Shri Ramayana Yatra: ಶ್ರೀ ರಾಮಾಯಣ ಯಾತ್ರೆಗೆ ಚಾಲನೆ; ಎಲ್ಲೆಲ್ಲಿ ಸಂಚರಿಸಲಿದೆ ಈ ರೈಲು? - Vistara News

ದೇಶ

Shri Ramayana Yatra: ಶ್ರೀ ರಾಮಾಯಣ ಯಾತ್ರೆಗೆ ಚಾಲನೆ; ಎಲ್ಲೆಲ್ಲಿ ಸಂಚರಿಸಲಿದೆ ಈ ರೈಲು?

Shri Ramayana Yatra: ದೆಹಲಿಯಿಂದ ಹೊರಡುವ ಶ್ರೀ ರಾಮಾಯಣ ಯಾತ್ರೆ ರೈಲಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಚಾಲನೆ ನೀಡಿದ್ದಾರೆ. ಈ ರೈಲು ರಾಮಾಯಣಕ್ಕೆ ಸಂಬಂಧಿಸಿದ ವಿವಿಧ ಕಡೆಗಳಲ್ಲಿ 19 ದಿನ ಸಂಚರಿಸಲಿದೆ.

VISTARANEWS.COM


on

ramayana yathra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೆಹಲಿಯಿಂದ ಹೊರಡುವ ಶ್ರೀ ರಾಮಾಯಣ ಯಾತ್ರೆ (Shri Ramayana Yatra) ರೈಲಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakashi Lekhi) ಚಾಲನೆ ನೀಡಿದ್ದಾರೆ. ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಈ ಭಾರತ್ ಗೌರವ್ ಡೀಲಕ್ಸ್ ಎಸಿ ಪ್ರವಾಸಿ ರೈಲಿಗೆ ಸಚಿವೆ ಹಸಿರು ನಿಶಾನೆ ತೋರಿದರು. ರಾಮಾಯಣ ಮಹಾಕಾವ್ಯಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಈ ರೈಲು ಸಂಚರಿಸಲಿದೆ. ಈ ರೈಲು ಒಟ್ಟು 19 ದಿನ ಪ್ರಯಾಣ ನಡೆಸಲಿದೆ.

ರೈಲಿನ ವೈಶಿಷ್ಟ್ಯ

ʼಸ್ವದೇಶ ದರ್ಶನʼ ಯೋಜನೆ ಅಡಿಯಲ್ಲಿ ಐಆರ್‌ಸಿಟಿಸಿ (Indian Railway Catering and Tourism Corporation) ವಿಶೇಷ ಪ್ರವಾಸ ಕೊಡುಗೆಯನ್ನು ನೀಡಿದ್ದು, ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ಈ ರೈಲು ಭೇಟಿ ನೀಡಲಿದೆ. ʼʼಶ್ರೀ ರಾಮಾಯಣ ಯಾತ್ರಾ-ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು 19 ದಿನ ಸಂಚರಿಸಲಿದ್ದು, 9 ಕಡೆಗಳಲ್ಲಿ ನಿಲುಗಡೆಯಾಗಲಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಆದ ಬಳಿಕ ಧಾರ್ಮಿಕ ಪ್ರವಾಸ ಕೈಗೊಳ್ಳುವ ಬಗ್ಗೆ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಇಚ್ಛೆ ವ್ಯಕ್ತಪಡಿಸಿದ್ದರು. ಇದೀಗ ಅವರಿಗಾಗಿ ಈ ವಿಶೇಷ ಪ್ರವಾಸವನ್ನು ಆಯೋಜಿಸಲಾಗಿದೆʼʼ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ಎಲ್ಲೆಲ್ಲ ಸಂಚಾರ?

ರೈಲು ಆರಂಭದಲ್ಲಿ ಅಯೋಧ್ಯೆಗೆ ತೆರಳಿದೆ. ಇಲ್ಲಿ ಪ್ರವಾಸಿಗರು ರಾಮ ಮಂದಿರದ ಜತೆಗೆ ಹನುಮಾನ್‌ ದೇವಾಲಯವನ್ನೂ ಸಂದರ್ಶಿಸಲಿದ್ದಾರೆ. ಬಳಿಕ ನಂದಿಗ್ರಾಮದ ಭಾರತ್‌ ಮಂದಿರಕ್ಕೂ ತೆರಳಲಿದ್ದಾರೆ. ಅಯೋಧ್ಯೆಯ ಬಳಿಕ ಸೀತಾ ಮಾತೆ ಜನಿಸಿದ ಸ್ಥಳ ಎಂದು ನಂಬಲಾಗುವ ಬಿಹಾರದ ಸೀತಾಮರ್ಹಿ ಮತ್ತು ನೇಪಾಳದ ರಾಮ್-ಜಾನಕಿ ದೇವಾಲಯಕ್ಕೂ ತೆರಳುವ ಯೋಜನೆ ಇದೆ.

