Narendra Modi: ಭೂಕುಸಿತ ಪೀಡಿತ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ - Vistara News

ದೇಶ

Narendra Modi: ಭೂಕುಸಿತ ಪೀಡಿತ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ

Narendra Modi: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು. ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರ ಕೇಂದ್ರಕ್ಕೆ 2,000 ಕೋಟಿ ರೂ.ಗಳ ಸಹಾಯಧನ ಒದಗಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಪ್ರಧಾನಿ ಅವರ ಭೇಟಿ ನಿರೀಕ್ಷೆ ಮೂಡಿಸಿದೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದರು (Wayanad landslide). ಮೋದಿ ಅವರಿದ್ದ ವಿಮಾನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನನಿಲ್ದಾಣಕ್ಕೆ ಬಂದಿಳಿಯಿತು. ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಮೋದಿ ಹೆಲಿಕಾಫ್ಟರ್‌ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದರು.

ಮೋದಿ ಅವರೊಂದಿಗೆ ಆರಿಫ್ ಮೊಹಮ್ಮದ್ ಖಾನ್, ಪಿಣರಾಯಿ ವಿಜಯನ್ ಮತು ಕೇಂದ್ರ ಸಚಿವ ಸುರೇಶ್‌ ಗೋಪಿ ಕೂಡ ತೆರಳಿದರು. ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು. ದುರಂತ ಪೀಡಿತ ಸ್ಥಳದಲ್ಲಿರು ಬೀಡು ಬಿಟ್ಟಿರುವ ರಕ್ಷಣಾ ತಂಡಗಳಿಂದ ಮಾಹಿತಿ ಪಡೆಯಲಿರುವ ಮೋದಿ ನಿರಾಶ್ರಿತರ ಶಿಬಿರ, ಗಾಯಗೊಂಡರವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಲಿದ್ದಾರೆ. ಈ ಪ್ರದೇಶದಲ್ಲಿನ ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರ ಕೇಂದ್ರಕ್ಕೆ 2,000 ಕೋಟಿ ರೂ.ಗಳ ಸಹಾಯಧನ ಒದಗಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಪ್ರಧಾನಿ ಅವರ ಭೇಟಿ ನಿರೀಕ್ಷೆ ಮೂಡಿಸಿದೆ.

ದುರಂತ ಪೀಡಿತ ಸ್ಥಳಗಳ ಭೇಟಿಯ ನಂತರ ನಡೆಯಲಿರುವ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ ರಕ್ಷಣಾ ಕಾರ್ಯಾಚರಣೆ ಮತ್ತು ಪುನರ್ವಸತಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಜುಲೈ 30ರಂದು ವಯನಾಡಿನ ಮೆಪ್ಪಾಡಿ ಪ್ರದೇಶದ ಮುಂಡಕೈಯಲ್ಲಿ ಭೂಕುಸಿತ ಸಂಭವಿಸಿ ಅಪಾರ ಜೀವ ಹಾನಿ ಮತ್ತು ವ್ಯಾಪಕ ನಾಶನಷ್ಟಕ್ಕೆ ಕಾರಣವಾಗಿದೆ. ದುರಂತದಲ್ಲಿ ಮೃತರ ಸಂಖ್ಯೆ 400 ದಾಟಿದೆ. ಕೇರಳದಲ್ಲಿ ನಡೆದ ಅತೀ ಭೀಕರ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಧನ್ಯವಾದ ಅರ್ಪಿಸಿದ ರಾಹುಲ್‌ ಗಾಂಧಿ

ವಯನಾಡಿನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಧನ್ಯವಾದ ಅರ್ಪಿಸಿದ್ದರು. ಭೇಟಿಯ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದರು.

“ಮೋದಿ ಜೀ, ಭೀಕರ ದುರಂತದ ಬಗ್ಗೆ ವೈಯಕ್ತಿಕವಾಗಿ ಅವಲೋಕನ ಮಾಡಲು ವಯನಾಡ್‌ಗೆ ಭೇಟಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ಪ್ರಧಾನಿ ಒಮ್ಮೆ ವಿನಾಶದ ಪ್ರಮಾಣವನ್ನು ನೇರವಾಗಿ ನೋಡಿದ ನಂತರ, ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Narendra Modi: ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ; ದುರಂತದ ಭೀಕರತೆ ಕೇಳಿ ಭಾವುಕ

Narendra Modi: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದ್ದಾರೆ.

