್ಟವರಲ್ಲಿ ಹೆಚ್ಚಿನವರು ಕೇರಳ ಹಾಗೂ ತಮಿಳುನಾಡಿನವರಾದರೆ, ಉಳಿದವರು ಉತ್ತರ ಭಾರತದವರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಂತಾಪ ಸೂಚಿಸಿದ ಜೈಶಂಕರ್‌

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಭಾರತೀಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಸಂತಾಪ ಸೂಚಿಸಿದ್ದಾರೆ. “ಅಗ್ನಿದುರಂತದ ಸುದ್ದಿ ತಿಳಿದು ಶಾಕ್‌ ಆಯಿತು. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಶಿಬಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಜೈಶಂಕರ್‌ ಪೋಸ್ಟ್‌ ಮಾಡಿದ್ದಾರೆ.

ಭಾರತೀಯ ಉದ್ಯಮಿಯ ಒಡೆತನದ ಕಟ್ಟಡ: ವರದಿ

ಒನ್​ಮನೋರಮಾ ವರದಿಯ ಪ್ರಕಾರ, ಹತ್ತಿರದ ವಾಣಿಜ್ಯ ಪ್ರದೇಶದ ಸುಮಾರು 195 ಕಾರ್ಮಿಕರು ಮತ್ತು ಹಲವಾರು ಮಲಯಾಳಿಗಳನ್ನು ವಾಸಿಸುತ್ತಿದ್ದ ಈ ಈ ಕಟ್ಟಡವು ಎನ್​ಬಿಟಿಸಿ ಗ್ರೂಪ್ ಗೆ ಸೇರಿದ್ದು. ಕೇರಳದ ಉದ್ಯಮಿ ಕೆಜಿ ಅಬ್ರಹಾಂ ಅವರ ಒಡೆತನದಲ್ಲಿರುವ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದರೂ, ಇನ್ನೂ ಹಲವಾರು ಮಂದಿ ಒಳಗೆ ಸಿಲುಕಿರುವ ವರದಿಗಳಿವೆ.

ಇದನ್ನೂ ಓದಿ: Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Continue Reading

ದೇಶ

Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್‌ ಗಾಂಧಿ; ಏಕಿಂಥ ಮಾತು?

Rahul Gandhi: ವಯನಾಡು ಸಂಸದನಾಗಿಯೇ ಮುಂದುವರಿಯಬೇಕೋ ಅಥವಾ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಬೇಕೋ ಎಂಬ ಪ್ರಶ್ನೆ ನನ್ನ ಮುಂದಿವೆ. ಆದರೆ, ಇದನ್ನು ಜನರೇ ತೀರ್ಮಾನ ಮಾಡಲಿದ್ದಾರೆ. ಏಕೆಂದರೆ, ನಾನು ನರೇಂದ್ರ ಮೋದಿ ಅವರಷ್ಟು ದೈವಾಂಶ ಸಂಭೂತನಲ್ಲ ಎಂಬುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

VISTARANEWS.COM


on

Rahul Gandhi
Koo

ತಿರುವನಂತಪುರಂ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಿದ ವಯನಾಡು ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರೀಗ ಉಭಯ ಸಂಕಟಕ್ಕೆ ಸಿಲುಕಿದ್ದಾರೆ. ವಯನಾಡು ಸಂಸದನಾಗಿಯೇ ಮುಂದುವರಿಯಬೇಕೋ ಅಥವಾ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಬೇಕೋ ಎಂಬ ಗೊಂದಲ ಕಾಡುತ್ತಿದೆ. ಇದರ ಬಗ್ಗೆಯೇ ಕೇರಳದಲ್ಲಿ ಮಾತನಾಡಿದ ಅವರು, “ನರೇಂದ್ರ ಮೋದಿ ಅವರಂತೆ ನಾನು ದೈವಾಂಶ ಸಂಭೂತನಲ್ಲ. ನನಗೆ ಜನರೇ ದೇವರು, ಅವರೇ ತೀರ್ಮಾನಿಸುತ್ತಾರೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

“ನನ್ನ ಮುಂದೆ ಎರಡು ಆಯ್ಕೆಗಳಿವೆ. ನಾನು ವಯನಾಡು ಸಂಸದನಾಗಿ ಮುಂದುವರಿಯಬೇಕೋ, ರಾಯ್‌ಬರೇಲಿ ಸಂಸದನಾಗಬೇಕೋ ಎಂಬ ಪ್ರಶ್ನೆ ಇದೆ. ಆದರೆ, ಪ್ರಧಾನಿಯವರಂತೆ ನನಗೆ ದೇವರು ಮಾರ್ಗದರ್ಶನ ನೀಡುವುದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ದೇಶದ ಬಡವರೇ ನನಗೆ ದೇವರಾಗಿದ್ದಾರೆ. ನಾನು ಯಾವ ಕ್ಷೇತ್ರದ ಸಂಸದನಾಗಿ ಮುಂದುವರಿಯಬೇಕೋ ಎಂಬುದನ್ನು ದೇಶದ ಜನರೇ ತೀರ್ಮಾನಿಸುತ್ತಾರೆ” ಎಂಬುದಾಗಿ ಕೇರಳದ ಮಲಪ್ಪುರಂನಲ್ಲಿ ರಾಹುಲ್‌ ಗಾಂಧಿ ಹೇಳಿದರು.

