ನೀವು ಬದಲಾಗುವುದನ್ನು ನೋಡಿ ಗಾಳಿಗೇ ದಿಗಿಲಾಗಿದೆ; ಮೋದಿ ಹಳೇ ವಿಡಿಯೋ ಶೇರ್​ ಮಾಡಿದ ಸಿಸೋಡಿಯಾ - Vistara News

ದೇಶ

ನೀವು ಬದಲಾಗುವುದನ್ನು ನೋಡಿ ಗಾಳಿಗೇ ದಿಗಿಲಾಗಿದೆ; ಮೋದಿ ಹಳೇ ವಿಡಿಯೋ ಶೇರ್​ ಮಾಡಿದ ಸಿಸೋಡಿಯಾ

ನರೇಂದ್ರ ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣದ ವಿಡಿಯೋ ಇದು. ಅದರಲ್ಲವರು ಸಿಬಿಐ ಬಗ್ಗೆ ಮಾತನಾಡುವುದನ್ನು ಕೇಳಬಹುದು.

VISTARANEWS.COM


on

ED arrests former Delhi deputy CM Manish Sisodia in excise policy case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ತಮ್ಮ ವಿರುದ್ಧ ಸಿಬಿಐ ತನಿಖೆ ಪ್ರಾರಂಭವಾದ ಬೆನ್ನಲ್ಲೇ ದೆಹಲಿ ಉಪಮುಖ್ಯಮಂತ್ರಿ ಮನೀಷ್​​ ಸಿಸೋಡಿಯಾ ಅವರು, ನರೇಂದ್ರ ಮೋದಿಯವರ ಒಂದು ಹಳೇ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಮೋದಿ ಗುಜರಾತ್​ ಮುಖ್ಯಮಂತ್ರಿಯಾದಾಗಿನ ವಿಡಿಯೋ ಇದಾಗಿದ್ದು, ‘ಋತುಮಾನಗಳು ನಿಧಾನಕ್ಕೆ ಬದಲಾಗುತ್ತವೆ. ಆದರೆ ಸರ್​, ನೀವು ಬದಲಾಗುವ ವೇಗ ನೋಡಿ ಗಾಳಿಗೇ ದಿಗಿಲಾಗಿದೆ’ ಎಂದು ಕಾವ್ಯಾತ್ಮಕವಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅಂದಹಾಗೇ, ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿರುವ ಆರೋಪದಡಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ಶುರುವಾಗಿದ್ದು, ಅವರಿಗೆ ಸೇರಿದ ಸ್ಥಳಗಳಲ್ಲಿ ರೇಡ್ ಆಗಿದೆ. ಅಷ್ಟೇ ಅಲ್ಲ, ಈ ಕೇಸ್​ನಲ್ಲಿ ಸಿಸೋಡಿಯಾ ಅವರೇ ಆರೋಪಿ ನಂಬರ್​ 1 ಆಗಿದ್ದಾರೆ.

