Video: ಕನ್ನಡ ಮಾತಾಡು ಎಂದು ಬೆಂಗಳೂರು ಏರ್​ಪೋರ್ಟ್​​ನಲ್ಲಿ ದಬಾಯಿಸಿದರು ಎಂದ ಡ್ಯಾನ್ಸರ್​ ಸಲ್ಮಾನ್, ನೆಟ್ಟಿಗರು ಹೇಳಿದ್ದೇನು?​ - Vistara News

ದೇಶ

Video: ಕನ್ನಡ ಮಾತಾಡು ಎಂದು ಬೆಂಗಳೂರು ಏರ್​ಪೋರ್ಟ್​​ನಲ್ಲಿ ದಬಾಯಿಸಿದರು ಎಂದ ಡ್ಯಾನ್ಸರ್​ ಸಲ್ಮಾನ್, ನೆಟ್ಟಿಗರು ಹೇಳಿದ್ದೇನು?​

ಸಲ್ಮಾನ್​ ಯೂಸುಫ್​ ಖಾನ್ ಪೋಸ್ಟ್​ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ‘ಕನ್ನಡ ಕಲಿತರೆ ತಪ್ಪೇನು?’ ಎಂದು ಅನೇಕರು ಪ್ರಶ್ನಿಸಿದ್ದಾರೆ.

VISTARANEWS.COM


on

Salman Yusuff Khan Says he had an unpleasant experience at the Bengaluru airport For Not Knowing Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡ್ಯಾನ್ಸರ್​ ಮತ್ತು ಕೊರಿಯಾಗ್ರಫರ್​ ಆಗಿರುವ ಸಲ್ಮಾನ್​ ಯೂಸುಫ್​ ಖಾನ್​ ಅವರು ತಮಗೆ ಬೆಂಗಳೂರು ಏರ್​ಪೋರ್ಟ್​​ನಲ್ಲಿ ಅವಮಾನ ಆಯಿತು. ನನಗೆ ಕನ್ನಡ ಗೊತ್ತಿಲ್ಲ ಎಂಬ ಕಾರಣಕ್ಕೆ ಏರ್​ಪೋರ್ಟ್​​ನಲ್ಲಿರುವ ವಲಸೆ ಅಧಿಕಾರಿ ನನ್ನನ್ನು ಅಪಮಾನ ಮಾಡಿದರು. ಬೆಂಗಳೂರಿನಲ್ಲಿ ಹುಟ್ಟಿದ್ದರೂ ಕನ್ನಡ ಗೊತ್ತಿಲ್ಲವಾ? ಎಂದು ಕೇಳಿದರು. ನಮ್ಮ ರಾಷ್ಟ್ರದ ಅಧಿಕೃತ ಭಾಷೆ ಹಿಂದಿ ಆಗಿರುವಾಗ, ನಾನ್ಯಾಕೆ ಕನ್ನಡ ಕಲಿಯಬೇಕು ಎಂದು ಅವರನ್ನು ನಾನು ಪ್ರಶ್ನಿಸಿದೆ’ ಎಂದು ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಾಕಿ, ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕರು ಪ್ರತಿಕ್ರಿಯೆ ನೀಡಿ ‘ಕನ್ನಡ ಕಲಿಯುವುದರಲ್ಲಿ, ಮಾತಾಡುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ. ಹಾಗೇ, ‘ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯೇ ಅಲ್ಲ, ಎನ್ನುವುದನ್ನು ನೆನಪಿಡಿ’ ಎಂದಿದ್ದಾರೆ.

