ದೇಶ
PM Modi US Visit: ಮೋದಿ ಭಾರತದಲ್ಲಿ ಭಯವಿಲ್ಲದೆ ಬದುಕುತ್ತಿದ್ದೇನೆ: ಅಮೆರಿಕ ಸಂಸದೆಗೆ ಮುಸ್ಲಿಂ ನಾಯಕನ ತಿರುಗೇಟು
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಉಪಾಧ್ಯಕ್ಷ ಅತೀಫ್ ರಶೀದ್, ʼʼನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ಭಾರತದ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿʼʼ ಎಂದು ಕಠಿಣವಾಗಿ ಟ್ವೀಟ್ ಮಾಡಿದ್ದಾರೆ.
ನ್ಯೂಯಾರ್ಕ್: ಪ್ರಧಾನಿ ಮೋದಿಯವರ (Narendra Modi) ಆಡಳಿತದಲ್ಲಿ ನಾನು ಭಯವಿಲ್ಲದೆ ಮುಕ್ತವಾಗಿ ಬದುಕುತ್ತಿದ್ದೇನೆ ಎಂದು ಭಾರತೀಯ ಮುಸ್ಲಿಂ ನಾಯಕರೊಬ್ಬರು ಅಮೆರಿಕ ಸಂಸದೆಯೊಬ್ಬಳ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ (PM Modi US Visit) ಹಿನ್ನೆಲೆಯಲ್ಲಿ ಈ ಟೀಕೆ- ತಿರುಗೇಟು ನಡೆದಿದೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನುದ್ದೇಶಿಸಿ ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ಇದನ್ನು ಯುಎಸ್ ಡೆಮಾಕ್ರಟಿಕ್ ಪಾರ್ಟಿಯ ಇಬ್ಬರು ಮುಸ್ಲಿಂ ಕಾಂಗ್ರೆಸ್ ಸದಸ್ಯೆಯರು, ʼʼಮೋದಿ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆʼ’ ಎಂದು ಹೇಳಿ ಬಹಿಷ್ಕರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಉಪಾಧ್ಯಕ್ಷ ಅತೀಫ್ ರಶೀದ್, ʼʼನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ಭಾರತದ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿʼʼ ಎಂದು ಕಠಿಣವಾಗಿ ಟ್ವೀಟ್ ಮಾಡಿದ್ದಾರೆ.
I belong from religious Minority Of India but I live freely with my religious freedom and religious identity in Prime Minister Narendra Modi's India, I have equal share in every resource here, I have the freedom to speak whatever I want in India.
— Atif Rasheed (@AtifRasheed80) June 21, 2023
I also have the freedom to write… https://t.co/Op2f7W95OS
“ನಾನು ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ಪಂಗಡಕ್ಕೆ ಸೇರಿದವನು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಭಾರತದಲ್ಲಿ ನನ್ನ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಗುರುತಿನೊಂದಿಗೆ ನಾನು ಮುಕ್ತವಾಗಿ ಬದುಕುತ್ತಿದ್ದೇನೆ. ಇಲ್ಲಿನ ಪ್ರತಿಯೊಂದು ಸಂಪನ್ಮೂಲದಲ್ಲಿಯೂ ನನಗೆ ಸಮಾನ ಪಾಲು ಇದೆ. ಭಾರತದಲ್ಲಿ ನನಗೆ ಬೇಕಾದುದನ್ನು ಮಾತನಾಡಲು ಪೂರ್ಣ ಸ್ವಾತಂತ್ರ್ಯವಿದೆ” ಎಂದು ರಶೀದ್ ಟ್ವೀಟ್ ಮಾಡಿದ್ದಾರೆ.