ನರೇಂದ್ರ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿರುವ ಕಾಂಗ್ರೆಸ್​ ಸರ್ಕಾರ ಸಿಬಿಐನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ ವಿಡಿಯೋ ಇದು. ‘ಕೇಂದ್ರೀಯ ತನಿಖಾದಳವನ್ನು ರಾಜಕೀಯಗೊಳಿಸಲಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಮತ್ತು ಸಾರ್ವಜನಿಕರನ್ನು ಹಿಂಸಿಸಲು ಬಳಸಿಕೊಳ್ಳುತ್ತಿರುವ ಬಗ್ಗೆ ಮುಂದೊಂದು ದಿನ ನೀವು ಉತ್ತರ ನೀಡಬೇಕಾಗುತ್ತದೆ. ತಮ್ಮ ರಾಜಕೀಯ ನಾಯಕರನ್ನು ಸಂತುಷ್ಟಗೊಳಿಸಲು ಸಿಬಿಐ ಅಧಿಕಾರಿಗಳು ಪ್ರತಿಪಕ್ಷಗಳ ಸಚಿವರು, ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಸಿಬಿಐ ಮೇಲೆ ದೇಶದ ಜನರಿಗೆ ನಂಬಿಕೆಯೇ ಇಲ್ಲದಂತಾಗಿದೆ’ ಎಂದು ನರೇಂದ್ರ ಮೋದಿ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಆ ಹಳೇ ವಿಡಿಯೋವನ್ನು ಶೇರ್​ ಮಾಡಿಕೊಂಡ ಸಿಸೋಡಿಯಾ, ಈಗ ನೀವು ಮಾಡುತ್ತಿರುವುದೇನು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮಾತು-ಕೃತಿಗಳು ಋತುಗಳಿಗಿಂತಲೂ ವೇಗವಾಗಿ ಬದಲಾಗುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಶನಿವಾರ ಸಿಸೋಡಿಯಾ ಪ್ರಧಾನಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಮದ್ಯದ ನೀತಿಯಾಗಲೀ, ಭ್ರಷ್ಟಾಚಾರ ತಡೆಯಾಗಲೀ ಬಿಜೆಪಿಯ ಅಜೆಂಡಾವಲ್ಲ. ಕೇಜ್ರಿವಾಲ್​ಗೆ ಕಡಿವಾಣ ಹಾಕಲು ಬಿಜೆಪಿ ಇಷ್ಟೆಲ್ಲ ಸಾಹಸ ಮಾಡುತ್ತಿದೆ. ಮುಂದಿನ 2024ರ ಲೋಕಸಭೆ ಚುನಾವಣೆ ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್​ ನಡುವಿನ ನೇರ ಹಣಾಹಣಿಯಾಗಲಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: Excise policy | ಮನೀಷ್​ ಸಿಸೋಡಿಯಾ ವಿರುದ್ಧ ಕೇಸ್​ ದಾಖಲಿಸುವ ಮುನ್ನ ರಾಷ್ಟ್ರಪತಿ ಅನುಮೋದನೆ ಪಡೆದ ಸಿಬಿಐ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

Ram Mandir: ಶ್ರೀರಾಮ ಮಂದಿರಕ್ಕೆ ಭೇಟಿ ನೀಡುಲೆಂದು ಪಾಕಿಸ್ತಾನದ ಸಿಂಧಿ ಸಮುದಾಯದ 200 ಜನರ ನಿಯೋಗ ಇಂದು ಅಯೋಧ್ಯೆಗೆ ಬರಲಿದೆ. ಈ ಬಗ್ಗೆ ದೇಗುಲದ ಟ್ರಸ್ಟ್‌ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸಿಂಧಿ ಸಮುದಾಯ ಒಂದು ತಿಂಗಳು ಭಾರತದಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದು, ರಸ್ತೆ ಮೂಲಕ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ಬರಲಿದೆ. ಇವರ ಜೊತೆಗೆ ಭಾರತ ಸಿಂಧಿ ಸಮುದಾಯದ 150ಕ್ಕೂ ಹೆಚ್ಚು ಜನ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ

VISTARANEWS.COM


on

Ram Mandir
Koo

ಉತ್ತರಪ್ರದೇಶ:ಶ್ರೀರಾಮ ಮಂದಿರ(Ram Mandir)ಕ್ಕೆ ಭೇಟಿ ನೀಡುಲೆಂದು ಪಾಕಿಸ್ತಾನದ ಸಿಂಧಿ ಸಮುದಾಯದ 200 ಜನರ ನಿಯೋಗ ಇಂದು ಅಯೋಧ್ಯೆ(Ayodhya)ಗೆ ಬರಲಿದೆ. ಈ ಬಗ್ಗೆ ದೇಗುಲದ ಟ್ರಸ್ಟ್‌ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸಿಂಧಿ ಸಮುದಾಯ ಒಂದು ತಿಂಗಳು ಭಾರತದಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದು, ರಸ್ತೆ ಮೂಲಕ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ಬರಲಿದೆ. ಇವರ ಜೊತೆಗೆ ಭಾರತ ಸಿಂಧಿ ಸಮುದಾಯದ 150ಕ್ಕೂ ಹೆಚ್ಚು ಜನ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಈ ಪವಾಸಿ ತಂಡವನ್ನು ಸ್ವಾಗತಿಸಲಿದ್ದಾರೆ. ರಾಮ್‌ ಕೀ ಪೈದಿಯಲ್ಲಿ ಇದಕ್ಕೆಂದೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಯಾಗ್‌ರಾಜ್‌ನಿಂ ಈ ಪ್ರವಾಸಿಗರ ತಂಡ ಬಸ್‌ ಮೂಲಕ ಅಯೋಧ್ಯೆ ತಲುಪಲಿದೆ. ಭರತ್‌ ಕುಂಡ, ಗುಪ್ತಾರ್‌ ಘಾಟ್‌, ರೂಪನ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ಕೊಡಲಾಗುತ್ತದೆ ಎಂದು ರಾಷ್ಟ್ರೀಯ ಸಿಂಧಿ ವಿಕಾಸ್‌ ಪರಿಷತ್‌ನ ಸದಸ್ಯ ವಿಶ್ವ ಪ್ರಕಾಶ್‌ ರೂಪನ್‌ ಹೇಳಿದ್ದಾರೆ.

ಸಿಂಧಿ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ

ಅಯೋಧ್ಯೆಗೆ ಆಗಮಿಸುತ್ತಿರುವ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿರುವ ಸಿಂಧಿ ಸಮುದಾಯದ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರಿಗೆಂದೇ ಅಯೋಧ್ಯೆಯ ಉದಾಸಿನ್‌ ರಿಷಿ ಆಶ್ರಮ ಮತ್ತು ಶಬರಿ ರಸೋಯಿ ಆಶ್ರಮಗಳಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ರಾಮ್‌ ಕೀ ಪೈದಿಯಲ್ಲಿ ನಡೆಯಲಿರುವ ಸರಯೂ ಆರತಿಯಲ್ಲಿ ಎಲ್ಲಾ ಯಾತ್ರಿಕರು ಭಾಗಿಯಾಗಲಿದ್ದಾರೆ. ಆ ಸಂದರ್ಭದಲ್ಲಿ ಚಂಪತ್‌ ರೈ ಸಿಂಧಿ ಯಾತ್ರಿಕರನ್ನು ಸ್ವಾಗತಿಸಲಿದ್ದಾರೆ.

ಅಲ್ಲದೇ ಅಯೋಧ್ಯೆಯ ಸಿಂಧಿ ಧಾಮ್‌ ಆಶ್ರಮದಲ್ಲಿ ಪಾಕ್‌ ಸಿಂಧಿ ಯಾತ್ರಿಕರಿಗೆಂದೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಲಿರುವ ಸಿಂಧಿ ಸಮುದಾಯದ ಯಾತ್ರಿಕರೂ ಭಾಗಿಯಾಗಿ ಪಾಕ್‌ ಯಾತ್ರಿಕರನ್ನು ಬರಮಾಡಿಕೊಳ್ಳಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಂತ ಸದಾ ರಾಮ ದರ್ಬಾರ್‌ ಮಠದ ಪೀಠಾಧಿಪತಿ ಯುಧಿಷ್ಠಿರ ಲಾಲ್‌ ಕೂಡ ಸಾಥ್‌ ನೀಡಲಿದ್ದಾರೆ. ಇಂದು ರಾತ್ರಿ ಸಿಂಧಿ ಪ್ರವಾಸಿಗರು ಲಕ್ನೋಗೆ ತೆರಳಿ ಅಲ್ಲಿಂದ ರಾಯ್‌ಪುರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

 ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲಕ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ನೆರವೇರಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಮಾರಂಭ ಜನವರಿ 22ರಂದು ನಡೆಯಿತು. ಅದಾದ ಬಳಿಕ ಜನವರಿ 23ರಿಂದ ಈ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಮಾಡುತ್ತಿದ್ದಾರೆ. ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ.

