Poverty In India: ಭಾರತದಲ್ಲಿ ಒಂದು ದಶಕದಲ್ಲೇ ಬಡತನ ಪ್ರಮಾಣ 21.2%ರಿಂದ 8.5%ಕ್ಕೆ ಇಳಿಕೆ - Vistara News

ದೇಶ

Poverty In India: ಭಾರತದಲ್ಲಿ ಒಂದು ದಶಕದಲ್ಲೇ ಬಡತನ ಪ್ರಮಾಣ 21.2%ರಿಂದ 8.5%ಕ್ಕೆ ಇಳಿಕೆ

Poverty In India: ಎನ್‌ಸಿಎಇಆರ್‌ನ ಸೊನಾಲ್ಡೆ ದೇಸಾಯಿ ಅವರು ಇಂಡಿಯಾ ಹ್ಯುಮನ್‌ ಡೆವಲೆಪ್‌ಮೆಂಟ್‌ ಸರ್ವೇ (IHDS) ಡೇಟಾವನ್ನು ಆಧರಿಸಿ ‘ಬದಲಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಸುರಕ್ಷತಾ ಜಾಲಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ತಯಾರಿಸಿದ್ದು, ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇದರಲ್ಲಿ ಭಾರತದ ಬಡತನ ಪ್ರಮಾಣ ಇಳಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.

VISTARANEWS.COM


on

Poverty In India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದಲ್ಲಿ ಕೆಲ ವರ್ಷಗಳಿಂದ ತಲಾದಾಯ ಜಾಸ್ತಿಯಾಗುತ್ತಿದ್ದು, ಜನ ಬಡತನದಿಂದ ಹೊರಬರುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದಲ್ಲಿರುವ ಬಡತನ (Poverty In India) ಪ್ರಮಾಣದ ಕುರಿತು ಆರ್ಥಿಕ ಅಂಶಗಳ ಮೇಲೆ ಗಮನ ಇರಿಸುವ ಎನ್‌ಸಿಎಇಆರ್‌ ಸಂಸ್ಥೆಯು(NCAER Report) ನೂತನ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತದ ಬಡತನ ಪ್ರಮಾಣವು ಒಂದು ದಶಕದಲ್ಲಿ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. 2011-12ನೇ ಸಾಲಿನಲ್ಲಿ ಭಾರತದ ಬಡತನ ಪ್ರಮಾಣವು ಶೇ.21.2ರಷ್ಟು ಇತ್ತು. ಈಗ ಅದು ಶೇ.8.5ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ.

ಎನ್‌ಸಿಎಇಆರ್‌ನ ಸೊನಾಲ್ಡೆ ದೇಸಾಯಿ ಅವರು ಇಂಡಿಯಾ ಹ್ಯುಮನ್‌ ಡೆವಲೆಪ್‌ಮೆಂಟ್‌ ಸರ್ವೇ (IHDS) ಡೇಟಾವನ್ನು ಆಧರಿಸಿ ‘ಬದಲಾಗುತ್ತಿರುವ ಸಮಾಜದಲ್ಲಿ ಸಾಮಾಜಿಕ ಸುರಕ್ಷತಾ ಜಾಲಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ತಯಾರಿಸಿದ್ದು, ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. “ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ದೇಶದಲ್ಲಿ ಬಡತನದಿಂದ ಹೊರಬಂದಿರುವವರ ಸಂಖ್ಯೆ ಜಾಸ್ತಿ ಇದೆ” ಎಂಬುದಾಗಿ ವರದಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.

india poverty

“ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಬಡತನ ರೇಖೆಯಿಂದ ಮೇಲೆ ಬರುತ್ತಿರುವವರ ಪ್ರಮಾಣ ಗಣನೀಯವಾಗಿ ಜಾಸ್ತಿಯಾಗುತ್ತಿದೆ. 2004-05ನೇ ಸಾಲಿನಲ್ಲಿ ಬಡತನ ಪ್ರಮಾಣವು ಶೇ.38.6ರಷ್ಟು ಇತ್ತು. ಇದು 2011-12ರಲ್ಲಿ ಶೇ.21.2ಕ್ಕೆ ಇಳಿಯಿತು. ಇನ್ನು 2022-24ರ ಅವಧಿಯಲ್ಲಿ ಶೇ.8.5ಕ್ಕೆ ಇಳಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಕೊರೊನಾ ವೈರಸ್‌ ಬಿಕ್ಕಟ್ಟಿನ ಮಧ್ಯೆಯೂ ಬಡತನ ಪ್ರಮಾಣ ಇಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದು ವರದಿ ತಿಳಿಸಿದೆ.

