PM Modi | ಒಂದು ದೇಶ, ಒಂದು ಪೊಲೀಸ್​ ಸಮವಸ್ತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಚರ್ಚಿಸಲು ರಾಜ್ಯಗಳಿಗೆ ಸೂಚನೆ - Vistara News

ದೇಶ

PM Modi | ಒಂದು ದೇಶ, ಒಂದು ಪೊಲೀಸ್​ ಸಮವಸ್ತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಚರ್ಚಿಸಲು ರಾಜ್ಯಗಳಿಗೆ ಸೂಚನೆ

ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ಪೊಲೀಸ್​ ಸಶಸ್ತ್ರಪಡೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗೀಗ ಕ್ರೈಂಗಳು ಹೆಚ್ಚುತ್ತಿವೆ. ಗಡಿಗಳ ಎಲ್ಲೆ ಮೀರಿ ಕ್ರಿಮಿನಲ್​ ಕೆಲಸಗಳು ನಡೆಯುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಒಗ್ಗಟ್ಟು ಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

VISTARANEWS.COM


on

PM Narendra Modi Proposal one nation one police uniform
ಪ್ರಧಾನಿ ಮೋದಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ಆಯಾ ರಾಜ್ಯಗಳ ಜವಾಬ್ದಾರಿಯೇ ಆಗಿದ್ದರೂ, ಅದು ಇಡೀ ರಾಷ್ಟ್ರದ ಸಮಗ್ರತೆ ಮತ್ತು ಏಕತೆಗೆ ಸಂಬಂಧಪಟ್ಟ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಹರ್ಯಾಣದಲ್ಲಿ ಆಯೋಜಿಸಲಾಗಿರುವ ಚಿಂತನ ಶಿಬಿರವನ್ನು ಉದ್ದೇಶಿಸಿ ವರ್ಚ್ಯುವಲ್​ ಭಾಷಣ ಮಾಡಿದ ಅವರು, ‘ಹರ್ಯಾಣದ ಸೂರಜ್​ಕುಂಡ್​​ನಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರ ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆ’ ಎಂದೂ ಅವರು ಹೇಳಿದರು.

ರಾಜ್ಯಗಳು ಪರಸ್ಪರರಿಂದ ಕಲಿಯಬೇಕು. ಒಂದು ರಾಜ್ಯವನ್ನು ನೋಡಿ, ಮತ್ತೊಂದು ರಾಜ್ಯಗಳು ಸ್ಫೂರ್ತಿ ಪಡೆಯಬೇಕು. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಪ್ರಧಾನಿ ಮೋದಿ ಇದೇ ಹೊತ್ತಲ್ಲಿ ‘ಒಂದು ದೇಶ, ಒಂದೇ ಪೊಲೀಸ್​ ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಹೀಗೆ ರಾಷ್ಟ್ರಾದ್ಯಂತ ಎಲ್ಲ ರಾಜ್ಯಗಳ ಪೊಲೀಸರೂ ಒಂದೇ ಮಾದರಿಯವ ಯೂನಿಫಾರ್ಮ್​ ಧರಿಸುವಂತೆ ನಿಯಮ ಜಾರಿ ಸಂಬಂಧ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೂ ಚರ್ಚಿಸಬೇಕು’ ಎಂದು ಹೇಳಿದರು.

ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ಪೊಲೀಸ್​ ಸಶಸ್ತ್ರಪಡೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗೀಗ ಕ್ರೈಂಗಳು ಹೆಚ್ಚುತ್ತಿವೆ. ಗಡಿಗಳ ಎಲ್ಲೆ ಮೀರಿ ಕ್ರಿಮಿನಲ್​ ಕೆಲಸಗಳು ನಡೆಯುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರೆ ರಾಜ್ಯ ಮತ್ತು ಕೇಂದ್ರಗಳು ಒಂದಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಹಾಗೇ, ಕಾನೂನು ಪರಿಪಾಲನೆ ಮಾಡುವ ನಾಗರಿಕರನ್ನು, ಋಣಾತ್ಮಕ ಶಕ್ತಿಗಳಿಂದ ಕಾಪಾಡುವ ಹೊಣೆ ನಮ್ಮದು. ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶವನ್ನೇ ಅಲ್ಲೋಲ-ಕಲ್ಲೋಲ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ನಂಬುವ, ಇನ್ನೊಬ್ಬರಿಗೆ ಫಾರ್ವರ್ಡ್​ ಮಾಡುವ ಮೊದಲು ಜನರು ಆ ಬಗ್ಗೆ ಒಂದು ಕ್ಷಣ ಯೋಚಿಸಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದೂ ಪ್ರಧಾನಿ ಹೇಳಿದರು.