VISTARANEWS.COM


on

Narendra Modi
Koo

ತಿರುವನಂತಪುರಂ: ಕೇರಳದ ವಯನಾಡು ಭೂಕುಸಿತವು (Wayand Landslide) ದೇಶಾದ್ಯಂತ ಬೆಚ್ಚಿಬೀಳಿಸಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಯನಾಡಿನಲ್ಲಿ ಭೂಕುಸಿತದ ತೀವ್ರತೆ ಕುರಿತು ವೈಮಾನಿಕ ಸಮೀಕ್ಷೆ ನಡೆಸಿದರು. ಅಷ್ಟೇ ಅಲ್ಲ, ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ನಿರಾಶ್ರಿತರ ಕೇಂದ್ರದಲ್ಲಿರುವ ಮಹಿಳೆಯರು, ಮಕ್ಕಳು ಸೇರಿ ಎಲ್ಲರೊಂದಿಗೂ ಮಾತನಾಡಿದ ಅವರು ಸಾಂತ್ವನ ಹೇಳಿದರು.

ಇದಕ್ಕೂ ಮೊದಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಮೋದಿ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದರು.‌ ಮೋದಿ ಅವರೊಂದಿಗೆ ಆರಿಫ್ ಮೊಹಮ್ಮದ್ ಖಾನ್, ಪಿಣರಾಯಿ ವಿಜಯನ್ ಮತು ಕೇಂದ್ರ ಸಚಿವ ಸುರೇಶ್‌ ಗೋಪಿ ಕೂಡ ತೆರಳಿದರು. ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಚುರಲ್‌ಮಲ, ಮುಂಡಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದುರಂತದ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು. ದುರಂತ ಪೀಡಿತ ಸ್ಥಳದಲ್ಲಿ ಬೀಡು ಬಿಟ್ಟಿರುವ ರಕ್ಷಣಾ ತಂಡಗಳಿಂದ ಮಾಹಿತಿ ಪಡೆದ ಮೋದಿ ನಿರಾಶ್ರಿತರ ಶಿಬಿರ, ಗಾಯಗೊಂಡರವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೂ ಭೇಟಿ ನೀಡಿದರು. ಈ ಪ್ರದೇಶದಲ್ಲಿನ ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ಜುಲೈ 30ರಂದು ವಯನಾಡಿನ ಮೆಪ್ಪಾಡಿ ಪ್ರದೇಶದ ಮುಂಡಕೈಯಲ್ಲಿ ಭೂಕುಸಿತ ಸಂಭವಿಸಿ ಅಪಾರ ಜೀವ ಹಾನಿ ಮತ್ತು ವ್ಯಾಪಕ ನಾಶನಷ್ಟಕ್ಕೆ ಉಂಟಾಗಿದೆ. ದುರಂತದಲ್ಲಿ ಮೃತರ ಸಂಖ್ಯೆ 400 ದಾಟಿದೆ. ಕೇರಳದಲ್ಲಿ ನಡೆದ ಅತೀ ಭೀಕರ ದುರಂತಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಸತತ 10 ದಿನಗಳವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯು ಅಂತ್ಯವಾಗಿದೆ.

ಇದನ್ನೂ ಓದಿ: Narendra Modi: ಮೋದಿ ಪ್ರೊಫೈಲ್‌ ಫೋಟೊ ಈಗ ತಿರಂಗಾ; ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜನರಿಗೆ ಕರೆ

Continue Reading

ಕ್ರೈಂ

Californium Stone: ಪೊಲೀಸರಿಂದ ಭರ್ಜರಿ ಬೇಟೆ; 850 ಕೋಟಿ ರೂ. ಮೌಲ್ಯದ ಅಪರೂಪದ ವಿಕಿರಣಶೀಲ ಹರಳು ವಶ

