ಕಾಂಗ್ರೆಸ್​ ಪ್ರತಿಭಟನೆಗೆ ಆಗಸ್ಟ್​ 5ನ್ನೇ ಯಾಕೆ ಆಯ್ಕೆ ಮಾಡಿಕೊಂಡಿತು?; ರಾಮ, ರಾವಣ ಜಗಳ ! - Vistara News

ದೇಶ

ಕಾಂಗ್ರೆಸ್​ ಪ್ರತಿಭಟನೆಗೆ ಆಗಸ್ಟ್​ 5ನ್ನೇ ಯಾಕೆ ಆಯ್ಕೆ ಮಾಡಿಕೊಂಡಿತು?; ರಾಮ, ರಾವಣ ಜಗಳ !

ಆಗಸ್ಟ್​ 5ರಂದು ಕಾಂಗ್ರೆಸ್​ ಪ್ರತಿಭಟನೆ ದೊಡ್ಡಮಟ್ಟದಲ್ಲಿ ನಡೆದಿದೆ. ಅದಾದ ಬಳಿಕ ಗೃಹ ಸಚಿವ ಅಮಿತ್​ ಶಾ ಪ್ರತಿಕ್ರಿಯೆ ನೀಡಿ ಆರೋಪವೊಂದನ್ನು ಮಾಡಿದ್ದಾರೆ. ಅದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

VISTARANEWS.COM


on

Congress Protest
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬೆಲೆ ಏರಿಕೆ, ಜಿಎಸ್​ಟಿ ಹೆಚ್ಚಳ ವಿರೋಧಿಸಿ ಆಗಸ್ಟ್​ 2ರಂದು ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ನಡೆಸಿದ್ದ ಪ್ರತಿಭಟನೆ ಈಗ ‘ರಾಮ-ರಾವಣ’ ತಿರುವು ತೆಗೆದುಕೊಂಡಿದೆ. ‘2020ರ ಆಗಸ್ಟ್​ 5ರಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಆ ಕ್ಷಣ ದೇಶದ ಪಾಲಿಗೆ ಐತಿಹಾಸಿಕವಾಗಿತ್ತು. ಆದರೆ ಬೇಕೆಂತಲೇ ಅದೇ ದಿನವನ್ನೇ ಕಾಂಗ್ರೆಸ್ಸಿಗರು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್​ನ ಓಲೈಕೆ ರಾಜಕಾರಣ. ತಮ್ಮ ನಿಲುವು ಏನೆಂದು ತೋರಿಸಲೆಂದೇ ಈ ದಿನ ಕಪ್ಪು ಬಟ್ಟೆ ಧರಿಸಿ ಹೋರಾಟ ನಡೆಸಿದ್ದು’ ಎಂದು ಗೃಹ ಸಚಿವ ಅಮಿತ್​ ಶಾ ಆರೋಪ ಮಾಡಿದ್ದಾರೆ.

