NEET UG 2024: ನೀಟ್ ಅಕ್ರಮ; ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು-CBI ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ - Vistara News

ದೇಶ

NEET UG 2024: ನೀಟ್ ಅಕ್ರಮ; ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು-CBI ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

NEET UG 2024: ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದರಿಂದ ಬರೋಬ್ಬರಿ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಇದ್ದ ನ್ಯಾಯಪೀಠ, ಪರೀಕ್ಷೆ ರದ್ದುಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಮುಂದಿನ ದಿನಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗುತ್ತದೆ ಎಂದು ಜು.23ರಂದು ಹೇಳಿತ್ತು.

VISTARANEWS.COM


on

NEET-UG 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋರ್ಟ್‌(Supreme Court) ತಿರಸ್ಕರಿಸಿತ್ತು. ಈ ಬಗ್ಗೆ ಸೂಕ್ತ ಕಾರಣ ನೀಡಿ ಸವಿಸ್ತಾರವಾದ ತೀರ್ಪನ್ನು ಸುಪ್ರೀಂಕೋರ್ಟ್‌ ಇಂದು ನೀಡಲಿದೆ.

ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದರಿಂದ ಬರೋಬ್ಬರಿ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಇದ್ದ ನ್ಯಾಯಪೀಠ, ಪರೀಕ್ಷೆ ರದ್ದುಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಮುಂದಿನ ದಿನಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗುತ್ತದೆ ಎಂದು ಜು.23ರಂದು ಹೇಳಿತ್ತು.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಯಲಾಗಿರುವ ಹಿನ್ನೆಲೆ ಮೇ 5 ರಂದು ನಡೆಸಲಾಗಿದ್ದ ನೀಟ್‌ ಪರೀಕ್ಷೆಯನ್ನು ಅಮಾನ್ಯ ಎಂದು ಘೋಷಿಸಿ ಮರು ಪರೀಕ್ಷೆಗೆ ಆದೇಶ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಹೊಸದಾಗಿ ಮತ್ತೆ ಪರೀಕ್ಷೆ ನಡೆಸುವುದು 20ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಕ್ರಮ ದೇಶವ್ಯಾಪಿ ನಡೆದಿಲ್ಲ. ಮರು ಪರೀಕ್ಷೆಗೆ ಆದೇಶಿಸಲು ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಿದೆ.

ಸಿಬಿಐ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

ಏತನ್ಮಧ್ಯೆ, NEET-UG 2024 ಪರೀಕ್ಷೆಯಲ್ಲಿನ ಆಪಾದಿತ ಅಕ್ರಮಗಳಲ್ಲಿ 120-B, 201, 409, 380, 411, 420 ಮತ್ತು 109 IPC ಅಡಿಯಲ್ಲಿ ಕೇಂದ್ರೀಯ ತನಿಖಾ ದಳ (CBI) ಗುರುವಾರ ತನ್ನ ಮೊದಲ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ತನಿಖಾ ಸಂಸ್ಥೆಯು 13 ಆರೋಪಿಗಳಾದ ನಿತೀಶ್ ಕುಮಾರ್, ಅಮಿತ್ ಆನಂದ್, ಸಿಕಂದರ್ ಯಡ್ವೆಂದು, ಅಶುತೋಷ್ ಕುಮಾರ್-1, ರೋಷನ್ ಕುಮಾರ್, ಮನೀಶ್ ಪ್ರಕಾಶ್, ಅಶುತೋಷ್ ಕುಮಾರ್-2, ಅಖಿಲೇಶ್ ಕುಮಾರ್, ಅವದೇಶ್ ಕುಮಾರ್, ಅನುರಾಗ್ ಯಾದವ್, ಅಭಿಷೇಕ್ ಕುಮಾರ್, ಶಿವಾನಂದ್ ಕುಮಾರ್ ಮತ್ತು ಆಯುಷ್ ರಾಜ್ ಅವರ ವಿರುದ್ಧ ಅಪರಾಧಗಳನ್ನು ದಾಖಲಿಸಿದೆ. .