24.82 ಕೋಟಿ ಜನ ಬಡತನದಿಂದ ಪಾರು

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗಿದ್ದಾರೆ ಎಂದು ಆರು ತಿಂಗಳ ಹಿಂದೆಯೇ ನೀತಿ ಆಯೋಗದ ವರದಿ ತಿಳಿಸಿತ್ತು. ಭಾರತದಲ್ಲಿ ಬಹುಆಯಾಮದ ಬಡತನವು 2013-14ರಿಂದ 2022-23ರ ಅವಧಿಯಲ್ಲಿ 29.17% ರಿಂದ 11.28% ಕ್ಕೆ ಇಳಿದಿದೆ ಹಾಗೂ 24..82 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ತಿಳಿಸಿತ್ತು.

ಉತ್ತರ ಪ್ರದೇಶವು ಕಳೆದ ಒಂಬತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಪಾರಾಗುವುದರೊಂದಿಗೆ ಬಡವರ ಸಂಖ್ಯೆಯಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ. ನಂತರ ಸ್ಥಾನದಲ್ಲಿ ಬಿಹಾರ ಇದ್ದು, 3.77 ಕೋಟಿ, ಮಧ್ಯಪ್ರದೇಶ 2.30 ಕೋಟಿ ಮತ್ತು ರಾಜಸ್ಥಾನ 1.87 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Narendra Modi: ಮುಂದಿನ 5 ವರ್ಷ ಬಡತನ ವಿರುದ್ಧದ ಹೋರಾಟಕ್ಕೆ ಮೀಸಲು; ರಾಜ್ಯಸಭೆಯಲ್ಲಿ ಮೋದಿ ಭರವಸೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hathras Stampede: ಹತ್ರಾಸ್‌ ಕಾಲ್ತುಳಿತ; ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Hathras Stampede:  ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್‌ ಮಧುಕರ್‌) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

VISTARANEWS.COM


on

Hathras Stampede
Koo

ನವದಹಲಿ: ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್‌ ಕಾಲ್ತುಳಿತ (Hathras Stampede) ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ (Devprakash Madhukar)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ʼʼದೆಹಲಿಯಲ್ಲಿದ್ದ ದೇವಪ್ರಕಾಶ್‌ ಮಧುಕರ್‌ ಶರಣಾಗಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆʼʼ ಎಂದು ಅವರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ.

ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ (Bhole Baba) ಅವರ ಸತ್ಯಂಗದ ಮುಖ್ಯ ಸೇವಾದಾರ ಮಧುಕರ್‌ ವಿರುದ್ಧ ಹತ್ರಾಸ್‌ನ ಸಿಕಂದ್ರ ರಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್‌ ಮಧುಕರ್‌) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

“ಹತ್ರಾಸ್ ಪ್ರಕರಣದ ಎಫ್ಐಆರ್‌ನಲ್ಲಿ ಹೆಸರು ದಾಖಲಾದ ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದೆಹಲಿಯ ಪೊಲೀಸರು, ಎಸ್ಐಟಿ ಮತ್ತು ಎಸ್‌ಟಿಎಫ್‌ಗೆ ಈ ವಿಷಯ ತಿಳಿಸಿ ಬಳಿಕ ಶರಣಾಗಿದ್ದಾರೆ” ಎಂದು ಎ.ಪಿ.ಸಿಂಗ್ ಹೇಳಿದರು.

“ನಾವು ಯಾವುದೇ ತಪ್ಪು ಮಾಡದ ಕಾರಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ನಮ್ಮ ಅಪರಾಧವೇನು? ದೇವಪ್ರಕಾಶ್‌ ಮಧುಕರ್‌ ಎಂಜಿನಿಯರ್ ಮತ್ತು ಹೃದ್ರೋಗಿ. ಈಗ ಅವರ ಸ್ಥಿತಿ ಸುಧಾರಿಸಿದೆ. ಈ ಹಿನ್ನಲೆಯಲ್ಲಿ ಅವರು ಶರಣಾಗಿದ್ದಾರೆ” ಎಂದು ಎ.ಪಿ.ಸಿಂಗ್ ತಿಳಿಸಿದರು. ಪೊಲೀಸರು ಈಗ ಅವರ ಹೇಳಿಕೆಯನ್ನು ದಾಖಲಿಸಬಹುದು ಅಥವಾ ಪ್ರಶ್ನಿಸಬಹುದು. ಆದರೆ ಅವರ ಆರೋಗ್ಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದೂ ಸೂಚಿಸಿದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಕೀಲರೂ ಆದ ಎ.ಪಿ.ಸಿಂಗ್ ತಾನು ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರವಾಗಿ ವಾದಿಸುತ್ತೇನೆ ಎಂದು ಹೇಳಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ನ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ಕೊಡುವುದಾಗಿ 2 ದಿನಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ: Hathras Stampede: ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

ಇದುವರೆಗೆ ಭೋಲೆ ಬಾಬಾ ಅವರ ಸತ್ಸಂಗದ ಸಂಘಟನಾ ಸಮಿತಿಯ ಸದಸ್ಯರಾಗಿದ್ದ ಇಬ್ಬರು ಮಹಿಳಾ ಸ್ವಯಂಸೇವಕರು ಸೇರಿದಂತೆ ಆರು ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. “ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Continue Reading

ಅಂಕಣ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು.