“ಭಾರತದಲ್ಲಿ ನನಗೆ ಬೇಕಾದುದನ್ನು ಬರೆಯುವ ಸ್ವಾತಂತ್ರ್ಯ ಇದೆ. ನಿಮ್ಮ ದ್ವೇಷದ ಅಜೆಂಡಾದ ಅಡಿಯಲ್ಲಿ ನೀವು ನನ್ನ ಭಾರತದ ಬಗ್ಗೆ ತಪ್ಪು ಚಿತ್ರವನ್ನು ತೋರಿಸುತ್ತಿದ್ದೀರಿ. ನಿಮ್ಮ ನಾಲಿಗೆಯಿಂದ ವಿಷ ಉಗುಳುವುದನ್ನು ನಿಲ್ಲಿಸಿ” ಎಂದು ಅತೀಫ್ ರಶೀದ್ ಸೇರಿಸಿದ್ದಾರೆ.
ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಎಂಬ ಯುಎಸ್ ಕಾಂಗ್ರೆಸ್‌ನ ಸದಸ್ಯೆಯರು ಜಂಟಿ ಅಧಿವೇಶನದಲ್ಲಿ ಮೋದಿ ಭಾಷಣವನ್ನು ಬಹಿಷ್ಕರಿಸಿದ್ದಾರೆ. “ಪ್ರಧಾನಿ ಮೋದಿಯವರ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳಿಗೆ ಕುಮ್ಮಕ್ಕು ತುಂಬಿದೆ. ಪತ್ರಕರ್ತರು/ಮಾನವ ಹಕ್ಕುಗಳ ಪ್ರತಿಪಾದಕರನ್ನು ದಮನಿಸಿದೆ. ನಾನು ಮೋದಿಯವರ ಭಾಷಣಕ್ಕೆ ಹಾಜರಾಗುವುದಿಲ್ಲ. ಮೋದಿಯವರ ದಮನದ ದಾಖಲೆಗಳನ್ನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚಿಸಲಿದ್ದೇನೆ” ಎಂದು ಇಲ್ಹಾನ್ ಒಮರ್ ಹೇಳಿದ್ದರು.
“ನಮ್ಮ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ದಮನ, ಪತ್ರಕರ್ತರನ್ನು ಸೆನ್ಸಾರ್ ಮಾಡಿರುವುದು ಮುಂತಾದ ಅವರ ಸುದೀರ್ಘ ಇತಿಹಾಸ ಸ್ವೀಕಾರಾರ್ಹವಲ್ಲ. ನಾನು ಮೋದಿ ಅವರ ಭಾಷಣವನ್ನು ಬಹಿಷ್ಕರಿಸುತ್ತೇನೆ” ಎಂದು ರಶೀದಾ ತ್ಲೈಬ್ ಬರೆದಿದ್ದರು.
ಇದನ್ನೂ ಓದಿ: PM Modi US Visit: ನರೇಂದ್ರ ಮೋದಿ ಜತೆಗೆ ಜೋ ಬೈಡೆನ್ ಔತಣಕೂಟ
ಆಟೋಮೊಬೈಲ್
Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ದೆಹಲಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.
ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
ದೇಶ
Viral Video: ಗಣೇಶ ಪೆಂಡಾಲ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಂತೆ ಹಾರಿ ಹೋಯ್ತು ಯುವಕನ ಪ್ರಾಣ
Viral Video: ಎಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಈ ಸಡಗರದ ಮಧ್ಯೆಯೂ ಅಲ್ಲಲ್ಲಿ ದುರಂತಗಳೂ ನಡೆದಿವೆ. ಗಣೇಶ ಚಪ್ಪರದಲ್ಲಿ ನೃತ್ಯ ಮಾಡುತ್ತಿದ್ದ 26ರ ಹರೆಯದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸದ್ಯ ವೈರಲ್ ಆಗುತ್ತಿದೆ.