ಘಟನೆ ಬಗ್ಗೆ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ವಿವರಿಸಿದ ಸಲ್ಮಾನ್ ಯೂಸುಫ್​ ಖಾನ್​ ‘ನಾನು ದುಬೈಗೆ ತೆರಳುವವನಿದ್ದೆ. ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಈ ವಲಸೆ ಅಧಿಕಾರಿ ಎದುರಾದರು. ಅವರು ನನ್ನ ಬಳಿ ಕನ್ನಡದಲ್ಲೇ ಮಾತನಾಡಿದರು. ಆಗ ನಾನು ‘ನನಗೆ ಕನ್ನಡ ಅರ್ಥವಾಗುತ್ತದೆ, ಆದರೆ ಮಾತನಾಡಲು ಬರುವುದಿಲ್ಲ’ ಎಂದು ತೊದಲುತ್ತಲೇ ಹೇಳಿದೆ. ಆದರೆ ಅವರು ನನ್ನ ಬಳಿ ಕನ್ನಡದಲ್ಲೇ ಮಾತನಾಡುತ್ತ, ನನ್ನ ಪಾಸ್​ಪೋರ್ಟ್​ ತೋರಿಸುವಂತೆ ಹೇಳಿದರು. ನಾನು ತೋರಿಸಿದೆ, ಆಗ ಅವರು ನನ್ನ ಬಳಿ ‘ನೀವು, ನಿಮ್ಮ ತಂದೆ ಹುಟ್ಟಿದ್ದೆಲ್ಲ, ಬೆಂಗಳೂರಿನಲ್ಲೇ. ಆದರೂ ನಿಮಗೆ ಕನ್ನಡ ಬರುವುದಿಲ್ಲವಾ’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಉತ್ತರಿಸಿ ‘ನಾನು ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದ ಮಾತ್ರಕ್ಕೆ, ಕನ್ನಡ ಭಾಷೆಯೊಂದಿಗೇ ಹುಟ್ಟಿದ್ದೇನೆ’ ಎಂದು ಅರ್ಥವಲ್ಲ. ನಾನು ಬೆಂಗಳೂರಲ್ಲಿ ಹುಟ್ಟಿರಬಹುದು. ಆದರೆ ಯಾವಾಗಲೂ ಜಗತ್ತು ಸುತ್ತುತ್ತ ಇರುತ್ತೇನೆ. ಚಿಕ್ಕವನಿದ್ದಾಗಲೇ ಸೌದಿಗೆ ಹೋಗಿ, ಅಲ್ಲಿಯೇ ಬೆಳೆದೆ. ಶಾಲಾದಿನಗಳಲ್ಲಿ ಕನ್ನಡ ಕಲಿಯಲಿಲ್ಲ. ಸ್ವಲ್ಪವೇನಾದರೂ ಕನ್ನಡ ಅರ್ಥವಾಗುತ್ತದೆ ಎಂದಾದರೆ, ಅದು ನನ್ನ ಸ್ನೇಹಿತರ ಮೂಲಕ ಕಲಿತಿದ್ದು, ಎಂದು ಅಧಿಕಾರಿಗೆ ವಿವರಿಸಿದೆ. ಆದರೆ ಆಗ ಅಧಿಕಾರಿ ನನ್ನ ಬಳಿ ‘ನಿಮಗೆ ಕನ್ನಡ ಭಾಷೆ ಬರುವುದಿಲ್ಲ ಎಂದಾದರೆ, ನಾನು ನಿಮ್ಮನ್ನು ಅನುಮಾನದ ಕಣ್ಣಿಂದಲೇ ನೋಡಬೇಕಾಗುತ್ತದೆ’ ಎಂದು ಹೇಳಿದರು. ಇದರಿಂದ ನನಗೆ ತೀರ ಅಪಮಾನ ಆಯಿತು ಎಂದು ಸಲ್ಮಾನ್ ಯೂಸುಫ್​ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ಹಿಂದಿ ರಾಷ್ಟ್ರೀಯ ಭಾಷೆ ಆಗಿರುವಾಗ ನಾನ್ಯಾಕೆ ಕನ್ನಡವನ್ನು ಕಲಿಯಬೇಕು? ನೀವು ನನ್ನನ್ನು ಯಾಕೆ ಅನುಮಾನಿಸುತ್ತೀರಿ ಎಂದು ಅಧಿಕಾರಿ ಬಳಿ ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಅವರು ‘ನಾನು ನಿಮ್ಮನ್ನು ಯಾವ ಕಾರಣಕ್ಕೆ ಬೇಕಾದರೂ ಅನುಮಾನಿಸಬಹುದು’ ಎಂದರು. ಆಗ ನಾನು ಸ್ವಲ್ಪ ಗಟ್ಟಿಯಾಗಿ ‘ಏನು ಮಾಡುತ್ತೀರೋ ಮಾಡಿ’ ಎಂದು ಹೇಳಿದೆ. ಜೋರಾಗಿಯೇ ಮೂರು ಬಾರಿ ಹೇಳಿದೆ. ಆಗ ಅವರು ಸುಮ್ಮನಾದರು. ಮತ್ತೆ ನಾನು ಅವರಿಗೆ ಸರಿಯಾಗಿ ಬೈದೆ. ‘ನಿಮ್ಮಂಥ ಅಶಿಕ್ಷಿತರು ಇರುವವರೆಗೆ ಈ ದೇಶ ಬೆಳೆಯುವುದಿಲ್ಲ ಎಂದು ಹೇಳಿದೆ. ಆಗ ಅಧಿಕಾರಿ ತಲೆ ತಗ್ಗಿಸಿದರು. ನಾನು ಬೆಂಗಳೂರಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಆದರೆ ಇಂದು ನನಗೆ ತೀರ ಅವಮಾನವಾಯಿತು. ಯಾರಾದರೂ ಸರಿ, ಸ್ಥಳೀಯ ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕೇ ಹೊರತು, ಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಅವಮಾನಿಸಬಾರದು’ ಎಂದು ಯೂಸುಫ್​ ಖಾನ್​ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