VISTARANEWS.COM


on

ರಾಜಮಾರ್ಗ ಅಂಕಣ captain pranjal shaurya award
Koo

ಕರ್ನಾಟಕದ ಸೈನಿಕನಿಗೆ ದೊರೆಯಿತು ರಾಷ್ಟ್ರದ ಗೌರವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕಳೆದ ವರ್ಷವಿಡೀ ಕನ್ನಡ ನಾಡಿನಲ್ಲಿ (Karnataka) ಮೊಳಗಿದ್ದು ಇದೇ ಸೈನಿಕನ (Soldier) ಯಶೋಗಾಥೆ! ಅದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿ ಮಾಡಿದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಅವರು ದೇಶಕ್ಕಾಗಿ ಹುತಾತ್ಮರಾದ (Martyr) ರೋಮಾಂಚಕ ಕಥೆ.

ನಾನು ಅಂದು ಬರೆದ ಹಾಗೆ ಪ್ರಾಂಜಲ್ ಅವರು ಆಗರ್ಭ ಶ್ರೀಮಂತ ಕುಟುಂಬದ ಒಬ್ಬನೇ ಮಗ ಆಗಿದ್ದರು. ಅವರ ತಂದೆ ವೆಂಕಟೇಶ್ ಅವರು ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ MRPL ಇದರ ಎಂಡಿ ಆಗಿ ನಿವೃತ್ತಿಯನ್ನು ಹೊಂದಿದ್ದರು. ಹಾಗಿದ್ದರೂ ಮಗ ಸ್ವ ಇಚ್ಛೆಯಿಂದ ಸೈನ್ಯಕ್ಕೆ ಹೊರಟು ನಿಂತಾಗ ವೆಂಕಟೇಶ್ ಅಥವಾ ಅವರ ಪತ್ನಿ ತಡೆಯಲಿಲ್ಲ ಅನ್ನುವುದು ಶ್ರೇಷ್ಠ ನಿದರ್ಶನ.

ಅಂತಿಮ ಸಂಸ್ಕಾರದ ಹೊತ್ತು ಮಿಡಿಯಿತು ವೆಂಕಟೇಶ್ ಕುಟುಂಬ

ಪ್ರೀತಿ ಮಾಡಿ ಮದುವೆಯಾದ ಪತ್ನಿ ಅದಿತಿ ಕೂಡ ಗಂಡನ ಉಜ್ವಲ ರಾಷ್ಟ್ರಪ್ರೇಮಕ್ಕೆ ನೆರಳಾಗಿ ನಿಂತರು. ಮುಂದೆ ಪ್ರಾಂಜಲ್ ಅವರು ಭಯೋತ್ಪಾದಕರ ಜೊತೆಗೆ ಕೊನೆಯ ಉಸಿರಿನವರೆಗೂ ಹೋರಾಡಿ ಉಸಿರು ಚೆಲ್ಲಿದ ಘಟನೆಯು ನಡೆದಾಗ, ತ್ರಿವರ್ಣ ಧ್ವಜ ಹೊದ್ದು ಮಲಗಿದ ಪ್ರಾಂಜಲ್ ಪಾರ್ಥಿವ ಶರೀರ ಮನೆಯ ಅಂಗಳಕ್ಕೆ ಬಂದಾಗ ಸೈನಿಕನ ಕುಟುಂಬವು ಒಮ್ಮೆ ನಡುಗಿದ್ದು ಹೌದು.

ಹುತಾತ್ಮ ಸೈನಿಕನ ಹೆಂಡತಿ ಹೊರಗೆ ಅಳಲಿಲ್ಲ

ಆದರೆ ತಕ್ಷಣ ಸಾವರಿಸಿಕೊಂಡ ಆ ರಾಷ್ಟ್ರಭಕ್ತ ಕುಟುಂಬ ಪ್ರಾಂಜಲ್ ಅಂತಿಮ ಸಂಸ್ಕಾರದ ಅವಧಿಯಲ್ಲಿ ತೋರಿದ್ದು ಸಾವಧಾನದ ಮತ್ತು ಭಾವನೆಗಳ ನಿಯಂತ್ರಣದ ಅನನ್ಯ ಮಾದರಿಯನ್ನು. ಅದರಲ್ಲಿಯೂ ಹುತಾತ್ಮ ಸೈನಿಕನ ಪತ್ನಿ ಅಳಬಾರದು ಎಂದು ಮನದಲ್ಲಿ ಸಂಕಲ್ಪಿಸಿ ಅದಿತಿ ಅಂದು ಕಲ್ಲುಬಂಡೆಯ ಹಾಗೆ ನಿಂತಿದ್ದರು. ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಕರ್ನಾಟಕದ ವೀರ ಸೇನಾನಿಯ ಅಂತ್ಯ ಇಡೀ ನಾಡನ್ನು ದುಃಖದ ಮಡುವಿನಲ್ಲಿ ದೂಡಿತ್ತು.

