Rahul Gandhi: ಕೋಲಾರದಿಂದ ದೆಹಲಿಗೆ ಹೋಗ್ತಿದ್ದ ಹಾಗೇ ಗೋಲ್​ಗಪ್ಪಾ ತಿಂದ ರಾಹುಲ್ ಗಾಂಧಿ; ಮಾರ್ಕೆಟ್​ನಲ್ಲೆಲ್ಲ ಓಡಾಟ - Vistara News

ದೇಶ

Rahul Gandhi: ಕೋಲಾರದಿಂದ ದೆಹಲಿಗೆ ಹೋಗ್ತಿದ್ದ ಹಾಗೇ ಗೋಲ್​ಗಪ್ಪಾ ತಿಂದ ರಾಹುಲ್ ಗಾಂಧಿ; ಮಾರ್ಕೆಟ್​ನಲ್ಲೆಲ್ಲ ಓಡಾಟ

2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್​​ನಡಿ ರಾಹುಲ್ ಗಾಂಧಿ ದೋಷಿ ಎನ್ನಿಸಿ, 2ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

VISTARANEWS.COM


on

Rahul Gandhi visit Matia Mahal market in NewDelhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯವರು ಕರ್ನಾಟಕದ ಕೋಲಾರದಲ್ಲಿ ಜೈ ಭಾರತ್ ಸಮಾವೇಶ ಮುಗಿಸಿ, ವಾಪಸ್ ದೆಹಲಿಗೆ ತೆರಳುತ್ತಿದ್ದಂತೆ, ಹಳೇ ದೆಹಲಿಯಲ್ಲಿರುವ ಮಟಿಯಾ ಮಹಲ್​ ಮಾರ್ಕೆಟ್​ ಮತ್ತು ಬೆಂಗಾಳಿ ಮಾರುಕಟ್ಟೆಗೆ ಭೇಟಿ ಕೊಟ್ಟಿ, ವಿವಿಧ ಖಾದ್ಯಗಳನ್ನು ಸವಿದಿದ್ದಾರೆ. ಇದು ರಂಜಾನ್​ ತಿಂಗಳಾಗಿದ್ದರಿಂದ ಈ ಪ್ರದೇಶಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿರುತ್ತದೆ. ವಿಪರೀತ ಜನಜಂಗುಳಿ ಇದ್ದು, ಹಬ್ಬದ ವಾತಾವರಣವೇ ಇರುತ್ತದೆ. ನೀಲಿ ಬಣ್ಣದ ಟಿಶರ್ಟ್​ ತೊಟ್ಟ ರಾಹುಲ್ ಗಾಂಧಿ ಮಾರುಕಟ್ಟೆಯಲ್ಲೆಲ್ಲ ಓಡಾಡಿ, ತಮಗೆ ಇಷ್ಟಬಂದ ತಿಂಡಿಗಳನ್ನೆಲ್ಲ ತಿಂದಿದ್ದಾರೆ. ಆ ಫೋಟೋಗಳು ವೈರಲ್ ಆಗುತ್ತಿವೆ.

ಮಟಿಯಾ ಮಹಲ್​​ನಲ್ಲಿರುವ ಪ್ರಸಿದ್ಧ ಪಾನಕದ ಅಂಗಡಿಯೊಂದಕ್ಕೆ ಭೇಟಿ ನೀಡಿ ಅವರು ಕಲ್ಲಂಗಡಿ ಹಣ್ಣಿನ ಶರಬತ್​ ಕುಡಿದಿದ್ದಾರೆ. ಅಲ್ಲೇ ಅಕ್ಕಪಕ್ಕದ ಅಂಗಡಿಗಳಿಗೂ ಅವರು ಭೇಟಿ ಕೊಟ್ಟಿದ್ದಾರೆ. ಬಳಿಕ ಬಂಗಾಳಿ ಮಾರ್ಕೆಟ್​​ನ ನಾಥು ಸ್ವೀಟ್ಸ್​​​ನಲ್ಲಿ ಗೋಲ್​​ಗಪ್ಪಾ ಸವಿದಿದ್ದಾರೆ. ಇನ್ನು ರಾಹುಲ್ ಗಾಂಧಿಯವರ ಭೇಟಿ ಹೊತ್ತಲ್ಲಿ ಈ ಮಾರ್ಕೆಟ್​ಗಳಲ್ಲಿ ಭರ್ಜರಿ ಜನರು ಸೇರಿದ್ದರು. ಸಣ್ಣಪುಟ್ಟ ದಾರಿಗಳೆಲ್ಲ ತುಂಬಿ ತುಳುಕುತ್ತಿದ್ದವು. ಕಾಂಗ್ರೆಸ್​ ಪರ, ರಾಹುಲ್​ ಗಾಂಧಿ ಪರ ಘೋಷಣೆಗಳನ್ನು ಕೂಗುತ್ತಿದ್ದರು.

