ನನ್ನ ಕಾಳಿ ವಿಲಕ್ಷಣ ದೇವಿ, ಹಿಂದುತ್ವ ಕಿತ್ತೊಗೆಯುತ್ತಾಳೆ; ಪೋಸ್ಟರ್‌ ಸಮರ್ಥಿಸಿಕೊಂಡ ಲೀನಾ - Vistara News

ದೇಶ

ನನ್ನ ಕಾಳಿ ವಿಲಕ್ಷಣ ದೇವಿ, ಹಿಂದುತ್ವ ಕಿತ್ತೊಗೆಯುತ್ತಾಳೆ; ಪೋಸ್ಟರ್‌ ಸಮರ್ಥಿಸಿಕೊಂಡ ಲೀನಾ

ನಟಿ, ನಿರ್ಮಾಪಕಿ ಲೀನಾ ಮಣಿಮೇಕಲೈ ದಿನಕ್ಕೊಂದು ಸಂದರ್ಶನ ಕೊಟ್ಟು, ಕಾಳಿ ವಿವಾದವನ್ನು ಹೆಚ್ಚಿಸುತ್ತಲೇ ಇದ್ದಾಳೆ. ತನ್ನ ಪೋಸ್ಟರ್‌ನ್ನು ಸಮರ್ಥಿಸಿಕೊಳ್ಳುವುದೇ ಆಕೆಗೆ ಕಾಯಕವಾಗಿಬಿಟ್ಟಿದೆ.

VISTARANEWS.COM


on

Leena Manimekalai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾಳಿ ಒಂದು ಕೈಯಲ್ಲಿ ಸಿಗರೇಟ್‌ ಸೇದುತ್ತಿರುವಂತೆ, ಇನ್ನೊಂದು ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಬಾವುಟ ಹಿಡಿದಿರುವಂತೆ ಪೋಸ್ಟರ್‌ ಹಾಕುವ ಮೂಲಕ ದೊಡ್ಡ ವಿವಾದ ಹುಟ್ಟುಹಾಕಿದ್ದ ತಮಿಳುನಾಡು ಚಿತ್ರ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ಈಗ ಮತ್ತೆ ʼನನ್ನ ಕಾಳಿ ನಿಶ್ಚಿತವಾಗಿಯೂ ವಿಲಕ್ಷಣ. ಅವಳು ವಿಭಿನ್ನʼ ಎಂದು ಹೇಳಿದ್ದಾರೆ. ವೈಸ್‌ ಆಫ್‌ ಅಮೆರಿಕಾ ಎಂಬ ರೇಡಿಯೋ ಕಾರ್ಯಕ್ರಮಕ್ಕೆ ಸಂದರ್ಶನ ನೀಡಿದ ಅವರು, ʼನಾನು ಚಿತ್ರಿಸಿದ ಕಾಳಿ ಸ್ವತಂತ್ರ ಆತ್ಮ. ಪಿತೃಪ್ರಭುತ್ವ ಎಂದರೆ ಆಕೆಗೆ ಅಸಹ್ಯ. ನನ್ನ ಕಾಳಿ ಬಂಡವಾಳಶಾಹಿತ್ವವನ್ನು ವಿನಾಶ ಮಾಡುತ್ತಾಳೆ. ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನೂ ಅಂದರೆ ಎಲ್ಲ ಜನಾಂಗ, ಧರ್ಮ-ಮತದವರನ್ನು ಅಪ್ಪಿಕೊಳ್ಳುತ್ತಾಳೆʼ ಎಂದು ಹೇಳಿದ್ದಾರೆ. ಇದೇ ಸಾಲುಗಳನ್ನು ಅವರು ಟ್ವೀಟ್‌ ಕೂಡ ಮಾಡಿಕೊಂಡಿದ್ದಾರೆ.