Continue Reading

ದೇಶ

Triple Talaq: ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

Triple Talaq: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ ಅನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಸಲ್ಲೊಂದು ಇಲ್ಲೊಂದು ಇಂತಹ ಪ್ರಕರಣ ವರದಿಯಾಗುತ್ತಲೇ ಇರುತ್ತದೆ. ಅದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ. ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದಾನೆ. 28 ವರ್ಷದ ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದಿದ್ದಾನೆ. ಹೋಗುವ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

Triple Talaq
Koo

ಲಕ್ನೋ: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಕಾನೂನು ಕಣ್ಣು ತಪ್ಪಿಸಿ ಹಲವರು ಇನ್ನೂ ಈ ಅನಾಚಾರವನ್ನು ಮುಂದುವರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದಾನೆ.

ಏಪ್ರಿಲ್‌ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ ಈ ಘಟನೆ ನಡೆದಿದೆ.

ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದಿದ್ದಾನೆ. ಹೋಗುವ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಅನಿರೀಕ್ಷಿತ ಆಘಾತದಿಂದ ತಬ್ಬಿಬ್ಬಾದ ಅಫ್ಸಾನಾ ಕೂಡಲೇ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದರು. ಪೊಲೀಸರು ಅವರನ್ನು ಕಾನ್ಪುರ್ ದೆಹತ್‌ನ ಪುಖ್ರಾಯನ್‌ಗೆ ಕಳುಹಿಸಿದರು. ಅಲ್ಲಿಂದ ಅವರು ಭೋಪಾಲ್‌ಗೆ ರೈಲು ಹತ್ತಿದ್ದರು. ಕೊನೆಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಮೊಹಮ್ಮದ್ ಅರ್ಷದ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಭೋಪಾಲ್‌ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಆಗಿರುವ ಅರ್ಷದ್‌ ಈ ವರ್ಷದ ಜನವರಿ 12ರಂದು ರಾಜಸ್ಥಾನದ ಕೋಟದ ಅಫ್ಸಾನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮ್ಯಾಟ್ರಿಮೋನಿ ಜಾಹೀರಾತು ಮೂಲಕ ಪದವೀಧರೆಯಾದ ಅಫ್ಸಾನಾ ಮತ್ತು ಅರ್ಷದ್‌ ಪರಸ್ಪರ ಪರಿಚಿತರಾಗಿದ್ದರು. ದಂಪತಿ ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್‌ನ ಪೂರ್ವಜರ ಮನೆಗೆ ಭೇಟಿ ನೀಡಿದಾಗ ಅಫ್ಸಾನಾ ಅವರಿಗೆ ಆಘಾತಕಾರಿ ಸತ್ಯವೊಂದು ತಿಳಿಯಿತು. ಅರ್ಷದ್‌ಗೆ ಅದಾಗಲೇ ಮದುವೆಯಾಗಿತ್ತು ಎನ್ನುವುದು ಅಫ್ಸಾನಾ ಅವರಿಗೆ ಆಗಷ್ಟೇ ತಿಳಿದು ಬಂದಿತ್ತು.

ಈ ಬಗ್ಗೆ ಅಫ್ಸಾನಾ ಪ್ರಶ್ನಿಸಿದಾಗ ಕಿರುಕುಳ ಆರಂಭವಾಗಿತ್ತು. ಅರ್ಷದ್‌ ಮತ್ತು ಆತನ ತಾಯಿ ವರದಕ್ಷಿಣೆ ನೀಡುವಂತೆ ಪೀಡಿಸತೊಡಗಿದರು ಎಂದು ಅಫ್ಸಾನಾ ದೂರಿನಲ್ಲಿ ತಿಳಿಸಿದ್ದಾರೆ. ಕೊನೆಗೆ ರೈಲಿನಲ್ಲಿ ಆತ ತ್ರಿವಳಿ ತಲಾಕ್‌ ಕೊಟ್ಟು ನಾಪತ್ತೆಯಾಗಿದ್ದಾನೆ ಎಂದು ಅಫ್ಸಾನಾ ವಿವರಿಸಿದ್ದಾರೆ.

ಇದನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ

ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ

ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ. ಅಫ್ಸಾನಾ ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮನವಿ ಸಲ್ಲಿಸಿ ತನಗೆ ನೆರವಾಗಬೇಕು ಎಂದು ಕೋರಿದ್ದಾರೆ. ಹೀಗೆ ತ್ರಿವಳಿ ತಲಾಕ್‌ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಸರ್ಕಲ್‌ ಆಫೀಸರ್‌ ಪ್ರಿಯಾ ಸಿಂಗ್‌ ಈ ಬಗ್ಗೆ ಮಾತನಾಡಿ, ʼʼಅಫ್ಸಾನಾ ಅವರ ದೂರಿನ ಮೇರೆಗೆ ಅರ್ಷಾದ್‌, ಆತನ ಮಾವ ಅಖೀಲ್‌, ತಂದೆ ನಫೀಸುಲ್ ಹಸನ್ ಮತ್ತು ತಾಯಿ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ತಿಳಿಸಿದ್ದಾರೆ.

Continue Reading

ದೇಶ

Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

Lalu Prasad Yadav: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರ ಹೆಸರನ್ನೇ ಇಟ್ಟುಕೊಂಡಿರುವ ರೈತನೋರ್ವ ಈ ಬಾರಿ ಸಾರನ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ಜನ ಸಂಭಾವನಾ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಆರ್‌ಜೆಡಿಯಿಂದ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ.

VISTARANEWS.COM


on

Lalu Prasad Yadav
Koo

ಪಾಟ್ನಾ: ಬಿಹಾರದ ಸಾರನ್‌ ಲೋಕಸಭಾ ಕ್ಷೇತ್ರ(Saran)ದಲ್ಲಿ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ವರ್ಸಸ್‌ ಲಾಲೂ ಪುತ್ರಿ ಪರಸ್ಪರ ಮುಖಾಮುಖಿಯಾಗಿ ಕಣಕ್ಕಿದಿದ್ದಾರೆ. ಅರೆ.. ಇದೇನಿದು ಎಂದೇ ಕ್ಷೇತ್ರದಲ್ಲಿ ಅಪ್ಪ-ಮಗಳು ಇಬ್ಬರು ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರಾ ಎಂದು ಅಚ್ಚರಿ ಆಗೋದಂತೂ ನಿಜ. ಆದರೆ ನಿಜಾಂಶ ಏನೆಂದರೆ ಆರ್‌ಜೆಡಿ(RJD) ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರ ಹೆಸರನ್ನೇ ಇಟ್ಟುಕೊಂಡಿರುವ ರೈತನೋರ್ವ ಈ ಬಾರಿ ಸಾರನ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ಜನ ಸಂಭಾವನಾ ಪಕ್ಷದಿಂದ(RJP) ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಆರ್‌ಜೆಡಿಯಿಂದ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ.

ಯಾರು ಈ ಲಾಲೂ ಪ್ರಸಾದ್‌ ಯಾದವ್‌?

ಸ್ಥಳೀಯ ರೈತನಾಗಿರುವ ಲಾಲೂ ಪ್ರಸಾದ್‌ ಯಾದವ್‌, ಸಾರನ್‌ ಜಿಲ್ಲೆಯವರಾಗಿದ್ದು, ಏಪ್ರಿಲ್‌ 26ರಂದು ಆರ್‌ಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 2022ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಸ್ಪರ್ದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೂ ಅಲ್ಲದೇ 2017ರಲ್ಲಿ ಮಾಜಿ ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌ ಮತ್ತು ರಾಮನಾಥ್‌ ಕೋವಿಂದ್‌ ಕಣದಲ್ಲಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು.

ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಸಾರನ್‌ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಅನೇಕ ಬಾರಿ ಸ್ಪರ್ಧಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧವೂ ಸ್ಪರ್ಧಿಸಿದ್ದೆ. ಈ ಬಾರಿ ಅವರ ಪುತ್ರಿ ರೋಹಿಣಿ ಆಚಾರ್ಯ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ನಾನು ಬದುಕಲು ಕೃಷಿ ಮಾಡುತ್ತಿದ್ದೇನೆ. ಅದರ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದೇನೆ. ನಾನು ಪಂಚಾಯತ್‌ನಿಂದ ಅಧ್ಯಕ್ಷೀಯ ಚುನಾವಣೆವರೆಗೂ ಅದೃಷ್ಟಪರೀಕ್ಷೆಗೆ ನಡೆಸಿದ್ದೇನೆ. ನಾನು ಗೆದ್ದೇ ಗೆಲ್ಲುತ್ತೇನೆ. ಸಾರನ್‌ ಕ್ಷೇತ್ರದ ಜನ ನನ್ನ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Lok sabha Election 2024: ರಾಯ್‌ಬರೇಲಿಯಲ್ಲಿ ಕಣಕ್ಕಿಳಿದಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಹಿನ್ನೆಲೆ ಏನು?

ಇನ್ನು ಕೇವಲ ಪ್ರಚಾರಕ್ಕಾಗಿ, ಮತ ವಿಭಜನೆಗಾಗಿ ಸ್ಪರ್ಧೆ ಎಂಬ ಟೀಕೆಗೆ ಟಾಂಗ್‌ ಕೊಟ್ಟ ಯಾದವ್‌, ನಾನು ಇಂತಹ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನನ್ನ ಪ್ರತಿಸ್ಪರ್ಧಿಗಳು. ಅವರಿಂದ ಇಂತಹ ಹೇಳಿಕೆಗಳು ಬರುವುದು ಸಹಜ. ಇಂತಹ ಟೀಕೆಗಳಿಗೆ ನಾನು ಕುಗ್ಗಲ್ಲ. ನಾನು ಕೇವಲ ನನ್ನ ಮತದಾರರಿಗಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು. ಇನ್ನು ಲಾಲೂ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಬಳಿ 5 ಲಕ್ಷ ರೂ ಮತ್ತು ತಮ್ಮ ಪತ್ನಿ ಬಳಿ 2 ಲಕ್ಷ ರೂ. ನಗದು, 17.60 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಹಾಗೂ ತಮ್ಮ ಪತ್ನಿ ಬಳಿ 5.20 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಶಾಕಿಂಗ್‌ ವಿಡಿಯೊ; ಹಾವು ಕಚ್ಚಿದ್ದ ಯುವಕ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ನೇತಾಡಿಸಿದರು!

Viral News: ಆಧುನಿಕ ಯುಗ, ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇದೇ ವೇಳೆ ಕೆಲವೊಮ್ಮೆ ಮೂಢ ನಂಬಿಕೆ ಆಚರಣೆ ನಾವು ತಲೆ ತಗ್ಗಿಸುವಂತೆ ಮಾಡುತ್ತದೆ. ಅದಕ್ಕೆ ;ಜ್ವಲಂತ ಉದಾಹರಣೆ ಇಲ್ಲಿದೆ. ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಗುಣಮುಖನಾಗಲೆಂದು ಆತನ ದೇಹವನ್ನು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ನೇತಾಡಿಸಲಾಗಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Viral News
Koo