ಇದನ್ನೂ ಓದಿ: Vladimir Putin | ಪ್ರಧಾನಿ ಮೋದಿ ಮಹಾನ್ ದೇಶಭಕ್ತ, ಭಾರತಕ್ಕಿದೆ ಅದ್ಭುತ ಭವಿಷ್ಯ ಎಂದ ರಷ್ಯಾ ಅಧ್ಯಕ್ಷ ಪುಟಿನ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Narendra Modi: ಕಾಂಗ್ರೆಸ್ ಪ್ರಣಾಳಿಕೆಯು ತಾಯಂದಿರು ಮತ್ತು ಸಹೋದರಿಯರು ಚಿನ್ನಕ್ಕೆ ಸಮ ಎಂದಿದೆ. ಅವರಿಗೆ ಆಸ್ತಿಯನ್ನು ವಿತರಿಸುತ್ತೇವೆ ಎಂದು ಹೇಳಿದೆ. ಆದರೆ ಅವರು ಅದನ್ನು ಯಾರಿಗೆ ವಿತರಿಸುತ್ತಾರೆ ಗೊತ್ತೇ? ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಲಾಗಿತ್ತು ಎಂಬುದಾಗಿ ಮೋದಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ರೀತಿಯ ಯಾವುದೇ ಅಂಶಗಳು ಇಲ್ಲ ಎಂದು ಹೇಳಿದೆ.

VISTARANEWS.COM


on

Narendra modi
Koo

ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ವಿತರಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ಮಾಡಿದ ಆರೋಪಕ್ಕೆ ಕೈಪಕ್ಷ ಭಾನುವಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಪ್ರಧಾನಿ ತಮ್ಮ ಸುಳ್ಳುಗಳ ಮೂಲಕ ಹಿಂದೂ-ಮುಸ್ಲಿಮರನ್ನು ಮತ್ತೆ ವಿಭಜಿಸುತ್ತಿದ್ದಾರೆ ಎಂದು ಹೇಳಿದೆ.

ರಾಜಸ್ಥಾನದ ಬನ್​ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮನಸ್ಥಿತಿಯನ್ನು ‘ನಗರ ನಕ್ಸಲ್’ ಎಂದು ಕರೆದಿದ್ದಾರೆ. “ಕಾಂಗ್ರೆಸ್ ಪ್ರಣಾಳಿಕೆಯು ತಾಯಂದಿರು ಮತ್ತು ಸಹೋದರಿಯರು ಚಿನ್ನಕ್ಕೆ ಸಮ ಎಂದಿದೆ. ಅವರಿಗೆ ಆಸ್ತಿಯನ್ನು ವಿತರಿಸುತ್ತೇವೆ ಎಂದು ಹೇಳಿದೆ. ಆದರೆ ಅವರು ಅದನ್ನು ಯಾರಿಗೆ ವಿತರಿಸುತ್ತಾರೆ ಗೊತ್ತೇ? ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಲಾಗಿತ್ತು ಎಂಬುದಾಗಿ ಮೋದಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ರೀತಿಯ ಯಾವುದೇ ಅಂಶಗಳು ಇಲ್ಲ ಎಂದು ಹೇಳಿದೆ.

ಮೊದಲ ಹಂತದ ಮತದಾನದ ನಂತರ ನರೇಂದ್ರ ಮೋದಿಯವರ ಸುಳ್ಳುಗಳ ಪ್ರಮಾಣ ಜಾಸ್ತಿಯಾಗಿದೆ. ಮಾತಿನ ಗುಣಮಟ್ಟ ಹೆಚ್ಚಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ನುಸುಳುಕೋರರಿಗೆ ಸಂಪತ್ತು

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ಹೇಳಿದೆ. ಯಾರಿಗೆ? ಈ ಹಿಂದೆ, ಅವರ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು ಹೇಳಿದ್ದರು. ಇದರರ್ಥ ಅವರು ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ಒಳನುಸುಳುವವರಿಗೆ ವಿತರಿಸುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಒಪ್ಪುತ್ತೀರಾ?” ಎಂದು ಮೋದಿ ಕೇಳಿದ್ದರು.

ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್​​ ಅವರ ಹೇಳಿಕೆಯೊಂದು 2006 ವಿವಾದಕ್ಕೆ ಕಾರಣವಾಗಿತ್ತು. ಆ ವೇಳೆ ಪಿಎಂಒ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲಗಳಲ್ಲಿ ಸಮಾನವಾಗಿ ಭಾಗವಹಿಸಲು ಸಶಕ್ತರಾಗಿದ್ದಾರೆ ಸಿಂಗ್ ತಮ್ಮ ಹೇಳಿಕೆ ನೀಡಿದ್ದರು. ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಕುರಿತು ಮನಮೋಹನ್ ಸಿಂಗ್ ಅವರ ಉಲ್ಲೇಖವು ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆಯರು ಮತ್ತು ಮಕ್ಕಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಆದ್ಯತೆಯ ಕ್ಷೇತ್ರಗಳನ್ನು ಉಲ್ಲೇಖಿಸಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಆ ಬಳಿಕ ಹೇಳಿಕೆ ನೀಡಿತ್ತು. ಆ ಹೇಳಿಕೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಬನ್ಸ್ವಾರಾದಲ್ಲಿ ನರೇಂದ್ರ ಮೋದಿಯವರ ರ್ಯಾಲಿಯ ನಂತರ ಈ ಹೇಳಿಕೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರದ ಪ್ರಮುಖ ವಿಷಯವಾಯಿತು.

ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದೂ ಅಥವಾ ಮುಸ್ಲಿಂ ಎಂಬ ಪದಗಳ ಉಲ್ಲೇಖ ಎಲ್ಲರಿಯೂ ಇಲ್ಲ. ಇಲ್ಲ. “ನಾವು ನ್ಯಾಯದ ಬಗ್ಗೆ ಮಾತನಾಡಿದ್ದೇವೆ. ಯುವಕರು, ಬುಡಕಟ್ಟು ಜನಾಂಗದವರು, ಕಾರ್ಮಿಕರು, ಮಹಿಳೆಯರಿಗೆ ನ್ಯಾಯ … ನಾವು ಅಂತಹ ಯಾವುದೇ ವಿಭಜಕ ಪದವನ್ನು ಬಳಸಿದ್ದೇವೆಯೇ ಎಂದು ಕಂಡುಹಿಡಿಯಲು ಜನರು ಇಂದು ನಮ್ಮ ಪ್ರಣಾಳಿಕೆಯನ್ನು ಓದುತ್ತಿದ್ದಾರೆ. ಅದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು… ಕಾಂಗ್ರೆಸ್ ಅಂತಹ ಯಾವುದೇ ಪದಗಳನ್ನು ಬಳಸಿಲ್ಲ ಎಂದು ಅವರು ಅರಿತುಕೊಳ್ಳುತ್ತಿದ್ದಾರೆ. ನಮ್ಮ ಪ್ರಣಾಳಿಕೆಗಾಗಲೀ, ನಮ್ಮ ಮನಸ್ಸನ್ನಾಗಲೀ, ಸಂವಿಧಾನಕ್ಕಾಗಲೀ, ಸಮಾಜಕ್ಕಾಗಲೀ ಇಂತಹ ಪದಗಳಿಗೆ ಸ್ಥಾನವಿಲ್ಲ” ಎಂದು ಪವನ್ ಖೇರಾ ಹೇಳಿದರು.

Continue Reading

ದೇಶ

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

Bulldozer Justice: ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ಯುವತಿಯನ್ನ ಅಪಹರಿಸಿ ಒತ್ತೆ ಇಟ್ಟುಕೊಂಡು ಸುಮಾರು ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿ ಮಾರಣಾಂತಿಕವಾಗಿ ಹಿಂಸೆ ನೀಡಿದ್ದ ಆರೋಪಿ ಅಯಾನ್ ಪಠಾಣ್‌ನ ಮನೆಯನ್ನು ಧ್ವಂಸಗೊಳಿಸಲಾಗಿದೆ. ಜೆಸಿಬಿ ಮೂಲಕ ಅಧಿಕಾರಿಗಳು ಕೆಡವಿದ್ದಾರೆ. ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Bulldozer Justice
Koo