ಲೀನಾ ಮಣಿಮೇಕಲೈ ಕೆನಡಾದ ಟೊರಂಟೊದಲ್ಲಿರುವ ಆಗಾ ಖಾನ್‌ ಮ್ಯೂಸಿಯಂನಲ್ಲಿ ಕಾಳಿ ಚಿತ್ರವನ್ನು ಪ್ರದರ್ಶಿಸಬೇಕಿತ್ತು. ಆದರೆ ಪೋಸ್ಟರ್‌ ಬಿಡುಗಡೆ ಮಾಡುತ್ತಿದ್ದಂತೆ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಆಕೆಯ ಚಿತ್ರವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಲೀನಾ ಮಣಿಮೇಕಲೈ ʼನನ್ನ ಕಾಳಿ ಪೋಸ್ಟರ್‌ನ್ನು ವಿರೋಧಿಸುವವರು ಮೊದಲು ನನ್ನ ಸಿನಿಮಾ ನೋಡಿ. ಕಾಳಿ ಜನಾಂಗೀಯ ದ್ವೇಷವನ್ನು ತೊಡೆದು ಹಾಕಿ, ಪ್ರೀತಿ ಸಾರುವ ದೇವಿ ಎಂಬರ್ಥದಲ್ಲಿ ಬಿಂಬಿಸಿದ್ದೇನೆ. ಒಂದು ಇಳಿಸಂಜೆಯಲ್ಲಿ ಟೊರಂಟೊ ಬೀದಿಗಳಲ್ಲಿ ಕಾಳಿ ಓಡಾಡುತ್ತಾಳೆ. ಆಗ ಮನೆಯಿಲ್ಲದ ನಿರಾಶ್ರಿತ ಜತೆ ಮಾತಾಡುತ್ತಾಳೆ. ಅವರೊಂದಿಗೆ ಧೂಮಪಾನ ಮಾಡುತ್ತಾಳೆ. ಸಂತೋಷದ ಕ್ಷಣ ಕಳೆಯುತ್ತಾಳೆ. ಈ ಮೂಲಕ ಎಲ್ಲರೂ ಒಂದೆಂಬ ಸಂದೇಶ ಸಾರುತ್ತಾಳೆʼ ಎಂದು ಸ್ಪಷ್ಟನೆ ಕೊಟ್ಟಿದ್ದರು. ಅದೇನೇ ಆದರೂ ಆ ಪೋಸ್ಟರ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿಲ್ಲ.

42 ವರ್ಷದ ಲೀನಾ ಮಣಿಮೇಕಲೈ ತಮ್ಮನ್ನು ತಾವು ನಾಸ್ತಿಕಳು ಮತ್ತು ಉಭಯಲಿಂಗಿ (ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಲೈಂಗಿಕ ಆಸಕ್ತಿ ಹೊಂದಿರುವವರು) ಎಂದು ಗುರುತಿಸಿಕೊಂಡಿದ್ದಾರೆ. ಇವರು ವಿವಾದದ ಮೂಲಕ ಸುದ್ದಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ.‌ ಈ ಹಿಂದೆ ಮೀ ಟೂ ಚಳವಳಿ ನಡೆಯುತ್ತಿದ್ದಾಗ ಲೀನಾ, ನಿರ್ದೇಶಕ ಸುಸಿ ಗಣೇಶನ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆ ಕೇಸ್‌ ಇನ್ನೂ ಕೂಡ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಲೀನಾ ಅಧಿಕ ಪ್ರಸಂಗತನ; ಶಿವ ಪಾರ್ವತಿ ಪಾತ್ರಧಾರಿಗಳು ಸಿಗರೇಟ್‌ ಸೇದುವ ಫೋಟೋ ಪೋಸ್ಟ್‌

ಕಾಳಿ ಬಗ್ಗೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಒಂದಾದ ಬಳಿಕ ಮತ್ತೊಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ಕೊಡುತ್ತಿದ್ದಾರೆ. ಈ ಹಿಂದೆ ಗಾರ್ಡಿಯನ್‌ ಜತೆ ಮಾತನಾಡಿದ್ದ ಅವರು, ʼನಾನು ತಮಿಳುನಾಡಿನ ಹಳ್ಳಿಯಿಂದ ಬಂದವಳು. ಅಲ್ಲೆಲ್ಲ ಹಲವು ಕಡೆಗಳಲ್ಲಿ ಕಾಳಿಗೆ ಕುರಿಯ ರಕ್ತದಲ್ಲಿ ಬೇಯಿಸಿದ ಮಾಂಸವನ್ನೇ ನೈವೇದ್ಯವಾಗಿ ಅರ್ಪಿಸುತ್ತಾರೆ. ನಾನದನ್ನು ನೋಡಿದ್ದೇನೆ. ಸಾರಾಯಿ, ಬೀಡಿಗಳನ್ನೂ ಪೂಜೆಗಿಡುತ್ತಾರೆ. ಕಾಳಿ ವೇಷಧಾರಿಗಳು ಕುಣಿಯುತ್ತ ಸಾರಾಯಿ ಕುಡಿಯುತ್ತಾರೆ. ಬೀಡಿ ಸೇದುತ್ತಾರೆʼ ಎಂದು ಹೇಳಿದ್ದರು.