ಸದ್ಯಕ್ಕಂತೂ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು, ಬೆಂಗಳೂರಿನಲ್ಲಿ ಏರ್​ಪೋರ್ಟ್​ನಲ್ಲಿ ಮಾತ್ರವಲ್ಲ, ನಗರದೊಳಗೆ ಕೂಡ ಇಂಥ ಅನುಭವ ಆಗುತ್ತದೆ ಎಂದು ಹೇಳಿದ್ದರೆ, ಇನ್ನೂ ಕೆಲವರು, ಕನ್ನಡ ಕಲಿತರೆ ತಪ್ಪೇನು ಎಂದಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆ ಎಂದು ಅಧಿಕೃತಗೊಂಡಿಲ್ಲ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ. ‘ನಾನು ನಿಮ್ಮ ಅಭಿಮಾನಿ, ಆದರೆ ಈ ವಿಷಯದಲ್ಲಿ ನಿಮಗೆ ನನ್ನ ಸಪೋರ್ಟ್ ಇಲ್ಲ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ.

ಸಲ್ಮಾನ್ ಯೂಸುಫ್​ ಖಾನ್ ಇನ್​ಸ್ಟಾಗ್ರಾಂ ಪೋಸ್ಟ್ ಇಲ್ಲಿದೆ:

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Fantasy Gaming: ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ ಎಂದು ಓಜಾ ಹೇಳಿದ್ದಾನೆ.

VISTARANEWS.COM


on

Fantasy Gaming
Koo

ಬೆಂಗಳೂರು: ಅದೃಷ್ಟ ಯಾವಾಗ ಬಾಗಿಲು ಬಡಿದು ಮನೆಯೊಳಗೆ ನುಗ್ಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅದು ಅನಿರೀಕ್ಷಿತ, ಅಚ್ಚರಿ ಮತ್ತು ಅಪರೂಪ. ಇಂಥದ್ದೇ ಒಬ್ಬ ಅದೃಷ್ಟ ಶಾಲಿಯ ಪರಿಚಯವನ್ನು ನಿಮಗೆ ಮಾಡಿಸಬೇಕಾಗಿದೆ. ಅವರೇ ಬಿಹಾರದ ದೀಪು ಓಜಾ. ಭಾನುವಾರ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್​ನಲ್ಲಿ (Fantasy Gaming) ಐಪಿಎಲ್ ಫ್ಯಾಂಟಸಿ ಗೇಮಿಂಗ್ (Fantasy Gaming) ಆಡುವ ಮೂಲಕ ಬಿಹಾರದ ಅರ್ರಾ ಜಿಲ್ಲೆಯ ಕೊಹ್ಡಾ ಗ್ರಾಮದ ಈತ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಅವರು ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಅದೃಷ್ಟಶಾಲಿ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಓಜಾ 8 ನೇ ತರಗತಿಯಲ್ಲಿ ಫೇಲ್​, ಹಾಗೂ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾನೆ. ಕ್ರಿಕೆಟ್​ನ ಗಂಧ ಗಾಳಿ ಗೊತ್ತಿಲ್ಲ.

ಕ್ರಿಕೆಟ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂಬುದಾಗಿ ಓಜಾ ಹೇಳಿದ್ದಾನೆ. ನನಗೆ ಬೇರೆ ಕೆಲಸವಿಲ್ಲದ ಕಾರಣ ಆಕಸ್ಮಿಕವಾಗಿ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾನೆ. “ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ. ಹೀಗಾಗಿ ತಂಡವನ್ನು ರಚಿಸಿದೆ. ಇದು ಕೆಕೆಆರ್ ಮತ್ತು ಆರ್​​ಸಿಬಿ ನಡುವಿನ ಪಂದ್ಯ ಎಂದು ಎಂದು ಓಜಾ ಹೇಳಿದ್ದಾನೆ.