ಈ ಪ್ರಕರಣವನ್ನು ಆರಂಭದಲ್ಲಿ ಪಾಟ್ನಾದ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ಜೂನ್ 23 ರಂದು ಸಿಬಿಐಗೆ ವರ್ಗಾಯಿಸಲಾಯಿತು. ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ ಇದುವರೆಗೆ 40 ಆರೋಪಿಗಳನ್ನು ಬಂಧಿಸಿದೆ, ಬಿಹಾರ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ ಮತ್ತು 58 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.

ಏನಿದು ಪ್ರಕರಣ?

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET UG 2024: ಕೊನೆಗೂ ನೀಟ್‌ ಫೈನಲ್ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆ, ಇಲ್ಲಿದೆ ಪಟ್ಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

Stock Market: ಐಟಿಸಿ, ಎಚ್‌ಯುಎಲ್ ಟಾಪ್ ಗೇನರ್ ಆಗಿದ್ದರೆ, ಬಿಎಸ್‌ಇಯಲ್ಲಿ ಮಾರುತಿ, ಟಾಟಾ ಮೋಟಾರ್ಸ್ ಟಾಪ್ ಗೇನರ್‌ಗಳಾಗಿ ಹೊರಹೊಮ್ಮಿವೆ. ಅದೇ ರೀತಿ, ಎನ್‌ಎಸ್‌ಇಯಲ್ಲಿ ಅಪೊಲೊ ಹಾಸ್ಪಿಟಲ್ಸ್ ಮತ್ತು ನೆಸ್ಲೆ ಮಾತ್ರ ಲಾಭ ಗಳಿಸಿದರೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್ ಹಿಂದುಳಿದಿವೆ.

VISTARANEWS.COM


on

Stock Market
Koo

ನವದೆಹಲಿ: ನಿನ್ನೆ ಗರಿಷ್ಠ ದಾಖಲೆ ಬರೆದಿದ್ದ ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ(Nifty)ಯಲ್ಲಿ ಭಾರೀ ಕುಸಿತ ಕಂಡಿದೆ(Stock Market). ಭಾರತೀಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಷ್ಯನ್ ಮಾರುಕಟ್ಟೆಗಳಲ್ಲಿ ತೀವ್ರ ಕುಸಿತ ಅನುಭವಿಸಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 700 ಪಾಯಿಂಟ್‌ಗಳ ಕುಸಿತವನ್ನು ಕಂಡು 81,158.99ರಷ್ಟಕ್ಕೆ ತಲುಪಿದೆ. ನಿಫ್ಟಿ 220 ಪಾಯಿಂಟ್‌ಗಳನ್ನು ಕುಸಿದು 24,789 ಕ್ಕೆ ತಲುಪಿದೆ.

ಐಟಿಸಿ, ಎಚ್‌ಯುಎಲ್ ಟಾಪ್ ಗೇನರ್ ಆಗಿದ್ದರೆ, ಬಿಎಸ್‌ಇಯಲ್ಲಿ ಮಾರುತಿ, ಟಾಟಾ ಮೋಟಾರ್ಸ್ ಟಾಪ್ ಗೇನರ್‌ಗಳಾಗಿ ಹೊರಹೊಮ್ಮಿವೆ. ಅದೇ ರೀತಿ, ಎನ್‌ಎಸ್‌ಇಯಲ್ಲಿ ಅಪೊಲೊ ಹಾಸ್ಪಿಟಲ್ಸ್ ಮತ್ತು ನೆಸ್ಲೆ ಮಾತ್ರ ಲಾಭ ಗಳಿಸಿದರೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್ ಹಿಂದುಳಿದಿವೆ.