ಹೈದರಾಬಾದ್: ಎಲ್ಲೆಡೆ ಅದ್ಧೂರಿ ಗಣೇಶ ಚತುರ್ಥಿ ಆಚರಿಸಲಾಗಿದೆ. ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ನೆರವೇರಿಸಲಾಗಿದೆ. ಹಲವೆಡೆ ವಿಜೃಂಭಣೆಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಿದೆ. ಈ ಮಧ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಮಂಟಪದಲ್ಲಿ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟಿದ್ದು, ವಿಡಿಯೊ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ಧರ್ಮಾವರಂನಲ್ಲಿ ನಡೆದಿದೆ.
ಮಾರುತಿ ನಗರದಲ್ಲಿ ಸೆಪ್ಟಂಬರ್ 20ರಂದು ಈ ಘಟನೆ ನಡೆದಿದ್ದು, ಪ್ರಸಾದ್ ಎನ್ನುವ ಯುವಕ ಗಣೇಶನ ಮೂರ್ತಿ ಮುಂದೆ ನೃತ್ಯ ಮಾಡುತ್ತಿದ್ದಂತೆ ಕುಸಿದು ಬಿದ್ದಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲೇ ಅವನು ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಸಾಲು ಸಾಲು ದುರಂತ
ಇದೇ ರೀತಿಯ ದುರಂತ ಒಡಿಶಾದಲ್ಲೂ ವರದಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್ ಶಾಕ್‌ನಿಂದ ಇಬ್ಬರು ಅಸುನೀಗಿದ್ದಾರೆ. ಗಣಪತಿ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಅವರು ಭಾಗವಹಿಸಿದ್ದರು. ಕಟಕ್‌ನ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಲಾರಿಯಲ್ಲಿ ಗಣೇಶ ಮೂರ್ತಿಯನ್ನು ತರುವ ವೇಳೆ ವಿದ್ಯುತ್ ಆಘಾತದಿಂದ ಜೀವ ಕಳೆದುಕೊಂಡಿದ್ದಾನೆ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
11 ಕೆವಿ ವಿದ್ಯುತ್ ಪ್ರವಹಿಸುತ್ತಿರುವ ವೈರ್ ಸ್ಪರ್ಶಿಸಿ ನಾರಜ್ ಪ್ರದೇಶದ 3 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಮೂವರ ಪೈಕಿ ರಿಹಾನ್ ಭಗ್ವಾನ್ ಸಾವೆಲ್ ಎನ್ನುವ ವಿದ್ಯಾರ್ಥಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
గణేష్ మండపం దగ్గర డాన్స్ చేస్తూ గుండెపోటుతో మృతి
— Telugu Scribe (@TeluguScribe) September 21, 2023
శ్రీ సత్యసాయి జిల్లా – ధర్మవరంలో
ప్రసాద్ (26) అనే యువకుడు బుధవారం రాత్రి గణేష్ మండపం వద్ద డాన్స్ చేస్తూ గుండెపోటుతో ఒక్కసారిగా కుప్పకూలి మృతి చెందాడు. pic.twitter.com/RUqf1mzRMR
ಇದನ್ನೂ ಓದಿ: Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ವೈರಲ್ ಆದ ವಿಡಿಯೊದಲ್ಲೇನಿದೆ?