ಭೋಪಾಲ್‌: ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ಯುವತಿಯನ್ನ ಅಪಹರಿಸಿ ಒತ್ತೆ ಇಟ್ಟುಕೊಂಡು ಸುಮಾರು ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿ ಮಾರಣಾಂತಿಕವಾಗಿ ಹಿಂಸೆ ನೀಡಿದ್ದ ಆರೋಪಿ ಅಯಾನ್ ಪಠಾಣ್ (Ayan Pathan) ವಿರುದ್ಧ ಮಧ್ಯ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಆತನ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ (Bulldozer Justice). ಆತನ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅಯಾನ್ ಪಠಾಣ್ ತನ್ನ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿಯನ್ನು ಪ್ರೀತಿಸುವಂತೆ ನಾಟಕವಾಡಿ ತನ್ನ ಬಲೆಗೆ ಬೀಳಿಸಿದ್ದ. ಯುವತಿಯ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಆಕೆ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯನ್ನು ತನ್ನ ಪ್ರೇಮದ ಜಾಲಕ್ಕೆ ಬೀಳಿಸಿದ್ದ ಅಯಾನ್ ಪಠಾಣ್ ಆಕೆಯ ಆಸ್ತಿಯನ್ನು ಲಪಟಾಯಿಸಲು ಮುಂದಾಗಿದ್ದ. ಯುವತಿಯ ತಾಯಿಯ ಹೆಸರಲ್ಲಿ ಇದ್ದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಸಂಚು ರೂಪಿಸಿದ್ದ.

ಚಿತ್ರಹಿಂಸೆ

ಅಯಾನ್ ಪಠಾಣ್‌ನ ಸಂಚು ಅರಿತ ಯುವತಿ ಆತನನ್ನು ವಿರೋಧಿಸತೊಡಗಿದ್ದಳು. ಆಗ ಆತ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬೆಲ್ಟ್ ಹಾಗೂ ನೀರಿನ ಪೈಪ್​ನಿಂದ ಹೊಡೆದಿದ್ದಾನೆ. ಬಳಿಕ ಗಾಯದ ಮೇಲೆ ಮೆಣಸಿನ ಪುಡಿ ಹಾಕಿದ್ದಾನೆ. ಯುವತಿ ನೋವಿನಿಂದ ನರಳಲು ಶುರು ಮಾಡಿದಾಗ ಆಕೆಯ ಅಳು ಹೊರಗೆ ಕೇಳಬಾರದೆಂದು ಫೆವಿಕ್ವಿಕ್​ನಿಂದ ಆಕೆಯ ಬಾಯಿ ಮುಚ್ಚಿದ್ದ. ಇಷ್ಟೆಲ್ಲ ಚಿತ್ರಹಿಂಸೆ ಅನುಭವಿಸಿದ್ದ ಆಕೆ ಹೇಗೋ ತಪ್ಪಿಸಿಕೊಂಡು ಪೊಲೀಸ್​ ಠಾಣೆ ತಲುಪಿದ್ದಾಳೆ.

ಪೊಲೀಸರಿಗೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಅಯಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಯಾನ್‌ನನ್ನು ಬಂಧಿಸಲಾಗಿದೆ. ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಯುವತಿ ಸ್ಥಿತಿ ಚಿಂತಾಜನಕವಾಗಿದೆ. ಆಕೆಯ ಇಡೀ ದೇಹದ ತುಂಬೆಲ್ಲ ಗಾಯಗಳಾಗಿವೆ. ಎರಡೂ ಕಣ್ಣುಗಳಲ್ಲಿ ಊತವಿದೆ. ಅಲ್ಲದೆ ಫೆವಿಕ್ವಾಕ್‌ನಿಂದ ಬಾಧಿತವಾದ ತುಟಿಗಳನ್ನು ವೈದ್ಯರು ಕಷ್ಟಪಟ್ಟು ಸರಿಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಪೊಲೀಸರು, ಜೆಸಿಬಿ ಮೇಲೆ ಕಲ್ಲು ತೂರಾಟ; ಅಧಿಕಾರಿಯ ಕಾಲರ್​ ಹಿಡಿದು ಹೊಡೆದ ಬಿಜೆಪಿ ಶಾಸಕನ ಹಿಂಬಾಲಕರು

ʼʼಅಯಾನ್‌ನ ಮನೆಯನ್ನು ನಕಲಿ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನುವ ಅಂಶ ಪರಿಶೀಲನೆ ವೇಳೆ ಕಂಡು ಬಂದಿದೆ. ಹೀಗಾಗಿ ಅದನ್ನು ನೆಲಸಮಗೊಳಿಸಲು ಆದೇಶ ಹೊರಡಿಸಲಾಯಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಯುವತಿಗೆ ನ್ಯಾಯ ಒದಗಿಸಲಾಗಿದೆ.

ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಅಪರಾಧ ನಡೆದ ಸ್ಥಳವಾದ ಆತನ ಮನೆಗೆ ಕರೆ ತಂದು ಸ್ಥಳ ಮಹಜರು ಮಾಡಿದ್ದರು. ಈ ವೇಳೆ ಯುವತಿಗೆ ಥಳಿಸಲು ಬಳಸಲಾಗಿದ್ದ ಬೆಲ್ಟ್‌, ಫೆವಿ ಕ್ವಿಕ್‌ನ ಟ್ಯೂಬ್‌ಗಳು ಹಾಗೂ ಪ್ಲಾಸ್ಟಿಕ್ ಪೈಪ್ ಸಿಕ್ಕಿವೆ. ಇವೆಲ್ಲವನ್ನೂ ಬಳಸಿ ಯುವತಿ ಮೇಲೆ ದೌರ್ಜನ್ಯ ಎಸಗಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

Continue Reading

Latest

Amith shah: ಅಮಿತ್ ಶಾ ಒಟ್ಟು ಆಸ್ತಿ ಎಷ್ಟು? ಅವರ ಆದಾಯದ ಮೂಲ ಯಾವುದು?

Amith shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಾರ್ಷಿಕ ಆದಾಯ ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ. ಶಾ ದಂಪತಿಯ ಒಟ್ಟು ಆಸ್ತಿ ಮೌಲ್ಯ 36 ಕೋಟಿ ರೂ. ಇದ್ದರೂ ಲಕ್ಷಾಂತರ ರೂಪಾಯಿ ಸಾಲ ಹೊಂದಿದ್ದಾರೆ. ಇವರ ಕೈಯಲ್ಲಿರುವ ನಗದು ಕೇವಲ 24,000 ರೂ. ಕೇಂದ್ರ ಗೃಹ ಸಚಿವರ ಒಟ್ಟು ಆಸ್ತಿಯ ವಿವರ ಇಲ್ಲಿದೆ.

VISTARANEWS.COM


on

By

Amit shah
Koo

ಗಾಂಧಿನಗರ: ಲೋಕಸಭಾ ಚುನಾವಣೆ 2024ರಲ್ಲಿ (loksabha election-2024) ಗಾಂಧಿನಗರದಿಂದ (gandhinagar) ಕಣಕ್ಕೆ ಇಳಿದಿರುವ ಕೇಂದ್ರ ಗೃಹ ಸಚಿವ (central home minister) ಅಮಿತ್ ಶಾ (Amith shah) ಅವರು ತಮಗೆ ಸಂಸದ (MP) ಸ್ಥಾನಕ್ಕಾಗಿ ನೀಡುವ ಸಂಬಳ, ಮನೆ ಮತ್ತು ಜಮೀನು ಬಾಡಿಗೆ ಮತ್ತು ಕೃಷಿಯಿಂದ ಆದಾಯ ಬರುತ್ತಿರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಅಮಿತ್ ಶಾ ಅವರು ಶುಕ್ರವಾರ ಗಾಂಧಿನಗರ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಮಾಜಿ ಬಿಜೆಪಿ ಅಧ್ಯಕ್ಷರು, ಪ್ರಸ್ತುತ ಕೇಂದ್ರ ಗೃಹ ಸಚಿವರು ಮತ್ತು ಮೋದಿ ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತ್ ಶಾ ಅವರು ತಮ್ಮ ನಾಮನಿರ್ದೇಶನದಲ್ಲಿ 2024ರಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯ 36 ಕೋಟಿ ರೂ. ಎಂದು ತಿಳಿಸಿದ್ದಾರೆ.