ಹೀಗೆ ಕಾಂಗ್ರೆಸ್​ನ ಪ್ರತಿಭಟನೆಯನ್ನು ಅಯೋಧ್ಯಾ ರಾಮಮಂದಿರ ನಿರ್ಮಾಣ ಭೂಮಿಪೂಜೆಗೆ ಲಿಂಕ್​ ಮಾಡಿದ ಅಮಿತ್​ ಶಾರಿಗೆ ಕಾಂಗ್ರೆಸ್​​ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅದರಲ್ಲೂ ಕಾಂಗ್ರೆಸ್ ಸಂಸದ ಅಧೀರ್​ ರಂಜನ್​ ಚೌಧರಿ ‘ಈ ಕೇಂದ್ರ ಸರ್ಕಾರ ರಾಮನ ಹೆಸರಿನಲ್ಲಿ ರಾವಣನನ್ನು ಪೂಜಿಸುತ್ತಿದೆ. ಇವರ ಆಳ್ವಿಕೆಯಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದೊಂದು ಜನ-ವಿರೋಧಿ ಮತ್ತು ಕಾರ್ಪೋರೇಟ್​ ಪರವಾಗಿರುವ ಸರ್ಕಾರ ಎಂಬುದನ್ನು ನಮ್ಮ ಕಾಂಗ್ರೆಸ್​ ಸಾಬೀತುಪಡಿಸಿದೆ. ನಾವು ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂಥ ಹುರುಳು ಇಲ್ಲದ ಆರೋಪವನ್ನು ನಮ್ಮ ಬಗ್ಗೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಅಮಿತ್​ ಶಾ ಅವರ ಈ ಆರೋಪಕ್ಕೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಕೂಡ ತಿರುಗೇಟು ನೀಡಿದ್ದಾರೆ. ‘ಕೇಂದ್ರ ಸರ್ಕಾರದ ಹುಳುಕುಗಳನ್ನು ನಾವು ತೋರಿಸುತ್ತಿದ್ದೇವೆ. ಆದರೆ ತಮ್ಮ ತಪ್ಪು ಜನರಿಗೆ ಗೊತ್ತಾಗಿಬಿಡುತ್ತದಲ್ಲಾ ಎಂಬ ಹೆದರಿಕೆಯಿಂದ ಅವರ ಗಮನ ಬೇರೆಡೆಗೆ ಸೆಳೆಯಲು ಅಯೋಧ್ಯೆಯ ವಿಷಯವನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಇಂಥ ಬೋಗಸ್​ ವಿಷಯವನ್ನು ಎತ್ತಿದ್ದಾರೆ ಅಂದರೆ, ಪ್ರತಿಭಟನೆ ಬಿಸಿ ಸರಿಯಾಗಿ ತಟ್ಟಿದೆ ಎಂದೇ ಅರ್ಥ ’ ಎಂದಿದ್ದಾರೆ. ‘ಈ ದೇಶದ ಮಧ್ಯಮ ವರ್ಗದ ಜನರು-ಬಡವರ ಮೇಲೆ ಬೀಳುತ್ತಿರುವ ಹಣದುಬ್ಬರ ಹೊರೆಯನ್ನು ಹೋರಾಡುವ ಮಾರ್ಗವನ್ನು ನಮಗೆ ತೋರಿಸಿದ್ದೇ ಭಗವಾನ್​ ಶ್ರೀರಾಮ​’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: Congress Protest Live | ಬ್ಯಾರಿಕೇಡ್​ ಹಾರಿದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ ಪೊಲೀಸ್​​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜ್ಞಾನ

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

ಭಾರತ ಪರಮಾಣು ಶಕ್ತಿ ರಾಷ್ಟ್ರವಾಗಿ ಇಂದಿಗೆ 50 ವರ್ಷ. ಇಂದಿಗೆ ಸುಮಾರು 50 ವರ್ಷಗಳ ಹಿಂದೆ ಭಾರತ ರಾಜಸ್ಥಾನದ ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು (Nuclear Test In Pokhran) ನಡೆಸಿತ್ತು. ಈ ಕುರಿತ ಕುತೂಹಲಕರ ಹಿನ್ನೋಟ ಇಲ್ಲಿದೆ.

VISTARANEWS.COM


on

By

Nuclear test at Pokhran
Koo

ಇಂದಿಗೆ 50 ವರ್ಷಗಳ ಹಿಂದೆ ಭಾರತದ (India) ಇತಿಹಾಸದಲ್ಲಿ ಒಂದು ಅಭೂತಪೂರ್ವ ಕ್ಷಣ ದಾಖಲಾಗಿತ್ತು. ಅದುವೇ ಅಣು ಪರೀಕ್ಷೆ. ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ (Nuclear Test In Pokhran) ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಆಗಿನ ಪ್ರಧಾನಿಯಾಗಿದ್ದ (Prime Minister) ಇಂದಿರಾ ಗಾಂಧಿಯವರು (Indira gandhi) 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ (BARC) ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.

ಭಾರತ ಇಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಅಂದಿನ ಪರೀಕ್ಷೆ ಭಾರತವನ್ನು ಪರಮಾಣು ಶಕ್ತಿಯನ್ನಾಗಿ ರೂಪಿಸಿತು.

ಸ್ಮೈಲಿಂಗ್ ಬುದ್ಧ ಹೆಸರು ನೀಡಿದ್ದು ಯಾಕೆ?

