South-West Monsoon: ನೈಋತ್ಯ ಮುಂಗಾರು ಕೇರಳ ಪ್ರವೇಶ ವಿಳಂಬ ಸಾಧ್ಯತೆ

ದೇಶ

South-West Monsoon: ನೈಋತ್ಯ ಮುಂಗಾರು ಕೇರಳ ಪ್ರವೇಶ ವಿಳಂಬ ಸಾಧ್ಯತೆ

ಅಂಡಮಾನ್‌-ನಿಕೋಬಾರ್‌ ಗೆ ಪ್ರತಿವರ್ಷಕ್ಕಿಂತಲೂ ಒಂದು ವಾರ ಮುಂಚಿತವಾಗಿಯೇ ನೈಋತ್ಯ ಮುಂಗಾರು (South-West Monsoon) ಪ್ರವೇಶಿಸಿದೆ. ಕೇರಳಕ್ಕೂ ಮೊದಲೇ ಬರಬಹುದು ಎಂದು ಐಎಂಡಿ ಅಂದಾಜಿಸಿತ್ತು.

VISTARANEWS.COM


on

Southwest Monsoon
ಪ್ರಾತಿನಿಧಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನೈಋತ್ಯ ಮುಂಗಾರು (South-West Monsoon) ಈ ಬಾರಿ ಬೇಗನೇ ಭಾರತವನ್ನು ಪ್ರವೇಶಿಸಿದೆ. ಮೇ 16ಕ್ಕೇ ಅಂಡಮಾನ್‌-ನಿಕೋಬಾರ್‌ ಪ್ರದೇಶಕ್ಕೆ ಮಾನ್ಸೂನ್‌ ಪ್ರವೇಶ ಆಗಿರುವುದರಿಂದ, ಕೇರಳಕ್ಕೂ ಕೂಡ ಮೇ 27ರ ಹೊತ್ತಿಗೆ ನೈಋತ್ಯ ಮಾನ್ಸೂನ್‌ ಪ್ರವೇಶ ಆಗಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಆದರೆ ಮುಂಗಾರು ದುರ್ಬಲಗೊಂಡಿದೆ. ಕೇರಳಕ್ಕೆ ಜೂನ್‌ ಮೊದಲ ವಾರದಲ್ಲಿ ಪ್ರವೇಶಿಸಿ, ನಿಧಾನವಾಗಿ ಬಲಗೊಳ್ಳುತ್ತದೆ ಎಂದು ಇದೀಗ ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಪ್ರಕಟಣೆ ಹೊರಡಿಸಿರುವ ಹವಾಮಾನ ಇಲಾಖೆ, ಜೂನ್‌ 1ರ ಹೊತ್ತಿಗೆ ಕೇರಳದತ್ತ ಮಾನ್ಸೂನ್‌ ಚಲನೆಯಾಗಬಹುದು. ಜೂ.2ರಿಂದ 8ರ ನಡುವೆ ಈಶಾನ್ಯ ಭಾರತದಲ್ಲಿ ಮಳೆ ಶುರುವಾಗಬಹುದು. ಅದು ಬಿಟ್ಟರೆ ದೇಶದ ಉಳಿದ ಭಾಗಗಳಲ್ಲಿ ಈ ಅವಧಿಯಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಲಿದೆ. ಹೀಗಾಗಿ ಮಾನ್ಸೂನ್‌ ಚಲನೆ ನಿಧಾನವಾಗಬಹುದು ಎಂದು ಹೇಳಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂ.1ಕ್ಕೆ ಮಾನ್ಸೂನ್‌ ಪ್ರವೇಶ ಆಗುತ್ತದೆ. ಒಟ್ಟಾರೆ ಮಳೆಯ ಶೇ.70ರಷ್ಟು ಮಳೆಯನ್ನು ತರುವ ನೈಋತ್ಯ ಮಾನ್ಸೂನ್‌ ಕೃಷಿ ಚಟುವಟಿಕೆಗಳನ್ನು ನಿರ್ಣಯಿಸುತ್ತದೆ. ದೊಡ್ಡ ಕೃಷಿ ಅವಲಂಬಿತ ರಾಷ್ಟ್ರವಾಗಿರುವ ಭಾರತಕ್ಕೆ ಈ ಮಾನ್ಸೂನ್‌ ತುಂಬ ವಿಳಂಬವಾದರೂ ಕಷ್ಟ..ಬಹಳ ಬೇಗನೇ ಬಂದರೂ ಸಂಕಷ್ಟ.

