Sensex Jump : ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; 1000 ಅಂಕಗಳಷ್ಟು ಏರಿಕೆ - Vistara News

ದೇಶ

Sensex Jump : ಷೇರು ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; 1000 ಅಂಕಗಳಷ್ಟು ಏರಿಕೆ

Sensex Jump : 2023-24 ಮೂರನೇ ತ್ರೈಮಾಸಿಕದ ಜಿಡಿಪಿಯಲ್ಲಿ ಭರ್ಜರಿ ಚೇತರಿಕೆ ಕಂಡಿರುವ ಕಾರಣ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಏರಿಕೆಯಾಗಿದೆ.

VISTARANEWS.COM


on

Sensex points
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಬಿಎಸ್ಇ ಸೆನ್ಸೆಕ್ಸ್ 1,000 ಪಾಯಿಂಟ್ಸ್ ಏರಿಕೆಯಾಗಿದ್ದು (Sensex Jump) 73,574 ಅಂಕಗಳಿಗೆ ತಲುಪಿದೆ. ಎನ್ಎಸ್ಇ ನಿಫ್ಟಿ50 ಶುಕ್ರವಾರದ ವಹಿವಾಟಿನಲ್ಲಿ ಮೊದಲ ಬಾರಿಗೆ 22,300 ಅಂಕಗಳನ್ನು ತಲುಪಿ ಹೊಸ ಗರಿಷ್ಠ ಮಟ್ಟಕ್ಕೇರಿದೆ. ಬಿಎಸ್ಇಯಲ್ಲಿ ಎಲ್ಲಾ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು 3.23 ಲಕ್ಷ ಕೋಟಿ ರೂ.ಗಳಿಂದ 391.18 ಲಕ್ಷ ಕೋಟಿ ರೂ.ಗೆ ಏರಿದೆ. 2023-24ರ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಜಿಡಿಜಿ ನಿರೀಕ್ಷೆ ಮೀರಿ ಶೇಕಡಾ 8.3ರಷ್ಟು ದಾಖಲಾಗಿರುವ ಕಾರಣ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಚೈತನ್ಯ ಕಂಡಿದೆ.

ಸೆನ್ಸೆಕ್ಸ್ 30 ಷೇರುಗಳ ಪೈಕಿ ಟಾಟಾ ಸ್ಟೀಲ್, ಮಹೀಂದ್ರಾ & ಮಹೀಂದ್ರಾ ಮತ್ತು ಜೆಎಸ್​ಡಬ್ಲ್ಯು ಸ್ಟೀಲ್ ತಲಾ 2 ಪ್ರತಿಶತದಷ್ಟು ಏರಿಕೆ ಕಂಡಿವೆ. ಟಾಟಾ ಮೋಟಾರ್ಸ್, ಮಾರುತಿ, ಎಲ್​ಆ್ಯಂಡ್​ಡಿ ಮತ್ತು ಪವರ್ ಗ್ರಿಡ್ ಇತರ ಪ್ರಮುಖ ಲಾಭ ಗಳಿಸಿದ ಸಂಸ್ಥೆಗಳು. ಸನ್ ಫಾರ್ಮಾ ಶೇಕಡಾ 0.8 ರಷ್ಟು ಕುಸಿದಿದೆ. ಬಿಎಸ್ಇ ಮಿಡ್​ಕ್ಯಾಫ್​ ಸೂಚ್ಯಂಕವು ಶೇಕಡಾ 0.7 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡಾ 1 ರಷ್ಟು ಏರಿಕೆಯಾಗಿದೆ.

ಮಾರುಕಟ್ಟೆ ಏರಿಕೆಗೆ ಪ್ರಮುಖ ಕಾರಣಗಳೇನು?

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 8.4 ರಷ್ಟು ಬೆಳೆದಿದೆ. ಇದು ಆರು ತ್ರೈಮಾಸಿಕಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯಾಗಿದೆ. ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಯಿಂದಾಗಿ ಈ ಬೆಳವಣಿಗೆಯಾಗಿದೆ.