ಇದನ್ನೂ ಓದಿ: ಆಕ್ಷೇಪಾರ್ಹ ಕಾಳಿ‌ ಮಾತೆ ಪೋಸ್ಟರ್ ಹಾಕಿದ ಲೀನಾ ಮಣಿಮೇಕಲೈ ಮಾನಸಿಕ ಅಸ್ವಸ್ಥೆ: ಸಂತೋಷ್‌ ಗುರೂಜಿ ಕಿಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

Narendra Modi: ಮುಂದಿನ ಹತ್ತು ವರ್ಷ ನಾವೇ: ನರೇಂದ್ರ ಮೋದಿ

Narendra Modi: ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನುಡಿದರು. ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ ಎಂದು ಹೇಳಿದರು.

VISTARANEWS.COM


on

Narendra Modi
Koo

ಹೊಸದಿಲ್ಲಿ: ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನುಡಿದರು. ನೂತನ ಎನ್‌ಡಿಎ ಸಂಸದರ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ಎಷ್ಟೋ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್‌ ಕಲ್ಯಾಣ್‌ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು.

ಇವಿಎಂಗಳನ್ನು ವಿರೋಧಿಸಿದ ಇಂಡಿ ಒಕ್ಕೂಟ ಪ್ರಗತಿ ವಿರೋಧಿ, ತಂತ್ರಜ್ಞಾನದ ವಿರೋಧಿ ಎಂದು ಅವರು ನುಡಿದರು. ಪ್ರತಿಪಕ್ಷಗಳು ಇವಿಎಂ ಅನ್ನು ಟೀಕಿಸುತ್ತಿದ್ದವು. ಈಗ ಅದರ ಬಗ್ಗೆ ಮೌನವಾಗಿವೆ. ಹೀಗಾಗಿ ಇವಿಎಂಗಳು ಇವೆಯೋ ಇಲ್ಲವೋ ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದೂ ಅವರು ಚಟಾಕಿ ಸಿಡಿಸಿದರು. ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಚುನಾವಣೆ ಪ್ರಕ್ರಿಯೆಯ ಬಗ್ಗೆ ಅವಿಶ್ವಾಸ ಮೂಡಿಸುವುದೇ ಅವರ ಕೆಲಸವಾಗಿದೆ ಎಂದರು.

ಕಾಂಗ್ರೆಸ್‌ ನಡವಳಿಕೆಯನ್ನು ಟೀಕಿಸಿದ ಅವರು, ಅವರ ಪಕ್ಷದ ಪ್ರಧಾನಿಯನ್ನೇ ಅವರು ಅವಮಾನಕ್ಕೊಳಪಡಿಸುತ್ತಿದ್ದರು. ಅವರ ಪಕ್ಷದ ಪ್ರಧಾನಿ ಹೊರಗೆ ಹೋದಾಗ ಕುಳಿತುಕೊಳ್ಳಲು ಆಸನ ಇರುತ್ತಿರಲಿಲ್ಲ. ಅಂಥ ಸ್ಥಿತಿಯಿಂದ ಬಂದಿದ್ದರೂ ಈಗಲೂ ತಮ್ಮ ಗೌರವ ಉಳಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ ಎಂದು ಅವರು ಚಾಟಿ ಬೀಸಿದರು. ಹೀಗಿದ್ದರೂ, ಪ್ರತಿಪಕ್ಷದ ಸಂಸದರು ಸದನಕ್ಕೆ ಬಂದು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಎಂಬುದು ನನ್ನ ವಿಶ್ವಾಸ ಎಂದರು.

ಭಾರತದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಗ್ಗೆ ಮೋದಿ ಲೇವಡಿ ಮಾಡಿದರು. 10 ವರ್ಷಗಳ ಬಳಿಕವೂ ಅದು ಪಾಠ ಕಲಿತಿಲ್ಲ. ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆದ್ದ ಸೀಟುಗಳನ್ನು ಸೇರಿಸಿದರೂ ಈ ಸಲ ಬಿಜೆಪಿ ಗೆದ್ದು ಸೀಟುಗಳಷ್ಟು ಆಗಲಾರದು ಎಂದರು. ಕಳೆದ 10 ವರ್ಷಗಳಲ್ಲಿ ಅದು ಸದನದಲ್ಲಿ ಒಳ್ಳೆಯ ಚರ್ಚೆಗಳನ್ನೇ ಮಾಡಿಲ್ಲ. ಅದಕ್ಕಾಗಿಯೇ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಿ ಎಂದು ಜನ ದಾರಿ ತೋರಿಸಿದ್ದಾರೆ ಎಂದರು.