ಇದನ್ನೂ ಓದಿ: Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

ಸಿಕ್ಕಿರುವ ದುಡ್ಡನ್ನು ಏನು ಮಾಡಬೇಕೆಂದು ಆತ ಇನ್ನೂ ನಿರ್ಧರಿಸಿಲ್ಲವಂತೆ. ಅಂದ ಹಾಗೆ ಫ್ಯಾಂಟಿಸಿ ಗೇಮ್​ಗಳು ಲೀಗ್​ ಕ್ರಿಕೆಟ್​ ಬೆಳವಣಿಗೆ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕ್ರಿಕೆಟ್​ ನೋಡುವ ಜತೆಗೆ ಆಟ ಆರಂಭಕ್ಕೆ ಮೊದಲು ತಂಡಗಳನ್ನು ರಚಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಾರೆ. ಫ್ಯಾಂಟಸಿ ಗೇಮ್​ಗಳು ಒಂದರ್ಥದಲ್ಲಿ ಬದಲಾದ ಜಗತ್ತಿನಲ್ಲಿ ಹೊಸ ಸ್ಪರ್ಧಾ ವೇದಿಕೆಯಾಗಿದೆ. ಆದರೆ, ಅಪಾಯಕಾರಿಯೂ ಹೌದು. ಆ್ಯಪ್​​ಗಳಲ್ಲಿ ಆಡುವಾಗ ಅದಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಕಷ್ಟಬೇಕಾಗುತ್ತದೆ. ಒಂದರ್ಥದಲ್ಲಿ ಕಾನೂನುಬದ್ಧ ಜೂಜು. ಹಣದಾಸೆಗೆ ಬೀಳುವ ಕೆಲವರು ಇದೇ ವೇದಿಕೆಗಳ ಮೂಲಕ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಆಗಿವೆ. ಮದ್ಯಪಾನದ ರೀತಿಯಲ್ಲಿಯೇ ಫ್ಯಾಂಟಸಿ ಗೇಮ್​ಗಳ ಜಾಹೀರಾತು ನೀಡುವಾಗ ಮುಂದಾಗುವ ಅಪಾಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

Rohit Sharma : ಇಶಾನ್​ ಕಿಶನ್ ಜತೆ ಮಗುವಿನಂತೆ ಕ್ರಿಕೆಟ್​ ಆಡಿದ ರೋಹಿತ್​ ಶರ್ಮಾ

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals ) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಬಹುನಿರೀಕ್ಷಿತ ಐಪಿಎಲ್​ 2024ರ (IPL 2024) ಮುಖಾಮುಖಿಗೆ ಸಿದ್ಧತೆ ನಡೆಸುವ ವೇಳೆ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ನೆಟ್ಟಿಗರ ಗಮನ ಸೆಳೆದಿದೆ. ಅವರ ಇಶಾನ್ ಕಿಶನ್​ಗೆ ವಿಕೆಟ್​ಕೀಪಿಂಗ್​ ಅಭ್ಯಾಸ ಮಾಡಲು ಮಕ್ಕಳಂತೆ ಬ್ಯಾಟ್ ಹಿಡಿದು ಬೀಸಿದ ಪ್ರಸಂಗ ನಡೆಯಿತು. ಏಪ್ರಿಲ್ 22 ರ ಸೋಮವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಗೆ ಮುಂಚಿತವಾಗಿ ಇವರಿಬ್ಬರು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಅದು ಸಣ್ಣ ಮಕ್ಕಳು ಆಡುವಂತೆ ಕಂಡು ಬಂತು.

ಮುಂಬೈ ಇಂಡಿಯನ್ಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ಕೌಶಲವನ್ನು ಹೆಚ್ಚಿಸಲು ಬ್ಯಾಟ್​ನಿಂದ ಸಣ್ಣ ಸಣ್ಣ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನು ಇಶಾನ್​ ಹಿಡಿಯುತ್ತಿದ್ದರು. ಈ ಅಭ್ಯಾಸದಿಂದ ಇಬ್ಬರಿಗೂ ಸಾಕಷ್ಟು ಲಾಭವಾಗುತ್ತದೆ.

ಇಶಾನ್ ರೋಹಿತ್ ಕಡೆಗೆ ಚೆಂಡುಗಳನ್ನು ಎಸೆದಾಗ ಇಬ್ಬರು ಆಟಗಾರರ ನಡುವಿನ ಸ್ನೇಹವು ಸ್ಪಷ್ಟವಾಯಿತು. ರೋಹಿತ್ ಶರ್ಮಾ ಕಿಶನ್​​ಗೆ ಕಡಿಮೆ ಅಂತರ ಕ್ಯಾಚ್​ಗಳನ್ನು ನೀಡುವಲ್ಲಿ ಅತಿ ಹೆಚ್ಚು ಉತ್ಸಾ ಹ ತೋರಿದ್ದರು. ಹಿರಿಯ ಆಟಗಾರರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ನಿದರ್ಶನಗಳು ಮುಂಬೈ ಇಂಡಿಯನ್ಸ್ ನಂಥ ತಂಡಗಳಲ್ಲಿ ಮಾತ್ರ ಕಾಣಿಸುತ್ತದೆ. ಉಳಿದಂತೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿ ಇಂಥದ್ದಕ್ಕೆಲ್ಲ ನೆರವಾಗುತ್ತಾರೆ.