ನೈಋತ್ಯ ಮಾನ್ಸೂನ್‌ ಈಗಾಗಲೇ ಕೇರಳದ ಕಡೆಗೆ ಸಂಚರಿಸಲು ಶುರುಮಾಡಿದೆ. ಮೇ 26ರಂದು ಶ್ರೀಲಂಕಾವನ್ನು ಪ್ರವೇಶಿಸಿದ್ದು, ಅಲ್ಲಿಂದ ಕೇರಳದ ಕಡೆಗೆ ನಿಧಾನವಾಗಿ ಸಾಗುತ್ತಿದೆ. ದಕ್ಷಿಣ ಅರೇಬಿಯನ್‌ ಸಮುದ್ರದ ಆಯ್ದ ಭಾಗಗಳು, ಮಾಲ್ಡೀವ್ಸ್‌ ಮತ್ತು ಅದಕ್ಕೆ ಹೊಂದಿಕೊಂಡಿರುವ ಲಕ್ಷದ್ವೀಪ, ಕೊಮೊರಿನ್‌ನ ಕೆಲವು ಪ್ರದೇಶಗಳಲ್ಲಿ ಇನ್ನು 48ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್‌ ಇನ್ನಷ್ಟು ತೀವ್ರಗೊಂಡು ಸಾಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ನೈಋತ್ಯ ಮುಂಗಾರು ಅಂಡಮಾನ್‌ ಪ್ರವೇಶ, ರಾಜ್ಯದಲ್ಲಿ ಇನ್ನೂ 4 ದಿನ ಭರ್ಜರಿ ಮಳೆ

ಮಾನ್ಸೂನ್‌ ಪ್ರವೇಶಕ್ಕೂ ಮೊದಲೇ ಕೇರಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದೇ ವಾತಾವರಣ ಇನ್ನೆರಡು ದಿನವೂ ಮುಂದುವರಿಯಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಮುಂದಿನ ಎರಡು ದಿನ ಮಳೆ ನಿಲ್ಲುವುದಿಲ್ಲ. ಲಕ್ಷದ್ವೀಪದಲ್ಲೂ ಕೂಡ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೇ, ಮಾನ್ಸೂನ್‌ ಪ್ರವೇಶ ಹಂತದಲ್ಲೂ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಉಂಟಾಗಬಹುದಾದ ತೊಡಕು ಎದುರಿಸಲು ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು ಎಂದೂ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Cyclone Asani ದುರ್ಬಲವಾದರೂ ಮೂರ್ನಾಲ್ಕು ದಿನ ಭಾರೀ ಮಳೆ: ಉತ್ತಮ ಮುಂಗಾರಿನ ಮುನ್ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

VISTARANEWS.COM


on

India Economy
Koo

ಬೆಂಗಳೂರು: ಐಎಂಎಫ್​​ನ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರ ಪ್ರಕಾರ, ಭಾರತದ ಆರ್ಥಿಕತೆ (Indian Economy) ಚೀನಾವನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದ್ದು, ಗಾತ್ರದಲ್ಲಿ ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂಬುದಾಗಿ ವಿವರಿಸಿದ್ದಾರೆ. ಜತೆಗೆ ಇದು ನಿರೀಕ್ಷಿತ ಹಾಗೂ ಅಚ್ಚರಿಯ ಸಂಗತಿಯೇನೂ ಅಲ್ಲ ಎಂದು ಹೇಳಿದ್ದಾರೆ.

“ಚೀನಾದ ಆರ್ಥಿಕತೆಯ ಗಾತ್ರ ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಆದರೆ ಭಾರತವು ಇಂದು ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದ್ದರೆ. ಇದು ಆಶ್ಚರ್ಯಕರವಲ್ಲ” ಎಂದು ಶ್ರೀನಿವಾಸನ್ ಎಎನ್ಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಕೃಷ್ಣ ಶ್ರೀನಿವಾಸನ್ ಅವರು ಭಾರತದ ಆರ್ಥಿಕ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, 2024-25ರ ಹಣಕಾಸು ವರ್ಷದಲ್ಲಿ ಭಾರತದ ಯೋಜಿತ ಬೆಳವಣಿಗೆಯ ದರ 6.8% ಎಂದು ನಿರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ: China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