2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್​​ನಡಿ ರಾಹುಲ್ ಗಾಂಧಿ ದೋಷಿ ಎನ್ನಿಸಿ, 2ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗೆ ಅನರ್ಹಗೊಂಡ ಬಳಿಕ ಮೊದಲು ತಮ್ಮ ಕ್ಷೇತ್ರವಾಗಿದ್ದ ಕೇರಳದ ವಯಾನಾಡ್​​ಗೆ ಭೇಟಿ ಕೊಟ್ಟಿದ್ದರು. ಬಳಿಕ ಕರ್ನಾಟಕದ ಕೋಲಾರಕ್ಕೆ ಏಪ್ರಿಲ್​ 16ರಂದು ಆಗಮಿಸಿ, ಜೈ ಭಾರತ್​ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಮಾರ್ಕೆಟ್​​ನಲ್ಲಿ ರಾಹುಲ್ ಗಾಂಧಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

Mukesh Ambani: ಜುಲೈ 12ರಂದು ಮುಂಬೈಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿದೆ. ಈಗ ಮುಕೇಶ್‌ ಅಂಬಾನಿ ಅವರು ದೇಶದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.

VISTARANEWS.COM


on

Mukesh Ambani
Koo

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ, ದೇಶದ ಆಗರ್ಭ ಶ್ರೀಮಂತ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಕ್ಕೆ ದಿನಗಣನೆ ಆರಂಭವಾಗಿದೆ. ಜುಲೈ 12ರಂದು ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಹಾಗಾಗಿ, ಗುರುವಾರ (ಜುಲೈ 4) ಮುಕೇಶ್‌ ಅಂಬಾನಿ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿಯಾಗಿ, ಮಗನ ಮದುವೆಗೆ ಆಹ್ವಾನಿಸಿದ್ದಾರೆ.

ನವದೆಹಲಿಯ 10 ಜನಪಥದಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ ಮುಕೇಶ್‌ ಅಂಬಾನಿ ಅವರು ಕಾಂಗ್ರೆಸ್‌ ನಾಯಕಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ. ಅದ್ಧೂರಿಯಾಗಿ ನಡೆಯುವ ವಿವಾಹ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ನೂರಾರು ರಾಜಕಾರಣಿಗಳು, ಬಾಲಿವುಡ್‌ ನಟ-ನಟಿಯರು, ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬಹುತೇಕ ಜನರಿಗೆ ಮುಕೇಶ್‌ ಅಂಬಾನಿ ಅವರ ಕುಟುಂಬದಿಂದ ವಿವಾಹ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜುಲೈ 12ರಂದು ನಡೆಯುವ ಅದ್ಧೂರಿ ವಿವಾಹ ಸಮಾರಂಭಕ್ಕೆ ಮುನ್ನುಡಿಯಾಗಿ ಜುಲೈ 2ರಂದು ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಸುಮಾರು 50 ಬಡ ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿ ಮಾದರಿಯಾಗಿದ್ದಾರೆ. ಮುಂಬೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಫಾಲ್ಘರ್‌ನಲ್ಲಿ ಈ ಸಾಮೂಹಿಕ ವಿವಾಹ ನೆರವೇರಿತು. ರಿಲಯನ್ಸ್‌ ಕಾರ್ಪೋರೇಟ್‌ ಪಾರ್ಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಜೋಡಿಗಳು ಹಸೆಮಣೆ ಏರಿದವು.

ಈ ಸಾಮೂಹಿಕ ವಿವಾಹದಲ್ಲಿ ವಧು-ವರರ ಕುಟುಂಬದ ಸುಮಾರು 800 ಮಂದಿ ಪಾಲ್ಗೊಂಡಿದ್ದರು. ಸ್ವತಃ ಮುಕೇಶ್‌ ಅಂಬಾನಿ, ನೀತಾ ಅಂಬಾನಿ, ಆಕಾಶ್‌ ಅಂಬಾನಿ, ಶ್ಲೋಕ ಮೆಹ್ತಾ, ಇಶಾ ಅಂಬಾನಿ, ಆನಂದ್‌ ಪಿರಮಾಲ್‌ ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