ಇದನ್ನೂ ಓದಿ : Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಉತ್ಸಾಹಭರಿತ ಜಾಗತಿಕ ಮಾರುಕಟ್ಟೆಗಳು

ಸಕಾರಾತ್ಮಕ ಜಾಗತಿಕ ಮಾರುಕಟ್ಟೆಯೂ ಷೇರು ಸೂಚ್ಯಂಕಗಳು ಏರಲು ಸಹಾಯ ಮಾಡಿದವು. ವಾಲ್ ಸ್ಟ್ರೀಟ್ ಷೇರುಗಳು ರಾತ್ರೋರಾತ್ರಿ ಭಾರೀ ಏರಿಕೆ ಕಂಡಿತ್ತು. ಜಪಾನ್ ನ ನಿಕೈ ಮಾರುಕಟ್ಟೆ ಹೊಸ ದಾಖಲೆಯ ಎತ್ತರವನ್ನು ಮುಟ್ಟಿದೆ. ಚೀನಾದ ಸಿಎಸ್ಐ 300 ಶೇಕಡಾ 0.2 ರಷ್ಟು ಏರಿಕೆಯಾಗಿದೆ.

ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ

ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP Growth) ಶೇಕಡಾ 8.4 ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.3ರಷ್ಟಿತ್ತು. ಹೀಗಾಗಿ ನಿರೀಕ್ಷೆ ಮೀರಿದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ. ಇದು 2022-23 ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 8.4 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ವಿಶ್ಲೇಷಕರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶವು ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ.

ನಿರ್ಮಾಣ ಕ್ಷೇತ್ರದ ಎರಡಂಕಿ ಬೆಳವಣಿಗೆ ದರ (ಶೇ.10.7), ಉತ್ಪಾದನಾ ವಲಯದ ಬೆಳವಣಿಗೆ ದರ (ಶೇ.8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರಕಾರ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣವೇ ಈ ಕ್ಷೇತ್ರಗಳಲ್ಲಿನ ಬೆಳವಣಿಗೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ: ಹೊಸ ಕಾರಿನ ಪೂಜೆ ವೇಳೆ ನಡೆಯಿತು ಅವಘಡ; ಇಲ್ಲಿದೆ ವಿಡಿಯೊ

Viral News: ತಮಿಳುನಾಡಿನ ದೇವಸ್ಥಾನವೊಂದರ ಆವರಣದಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಕಾರಿನ ಚಾಲಕ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದಾನೆ. ದೇಗುಲದ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಸಂಪೂರ್ಣ ಜಖಂಗೊಂಡಿದೆ. ವಿಶೇಷ ಎಂದರೆ ಹೊಸ ಕಾರಿನ ಪೂಜೆಯ ವೇಳೆ ಈ ಅಪಘಾತ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