ಸೀತಾಮರ್ಹಿ ನಂತರ ಪ್ರವಾಸಿಗರನ್ನು ರಾಮ್ರೇಖಾ ಘಾಟ್ ಮತ್ತು ಬಕ್ಸಾರ್‌ನ ವಿವಿಧ ದೇವಾಲಯಗಳಿಗೆ ಕರೆದೊಯ್ಯಲಾಗುವುದು. ನಂತರ ವಾರಣಾಸಿ. ಅಲ್ಲಿ ಪ್ರವಾಸಿಗರು ವಾರಣಾಸಿ, ಪ್ರಯಾಗ್, ಶೃಂಗ್ವೇರ್‌ಪುರ್‌ ಮತ್ತು ಚಿತ್ರಕೂಟ ದೇವಾಲಯಗಳಿಗೆ ತೆರಳಲಿದ್ದಾರೆ. ವಾರಣಾಸಿ, ಪ್ರಯಾಗ್ ಮತ್ತು ಚಿತ್ರಕೂಟದಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿದೆ.

ಎಸಿ 1 ಮತ್ತು ಎಸಿ 2 ದರ್ಜೆಯ ಅತ್ಯಾಧುನಿಕ ಡೀಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಒಟ್ಟು 156 ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಸಂಸ್ಥೆ ಐಆರ್‌ಸಿಟಿಸಿ ಈ ಮೂಲಕ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ʼʼಈ ‘ಶ್ರೀ ರಾಮಾಯಣ ಯಾತ್ರೆ’ಯ ಪ್ರವಾಸಿಗರಿಗೆ ವಿವಿಧ ತಾಣಗಳಲ್ಲಿ ರಾಮಾಯಣದ ಕಥೆಯನ್ನು ಪರಿಶೀಲಿಸುವ ಅವಕಾಶವನ್ನು ಒದಗಿಸಲಾಗುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಾಚೀನ ಪರಂಪರೆಯನ್ನು ಉತ್ತೇಜಿಸಲು ಕೊಡುಗೆ ನೀಡುತ್ತದೆʼʼ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: PM Narendra Modi: ಪ್ರಧಾನಿಯಿಂದ ಭವ್ಯ ಅಯೋಧ್ಯಾ ಧಾಮ್ ರೈಲು ನಿಲ್ದಾಣ ಉದ್ಘಾಟನೆ, ಅಮೃತ್‌ ಭಾರತ್‌ ರೈಲಿಗೆ ಚಾಲನೆ

ರಾಮ ಮಂದಿರಕ್ಕೆ ಭಕ್ತ ಜನ ಸಾಗರ

ಜನವರಿ 22ರಂದು ರಾಮ ಮಂದಿರಲ್ಲಿ ಪ್ರಾಣ ಪ್ರತಿಷ್ಠೆ ಆಯೋಜಿಸಲಾಗಿತ್ತು. ಬಳಿಕ ಜನವರಿ 23ರಂದು ದೇವಾಲಯವನ್ನು ಭಕ್ತರ ಪ್ರವೇಶಕ್ಕಾಗಿ ಮುಕ್ತಗೊಳಿಸಲಾಗಿದೆ. ಅಂದಿನಿಂದ ರಾಮನ ದರ್ಶನಕ್ಕೆ ಪ್ರತಿ ದಿನ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Innova Crysta: ಇನ್ನೋವಾ ಕ್ರಿಸ್ಟಾ ನೂತನ ಸರಣಿಯ GX+ ಪರಿಚಯಿಸಿದ ಟಿಕೆಎಂ; ವೈಶಿಷ್ಟ್ಯಗಳೇನು? ದರ ಎಷ್ಟು?

Innova Crysta: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇನ್ನೋವಾ ಕ್ರಿಸ್ಟಾ ಸರಣಿಯಲ್ಲಿ ನೂತನ ಗ್ರೇಡ್ GX+ ಅನ್ನು ಪರಿಚಯಿಸಿದ್ದು, ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಡೈಮಂಡ್-ಕಟ್ ಅಲಾಯ್ಸ್, ವುಡನ್ ಪ್ಯಾನೆಲ್ ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ಸೇರಿದಂತೆ ಹಲವಾರು ಅತ್ಯಾಕರ್ಷಕ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ.