ಕಾಂಗ್ರೆಸ್‌ ಈ ದೇಶದ ಜನರನ್ನು ಅಪಮಾನಿಸಿದೆ. ಗೆದ್ದರೆ ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದೆ. ಆದರೆ ಒಂದು ಲಕ್ಷ ಎಲ್ಲಿಂದ ತರುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಇದೀಗ ಜನ ತಮಗೆ ಒಂದು ಲಕ್ಷ ಕೊಡಿ ಎಂದು ಸಾಲುಗಟ್ಟಿದ್ದಾರೆ. ಆದರೆ ಅವರನ್ನು ಕಾಂಗ್ರೆಸ್‌ ಸರ್ಕಾರಗಳು ಬಡಿದೋಡಿಸುತ್ತಿವೆ. ಎನ್‌ಡಿಎ ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ. ಇಂಡಿ ಒಕ್ಕೂಟ ಮಾತ್ರ ಸುಳ್ಳುಗಳನ್ನೇ ಹರಡುತ್ತಾ ಹೋಗುತ್ತಿದೆ ಎಂದರು.

NDA ಎಂದರೆ New ಇಂಡಿಯಾ, Develop ಇಂಡಿಯಾ, Aspirational ಇಂಡಿಯಾ ಎಂದು ಮೋದಿ ನುಡಿದರು. ಚುನಾವಣೆ ವೇಳೆ ಹೇಳಿದಂತೆ ಜನರ ಕೆಲಸಕ್ಕೆ ನಾವು ಸಿದ್ಧ. ಎನ್‌ಡಿಎ ಅಲ್ಲದೆ ಬೇರೆ ಯಾರ ಮೇಲೂ ಜನತೆಗೆ ವಿಶ್ವಾಸವಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನಮ್ಮ ಗುರಿ. ಇದುವರೆಗಿನ 10 ವರ್ಷಗಳ ಆಡಳಿತ ಬರೀ ಟ್ರೇಲರ್‌ ಎಂದರು. ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಬದಲಾವಣೆಗೆ ಎನ್‌ಡಿಎ ಮುನ್ನುಡಿ ಬರೆದಿದೆ; ಇನ್ನಷ್ಟು ಸಾಧಿಸಿ ತೋರಿಸಲಿದೆ.

ಇದನ್ನೂ ಓದಿ: PM Narendra Modi: WHO ಅಧ್ಯಕ್ಷರಿಂದ ಶುಭಾಶಯ; ಥ್ಯಾಂಕ್ಸ್‌ ʼತುಳಸಿ ಭಾಯ್‌ʼ ಎಂದ ಮೋದಿ-ಭಾರೀ ಕುತೂಹಲಕ್ಕೆ ಕಾರಣವಾಯ್ತು ಟ್ವೀಟ್‌

Continue Reading

Lok Sabha Election 2024

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ

NDA Meeting: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಜೂನ್‌ 9ರ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶುಕ್ರವಾರ (ಜೂನ್‌ 7) ನಡೆದ ಎನ್‌ಡಿಎ ಒಕ್ಕೂಟದ ಸಂಸದೀಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

VISTARANEWS.COM


on

NDA Meeting
Koo

ನವದೆಹಲಿ: ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಜೂನ್‌ 9ರ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಶುಕ್ರವಾರ (ಜೂನ್‌ 7) ನಡೆದ ಎನ್‌ಡಿಎ ಒಕ್ಕೂಟದ ಸಂಸದೀಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು (NDA Meeting).

ಹಳೆ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಎನ್‌ಡಿಎ ನಾಯಕರು ಮೋದಿ ಅವರ ಆಯ್ಕೆಗೆ ಅನುಮೋದನೆ ನೀಡಿದರು. ಸಭೆಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕರು ಎದ್ದು ನಿಂತು, ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಪ್ರಲ್ಹಾದ್‌ ಜೋಷಿ, ನಿರ್ಮಲಾ ಸೀತಾರಾಮನ್‌, ಯೋಗಿ ಆದಿತ್ಯನಾಥ್‌, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜನಸೇನಾ ಪಾರ್ಟಿಯ ಪವನ್‌ ಕಲ್ಯಾಣ್‌, ಏಕನಾಥ್‌ ಶಿಂದೆ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ʼʼಎನ್‌ಡಿಎ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಇದು ವಿಕಸಿತ ಯಾತ್ರೆ. ಮೋದಿ ಅವರ ಕಾರ್ಯ ವೈಖರಿಯಿಂದ ಇದು ಸಾಧ್ಯವಾಗಿದೆ. ಆಂಧ್ರ ಪ್ರದೇಶ, ಸಿಕ್ಕಿಂನಲ್ಲಿಯೂ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆʼʼ ಎಂದು ಜೆ.ಪಿ.ನಡ್ಡಾ ಹೇಳಿದರು. ʼʼಮೋದಿ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಮೋದಿ ಪ್ರಧಾನಿ ಆಗಬೇಕು ಎನ್ನುವುದು ಎಲ್ಲರ ಆಶಯ. ಅವರು ದೇಶಕ್ಕಾಗಿ ಅವಿರತವಾಗಿ ದುಡಿಯುತ್ತಾರೆ. ಮೋದಿ ಅವರಿಂದ ಮಾತ್ರ ಬಡತನ ನಿವಾರಣೆ ಸಾಧ್ಯʼʼ ಎಂದು ಚಂದ್ರಬಾಬು ನಾಯ್ಡು ಬಣ್ಣಿಸಿದರು.