Continue Reading

ವೈರಲ್ ನ್ಯೂಸ್

Viral News: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ; ಅಂಗಡಿ ಮಾಲೀಕ ಅರೆಸ್ಟ್‌

Viral News: ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

By

Viral News
Koo

ದೆಹಲಿ: ಭಗವಾನ್ ರಾಮನ (god ram) ಚಿತ್ರಗಳನ್ನು ಹೊಂದಿರುವ ಪ್ಲೇಟ್‌ಗಳಲ್ಲಿ (plate) ನಾನ್‌ವೆಜ್‌ ಬಿರಿಯಾನಿ (biriyani) ಬಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social) ವೈರಲ್ (Viral News) ಆಗಿದೆ. ಈ ಘಟನೆ ಉತ್ತರ ದೆಹಲಿಯ (north delhi) ಜಹಾಂಗೀರ್‌ಪುರಿಯಲ್ಲಿರುವ (jahangirpuri) ಬಿರಿಯಾನಿ ಜಾಯಿಂಟ್‌ನಲ್ಲಿ ಭಾನುವಾರ ನಡೆದಿದೆ.

ಈ ವಿಡಿಯೋದಲ್ಲಿ ಭಗವಾನ್ ರಾಮನ ಚಿತ್ರಗಳನ್ನು ಒಳಗೊಂಡ ಪ್ಲೇಟ್‌ ಗಳಲ್ಲಿ ಬಿರಿಯಾನಿ ನೀಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಬಿರಿಯಾನಿ ಅಂಗಡಿಯ ಬಳಿ ಜನರ ಗುಂಪಾಗಿ ನಿಂತು ಬಳಕೆ ಮಾಡಿ ಬಿಸಾಡುವ ಪ್ಲೇಟ್ ಗಳಲ್ಲಿ ಬಿರಿಯಾನಿ ತಿನ್ನುತ್ತಿದ್ದರು. ಅಂಗಡಿ ಮಾಲೀಕನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ರಾಮನ ಚಿತ್ರವಿದ್ದ ಪ್ಲೇಟ್‌ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕನನ್ನು ಬಂಧಿಸಿದರು.

ಇದನ್ನೂ ಓದಿ: IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

ಬಿರಿಯಾನಿ ಅಂಗಡಿಯಲ್ಲಿ ಗಲಾಟೆ

ರಾಮನ ಚಿತ್ರವಿರುವ ಪ್ಲೇಟ್ ನಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಮತ್ತು ಬಜರಂಗದಳದ ಸದಸ್ಯರು ಸೇರಿದ್ದು ಅಂಗಡಿಯ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಆ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡಿದರು. ಅಂಗಡಿಯಲ್ಲಿ ಬಿರಿಯಾನಿ ಮಾರುವವರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.


ಪೇಪರ್ ಪ್ಲೇಟ್‌ಗಳ ಬಂಡಲ್‌ ನಲ್ಲಿ ಒಂದೆರಡು ಪ್ಲೇಟ್‌ಗಳು ಮಾತ್ರ ಭಗವಾನ್ ರಾಮನ ಫೋಟೋಗಳನ್ನು ಹೊಂದಿದ್ದವು. ಪ್ರಸ್ತುತ, ಜಹಾಂಗೀರ್ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಅಂಗಡಿ ಮಾಲೀಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಇದನ್ನು ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲು ಇದನ್ನು ಮಾಡಲಾಗಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ದೆಹಲಿಯ ಜನರು ಬೀದಿ ಬದಿಯ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಳೆಯ ದೆಹಲಿಯಲ್ಲಿಯೂ ಆಹಾರದ ರುಚಿ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಈ ಭಾಗದಲ್ಲಿ ಬಿರಿಯಾನಿ ಕೂಡ ಅನೇಕರು ಇಷ್ಟಪಡುತ್ತಾರೆ. ಆದರೆ ಆಹಾರ ಮಾರಾಟಕ್ಕಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Continue Reading

Lok Sabha Election 2024

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Lok Sabha Election 2024: ಚುನಾವಣೆ ನಡೆಯುವ ಮುನ್ನವೇ ಗುಜರಾತ್‌ನ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡು, ಎಲ್ಲ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ನೀಲೇಶ್‌ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಡಿದ್ದು, ಅವರ ಮನೆ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