US ನಲ್ಲಿ, ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯದ ನಡುವೆ ಮಾರುಕಟ್ಟೆಗಳು ಮಾರಾಟವನ್ನು ಅನುಭವಿಸಿದವು, ಡೌ ಜೋನ್ಸ್ ಶೇಕಡಾ 1.21, S&P 500 ಶೇಕಡಾ 1.37 ಮತ್ತು ನಾಸ್ಡಾಕ್ ಶೇಕಡಾ 2.3 ರಷ್ಟು ಕುಸಿಯಿತು. ಇದಲ್ಲದೆ, ಫೆಡರಲ್ ರಿಸರ್ವ್ ತನ್ನ ವಿತ್ತೀಯ ನೀತಿಯನ್ನು ಸರಿಹೊಂದಿಸುವಲ್ಲಿ ತುಂಬಾ ತಡವಾಗಿದೆಯೇ ಎಂಬ ಬಗ್ಗೆ ಕಳವಳಗಳು ಹೆಚ್ಚುತ್ತಿವೆ ಎಂದು ವರದಿಗಳು ಸೂಚಿಸುತ್ತವೆ.

ತಿಂಗಳ ಆರಂಭವಾದ ನಿನ್ನೆ ಹೂಡಿಕೆದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿತ್ತು (Stock Market). ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 82,000 ಗಡಿಯನ್ನು ದಾಟಿದ್ದು, ನಿಫ್ಟಿ 50 ಸೂಚ್ಯಂಕವು 25,000 ಗಡಿದಾಟಿ ಮುಂದುವರಿದಿತ್ತು.

ಗುರುವಾರ ಬಿಎಸ್ಇ ಸೆನ್ಸೆಕ್ಸ್ ಶೇ. 0.47 ಅಥವಾ 388 ಪಾಯಿಂಟ್ಸ್ ಏರಿಕೆ ಕಂಡು ಮೊದಲ ಬಾರಿಗೆ 82,000 ಗಡಿ ದಾಟಿತ್ತು. ಹೊಸ ದಾಖಲೆಯ ಗರಿಷ್ಠ ಮಟ್ಟವು 82,129.49 ಅಂಕದಲ್ಲಿದೆ. ಮತ್ತೊಂದೆಡೆ ನಿಫ್ಟಿ 50 ಶೇ. 0.50 ಅಥವಾ 127 ಪಾಯಿಂಟ್ ಏರಿಕೆ ಕಂಡು ಮೊದಲ ಬಾರಿಗೆ 25,000 ಗಡಿ ದಾಟಿದೆ. ಹೊಸ ದಾಖಲೆಯ ಗರಿಷ್ಠ 25,078.30 ಮಟ್ಟದಲ್ಲಿದೆ. ನಿಫ್ಟಿ ಸ್ಮಾಲ್ ಕ್ಯಾಪ್ ಶೇಕಡಾ 0.44ರಷ್ಟು ಏರಿಕೆ ಕಂಡರೆ, ಮಿಡ್ ಕ್ಯಾಪ್ ಶೇಕಡಾ 0.35ರಷ್ಟು ಹೆಚ್ಚಳ ದಾಖಲಿಸಿದೆ. ವಲಯವಾರು ನಿಫ್ಟಿ ಮೆಟಲ್ ಶೇ. 1.55ರಷ್ಟು ಏರಿಕೆ ಕಂಡರೆ, ತೈಲ ಮತ್ತು ಅನಿಲ ಶೇ. 0.64ರಷ್ಟು ಹೆಚ್ಚಾಗಿತ್ತು.

ಇದನ್ನೂ ಓದಿ: Food Poisoning: ವಿಷ ಬೆರೆತ ಮಟನ್‌ ಸೇವಿಸಿ ಒಂದೇ ಕುಟುಂಬದ ನಾಲ್ವರ ಘೋರ ಸಾವು; ಆತ್ಮಹತ್ಯೆ ಶಂಕೆ

Continue Reading

ದೇಶ

Wayanad Landslide: ವಯನಾಡಿನ ಭೀಕರ ದೃಶ್ಯ ಸೆರೆ ಹಿಡಿದ ಇಸ್ರೋ; ಭೂಕುಸಿತಕ್ಕೂ ಮುನ್ನ ಮತ್ತು ನಂತರ ಫೋಟೋ ರಿಲೀಸ್‌