VISTARANEWS.COM


on

Innova Crysta new grade GX+ introduced by Toyota Kirloskar Motor
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಇನ್ನೋವಾ ಕ್ರಿಸ್ಟಾ (Innova Crysta) ಸರಣಿಯಲ್ಲಿ ನೂತನ ಗ್ರೇಡ್ GX+ ಅನ್ನು ಪರಿಚಯಿಸಿದ್ದು, ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಡೈಮಂಡ್-ಕಟ್ ಅಲಾಯ್ಸ್, ವುಡನ್ ಪ್ಯಾನೆಲ್ ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ಸೇರಿದಂತೆ ಹಲವಾರು ಅತ್ಯಾಕರ್ಷಕ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ. ಇನ್ನೋವಾ ಕ್ರಿಸ್ಟಾ GX+ ಗ್ರೇಡ್ 14 ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಈ ಕುರಿತು ಮಾತನಾಡಿ, ನೂತನವಾಗಿ ಪರಿಚಯಿಸಲಾದ ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ನಮ್ಮ ಅಸ್ತಿತ್ವದಲ್ಲಿರುವ ಇನ್ನೋವಾ ಕ್ರಿಸ್ಟಾ ಶ್ರೇಣಿಗೆ ಪೂರಕವಾಗಿದೆ. ಹೊಸದಾಗಿ ಪರಿಚಯಿಸಲಾದ ವರ್ಧಿತ ವೈಶಿಷ್ಟ್ಯಗಳು ಮತ್ತು ಮಲ್ಟಿ ಫಂಕ್ಷನಾಲಿಟಿಯ ಮೂಲಕ ಹೆಚ್ಚಿನ ಮೌಲ್ಯವನ್ನು ನೀಡುವ ವಿಷಯದಲ್ಲಿ ಒಂದು ಹೆಜ್ಜೆಯಾಗಿದೆ. ಹೊಸ ಪರಿಚಯವು ಗ್ರಾಹಕರ ವ್ಯಾಪಕ ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಮುಂದುವರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ, ಇದರಿಂದಾಗಿ ಭಾರತದ ಅತ್ಯಂತ ಪ್ರೀತಿಯ ಎಂಪಿವಿ ಎಂಬ ಇನ್ನೋವಾ ಪರಂಪರೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಎಕ್ಸ್ ಶೋರೂಂ ಬೆಲೆ (ಗ್ರೇಡ್ ವಾರು)

Variant Ex Showroom Price (W.E.F 06th May 2024), Innova Crysta GX+ 7s Rs 21,39,000, Innova Crysta GX+ 8s ರೂ. 21,44,000 ಗಳಾಗಿದೆ.

ದೃಢವಾದ ಕಾರ್ಯಕ್ಷಮತೆ

ಇನ್ನೋವಾ ಕ್ರಿಸ್ಟಾ GX+ 2.4 ಲೀಟರ್ ಡೀಸೆಲ್ ಎಂಜಿನ್, ಇಕೋ ಮತ್ತು ಪವರ್ ಡ್ರೈವ್ ಮೋಡ್ , 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಶಕ್ತಿಶಾಲಿ ಜಿಡಿ ಡೀಸೆಲ್ ಎಂಜಿನ್ ಕಡಿಮೆ ಮತ್ತು ಮಧ್ಯಮ ವೇಗದ ಶ್ರೇಣಿಗಳಲ್ಲಿ ಗಣನೀಯ ವರ್ಧಿತ ಟಾರ್ಕ್‌ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ವಾಹನವು ಪಿಚ್ ಮತ್ತು ಬೌನ್ಸ್ ನಿಯಂತ್ರಣದೊಂದಿಗೆ ಸುಧಾರಿತ ಸಸ್ಪೆಂಷನ್ ಅನ್ನು ಖಚಿತಪಡಿಸುತ್ತಿದ್ದು, ಕ್ಯಾಬಿನ್ ಚಲನೆಯನ್ನು ಕನಿಷ್ಠವಾಗಿರಿಸುತ್ತದೆ ಮತ್ತು ಒರಟಾದ ರಸ್ತೆಗಳಲ್ಲಿ ಸುಗಮ ಸವಾರಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಟಫ್ ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್ ಟಫ್ ಮತ್ತು ಅತ್ಯಾಧುನಿಕತೆಯ ಹೊಂದಾಣಿಕೆಯನ್ನು ಇದು ಹೊಂದಿದ್ದು, ನಯವಾದ ಮತ್ತು ಸಮಕಾಲೀನ ವಿನ್ಯಾಸದೊಂದಿಗೆ ಇನ್ನೋವಾ ಕ್ರಿಸ್ಟಾ ಪ್ರತಿ ಪ್ರಯಾಣದಲ್ಲಿ ಸೊಬಗು ಮತ್ತು ಪರಿಷ್ಕರಣೆಯನ್ನು ನೀಡುತ್ತದೆ. ಇದರ ನಿಖರವಾದ ಪರಿಷ್ಕರಿಸಿದ ಎಕ್ಸ್‌ಟೀರಿಯರ್ ವೈಶಿಷ್ಟ್ಯಗಳಾದ ಬೋಲ್ಡ್ ಫ್ರಂಟ್ ಗ್ರಿಲ್ ಮತ್ತು ಗಟ್ಟಿಮುಟ್ಟಾದ ಬಂಪರ್ ಲುಕ್ ಅನ್ನು ಹೆಚ್ಚಿಸುತ್ತದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ ರಸ್ತೆಯಲ್ಲಿ ಕಮಾಂಡಿಂಗ್ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ. ಇನ್ನೋವಾ ಕ್ರಿಸ್ಟಾ GX+ ಅನ್ನು ಮತ್ತಷ್ಟು ಪ್ರತ್ಯೇಕಿಸುವ ಅಂಶವೆಂದರೆ ಅದರ ಭವ್ಯವಾದ ಸಿಲ್ವರ್ ಸರೌಂಡ್ ಪಿಯಾನೋ ಬ್ಲ್ಯಾಕ್ ಗ್ರಿಲ್ ಮತ್ತು ಆಕರ್ಷಕ ಡೈಮಂಡ್-ಕಟ್ ಅಲಾಯ್ಸ್ ವಾಹನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಆರಾಮದಾಯಕ ಇಂಟೀರಿಯರ್