Californium Stone: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಮೌಲ್ಯ ಹೊಂದಿರುವ ವಿಕಿರಣಶೀಲ ವಸ್ತು ಅಪರೂಪದ ಕ್ಯಾಲಿಫೋರ್ನಿಯಂ ಹರಳನ್ನು ಬಿಹಾರದ ಗೋಪಾಲ್‌ಗಂಜ್‌ ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ. ಗೋಪಾಲ್‌ಗಂಜ್‌ ಎಸ್‌ಪಿ ಸ್ವರ್ಣ್ ಪ್ರಭಾತ್ ಈ ಅಪರೂಪದ ಹರಳು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿದ್ದಾರೆ. ಆರೋಪಿಗಳು 50 ಗ್ರಾಂ ತೂಕದ ವಸ್ತುವನ್ನು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

VISTARANEWS.COM


on

Californium Stone
Koo

ಪಾಟ್ನಾ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಮೌಲ್ಯ ಹೊಂದಿರುವ ವಿಕಿರಣಶೀಲ ವಸ್ತು ಅಪರೂಪದ ಕ್ಯಾಲಿಫೋರ್ನಿಯಂ ಹರಳನ್ನು(Californium Stone) ಬಿಹಾರದ ಗೋಪಾಲ್‌ಗಂಜ್‌ ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ (Crime News).

ಗೋಪಾಲ್‌ಗಂಜ್‌ ಎಸ್‌ಪಿ ಸ್ವರ್ಣ್ ಪ್ರಭಾತ್ ಈ ಅಪರೂಪದ ಹರಳು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿದ್ದಾರೆ. ಆರೋಪಿಗಳು 50 ಗ್ರಾಂ ತೂಕದ ವಸ್ತುವನ್ನು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. “ಜಿಲ್ಲೆಯಲ್ಲಿ ಬೆಲೆಬಾಳುವ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಮಗೆ ನಿರ್ದಿಷ್ಟ ಸುಳಿವು ಸಿಕ್ಕಿತು. ಅದರಂತೆ ನಾವು ಜಿಲ್ಲಾ ತನಿಖಾ ಘಟಕ (DIU), ವಿಶೇಷ ಕಾರ್ಯಾಚರಣೆ ಗುಂಪು -7 (SOG -7) ಮತ್ತು ವಿಶೇಷ ಕಾರ್ಯಪಡೆ (STF) ಸೇರಿದಂತೆ ವಿವಿಧ ವಿಶೇಷ ಘಟಕಗಳ ಸದಸ್ಯರನ್ನು ಒಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದೇವೆ. ತಂಡಗಳನ್ನು ಬಿಹಾರ-ಉತ್ತರ ಪ್ರದೇಶ-ಬಾಲ್ತಾರಿ ಗಡಿಯಲ್ಲಿ ನಿಯೋಜಿಸಿದ್ದೇವೆʼʼ ಎಂದು ತಿಳಿಸಿದ್ದಾರೆ.

“ಅಪರಾಧಿಗಳು ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ ಮತ್ತು ಅವರಿಂದ 4 ಮೊಬೈಲ್ ಫೋನ್‌ಗಳು ಮತ್ತು 50 ಗ್ರಾಂ ಕ್ಯಾಲಿಫೋರ್ನಿಯಾ ಕಲ್ಲು ವಶಕ್ಕೆ ಪಡೆಯಲಾಗಿದೆʼʼ ಎಂದು ವಿವರಿಸಿದ್ದಾರೆ. ʼʼಕ್ಯಾಲಿಫೋರ್ನಿಯಂ ಕಲ್ಲು ಎನ್ನುವುದು ಅತ್ಯಂತ ದುಬಾರಿ ವಿಕಿರಣಶೀಲ ವಸ್ತುವಾಗಿದ್ದು, ಪ್ರತಿ ಗ್ರಾಂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 17 ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ. ಒಟ್ಟು 50 ಗ್ರಾಂ ಕಲ್ಲನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯವು ಸುಮಾರು 850 ಕೋಟಿ ರೂ.ʼʼ ಎಂದು ಹೇಳಿದ್ದಾರೆ.