Wayanad Landslide: ಹೈ-ರೆಸಲ್ಯೂಷನ್‌ ಉಪಗ್ರಹ ಚಿತ್ರಗಳನ್ನು ರಿಲೀಸ್‌ ಮಾಡಿರುವ ಇಸ್ರೋ, ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ತೋರಿಸಿದೆ. ಉಪಗ್ರಹ ಚಿತ್ರಗಳ ಪ್ರಕಾರ ಸಮುದ್ರ ಮಟ್ಟದಿಂದ 1500 ಮೀಟರ್‌ ಎತ್ತರದಲ್ಲಿರುವ ಗುಡ್ಡದ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದೆ. ಇನ್ನು ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

VISTARANEWS.COM


on

Wayanad Landslide
Koo

ವಯನಾಡು: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತರ ಸಂಖ್ಯೆ ಈಗ 300ದಾಟಿದೆ. ಇನ್ನು ನಾಪತ್ತೆಯಾದವರ ಸಂಖ್ಯೆ ಅದೆಷ್ಟೋ.. ಈ ನಡುವೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಹೈ-ರೆಸಲ್ಯೂಷನ್‌ ಉಪಗ್ರಹ ಚಿತ್ರಗಳನ್ನು ರಿಲೀಸ್‌ ಮಾಡಿರುವ ಇಸ್ರೋ, ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ತೋರಿಸಿದೆ. ಉಪಗ್ರಹ ಚಿತ್ರಗಳ ಪ್ರಕಾರ ಸಮುದ್ರ ಮಟ್ಟದಿಂದ 1500 ಮೀಟರ್‌ ಎತ್ತರದಲ್ಲಿರುವ ಗುಡ್ಡದ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದೆ. ಇನ್ನು ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

ಇನ್ನು ಉಪಗ್ರಹದ ಮಾಹಿತಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಅದೇ ಸ್ಥಳದಲ್ಲೇ ಭೂ ಕುಸಿತವಾಗಿದೆ ಎಂದು ಹೇಳಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್‌ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ. ಭಾರೀ ದೊಡ್ಡ ಪ್ರಮಾಣದ ಕುಸಿತ ಎಂಬುದು ಚಿತ್ರಗಳ ಮೂಲಕ ಸ್ಪಷ್ಟವಾಗಿದೆ.

ಭೂಕುಸಿತ ವಿನಾಶವನ್ನು ಸೆರೆಹಿಡಿಯಲು, ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹ ಮತ್ತು ಮೋಡದ ಹೊದಿಕೆಯನ್ನು ಭೇದಿಸಬಲ್ಲ RISAT ಉಪಗ್ರಹದ ಸಹಾಯದಿಂದ ಇಂ ಚಿತ್ರವನ್ನು ಸೆರೆ ಹಿಡಿದಿದೆ.

ವಯನಾಡಿನ ಹಲವಾರು ಸ್ಥಳಗಳಲ್ಲಿ ರಕ್ಷಣಾ ತಂಡಗಳು ಗುರುವಾರ ರಕ್ಷಣಾ ಕಾರ್ಯವನ್ನು ಪುನರಾರಂಭಿಸಿವೆ. 1600 ಕ್ಕೂ ಹೆಚ್ಚು ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಚಿವ ಕೆ ರಾಜನ್ ಹೇಳಿದ್ದಾರೆ. ನದಿಗಳಲ್ಲಿ, ಬೆಟ್ಟ ಕುಸಿತದ ಅವಶೇಷಗಳ ಅಡಿಯಲ್ಲಿ ಶವಗಳು ಸಿಗುತ್ತಿವೆ. ಇದರ ಮಧ್ಯೆಯೇ, ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬಗಳ ಜತೆ ಅವರು ಮಾತುಕತೆ ನಡೆಸಿದ್ದಾರೆ.

ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.

ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು

ಇದನ್ನೂ ಓದಿ: Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

Continue Reading

ದೇಶ

Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

Yogi Adityanath: ಪ್ರಕರಣದ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದ್ದು, ಅವರನ್ನು ಪವನ್‌ ಯಾದವ್‌ ಮತ್ತು ಮೊಹಮ್ಮದ್‌ ಅರ್ಬಾಜ್‌ ಎಂದು ಗುರುತಿಸಲಾಗಿದೆ. ಇವರಾ ನಿಮ್ಮ ಸದ್ಭಾವನೆಯ ವ್ಯಕ್ತಿಗಳು? ಇವರಿಗೆ ಸದ್ಭಾವನೆ ರೈಲು ಓಡಿಸಬೇಕೆ? ಚಿಂತಿಸಬೇಡಿ ಇಂತವರಿಗೆ ಇನ್ನು ಮುಂದೆ ಬುಲೆಟ್‌ ರೈಲು ಓಡಿಸಲಾಗುವುದು ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

VISTARANEWS.COM


on

Yogi Adityanath
Koo

ಲಖನೌ: ಎರಡು ದಿನಗಳ ಹಿಂದೆಯಷ್ಟೇ ನಡುರಸ್ತೆಯಲ್ಲಿ ಯುಕವರ ಗುಂಪೊಂದು ನೀರು ಎರಚಿ ಕಿರುಕುಳ ಕೊಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ(Uttar Pradesh Chief Minister) ಯೋಗಿ ಆದಿತ್ಯಾನಾಥ್‌(Yogi Adityanath) ಘಟನಾ ಸ್ಥಳ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಯ ಎಲ್ಲಾ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಲಖನೌದಲ್ಲಿ ನಡೆದ ಈ ಘಟನೆ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಯೋಗಿ, ಇನ್ನು ಮುಂದೆ ʼಬುಲೆಟ್‌ ರೈಲುʼ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದ್ದು, ಅವರನ್ನು ಪವನ್‌ ಯಾದವ್‌ ಮತ್ತು ಮೊಹಮ್ಮದ್‌ ಅರ್ಬಾಜ್‌ ಎಂದು ಗುರುತಿಸಲಾಗಿದೆ. ಇವರಾ ನಿಮ್ಮ ಸದ್ಭಾವನೆಯ ವ್ಯಕ್ತಿಗಳು? ಇವರಿಗೆ ಸದ್ಭಾವನೆ ರೈಲು ಓಡಿಸಬೇಕೆ? ಚಿಂತಿಸಬೇಡಿ ಇಂತವರಿಗೆ ಇನ್ನು ಮುಂದೆ ಬುಲೆಟ್‌ ರೈಲು ಓಡಿಸಲಾಗುವುದು ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಮಹಿಳೆಯರಿಗೆ ಕಿರುಕುಳ ನೀಡುವವರನ್ನು ಬಿಡುವುದಿಲ್ಲ ಎಂದು ಹೇಳಿದ ಸಿಎಂ ಯೋಗಿ, ಮಹಿಳೆಯರ ರಕ್ಷಣೆಯಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. “ಮಹಿಳೆಯರ ಸುರಕ್ಷತೆಯು ನಮಗೆ ಪ್ರಮುಖ ಸಮಸ್ಯೆಯಾಗಿದೆ ಮತ್ತು ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ನಾವು ಪ್ರತಿಯೊಬ್ಬ ಸಹೋದರಿ ಮತ್ತು ಮಗಳಿಗೆ ಭರವಸೆ ನೀಡಿದ್ದೇವೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಗಂಭೀರವಾಗಿ ತೆಗೆದುಕೊಂಡ ಪರಿಣಾಮ ಇಡೀ ಚೌಕಿಯನ್ನು ಅಮಾನತುಗೊಳಿಸಲಾಗಿದೆ, ಇನ್ಸ್‌ಪೆಕ್ಟರ್ ಅಮಾನತು ಮಾಡಲಾಗಿದೆ, ಎಎಸ್ಪಿ, ಡಿಸಿಪಿ, ಎಲ್ಲರನ್ನೂ ತೆಗೆದುಹಾಕಲಾಗಿದೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಏನಿದು ಘಟನೆ?