ಇನ್ನೋವಾ ಕ್ರಿಸ್ಟಾ GX+ ನ ಇಂಟೀರಿಯರ್ ನವೀನ ವೈಶಿಷ್ಟ್ಯಗಳೊಂದಿಗೆ ಆರಾಮ ಮತ್ತು ಅನುಕೂಲತೆಯಲ್ಲಿ ಉದಾಹರಣೆಯಾಗಿದೆ. ಇತರ ಇನ್ನೋವಾಗಳಂತೆ, ಐಷಾರಾಮಿ ಮತ್ತು ಆರಾಮವು ಹೊಸ ಇನ್ನೋವಾ ಕ್ರಿಸ್ಟಾ GX+ನ ಪ್ರಮುಖ ಅಂಶವಾಗಿದ್ದು ವುಡ್ ಫಿನಿಶ್ ಇಂಟೀರಿಯರ್ ಪ್ಯಾನೆಲ್ಸ್ , ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಸಾಟಿಯಿಲ್ಲದ ಪರಿಷ್ಕರಣೆ ಮತ್ತು ಕ್ಲಾಸ್ ಅನ್ನು ಹೊಂದಿದೆ.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

ಸುಧಾರಿತ ಸುರಕ್ಷತಾ ಕೊಡುಗೆಗಳು

ಸುರಕ್ಷತೆಯು ಟೊಯೊಟಾಗೆ ಉನ್ನತ ಆದ್ಯತೆಯಾಗಿದೆ. ಇನ್ನೋವಾ ಕ್ರಿಸ್ಟಾ GX+ ಇದಕ್ಕೆ ಹೊರತಾಗಿಲ್ಲ. ರಿಯರ್ ಕ್ಯಾಮೆರಾ, ಎಸ್‌ಆರ್‌ಎಸ್ ಏರ್ ಬ್ಯಾಗ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಹೆಚ್ಚಿನ ಸಾಮರ್ಥ್ಯದ GOA ಬಾಡಿ ಸ್ಟ್ರಕ್ಚರ್ ಪ್ರತಿ ಪ್ರಯಾಣದಲ್ಲಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Continue Reading

ಪ್ರಮುಖ ಸುದ್ದಿ

Anand Mahindra: ತಂದೆ ಸಾವಿನ ಬಳಿಕ ಕಷ್ಟದಲ್ಲಿದ್ದ ಬಾಲಕನ ಶಿಕ್ಷಣಕ್ಕೆ ಆನಂದ್‌ ಮಹೀಂದ್ರಾ ನೆರವು!

Anand Mahindra: ದೆಹಲಿಯಲ್ಲಿ ಜಸ್‌ಪ್ರೀತ್‌ ಎಂಬ ಬಾಲಕನು ತನ್ನ ತಂದೆ ತೀರಿಕೊಂಡ ಬಳಿಕ ಕುಟುಂಬಕ್ಕೆ ನೆರವಾಗಲಿ ಎಂದು ಶಾಲೆ ಬಿಟ್ಟು, ಬೀದಿ ಬದಿ ಊಟ, ತಿಂಡಿಯ ಅಂಗಡಿ ಇಟ್ಟುಕೊಂಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಲೇ ಆತನ ನೆರವಿಗೆ ಧಾವಿಸುವ ಮೂಲಕ ಆನಂದ್‌ ಮಹೀಂದ್ರಾ ಮಾನವೀಯತೆ ಮೆರೆದಿದ್ದಾರೆ. ಬಾಲಕನ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಆನಂದ್‌ ಮಹೀಂದ್ರಾ ಘೋಷಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Anand Mahindra
Koo

