Mamata Banerjee: ಮಮತಾ ಬ್ಯಾನರ್ಜಿ ಹಣೆಗೆ ಗಾಯ; ಭದ್ರತೆ ಬಗ್ಗೆ ಬಿಜೆಪಿ ಕಳವಳ - Vistara News

ದೇಶ

Mamata Banerjee: ಮಮತಾ ಬ್ಯಾನರ್ಜಿ ಹಣೆಗೆ ಗಾಯ; ಭದ್ರತೆ ಬಗ್ಗೆ ಬಿಜೆಪಿ ಕಳವಳ

Mamata Banerjee: ಪಶ್ವಿಮ ಬಂಗಾಳ ಮುಖ್ಯಮಂತ್ರಿ ಗುರುವಾರ ತಮ್ಮ ನಿವಾಸದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ಹೇಳಿದ್ದೇನು?

VISTARANEWS.COM


on

mamtha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತಾ: ಗುರುವಾರ (ಮಾರ್ಚ್‌ 14) ರಾತ್ರಿ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹಣೆಗೆ ಪೆಟ್ಟಾಗಿದ್ದ ಅವರನ್ನು ರಾಜ್ಯ ಸರ್ಕಾರ ನಡೆಸುತ್ತಿರುವ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರನ್ನು ಇಂದು (ಶುಕ್ರವಾರ) ಡಿಸ್‌ಚಾರ್ಜ್‌ ಮಾಡಲಾಗಿದೆ.

ಮಮತಾ ಬ್ಯಾನರ್ಜಿ ಅವರ ಸುರಕ್ಷತೆ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಬಿಜೆಪಿ, ʼʼಮುಖ್ಯಮಂತ್ರಿಯ ಭದ್ರತೆಯನ್ನು ಪರಿಶೀಲಿಸಬೇಕು ಮತ್ತು ಯಾವುದೇ ಉಲ್ಲಂಘನೆ ಕಂಡುಬಂದರೆ ಅವರನ್ನು ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಬೇಕುʼʼ ಎಂದು ಆಗ್ರಹಿಸಿದೆ. ಗುರುವಾರ ಮಮತಾ ಬ್ಯಾನರ್ಜಿ ತಮ್ಮ ಕಾಲಿಘಾಟ್ ನಿವಾಸದಲ್ಲಿದ್ದಾಗ ಹಿಂದಿನಿಂದ ಯಾರೋ ತಳ್ಳಿದ ಪರಿಣಾಮ ನೆಲಕ್ಕೆ ಬಿದ್ದಿದ್ದರು ಎಂದು ಹೇಳಲಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದೂ ಬಿಜೆಪಿ ಆಗ್ರಹಿಸಿದೆ.

ವೈದ್ಯರು ಹೇಳಿದ್ದೇನು?

ಮಮತಾ ಬ್ಯಾನರ್ಜಿ ಅವರನ್ನು ಪರಿಶೀಲಿಸಿದ ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಡಾ. ಮಣಿಮೋಯ್ ಬಂಡೋಪಾಧ್ಯಾಯ ಮಾಹಿತಿ ನೀಡಿ, ʼʼಮಮತಾ ಬ್ಯಾನರ್ಜಿ ಅವರು ಗುರುವಾರ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರಿಶೀಲಿಸಿದಾಗ ಹಿಂದಿನಿಂದ ಯಾರೋ ತಳ್ಳಿದ್ದರಿಂದ ಬಿದ್ದು ಆಗಿರುವ ರೀತಿಯ ಗಾಯ ಅವರ ಹಣೆಯ ಮೇಲೆ ಕಂಡು ಬಂದಿತ್ತುʼʼ ಎಂದು ಹೇಳಿದ್ದರು. ʼʼಅವರ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯವಾಗಿದೆ. ಈ ವೇಳೆ ತೀವ್ರವಾಗಿ ರಕ್ತಸ್ರಾವವಾಗಿದೆ. ಅವರನ್ನು ನಮ್ಮ ಆಸ್ಪತ್ರೆ ನರಶಸ್ತ್ರಚಿಕಿತ್ಸಕ ವಿಭಾಗದ ಮುಖ್ಯಸ್ಥರು, ನಮ್ಮ ಸಂಸ್ಥೆಯ ಹೃದ್ರೋಗ ತಜ್ಞರು ನಿಗಾವಹಿಸಿದ್ದಾರೆʼʼ ಎಂದು ತಿಳಿಸಿದ್ದರು.