VISTARANEWS.COM


on

Viral News
Koo

ಚೆನ್ನೈ: ಹೊಸ ಮನೆ, ವಾಹನ, ದುಬಾರಿ ವಸ್ತು ಕೊಂಡುಕೊಳ್ಳುವುದು ಮಧ್ಯಮ ವರ್ಗದ ಭಾರತೀಯರ ಪಾಲಿನ ಬಹು ದೊಡ್ಡ ಕನಸು. ಈ ಕನಸು ನನಸಾದ ವೇಳೆ ನಾವು ಅದಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ವಾಹನವಾದರೆ ಬಳಸುವ ಮುನ್ನ ದೇವಸ್ಥಾನಕ್ಕೆ ಕೊಂಡೊಯ್ದು ಅದಕ್ಕೆ ಅರ್ಚಕರ ಕೈಯಿಂದ ಪೂಜೆ ಮಾಡಿಸುತ್ತೇವೆ. ಮುಂದೆ ಯಾವ ರೀತಿಯ ವಿಘ್ನವೂ ಎದುರಾಗದಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಅದೇ ರೀತಿ ಇಲ್ಲೊಬ್ಬ ತಾನು ಖರೀದಿಸಿದ ಹೊಸ ಕಾರಿಗೆ ಪೂಜೆ ಸಲ್ಲಿಸಲೆಂದು ದೇವಸ್ಥಾನಕ್ಕೆ ತೆರಳಿದ್ದಾನೆ. ಎಲ್ಲವೂ ಸುಸೂತ್ರವಾಗಿ ನಡೆಸಿತ್ತು. ಆದರೆ ಕೊನೆಯಲ್ಲಿ ಎಡವಟ್ಟೊಂದು ನಡೆದೇ ಹೋಯ್ತು. ಆತ ಬ್ರೇಕ್‌ ಎಂದು ಎಕ್ಸಿಲೇಟರ್‌ ತುಳಿದಿದ್ದು ಕಾರು ದೇವಸ್ಥಾನದ ಕಂಬಕ್ಕೆ ಗುದ್ದಿ ಜಖಂಗೊಂಡಿದೆ. ಸದ್ಯ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ (Viral News).

ತಮಿಳುನಾಡಿನ ಕಡಲೂರು ಜಿಲ್ಲೆಯ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ. ಸುಧಾಕರ್‌ ಎನ್ನುವವರು ಹೊಸ ಕಾರು ಖರೀದಿಸಿದ್ದರು. ವಾಡಿಕೆಯಂತೆ ಹೊಸ ಕಾರನ್ನು ಪೂಜೆಗಾಗಿ ದೇವಸ್ಥಾನಕ್ಕೆ ತಂದಿದ್ದರು. ಹೂ ಮಾಲೆಗಳಿಂದ ಕಾರನ್ನು ಅಲಂಕರಿಸಲಾಗಿತ್ತು. ಅರ್ಚಕರು ಪೂಜೆ ನೆರವೇರಿಸಿ ಕಾರನ್ನು ಸ್ವಲ್ಪ ಮುಂದಕ್ಕೆ ಚಲಾಯಿಸುವಂತೆ ಹೇಳಿದರು.

ಈ ವೇಳೆ ನಡೆಯಿತು ಬಹು ದೊಡ್ಡ ಅಚಾತುರ್ಯ. ಸುಧಾಕರ್‌ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದಾರೆ. ಕಾರು ದೇವಸ್ಥಾನದ ಆವರಣದಲ್ಲಿದ್ದ ಹಂಪ್‌, ಮೆಟ್ಟಿಲು ದಾಟಿ ಸೀದಾ ಮುಂದಕ್ಕೆ ಚಲಿಸಿ ಕಂಬಕ್ಕೆ ಗುದ್ದಿದೆ. ಪಕ್ಕದಲ್ಲಿ ಇದ್ದವರಿಗೆ ಒಂದು ಕ್ಷಣ ಗರ ಬಡಿದಂತಾಗಿದ್ದು, ಏನು ಮಾಡಬೇಕೆಂದು ತೋಚದ ಸ್ಥಿತಿ ನಿರ್ಮಾಣವಾಗಿತ್ತು. ವಿಶೇಷ ಎಂದರೆ ಚಾಲಕನ ಇನ್ನೊಂದು ಬದಿಯ ಡೋರ್ ಬಳಿ ನಿಂತಿದ್ದ ವ್ಯಕ್ತಿಯೊಬ್ಬರು ಕೂಡ ನೇತಾಡಿಕೊಂಡೇ ಹೋಗಿದ್ದಾರೆ. ವಾಹನದ ಹಿಂದೆ ಇನ್ನೊಬ್ಬ ವ್ಯಕ್ತಿಯೊಬ್ಬರು ಓಡುತ್ತಿರುವುದು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಹೊಸ ಕಾರು ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಚಾಲಕ ಮತ್ತು ಕಾರಿನ ಸ್ಟೆಪ್‌ನಲ್ಲಿ ನೇತಾಡಿಕೊಂಡಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಹೊಸ ಕಾರು ಮಾತ್ರ ಜಖಂಗೊಂಡಿದೆ. ಸಣ್ಣ ಅಚಾತುರ್ಯದಿಂದ ನಡೆದ ಈ ಅನಾಹುತದಿಂದ ಚಾಲಕ ಈಗ ಕೈ ಹಿಸುಕುವಂತಾಗಿದೆ.