ಈ ಪರೀಕ್ಷೆಗೆ ‘ಸ್ಮೈಲಿಂಗ್ ಬುದ್ಧ’ ಎಂಬ ಸಂಕೇತನಾಮವನ್ನು ನೀಡಲಾಯಿತು. 1974ರ ಮೇ 18ರಂದು ಆ ವರ್ಷದ ಬುದ್ಧ ಪೂರ್ಣಿಮೆಯಂದು ಪರೀಕ್ಷೆಯನ್ನು ನಡೆಸಲಾಗಿದ್ದರಿಂದ ಈ ಹೆಸರನ್ನು ಆಯ್ಕೆ ಮಾಡಲಾಯಿತು. “ಬುದ್ಧ ಅಂತಿಮವಾಗಿ ಮುಗುಳ್ನಕ್ಕ” ಎಂಬುದು ಭಾರತದ ಪ್ರಧಾನ ಪರಮಾಣು ಸಂಶೋಧನಾ ಸಂಸ್ಥೆ ಭಾಭಾ ಪರಮಾಣು ಸಂಶೋಧನಾ ಕೇಂದ್ರದ (BARC) ನಿರ್ದೇಶಕ ರಾಜಾ ರಾಮಣ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂದೇಶವನ್ನು ರವಾನಿಸಿದ್ದರು!


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಹೊಂದಿರದ ರಾಷ್ಟ್ರವೊಂದು ನಡೆಸಿದ ಮೊದಲ ಪರಮಾಣು ಪರೀಕ್ಷೆ ಇದಾಗಿದೆ.

ಪೋಖ್ರಾನ್‌ನಲ್ಲಿ ಸ್ಫೋಟಿಸಿದ ಸಾಧನದ ಬಗ್ಗೆ ಚರ್ಚೆಯಾಗಿದ್ದರೂ, ಇದು ಸುಮಾರು 8- 12 ಕಿಲೋ ಟನ್‌ಗಳಷ್ಟು ಟಿಎನ್‌ಟಿ (ಪರಮಾಣು ಪರೀಕ್ಷೆ ಮಾಪನ) ಎಂದು ನಂಬಲಾಗಿದೆ. ಪರೀಕ್ಷೆಯ ಪ್ರಮುಖ ಅಂಶವೆಂದರೆ ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಗುಪ್ತಚರ ಸಂಸ್ಥೆಗಳ ಪತ್ತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು. ಇಂತಹ ಪರೀಕ್ಷೆಗಳು ಪರಮಾಣು ಪ್ರಸರಣಕ್ಕೆ ಕಾರಣವಾಗಬಹುದು ಎಂದು ಹೇಳಿದ ಅಮೆರಿಕದಂತಹ ರಾಷ್ಟ್ರದ ನಿರ್ಬಂಧಗಳ ಸರಣಿಯನ್ನು ದೇಶವು ಎದುರಿಸಿತು.


ಎರಡು ವರ್ಷಗಳ ತಯಾರಿ

ಈ ಪರೀಕ್ಷೆಯನ್ನು ನಡೆಸಲು ಭಾರತಕ್ಕೆ ಸುಮಾರು ಎರಡು ವರ್ಷಗಳ ತಯಾರಿ ಬೇಕಾಯಿತು. ಇಂದಿರಾ ಗಾಂಧಿಯವರು 1972ರ ಸೆಪ್ಟೆಂಬರ್‌ನಲ್ಲಿ ಸ್ವದೇಶಿ ವಿನ್ಯಾಸದ ಪರಮಾಣು ಸಾಧನವನ್ನು ಸ್ಫೋಟಿಸಲು ಬಿಎಆರ್‌ಸಿ ವಿಜ್ಞಾನಿಗಳಿಗೆ ಅನುಮತಿ ನೀಡಿದ್ದರು.