ಮಮತಾ ಅವರ ಹಣೆಗೆ ಮೂರು ಹೊಲಿಗೆ ಮತ್ತು ಮೂಗಿಗೆ ಒಂದು ಹೊಲಿಗೆ ಹಾಕಿದ ನಂತರ ಅವರನ್ನು ಡಿಸ್‌ಚಾರ್ಜ್‌ ಮಾಡಲಾಯಿತು. “ಸಿಎಂ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹಿರಿಯ ವೈದ್ಯರು ಈ ಅವಧಿಯುದ್ದಕ್ಕೂ ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದರಿಂದ ರಾತ್ರಿ ಉತ್ತಮ ನಿದ್ರೆ ಮಾಡಿದ್ದರು” ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸಿಜಿ, ಎಕೋಕಾರ್ಡಿಯೋಗ್ರಾಮ್, ಸಿಟಿ-ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳನ್ನೂ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವಿವಿಧ ರಾಜಕೀಯ ನಾಯಕರಿಂದ ಹಾರೈಕೆ

ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ನಾಯಕರು ಮಮತಾ ಬ್ಯಾನರ್ಜಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು, ʼʼಮಮತಾ ದೀದಿ ಕೂಡಲೇ ಚೇತರಿಸಿಕೊಳ್ಳಲಿ. ಅವರು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಮಮತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. “ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರು ಶೀಘ್ರ ಗುಣಮುಖರಾಗಿ ಮೊದಲಿನಂತೆ ಆಗಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election: ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಪಕ್ಷ ತೊರೆದ ಇಬ್ಬರು ನಾಯಕರು

ʼʼಸಿಎಂ ಮಮತಾ ಬ್ಯಾನರ್ಜಿ ಶೀಘ್ರ ಗುಣಮುಖರಾಗಲಿʼʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರೈಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಮಮತಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಕೂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

ನರೇಂದ್ರ ಮೋದಿ ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸಾಜಿದ್‌ ತರಾರ್‌ ಹೇಳಿದ್ದಾರೆ.

VISTARANEWS.COM


on

Narendra Modi
Koo

ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ, ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಸಾಜಿದ್‌ ತರಾರ್‌ (Sajid Tarar) ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. “ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ” ಎಂದು ಉದ್ಯಮಿ ಹೇಳಿದ್ದಾರೆ.

“ನರೇಂದ್ರ ಮೋದಿ ಅದ್ಭುತ ನಾಯಕರಾಗಿರುವ ಕಾರಣದಿಂದಾಗಿಯೇ ಭಾರತ ಅಷ್ಟೊಂದು ಉತ್ತಮವಾಗಿ ಏಳಿಗೆ ಹೊಂದಿದೆ. ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ” ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ನಾಯಕತ್ವವು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿಯೇ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತವಾಗಿದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಪಾಕಿಸ್ತಾನದಿಂದ ಭಾರತಕ್ಕೂ ಅನುಕೂಲವಿದೆ. ಪಾಕಿಸ್ತಾನಕ್ಕೂ ಭಾರತದಿಂದ ಅನುಕೂಲವಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಿ ಸಂಬಂಧ ಸುಧಾರಿಸುವ ವಿಶ್ವಾಸವಿದೆ” ಎಂದು ಹೇಳಿದರು. ಪಾಕಿಸ್ತಾನದವರಾದ ಸಾಜಿದ್‌ ತರಾರ್‌, 1990ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿಯೇ ನೆಲೆಸಿದ್ದಾರೆ.

ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ಕೂಡ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದಾರೆ. ಆಗಾಗ ಅವರು ಮೋದಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಕೆಲ ತಿಂಗಳ ಹಿಂದಷ್ಟೇ ಮೇರಿ ಮಿಲ್​​ಬೆನ್ ಹೇಳಿದ್ದರು.