ನಾವು ಮೋದಿ ಜತೆಗೆ ಇರುತ್ತೇವೆ ಎಂದು ನಿತೀಶ್‌ ಕುಮಾರ್‌ ಭರವಸೆ ನೀಡಿದರು. ʼʼದೇಶ ಸಮರ್ಥವಾಗಿ ಮುನ್ನಡೆಯಲು ಮೋದಿ ಬೇಕು. ನನ್ನ ಬದುಕಿನ ಅದ್ಭುತ ಕ್ಷಣ ಇದುʼʼ ಎಂದು ಹೇಳಿದರು.

ಎನ್‌ಡಿಎ ನಾಯಕರನ್ನಾಗಿ ಮೋದಿ ಅವರ ಹೆಸರನ್ನು ರಾಜನಾಥ್‌ ಸಿಂಗ್‌ ಪ್ರಸ್ತಾವಿಸಿದರು. ಮೋದಿ ಹೆಸರು ಹೇಳುತ್ತಿದ್ದಂತೆ ಸಂಸದರೆಲ್ಲ ಜೈಕಾರ ಮೊಳಗಿಸಿದರು. ಪ್ರಸ್ತಾವನೆಯನ್ನು ಅಮಿತ್‌ ಶಾ, ನಿತಿನ್‌ ಗಡ್ಕರಿ, ಎಚ್‌.ಡಿ.ಕುಮಾರಸ್ವಾಮಿ, ನಿತೀಶ್‌ ಕುಮಾರ್‌ ಮತ್ತಿತರ ನಾಯಕರು ಅನುಮೋದಿಸಿದರು.

ಇಂದು ಎನ್‌ಡಿಎ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಮತ್ತು ಆಂಧ್ರ ಪ್ರದೇಶದ ತೆಲುಗು ದೇಶಮ್‌ ಪಾರ್ಟಿ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆದಷ್ಟು ಬೇಗ ಸರ್ಕಾರ ರಚಿಸುವಂತೆ ಆಗ್ರಹಿಸಿದ್ದರು. ಜೂನ್‌ 6ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದ ನಿತೀಶ್‌ ಕುಮಾರ್‌, ʼʼಸರ್ಕಾರ ರಚನೆಯಲ್ಲಿ ಯಾವುದೇ ವಿಳಂಬವಾಗಬಾರದು. ನಾವು ಅದನ್ನು ಆದಷ್ಟು ಬೇಗ ಕಾರ್ಯ ಪ್ರವೃತ್ತರಾಗಬೇಕು” ಎಂದು ಸೂಚಿಸಿದ್ದರು. 

ಇದನ್ನೂ ಓದಿ: Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?

Continue Reading

ಪ್ರಮುಖ ಸುದ್ದಿ

Rahul Gandhi: ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ಜಾಮೀನು; ‌75 ಲಕ್ಷದ ಶ್ಯೂರಿಟಿ ನೀಡಿದ ಡಿಕೆ ಸುರೇಶ್

Rahul Gandhi: 42ನೇ ಎಂಸಿಸಿಎ ಕೋರ್ಟ್‌ ಕಟಕಟೆಯಲ್ಲಿ ನಿಂತ ರಾಹುಲ್‌ ಗಾಂಧಿ ಅವರ ಪರ ವಕೀಲರು ಜಾಮೀನಿಗಾಗಿ ಕೋರಿದರು. ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಮುಂದಿನ ವಿಚಾರಣೆಯನ್ನು ಜೂ.30ಕ್ಕೆ ನಿಗದಿಪಡಿಸಿದರು.

VISTARANEWS.COM


on

defamation case rahul gandhi
Koo

ಬೆಂಗಳೂರು: ಬಿಜೆಪಿ (BJP) ಹೂಡಿರುವ ಮಾನನಷ್ಟ ಮೊಕದ್ದಮೆ (Defamation case) ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ (Rahul Gandhi) ಷರತ್ತುಬದ್ಧ ಜಾಮೀನು (Bail) ದೊರೆತಿದೆ. ಪ್ರಕರಣದ ವಿಚಾರಣೆಯನ್ನು ಜೂನ್‌ 30ಕ್ಕೆ ಮುಂದೂಡಲಾಗಿದೆ.