ಪ್ರತಿ ಜೋಡಿಗೆ ಚಿನ್ನದ ಉಂಗುರ, ಮಂಗಳ ಸೂತ್ರ, ಮೂಗುತ್ತಿ ಉಡುಗೊರೆಯಾಗಿ ನೀಡಲಾಯಿತು. ಜತೆಗೆ ಬೆಳ್ಳಿಯ ಆಭರಗಳನ್ನೂ ನೀಡಲಾಗಿದೆ. ಜತೆಗೆ ಸ್ತ್ರೀಧನವಾಗಿ ಪ್ರತಿ ವಧುವಿಗೆ 1.01 ಲಕ್ಷ ರೂ. ಚೆಕ್‌ ಅನ್ನು ಅಂಬಾನಿ ಕುಟುಂಬಸ್ಥರು ವಿತರಿಸಿದ್ದಾರೆ. ಮಾತ್ರವಲ್ಲ ಪ್ರತಿ ಜೋಡಿಗೆ ಒಂದು ವರ್ಷಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಇದು ಪಾತ್ರೆ ಪರಿಕರಗಳು, ಗ್ಯಾಸ್‌ ಸ್ಟವ್‌, ಮಿಕ್ಸಿ, ಫ್ಯಾನ್‌, ಹಾಸಿಗೆ ಮತ್ತು ತಲೆ ದಿಂಬುಗಳನ್ನು ಒಳಗೊಂಡಿದೆ. ಅದ್ಧೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ವರ್ಲಿ ಬುಡಕಟ್ಟು ಜನಾಂಗದವರು ಪ್ರದರ್ಶಿಸಿದ ಸಾಂಪ್ರದಾಯಿಕ ತಾರ್ಪ ನೃತ್ಯವನ್ನು ಅತಿಥಿಗಳು ಮತ್ತು ಅಂಬಾನಿ ಕುಟುಂಬದ ಸದಸ್ಯರು ವೀಕ್ಷಿಸಿದರು.

ಇದನ್ನೂ ಓದಿ: Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Continue Reading

ದೇಶ

Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

Hathras Stampede:ಘಟನೆ ಬಳಿಕ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ ತನ್ನ ಬೆಂಬಲಿಗರೊಂದಿಗೆ ಸ್ಥಳದಿಂದ ಎಸ್ಕೇಪ್‌ ಆಗುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ದೃಶ್ಯ ಪೆಟ್ರೋಲ್‌ ಪಂಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

Hatras Stampede
Koo

ಲಖನೌ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ(Hathras Stampede) ದುರ್ಘಟನೆಗೆ ಸಂಬಂಧಿಸಿದ ಕೆಲವೊಂದು ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್‌ ಆಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಘಟನೆ ಬಳಿಕ ನಾರಾಯಣ ಸಾಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ(Bhole Baba) ತನ್ನ ಬೆಂಬಲಿಗರೊಂದಿಗೆ ಸ್ಥಳದಿಂದ ಎಸ್ಕೇಪ್‌ ಆಗುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ದೃಶ್ಯ ಪೆಟ್ರೋಲ್‌ ಪಂಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ತನಿಖೆ ಆರಂಭಿಸಿರುವ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ, ಪ್ರಮುಖ ಆರೋಪಿಯ ಕುರಿತು ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.

“ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿ ಒಟ್ಟು ಆರು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಇದುವರೆಗೆ 121 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳನ್ನು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ಮುಕ್ತಾಯಗೊಂಡಿದೆ” ಎಂದು ಅಲಿಗಢ ಐಜಿ ಶಾಲಾಭ್‌ ಮಾಥುರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಭೋಲೆ ಬಾಬಾ ನಂತರ ಪ್ರತ್ಯಕ್ಷರಾಗಿದ್ದು, “ನಾನು ಸತ್ಸಂಗ ಮುಗಿಸಿ ತೆರಳಿದ ಬಳಿಕ ಘಟನೆ ನಡೆದಿದೆ. ಇದು ಸಮಾಜಘಾತುಕ ಶಕ್ತಿಗಳ ಕೃತ್ಯ” ಎಂದಿದ್ದಾರೆ. ಕಾಲ್ತುಳಿತದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ.

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ನೂರಾರು ಜನರ ಸಾವಿನ ಬಳಿಕ ಭೋಲೆ ಬಾಬಾ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Continue Reading

ದೇಶ

PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

PF Interest: ಕೇಂದ್ರ ಹಣಕಾಸು ಸಚಿವಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ 1ರಿಂದ ಸೆಪ್ಟೆಂಬರ್‌ 30ರವರೆಗಿನ ತ್ರೈಮಾಸಿಕದಲ್ಲಿ ಜಿಪಿಎಫ್‌ ಸೇರಿ ಹಲವು ಭವಿಷ್ಯ ನಿಧಿಗಳ ಮೇಲಿನ ಬಡ್ಡಿದರವನ್ನು ಶೇ.7.1ರಷ್ಟು ಘೋಷಿಸಲಾಗಿದೆ. ಇದೊಂದು ಔಪಚಾರಿಕ ಮಾಹಿತಿಯಾಗಿದೆ ಎಂಬುದಾಗಿ ಮಾಹಿತಿ ನೀಡಿದೆ.