Family of Captain MV Pranjal ರಾಜಮಾರ್ಗ ಅಂಕಣ

ಕಲ್ಯಾ ಶಾಲೆಯಲ್ಲಿ ನಿರ್ಮಾಣವಾಯಿತು ಕ್ಯಾ. ಪ್ರಾಂಜಲ್ ಸ್ಮಾರಕ

ಇಡೀ ಕನ್ನಡ ನಾಡು ದುಃಖ ಮತ್ತು ಸೂತಕದ ಛಾಯೆಯಲ್ಲಿ ಮುಳುಗಿದ್ದಾಗ ನಾಡಿನಾದ್ಯಂತ ಶ್ರದ್ಧಾಂಜಲಿ ಸಭೆಗಳು ನಡೆದವು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಅಂಗಳದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಿರ್ಮಿಸಿದರು. ಈ ವರ್ಷ ಜನವರಿ 26ರಂದು ಸಂಜೆ ನಡೆದ ಈ ಭಾವುಕ ಕಾರ್ಯಕ್ರಮದಲ್ಲಿ ಸೈನಿಕನ ತಂದೆ ವೆಂಕಟೇಶ್ ಮತ್ತು ತಾಯಿ ಇಬ್ಬರೂ ಭಾಗವಹಿಸಿದ್ದರು. ನಿವೃತ್ತ ಸೈನಿಕರ ವೇದಿಕೆಯು ಗೌರವಾರ್ಪಣೆ ಮಾಡಿತ್ತು. ಕಲ್ಯಾ ಎಂಬ ಪುಟ್ಟ ಗ್ರಾಮ, ಅಲ್ಲಿನ ಸರಕಾರಿ ಶಾಲೆ, ಅಧ್ಯಾಪಕರು, ಮಕ್ಕಳು, ಹೆತ್ತವರು, ನೂರಾರು ಸಂಖ್ಯೆಯ ಗ್ರಾಮಸ್ಥರು ಸೇರಿ ಕಂಬನಿ ಮಿಡಿದ ಅತ್ಯಪೂರ್ವ ಕಾರ್ಯಕ್ರಮ ಅದಾಗಿತ್ತು.

Raja Marga Column Captain MV Pranjal Memorial

ಅದೇ ವೀರ ಸೈನಿಕನಿಗೆ ಇಂದು ದೊರೆಯಿತು ರಾಷ್ಟ್ರದ ಗೌರವ

ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು. ಹುತಾತ್ಮ ಸೈನಿಕನ ಪತ್ನಿ ಅದಿತಿಯವರ ಅದೇ ಭಾವುಕ ಮುಖ, ಅಮ್ಮನ ಅಕ್ಕರೆ ತುಂಬಿದ ಆಳವಾದ ಕಣ್ಣುಗಳು, ಪ್ರಾಂಜಲ್ ಹೆಸರು ಮೊಳಗಿದಾಗ ದೃಢವಾದ ಹೆಜ್ಜೆಗಳೊಂದಿಗೆ ತಾಯಿ ಮತ್ತು ಪತ್ನಿ ಇಬ್ಬರೂ ವೇದಿಕೆಯೇರಿದ್ದು, ಎದೆಯಲ್ಲಿ ಜ್ವಾಲಾಮುಖಿ ಇದ್ದರೂ ತುಟಿಯಲ್ಲಿ ಅರಳಿದ ಹೂ ನಗು, ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಅದಿತಿಯವರ ಕಣ್ಣಲ್ಲಿ ಒಮ್ಮೆ ಮಿಂಚಿ ಮರೆಯಾದ ಪ್ರೌಡ್ ಫೀಲಿಂಗ್.

ಈ ದೃಶ್ಯವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ರಕ್ತವನ್ನು ಬಿಸಿ ಮಾಡುವುದು ಖಂಡಿತ. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Continue Reading

Lok Sabha Election 2024

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ 7 ಸಂಸದರಿಗೆ ಸಿಕ್ಕಿದ್ದು ಶೇ. 70ಕ್ಕಿಂತ ಹೆಚ್ಚು ಮತ; ಯಾರಿವರು?