ನವದೆಹಲಿ: ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ (Anand Mahindra) ಅವರು ಉದ್ಯಮಿಯಾಗಿ, ಸ್ಫೂರ್ತಿದಾಯಕ ಮಾತುಗಳಿಂದ ಜನರಿಗೆ ಪ್ರೇರೇಪಣೆ ನೀಡುವ ಜತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಖ್ಯಾತಿ ಗಳಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದವರು, ಕಷ್ಟದಲ್ಲಿರುವವರು ಸೇರಿ ಹಲವರಿಗೆ ಅವರು ಆಗಾಗ ಸಹಾಯ ಮಾಡುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) ತಂದೆ ತೀರಿಕೊಂಡ ಬಳಿಕ ಶಿಕ್ಷಣ ತೊರೆದು, ಬೀದಿ ಬದಿ ಗೂಡಂಗಡಿ ಇಟ್ಟಿದ್ದ ಬಾಲಕನಿಗೆ ಆನಂದ್‌ ಮಹೀಂದ್ರಾ ನೆರವಿನ ಹಸ್ತ ಚಾಚಿದ್ದಾರೆ.

ಹೌದು, ಜಸ್‌ಪ್ರೀತ್‌ ಎಂಬ ಬಾಲಕನು ತನ್ನ ತಂದೆ ತೀರಿಕೊಂಡ ಬಳಿಕ ಕುಟುಂಬಕ್ಕೆ ನೆರವಾಗಲಿ ಎಂದು ಶಾಲೆ ಬಿಟ್ಟು, ಬೀದಿ ಬದಿ ಊಟ, ತಿಂಡಿಯ ಅಂಗಡಿ ಇಟ್ಟುಕೊಂಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಲೇ ಆತನ ನೆರವಿಗೆ ಧಾವಿಸುವ ಮೂಲಕ ಆನಂದ್‌ ಮಹೀಂದ್ರಾ ಮಾನವೀಯತೆ ಮೆರೆದಿದ್ದಾರೆ. “ಧೈರ್ಯಕ್ಕೆ ಇನ್ನೊಂದು ಹೆಸರೇ ಜಸ್‌ಪ್ರೀತ್.‌ ಆದರೆ, ಈತನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು. ಈತ ದೆಹಲಿಯ ತಿಲಕ್‌ ನಗರದಲ್ಲಿ ಇದ್ದಾನೆ ಎಂದು ಅನಿಸುತ್ತಿದೆ. ಯಾರಿಗಾದರೂ ಈತನ ಕಾಂಟ್ಯಾಕ್ಟ್‌ ನಂಬರ್‌ ಸಿಕ್ಕರೆ ನನಗೆ ಕೊಡಿ. ಈತನ ಶಿಕ್ಷಣಕ್ಕೆ ಮಹೀಂದ್ರಾ ಫೌಂಡೇಷನ್‌ ಸಹಾಯ ಮಾಡಲಿದೆ” ಎಂದು ಬಾಲಕನ ವಿಡಿಯೊ ಸಮೇತ ಆನಂದ್‌ ಮಹೀಂದ್ರಾ ಅವರು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದಷ್ಟೇ ಅಮೆಜಾನ್‌ನ ಅಲೆಕ್ಸಾ (Alexa) ವಾಯ್ಸ್‌ ಅಸಿಸ್ಟಂಟ್‌ ಬಳಸಿ ಮಂಗಗಳ ದಾಳಿಯಿಂದ ತನ್ನನ್ನು ಹಾಗೂ ತನ್ನ ಅಕ್ಕನ ಮಗಳನ್ನು ರಕ್ಷಿಸಿದ 13 ವರ್ಷದ ಚಾಣಾಕ್ಷ ಬಾಲಕಿಗೆ ಈಗ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದರು. ತಂತ್ರಜ್ಞಾನವನ್ನು ಬಳಸಿ ಮಂಗಗಳಿಂದ ಬಚಾವಾದ 13 ವರ್ಷದ ಬಾಲಕಿ ನಿಕಿತಾಗೆ ಉದ್ಯೋಗ ಕೊಡುವ ಕುರಿತು ಆನಂದ್‌ ಮಹೀಂದ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. “ಆಧುನಿಕ ಕಾಲದಲ್ಲಿ ನಾವು ತಂತ್ರಜ್ಞಾನದ ಗುಲಾಮರಾಗುತ್ತೇವೋ ಎಂಬ ಆತಂಕ ಕಾಡುತ್ತಿದೆ. ಆದರೆ, ಈ ಬಾಲಕಿಯು ಜಗತ್ತಿನಲ್ಲಿ ಮನುಷ್ಯನ ದಕ್ಷತೆಯನ್ನು ತಂತ್ರಜ್ಞಾನವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ” ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ಬಾಲಕಿಯ ಕ್ಷಿಪ್ರ ಯೋಚನಾಶಕ್ತಿಯು ಅತ್ಯದ್ಭುತವಾಗಿದೆ. ಅನಿರೀಕ್ಷಿತ ಜಗತ್ತಿನಲ್ಲಿ ಹೇಗೆ ಯೋಚಿಸಬೇಕು, ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಈಕೆಯು ಸಾಬೀತುಪಡಿಸಿದ್ದಾಳೆ. ಈ ಬಾಲಕಿಯು ಶಿಕ್ಷಣ ಮುಗಿಸಿ, ಕಾರ್ಪೊರೇಟ್‌ ಜಗತ್ತಿಗೆ ಕಾಲಿಡಲು ತೀರ್ಮಾನಿಸಿದರೆ, ಮಹೀಂದ್ರಾ ಕಂಪನಿಯಲ್ಲಿ ಅವಳಿಗೊಂದು ಕುರ್ಚಿ ಕಾಯುತ್ತಿರುತ್ತದೆ” ಎಂಬುದಾಗಿ ಆನಂದ್‌ ಮಹೀಂದ್ರಾ ಅವರು ನಿಕಿತಾಗೆ ಉದ್ಯೋಗದ ಆಫರ್‌ ನೀಡಿದ್ದಾರೆ. ಆನಂದ್‌ ಮಹೀಂದ್ರಾ ಅವರ ಕುರಿತೂ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: Anand Mahindra: ಸರ್ಫರಾಜ್ ಖಾನ್ ತಂದೆಗೆ ಥಾರ್ ಎಸ್‌ಯುವಿ ಗಿಫ್ಟ್​ ಕೊಟ್ಟ ಮಹೀಂದ್ರಾ