VISTARANEWS.COM


on

PF Interest
Koo

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಗುರುವಾರ (ಜುಲೈ 4) ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ (GPF) ಸೇರಿ ಹಲವು ಭವಿಷ್ಯ ನಿಧಿ ಯೋಜನೆಗಳಿಗೆ ಬಡ್ಡಿದರವನ್ನು ಘೋಷಣೆ ಮಾಡಿದೆ. ಸಾಮಾನ್ಯ ಭವಿಷ್ಯ ನಿಧಿ ಸೇರಿ ಹಲವು ಭವಿಷ್ಯ ನಿಧಿಗಳಿಗೆ ಕೇಂದ್ರ ಸರ್ಕಾರವು ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.7.1ರಷ್ಟು ಬಡ್ಡಿದರವನ್ನು (PF Interest) ಘೋಷಣೆ ಮಾಡಿದೆ.

ಕೇಂದ್ರ ಹಣಕಾಸು ಸಚಿವಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಪ್ರಸಕ್ತ ಹಣಕಾಸು ವರ್ಷದ ಜುಲೈ 1ರಿಂದ ಸೆಪ್ಟೆಂಬರ್‌ 30ರವರೆಗಿನ ತ್ರೈಮಾಸಿಕದಲ್ಲಿ ಜಿಪಿಎಫ್‌ ಸೇರಿ ಹಲವು ಭವಿಷ್ಯ ನಿಧಿಗಳ ಮೇಲಿನ ಬಡ್ಡಿದರವನ್ನು ಶೇ.7.1ರಷ್ಟು ಘೋಷಿಸಲಾಗಿದೆ. ಇದೊಂದು ಔಪಚಾರಿಕ ಮಾಹಿತಿಯಾಗಿದೆ. ನೂತನ ಬಡ್ಡಿದರವು ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ” ಎಂಬುದಾಗಿ ಮಾಹಿತಿ ನೀಡಿದೆ.

ಇದರ ಜತೆಗೆ, ಇದೇ ತ್ರೈಮಾಸಿಕದಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.8.2ರಷ್ಟು ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯ ಬಡ್ಡಿದರವನ್ನು ಶೇ.7.7ರಷ್ಟೇ ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಯಾವೆಲ್ಲ ಭವಿಷ್ಯ ನಿಧಿಗಳಿಗೆ ಶೇ.7.1ರಷ್ಟು ಬಡ್ಡಿದರ?

  1. ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸೇವೆಗಳು)
  2. ಕೊಡುಗೆ ಭವಿಷ್ಯ ನಿಧಿ (ಭಾರತ)
  3. ಅಖಿಲ ಭಾರತ ಸೇವೆಗಳ ಭವಿಷ್ಯ ನಿಧಿ
  4. ರಾಜ್ಯ ರೈಲ್ವೆ ಭವಿಷ್ಯ ನಿಧಿ
  5. ಸಾಮಾನ್ಯ ಭವಿಷ್ಯ ನಿಧಿ (ರಕ್ಷಣಾ ಸೇವೆಗಳು)
  6. ಭಾರತೀಯ ಶಸ್ತ್ರಾಸ್ತ್ರ ಇಲಾಖೆ ಭವಿಷ್ಯ ನಿಧಿ

ಜಿಪಿಎಫ್‌ಗೂ, ಪಿಎಫ್‌ಗೂ ಏನು ವ್ಯತ್ಯಾಸ?

ಸಾಮಾನ್ಯ ಭವಿಷ್ಯ ನಿಧಿಗೂ (GPF), ಉದ್ಯೋಗಿಗಳ ಭವಿಷ್ಯ ನಿಧಿಗೂ (EPF) ಅಂತಹ ವ್ಯತ್ಯಾಸವೇನಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಕಂಪನಿಗಳು ನೀಡುವ ಭವಿಷ್ಯ ನಿಧಿಯನ್ನು ಇಪಿಎಫ್‌ ಎನ್ನುತ್ತಾರೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಭವಿಷ್ಯ ನಿಧಿಯನ್ನು ಸಾಮಾನ್ಯ ಭವಿಷ್ಯ ನಿಧಿ ಎಂದು ಕರೆಯಲಾಗುತ್ತದೆ. ಎರಡೂ ಕಡೆಗಳಲ್ಲಿ ಉದ್ಯೋಗಿಯ ನೌಕರನ ಸಂಬಳದಲ್ಲಿ ಮಾಸಿಕವಾಗಿ ಒಂದಷ್ಟು ನಿಗದಿತ ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಮೊತ್ತಕ್ಕೆ ಬಡ್ಡಿಯನ್ನೂ ನೀಡಲಾಗುತ್ತದೆ.