VISTARANEWS.COM


on

Lok Sabha Election 2024
Koo

ಗಾಂಧಿನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾಣಿ (Nilesh Kumbhani) ಅವರ ನಾಮಪತ್ರ ತಿರಸ್ಕೃತಗೊಂಡು, ಎಲ್ಲ ಸ್ವತಂತ್ರ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಸೋಮವಾರ ಬಿಜೆಪಿಯ ಮುಖೇಶ್ ದಲಾಲ್ (Mukesh Dalad) ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚುನಾವಣೆಗೂ (Lok Sabha Election 2024) ಮುನ್ನವೇ ಬಿಜೆಪಿ ಒಂದು ಸೀಟನ್ನು ತನ್ನದಾಗಿಸಿಕೊಂಡಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪರೋಕ್ಷ ಕಾರಣರಾದ ನೀಲೇಶ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮುಖೇಶ್ ದಲಾಲ್ ಅವರನ್ನು ವಿಜೇತರೆಂದು ಘೋಷಿಸಿದ ಒಂದು ದಿನದ ಬಳಿಕ ಅಂದರೆ ಮಂಗಳವಾರ ಕಾಂಗ್ರೆಸ್‌ ಈ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಉದ್ದೇಶಪೂರ್ವಕವಾಗಿಯೇ ನಾಮಪತ್ರವನ್ನು ರದ್ದುಗೊಳಿಸಲಾಗಿದೆ ಎಂದು ಕೈ ಪಡೆ ನೀಲೇಶ್ ಕುಂಭಾಣಿ ವಿರುದ್ಧ ಆರೋಪ ಹೊರಿಸಿದೆ. ಅಲ್ಲದೆ ಅವರನ್ನು ʼದೇಶದ್ರೋಹಿʼ ಮತ್ತು ʼಪ್ರಜಾಪ್ರಭುತ್ವದ ಕೊಲೆಗಾರʼ ಎಂದು ಕರೆದಿದೆ. ನೀಲೇಶ್ ಕುಂಭಾಣಿ ಈ ವಾರ ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವೇನು?

ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ ತಿರಸ್ಕರಿಸಿದ್ದರು. ಅನುಮೋದಕರಾದ ರಮೇಶ್ ಪೋಲ್ರಾ ಅವರ ಮಾರಾಟ ಪತ್ರದ ಆಧಾರ ಮೇಲೆ, ಚಾಲನಾ ಪರವಾನಗಿಯ ಆಧಾರದ ಮೇಲೆ ಜಗದೀಶ್ ಸವಲಿಯಾ ಮತ್ತು ಅವರ ಪ್ಯಾನ್ ಕಾರ್ಡ್ ಆಧಾರದ ಮೇಲೆ ಧಮೇಲಿಯಾ ಅವರ ಸಹಿಗಳನ್ನು ಪರಿಶೀಲಿಸಿದರು. ಈ ವೇಳೆ ನಾಮನಿರ್ದೇಶನ ಪತ್ರದಲ್ಲಿನ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ದರ್ಶನಾ ಜರ್ದೋಶ್ ಬದಲಿಗೆ ಮುಕೇಶ್ ದಲಾಲ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಈ ಭದ್ರಕೋಟೆಯಲ್ಲಿ ಚುನಾವಣೆಗೆ ತಡೆ ಕೋರಿ ಕಾಂಗ್ರೆಸ್‌ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿತ್ತು. ಆದರೆ ನಂತರ ನಿಲೇಶ್ ಅವರೇ ಸ್ವತಃ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಚುನಾವಣೆಯ ಮೇಲೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪ್ರಭಾವ ಬೀರುತ್ತಿದ್ದು, ಇಲ್ಲಿ ಚುನಾವಣಾ ಪ್ರಕ್ರಿಯೆ ಮರು ಸ್ಥಾಪಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ.

ಇದನ್ನೂ ಓದಿ: Lok Sabha Election 2024: ಬಿಜೆಪಿಗೆ ಸಿಕ್ಕಿತು ಮೊದಲ ಸೀಟು; ಗುಜರಾತ್‌ನ ಸೂರತ್‌ನಲ್ಲಿ ಪಕ್ಷದ ಅಭ್ಯರ್ಥಿ ಅವಿರೋಧ ಆಯ್ಕೆ!