ಇದನ್ನೂ ಓದಿ: Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Continue Reading

ವಾಣಿಜ್ಯ

LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

LIC: ಸಾರ್ವಜನಿಕರ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಎಲ್ಐಸಿ ಷೇರುಗಳ ದರ ಎನ್ಎಸ್ಇಯಲ್ಲಿ ಏರಿಕೆ ಕಂಡಿವೆ. ಮಂಗಳವಾರದ 931 ರೂ.ಗೆ ಹೋಲಿಸಿದರೆ ಶೇಕಡಾ 5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 962 ರೂ.ಗೆ ತಲುಪಿದೆ. ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ.

VISTARANEWS.COM


on

LIC
Koo

ಮುಂಬೈ: ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆ ಭಾರತೀಯ ಜೀವ ವಿಮಾನ ನಿಗಮ (LIC)ಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಸಾರ್ವಜನಿಕರ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ (Securities and Exchange Board of India) 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಎಲ್ಐಸಿ ಷೇರುಗಳ ದರ ಎನ್ಎಸ್ಇಯಲ್ಲಿ ಏರಿಕೆ ಕಂಡಿವೆ. ಮಂಗಳವಾರದ 931 ರೂ.ಗೆ ಹೋಲಿಸಿದರೆ ಶೇಕಡಾ 5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 962 ರೂ.ಗೆ ತಲುಪಿದೆ.

ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ. ಲಿಸ್ಟ್ ಆದ ಎರಡು ವರ್ಷದೊಳಗೆ ಈ ಕ್ರಮ ಕೈಗೊಳ್ಳಬೇಕು. ಎಲ್​ಐಸಿ 2022ರ ಮೇ 17ರಂದು ಬಿಎಸ್​ಇ ಮತ್ತು ಎನ್​ಎಸ್​ಇಇಲ್ಲಿ ಲಿಸ್ಟ್ ಆಗಿತ್ತು. ಅದರಂತೆ 2024ರ ಮೇ 16ರೊಳಗೆ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಶೇ. 10 ಆಗಬೇಕಿತ್ತು. ಆದರೆ ಕಾಲಾವಧಿ ಸಮೀಪ ಬಂದಿದ್ದೂ ಈ ಕೆಲಸ ಆಗಿರಲಿಲ್ಲ. ಇದೀಗ 2027ರ ಮೇ 16ರವರೆಗೂ ಎಲ್​ಐಸಿಗೆ ಕಾಲಾವಕಾಶ ಕೊಡಲಾಗಿದೆ.

ಸೆಬಿ ತನ್ನ ಪತ್ರದ ಮೂಲಕ ಶೇ. 10ರಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು 3 ವರ್ಷಗಳ ಹೆಚ್ಚುವರಿ ಸಮಯವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ಎಲ್‌ಐಸಿ ತಿಳಿಸಿದೆ. ಅಂದರೆ ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಲಿಸ್ಟ್ ಆದ ಬಳಿಕ 5 ವರ್ಷಗಳವರೆಗೆ ಕಾಲಾವಕಾಶ ಲಭಿಸಿದಂತಾಗಿದೆ. 2023ರ ನವೆಂಬರ್‌ನಿಂದ ಎಲ್‌ಐಸಿ ಷೇರಿಗೆ ಬೇಡಿಕೆ ಬಂದಿದೆ. 614 ರೂ. ಇದ್ದ ಅದರ ಬೆಲೆ ಇದೀಗ 977 ರೂ. ದಾಟಿದೆ. ಅಂದರೆ ಎರಡು ವರ್ಷದಲ್ಲಿ ಎಲ್​ಐಸಿ ಷೇರು ಬೆಲೆ ಶೇ 18ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅದರ ಷೇರು ಬೆಲೆ ಗಣನೀಯವಾಗಿ ಹೆಚ್ಚಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಗರಿಷ್ಠ ಪ್ರೀಮಿಯಂ ಸಂಗ್ರಹ

ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಏಪ್ರಿಲ್‌ನಲ್ಲಿ ಒಟ್ಟು 12,384 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಎಲ್‌ಐಸಿ 5,810 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಶೇ. 113ರಷ್ಟು ಏರಿಕೆ ದಾಖಲಿಸಿದೆ. ಈ ಪೈಕಿ ವೈಯಕ್ತಿಕ ವಿಭಾಗದಲ್ಲಿ 3,175 ಕೋಟಿ ರೂ. ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 25.17ರಷ್ಟು ಹೆಚ್ಚಳವಾಗಿದೆ. ಗ್ರೂಪ್‌ ಪ್ರೀಮಿಯಂ ವಿಭಾಗದಲ್ಲಿ ಶೇ. 182.16ರಷ್ಟು ಏರಿಕೆಯಾಗಿ ಒಟ್ಟು 9,141 ಕೋಟಿ ರೂ. ಸಂಗ್ರಹವಾಗಿದೆ. ವಾರ್ಷಿಕ ಗುಂಪು ಪ್ರೀಮಿಯಂ ವಿಭಾಗದಲ್ಲಿಯೂ ಶೇ. 100ರಷ್ಟು ವೃದ್ಧಿಸಿ 66 ಕೋಟಿ ರೂ. ಸಂಗ್ರಹವಾಗಿದೆ ಎಂದು ಕಂಪನಿಯ ಅಂಕಿ-ಅಂಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Oldest Billionaire: ಎಲ್‌ಐಸಿಯಲ್ಲಿ ಏಜೆಂಟ್ ಈಗ ಭಾರತದ ಹಿರಿಯ ಬಿಲಿಯನೇರ್

Continue Reading

ದೇಶ

Mobile Phone Recharges: ಮೊಬೈಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಮತ್ತೆ ರಿಚಾರ್ಜ್‌ ಮೊತ್ತ ಏರಿಕೆ

Mobile Phone Recharges: ಆಪರೇಟರ್ಸ್‌ಗಳ ಮೇಲಿನ ಸುಂಕವನ್ನು ಶೇ.25ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 5G ಲಾಭದಾಯಕ ಹೂಡಿಕೆ ಹೆಚ್ಚಾಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಸುಂಕ ಏರಿಕೆ ಅಗತ್ಯವಾಗಿದೆ. ಟೆಲಿಕಾಂ ಇಲಾಖೆಯ ಈ ಕ್ರಮದಿಂದ ಗ್ರಾಮೀಣ ಮತ್ತು ನಗರದ ಗ್ರಾಹಕರ ಮೇಲೆ ಪರಿಣಾಮ ಬೀರಬಹುದಾಗಿದೆ. ಟೆಲಿಕಾಂ ಸೇವೆಗಳ ವೆಚ್ಚದಲ್ಲಿ ನಗರ ಪ್ರದೇಶದ ಗ್ರಾಹಕರು 3.2% ರಿಂದ 3.6%ಕ್ಕೆ ಏರಿಕೆ ಕಂಡರೆ, ಗ್ರಾಮೀಣ ಪ್ರದೇಶದ ಗ್ರಾಹಕರು 5.2% ರಿಂದ 5.9%ಕ್ಕೆ ಏರಿಕೆ ಕಾಣಬಹುದು.