ಶಾ ಬಳಿ ಕಾರು ಇಲ್ಲ

ಅಮಿತ್ ಶಾ ಅವರು ಸ್ವಂತ ಕಾರು ಹೊಂದಿಲ್ಲ. ಕೈಯಲ್ಲಿ ಕೇವಲ 24,000 ರೂ. ನಗದು ಹೊಂದಿರುವುದಾಗಿ ತಿಳಿಸಿದ್ದಾರೆ. 20 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 16 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿರುವುದಾಗಿ ಶಾ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಇಂಡಿಯಾ ಒಕ್ಕೂಟದವರಿಂದ ಕುಟುಂಬ ರಾಜಕಾರಣ, ಉಳಿದವರು ಗಂಟೆ ಬಾರಿಸಬೇಕಾ? ಜೆ.ಪಿ. ನಡ್ಡಾ ಖಡಕ್‌ ಪ್ರಶ್ನೆ

ಅಮಿತ್ ಶಾ ಅವರ ಬಳಿ 72 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪತ್ನಿ ಸೋನಲ್ ಶಾ ಅವರ ಬಳಿ 1.10 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದೆ. ಸೋನಾಲ್ ಶಾ ಅವರು 31 ಕೋಟಿ ರೂ. ಗೂ ಅಧಿಕ ಆಸ್ತಿ ಹೊಂದಿದ್ದು, 22.46 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 9 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ.

ಒಟ್ಟು ಆಸ್ತಿ ಮೌಲ್ಯ 65.67 ಕೋಟಿ ರೂ.

ಶಾ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿಯ ಒಟ್ಟು ಆಸ್ತಿ ಮೌಲ್ಯ 65.67 ಕೋಟಿ ರೂ.

ಐದು ವರ್ಷಗಳಲ್ಲಿ ಆದಾಯ ದ್ವಿಗುಣ

2019ರ ಅಂಕಿ ಅಂಶದ ಪ್ರಕಾರ ಅಮಿತ್ ಶಾ ಅವರ ಒಟ್ಟು ಆಸ್ತಿ ಮೌಲ್ಯ 30.49 ಕೋಟಿ ರೂ. ಗಳಷ್ಟಿತ್ತು. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ ಎಂದು ಸೂಚಿಸುತ್ತದೆ.

ಒಟ್ಟು 42 ಲಕ್ಷ ಸಾಲ

ಗೃಹ ಸಚಿವ ಅಮಿತ್ ಶಾ ಅವರು 15.77 ಲಕ್ಷ ರೂ. ವೈಯಕ್ತಿಕ ಸಾಲ ಮತ್ತು ಅವರ ಪತ್ನಿ 26.32 ಲಕ್ಷ ರೂ. ಸಾಲ ಹೊಂದಿದ್ದಾರೆ.

ಆದಾಯದ ಮೂಲ

2022-23ರ ಆರ್ಥಿಕ ವರ್ಷದಲ್ಲಿ ಅಮಿತ್ ಶಾ ಅವರ ವಾರ್ಷಿಕ ಆದಾಯ 75.09 ಲಕ್ಷ ರೂ. ಗಳಾಗಿದ್ದರೆ, ಅವರ ಪತ್ನಿಯ ವಾರ್ಷಿಕ ಆದಾಯ 39.54 ಲಕ್ಷ ರೂ. ಅವರ ಆದಾಯದ ಮೂಲಗಳಲ್ಲಿ ಸಂಸದರಾಗಿ ಅವರ ಸಂಬಳ, ಆಸ್ತಿಗಳಿಂದ ಬಾಡಿಗೆ ಆದಾಯ, ಕೃಷಿ ಗಳಿಕೆ ಮತ್ತು ಷೇರು ಮತ್ತು ಲಾಭಾಂಶಗಳಿಂದ ಬರುವ ಆದಾಯ ಸೇರಿವೆ.

ಮೂರು ಕ್ರಿಮಿನಲ್ ಪ್ರಕರಣ

ಅಮಿತ್ ಶಾ ಅವರು ಅಫಿಡವಿಟ್‌ನಲ್ಲಿ ತಮ್ಮ ವೃತ್ತಿಯನ್ನು ರೈತ ಮತ್ತು ಸಮಾಜ ಸೇವಕ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಮೂರು ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದ್ದಾರೆ.