ಇದನ್ನೂ ಓದಿ: Chinese Scientists: ಇನ್ನು ಮನುಷ್ಯರು 130 ವರ್ಷ ಬದುಕಬಹುದು! ಚೀನಾ ವಿಜ್ಞಾನಿಗಳ ಸಂಶೋಧನೆ

ಪೋಖ್ರಾನ್-II ಪರೀಕ್ಷೆ

1974ರ ಅನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1998ರಲ್ಲಿ ಭಾರತವು ಅದೇ ಸ್ಥಳದಲ್ಲಿ ಪೋಖ್ರಾನ್- II ಹೆಸರಿನಲ್ಲಿ ಮತ್ತೊಂದು ಪರಮಾಣು ಪರೀಕ್ಷೆ ನಡೆಸಿತು. ಈ ಪರೀಕ್ಷೆ ಮೇ 1998ರಲ್ಲಿ ಪೋಖ್ರಾನ್‌ನಲ್ಲಿ ಐದು ಪರಮಾಣು ಸ್ಫೋಟಗಳ ಸರಣಿಯನ್ನು ಕಂಡವು. ಪೋಖ್ರಾನ್-II ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. 2020ರಿಂದ ಭಾರತವು 1974ರ ಪೋಖ್ರಾನ್ ಪರೀಕ್ಷೆಗಳ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಾರಂಭಿಸಿತ್ತು.

Continue Reading

ದೇಶ

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Police Station: ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ಠಾಣೆಯಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇದಾದ ಬಳಿಕ ಗ್ರಾಮಸ್ಥರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದಾರೆ.

VISTARANEWS.COM


on

Police Station
Koo

ಪಟನಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ (Araria District) ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್‌ ಠಾಣೆಗೇ (Police Station) ಬೆಂಕಿ ಹಚ್ಚಿದ್ದಾರೆ. ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲುತೂರಾಟ (Stone Pelting) ನಡೆಸಿದ ಕಾರಣ ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ನಾದಿನಿಯನ್ನು ಮದುವೆಯಾಗಿದ್ದರು. ಹೆಂಡತಿ ತೀರಿಕೊಂಡ ಬಳಿಕ ನಾದಿನಿಯನ್ನು ವ್ಯಕ್ತಿಯು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ಕರೆದೊಯ್ದಿದ್ದರು. ಆದರೆ, ಪೊಲೀಸ್‌ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರ ಆರೋಪವೇನು?

ವ್ಯಕ್ತಿ ಹಾಗೂ ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನೂ ಪೊಲೀಸ್‌ ಠಾಣೆಗೆ ಕರೆದೊಯ್ದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಲ್ಲಿ ಅವರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದಾರೆ. ಉದ್ರಿಕ್ತ ಗ್ರಾಮಸ್ಥರ ದಾಳಿಯಲ್ಲಿ ಐದಾರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪೊಲೀಸ್‌ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್‌ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪೊಲೀಸರು ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ ಕಾರಣ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: Theft Case : ಪೊಲೀಸ್‌ ಬಸ್ಸನ್ನೇ ಕದಿಯಲು ಬಂದ ಕುಡುಕ; ಪೇಡ ಕೇಳಿದವ 15 ಕೆಜಿ ತುಪ್ಪ ಎಗರಿಸಿದ

Continue Reading

ರಾಜಕೀಯ

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

ಭಾರತ ಸ್ವಾತಂತ್ರ್ಯವಾದ ಬಳಿಕ 14 ಮಂದಿ ಪ್ರಧಾನ ಮಂತ್ರಿ (Prime Minister Of India) ಸ್ಥಾನವನ್ನು ಅಲಂಕರಿಸಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಸುದೀರ್ಘಾವಧಿಗೆ ಪ್ರಧಾನಿಯಾಗಿದ್ದರು. ಯಾರು ಎಷ್ಟು ಅವಧಿಗೆ ಪ್ರಧಾನಮಂತ್ರಿಯಾಗಿದ್ದರು? ಈ ಕುರಿತ ದಾಖಲೆ ಇಲ್ಲಿದೆ.

VISTARANEWS.COM


on

By

Prime Minister of India
Koo

ಪ್ರತಿ ಬಾರಿಯೂ ಲೋಕಸಭಾ ಚುನಾವಣೆ (Lok sabha election) ಘೋಷಣೆಯಾದ ಬಳಿಕ ಮುಂದಿನ ಪ್ರಧಾನಿ (Prime Minister Of India) ಯಾರಾಗಬಹುದು ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.