ಆಂಧ್ರ ಪ್ರದೇಶದ ಮಾರುತಿ ನಗರದ ಗಣೇಶ ಚಪ್ಪರದಲ್ಲಿ ಇಬ್ಬರು ಯುವಕರು ನೃತ್ಯ ಮಾಡುತ್ತಿದ್ದರು. ಆ ಪೈಕಿ ಒಬ್ಬಾತ ಕೈಯಲ್ಲಿ ಎಲೆಗಳ ಗೊಂಚಲನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದ. ಹಾಡಿನ ತಾಳಕ್ಕೆ ತಕ್ಕಂತೆ ಮೈ ಕುಣಿಸುತ್ತಿದ್ದ ಆತ ಚಪ್ಪರದ ಕಂಬದ ಬಳಿಗೆ ಬಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ. ಕೂಡಲೇ ಅಲ್ಲಿದ್ದವರು ಆತನಿಗೆ ಉಪಚಾರ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು 1 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಯುವ ಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ದಿನೇ ದಿನೇ ಯುವ ಜನರು ಹೃದಯದ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ. ಇದಕ್ಕೆ ಸೂಕ್ತ ಕಾರಣ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಅದರಲ್ಲೂ ಆರೋಗ್ಯವಂತರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಹಲವರ ನಿದ್ದೆಗೆಡಿಸಿದೆ. ಸ್ಯಾಂಡಲ್‌ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ಚಿರಂಜೀವಿ ಸರ್ಜಾ, ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದೇಶ
Viral Video: ಶೂ ಒಳಗೆ ಕಾಲಿಡುವ ಮುನ್ನ ಎಚ್ಚರ; ನಾಗರಹಾವು ಕುಳಿತಿರುತ್ತದೆ! ಇಲ್ಲಿದೆ ವಿಡಿಯೊ
Viral Video: ಹಾವುಗಳು ತಮ್ಮ ಶರೀರವನ್ನು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳಬಲ್ಲವು. ಅದೇ ಕಾರಣಕ್ಕೆ ಅವು ಎಷ್ಟು ಚಿಕ್ಕ ಜಾಗವಾದರೂ ಅಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ಕೂಡ ಅದನ್ನೇ ಸೂಚಿಸಸುತ್ತಿದೆ. ಶೂ ಒಂದರಲ್ಲಿ ಹಾವು ಕಂಡು ಬಂದಿದ್ದು, ನೆಟ್ಟಿಗರು ಹೌಹಾರಿದ್ದಾರೆ.
ನವದೆಹಲಿ: ʼನಾಗರ ಹಾವೇ, ಹಾವೊಳು ಹೂವೆʼ ಎನ್ನುವ ಪದ್ಯ ಹೇಳಿಕೊಂಡೇ ಬೆಳೆದವರು ನಾವೆಲ್ಲ. ಆದರೆ ಹಾವು (Snake) ಎಂದರೆ ಯಾರಿಗೆ ತಾನೇ ಭಯ ಇಲ್ಲ. ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಈ ಉರಗ ಕಂಡರೆ ಮಾರು ದೂರ ಹಾರಿ ಹೋಗುವವರೇ ಅಧಿಕ. ಚಿಕ್ಕಂದಿನಿಂದಲೇ ಇವು ಅಪಾಯಕಾರಿ ಎನ್ನುವ ಭಾವನೆ ನಮ್ಮಲ್ಲಿ ಬೇರು ಬಿಟ್ಟಿರುವುದೇ ಇದಕ್ಕೆ ಕಾರಣ. ಇವು ತಮ್ಮ ಶರೀರವನ್ನು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಇವು ಸಿಗುವ ಸಣ್ಣ ಸ್ಥಳವನ್ನೂ ತಮ್ಮ ಅಡಗು ತಾಣವನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತವೆ. ಕೆಲವೊಮ್ಮೆ ಆಹಾರ ಹುಡುಕಿಕೊಂಡು ಮನೆಯೊಳಗೂ ಲಗ್ಗೆ ಇಡುತ್ತವೆ. ಮಾತ್ರವಲ್ಲ ಹಾವುಗಳು ಪೈಪ್, ವಾಹನ, ಶೂ ಒಳಗೆ ಅಡಗಿ ಕೂರುತ್ತವೆ. ಇದೀಗ ಹಾವೊಂದು ಶೂ ಒಳಗಿನಿಂದ ಹೊರ ಬರುವ ದೃಶ್ಯ ವೈರಲ್ (Viral video) ಆಗಿದೆ.