ಇದನ್ನೂ ಓದಿ: Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ದೇಶ

LK Advani: ಎಲ್‌.ಕೆ. ಅಡ್ವಾಣಿ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

LK Advani: ಬುಧವಾರ (ಜುಲೈ 3) ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

LK Advani
Koo

ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (L K Advani) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ದೆಹಲಿಯ ಅಪೋಲೊ ಆಸ್ಪತ್ರೆಯಿಂದ (Apollo Hospital) ಡಿಸ್‌ಚಾರ್ಜ್‌ ಮಾಡಲಾಗಿದೆ. ಅಪೋಲೊ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯ ಚೇತರಿಕೆ ಕಂಡಿದೆ. ಹಾಗಾಗಿ, ಗುರುವಾರ (ಜುಲೈ 4) ಸಂಜೆ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬುಧವಾರ (ಜುಲೈ 3) ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌ 27ರಂದು ಕೂಡ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಹಾಗಾಗಿ ಅವರನ್ನು ಅದೇ ರಾತ್ರಿ ದೆಹಲಿಯಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು.

LK Advani

ಕಳೆದ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದರಾದ ಅಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ.

ಅಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಎಲ್‌ಕೆ ಅಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು

Continue Reading
Advertisement
Rohit Sharma
ಕ್ರಿಕೆಟ್29 mins ago

Rohit Sharma : ವಾಂಖೆಡೆ ಸ್ಟೇಡಿಯಮ್​ನಲ್ಲಿ ಡಾನ್ಸ್ ಮಾಡಿದ ರೋಹಿತ್ ಶರ್ಮಾ

Mukesh Ambani
ದೇಶ1 hour ago

Mukesh Ambani: ಸೋನಿಯಾ ಗಾಂಧಿಯನ್ನು ಮಗನ ಮದುವೆಗೆ ಆಹ್ವಾನಿಸಿದ ಮುಕೇಶ್‌ ಅಂಬಾನಿ

India's open-bus parade
ಪ್ರಮುಖ ಸುದ್ದಿ1 hour ago

India’s open-bus parade : ಭಾರತ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ; ಬಸ್​​ನಲ್ಲಿದ್ದ ಆಟಗಾರರು ಜಸ್ಟ್​ ಮಿಸ್​​

Team India
ಪ್ರಮುಖ ಸುದ್ದಿ2 hours ago

Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

BS Yediyurappa
ಕರ್ನಾಟಕ2 hours ago

BS Yediyurappa: ಪೋಕ್ಸೊ ಕೇಸ್;‌ ಜುಲೈ 17ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್‌ವೈಗೆ ಕೋರ್ಟ್‌ ಸಮನ್ಸ್!

Hatras Stampede
ದೇಶ2 hours ago

Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

PF Interest
ದೇಶ3 hours ago

PF Interest: ನೌಕರರಿಗೆ ಗುಡ್‌ ನ್ಯೂಸ್;‌ ಪಿಎಫ್‌ ಬಡ್ಡಿದರ ಘೋಷಿಸಿದ ಕೇಂದ್ರ ಸರ್ಕಾರ, ಎಷ್ಟಿದೆ ನೋಡಿ

Hardik Pandya
ಪ್ರಮುಖ ಸುದ್ದಿ3 hours ago

Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

Heavy rain in Uttara Kannada district district NDRF team for rescue says DC Gangubai Manakar
ಉತ್ತರ ಕನ್ನಡ3 hours ago

Uttara Kannada News: ಉ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

Central Govt approves quadrilateral road in Shira at a cost of Rs 1000 rs crore says TB Jayachandra
ತುಮಕೂರು3 hours ago

Shira News: ಶಿರಾದಲ್ಲಿ 1,000 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಗೆ ಕೇಂದ್ರದಿಂದ ಅನುಮೋದನೆ: ಟಿ.ಬಿ ಜಯಚಂದ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ6 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ8 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ9 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ10 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ11 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ12 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

ಟ್ರೆಂಡಿಂಗ್‌