VISTARANEWS.COM


on

Mobile Phone Recharges:
Koo

ನವದೆಹಲಿ: ಈಗಾಗಲೇ ಮೊಬೈಲ್‌ ರಿಚಾರ್ಜ್‌(Mobile Phone Recharges) ಮೊತ್ತವನ್ನು ಏರಿಕೆಯ ಬಿಸಿಗೆ ಗ್ರಾಹಕರು ಹೈರಾಗಿದ್ದಾರೆ. ತಿಂಗಳಾದ್ರೆ ಸಾಕು ಮೊಬೈಲ್‌ ರಿಚಾರ್ಜ್‌ ಮಾಡೋದೇ ಒಂದು ತಲೆನೋವು. ಈ ನಡುವೆ ಇದೀಗ ಗ್ರಾಹಕರಿಗೆ ಮತ್ತೆ ಶಾಕ್‌ ಕೊಡಲು ಟೆಲಿಕಾಂ(Telecom Department) ಮುಂದಾಗಿದೆ. ಲೋಕಸಭೆ ಚುನಾವಣೆ(Lok Sabha Election 2024) ಬಳಿಕ ನಾಲ್ಕನೇ ಹಂತದ ಸುಂಕ ಏರಿಕೆಗೆ ಟೆಲಿಕಾಂ ಇಲಾಖೆ ಮುಂದಾಗಿದೆ. ಹೀಗಾಗಿ ಮೊಬೈಲ್‌ ರಿಚಾರ್ಜ್‌ ಮೊತ್ತ ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಈ ಬಗ್ಗೆ ಬ್ರೋಕರೇಜ್‌ ಆಕ್ಸಿಸ್‌ ಕ್ಯಾಪಿಟಲ್‌ ಪ್ರತಿಕ್ರಿಯಿಸಿದ್ದು, ಆಪರೇಟರ್ಸ್‌ಗಳ ಮೇಲಿನ ಸುಂಕವನ್ನು ಶೇ.25ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 5G ಲಾಭದಾಯಕ ಹೂಡಿಕೆ ಹೆಚ್ಚಾಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಸುಂಕ ಏರಿಕೆ ಅಗತ್ಯವಾಗಿದೆ. ಟೆಲಿಕಾಂ ಇಲಾಖೆಯ ಈ ಕ್ರಮದಿಂದ ಗ್ರಾಮೀಣ ಮತ್ತು ನಗರದ ಗ್ರಾಹಕರ ಮೇಲೆ ಪರಿಣಾಮ ಬೀರಬಹುದಾಗಿದೆ. ಟೆಲಿಕಾಂ ಸೇವೆಗಳ ವೆಚ್ಚದಲ್ಲಿ ನಗರ ಪ್ರದೇಶದ ಗ್ರಾಹಕರು 3.2% ರಿಂದ 3.6%ಕ್ಕೆ ಏರಿಕೆ ಕಂಡರೆ, ಗ್ರಾಮೀಣ ಪ್ರದೇಶದ ಗ್ರಾಹಕರು 5.2% ರಿಂದ 5.9%ಕ್ಕೆ ಏರಿಕೆ ಕಾಣಬಹುದು.

ನಗರಗಳಲ್ಲಿ ವಾಸಿಸುವ ಜನರು ತಮ್ಮ ಒಟ್ಟು ವೆಚ್ಚದ 3.2% ಅನ್ನು ಟೆಲಿಕಾಂಗಾಗಿ ಖರ್ಚು ಮಾಡುತ್ತಿದ್ದರು, ಇದು 3.6% ಕ್ಕೆ ಹೆಚ್ಚಾಗುತ್ತದೆ. ಗ್ರಾಮೀಣ ನಿವಾಸಿಗಳಿಗೆ ಟೆಲಿಕಾಂ ವೆಚ್ಚವು 5.2% ರಿಂದ 5.9% ಕ್ಕೆ ಹೆಚ್ಚಾಗುತ್ತದೆ. ಟೆಲಿಕಾಂ ಕಂಪನಿಗಳು ಮೂಲ ಯೋಜನೆಯ ಬೆಲೆಯನ್ನು 25% ಹೆಚ್ಚಿಸಿದರೆ, ಪ್ರತಿ ಬಳಕೆದಾರರಿಗೆ ಅವರ ಸರಾಸರಿ ಆದಾಯ (ಎಆರ್ಪಿಯು) 16% ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ. ಇದರರ್ಥ ಏರ್ಟೆಲ್ನ ಆದಾಯವು ಪ್ರತಿ ಬಳಕೆದಾರರಿಂದ 29 ರೂ.ಗೆ ಹೆಚ್ಚಾಗುತ್ತದೆ ಮತ್ತು ಜಿಯೋ ಆದಾಯವು ಪ್ರತಿ ಬಳಕೆದಾರರಿಂದ 26 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ.

ಇದಲ್ಲದೆ, Q4 FY24 ರ ಅಂತ್ಯದಲ್ಲಿ, Jio ನ ಒಟ್ಟು ಆಸ್ತಿಯು ₹ 4,87,405 ಕೋಟಿಗಳಷ್ಟಿದ್ದರೆ, ಜನವರಿಯಿಂದ ಮಾರ್ಚ್‌ವರೆಗಿನ ನಿವ್ವಳ ಲಾಭವು ₹ 4,716 ಕೋಟಿಗಳಿಂದ ₹ 5,337 ಕೋಟಿಗಳಿಗೆ ಏರಿತು.
ಭಾರ್ತಿ ಏರ್‌ಟೆಲ್‌ನ ಏಕೀಕೃತ Q4 ಆದಾಯವು ₹37,599 ಕೋಟಿಗಳಷ್ಟಿದ್ದು, ನಿವ್ವಳ ಲಾಭವು ಒಂದು ವರ್ಷದ ಹಿಂದಿನ ವರ್ಷಕ್ಕೆ ಹೋಲಿಸಿದರೆ 31.1% ಕಡಿಮೆಯಾಗಿದೆ.