ಉತ್ತರ ಪ್ರದೇಶದ ಲಕ್ನೋದ ತಾಜ್ ಹೋಟೆಲ್ ಸೇತುವೆಯ ಬಳಿ ಈ ಘಟನೆ ನಡೆದಿದ್ದು, ಮೊಣಕಾಲು ಆಳದ ನೀರಿನಲ್ಲಿ ಮಳೆಯ ನೀರಿನಲ್ಲಿ ಎಂಜಾಯ್ ಮಾಡುತ್ತಿದ್ದ ಪುರುಷರ ಗುಂಪೊಂದು ಅದೇ ಮಾರ್ಗದಲ್ಲಿ ಬಂದ ಬೈಕ್​ನಲ್ಲಿ ಕುಳಿತಿದ್ದ ಪುರುಷ ಮತ್ತು ಯುವತಿಗೆ ಆ ಮಳೆನೀರನ್ನು ಎರಚಿ ಕಿರುಕುಳ ನೀಡಿದ್ದಾರೆ. ಆ ಇಬ್ಬರ ಮೈ ಪೂರ್ತಿ ಒದ್ದೆಯಾಗಿ ಅವರು ತಮ್ಮನ್ನು ಬಿಡುವಂತೆ ಮನವಿ ಮಾಡಿದರೂ ಬಿಡದೆ ಕಿಚಾಯಿಸಿದ್ದಾರೆ. ಇನ್ನೂ ವಿಪರ್ಯಾಸವೆಂದರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಮನೆಯ ಸಮೀಪದಲ್ಲೇ ಈ ಘಟನೆ ನಡೆದಿದೆ.

ಬೈಕ್​ನಲ್ಲಿ ಬಂದ ಇಬ್ಬರ ಮೇಲೆ ಮಳೆ ನೀರು ಎರಚಿದ ಪುರುಷರು ಆ ಬೈಕ್ ಅನ್ನು ಹಿಂಬದಿಯಿಂದ ಎಳೆಯಲು ಆರಂಭಿಸಿದರು. ಇದರಿಂದ ಆ ವ್ಯಕ್ತಿ ಬೈಕ್ ನಿಲ್ಲಿಸಿ ಕೀ ತೆಗೆಯುತ್ತಿದ್ದಂತೆ ಬ್ಯಾಲೆನ್ಸ್ ತಪ್ಪಿ ಹಿಂದೆ ಕುಳಿತಿದ್ದ ಯುವತಿ ನೀರಿಗೆ ಬಿದ್ದಿದ್ದಾಳೆ. ಇನ್ನು ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು

Continue Reading

ದೇಶ

Rahul Gandhi: ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ 10 ಲಕ್ಷ ರೂ. ಆಫರ್;‌ ಆದರೂ ಮಾರದ ಚಮ್ಮಾರ!

Rahul Gandhi: ರಾಹುಲ್‌ ಗಾಂಧಿ ಅವರು ಜುಲೈ 26ರಂದು ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದಾದ ಬಳಿಕ ಅವರು ಲಖನೌಗೆ ತೆರಳುವ ಮಾರ್ಗದ ಮಧ್ಯೆ ಸುಲ್ತಾನ್‌ಪುರದಲ್ಲಿರುವ ರಾಮ್‌ ಚೇಟ್‌ ಅಂಗಡಿಗೆ ತೆರಳಿದ್ದರು. ಈಗ ರಾಮ್‌ ಚೇಟ್‌ ಅವರ ಜೀವನವೇ ಬದಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅವರು ಸೆಲೆಬ್ರಿಟಿ ಆಗಿದ್ದಾರೆ.