ಬೆಂಗಳೂರಿನಲ್ಲಿಯೂ ನಡೆದಿತ್ತು ಇದೇ ರೀತಿಯ ಘಟನೆ

ಇದೇ ರೀತಿಯ ಘಟನೆ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿಯೂ ನಡೆದಿತ್ತು. ಆಂಬ್ಯುಲೆನ್ಸ್‌ ಚಾಲಕನ ಎಡವಟ್ಟಿನಿಂದ ಸರಣಿ ಅಪಘಾತ ಸಂಭವಿಸಿತ್ತು. ಆತ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ ಪರಿಣಾಮ ಆಂಬುಲೆನ್ಸ್, ಮೂರು ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ ನಡೆದಿತ್ತು. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ಈ ಘಟನೆ ವರದಿಯಾಗಿದ್ದು, ಬೈಕ್ ಸವಾರನ ಕಾಲಿಗೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದರು.

ಇದನ್ನೂ ಓದಿ: Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Continue Reading

ವಿದೇಶ

Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ..‌ ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್‌ ಕಾರಕ ಕೆಮಿಕಲ್

Cancer-Causing Chemicals:ಕಾರಿನಲ್ಲಿ ಉತ್ಪತ್ತಿಯಾಗಿರುವ ರಾಸಾಯನಿಕವೊಂದನ್ನು ಶ್ವಾಸಿಸುವುದರಿಂದ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಅಮೆರಿಕಾದ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರು( ಈ ಅಧ್ಯಯನ ನಡೆಸಿ ವರದಿ, ನೀಡಿದ್ದು, ಕಾರಿನೊಳಗೆ ಹೊರಬರುವ ಅಪಾಯಕಾರಿ ರಾಸಾಯನಿಕವನ್ನುಉಸಿರಾಡುವುದರಿಂದ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