Continue Reading

ದೇಶ

Arvind Kejriwal: ಖಲಿಸ್ತಾನಿ ಉಗ್ರರಿಂದ ದೇಣಿಗೆ; ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು!

Arvind Kejriwal: ದೆಹಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಜೈಲುಪಾಲಾಗಿದ್ದಾರೆ. ಇದರ ಬೆನ್ನಲ್ಲೇ, ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಖಲಿಸ್ತಾನಿ ಉಗ್ರ ಸಂಘಟನೆ ಸಿಖ್ಸ್‌ ಫಾರ್‌ ಜಸ್ಟಿಸ್‌ನಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಶಿಫಾರಸು ಮಾಡಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ‘ಸಿಖ್ಸ್‌ ಫಾರ್‌ ಜಸ್ಟಿಸ್‌’ನಿಂದ (Sikhs for Justice) ರಾಜಕೀಯ ದೇಣಿಗೆ ಪಡೆದ ಪ್ರಕರಣವನ್ನು ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ (VK Saxena) ಅವರು ಶಿಫಾರಸು ಮಾಡಿದ್ದಾರೆ.

1993ರ ದೆಹಲಿ ಬಾಂಬ್‌ ಸ್ಫೋಟದ ಅಪರಾಧಿ, ಖಲಿಸ್ತಾನಿ ಉಗ್ರ ದೇವಿಂದರ್‌ ಪಾಲ್‌ ಭುಲ್ಲರ್‌ನನ್ನು ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ತಿಳಿಸಿ ಆಮ್‌ ಆದ್ಮಿ ಪಕ್ಷವು ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯಿಂದ ಸುಮಾರು 133 ಕೋಟಿ ರೂ. (16 ದಶಲಕ್ಷ ಡಾಲರ್)‌ ದೇಣಿಗೆ ಪಡೆದಿದೆ ಎಂಬ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ವಿ.ಕೆ.ಸಕ್ಸೇನಾ ಅವರು ಎನ್‌ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಿಖ್ಸ್‌ ಫಾರ್‌ ಜಸ್ಟಿಸ್‌ ಉಗ್ರ ಸಂಘಟನೆಯು ವಾಂಟೆಡ್‌ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಸ್ಥಾಪಿಸಿದ್ದಾನೆ. ಇದನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಈ ಸಂಘಟನೆಯಿಂದ ಆಮ್‌ ಆದ್ಮಿ ಪಕ್ಷವು ನೂರಾರು ಕೋಟಿ ರೂ. ದೇಣಿಗೆ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಇದರ ಕುರಿತು ಎನ್‌ಐಎ ತನಿಖೆಗೆ ವಿ.ಕೆ.ಸಕ್ಸೇನಾ ಅವರು ಶಿಫಾರಸು ಮಾಡಿದ್ದಾರೆ.