42ನೇ ಎಂಸಿಸಿಎ ಕೋರ್ಟ್‌ ಕಟಕಟೆಯಲ್ಲಿ ನಿಂತ ರಾಹುಲ್‌ ಗಾಂಧಿ ಅವರ ಪರ ವಕೀಲ ನಿಶಾನ್ ಕುಮಾರ್ ಶೆಟ್ಟಿ ಜಾಮೀನಿಗಾಗಿ ಕೋರಿದರು. ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಮುಂದಿನ ವಿಚಾರಣೆಯನ್ನು ಜೂ.30ಕ್ಕೆ ನಿಗದಿಪಡಿಸಿದರು. ಕಾಂಗ್ರೆಸ್‌ ಮುಖಂಡ ಡಿ.ಕೆ ಸುರೇಶ್‌ (DK Suresh) ಅವರು ರಾಹುಲ್‌ ಗಾಂಧಿಗೆ 75 ಲಕ್ಷ ರೂಪಾಯಿ ಮೌಲ್ಯದ ಶ್ಯೂರಿಟಿ ಒದಗಿಸಿದರು. ಬಾಂಡ್‌ ಕಾಗದಗಳಿಗೆ ಸಹಿ ಹಾಕಿದ ಬಳಿಕ ರಾಹುಲ್‌ ಕೋರ್ಟ್‌ನಿಂದ ತೆರಳಿದರು. ಈ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಸಹ ಉಪಸ್ಥಿತರಿದ್ದರು.

ರಾಹುಲ್‌ ಮೇಲೆ ಕೋರ್ಟ್‌ ಗರಂ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ಬಾರಿ ಇದರ ವಿಚಾರಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇವರಿಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆದರೆ ರಾಹುಲ್‌ ಗಾಂಧಿ ಆಗಮಿಸಿರಲಿಲ್ಲ. ಇದರಿಂದ ಗರಂ ಆಗಿದ್ದ ನ್ಯಾಯಾಧೀಶರು, ಮುಂದಿನ ಬಾರಿ ರಾಹುಲ್‌ ಖುದ್ದು ಹಾಜರಿರುವಂತೆ ನಿರ್ದೇಶನ ನೀಡಿತ್ತು.

ಈ ಪ್ರಕರಣದ ದಾಖಲಿಸಿರುವ ಬಿಜೆಪಿ ಕಾರ್ಯದರ್ಶಿ, ಎಂಎಲ್‌ಸಿ ಕೇಶವಪ್ರಸಾದ್, “ಸಾಮಾನ್ಯರಂತೆ ರಾಹುಲ್‌ ಅವರಿಗೂ ಕಾನೂನು ಒಂದೇ” ಎಂದು ಹೇಳಿದ್ದಾರೆ. “ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸುಳ್ಳು ಜಾಹೀರಾತು ನೀಡಿದ್ದರು. ರಾಹುಲ್‌ ಗಾಂಧಿ ಅದನ್ನು ರಿಟ್ವೀಟ್ ಮಾಡಿಕೊಂಡರು. ಹಾಗಾಗಿ ಮೂವರ ವಿರುದ್ಧ ದೂರು ನೀಡಲಾಗಿತ್ತು. ಬಿಜೆಪಿ ಸಾಮಾನ್ಯ ಕಾರ್ಯಕರ್ತನಿಗೂ ಎಲ್ಲಾ ಹೋರಾಟ ಮಾಡುವ ಕ್ಷಮತೆ ಇದೆ. ನಮ್ಮ ವಿರುದ್ಧ ಹಾಕಿರುವ ಜಾಹೀರಾತು ಸುಳ್ಳು. ಅವರು ಅದಕ್ಕೆ ದಾಖಲೆ ಕೊಡಬೇಕು. ಜನರ ದಾರಿ ತಪ್ಪಿಸಬಹುದು, ಆದರೆ ಕೋರ್ಟ್ ದಾರಿ ತಪ್ಪಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: Rahul Gandhi: ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಆಗಮಿಸಿದ ರಾಹುಲ್‌ ಗಾಂಧಿ

Continue Reading

ಕರ್ನಾಟಕ

Uttarakhand Trekking Tragedy: ಚಾರಣಿಗರ ಮೃತದೇಹಗಳು ಬೆಂಗಳೂರಿಗೆ, ಸಾವಿನ ಕಣಿವೆಯಿಂದ ಹಿಂದಿರುಗಿದವರ ನಿಟ್ಟುಸಿರು