VISTARANEWS.COM


on

Cancer Causing Chemicals
Koo

ವಾಷಿಂಗ್ಟನ್‌: ಕಾರಿನಲ್ಲಿ ಲಾಂಗ್‌ ಡ್ರೈವ್‌ ಹೋಗೋದು ಬಹುತೇಕ ಎಲ್ಲರೂ ಇಷ್ಟ ಪಡುತ್ತಾರೆ. ತಣ್ಣನೇ ಎ ಸಿ ಹಾಕೊಂಡು ಕಿಲೋಮೀಟರ್‌ಗಟ್ಟಲೇ ಕಾರು ಚಲಾಯಿಸೋದೇ ಒಂದು ಕ್ರೇಜ್‌. ಕಾರು(Car) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕಾರು ಪ್ರಿಯರಿಗೊಂದು ಶಾಕಿಂಗ್‌ ವಿಚಾರವೊಂದು ಪತ್ತೆಯಾಗಿದೆ. ಕಾರಿನಲ್ಲಿ ಉತ್ಪತ್ತಿಯಾಗಿರುವ ರಾಸಾಯನಿಕವೊಂದನ್ನು ಶ್ವಾಸಿಸುವುದರಿಂದ ಜನ ಕ್ಯಾನ್ಸರ್‌ಗೆ(Cancer) ತುತ್ತಾಗುತ್ತಾರೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಅಮೆರಿಕಾದ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರು(Environmental Science & Technology) ಈ ಅಧ್ಯಯನ ನಡೆಸಿ ವರದಿ, ನೀಡಿದ್ದು, ಕಾರಿನೊಳಗೆ ಹೊರಬರುವ ಅಪಾಯಕಾರಿ ರಾಸಾಯನಿಕವನ್ನು(Cancer-Causing Chemicals) ಉಸಿರಾಡುವುದರಿಂದ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕ ರಾಷ್ಟ್ರೀಯ ಟಾಕ್ಸೋಲಾಜಿ ಕಾರ್ಯಕ್ರಮದಡಿಯಲ್ಲಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಅದಕ್ಕಾಗಿ ಅವರು 2015 ಮತ್ತು 2019ರನಡುವೆ ತಯಾರಾಗಿರುವ 101 ಎಲ್ಲಾ ರೀತಿಯ ಅಂದರೆ ಎಲೆಕ್ಟ್ರಿಕ್‌, ಗ್ಯಾಸ್‌ ಮತ್ತು ಹೈಬ್ರಿಡ್‌ ಕಾರಗಳನ್ನು ಮಾದರಿಗಳನ್ನಾಗಿ ತೆಗೆದುಕೊಂಡಿದ್ದಾರೆ. ಈ ಕಾರುಗಳು ಶೇ.99ರಷ್ಟು ಕಾರುಗಳು TCIPP ಎಂಬ ಜ್ವಾಲೆ ನಿವಾರಕ ಸಾಧನವನ್ನು ಹೊಂದಿದೆ. ಇವುಗಳು ನೇರವಾಗಿ ಮನುಷ್ಯನ ನರಗಳು, ಸಂತಾನೋತ್ಪತ್ತಿ ಶಕ್ತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರುಗಳಲ್ಲಿ ಪ್ರತಿನಿತ್ಯ ಒಂದು ಗಂಟೆಗಳ ಕಾಲ ಕಳೆದರೆ ಜನ ನಿಧಾನವಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಡ್ಯೂಕ್‌ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕರಾದ ರೆಬೆಕ್ಕಾ ಹೋಹೆನ್‌ ಮಾತನಾಡಿದ್ದು, ಪ್ರತಿನಿತ್ಯ ಕಾರಿನಲ್ಲೇ ಬಹುದೂರ ಪ್ರಯಾಣಿಸುವವರು ಮತ್ತು ಮಕ್ಕಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆ ಕಾಲದಲ್ಲಿ ಕಾರಿನ ಸೀಟುಗಳಿಂದ ಈ ರಾಸಾಯನಿಕಗಳು ಅತಿ ಹೆಚ್ಚಾಗಿ ಹೊರಬರುತ್ತವೆ. ಇದು ಕ್ಯಾನ್ಸರ್‌ಗೆ ತುತ್ತು ಮಾಡುವಂತೆ ಅಪಾಯಕಾರಿ ರಾಸಾಯನಿಕಗಳಾಗಿವೆ. ಕಾರು ತಯಾರಕರು ಸೀಟಿನ ಒಳಗೆ ತುಂಬಿಸುವ ವಸ್ತುಗಳಿಗೆ(seat foam) ಮತ್ತು ಕಾರಿನ ಒಳಗಿರುವ ಇತರೇ ವಸ್ತುಗಳಿಗೆ ಬಹುಕಾಲ ಬಾಳಿಕೆ ಬರುವಂತೆ ಮಾಡುವ ಉದ್ದೇಶದಿಂದ ರಾಸಾಯನಿಕಗಳನ್ನು ಸೇರಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ; ಅಮೆರಿಕ ಆರೋಪಕ್ಕೆ ರಷ್ಯಾ ಟಾಂಗ್‌