ಲೋಕಸಭೆಗೆ (Lok Sabha Election 2024) ಆಯ್ಕೆಯಾಗಿರುವ 542 ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 279 ಮಂದಿ ಶೇ. 50ಕ್ಕಿಂತ ಹೆಚ್ಚಿನ ಮತಗಳಿಂದ ಗೆದ್ದಿದ್ದರೆ, 263ರಷ್ಟು ಮಂದಿ ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳಿಂದ ಚುನಾವಣೆ ಗೆದ್ದಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ರಾಷ್ಟ್ರೀಯ ಚುನಾವಣಾ ವೀಕ್ಷಣೆಯ ಹೊಸ ವರದಿಗಳು ತಿಳಿಸಿವೆ. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Lok Sabha Election 2024
Koo

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕೇವಲ ಏಳು ಸಂಸದರು (MPs) ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 70ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಅವರೆಲ್ಲರೂ ಭಾರತೀಯ ಜನತಾ ಪಕ್ಷದವರು (BJP) ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ರಾಷ್ಟ್ರೀಯ ಚುನಾವಣಾ ವೀಕ್ಷಣೆಯ ಹೊಸ ವರದಿಗಳು ತಿಳಿಸಿವೆ.

ಅದೇ ರೀತಿ ಕಾಂಗ್ರೆಸ್‌ನ (congress) ಮೂವರು ಸಂಸದರು ತಮ್ಮ ಸ್ಥಾನಗಳಲ್ಲಿ ಒಟ್ಟು ಶೇ. 30ಕ್ಕಿಂತ ಕಡಿಮೆ ಮತಗಳೊಂದಿಗೆ ವಿಜೇತರಾಗಿದ್ದಾರೆ ಎಂಬುದನ್ನು ಈ ವರದಿ ಉಲ್ಲೇಖಿಸಿದೆ. ಹೊಸ ಲೋಕಸಭಾ ಚುನಾವಣೆಯಲ್ಲಿ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮತ ಹಂಚಿಕೆಯನ್ನು ಎಡಿಆರ್ ವಿಶ್ಲೇಷಿಸಿದೆ. ಸೂರತ್ ನಲ್ಲಿ ಬಿಜೆಪಿ ಸಂಸದರು ಅವಿರೋಧವಾಗಿ ಆಯ್ಕೆಯಾಗಿದ್ದರು.

ವರದಿಯ ಪ್ರಕಾರ 542 ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 279 ಮಂದಿ ಶೇ. 50ಕ್ಕಿಂತ ಹೆಚ್ಚಿನ ಮತಗಳಿಂದ ಗೆದ್ದಿದ್ದರೆ 263ರಷ್ಟು ಮಂದಿ ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳಿಂದ ಚುನಾವಣೆ ಗೆದ್ದಿದ್ದಾರೆ.


ಬಿಜೆಪಿಯ 239 ವಿಜೇತರಲ್ಲಿ 75 ಮಂದಿ ತಮ್ಮ ಕ್ಷೇತ್ರಗಳಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಐಎನ್‌ಸಿಯಿಂದ 99 ವಿಜೇತರಲ್ಲಿ 57 ಮಂದಿ ಶೇ. 58, ಎಸ್‌ಪಿಯಿಂದ 37 ವಿಜೇತರಲ್ಲಿ 32 ಮಂದಿ ಶೇ. 86, ಎಐಟಿಸಿಯಿಂದ 29 ವಿಜೇತರಲ್ಲಿ 21 ಮಂದಿ ಶೇ. 72 ಮತ್ತು ಡಿಎಂಕೆಯಿಂದ 22 ವಿಜೇತರಲ್ಲಿ 14 ಮಂದಿ ಶೇ. 64ಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರದಲ್ಲಿ ಒಟ್ಟು ಶೇ. 50ಕ್ಕಿಂತ ಕಡಿಮೆ ಮತಗಳು ಚಲಾವಣೆಯಾದವು ಎಂದು ಅಂಕಿ ಅಂಶ ಉಲ್ಲೇಖಿಸಿದೆ. ಮತ್ತೊಂದೆಡೆ ಬಿಜೆಪಿಯ 164 ಮತ್ತು ಕಾಂಗ್ರೆಸ್‌ನ 42 ಸಂಸದರು ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಗೆದ್ದಿದ್ದಾರೆ. ತೆಲುಗು ದೇಶಂ ಪಕ್ಷವು ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ 15 ಸಂಸದರೊಂದಿಗೆ ಮೂರನೇ ಸ್ಥಾನದಲ್ಲಿದೆ.