ಬಂಧಿತರು

ಈ ಪ್ರಕರಣದ ಬಂಧಿತರನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ತಮ್ಕುಹಿ ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪರ್ಸೌನಿ ಬುಜುರ್ಗ್ ಗ್ರಾಮದ ನಿವಾಸಿ ಛೋಟೆ ಲಾಲ್ ಪ್ರಸಾದ್ (40), ಗೋಪಾಲ್‌ಗಂಜ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 22ರ ಕೌಸಲ್ಯ ಚೌಕ್ ನಿವಾಸಿ ಚಂದನ್ ಗುಪ್ತಾ (40) ಮತ್ತು ಗೋಪಾಲ್‌ಗಂಜ್‌ನ ಕುಶಾಹರ್ ಮಥಿಯಾ ನಿವಾಸಿ ಚಂದನ್ ರಾಮ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಬಂಧಿತರು ಈ ಬೆಲೆಬಾಳುವ ಹರಳನ್ನು ಹಲವು ತೊಂಗಳಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಕ್ಯಾಲಿಫೋರ್ನಿಯಾ ಕಲ್ಲಿನ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕಲು ವಿಧಿವಿಜ್ಞಾನ ಪ್ರಯೋಗಾಲಯದಿಂದ ವಿಶೇಷ ತಂಡವನ್ನು ಕರೆಸಲಾಗಿದೆ. ವಸ್ತುವಿನ ನಿರ್ಣಾಯಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ತನಿಖೆಗಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಪರಮಾಣು ಶಕ್ತಿ ಇಲಾಖೆಗೆ (Department of Atomic Energy) ಸೂಚನೆ ನೀಡಿದ್ದಾರೆ. ಇವರಿಗೆ ಇಲ್ಲಿ ಎಲ್ಲಿಂದ ಲಭಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ.

ಇದನ್ನೂ ಓದಿ: ED Raid: ಬೆಂಗಳೂರು, ಧಾರವಾಡದಲ್ಲಿ ಕೆಐಎಡಿಬಿ ಕಚೇರಿಗಳಿಗೆ ಇಡಿ ದಾಳಿ; 26 ಗಂಟೆ ಪರಿಶೀಲಿಸಿದರೂ ಮುಗಿಯದ ಹಗರಣದ ದಾಖಲೆ!

ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ!

ಬೆಂಗಳೂರು: ಅವರಿಬ್ಬರು ಜೋಡಿ ಆ್ಯಪ್‌ನಲ್ಲಿ ಪರಿಚಯವಾಗಿದ್ದರು. ಪರಿಚಯವು ಪ್ರೀತಿಗೂ ತಿರುಗಿತ್ತು. ಪ್ರೇಯಸಿಗಾಗಿ ಖದೀಮನಾದ ಪ್ರಿಯಕರ ಕಳ್ಳತನ (Theft Case) ಮಾಡಿ ಇದೀಗ ಪೊಲೀಸರಿಗೆ ಲಾಕ್‌ ಆಗಿದ್ದಾನೆ. ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟಿದ್ದ ಪ್ರಿಯತಮೆಯೂ ಜೈಲುಪಾಲಾಗಿದ್ದಾಳೆ. ನಾರಾಯಣಸ್ವಾಮಿ (34) ಹಾಗೂ ನವೀನ (39) ಈ ಇಬ್ಬರು ಖತರ್ನಾಕ್ ಪ್ರೇಮಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Continue Reading

ದೇಶ

Trainee Doctor: ಆಸ್ಪತ್ರೆಯಲ್ಲಿಯೇ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ, ಬಳಿಕ ಹತ್ಯೆ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಫೋಟಕ ಮಾಹಿತಿ

Trainee Doctor: ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮಹಿಳೆಯು ಅಧ್ಯಾಯನ ಮಾಡುತ್ತಿದ್ದರು. ಇದೇ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯ ಶವವು ಪತ್ತೆಯಾಗಿದೆ. ಮರಣೋತ್ತರ ವರದಿ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

VISTARANEWS.COM


on

Trainee Doctor
Koo

ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಮಹಿಳಾ ವೈದ್ಯೆಯ (Kolkata Trainee Doctor) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಮಹಿಳಾ ವೈದ್ಯೆಯ ಹತ್ಯೆಗೂ ಮುನ್ನವೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಮಾಹಿತಿಯು ಮರಣೋತ್ತರ ಪರೀಕ್ಷೆ ವರದಿಯಲ್ಲಿ (Post Mortem Report) ಬಹಿರಂಗವಾಗಿದೆ.

ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ 31 ವರ್ಷದ ಮಹಿಳೆಯು ಕಳೆದ ಗುರುವಾರ (ಆಗಸ್ಟ್‌ 8) ಆರ್‌ ಕೆ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಧ್ಯಯನ ಮಾಡಲು ಹೋಗಿದ್ದ ಹತ್ಯೆಗೀಡಾಗಿದ್ದರು. ಶುಕ್ರವಾರ ಬೆಳಗ್ಗೆ ಮಹಿಳಾ ವೈದ್ಯೆಯ ಶವವು ಪತ್ತೆಯಾಗಿದೆ. ಇದಾದ ಬಳಿಕ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ.

“ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮಹಿಳೆಯು ಅಧ್ಯಾಯನ ಮಾಡುತ್ತಿದ್ದರು. ಇದೇ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯ ಶವವು ಪತ್ತೆಯಾಗಿದೆ. ಮರಣೋತ್ತರ ವರದಿ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕೋಲ್ಕೊತಾ ಪೊಲೀಸ್‌ ಆಯುಕ್ತ ವಿನೀತ್‌ ಕುಮಾರ್‌ ಗೋಯಲ್‌ ತಿಳಿಸಿದ್ದಾರೆ.

ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣವು ಭಾರಿ ಸುದ್ದಿಯಾಗಿದ್ದು, ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಾರ್ವಜನಿಕರೂ ಈ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. “ಆರೋಪಿಗಳು ಯಾರೇ ಆಗಿದ್ದರೂ, ಅವರನ್ನು ಬಂಧಿಸಿ ಗಲ್ಲಿಗೇರಿಸಲಾಗುವುದು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯದ ಹಲವೆಡೆ ಪ್ರಕರಣ ಖಂಡಿಸಿ ಪ್ರತಿಭಟನೆಗಳೂ ನಡೆದಿವೆ.

ಇದನ್ನೂ ಓದಿ: Sexual Abuse: ಸ್ವಂತ ಮಗಳಿಗೆ ಬಲವಂತವಾಗಿ ಅಶ್ಲೀಲ ವಿಡಿಯೊ ತೋರಿಸಿ ಅತ್ಯಾಚಾರ; ಕಾಮುಕ ತಂದೆಯ ಬಂಧನ

Continue Reading

ದೇಶ

New Railway Projects: 24,657 ಕೋಟಿ ರೂ. ಮೊತ್ತದ 8 ರೈಲು ಯೋಜನೆಗಳಿಗೆ ಅನುಮೋದನೆ

New Railway Projects: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಸುಮಾರು 24,657 ಕೋಟಿ ರೂ.ಗಳ ರೈಲ್ವೆ ಸಚಿವಾಲಯದ 8 ಯೋಜನೆಗಳಿಗೆ ಅನುಮೋದನೆ ನೀಡಿದೆ. ʼಗುನುಪುರ್-ತೇರುಬಲಿ (ಹೊಸ ಮಾರ್ಗ), ಜುನಾಗಢ್-ನಬರಂಗ್‌ಪುರ, ಬಾದಂಪಹಾರ್-ಕಂದುಜಾರ್ಗಢ, ಬಂಗ್ರಿಪೊಸಿ-ಗೊರುಮಹಿಸಾನಿ, ಮಲ್ಕನ್ಗಿರಿ-ಪಾಂಡುರಂಗಪುರಂ (ಭದ್ರಾಚಲಂ ಮೂಲಕ), ಬುರಮರ-ಚಕುಲಿಯಾ, ಜಲ್ನಾ-ಜಲ್ಗಾಂವ್ ಮತ್ತು ಬಿಕ್ರಮಶಿಲಾ-ಕಟಾರಿಯಾ- ಇವು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಎಂಟು ಪ್ರಮುಖ ಹೊಸ ರೈಲ್ವೆ ಮಾರ್ಗ ಯೋಜನೆಗಳುʼʼ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

VISTARANEWS.COM


on

New Railway Projects
Koo

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಸುಮಾರು 24,657 ಕೋಟಿ ರೂ.ಗಳ ರೈಲ್ವೆ ಸಚಿವಾಲಯದ 8 ಯೋಜನೆಗಳಿಗೆ ಅನುಮೋದನೆ ನೀಡಿದೆ (New Railway Projects). ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಏಳು ರಾಜ್ಯಗಳ 14 ಜಿಲ್ಲೆಗಳನ್ನು ಈ ಯೋಜನೆಗಳು ಒಳಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.