ಇನ್ನು ಅವಿರೋಧವಾಗಿ ಆಯ್ಕೆಯಾದ ದಲಾಲ್ ಅವರಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶುಭ ಕೋರಿದ್ದು, “ಅವಿರೋಧವಾಗಿ ಆಯ್ಕೆಯಾದ ಸೂರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮುಖೇಶ್ ಭಾಯ್ ದಲಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಹೇಳಿದ್ದಾರೆ. ಇದು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ʼಐತಿಹಾಸಿಕ ವಿಜಯʼದ ಪ್ರಾರಂಭ ಎಂದು ಭೂಪೇಂದ್ರ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. “ಇದು ಗುಜರಾತ್‌ನ ಎಲ್ಲ 26 ಸ್ಥಾನಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ವಿಜಯ ಸಾಧಿಸಲಿದೆ ಎನ್ನುದಕ್ಕೆ ಇದು ಸಾಕ್ಷಿʼʼ ಎಂದು ಗುಜರಾತ್ ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Continue Reading

Latest

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Voter ID: ಮತದಾನ ಮಾಡಲು ವೋಟರ್ ಐಡಿ ಕಡ್ಡಾಯವಾಗಿದೆ. ಆದರೆ ವೋಟರ್ ಐಡಿ ಇಲ್ಲದೇ ಇದ್ದರೂ ಚಿಂತೆ ಬೇಡ. ಕೆಲವೊಂದು ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದು. ಆ ದಾಖಲೆಗಳು ಯಾವುದು ಗೊತ್ತೇ? ಈ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Koo

ಬೆಂಗಳೂರು: ಲೋಕಸಭಾ ಚುನಾವಣೆ- 2024ರ (Lok Sabha election 2024) ಅಂಗವಾಗಿ ರಾಜ್ಯದಲ್ಲಿ (karnataka) ಏಪ್ರಿಲ್ 26ರಂದು ಮತದಾನ (voting) ನಡೆಯಲಿದ್ದು, ಈ ಸಂದರ್ಭದಲ್ಲಿ ಮತದಾರರ ಗುರುತು ಚೀಟಿಯನ್ನು (voter id) ಪ್ರತಿಯೊಬ್ಬ ಅರ್ಹ ಮತದಾರನೂ ಹೊಂದಿರಲೇಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ (Voter ID) ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ಮತದಾರರ ಗುರುತು ಚೀಟಿಯು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮತದಾರನ ಗುರುತು, ವಾಸಸ್ಥಳ, ಜನನ ಮತ್ತು ಇತರ ವಿವರಗಳನ್ನು ದೃಢೀಕರಿಸುವ ಇದು ಮಹತ್ವದ ಅಧಿಕೃತ ದಾಖಲೆಗಳಲ್ಲಿ ಒಂದಾಗಿದೆ.
ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಜವಾಬ್ದಾರಿಯಾಗಿದೆ. ಇದಕ್ಕಾಗಿ ವೋಟರ್ ಐಡಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾಕೆಂದರೆ ಅದನ್ನು ಹೊಂದಿರುವವರ ಗುರುತು ಮತ್ತು ವಿವರಗಳನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

ಯಾರು ಅರ್ಹರು?

ಭಾರತದ ಚುನಾವಣಾ ಆಯೋಗದ ಪ್ರಕಾರ ನಾಗರಿಕರು ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಮತದಾರರಾಗಲು ಅರ್ಹರಾಗಿರುತ್ತಾರೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬ ನಾಗರಿಕರು ಯಾವುದಾದರೂ ನಿರ್ಧಿಷ್ಟ ಕಾರಣದಿಂದ ಅನರ್ಹಗೊಳಿಸದ ಹೊರತು ಮತದಾರರ ಗುರುತು ಚೀಟಿ ಪಡೆಯಲು ದಾಖಲಾತಿ ನಡೆಸಲು ಅರ್ಹರಾಗಿರುತ್ತಾರೆ.
ಅರ್ಹ ಮತದಾರನ ಸಾಮಾನ್ಯ ನಿವಾಸದ ಸ್ಥಳದಲ್ಲಿ ಮಾತ್ರ ನೋಂದಣಿ ಮಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ಮಾತ್ರ ನೋಂದಣಿ ಸಾಧ್ಯ.


ಸಾಗರೋತ್ತರ ಭಾರತೀಯರ ಪಾಸ್‌ಪೋರ್ಟ್‌ನಲ್ಲಿನೀಡಿರುವ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮತದಾರರು ತಮ್ಮ ಮನೆಯ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗುವುದು.

ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದೇ?

ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಒಂದು ದಾಖಲೆಯನ್ನು ಒದಗಿಸಬೇಕು.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ಸೂಚನೆಗಳ ಪ್ರಕಾರ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೆ ಮತ ಚಲಾಯಿಸಲು ಮತದಾರರು ಅರ್ಹನಾಗಿರುತ್ತಾರೆ.