VISTARANEWS.COM


on

Rahul Gandhi
Koo

ಲಖನೌ: ಕಾಂಗ್ರೆಸ್‌ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಜುಲೈ 26ರಂದು ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಚಪ್ಪಲಿ ಹೊಲಿಯುವ ರಾಮ್‌ ಚೇಟ್‌ (Ram Chet) ಎಂಬುವರ ಅಂಗಡಿಗೆ ಭೇಟಿ ನೀಡಿದ್ದರು. ಸುಲ್ತಾನ್‌ಪುರದಲ್ಲಿರುವ ಚಪ್ಪಲಿ ಅಂಗಡಿಗೆ (UP Cobbler) ರಾಹುಲ್‌ ಗಾಂಧಿ ಅವರು ಭೇಟಿ ನೀಡಿದ ಬಳಿಕ ರಾಮ್‌ ಚೇಟ್‌ ಅವರ ದಿಸೆಯೇ ಬದಲಾಗಿದೆ. ಜನ ಅವರ ಅಂಗಡಿಗೆ ಬಂದು ಚಪ್ಪಲಿ ಹೊಲಿಸಿಕೊಳ್ಳುವುದು, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಿದ್ದಾರೆ. ಇನ್ನು, ರಾಹುಲ್‌ ಗಾಂಧಿ ಅವರು ಭೇಟಿ ವೇಳೆ ಹೊಲಿದ ಚಪ್ಪಲಿಗೆ ಈಗ ಭಾರಿ ಬೇಡಿಕೆ ಉಂಟಾಗಿದೆ. ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗೆ ಉದ್ಯಮಿಯೊಬ್ಬರು 10 ಲಕ್ಷ ರೂ. ಆಫರ್‌ ನೀಡಿದ್ದಾರೆ. ಇಷ್ಟಾದರೂ ರಾಮ್‌ ಚೇಟ್‌ ಅವರು ಮಾರಾಟ ಮಾಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮಾಧ್ಯಮಗಳೊಂದಿಗೆ ರಾಮ್‌ ಚೇಟ್‌ ಮಾತನಾಡಿದ್ದು, “ರಾಹುಲ್‌ ಗಾಂಧಿ ಅವರು ನನ್ನ ಅಂಗಡಿಗೆ ಬಂದು ಹೋದ ಬಳಿಕ ನನ್ನ ಬದುಕೇ ಬದಲಾಗಿದೆ. ಕಾರು, ಬೈಕುಗಳಲ್ಲಿ ಬರುವ ಜನ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನು ರಾಹುಲ್‌ ಗಾಂಧಿ ಅವರು ಹೊಲಿದ ಚಪ್ಪಲಿಗೆ ಭಾರಿ ಬೇಡಿಕೆ ಉಂಟಾಗಿದೆ. 5 ಲಕ್ಷ ರೂ. ಕೊಡುತ್ತೇವೆ, 10 ಲಕ್ಷ ರೂ. ಕೊಡುತ್ತೇವೆ ಆ ಚಪ್ಪಲಿ ಕೊಡು ಎನ್ನುತ್ತಿದ್ದಾರೆ. ನಾನು ಆ ಚಪ್ಪಲಿ ಹೊಲಿಯಲು ಬಿಟ್ಟು ಹೋದ ಗ್ರಾಹಕನಿಗೂ ಕೊಡುವುದಿಲ್ಲ. ಚಪ್ಪಲಿಯ ಮೊತ್ತವನ್ನು ಗ್ರಾಹಕನಿಗೆ ನೀಡುತ್ತೇನೆ. ಇದನ್ನು ಮಾರಾಟ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೊಲಿಗೆ ಯಂತ್ರ ಕೊಡಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಮ್‌ ಚೇಟ್‌ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲ, ಅವರಿಗೆ ಚಪ್ಪಲಿ, ಬೂಟುಗಳನ್ನು ಹೊಲಿಯುವ ಯಂತ್ರವನ್ನು ಕೊಡಿಸಿದ್ದಾರೆ. ರಾಹುಲ್‌ ಗಾಂಧಿ ಭೇಟಿ ನೀಡಿದ ಮರುದಿನ ಅಂದರೆ ಜುಲೈ 27ರಂದು ರಾಮ್‌ ಚೇಟ್‌ ಅವರಿಗೆ ಹೊಲಿಗೆ ಯಂತ್ರ ತಲುಪಿದೆ. ಇದರಿಂದ ಅವರು ಸುಲಭವಾಗಿ ಚಪ್ಪಲಿ ಹಾಗೂ ಶೂಗಳನ್ನು ಹೊಲಿಯಲು ಸಾಧ್ಯವಾಗುತ್ತಿದೆ. ರಾಹುಲ್‌ ಗಾಂಧಿ ಭೇಟಿ ಬಳಿಕ ಅವರ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿದೆ.