ಮೇ 2ರಂದು ಚುನಾವಣೆ

ಲೋಕಸಭೆ ಚುನಾವಣೆಯ ಮೂರನೇ ಹಂತದ ಅವಧಿಯಲ್ಲಿ ಗಾಂಧಿನಗರ ಸೇರಿ ಗುಜರಾತ್‌ನ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೇ 7ರಂದು ಚುನಾವಣೆ ನಡೆಯಲಿದೆ.

Continue Reading

Lok Sabha Election 2024

Lok Sabha Election 2024: ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ; ಕಾರಣ ಇದು

Lok Sabha Election 2024: ಲೋಕಸಭಾ ಚುನಾವಣೆಯ ಕಣ ರಂಗೇರಿದೆ. ಈಗಾಗಲೇ ಮೊದಲ ಹಂತದ ಮತದಾನ ಯಶಸ್ವಿಯಾಗಿ ಮುಗಿದಿದೆ. ಈ ಮಧ್ಯೆ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದಿದ್ದೇ ಇದಕ್ಕೆ ಕಾರಣ. ಆದರೆ ಕಾಂಗ್ರೆಸ್‌ ನಾಮಪತ್ರ ತಿರಸ್ಕೃರಿಸಿರುವುದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದೆ. ಸೋಲುವ ಭೀತಿಯಿಂದ ಹೀಗೆ ಮಾಡಿದೆ ಎಂದಿರುವ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಿಲೇರಲು ಸಜ್ಜಾಗಿದೆ.

VISTARANEWS.COM


on

Lok Sabha Election 2024
Koo

ಗಾಂಧಿನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ (Nilesh Kumbhani) ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ (Saurabh Parghi) ತಿರಸ್ಕರಿಸಿದ್ದಾರೆ (Rejected the nomination form). ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ (Lok Sabha Election 2024).

ಭಾರಿ ಪೊಲೀಸ್ ಭದ್ರತೆಯೊಂದಿಗೆ ಭಾನುವಾರ (ಏಪ್ರಿಲ್‌ 21) ಬೆಳಿಗ್ಗೆ 11 ಗಂಟೆಗೆ ತಮ್ಮ ಕಚೇರಿಯಲ್ಲಿ ಪ್ರಾರಂಭವಾದ ವಿಶೇಷ ವಿಚಾರಣೆ ವೇಳೆ ಸೌರಭ್ ಪರ್ಘಿ ಅವರು ವ್ಯತ್ಯಾಸ ಗುರುತಿಸಿದ್ದರು. ಅನುಮೋದಕರಾದ ರಮೇಶ್ ಪೋಲ್ರಾ ಅವರ ಮಾರಾಟ ಪತ್ರದ ಆಧಾರ ಮೇಲೆ, ಚಾಲನಾ ಪರವಾನಗಿಯ ಆಧಾರದ ಮೇಲೆ ಜಗದೀಶ್ ಸವಲಿಯಾ ಮತ್ತು ಅವರ ಪ್ಯಾನ್ ಕಾರ್ಡ್ ಆಧಾರದ ಮೇಲೆ ಧಮೇಲಿಯಾ ಅವರ ಸಹಿಗಳನ್ನು ಪರಿಶೀಲಿಸಿದರು. ಈ ವೇಳೆ ನಾಮನಿರ್ದೇಶನ ಪತ್ರದಲ್ಲಿನ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ದರ್ಶನಾ ಜರ್ದೋಶ್ ಬದಲಿಗೆ ಮುಕೇಶ್ ದಲಾಲ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಈ ಭದ್ರಕೋಟೆಯಲ್ಲಿ ಚುನಾವಣೆಗೆ ತಡೆ ಕೋರಿ ಕಾಂಗ್ರೆಸ್‌ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿದೆ. ನಾಮಪತ್ರ ಪರಿಶೀಲನೆ ವೇಳೆ ಕುಂಭಾನಿ ಅವರು ತಮ್ಮ ವಕೀಲರಾದ ಜಮೀರ್ ಶೇಖ್ ಮತ್ತು ಬಿ.ಎಂ. ಮಂಗುಕಿಯಾ ಅವರೊಂದಿಗೆ ಹಾಜರಿದ್ದರು.

ನವಸಾರಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯೂ ಆಗಿರುವ ಕಾಂಗ್ರೆಸ್ ವಕ್ತಾರ ನೈಶಾದ್ ದೇಸಾಯಿ ಈ ಬಗ್ಗೆ ಮಾತನಾಡಿ, “ಸೂರತ್ ಚುನಾವಣಾ ಅಧಿಕಾರಿಯ ಆದೇಶದ ಪ್ರತಿ ನಮಗೆ ಸಿಕ್ಕಿದೆ. ಅದರಲ್ಲಿ ನಮ್ಮ ಸೂರತ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕುಂಭಾನಿ ಅವರು ವಕೀಲ ಬಿ.ಎಂ. ಮಂಗುಕಿಯಾ ಅವರೊಂದಿಗೆ ಅಹಮದಾಬಾದ್‌ಗೆ ತೆರಳಿದ್ದಾರೆ ಮತ್ತು ಅವರು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿ ಸೂರತ್‌ನ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಗುಜರಾತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳ ಹಿಂದೆ ಪಿತೂರಿ ಇದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ. “ಪಾಟೀದಾರ್ ಮತಗಳು ಕಾಂಗ್ರೆಸ್‌ಗೆ ಬರುತ್ತಿದ್ದವು. ಮಾತ್ರವಲ್ಲ ಕ್ಷತ್ರಿಯ ಮತದಾರರು ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ. ಈ ಕ್ಷೇತ್ರದಲ್ಲಿ ನಾವು ಮೇಲುಗೈ ಸಾಧಿಸಿದ್ದೆವು. ಆದ್ದರಿಂದ ಬಿಜೆಪಿ ಪಿತೂರಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಅನಾರೋಗ್ಯ ಹಿನ್ನೆಲೆ; ಮಧ್ಯಪ್ರದೇಶ, ಜಾರ್ಖಂಡ್‌ ರ‍್ಯಾಲಿಗೆ ರಾಹುಲ್‌ ಗಾಂಧಿ ಗೈರು

ʼಆರೋಪದಲ್ಲಿ ಹುರುಳಿಲ್ಲʼ

ಕಾಂಗ್ರೆಸ್ ಆರೋಪವನ್ನು ಸೂರತ್ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜಜ್ಮೇರಾ ತಳ್ಳಿ ಹಾಕಿದ್ದಾರೆ. “ಈ ವಿಚಾರದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯ ಬಗ್ಗೆ ಕಾಂಗ್ರೆಸ್‌ ಮುಖಂಡರ ಬಳಿ ಯಾವುದೇ ಪುರಾವೆಗಳಿದ್ದರೆ ಅವರು ಅದನ್ನು ಹಾಜರು ಪಡಿಸಬೇಕು. ಕಾಂಗ್ರೆಸ್ ಅಭ್ಯರ್ಥಿಯೇ ತಮ್ಮ ಬೆಂಬಲಿಗರು ಮತ್ತು ಪ್ರಸ್ತಾವಕರ ಸಹಿಯನ್ನು ನಕಲಿ ಮಾಡಿದ್ದಾರೆ” ಎಂದು ಅವರು ಆರೋಪವನ್ನು ನಿರಾಕರಿಸಿದ್ದಾರೆ.

Continue Reading
Advertisement
Sportsmanship
ಕ್ರೀಡೆ3 mins ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು25 mins ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ32 mins ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ54 mins ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Bulldozer Justice
ದೇಶ1 hour ago

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

ಕರ್ನಾಟಕ1 hour ago

Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

Car Crash
ಕ್ರೀಡೆ2 hours ago

Car Accident : ರೇಸ್ ವೇಳೆ ಪ್ರೇಕ್ಷಕರ ಮೇಲೆ ಹರಿದ ಕಾರು; 7 ಮಂದಿ ಸಾವು; ವಿಡಿಯೊ ಇದೆ

Yuva Rajkumar
ಸಿನಿಮಾ2 hours ago

Yuva Rajkumar: ಯುವ ಅಭಿಮಾನಿಗಳಿಗೆ ನಿರಾಸೆ; ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌

Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 20242 hours ago

Lok Sabha Election 2024: ಬೆಂಗಳೂರು ಗ್ರಾಮಾಂತರ ಕ್ಷೇತ್ರವೀಗ ಅತಿ ಸೂಕ್ಷ್ಮ; ಅರೆ ಸೇನಾ ಪಡೆ ನಿಯೋಜಿಸಿದ ಚುನಾವಣಾ ಆಯೋಗ

JP Nadda
ಕರ್ನಾಟಕ3 hours ago

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ1 day ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