ಲಕ್ನೋ: ವೈಜ್ಞಾನಿಕವಾಗಿ ನಮ್ಮ ದೇಶ ಸಾಕಷ್ಟು ಮುಂದುವರಿದಿದೆ. ಕೋಟ್ಯಂತರ ಕಿ.ಮೀ. ದೂರ ಇರುವ ಚಂದ್ರನಲ್ಲಿಗೆ ರಾಕೆಟ್‌ ಕಳಿಸುದ್ದೇವೆ. ಭೂ ಗರ್ಭದಲ್ಲಿ ಏನೇನಿದೆ ಎನ್ನುವುದನ್ನು ಶೋಧಿಸಿದ್ದೇವೆ. ಹಾಗಿದ್ದರೂ ಕೆಲವೆಡೆ ಇನ್ನೂ ಮೂಢ ನಂಬಿಕೆ ಎನ್ನುವುದು ತಾಂಡವವಾಡುತ್ತಿದೆ ಎನ್ನುವುದು ವಿಷಾಧನೀಯ. ನಂಬಿಕೆ ಮತ್ತು ಮೂಢ ನಂಬಿಕೆ ಎನ್ನುವುದರ ನಡುವಿನ ಗೆರೆ ತೀರಾ ತೆಳುವಾದುದು. ಯಾರದೋ ಮಾತು ನಂಬಿ, ಅಸಾಧ್ಯವಾದುದನ್ನು ಸಾಧ್ಯವೆಂದು ನಂಬಿ ಮೌಢ್ಯ ಆಚರಣೆಯಲ್ಲಿ ತೊಡಗಿರುವವರು ಈಗಲೂ ಇದ್ದಾರೆ. ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇವೆ ಎಂದರೆ ಉತ್ತರ ಪ್ರದೇಶದಲ್ಲಿ ಹಾವು ಕಚ್ಚಿದ ಯುವಕ ಗುಣಮುಖನಾಗಲೆಂದು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಆತನನ್ನು ನೇತಾಡಿಸಲಾಗಿದೆ. ಶರೀರದಲ್ಲಿರುವ ವಿಷ ಇಳಿದು ಆತ ಜೀವಂತವಾಗಿ ಎದ್ದು ಬರುತ್ತಾನೆ ಎನ್ನುವ ಮೂಢ ನಂಬಿಕೆಯೇ ಇದಕ್ಕೆ ಕಾರಣ (Viral News).

ಘಟನೆ ಹಿನ್ನೆಲೆ

ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಜೈರಾಮ್‌ಪುರ ಕುಡೇನಾ ಗ್ರಾಮದ, 20 ವರ್ಷದ ಮೋಹಿತ್‌ ಕುಮಾರ್‌ಗೆ ವಿಷದ ಹಾವು ಕಚ್ಚಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಚಿಕಿತ್ಸೆ ಮುಂದುವರಿಸಿದರೂ ಆರೋಗ್ಯ ಸುಧಾರಿಸಿರಲಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇತ್ತು. ವೈದ್ಯರೂ ಕೈ ಚೆಲ್ಲಿದ್ದರು. ಕೊನೆಗೆ ಆತನ ಕುಟುಂಬ ಸ್ಥಳೀಯ ಚಿಕಿತ್ಸಕನ ಮೊರೆ ಹೋಯಿತು. ಆತ ಸೂಚಿಸಿದ ವಿಧಾನವೇ ಈ ಗಂಗಾ ಚಿಕಿತ್ಸೆ.

ಯುವಕನ ಶರೀರವನ್ನು ಹಗ್ಗದಲ್ಲಿ ಕಟ್ಟಿ ಗಂಗಾ ನದಿಯಲ್ಲಿ ನೇತಾಡಿಸುವಂತೆ ಸ್ಥಳೀಯ ಚಿಕಿತ್ಸಕ ಸಲಹೆ ನೀಡಿದ್ದ. ಇದರಿಂದ ಯುವಕನ ಶರೀರದೊಳಕ್ಕೆ ಸೇರಿದ್ದ ವಿಷವೆಲ್ಲ ಇಳಿದು ಹೋಗಿ ಆತ ಮೊದಲಿನಂತಾಗುತ್ತಾನೆ ಎಂದು ತಿಳಿಸಿದ್ದ. ಅದರಂತೆ ಕುಟುಂಬಸ್ಥರು ಹರಿಯುವ ನದಿಯಲ್ಲಿ ಮೋಹಿತ್‌ ಕುಮಾರ್‌ನ ಶರೀರವನ್ನು ಅರ್ಧ ಮುಳುಗುವಂತೆ ನೇತಾಡಿಸಿದ್ದರು. ಸುಮಾರು ಎರಡು ದಿನಗಳ ಕಾಲ ಈ ʼಚಿಕಿತ್ಸೆʼ ಮುಂದುವರಿದಿತ್ತು. ಸದ್ಯ ಆತ ಮೃತಪಟ್ಟಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ.

ನೆಟ್ಟಿಗರು ಹೇಳಿದ್ದೇನು?