ಇನ್ನು ಈ ಬಗ್ಗೆ ಆರೋಗ್ಯ ಸುರಕ್ಷತೆ ಮತ್ತು ಔಷಧಿ ವಿಭಾಗದ ನಿರ್ದೇಶಕ ಪ್ಯಾಟ್ರಿಕ್‌ ಮಾರಿಸನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾರಿನಲ್ಲಿ ಬಳಸುವ ಫಯರ್‌ ಫ್ಲೇಮ್‌ ನಿಯಂತ್ರಕ ರಾಸಾಯನಿಕಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಮುನುಷ್ಯನನ್ನು ಕ್ಯಾನ್ಸರ್‌ಗೆ ದೂಡುತ್ತಿವೆ. ಈ ರಾಸಾಯನಿಕಗಳು ಬೆಂಕಿಯನ್ನು ಜ್ವಾಲೆಯನ್ನು ನಂದಿಸುವ ಬದಲು ಒಳಗಿದ್ದ ವ್ಯಕ್ತಿಗೆ ಉಸಿರು ಕಟ್ಟುವಂತೆ ಮಾಡುತ್ತದೆ. ಹೀಗಾಗಿ ಅಮೆರಿಕ ರಸ್ತೆ ಸುರಕ್ಷತಾ ಪ್ರಾಧಿಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.


Continue Reading

Lok Sabha Election 2024

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Reservation Row: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಮನೋಭಾವವನ್ನು ಎತ್ತಿ ತೋರಿಸುವ ಆರ್ಕೈವಲ್ ಪತ್ರಿಕೆಯ ಹಳೆಯ ತುಣುಕನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉದ್ಯೋಗಗಳನ್ನು ಕಾಯ್ದಿರಿಸುವುದನ್ನು ವಿರೋಧಿಸುತ್ತೇನೆ. ಯಾಕೆಂದರೆ ಮೀಸಲಾತಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆʼʼ ಎಂದು ಹೇಳಿದ್ದ ನೆಹರೂ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

VISTARANEWS.COM


on

Reservation Row
Koo

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ (Reservation Row). ಈ ಮಧ್ಯೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ಅವರು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಮನೋಭಾವವನ್ನು ಎತ್ತಿ ತೋರಿಸುವ ಆರ್ಕೈವಲ್ ಪತ್ರಿಕೆಯ ಹಳೆಯ ತುಣುಕನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ʼʼಈ ವರದಿಯು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಯ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತದೆʼʼ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ್ದ ನೆಹರೂ, ʼʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉದ್ಯೋಗಗಳನ್ನು ಕಾಯ್ದಿರಿಸುವುದನ್ನು ವಿರೋಧಿಸುತ್ತೇನೆ. ಯಾಕೆಂದರೆ ಮೀಸಲಾತಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆʼʼ ಎಂದು ಹೇಳಿದ್ದರು ಎನ್ನುವುದನ್ನು ಆರ್ಕೈವಲ್ ಪತ್ರಿಕೆಯು ವರದಿ ಮಾಡಿತ್ತು. ಇದನ್ನು ಮಾಳವೀಯ ಉಲ್ಲೇಖಿಸಿದ್ದಾರೆ.

ಇದನ್ನು ಪೋಸ್ಟ್‌ ಮಾಡಿ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸಬಲೀಕರಣವನ್ನು ಕಾಂಗ್ರೆಸ್ ಐತಿಹಾಸಿಕವಾಗಿ ವಿರೋಧಿಸಿದೆ ಎಂದು ಮಾಳವೀಯ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಪಾದಿಸಿದ್ದಾರೆ. “ಕಾಂಗ್ರೆಸ್ ಯಾವಾಗಲೂ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿಗಳ ಸಬಲೀಕರಣದ ವಿರುದ್ಧವಾಗಿದೆ. ಆದರೆ ಮೀಸಲಾತಿಯ ಸಾಂವಿಧಾನಿಕ ನಿಬಂಧನೆಗಳನ್ನು ಯಾರೂ ಹಾಳು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೋಡಿಕೊಳ್ಳುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಬಹುದೊಡ್ಡ ಹಿನ್ನಡೆ ಎದುರಾದಂತಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರಸ್ತುತ ಜಾರಿಯಲ್ಲಿರುವ ಶೇ. 50ರಷ್ಟು ಮೀಸಲಾತಿ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದರು. “ಇಂದು ಮೀಸಲಾತಿಗೆ ಶೇ. 50ರಷ್ಟು ಮಿತಿ ಇದೆ. ನಾವು ಈ ಮಿತಿಯನ್ನು ತೆಗೆದು ಹಾಕುತ್ತೇವೆ. ಬಡವರಿಗೆ ಮೀಸಲಾತಿ ಮಿತಿಯನ್ನು ಹೆಚ್ಚಿಸುತ್ತೇವೆ ” ಎಂದು ರಾಬರೇಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್‌ ಗಾಂಧಿ ಘೋಷಿಸಿದ್ದರು.