ʼʼಗುನುಪುರ್-ತೇರುಬಲಿ (ಹೊಸ ಮಾರ್ಗ), ಜುನಾಗಢ್-ನಬರಂಗ್‌ಪುರ, ಬಾದಂಪಹಾರ್-ಕಂದುಜಾರ್ಗಢ, ಬಂಗ್ರಿಪೊಸಿ-ಗೊರುಮಹಿಸಾನಿ, ಮಲ್ಕನ್ಗಿರಿ-ಪಾಂಡುರಂಗಪುರಂ (ಭದ್ರಾಚಲಂ ಮೂಲಕ), ಬುರಮರ-ಚಕುಲಿಯಾ, ಜಲ್ನಾ-ಜಲ್ಗಾಂವ್ ಮತ್ತು ಬಿಕ್ರಮಶಿಲಾ-ಕಟಾರಿಯಾ- ಇವು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಎಂಟು ಪ್ರಮುಖ ಹೊಸ ರೈಲ್ವೆ ಮಾರ್ಗ ಯೋಜನೆಗಳುʼʼ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ʼʼಹೊಸ ಮಾರ್ಗದ ಪ್ರಸ್ತಾಪಗಳು ನೇರ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಪ್ರಯಾಣವನ್ನು ಸುಗಮಗೊಳಿಸುತ್ತದೆ. ಈ ಹೊಸ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇವು ಈ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಸ್ಥಳೀಯರನ್ನು ʼಆತ್ಮ ನಿರ್ಭರʼವನ್ನಾಗಿ ಮಾಡುತ್ತದೆ. ಅವರ ಉದ್ಯೋಗ / ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿ

ʼʼಈ ರೈಲ್ವೆ ಯೋಜನೆಗಳು ಆರ್ಥಿಕ ಅನುಕೂಲವನ್ನು ಒದಗಿಸುವುದಲ್ಲೇ ಸಾವಿರಾರು ಸಂಖ್ಯೆಯ ಉದ್ಯೋಗ ಸೃಷ್ಟಿಗೂ ಕಾರಣವಾಗಲಿವೆ. ಈ ಯೋಜನೆಗಳೊಂದಿಗೆ 64 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಸುಮಾರು 510 ಹಳ್ಳಿಗಳ 40 ಲಕ್ಷಕ್ಕೂ ಅಧಿಕ ಮಂದಿಗೆ ಅನುಕೂಲವಾಗಲಿದೆʼʼ ಮಾಹಿತಿ ನೀಡಿದ್ದಾರೆ. “ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಜಂತಾ ಗುಹೆಗಳನ್ನು ಭಾರತೀಯ ರೈಲ್ವೆ ಜಾಲದ ಮೂಲಕ ಸಂಪರ್ಕಿಸಲಾಗುವುದು. ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಅನುಕೂಲವಾಗಲಿದೆ” ಎಂದಿದ್ದಾರೆ.

ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ಬಾಕ್ಸೈಟ್, ಸುಣ್ಣದ ಕಲ್ಲು, ಅಲ್ಯೂಮಿನಿಯಂ ಪುಡಿ, ಗ್ರಾನೈಟ್, ಬ್ಯಾಲಸ್ಟ್, ಕಂಟೇನರ್‌ ಮುಂತಾದ ಸರಕುಗಳ ಸಾಗಣೆಗೂ ಈ ಹೊಸ ಯೋಜನೆ ವೇಗ ನೀಡಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿರುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟುವ ನಮ್ಮ ಗುರಿಯನ್ನು ಸಾಧಿಸಲು ಇದು ನೆರವಾಗಲಿದೆ. ಅಲ್ಲದೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು ಕಡಿಮೆ ಮಾಡಲು (32.20 ಕೋಟಿ ಲೀಟರ್) ಮತ್ತು ಪರಿಸರಕ್ಕೆ ಹೊರ ಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು (0.87 ಮಿಲಿಯನ್ ಟನ್) ಕಡಿಮೆ ಮಾಡಲು ಈ ಯೋಜನೆಗಳು ದೊಡ್ಡ ಮಟ್ಟದ ಕೊಡುಗೆ ನೀಡಲಿವೆ. ಇದು 3.5 ಕೋಟಿ ಗಿಡಗಳ ನಾಟಿಗೆ ಸಮ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