ಭಾರತ ಸ್ವಾತಂತ್ರ್ಯವಾದ ಬಳಿಕ 14 ಮಂದಿ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರೆಂದರೆ ಜವಾಹರ್ ಲಾಲ್ ನೆಹರೂ (Jawaharlal Nehru) , ಲಾಲ್ ಬಹಾದ್ದೂರ್ ಶಾಸ್ತ್ರೀ (Lal Bahadur Shastri), ಇಂದಿರಾ ಗಾಂಧಿ (Indira gandhi), ಮೊರಾರ್ಜಿ ದೇಸಾಯಿ (morarji desai), ಚರಣ್ ಸಿಂಗ್ (charan singh), ರಾಜೀವ್ ಗಾಂಧಿ (rajiv gandhi), ವಿಶ್ವನಾಥ್ ಪ್ರತಾಪ್ ಸಿಂಗ್ (vishwanath pratap singh), ಚಂದ್ರಶೇಖರ್ (chandra shekhar) , ಪಿ.ವಿ. ನರಸಿಂಹ ರಾವ್ (p.v. narasimha rao), ಅಟಲ್ ಬಿಹಾರಿ ವಾಜಪೇಯಿ (atal bihari vajpayee), ಎಚ್.ಡಿ. ದೇವೇಗೌಡ (h.d. deve gowda), ಇಂದರ್ ಕುಮಾರ್ ಗುಜ್ರಾಲ್ (inder kumar gujral), ಮನ್ ಮೋಹನ್ ಸಿಂಗ್ (manmohan singh), ನರೇಂದ್ರ ಮೋದಿ (narendra modi). ಇವರಲ್ಲಿ ಕೆಲವರು ಮಾತ್ರ ದೀರ್ಘಾವಧಿಗೆ ಪ್ರಧಾನಿ ಯಾಗಿದ್ದರು. ಅವರು ಯಾರು? ಇಲ್ಲಿದೆ ಮಾಹಿತಿ.


ಇಂದಿರಾ ಗಾಂಧಿ (1966ರಿಂದ1977, 1980ರಿಂದ1984)

ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಒಟ್ಟು 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು. 1975ರಲ್ಲಿ ತುರ್ತುಪರಿಸ್ಥಿತಿಯ ಜಾರಿ, ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆ ಸೇರಿದಂತೆ ಹಲವು ದಿಟ್ಟ ಮತ್ತು ವಿವಾದಾತ್ಮಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದರು. ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದು ಇಂದಿರಾ ಗಾಂಧಿ 1977ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಹೀನಾಯ ಹಿನ್ನಡೆ ಕಂಡು ಅಧಿಕಾರ ತ್ಯಜಿಸಬೇಕಾಯಿತು. ಆದರೆ 1980ರಲ್ಲಿ ಅವರು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಮರಳಿದರು. ಆದರೆ 1984ರಲ್ಲಿ ಸಿಖ್‌ ಭಯೋತ್ಪಾದನೆಗೆ ಬಲಿಯಾದರು.


ಅಟಲ್ ಬಿಹಾರಿ ವಾಜಪೇಯಿ (1996, 1998-2004)

ನುರಿತ ವಾಗ್ಮಿ ಮತ್ತು ದೂರದೃಷ್ಟಿಯ ನಾಯಕ, ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ 13 ದಿನ, ಮತ್ತೊಮ್ಮೆ 13 ತಿಂಗಳಷ್ಟೇ ಅವರು ಪ್ರಧಾನಿಯಾಗಿದ್ದರು. ಆದರೆ 1998ರಿಂದ 2004ರ ಅವರು ಪೂರ್ಣಾವಧಿ ಪ್ರಧಾನಿಯಾಗಿದ್ದರು. ಒಂದೆಡೆ ಪರಮಾಣು ಪರೀಕ್ಷೆಯ ದಿಟ್ಟತನ ಮತ್ತು ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬೆಳೆಸುವ, ಸಂದರ್ಭ ಬಂದಾಗ ಅದಕ್ಕೆ ಬುದ್ಧಿ ಕಲಿಸುವ ಅವರ ಉಪಕ್ರಮಗಳಿಗಾಗಿ ವಾಜಪೇಯಿ ಸದಾ ನೆನಪಿನಲ್ಲಿರುತ್ತಾರೆ. ಹೆದ್ದಾರಿ ನಿರ್ಮಾಣದ ಕ್ರಾಂತಿ ನಡೆದಿದ್ದು ಅವರ ಕಾಲದಲ್ಲಿ.