VISTARANEWS.COM


on

uttarakhand trekking tragedy 2
Koo

ಬೆಂಗಳೂರು: ಉತ್ತರಾಖಂಡದ (Uttarakhand) ಸಹಸ್ತ್ರತಾಲ್‌ ಶಿಖರದ (Sahstra Tal Summit) ಬಳಿ ಹಿಮಬಿರುಗಾಳಿಗೆ (Blizzard) ಸಿಕ್ಕಿ ಮೃತಪಟ್ಟ (Trekking Tragedy) 9 ಮಂದಿ ಕರ್ನಾಟಕದ ಚಾರಣಿಗರ (Trekkers) ಮೃತದೇಹಗಳು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kemepegowda internationa Airport) ಮೂಲಕ ಬೆಂಗಳೂರನ್ನು ತಲುಪಲಿವೆ. ಬದುಕುಳಿದ 13 ಇಂದು ಮುಂಜಾನೆ ಹಿಂದಿರುಗಿದರು.

ಉತ್ತರಾಖಂಡದ ಡೆಹ್ರಾಡೂನ್‌ನಿಂದ ದೇವನಹಳ್ಳಿಯ ಏರ್ಪೋರ್ಟ್‌ಗೆ ರಾತ್ರಿ 8:45ಕ್ಕೆ ಆಗಮಿಸಿದ 6E6136 ಇಂಡಿಗೋ ವಿಮಾನದಲ್ಲಿ 13 ಮಂದಿ ಚಾರಣಿಗರು ಬಂದಿಳಿದರು. ಕಾತರ ಹಾಗೂ ಆತಂಕಗಳಿಂದ ಅವರನ್ನು ಕಾಯುತ್ತಿದ್ದ ಸಂಬಂಧಿಕರು, ಸ್ನೇಹಿತರನ್ನು ಕೂಡಿಕೊಂಡರು. ತಮ್ಮ ಸಹಚಾರಣಿಗರನ್ನು ಕಣ್ಣ ಮುಂದೆಯೇ ಕಳೆದುಕೊಂಡ ದುರ್ಘಟನೆ ಹಾಗೂ ದುರ್ಭರ ಪರಿಸ್ಥಿತಿಯಲ್ಲಿ ಬದುಕುಳಿದ ಶಾಕ್‌ಗೆ ಒಳಗಾಗಿದ್ದ ಚಾರಣಿಗರು ಮೌನವಾಗಿ ಮನೆಗೆ ತೆರಳಿದ್ದು, ಯಾವುದೇ ಹೇಳಿಕೆ ನೀಡಲಿಲ್ಲ.

ಬೆಳಗ್ಗೆ 8:30ರ ಹೊತ್ತಿಗೆ ದೆಹಲಿಯಿಂದ ಬಂದು ಟರ್ಮಿನಲ್ 1ಕ್ಕೆ ತಲುಪಿದ ಇಂಡಿಗೋ 6E 6612 ವಿಮಾನದಲ್ಲಿ ಮೂವರ ಮೃತದೇಹಗಳು ಬಂದಿಳಿದಿವೆ. ಪದ್ಮಿನಿ ಹೆಗ್ಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್ ಮೃತದೇಹಗಳು ಮೊದಲ ವಿಮಾನದಲ್ಲಿ ಬಂದಿವೆ.

ಏರ್‌ಪೋರ್ಟ್ ಕಾರ್ಗೋ ಬಳಿ ಈ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದು, “ಈಗಾಗಲೇ ಮೂರು ಮೃತ ದೇಹಗಳು ಬಂದಿವೆ. ಅವುಗಳಿಗೆ ಗೌರವ ನೀಡಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ಮೃತ ದೇಹಗಳು ಬೆಂಗಳೂರಿಗೆ ತಲುಪಲು ಆಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. 1 ಗಂಟೆಯ ಒಳಗೆ ಎಲ್ಲಾ ಮೃತ ದೇಹಗಳು ಬರಲಿವೆ. ಮೃತದೇಹಗಳನ್ನು ಗೌರವಯುತವಾಗಿ ಕುಟುಂಬಸ್ತರಿಗೆ ಹಸ್ತಾಂತರಿಸಲಾಗುವುದು” ಎಂದು ತಿಳಿಸಿದ್ದಾರೆ.