“ನಾವು 1,300 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿದ್ದೇವೆ ಮತ್ತು ಪ್ರತಿವರ್ಷ 5,000 ಕಿ.ಮೀ. ಹಳಿಗಳನ್ನು ನಿರ್ಮಿಸುತ್ತಿದ್ದೇವೆʼʼ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Continue Reading
Advertisement
building collapses in Bengaluru One dead another critical
ಬೆಂಗಳೂರು2 mins ago

Building Collapsed: ಬೆಂಗಳೂರಲ್ಲಿ ನಿರ್ಮಾಣ ಹಂತ ಕಟ್ಟಡ ಕುಸಿತ; ಓರ್ವ ಸಾವು, ಇನ್ನೋರ್ವ ಗಂಭೀರ

Narendra Modi
ಪ್ರಮುಖ ಸುದ್ದಿ10 mins ago

Narendra Modi: ವಯನಾಡಿನಲ್ಲಿ ಭೂಕುಸಿತದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಮೋದಿ; ದುರಂತದ ಭೀಕರತೆ ಕೇಳಿ ಭಾವುಕ

Californium Stone
ಕ್ರೈಂ24 mins ago

Californium Stone: ಪೊಲೀಸರಿಂದ ಭರ್ಜರಿ ಬೇಟೆ; 850 ಕೋಟಿ ರೂ. ಮೌಲ್ಯದ ಅಪರೂಪದ ವಿಕಿರಣಶೀಲ ಹರಳು ವಶ

Vinesh Phogat
ಕ್ರೀಡೆ39 mins ago

Vinesh Phogat: ಇಂದು ರಾತ್ರಿ 9.30ಕ್ಕೆ ವಿನೇಶ್ ಫೋಗಟ್‌ ಬೆಳ್ಳಿ​ ಪದಕದ ಭವಿಷ್ಯ ನಿರ್ಧಾರ

Varamahalaxmi Decoration
ಧಾರ್ಮಿಕ39 mins ago

Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

Trainee Doctor
ದೇಶ42 mins ago

Trainee Doctor: ಆಸ್ಪತ್ರೆಯಲ್ಲಿಯೇ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ, ಬಳಿಕ ಹತ್ಯೆ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಫೋಟಕ ಮಾಹಿತಿ

Motivational Tips
ಲೈಫ್‌ಸ್ಟೈಲ್51 mins ago

Motivational Tips: ನಿಮ್ಮದೇ ಈ 10 ಅಭ್ಯಾಸಗಳು ಜೀವನದ ಯಶಸ್ಸಿಗೆ ಅಡ್ಡಗೋಡೆಯಾಗಬಹುದು!

CDPO suspended
ಕರ್ನಾಟಕ55 mins ago

CDPO suspended: ಮಕ್ಕಳ‌ ತಟ್ಟೆಯಿಂದ ಮೊಟ್ಟೆ ಕಸಿದ ಪ್ರಕರಣ; ಸಿಡಿಪಿಒ ಅಮಾನತಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ

Viral Video
Latest58 mins ago

Viral Video: ಟಿಕೆಟ್ ಇಲ್ಲದೆ ಎಸಿ ಬೋಗಿಯಲ್ಲಿ ಪ್ರಯಾಣಿಸಿದ ಪೊಲೀಸರು; ಟಿಕೆಟ್‌ ಪರಿಶೀಲಕರಿಗೇ ಧಮಕಿ!

KEA
ಬೆಂಗಳೂರು1 hour ago

KEA: ಸಹಾಯ ಎಂಜಿನಿಯರ್ ಹುದ್ದೆಗಳಿಗೆ ನಾಳೆ ನೇಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಮೂಲಕ 28 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