ಪ್ರಣಾಳಿಕೆಯಲ್ಲಿಯೂ ಘೋಷಣೆ

2024ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ಎಸ್‌ಟಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯ ಶೇ. 50ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇತ್ತ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಇರುವವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊನೆಗೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ʼನಾರಿ ಶಕ್ತಿ ವಂದನ್ ಅಧಿನಿಯಮ್ʼ ಅನ್ನು ಜಾರಿಗೆ ತರುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕಲ್ಯಾಣ ಯೋಜನೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದೂ ಬಿಜೆಪಿ ಹೇಳಿದೆ.

ಇದನ್ನೂ ಓದಿ: ಎಲ್ಲ ಮೀಸಲಾತಿಯನ್ನು ಮುಸ್ಲಿಮರಿಗೇ ಕೊಡಬೇಕು ಎಂದ ಲಾಲು ಪ್ರಸಾದ್‌ ಯಾದವ್;‌ ಕೆಂಡವಾದ ಮೋದಿ!

Continue Reading

ದೇಶ

Maldives: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಆಗಮಿಸಿದ ಮಾಲ್ಡೀವ್ಸ್ ಸಚಿವ ಮೂಸಾ ಜಮೀರ್

Maldives: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್‌ನ ಸಚಿವ ಮೂಸಾ ಜಮೀರ್ ಅವರು ದೆಹಲಿಗೆ ಆಗಮಿಸಿದ್ದಾರೆ. ಈ ಅಧಿಕೃತ ಭೇಟಿ ವೇಳೆ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಭೇಟಿಯ ವೇಳೆ ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಕೈಗೊಳ್ಳಬೇಕಾದ ಮಾರ್ಗಗಳ ಬಗ್ಗೆಯೂ ಮಾತುಕತೆ ನಡೆಯಲಿದೆ ಎನ್ನುವ ನಿರೀಕ್ಷೆ ಇದೆ.

VISTARANEWS.COM


on

Maldives
Koo

ನವದೆಹಲಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್ (Maldives)ನ ಸಚಿವ ಮೂಸಾ ಜಮೀರ್ (Moosa Zameer) ಅವರು ದೆಹಲಿಗೆ ಆಗಮಿಸಿದ್ದಾರೆ. ಈ ಅಧಿಕೃತ ಭೇಟಿ ವೇಳೆ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪ (Lakshadweep)ಕ್ಕೆ ತೆರಳಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೂಸಾ ಜಮೀರ್ ಅವರ ಭೇಟಿ ಮಹತ್ವದ್ದಾಗಲಿದೆ.

ಭೇಟಿಯ ವೇಳೆ ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗಾಗಿ ಕೈಗೊಳ್ಳಬೇಕಾದ ಮಾರ್ಗಗಳ ಬಗ್ಗೆಯೂ ಮಾತುಕತೆ ನಡೆಯಲಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಸಾ ಜಮೀರ್ ಅವರನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. “ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆಗಳು ಮತ್ತು ನಮ್ಮ ಬಹುಮುಖಿ ಸಂಬಂಧಕ್ಕೆ ಪ್ರಚೋದನೆ ನೀಡುವ ಮಾರ್ಗಗಳ ಬಗ್ಗೆ ಮಾತುಕತೆ ನಡೆಸಲಿದ್ದೇವೆʼʼ ಎಂದು ಬರೆದುಕೊಂಡಿದೆ.