ಹೆಚ್ಚು ಮತ ಪಡೆದ ಸಂಸದರು

ಅತಿ ಹೆಚ್ಚು ಮತಗಳ ಹಂಚಿಕೆಯೊಂದಿಗೆ ಗೆದ್ದ ಬಿಜೆಪಿಯ ಅಗ್ರ ಏಳು ಸಂಸದರಲ್ಲಿ ಇಂದೋರ್ ಸಂಸದ ಶಂಕರ್ ಲಾಲ್ವಾನಿ ಅವರು ಒಟ್ಟು ಶೇ. 78.54ರಷ್ಟು ಮತಗಳನ್ನು ಪಡೆದರು. ಅನಂತರ ನವಸಾರಿ ಸಂಸದ ಸಿ.ಆರ್. ಪಾಟೀಲ್ ಅವರು ಶೇ. 77ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಬಿಜೆಪಿಯ ಏಳು ಸ್ಥಾನಗಳ ಪಟ್ಟಿಯಲ್ಲಿ ಗುಜರಾತ್‌ನಲ್ಲಿ ನಾಲ್ಕು, ಮಧ್ಯಪ್ರದೇಶದಲ್ಲಿ ಎರಡು ಮತ್ತು ತ್ರಿಪುರಾದಲ್ಲಿ ಒಂದು ಸ್ಥಾನ ಸೇರಿದೆ.

ವಿಜೇತರಿಗೆ ಪಡೆದ ಮತಗಳನ್ನು ಒಟ್ಟು ಚಲಾವಣೆಯಾದ ಮಾನ್ಯವಾದ ಮತಗಳಿಂದ ಭಾಗಿಸುವ ಮೂಲಕ ಶೇಕಡಾವಾರು ಮತ ಹಂಚಿಕೆಯನ್ನು ಲೆಕ್ಕಹಾಕಲಾಗುತ್ತದೆ. ಹಾಗಾಗಿ ಶೇ. 77ರಷ್ಟು ಮತ ಹಂಚಿಕೆ ಎಂದರೆ ಸರಾಸರಿ ಪ್ರತಿ 100 ಮಾನ್ಯ ಮತಗಳಲ್ಲಿ 77 ಪಾಟೀಲರಿಗೆ ಬಂದಿವೆ.

ವಿದಿಶಾ ಸಂಸದ ಶಿವರಾಜ್ ಸಿಂಗ್ ಚೌಹಾಣ್ ಒಟ್ಟು ಮತಗಳಲ್ಲಿ ಸುಮಾರು ಶೇ. 77ರಷ್ಟು ಗಳಿಸಿದರೆ, ಗಾಂಧಿನಗರ ಸಂಸದ ಅಮಿತ್ ಶಾ ಶೇ. 76.5ರಷ್ಟು ಪಡೆದರು. ಈ ಪಟ್ಟಿಯಲ್ಲಿ ತ್ರಿಪುರಾ ಪಶ್ಚಿಮ ಸಂಸದ ಬಿಪ್ಲಬ್ ಕುಮಾರ್ ದೇಬ್ ಶೇ. 72.85, ವಡೋದರಾ ಸಂಸದ ಡಾ ಹೇಮಾಂಗ್ ಜೋಶಿ ಶೇ. 72.04 ಮತ್ತು ಪಂಚಮಹಲ್ ಸಂಸದ ರಾಜಪಾಲ್ಸಿನ್ಹ್ ಮಹೇಂದ್ರಸಿನ್ಹ್ ಜಾದವ್ ಶೇ. 70.22ರಷ್ಟು ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ


ಕಡಿಮೆ ಮತ ಪಡೆದವರು

ಐದು ಸಂಸದರು ತಮ್ಮ ಸ್ಥಾನಗಳಿಗೆ ಒಟ್ಟು ಮತಗಳ ಶೇ. 30ಕ್ಕಿಂತ ಕಡಿಮೆ ಮತಗಳಿಸಿ ಸದನಕ್ಕೆ ಬಂದಿದ್ದಾರೆ. ಇದರಲ್ಲಿ ಮೂರು ಸ್ಥಾನಗಳನ್ನು ಪಂಜಾಬ್‌ನ ಕಾಂಗ್ರೆಸ್ ಶಾಸಕರು ಗಳಿಸಿದ್ದಾರೆ. ಫಿರೋಜ್‌ಪುರದ ಶೇರ್ ಸಿಂಗ್ ಘುಬಾಯಾ ಶೇ. 23.70, ಪಟಿಯಾಲಾದ ಡಾ ಧರ್ಮವೀರ ಗಾಂಧಿ ಶೇ. 26.54 ಮತ್ತು ಅಮೃತಸರದ ಗುರ್ಜಿತ್ ಸಿಂಗ್ ಔಜ್ಲಾ ಶೇ. 28.18ರಷ್ಟು ಮತಗಳನ್ನು ಗಳಿಸಿದ್ದಾರೆ.

ಪಟ್ಟಿಯಲ್ಲಿರುವ ಇತರ ಇಬ್ಬರು ಸಂಸದರು ಪಂಜಾಬ್‌ನವರಾಗಿದ್ದರು. ಆಮ್ ಆದ್ಮಿ ಪಕ್ಷದ ಆನಂದ್‌ಪುರ ಸಾಹಿಬ್‌ನ ಮಲ್ವಿಂದರ್ ಸಿಂಗ್ ಕಾಂಗ್ ಮತ್ತು ಸ್ವತಂತ್ರ ಫರೀದ್‌ಕೋಟ್ ಶಾಸಕ ಸರಬ್ಜೀತ್ ಸಿಂಗ್ ಖಾಲ್ಸಾ ಅವರು ಒಟ್ಟು ಮತಗಳ ಸುಮಾರು ಶೇ. 29ರಷ್ಟನ್ನು ಗಳಿಸಿದರು.