ಮನಮೋಹನ್ ಸಿಂಗ್ (2004-2014)

ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಒಟ್ಟು 10 ವರ್ಷಗಳ ಕಾಲ ಪ್ರಧಾನಿಯಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯು ಗಮನಾರ್ಹ ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ಉಪಕ್ರಮಗಳಿಂದ ಗುರುತಿಸಲ್ಪಟ್ಟಿದೆ.


ನರೇಂದ್ರ ಮೋದಿ (2014ರಿಂದ ಈಗಿನವರೆಗೆ)

ಪ್ರಸ್ತುತ ಭಾರತದ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿ ಅವರು ಸತತ ಎರಡನೇ ಅವಧಿಯಲ್ಲಿದ್ದಾರೆ. ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾದ ಅವರು ದೇಶದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಇದೇ ವೇಳೆ ಅವರನ್ನು ವಿರೋಧಿಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ನಡುವ ಹುಟ್ಟಿಸಿದ ಕೀರ್ತಿ ಖ್ಯಾತಿ ಇವರಿಗಿದೆ. ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿಯಂಥ ಆರ್ಥಿಕ ಸುಧಾರಣೆ ಕ್ರಮಗಳನ್ನೂ ಕೈಗೊಂಡಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಿ ಶಾಂತಿ ನೆಲೆಸುವ ಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಎರಡನೇ ಅವಧಿಯು 2019ರಲ್ಲಿ ಪ್ರಾರಂಭವಾಯಿತು. ಮೂರನೇ ಅವಧಿಯಲ್ಲೂ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ. ಆದರೆ ಮೋದಿ ಅವರು ಮೂರನೇ ಅವಧಿಯಲ್ಲಿ ಪ್ರಧಾನಿಯಾಗಿ ಪೂರ್ಣಾವಧಿ ಮುಗಿಸಿದರೂ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಸುದೀರ್ಘ ಆಡಳಿತ ಅವಧಿಯ ದಾಖಲೆ ಹಾಗೆಯೇ ಮುಂದುವರಿಯುತ್ತದೆ. ಈ ದಾಖಲೆ ಮುರಿಯಬೇಕೆಂದರೆ ಮೋದಿ ನಾಲ್ಕನೇ ಬಾರಿಯೂ ಪ್ರಧಾನಿ ಆಗಬೇಕಾಗುತ್ತದೆ!

Continue Reading

ಪ್ರಮುಖ ಸುದ್ದಿ

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

Swati Maliwal: ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

VISTARANEWS.COM


on

swati maliwal bibhav kumar
Koo

ಹೊಸದಿಲ್ಲಿ: ಆಮ್‌ ಆದ್ಮಿ ಪಕ್ಷದ (Aam Admi Party) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Rajya Sabha MP Swati Maliwal) ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ (Bibhav Kumar) ಅನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕೇಜ್ರಿವಾಲ್ ಅವರ ಮೌನವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ದಾಳಿಯ ಸಮಯದಲ್ಲಿ ಸ್ಪಷ್ಟವಾಗಿ ನಿಷ್ಕ್ರಿಯರಾಗಿದ್ದುದಕ್ಕಾಗಿ ಕೇಜ್ರಿವಾಲ್ ಅವರನ್ನು “ಮುಖ್ಯ ಅಪರಾಧಿ” ಎಂದು ಕರೆದಿದ್ದಾರೆ.

ಮಲಿವಾಲ್‌ ಅವರು ದೆಹಲಿ ಮುಖ್ಯಮಂತ್ರಿ ಮನೆಯಿಂದ ಹೊರಬರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸಿಎಂ ನಿವಾಸದಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ಎಎಪಿ ರಾಜ್ಯಸಭಾ ಸಂಸದೆ ನಡುವೆ ವಾಗ್ವಾದ ನಡೆಯುವುದನ್ನು ಕಾಣಬಹುದು.

“ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಸಹಾಯಕ್ಕಾಗಿ ಪದೇ ಪದೆ ಕಿರುಚುತ್ತಿದ್ದೆ. ನನ್ನನ್ನು ರಕ್ಷಿಸಿಕೊಳ್ಳಲೆಂದು ನಾನು ಅವನನ್ನು ನನ್ನ ಕಾಲುಗಳಿಂದ ದೂರ ತಳ್ಳಿದೆ. ಆ ಸಮಯದಲ್ಲಿ ಆತ ನನ್ನ ಮೇಲೆ ಎರಗಿ ಕ್ರೂರವಾಗಿ ಎಳೆದುಕೊಂಡು ಮತ್ತು ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಮೇಲಕ್ಕೆ ಎಳೆದ” ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ. “ಬಿಭವ್ ಕುಮಾರ್ ಪಶ್ಚಾತ್ತಾಪ ಪಟ್ಟಿಲ್ಲ. ನನ್ನ ಎದೆ, ಹೊಟ್ಟೆ ಮತ್ತು ಸೊಂಟದ ಪ್ರದೇಶಕ್ಕೆ ತನ್ನ ಕಾಲುಗಳಿಂದ ಒದೆಯುವ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಸ್ವಾತಿ ದೂರಿದ್ದಾರೆ.

 ಸ್ವಾತಿ ಮಾಲಿವಾಲ್‌ ಆರೋಪ ಸುಳ್ಳು ಎಂದು ಆಪ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿರುವ ಕುರಿತ ವಿಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

“ಸ್ವಾತಿ ಮಾಲಿವಾಲ್‌ ಅವರು ನೀಡಿರುವ ಹೇಳಿಕೆಯು ಸಂಪೂರ್ಣವಾಗಿ ಸುಳ್ಳುಗಳಿಂದ ಕೂಡಿದೆ ಎಂಬುದು ಈ ವಿಡಿಯೊದಿಂದ ಬಯಲಾಗಿದೆ. ಸ್ವಾತಿ ಮಾಲಿವಾಲ್‌ ಅವರು ಹೇಳಿದ ಸುಳ್ಳುಗಳನ್ನು ದೇಶದ ಜನರ ಮುಂದಿಡುತ್ತಿದ್ದೇವೆ” ಎಂದು ಆಪ್‌ ನಾಯಕಿ, ಸಚಿವೆ ಆತಿಶಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮದೇ ಪಕ್ಷದ ನಾಯಕಿ ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. ಹಾಗೆಯೇ, ಅವರು ದೆಹಲಿ ಸಿಎಂ ಕಚೇರಿಯಲ್ಲಿ ನಡೆದ ಗಲಾಟೆ ಕುರಿತ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೊದಲ್ಲಿ ಏನಿದೆ?

ದೆಹಲಿ ಸಿಎಂ ಕಚೇರಿಗೆ ಭೇಟಿ ನೀಡಿದ ವೇಳೆ ಸ್ವಾತಿ ಮಾಲಿವಾಲ್‌ ಅವರಿಗೆ ಭದ್ರತಾ ಸಿಬ್ಬಂದಿಯು ಹೊರಗೆ ತೆರಳಿ ಎಂಬುದಾಗಿ ಹೇಳಿದ್ದಾರೆ. ಆದರೆ, ನಾನು ಹೊರಗೆ ಹೋಗಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭದ್ರತಾ ಸಿಬ್ಬಂದಿಯೊಬ್ಬರಿಗೆ ಬಾಂಡ್ಲಿ (ಬೊಕ್ಕ ತಲೆಯವರು) ಎಂಬುದಾಗಿ ಬೈದಿದ್ದಾರೆ. ನಾನು ಇದರ ಬಗ್ಗೆ ಎಲ್ಲರಿಗೂ ಹೇಳುತ್ತೇನೆ ಎಂದು ಸ್ವಾತಿ ಮಾಲಿವಾಲ್‌ ಅವರು ದೆಹಲಿ ಸಿಎಂ ಕಚೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಾಡಿ, ಆದರೆ ಇಲ್ಲಿಂದ ಹೊರಡಿ ಎಂದು ಸಿಬ್ಬಂದಿ ಸೂಚಿಸಿದ್ದಾರೆ. ಆಗ, ಸ್ವಾತಿ ಮಾಲಿವಾಲ್‌ ಅವರು ಭದ್ರತಾ ಸಿಬ್ಬಂದಿಗೆ ಅವಾಚ್ಯವಾಗಿ ಬೈದಿದ್ದಾರೆ. ಇಷ್ಟೆಲ್ಲ ಅಂಶಗಳು ವಿಡಿಯೊದಲ್ಲಿವೆ.