ಈ ವಿಡಿಯೊದಲ್ಲಿ ಹಾವೊಂದು ಶೂ ಒಳಗೆ ಅಡಗಿ ಕುಳಿತುಕೊಳ್ಳುವ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಶೂ ಎತ್ತಿ ಕ್ಯಾಮರಾದ ಹತ್ತಿರ ತಂದು ಹಾವು ಹೇಗೆ ಅದರೊಳಗೆ ಅಡಗಿ ಕೂತಿದೆ ಎನ್ನುವುದನ್ನು ತೋರಿಸಿದ್ದಾರೆ. ಇದನ್ನು ನೋಡಿ ಅನೇಕರು ಕೂತಲ್ಲಿಯೇ ಬೆಚ್ಚಿ ಬಿದ್ದಿದ್ದಂತೂ ಸುಳ್ಳಲ್ಲ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್
ಮೊದಲ ಬಾರಿಗೆ ಇಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಈ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ 2.53 ಲಕ್ಷ ಮಂದಿ ಈ ವಿಡಿಯೊವನ್ನು ನೋಡಿದ್ದಾರೆ ಮತ್ತು ಸುಮಾರು 8,300 ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಜತೆಗೆ ತರಹೇವಾರಿ ಕಮೆಂಟ್‌ಗಳು ಕಾಣಿಸಿಕೊಂಡಿವೆ.
ನೆಟ್ಟಿಗರು ಏನಂತಾರೆ?
ʼಬಿ ಸೇಫ್ ಬಿ ಅಲರ್ಟ್ʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ʼಹೊಸ ಭಯ ಹುಟ್ಟಿಕೊಂಡಿದೆʼ ಎಂದು ಒಬ್ಬರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ʼಹುಷಾರಾಗಿರಿʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನೋಡುಗರಲ್ಲಿ ಈ ವೀಡಿಯೋ ಭಯವನ್ನು ಹುಟ್ಟು ಹಾಕಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಇನ್ನು ಮುಂದೆ ಶೂ ಧರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಲಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಎಲ್ಲವೂ ವಿಷಕಾರಿಯಲ್ಲ
ನಮ್ಮ ಪರಿಸರದ ಸಮತೋಲನದಲ್ಲಿ ಹಾವುಗಳ ಪಾತ್ರ ಮುಖ್ಯ. ಬೆಳೆಗಳನ್ನು ನಾಶ ಮಾಡುವ, ಅನೇಕ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುವ ಇಲಿ, ಹೆಗ್ಗಣ ಮುಂತಾದ ಪ್ರಾಣಿಗಳ ಸಂಖ್ಯೆಯನ್ನು ಇವು ನಿಯಂತ್ರಿಸುತ್ತವೆ. ಅದೇ ರೀತಿ ಎಲ್ಲಾ ಹಾವುಗಳು ವಿಷಕಾರಿಯಲ್ಲ ಎನ್ನುವುದು ವಿಶೇಷ. ಹೀಗಾಗಿ ಹಾವು ಕಂಡ ಕೂಡಲೇ ಅವು ಅಪಾಯಕಾರಿಯೆಂದು ಹೊಡೆದು ಕೊಲ್ಲುವುದು ತಪ್ಪು ಎಂದು ಪರಿಸರ ತಜ್ಞರು ಹೇಳುತ್ತಾರೆ. ನೂರಾರು ತಳಿಯ ಉರಗಗಳ ಪೈಕಿ ಬೆರಳೆಣಿಕೆಯ ಹಾವುಗಳಷ್ಟೇ ವಿಷ ಹೊಂದಿವೆ. ಬೇಸರದ ಸಂಗತಿ ಎಂದರೆ ಆವಾಸ ಸ್ಥಾನ ನಾಶದಿಂದ ನೇಕ ಉರಗ ಪ್ರಬೇಧಗಳ ಸಂತತಿ ಈಗ ನಾಶವಾಗುವ ಭೀತಿ ಎದುರಿಸುತ್ತಿವೆ. ಹಾವುಗಳು ಭೀತಿಯಿಂದ ಕಡಿಯುತ್ತವೆಯೇ ಹೊರತು ಸುಮ್ಮನೆ ಮನುಷ್ಯನ ತಂಟೆಗೆ ಬರುವುದಿಲ್ಲ ಎಂದು ಉರಗ ತಜ್ಞರು ಎಷ್ಟು ಎಚ್ಚರಿಸಿದರೂ ಅದನ್ನು ಹೊಡೆದು ಕೊಲ್ಲುವ ಪ್ರವೃತ್ತಿ ಇನ್ನೂ ಕಡಿಮೆಯಾಗಿಲ್ಲ.