Continue Reading

ಕರ್ನಾಟಕ

Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

Foreign Investment: ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಪರೀಕ್ಷಿಸುವ ಯಂತ್ರಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಜನೆಯ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಹೈವಿಷನ್ ಕಂಪನಿಯು ಕರ್ನಾಟಕ ಸರ್ಕಾರದ ಜತೆ ಶುಕ್ರವಾರ ಸೋಲ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಹೈವಿಷನ್‌ ಸಿಇಒ ಚೋಯಿ ಡೂ-ವನ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

VISTARANEWS.COM


on

A high level delegation of the state led by Minister MB Patil
Koo

ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಪರೀಕ್ಷಿಸುವ ಯಂತ್ರಗಳನ್ನು ತಯಾರಿಸುವ ಘಟಕ ಆರಂಭಿಸುವ ಯೋಜನೆಯ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಹೈವಿಷನ್ ಕಂಪನಿಯು ಕರ್ನಾಟಕ ಸರ್ಕಾರದ ಜತೆ ಶುಕ್ರವಾರ ಸೋಲ್‌ನಲ್ಲಿ ಒಪ್ಪಂದಕ್ಕೆ ಸಹಿ (Foreign Investment) ಹಾಕಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಹೈವಿಷನ್‌ ಸಿಇಒ ಚೋಯಿ ಡೂ-ವನ್‌ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಕ್ಯಾಮೆರಾ ಇನ್‌ಸ್ಪೆಕ್ಷನ್‌ ಮಷಿನ್ಸ್‌ ತಯಾರಿಕಾ ಘಟಕವು ಫಾಕ್ಸ್‌ಕಾನ್‌ನ ತಯಾರಿಕಾ ಘಟಕದ ಸಮೀಪ ಕಾರ್ಯಾರಂಭ ಮಾಡಲಿದೆ. ಇದರಿಂದ ರಾಜ್ಯದ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಉದ್ಯಮದ ಬೆಳವಣಿಗೆಗೆ ನೆರವಾಗಲಿದೆ.

ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಮಟ್ಟವಾಗಿರುವ ಶೇ 30-35ರಷ್ಟು ಸಬ್ಸಿಡಿಯನ್ನು ಕರ್ನಾಟಕ ಸರ್ಕಾರ ನೀಡುತ್ತಿರುವುದನ್ನು ಸಚಿವ ಎಂ.ಬಿ. ಪಾಟೀಲ ಅವರು, ಹೈವಿಷನ್‌ ಕಂಪನಿಯ ಮುಖ್ಯಸ್ಥರ ಗಮನಕ್ಕೆ ತಂದರು.

ರಾಜ್ಯದ ಉನ್ನತ ಮಟ್ಟದ ನಿಯೋಗವು ಎಲ್ಎಕ್ಸ್ ಇಂಟರ್‌ನ್ಯಾಷನಲ್ ಕಾರ್ಪ್‌, ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಮುಖ್ಯಸ್ಥರನ್ನೂ ಭೇಟಿಯಾಗಿ ಮಾತುಕತೆ ನಡೆಸಿತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

ಎಲ್ಎಕ್ಸ್ ಇಂಟರ್‌ನ್ಯಾಷನಲ್ ಕಾರ್ಪ್‌ ಮುಖ್ಯಸ್ಥರ ಭೇಟಿ ಸಂದರ್ಭದಲ್ಲಿ ವಿದ್ಯುತ್‌ ಚಾಲಿತ ವಾಹನ, ಬ್ಯಾಟರಿ ತಯಾರಿಕೆ ಸಾಧ್ಯತೆ ಮತ್ತು ವಹಿವಾಟು ವಿಸ್ತರಣೆ ಅವಕಾಶಗಳ ಬಗ್ಗೆ ಸಚಿವ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು.

ಎಲ್‌ಜಿ ಕಾರ್ಪ್‌ನ ಪ್ರತ್ಯೇಕ ಕಂಪನಿಯಾಗಿರುವ ಎಲ್‌ಎಕ್ಸ್‌ ಇಂಟರ್‌ನ್ಯಾಷನಲ್‌ ಕಾರ್ಪ್‌ನ ವಿಭಿನ್ನ ವಹಿವಾಟುಗಳಾದ ಎಲ್‌ಎಕ್ಸ್‌ ಸೆಮಿಕಾನ್‌, ಎಲ್‌ಎಕ್ಸ್‌ ಗ್ಲಾಸ್‌, ಎಲ್‌ಎಕ್ಸ್‌ ಪ್ಲಾಸ್ಟಿಕ್‌ ಮತ್ತು ಎಲ್‌ಎಕ್ಸ್‌ ಹೌಸಸ್‌ ವಹಿವಾಟು ಮತ್ತು ಎಲ್‌ಜಿ ಎನರ್ಜಿ ಸೊಲುಷನ್ಸ್‌ ಜತೆಗಿನ ಸಹಯೋಗದ ಬಗ್ಗೆ ಚರ್ಚೆ ನಡೆಸಲಾಯಿತು.

ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಮುಖ್ಯಸ್ಥರ ಜತೆಗಿನ ಭೇಟಿ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ಸ್‌, ಬ್ಯಾಟರಿ ಸೆಲ್‌ ತಯಾರಿಕೆಗೆ ಕರ್ನಾಟಕದಲ್ಲಿ ಇರುವ ಅನುಕೂಲತೆಗಳನ್ನು ನಿಯೋಗವು ಮನವರಿಕೆ ಮಾಡಿಕೊಟ್ಟಿತು. ಸೆಮಿಕಂಡಕ್ಟರ್, ವಿದ್ಯುತ್‌ಚಾಲಿತ ವಾಹನ, ಜೈವಿಕ ತಂತ್ರಜ್ಞಾನ ವಲಯಗಳಲ್ಲಿ ಕರ್ನಾಟಕವು ಉತ್ಕೃಷ್ಟ ಮೂಲಸೌಲಭ್ಯ, ಪರಿಣತ ತಂತ್ರಜ್ಞರು, ಪೂರಕ ಪರಿಸರದ ನೆರವಿನಿಂದ ಜಾಗತಿಕ ಆವಿಷ್ಕಾರದಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ವಿವರಿಸಲಾಗಿದೆ.

ಇದನ್ನೂ ಓದಿ: Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

ಭಾರತದ ರಾಯಭಾರಿಗೆ ಕೃತಜ್ಞತೆ ಸಲ್ಲಿಕೆ

ವಿವಿಧ ಕಂಪನಿಗಳ ಜತೆಗಿನ ಭೇಟಿ ಮತ್ತು ಸೋಲ್‌ನಲ್ಲಿ ಏರ್ಪಡಿಸಿದ್ದ ರೋಡ್‌ಷೋದ ಯಶಸ್ಸಿಗೆ ಸಹಕರಿಸಿದ ದಕ್ಷಿಣ ಕೊರಿಯಾದಲ್ಲಿನ ಭಾರತದ ರಾಯಭಾರಿ ಅಮಿತ್‌ ಕುಮಾರ್‌ ಅವರಿಗೆ ಸಚಿವ ಎಂ.ಬಿ. ಪಾಟೀಲ್‌ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Continue Reading
Advertisement
Hathras Stampede
ದೇಶ46 seconds ago

Hathras Stampede: ಹತ್ರಾಸ್‌ ಕಾಲ್ತುಳಿತ; ಮುಖ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Saffron For Baby
ಆರೋಗ್ಯ2 mins ago

Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

ರಾಜಮಾರ್ಗ ಅಂಕಣ captain pranjal shaurya award
ಅಂಕಣ18 mins ago

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

road accident bike
ಬೆಂಗಳೂರು32 mins ago

Road Accident: ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋದ ಬೈಕ್‌ ಸವಾರ

Lok Sabha Election 2024
Lok Sabha Election 202455 mins ago

Lok Sabha Election 2024: ಲೋಕಸಭೆ ಚುನಾವಣೆಯಲ್ಲಿ 7 ಸಂಸದರಿಗೆ ಸಿಕ್ಕಿದ್ದು ಶೇ. 70ಕ್ಕಿಂತ ಹೆಚ್ಚು ಮತ; ಯಾರಿವರು?

A high level delegation of the state led by Minister MB Patil
ಕರ್ನಾಟಕ56 mins ago

Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

Janaspandana programme in Kottur
ವಿಜಯನಗರ1 hour ago

Vijayanagara News: ಕೊಟ್ಟೂರಿನಲ್ಲಿ ಜನಸ್ಪಂದನ ಕಾರ್ಯಕ್ರಮ; ಸಾರ್ವಜನಿಕರ ಅಹವಾಲು ಆಲಿಸಿದ ಡಿಸಿ

Superfoods
ಆರೋಗ್ಯ1 hour ago

Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

Latest1 hour ago

Branded Company: ಬ್ರಾಂಡೆಡ್‌ ಬ್ಯಾಗ್‌ ಕಂಪನಿಗಳ ಲೂಟಿ; ಸಾವಿರಕ್ಕೆ ಖರೀದಿಸಿ ಲಕ್ಷಕ್ಕೆ ಸೇಲ್‌!

karnataka Weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ14 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ16 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ16 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ18 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ19 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು21 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು21 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