ಮಾಲ್ಡೀವ್ಸ್ ಸಚಿವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಸಭೆ ನಡೆಸಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಮಾಲ್ಡೀವ್ಸ್ ಭಾರತದ ಪ್ರಮುಖ ನೆರೆಯ ರಾಷ್ಟ್ರವಾಗಿದೆ ಮತ್ತು ವಿದೇಶಾಂಗ ಸಚಿವ ಜಮೀರ್ ಅವರ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮೇ 10ರೊಳಗೆ ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂಪಡೆಯುವುದಾಗಿ ಭಾರತ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ. ಮೇ 3ರಂದು ಭಾರತ ಮತ್ತು ಮಾಲ್ಡೀವ್ಸ್ ದ್ವಿಪಕ್ಷೀಯ ಉನ್ನತ ಮಟ್ಟದ ಸಭೆ ನಡೆದಿತ್ತು. ಈ ವೇಳೆ ಮೇ 10ರೊಳಗೆ ದ್ವೀಪ ರಾಷ್ಟ್ರದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಕ್ಕೂ ಮೊದಲು ಮೊಹಮ್ಮದ್ ಮುಯಿಝು ನೇತೃತ್ವದ ಮಾಲ್ಡೀವ್ಸ್ ಸರ್ಕಾರವು ಭಾರತವು ಮಾಲೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿತ್ತು.

ಇದನ್ನೂ ಓದಿ: Maldives: ಭಾರತೀಯರೇ, ದಯಮಾಡಿ ಬನ್ನಿ ಎಂದ ಮಾಲ್ಡೀವ್ಸ್‌ ಸಚಿವ; ಬಾಯ್ಕಾಟ್‌ ಪೆಟ್ಟಿಗೆ ಥಂಡಾ!

ಕಳೆದ ತಿಂಗಳು ಮಾಲ್ಡೀವ್ಸ್‌ನಿಂದ ಭಾರತೀಯ ಸಿಬ್ಬಂದಿಯ ಮೊದಲ ಬ್ಯಾಚ್ ಅನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು. ಭಾರತ ಮತ್ತು ಮಾಲ್ಡೀವ್ಸ್ ಈಗಾಗಲೇ ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದು, ಮೂರನೆಯದು ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ.

Continue Reading
Advertisement
Viral News
ವೈರಲ್ ನ್ಯೂಸ್17 mins ago

Viral News: ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ: ಹೊಸ ಕಾರಿನ ಪೂಜೆ ವೇಳೆ ನಡೆಯಿತು ಅವಘಡ; ಇಲ್ಲಿದೆ ವಿಡಿಯೊ

viral video
ಕ್ರಿಕೆಟ್26 mins ago

Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Cancer Causing Chemicals
ವಿದೇಶ29 mins ago

Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ..‌ ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್‌ ಕಾರಕ ಕೆಮಿಕಲ್

hd revanna jailed 2
ಕ್ರೈಂ51 mins ago

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Jyothi Rai clarity For torturing on indecent videos
ಕಿರುತೆರೆ55 mins ago

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

IPL 2024 - Points Table
ಕ್ರೀಡೆ59 mins ago

IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

Reservation Row
Lok Sabha Election 202460 mins ago

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Gurpatwant Singh Pannun
ವಿದೇಶ1 hour ago

Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ; ಅಮೆರಿಕ ಆರೋಪಕ್ಕೆ ರಷ್ಯಾ ಟಾಂಗ್‌

Sangeeth Sivan dies Riteish Deshmukh Tusshar Kapoor pay tribute
ಮಾಲಿವುಡ್1 hour ago

Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

SRH vs LSG
ಕ್ರೀಡೆ2 hours ago

SRH vs LSG: ಬಿರುಸಿನ ಅರ್ಧಶತಕ ಬಾರಿಸಿ ಗೇಲ್​, ನರೈನ್​ ದಾಖಲೆ ಮುರಿದ ಟ್ರಾವಿಸ್ ಹೆಡ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