“400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದರು. ಇದಾದ ಬಳಿಕ ಮಾಯವಾದ ಅವರು 300ಕ್ಕೂ ಅಧಿಕ ಕ್ಷೇತ್ರ ಅಂದರು. ಇದಾದ ನಂತರ, ನಾನೇನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಎಲ್ಲ ತೀರ್ಮಾನಗಳೂ ದೇವರದ್ದೇ ಎಂದರು. ಆದರೆ, ನರೇಂದ್ರ ಮೋದಿ ಅವರಿಗೆ ಪರಮಾತ್ಮನೇ ಮುಂಬೈ ಏರ್‌ಪೋರ್ಟ್‌ ಬಿಟ್ಟುಕೊಡು, ಲಖನೌ ಏರ್‌ಪೋರ್ಟ್‌ ಬಿಟ್ಟುಕೊಡು, ಅಂಬಾನಿ ಹಾಗೂ ಅದಾನಿ ಅವರ ಪರವಾಗಿ ಕೆಲಸ ಮಾಡು ಎಂಬುದಾಗಿ ಸೂಚಿಸುತ್ತಿದ್ದಾನೆ” ಎಂದು ಕುಟುಕಿದರು.

ದೇವರ ಬಗ್ಗೆ ಮೋದಿ ಹೇಳಿದ್ದೇನು?

“ನನ್ನ ತಾಯಿ ಇರುವವರೆಗೆ ನನ್ನ ಭಾವನೆ ಬೇರೆಯೇ ಆಗಿತ್ತು. ಆದರೆ, ನನ್ನ ತಾಯಿ ಅಗಲಿದ ಮೇಲೆ ನನಗೆ ಹಲವು ವಿಚಿತ್ರ ಅನುಭವಗಳು ಆದವು. ನಾನು ಇಷ್ಟೊಂದು ಕೆಲಸ ಮಾಡಲಿ ಎಂಬುದಾಗಿ ದೇವರೇ ಕಳುಹಿಸಿದ್ದಾನೆ ಎಂದು ನನಗೆ ಅನಿಸುತ್ತದೆ. ಇದರಿಂದಾಗಿಯೇ ನಾನು ಹೆಚ್ಚು ಕೆಲಸ ಮಾಡಲು, ನಿಮ್ಮ ಸೇವೆ ಮಾಡಲು, ನಿಷ್ಕಲ್ಮಶವಾಗಿ ದುಡಿಯಲು ಸಾಧ್ಯವಾಗಿದೆ” ಎಂಬುದಾಗಿ ಚುನಾವಣೆ ಪ್ರಚಾರದ ವೇಳೆ ನರೇಂದ್ರ ಮೋದಿ ಅವರು ಹೇಳಿದ್ದರು.

ಇದನ್ನೂ ಓದಿ: Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

Continue Reading
Advertisement
TK Chathunni
ಕ್ರೀಡೆ3 mins ago

TK Chathunni: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ, ಕೋಚ್​ ಟಿ.ಕೆ. ಚತುನ್ನಿ ನಿಧನ

Ready Saree Fashion Tips
ಫ್ಯಾಷನ್20 mins ago

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Virat Kohli
ಕ್ರೀಡೆ30 mins ago

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Chandrababu Naidu
ದೇಶ54 mins ago

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Benefits Of Eating Guava
ಆರೋಗ್ಯ1 hour ago

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

Actor Darshan
ಪ್ರಮುಖ ಸುದ್ದಿ1 hour ago

Actor Darshan: ಡೆವಿಲ್‌ ಗ್ಯಾಂಗ್‌ ಜತೆ ಸ್ಥಳ ಮಹಜರು; ಅಮಾಯಕನಂತೆ ಕೈಕಟ್ಟಿ ನಿಂತ ದರ್ಶನ್‌

FIFA World Cup
ಕ್ರೀಡೆ1 hour ago

FIFA World Cup: ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

Terror attack
ದೇಶ1 hour ago

Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Actor Darshan wife Vijayalakshmi will get divorce
ಸ್ಯಾಂಡಲ್ ವುಡ್1 hour ago

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Fish Spa awareness
ಫ್ಯಾಷನ್2 hours ago

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