ಇದನ್ನೂ ಓದಿ: Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Continue Reading
Advertisement
RCB vs CSK
ಕ್ರೀಡೆ1 second ago

RCB vs CSK: 11 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದರೆ ಆರ್​ಸಿಬಿಗೆ ಇಂದು ಗೆಲುವು ಖಚಿತ

Nuclear test at Pokhran
ವಿಜ್ಞಾನ3 mins ago

Nuclear Test In Pokhran: ಭಾರತ ಮೊದಲ ಪರಮಾಣು ಪರೀಕ್ಷೆ ನಡೆಸಿ ಇಂದಿಗೆ 50 ವರ್ಷ; ಏನಿದು ಸ್ಮೈಲಿಂಗ್‌ ಬುದ್ಧ?

Namma Metro
ಬೆಂಗಳೂರು9 mins ago

Namma Metro: ಮೆಟ್ರೋಗೆ ಕನೆಕ್ಟ್‌ ಆಗಲಿದೆ ನಮ್ಮ ಯಾತ್ರಿ; ಇನ್ಮುಂದೆ ಆಟೋ ಹಿಡಿಯೋ ಟೆನ್ಷನ್‌ ಇಲ್ಲ

Police Station
ದೇಶ17 mins ago

Police Station: ಪೊಲೀಸ್‌ ಸ್ಟೇಷನ್‌ನಲ್ಲೇ ಪತಿ-ಪತ್ನಿ ಸಾವು; ಠಾಣೆಯನ್ನೇ ಸುಟ್ಟರು ಜನ

Milana Nagaraj Anarkali border gown worn
ಸ್ಯಾಂಡಲ್ ವುಡ್45 mins ago

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Boxer Parveen
ಕ್ರೀಡೆ48 mins ago

Boxer Parveen: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತದ ಬಾಕ್ಸರ್‌ ಪರ್ವೀನ್‌

Famous Food of bangalore
ಆಹಾರ/ಅಡುಗೆ1 hour ago

Famous Food of Bangalore: ಬೆಂಗಳೂರಿಗೆ ಬಂದಾಗ ಈ ಖಾದ್ಯಗಳ ರುಚಿ ನೋಡಲು ಮರೆಯಬೇಡಿ!

Prime Minister of India
ರಾಜಕೀಯ1 hour ago

Prime Minister Of India: ಸುದೀರ್ಘ ಕಾಲ ಪ್ರಧಾನಿಯಾಗಿದ್ದ ನೆಹರೂ, ಇಂದಿರಾ ದಾಖಲೆಯನ್ನು ಮೋದಿ ಮುರಿಯಲು ಸಾಧ್ಯವೆ?

RCB FANS BIKE RALLY
ಕ್ರೀಡೆ1 hour ago

RCB FANS BIKE RALLY: ಪಂದ್ಯಕ್ಕೂ ಮುನ್ನವೇ ಬೃಹತ್​ ಬೈಕ್​ ರ‍್ಯಾಲಿ ಮಾಡಿದ ಆರ್​ಸಿಬಿ ಅಭಿಮಾನಿಗಳು; ವಿಡಿಯೊ ವೈರಲ್​​

Pavithra Jayaram Chandrakant are just friends, daughter said
ಕಿರುತೆರೆ1 hour ago

Pavithra Jayaram: ಚಂದ್ರಕಾಂತ್‌ ಹಾಗೂ ನನ್ನ ಅಮ್ಮ ಜಸ್ಟ್‌ ಫ್ರೆಂಡ್ಸ್‌, ಪವಿತ್ರಾ ಮಗಳ ಸ್ಪಷ್ಟನೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ19 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