ವಿಡಿಯೊ ನೋಡಿದ ನೆಟ್ಟಿಗರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅನೇಕರು ಈ ಶಾಕ್‌ನಿಂದ ಇನ್ನೂ ಹೊರ ಬಂದಿಲ್ಲ. ಈ ಆಚರಣೆಯ ಹಿಂದಿನ ವೈಜ್ಞಾನಿಕತೆಯನ್ನು ಹಲವರು ಪ್ರಶ್ನಿಸಿದ್ದಾರೆ. ʼʼವಿಜ್ಞಾನಮುಕ್ತ ಭಾರತಕ್ಕೆ ಸ್ವಾಗತʼʼ ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ʼʼಹಾವಿನ ವಿಷ ಹೇಗೆ ಶರೀರಕ್ಕೆ ಸೇರಿಕೊಳ್ಳುತ್ತದೆ ಮತ್ತು ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಶಾಲೆಗಳ ಪಠ್ಯದಲ್ಲಿ ಸೇರಿಸಬೇಕು. ಇದರಿಂದ ಇಂತಹ ಅನಾಚಾರಗಳನ್ನು ನಿಯಂತ್ರಿಸಬಹುದುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅತ್ಯಂತ ನಾಚೆಕೆಗೇಡಿನ ಸಂಗತಿ. ಇದನ್ನು ಸೂಚಿಸಿದ ಸ್ಥಳೀಯ ಚಿಕಿತ್ಸಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್‌ ತೊಲಗಲಿ ಎಂದು ಮಗನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ತಾಯಿ, ಬಾಲಕ ಸಾವು; Video ಇದೆ

ಕೆಲವು ದಿನಗಳ ಹಿಂದೆಯೂ ಇಂತಹದ್ದೆ ಘಟನೆ ನಡೆದಿತ್ತು. ಮಹಿಳೆಯೊಬ್ಬಳು ತನ್ನ ಕ್ಯಾನ್ಸರ್‌ ಪೀಡಿತ 4 ವರ್ಷದ ಮಗ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ಮುಳುಗಿಸಿದ್ದಳು. ಈ ವೇಳೆ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದ.

Continue Reading
Advertisement
Rashmika Mandanna's younger sister Shiman
ಟಾಲಿವುಡ್2 mins ago

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?

Prajwal Revanna Case Wherever Prajwal escapes we will pick him up says CM Siddaramaiah
ಕ್ರೈಂ4 mins ago

Prajwal Revanna Case: ಪ್ರಜ್ವಲ್ ದುಬೈ ಅಲ್ಲ, ಎಲ್ಲಿ ಎಸ್ಕೇಪ್‌ ಆದ್ರೂ ಅಲ್ಲಿಂದ್ಲೇ ಹಿಡಿದುಕೊಂಡು ಬರುತ್ತೇವೆ: ಸಿಎಂ ಸಿದ್ದರಾಮಯ್ಯ

Devon Thomas
ಕ್ರೀಡೆ11 mins ago

Devon Thomas: ಟಿ20 ವಿಶ್ವಕಪ್​ಗೂ ಮುನ್ನ ವಿಂಡೀಸ್​ ಬ್ಯಾಟರ್​ಗೆ 5 ವರ್ಷ ನಿಷೇಧ ಹೇರಿದ ಐಸಿಸಿ

Prajwal Revanna Case If Prajwal and Revanna fails to appear infront of SIT they will be arrested says Dr Parameshwara
ಕ್ರೈಂ27 mins ago

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

gold rate today
ಚಿನ್ನದ ದರ42 mins ago

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gurucharan Singh Taarak Mehta Ka Ooltah Chashmah actor planned disappearance
ಕಿರುತೆರೆ42 mins ago

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Ram Mandir
ದೇಶ1 hour ago

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

MS Dhoni
ಕ್ರೀಡೆ1 hour ago

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

Drowned in water
ಕೋಲಾರ1 hour ago

Drowned In water : ಈಜಲು ಕೃಷಿ ಹೊಂಡಕ್ಕೆ ಜಿಗಿದ; ಸಾವಿನ ಕೊನೆ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ತಂಗಿ!

Triple Talaq
ದೇಶ1 hour ago

Triple Talaq: ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಪರಾರಿಯಾದ ಭೂಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ18 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