ದೆಹಲಿ ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದ್ದು, ತಿಹಾರ ಜೈಲಿನಲ್ಲಿದ್ದಾರೆ. ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲ, ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್‌ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Continue Reading

ಪ್ರಮುಖ ಸುದ್ದಿ

ಕೈಗಳನ್ನು ಕಟ್ಟಿಹಾಕಿ ಸಿಗರೇಟ್‌ನಿಂದ ಗಂಡನ ಗುಪ್ತಾಂಗ ಸುಟ್ಟ ಹೆಂಡತಿ! ಭೀಕರ ವಿಡಿಯೊ ಇಲ್ಲಿದೆ!

ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ಇಷ್ಟಕ್ಕೇ ಆಕೆಯು, ಗಂಡನಿಗೆ ಇನ್ನಿಲ್ಲದ ಕಿರುಕುಳ ನೀಡಿ, ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

VISTARANEWS.COM


on

Woman
Koo

ಲಖನೌ: ರಾತ್ರಿ ಗಂಡ ಕುಡಿದು ಮನೆಗೆ ಬಂದರೆ ಹೆಂಡತಿಗೆ ಕೋಪ ಬಂದೇ ಬರುತ್ತದೆ. ಆಗ ಅವರು ಬೈಯುತ್ತಾರೆ, ಊಟ ಕೊಡಲ್ಲ, ನಾನೇ ಸತ್ತುಹೋಗುತ್ತೇನೆ ಎಂದು ಹೆದರಿಸುತ್ತಾರೆ. ಆತನ ನಶೆ ಇಳಿದ ಮೇಲೆ ಸಂಬಂಧಿಕರನ್ನು ಕರೆಸಿ ಬುದ್ಧಿವಾದ ಹೇಳುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯೊಬ್ಬರು ತಾವೇ ಮದ್ಯಪಾನ ಮಾಡಿ, ಪತಿ ಗಂಡನ ಗುಪ್ತಾಂಗವನ್ನೇ ಸುಟ್ಟು, ಅದನ್ನು ಕತ್ತರಿಸಲು ಯತ್ನಿಸಿದ್ದಾರೆ. ಈ ಭೀಕರ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಅಮ್ರೋಹ ಜಿಲ್ಲೆಯ ಚಾಕ್‌ ಮೆಹೂದ್‌ ಗ್ರಾಮದಲ್ಲಿ ಮೆಹರ್‌ ಜಹಾನ್‌ ಎಂಬ 30 ವರ್ಷದ ಮಹಿಳೆಯು ಪತಿ ಮನ್ನಾನ್‌ ಜೈದಿಯ ಗುಪ್ತಾಂಗ ಸುಟ್ಟು, ಕತ್ತರಿಸಲು ಯತ್ನಿಸಿದ್ದಾರೆ. ದಿನವಿಡೀ ದುಡಿದು ಮನೆಗೆ ಬಂದ ಗಂಡನಿಗೆ ಮಹಿಳೆಯು ಹಾಲಿನಲ್ಲಿ ಮತ್ತು ಬರುವ ಅಂಶವನ್ನು ಸೇರಿಸಿ, ಆತ ನಶೆಗೆ ಜಾರುತ್ತಲೇ ಕೈ ಕಾಲು ಕಟ್ಟಿಹಾಕಿದ್ದಾರೆ. ಕೈ ಕಾಲು ಕಟ್ಟಿ, ಆತನ ಗುಪ್ತಾಂಗವನ್ನು ಸಿಗರೇಟಿನಿಂದ ಸುಟ್ಟ ಬಳಿಕವೇ ಮನ್ನಾನ್‌ ಜೈದಿಗೆ ಎಚ್ಚರವಾಗಿದೆ. ಇನ್ನೇನು ಗುಪ್ತಾಂಗ ಕತ್ತರಿಸಬೇಕು ಎನ್ನುವಷ್ಟರಲ್ಲೇ ಆತನು ಕೂಗಾಡಿದ್ದಾನೆ. ಬಳಿಕ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೆಹರ್‌ ಜಹಾನ್‌ನನ್ನು ಬಂಧಿಸಿದ್ದಾರೆ.