ಮರಳಿ ಬೆಂಗಳೂರಿಗೆ ಬಂದವರು:

ಸೌಮ್ಯಾ ಕನಲೆ- 36 ವರ್ಷ
ವಿನಯ್ ಎಂಕೆ, 49 ವರ್ಷ
ಶಿವಜ್ಯೋತಿ- 46 ವರ್ಷ
ಸುಧಾಕರ್‌, 64 ವರ್ಷ
ಸ್ಮೃತಿ, 41 ವರ್ಷ
ಶೀನಾ ಲಕ್ಷ್ಮಿ, 48 ವರ್ಷ
ಮಧುಕಿರಣ್ ರೆಡ್ಡಿ- 52 ವರ್ಷ
ಜಯಪ್ರಕಾಶ್- 61 ವರ್ಷ
ಭರತ್- 53 ವರ್ಷ
ಅನಿಲ್ ಭಟ್ಟ್- 52 ವರ್ಷ
ವಿವೇಕ್ ಶ್ರೀಧರ್- 42 ವರ್ಷ
ರಿತಿಕ್ ಜಿಂದಾಲ್
ನವೀನ್ ಎ.

ಮೃತ ಚಾರಣಿಗರ ವಿವರಗಳು:

1) ಪದ್ಮಿನಿ ಹೆಗಡೆ
2) ವೆಂಕಟೇಶ್ ಪ್ರಸಾದ್
3) ಆಶಾ ಸುಧಾಕರ್
4) ಪದ್ಮನಾಭ್ ಕುಂದಾಪುರ ಕೃಷ್ಣಮೂರ್ತಿ
5) ಸಿಂಧು ವಾಕೆಕಲಂ
6) ಸುಜಾತ ಮುಂಗುರವಾಡಿ
7) ವಿನಾಯಕ್ ಮುಂಗುರವಾಡಿ
8) ಚಿತ್ರ ಪಾರ್ಟನಿಟ್
9) ಅನಿತಾ ರಂಗಪ್ಪ

ಇದನ್ನೂ ಓದಿ: Trekking Tragedy: ಉತ್ತರಾಖಂಡ ಚಾರಣ ದುರಂತದಲ್ಲಿ ಪಾರಾದ 13 ಚಾರಣಿಗರು ಬೆಂಗಳೂರಿಗೆ ವಾಪಸ್

Continue Reading
Advertisement
Prajwal Revanna Case
ಕರ್ನಾಟಕ2 mins ago

Prajwal Revanna Case: ರೇವಣ್ಣ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂನ್‌ 14ಕ್ಕೆ ಮುಂದೂಡಿಕೆ

Pesticides in Spices
ಕರ್ನಾಟಕ21 mins ago

Pesticides in Spices: MDH, Everest ಬೆನ್ನಲ್ಲೇ ರಾಜ್ಯದ ಮಸಾಲೆ ಪದಾರ್ಥಗಳಿಗೂ ತಟ್ಟಿದ ಬ್ಯಾನ್‌ ಬಿಸಿ

Narendra Modi
Lok Sabha Election 202425 mins ago

Narendra Modi: ಮುಂದಿನ ಹತ್ತು ವರ್ಷ ನಾವೇ: ನರೇಂದ್ರ ಮೋದಿ

Nikhil Kumaraswamy may Good Bye To Cinema
ಸ್ಯಾಂಡಲ್ ವುಡ್36 mins ago

Nikhil Kumaraswamy: ಸಿನಿಮಾಗೆ ಗುಡ್‌ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?

Road accident
ಬೆಂಗಳೂರು41 mins ago

Road Accident: ವಾಟರ್ ಟ್ಯಾಂಕರ್ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು; ಕಾಲೇಜಿಗೆ ಹೋದ ಮೊದಲ ದಿನವೇ ದುರಂತ!

karnataka rain
ಮಳೆ51 mins ago

Karnataka Rain : ಮಳೆ ಶುರುವಾದರೆ ಸಾಕು ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

karnataka Rain
ಮಳೆ53 mins ago

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

T20 World Cup
ಕ್ರೀಡೆ54 mins ago

T20 World Cup: ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ ಅಮೆರಿಕ ಕ್ರಿಕೆಟ್‌ ತಂಡದ ಸೌರಭ್ ನೇತ್ರವಾಲ್ಕರ್ ಹಿನ್ನೆಲೆ ಏನು?

NDA Meeting
Lok Sabha Election 20241 hour ago

NDA Meeting: ಮತ್ತೊಮ್ಮೆ ಮೋದಿ ಸರ್ಕಾರ; ಜೂ. 9ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ

Chetan Ahimsa says that Upendra is not intelligent he is delusional
ಸ್ಯಾಂಡಲ್ ವುಡ್1 hour ago

Chetan Ahimsa: ಉಪೇಂದ್ರ ಬುದ್ಧಿವಂತನಲ್ಲ, ಅವರಿಗೆ ಭ್ರಮೆ; ನಟ ಚೇತನ್ ಗೇಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 weeks ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