ಇದನ್ನೂ ಓದಿ:Bomb Threat: ದೆಹಲಿ, ಅಹಮದಾಬಾದ್‌ ಬಳಿಕ ಕಾನ್ಪುರ ಶಾಲೆಗಳಿಗೂ ಬಾಂಬ್‌ ಬೆದರಿಕೆ; ಇಮೇಲ್‌ ಮೂಲಕ ಸಂದೇಶ

ಲೋಕಸಭಾ ಚುನಾವಣೆಯ ನಂತರ ಮೊಬೈಲ್ ಬಳಕೆದಾರರು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು ಎಂದು ಬ್ರೋಕರೇಜ್‌ ಆಕ್ಸಿಸ್‌ ಕ್ಯಾಪಿಟಲ್‌ ಹೇಳಿದೆ. ದೇಶದಲ್ಲಿ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.


Continue Reading

ದೇಶ

Bomb Threat: ದೆಹಲಿ, ಅಹಮದಾಬಾದ್‌ ಬಳಿಕ ಕಾನ್ಪುರ ಶಾಲೆಗಳಿಗೂ ಬಾಂಬ್‌ ಬೆದರಿಕೆ; ಇಮೇಲ್‌ ಮೂಲಕ ಸಂದೇಶ

Bomb Threat: ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್‌ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಕಾನ್ಪುರದ ಸುಮಾರು 10 ಶಾಲೆಗಳು ಬುಧವಾರ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. ಇಮೇಲ್‌ ಮೂಲಕ ಈ ಬೆದರಿಕೆ ಬಂದಿದೆ. ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌, ಅಹಮದಾಬಾದ್‌ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ಹೇಳಿದೆ.

VISTARANEWS.COM


on

Bomb Threat
Koo

ಲಕ್ನೋ: ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್‌ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ (Bomb Threat). ಕಾನ್ಪುರದ ಸುಮಾರು 10 ಶಾಲೆಗಳು ಬುಧವಾರ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. ಇಮೇಲ್‌ ಮೂಲಕ ಈ ಬೆದರಿಕೆ ಬಂದಿದೆ.

ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌, ಅಹಮದಾಬಾದ್‌ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯಕ್ಕೆ ಶಾಲೆಗಳಿಂದ ಎಲ್ಲರನ್ನೂ ತೆರವು ಮಾಡಲಾಗಿದ್ದು, ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸುಮಾರು ಎರಡು ವಾರಗಳ ಅಂತರದಲ್ಲಿ ದೇಶದ ವಿವಿಧ ನಗರಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ದೆಹಲಿ, ನೋಯ್ಡಾ, ಲಕ್ನೋ, ಅಹಮದಾಬಾದ್‌ ಬಳಿಕ ಈ ಪಟ್ಟಿಗೆ ಇದೀಗ ಕಾನ್ಪುರ ಕೂಡ ಸೇರಿಕೊಂಡಿದೆ. ಇದು ಆರಂಭವಾಗಿದ್ದು ಮೇ 1ರಿಂದ. ಅಂದು ದೆಹಲಿ, ನೋಯ್ಡಾ ಮತ್ತು ಲಕ್ನೋದ ಸುಮಾರು 100 ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. ಭೀಕರ ಸ್ಫೋಟ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಇದು ಹುಸಿ ಕರೆ ಎನ್ನುವುದು ಸಾಬೀತಾಗಿತ್ತು.