ಕುಡಿತದ ಚಟ ಇರುವ ಮೆಹರ್‌

ಮೂಲಗಳ ಪ್ರಕಾರ, ಮೆಹರ್‌ ಜಹಾನ್‌ ಹಾಗೂ ಮನ್ನಾನ್‌ ಜೈದಿಯು 2023ರ ನವೆಂಬರ್‌ನಲ್ಲಿ ಮದುವೆಯಾಗಿದ್ದಾರೆ. ಮೆಹರ್‌ ಜಹಾನ್‌ಗೆ ಕುಡಿತದ ಚಟ ಇರುವ, ಆಗಾಗ ಸಿಗರೇಟು ಸೇದುವ ಚಟ ಇರುವುದು ಮನ್ನಾನ್‌ ಜೈದಿಗೆ ಗೊತ್ತಾಗಿದೆ. ಪತ್ನಿಯ ಚಟಗಳ ಕುರಿತು ಅರಿತುಕೊಂಡ ಮನ್ನಾನ್‌ ಜೈದಿಯು ನಾಲ್ಕು ಮಾತು ಬೈದಿದ್ದಾನೆ. ನಿನ್ನ ತಂದೆ-ತಾಯಿಗೆ ಹೇಳುತ್ತೇನೆ ಎಂದಿದ್ದಾರೆ. ಇದರಿಂದಾಗಿ ಕುಪಿತಗೊಂಡ ಮೆಹರ್‌ ಜಹಾನ್‌, ಗಂಡನನ್ನು ಕಟ್ಟಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕುಡಿದ ನಶೆಯಲ್ಲಿಯೇ ಮಹಿಳೆಯು ಗಂಡನಿಗೆ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದೆ. ವೈರಲ್‌ ಆದ ವಿಡಿಯೊದ ಪ್ರಕಾರ, ಪತ್ನಿಯು ಸಿಗರೇಟಿನಿಂದ ಸುಡುತ್ತಲೇ ಸಹಾಯಕ್ಕಾಗಿ ಅಂಗಲಾಚಿದ ಧ್ವನಿಯು ಕೇಳಿಸಿದೆ. ನನ್ನ ಪಾಡಿಗೆ ನಾನು ಮದ್ಯಪಾನ ಮಾಡಿಕೊಂಡು, ಸಿಗರೇಟು ಸೇದಿಕೊಂಡು ಇರುತ್ತೇನೆ. ಇದರ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂಬುದಾಗಿ ಮಹಿಳೆಯು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ, ಮನ್ನಾನ್‌ ಜೈದಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Continue Reading
Advertisement
All preparations in Yallapur assembly constituency for Lok Sabha election says Ajjappa Sogalada
ಉತ್ತರ ಕನ್ನಡ36 seconds ago

Lok Sabha Election 2024: ಲೋಕಸಭಾ ಚುನಾವಣೆಗೆ ಯಲ್ಲಾಪುರದಲ್ಲಿ ಸಕಲ ಸಿದ್ಧತೆ: ಅಜ್ಜಪ್ಪ ಸೊಗಲದ

Innova Crysta new grade GX+ introduced by Toyota Kirloskar Motor
ದೇಶ3 mins ago

Innova Crysta: ಇನ್ನೋವಾ ಕ್ರಿಸ್ಟಾ ನೂತನ ಸರಣಿಯ GX+ ಪರಿಚಯಿಸಿದ ಟಿಕೆಎಂ; ವೈಶಿಷ್ಟ್ಯಗಳೇನು? ದರ ಎಷ್ಟು?

Press Freedom
Latest7 mins ago

Press Freedom: ಚೀನಾ ಸೇರಿದಂತೆ ಈ ದೇಶಗಳು ಪತ್ರಕರ್ತರಿಗೆ ಸುರಕ್ಷಿತವಲ್ಲ

Rape victim kidnapping in Prajwal Revanna Case What are the options before HD Revanna
ಕ್ರೈಂ7 mins ago

Prajwal Revanna Case: ‌ಅತ್ಯಾಚಾರ ಸಂತ್ರಸ್ತೆ ಅಪಹರಣ ಕೇಸ್; ರೇವಣ್ಣ ಮುಂದಿರುವ ಆಯ್ಕೆಗಳೇನು?

Anand Mahindra
ಪ್ರಮುಖ ಸುದ್ದಿ16 mins ago

Anand Mahindra: ತಂದೆ ಸಾವಿನ ಬಳಿಕ ಕಷ್ಟದಲ್ಲಿದ್ದ ಬಾಲಕನ ಶಿಕ್ಷಣಕ್ಕೆ ಆನಂದ್‌ ಮಹೀಂದ್ರಾ ನೆರವು!

Asha Sobhana
ಕ್ರೀಡೆ26 mins ago

Asha Sobhana : ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿ ಆಟಗಾರ್ತಿ

Lok Sabha Election-2024
ಕರ್ನಾಟಕ51 mins ago

ನಾಳೆ ಎರಡನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

IPL 2024
ಕ್ರೀಡೆ2 hours ago

IPL 2024 : ಪೃಥ್ವಿ ಶಾ ಗರ್ಲ್​​ ಫ್ರೆಂಡ್​​​ ನಿಧಿಯನ್ನು ತಬ್ಬಿ ಅಭಿನಂದಿಸಿದ ಶಾರುಖ್​ ಖಾನ್​​

CM Siddaramaiah
ಪ್ರಮುಖ ಸುದ್ದಿ2 hours ago

CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ1 day ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ1 day ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ1 day ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