ದೇಶ
India Canada Row : ಕೆನಡಾದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರನಿಗೆ ಎನ್ಐಎ ಟಕ್ಕರ್
ಕೆನಡಾದಲ್ಲಿ (India Canada Row) ಕುಳಿತು ಹಿಂದೂಗಳಿಗೆ ಬೆದರಿಕೆ ಹಾಕಿದ ಪನ್ನುನ್ ಯಾರು ಮತ್ತು ಎನ್ಐಎ ಆತನ ಮೇಲೆ ಏನು ಕ್ರಮ ಕೈಗೊಂಡಿದೆ ಎಂಬ ವಿವರ ಇಲ್ಲಿದೆ.
ನವದೆಹಲಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಭಾರತ ಹಾಗೂ ಕೆನಡಾದ ಸಂಬಂಧ (India Canada Row)) ಹದಗೆಟ್ಟಿವೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರರ ನಿಜಬಣ್ಣ ಬಯಲಾಗುತ್ತಿದೆ. ಅವರು ಭಾರತಕ್ಕೆ ಅಪಾಯಕಾರಿ ಹಾಗೂ ಹಿಂದೂಗಳ ವಿರುದ್ಧ ಅಪಾರ ದ್ವೇಷ ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ. ನಿಜ್ಜರ್ ನಿಕಟವರ್ತಿ ಹಾಗೂ ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದ ನಿವಾಸಿ ಗುರ್ಪತ್ವಂತ್ ಸಿಂಗ್ ಪನ್ನುನ್ ಕೆನಡಾದಲ್ಲಿರುವ ಹಿಂದೂಗಳಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಕುಕೃತ್ಯ ಬಯಲಿಗೆ ಬರುತ್ತಿದ್ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆತನಿಗೆ ಟಕ್ಕರ್ ಕೊಟ್ಟಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), 1967 ರ ಸೆಕ್ಷನ್ 33 (5) ರ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರ್ಪತ್ವಂತ್ ಸಿಂಗ್ ಪನ್ನುನ್ಗೆ ಸೇರಿದ ಚಂಡೀಗಢದಲ್ಲಿನ ಮನೆ ಮತ್ತು ಅಮೃತಸರದ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಆತನಿಗೆ ಭಾರತದ ಬಾಗಿಲನ್ನು ಸಂಪೂರ್ಣ ಬಂದ್ ಮಾಡುವ ಜತೆಗೆ ಆತನಿಗೆ ಇಲ್ಲಿಂದ ಒಂದು ಪೈಸೆಯೂ ದೊರೆಯದಂತೆ ಮಾಡಿದೆ.
ನಿಜ್ಜರ್ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡಿ ಬಿಟ್ಟಿದ್ದ ಪನ್ನುನ್ ಕೆನಡಾದಲ್ಲಿರುವ ಹಿಂದೂಗಳ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಆ ವಿಡಿಯೊಗೆ ಅಲ್ಲಿಯೂ ವಿರೋಧ ವ್ಯಕ್ತಗೊಂಡಿವೆ. ಆದರೆ ಆತ ನಿಧಾನಕ್ಕೆ ಬಾಲ ಬಿಚ್ಚುತ್ತಿದ್ದಂತೆ ಭಾರತದ ತನಿಖಾ ಸಂಸ್ಥೆಗಳು ಆತನ ಬಾಲ ಕಟ್ ಮಾಡಲು ಮುಂದಾಗಿದೆ.