ರಾಹುಲ್‌ ಗಾಂಧಿ ಅವರು ಜುಲೈ 26ರಂದು ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರ ಕೋರ್ಟ್‌ಗೆ ಹಾಜರಾಗಿದ್ದರು. ಇದಾದ ಬಳಿಕ ಅವರು ಲಖನೌಗೆ ತೆರಳುವ ಮಾರ್ಗದ ಮಧ್ಯೆ ಸುಲ್ತಾನ್‌ಪುರದಲ್ಲಿರುವ ರಾಮ್‌ ಚೇಟ್‌ ಅಂಗಡಿಗೆ ತೆರಳಿದ್ದರು. ರಾಮ್‌ ಚೇಟ್‌ ಅವರ ಅಂಗಡಿ ವ್ಯಾಪಾರ ಸೇರಿ ಹಲವು ವಿಷಯಗಳ ಕುರಿತು ಕಾಂಗ್ರೆಸ್‌ ನಾಯಕ ಮಾತನಾಡಿದ್ದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಚಪ್ಪಲಿ ಹೊಲಿದಿದ್ದರು. ಈ ಫೋಟೊ ಹಾಗೂ ವಿಡಿಯೊ ವೈರಲ್‌ ಆಗಿದ್ದವು.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

Continue Reading
Advertisement
Stock Market
ದೇಶ11 mins ago

Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

Swapnil Kusale
ಕ್ರೀಡೆ27 mins ago

Swapnil Kusale: ಕಂಚು ಗೆದ್ದ ಸ್ವಪ್ನಿಲ್ ಕುಸಾಲೆಗೆ 1 ಕೋಟಿ ಬಹುಮಾನ ಪ್ರಕಟಿಸಿದ ಶಿಂಧೆ ಸರ್ಕಾರ

raichur food poisoning 1
ಕ್ರೈಂ34 mins ago

Food Poisoning: ವಿಷ ಬೆರೆತ ಮಟನ್‌ ಸೇವಿಸಿ ಒಂದೇ ಕುಟುಂಬದ ನಾಲ್ವರ ಘೋರ ಸಾವು; ಆತ್ಮಹತ್ಯೆ ಶಂಕೆ

Paris Olympics
ಕ್ರೀಡೆ1 hour ago

Paris Olympic: ಒಲಿಂಪಿಕ್ಸ್​ ಪದಕ ವಿಜೇತರಿಗೆ ಸಿಗಲಿದೆ ದುಬಾರಿ ಬೆಲೆಯ ಕಾರು

Wayanad Landslide
ದೇಶ1 hour ago

Wayanad Landslide: ವಯನಾಡಿನ ಭೀಕರ ದೃಶ್ಯ ಸೆರೆ ಹಿಡಿದ ಇಸ್ರೋ; ಭೂಕುಸಿತಕ್ಕೂ ಮುನ್ನ ಮತ್ತು ನಂತರ ಫೋಟೋ ರಿಲೀಸ್‌

14 hours work it jobs
ಪ್ರಮುಖ ಸುದ್ದಿ1 hour ago

14 Hours Work: ಒಂದೆಡೆ ಐಟಿ ಉದ್ಯೋಗಿಗಳಿಂದ ಬೃಹತ್ ಪ್ರತಿಭಟನೆ, ಇನ್ನೊಂದೆಡೆ ಐಟಿ ಕಂಪನಿಗಳ ಮುಂದೆ ಕೆಲಸಕ್ಕಾಗಿ ಮೈಲುಗಟ್ಟಲೆ ಕ್ಯೂ!

India vs Sri Lanka
ಕ್ರೀಡೆ2 hours ago

India vs Sri Lanka: ಲಂಕಾ ಸರಣಿಯಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ರೋಹಿತ್​

police firing hubli robber
ಕ್ರೈಂ2 hours ago

Police Firing: ದರೋಡೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

Phone Storage Issue
ಗ್ಯಾಜೆಟ್ಸ್2 hours ago

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

IND vs SL: When and where to watch ODI, squads, predicted XI, venues
ಕ್ರೀಡೆ2 hours ago

IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ22 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ22 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