ಬಳಿಕ ಮೇ 6ರಂದು ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕವೇ ಬೆದರಿಕೆ ಬಂದಿತ್ತು. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದವು. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿರಲಿಲ್ಲ. ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ

ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೂ ಇಮೇಲ್‌ ಮೂಲಕ ಮಂಗಳವಾರ (ಮೇ 14) ಹುಸಿ ಬಾಂಬ್‌ ಕರೆ ಬಂದಿತ್ತು. ದೀಪ್‌ ಚಂದ್‌ ಬಂಧು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ದಾದಾ ದೇವ್‌ ಆಸ್ಪತ್ರೆ ಮತ್ತು ಹೆಡ್ಗೇವಾರ್‌ ಆಸ್ಪತ್ರೆಗಳಿಗೆ ಅನಾಮಧೇಯ ಇ ಮೇಲ್‌ ಬಂದಿದ್ದು, ಬಾಂಬ್‌ ಸ್ಫೋಟಿಸುವುದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು. ದಿಲ್ಲಿ ಪೊಲೀಸರು ಈ ಬೆದರಿಕೆ ಇಮೇಲ್‌ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

ದೆಹಲಿ, ಅಹಮದಾಬಾದ್‌ ಸೇರಿ ಹಲವೆಡೆ ಶಾಲೆಗಳಿಗೆ ಬಾಂಬ್‌ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯವು, ಕಳೆದ ವಾರ ಈ ಕುರಿತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿತ್ತು. ಅದರಲ್ಲೂ, ಈ ಕುರಿತು ದೆಹಲಿ ಪೊಲೀಸರು ತಪ್ಪು ಮಾಹಿತಿ ತಡೆದು, ಅನಗತ್ಯ ಆತಂಕವನ್ನು ನಿವಾರಿಸಲು ದೆಹಲಿ ಪೊಲೀಸರು ಹಾಗೂ ಶಾಲೆಗಳ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು.

Continue Reading
Advertisement
ICMR Dietary Guidelines
ಆರೋಗ್ಯ6 seconds ago

ICMR Dietary Guidelines: ಊಟದ ಮೊದಲು, ಊಟದ ನಂತರ ಚಹಾ, ಕಾಫಿ ಕುಡಿದರೆ ಏನಾಗುತ್ತದೆ?

viral video shakti scheme women fight
ವೈರಲ್ ನ್ಯೂಸ್10 mins ago

Viral video: ಚಪ್ಪಲಿಯಲ್ಲಿ ಬಡಿದಾಡಿ ಬಟ್ಟೆ ಹರಿದುಕೊಂಡರು; ಪುಕ್ಕಟೆ ಬಸ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ!

Narendra Modi
ದೇಶ13 mins ago

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

Rishabh Pant
ಕ್ರೀಡೆ27 mins ago

Rishabh Pant: ಬಿಸಿಸಿಐ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಭ್​ ಪಂತ್​

LIC
ವಾಣಿಜ್ಯ31 mins ago

LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

Mobile Phone Recharges:
ದೇಶ53 mins ago

Mobile Phone Recharges: ಮೊಬೈಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಮತ್ತೆ ರಿಚಾರ್ಜ್‌ ಮೊತ್ತ ಏರಿಕೆ

IPL 2024
ಕ್ರೀಡೆ1 hour ago

IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

blackmail case kgf
ಕೋಲಾರ1 hour ago

Blackmail Case: ಗ್ರಾಮ ಪಂಚಾಯಿತಿಯಲ್ಲೇ ಬಲವಂತದ ರೊಮ್ಯಾನ್ಸ್‌, ಬ್ಲ್ಯಾಕ್‌ಮೇಲ್‌ ಎಸಗಿದ ಬಿಲ್‌ ಕಲೆಕ್ಟರ್‌ ಬಂಧನ

Madhuri Dixit birthday extend wishes
ಬಾಲಿವುಡ್1 hour ago

Madhuri Dixit: ಮಾಧುರಿ ದೀಕ್ಷಿತ್‌ಗೆ ಇಂದು ಜನುಮದಿನ ಸಂಭ್ರಮ; ಅವರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

Prajwal Revanna Case Can women trust your government Writers open letter to Siddaramaiah
ರಾಜಕೀಯ1 hour ago

Prajwal Revanna Case: ನಿಮ್ಮ ಸರ್ಕಾರದ ಮೇಲೆ ಮಹಿಳೆಯರು ವಿಶ್ವಾಸ ಇಡಬಹುದೇ? ಸಿದ್ದರಾಮಯ್ಯಗೆ ಸಾಹಿತಿಗಳ ಬಹಿರಂಗ ಪತ್ರ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ8 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ11 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ21 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202423 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