ಗುರುಪತ್ವಂತ್ ಸಿಂಗ್ ಪನ್ನುನ್ ಯಾರು?
2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಕರೆಯಲಾದ ಪನ್ನುನ್, ಯುಎಸ್ ಮೂಲದ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜಿ) ಗುಂಪಿನ ಸ್ಥಾಪಕರಲ್ಲಿ ಒಬ್ಬ. ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿದ್ದ ಆತ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಜತೆ ನಿಕಟ ಸಂಬಂಧ ಹೊಂದಿದ್ದ ಎಂದು ವರದಿಯಾಗಿದೆ, ನಿಜ್ನರ್ ಹತ್ಯೆಯ ಹಿಂದೆ ಭಾರತ ಸರ್ಕಾರದವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಪನ್ನುನ್ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕಿದ್ದರ. ಪನ್ನುನ್ ಮೇಲೆ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪಗಳು ಸೇರಿದಂತೆ 2017 ರಿಂದ ಪನ್ನುನ್ ವಿರುದ್ಧ 22 ಪ್ರಕರಣಗಳು ದಾಖಲಾಗಿವೆ.
ತನಿಖಾ ಸಂಸ್ಥೆ ದಾಖಲಿಸಿರುವ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಂಟೆಡ್ ಗ್ಯಾಂಗ್ಸ್ಟರ್ಗಳ ಪಟ್ಟಿಯನ್ನು ಎನ್ಐಎ ಬುಧವಾರ ಬಿಡುಗಡೆ ಮಾಡಿದೆ. ಲಾರೆನ್ಸ್ ಬಿಷ್ಣೋಯ್, ಜಸ್ದೀಪ್ ಸಿಂಗ್, ಕಲಾ ಜತೇರಿ, ಅಲಿಯಾಸ್ ಸಂದೀಪ್, ವೀರೇಂದ್ರ ಪ್ರತಾಪ್, ಅಲಿಯಾಸ್ ಕಲಾ ರಾಣಾ, ಜೋಗಿಂದರ್ ಸಿಂಗ್, ರಾಜೇಶ್ ಕುಮಾರ್, ಅಲಿಯಾಸ್ ರಾಜು ಮೋಟಾ, ರಾಜ್ ಕುಮಾರ್, ಅಲಿಯಾಸ್ ರಾಜು ಬಸೋಡಿ, ಅನಿಲ್ ಚಿಪ್ಪಿ, ಮೊಹಮ್ಮದ್ ಶಹಬಾಜ್, ಗೋಲ್ಡಿ ಬ್ರಾರ್, ಅನ್ಸಾರಿ, ಸಚಿನ್ ಥಾಪನ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ವಿಕ್ರಮ್ಜಿತ್ ಸಿಂಗ್, ಅಲಿಯಾಸ್ ವಿಕ್ರಮ್ ಬ್ರಾರ್, ದರ್ಮನ್ ಸಿಂಗ್, ಅಲಿಯಾಸ್ ದರ್ಮನ್ಜೋತ್ ಕಹ್ಲೋನ್, ಅರ್ಷ್ದೀಪ್ ಸಿಂಗ್, ಸುರೇಂದರ್ ಸಿಂಗ್ ಅಲಿಯಾಸ್ ಚಿಕು, ದಲೀಪ್ ಕುಮಾರ್ ಅಲಿಯಾಸ್ ಭೋಲಾ ಅವರ ಹೆಸರುಗಳು ಎನ್ಐಎ ಪಟ್ಟಿಯಲ್ಲಿವೆ.