ಹೆಸರಿದೆಯೇ ಪರಿಶೀಲಿಸಿ

ಮತದಾನ ಪ್ರಕ್ರಿಯೆಯಲ್ಲಿ (ಇಸಿಐ) ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ಮತಪತ್ರವನ್ನು ಚಲಾಯಿಸುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ ಏಕೆಂದರೆ ಅದರಲ್ಲಿ ನೀವು ಮತ ಚಲಾಯಿಸುವ ಅರ್ಹತೆಯನ್ನು ದೃಢೀಕರಿಸುತ್ತದೆ.

ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ ಚುನಾವಣಾ ಆಯೋಗವು ಗೊತ್ತುಪಡಿಸಿದ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.

ಇತರ ದಾಖಲೆ ಯಾವುದು?

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿಗಾಗಿ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ ಸಾರ್ವತ್ರಿಕ ಚುನಾವಣೆಯ ವೇಳೆ ವೋಟರ್ ಐಡಿ ಇಲ್ಲದೆಯೇ ಮತವನ್ನು ಚಲಾಯಿಸಲು ಬಳಸಬಹುದಾದ ದಾಖಲೆಗಳು ಇಂತಿವೆ.

ಆಧಾರ್ ಕಾರ್ಡ್, MNREGA ಜಾಬ್ ಕಾರ್ಡ್, ಬ್ಯಾಂಕ್/ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ ಪಿಎಸ್‌ಯು/ ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿಗಳು/ ಎಂಎಲ್‌ಎಗಳು/ ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ವಿಶಿಷ್ಟ ಅಂಗವೈಕಲ್ಯ ಐಡಿ (UDID) ಕಾರ್ಡ್ ಗಳನ್ನು ದಾಖಲೆಯಾಗಿ ಮತದಾನದ ವೇಳೆ ಗುರುತು ಚೀಟಿಯಾಗಿ ಮತದಾನ ಕೇಂದ್ರದಲ್ಲಿ ತೋರಿಸಬಹುದಾಗಿದೆ.

ನೋಂದಣಿ ಸ್ಥಿತಿ ಪರಿಶೀಲನೆ ಹೇಗೆ?

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಅಲ್ಲದೇ ಮತದಾರರ ಸಹಾಯವಾಣಿ 1950ಕ್ಕೆ ಕರೆಯೂ ಪರಿಶೀಲನೆ ನಡೆಸಬಹುದಾಗಿದೆ.

Continue Reading
Advertisement
Fantasy Gaming
ಕ್ರೀಡೆ19 mins ago

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Shivasharane Akkamahadevi Jayanti Celebration and Shivanubhava programme at Soraba
ಶಿವಮೊಗ್ಗ20 mins ago

Shivamogga News: ಶಿವಶರಣೆ ಅಕ್ಕಮಹಾದೇವಿ ವಿಚಾರಧಾರೆ, ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ: ಶ್ರೀ ಸಿದ್ದ ವೃಷಭೇಂದ್ರ ಸ್ವಾಮೀಜಿ

World Book and Copyright Day celebration at Kottur
ವಿಜಯನಗರ22 mins ago

Vijayanagara News: ಕೊಟ್ಟೂರಿನಲ್ಲಿ ವಿಶ್ವ ಪುಸ್ತಕ, ಕೃತಿ ಸ್ವಾಮ್ಯ ದಿನ ಆಚರಣೆ

Minister Sharanbassappa Gowda Darshanpur Election campaign
ಯಾದಗಿರಿ23 mins ago

Lok Sabha Election 2024: ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯನ್ನು ಗೆಲ್ಲಿಸಿ: ಸಚಿವ ದರ್ಶನಾಪುರ

Viral News
ವೈರಲ್ ನ್ಯೂಸ್25 mins ago

Viral News: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ; ಅಂಗಡಿ ಮಾಲೀಕ ಅರೆಸ್ಟ್‌

DK ShivaKumar
ಕರ್ನಾಟಕ34 mins ago

DK Shivakumar: ಮತದಾರರಿಗೆ ಬೆದರಿಕೆ ಪ್ರಕರಣ; ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ

Zero Shadow Day
ವಿಜ್ಞಾನ45 mins ago

Zero Shadow Day: ನಾಳೆ ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Mohammad Rizwan
ಕ್ರೀಡೆ48 mins ago

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

bike taxi services
ಬೆಂಗಳೂರು1 hour ago

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Lok Sabha Election 2024 Priyanka Gandhi announces constitutional amendment
Lok Sabha Election 20241 hour ago

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