ಇದನ್ನೂ ಓದಿ : India Canada Row: ಉಗ್ರ ನಿಜ್ಜರ್ ಪರ ನಿಂತ ಜಸ್ಟಿನ್ ಟ್ರುಡೋ ವಿರುದ್ಧ ಕೆನಡಾದಲ್ಲೇ ಆಕ್ರೋಶ; ಏನಾಗ್ತಿದೆ ನೋಡಿ
ಈ ಪಟ್ಟಿಯಲ್ಲಿ ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಅತಿದೊಡ್ಡ ನಗರವಾದ ವಿನ್ನಿಪೆಗ್ನ್ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ನಿಂದ ಹತ್ಯೆಗೊಳಗಾದ ಸುಖದೂಲ್ ಸಿಂಗ್ ಅಲಿಯಾಸ್ ಸುಖಾ ಡುನೆಕೆ ಕೂಡ ಸೇರಿದ್ದಾನೆ. ಪರ್ವೀನ್ ವಾಧ್ವಾ, ಅಲಿಯಾಸ್ ಪ್ರಿನ್ಸ್, ಯುಧ್ವೀರ್ ಸಿಂಗ್, ವಿಕಾಸ್ ಸಿಂಗ್, ಲಖ್ಬೀರ್ ಸಿಂಗ್, ಅಲಿಯಾಸ್ ಲಾಂಡಾ, ಗೌರವ್ ಪಟ್ಯಾಲ್, ಅಲಿಯಾಸ್ ಸೌರವ್ ಠಾಕೂರ್, ಸುಖ್ಪ್ರೀತ್ ಸಿಂಗ್, ಅಲಿಯಾಸ್ ಬುಡ್ಡಾ, ಅಮಿತ್ ದಾಗರ್, ಕೌಶಲ್ ಚೌಧರಿ, ಆಸಿಫ್ ಖಾನ್, ನವೀನ್ ದಬಾಸ್, ಅಲಿಯಾಸ್ ನವೀನ್ ಬಾಲಿ, ಛೋಟು ರಾಮ್, ಅಲಿಯಾಸ್ ಭಟ್, ಜಗ್ಸೀರ್ ಸಿಂಗ್, ಅಲಿಯಾಸ್ ಜಗ್ಗಾ, ಸುನಿಲ್ ಬಲ್ವಾನ್, ಅಲಿಯಾಸ್ ಟಿಲ್ಲು ತಾಜ್ಪುರಿಯಾ, ಭೂಪಿಂದರ್ ಸಿಂಗ್, ಭೂಪಿಂದರ್ ಸಿಂಗ್, ಅಲಿಯಾಸ್ ಭೂಪಿ ರಾಣಾ. ಸುಖ್ದೂಲ್ ಸಿಂಗ್, ಗುರ್ಪಿಂದರ್ ಸಿಂಗ್, ನೀರಾಯ್, ಅಲಿಯಾಸ್ ಪಾಂಡಿ, ದಲೇರ್ ಸಿಂಗ್, ದಿನೇಶ್ ಶರ್ಮಾ, ಮನ್ಪ್ರೀತ್ ಸಿಂಗ್ ಪೀಟಾ, ಹರಿಯೋಮ್, ಅಲಿಯಾಸ್ ಟಿಟು, ಹರ್ಪ್ರೀತ್, ಲಖ್ವೀರ್ ಸಿಂಗ್, ಇರ್ಫಾನ್ ಅಲಿಯಾಸ್ ಚೆನು ಪೆಹಲ್ವಾನ್ ಮತ್ತು ಸನ್ನಿ ದಾಗರ್ ಪಟ್ಟಿಯಲ್ಲಿದ್ದಾರೆ.
-
ಕರ್ನಾಟಕ22 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ11 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ14 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
-
ದೇಶ21 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ಕರ್ನಾಟಕ7 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ಕ್ರಿಕೆಟ್24 hours ago
T20 World Cup : 2024 ಟಿ20 ವಿಶ್ವ ಕಪ್ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