ಕೋವಿಡ್ -19 ಸಾಂಕ್ರಾಮಿಕ ರೋಗ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಲ್ಫ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನತೆ ಸೇರಿದಂತೆ ಅನೇಕ ಆಘಾತಗಳನ್ನು ಪರಿಹರಿಸು ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಶ್ರೀನಿವಾಸನ್, ದೇಶದ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದರು. “ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಅನೇಕ ಆಘಾತಗಳನ್ನು ಭಾರತವು ಯಶಸ್ವಿಯಾಗಿ ನಿಭಾಯಿಸಿದೆ” ಎಂದು ಅವರು ಎಎನ್ಐಗೆ ತಿಳಿಸಿದರು.

ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ ಎಂದು ಶ್ರೀನಿವಾಸನ್ ಹೇಳಿದರು, “ನಾನು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳನ್ನು ನೋಡುವುದಿಲ್ಲ” ಎಂಬುದಾಗಿಯೂ ಹೇಳಿದರು. ಆದಾಗ್ಯೂ, ಭಾರತದ ವಿಸ್ತರಿಸುತ್ತಿರುವ ಕಾರ್ಮಿಕ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಗಮನಾರ್ಹ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಮಿಕ ಶಕ್ತಿಯ ಬಳಕೆ ಅಗತ್ಯ

“ಭಾರತವು ಯುವ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ಇದು ಪ್ರತಿವರ್ಷ ಸುಮಾರು 15 ಮಿಲಿಯನ್ ಜನರನ್ನು ಕಾರ್ಮಿಕ ಬಲಕ್ಕೆ ಸೇರಿಸುವ ನಿರೀಕ್ಷೆಯಿದೆ” ಎಂದು ಶ್ರೀನಿವಾಸನ್ ಗಮನಸೆಳೆದರು. “ಈ ಜನಸಂಖ್ಯಾ ಅನುಕೂಲವನ್ನು ಬಳಸಿಕೊಳ್ಳಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಣನೀಯ ಹೂಡಿಕೆಗಳು ನಿರ್ಣಾಯಕ. ಇದರಿಂದಾಗಿ ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯು ಆರ್ಥಿಕತೆಗೆ ನೆರವು ನೀಡಬಹುದು ಎಂದು ಹೇಳಿದ್ದಾರೆ.

ಸುಮಾರು 6.5% ಬೆಳವಣಿಗೆಯ ದರದೊಂದಿಗೆ ಭಾರತದ ಮಧ್ಯಮಾವಧಿಯ ನಿರೀಕ್ಷೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಶ್ರೀನಿವಾಸನ್, ಹಲವು ಸುಧಾರಣೆಗಳ ಮಹತ್ವವನ್ನು ಒತ್ತಿ ಹೇಳಿದರು. ಸಮಗ್ರ ಸುಧಾರಣೆಗಳನ್ನು ಶ್ರದ್ಧೆಯಿಂದ ಜಾರಿಗೆ ತಂದರೆ ಮುಂದಿನ ಹಲವಾರು ವರ್ಷಗಳಲ್ಲಿ ಭಾರತವು 6.5% ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಸಾಧಿಸಬಹುದು ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Viral news: ಲೋಕಸಭೆ ಚುನಾವಣೆಗೂ ಮುನ್ನ 1.9 ಮಿಲಿಯನ್ ಇವಿಎಂಗಳನ್ನು ಕಳವು ಮಾಡಲಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳವಾಗಿರುವ ಇವಿಎಂ ಗಳು ಎಲ್ಲಿ ಹೋಗಿವೆ ? ಈ ಸುದ್ದಿ ಎಲ್ಲಿಂದ ಬಂತು ಗೊತ್ತೇ ?

VISTARANEWS.COM


on

By

Viral news
Koo

ನವದೆಹಲಿ: ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ ಮತದಾನ ಪ್ರಕ್ರಿಯೆಗಳು ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಮತದಾನ ಪ್ರಾರಂಭಕ್ಕೂ ಮೊದಲು 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಕಾಣೆಯಾಗಿವೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ಸಂದೇಶ ಹರಡಿದ್ದು (viral news) ಇದು ಸುಳ್ಳು ಎಂದು ತಿಳಿದು ಬಂದಿದೆ.

ಏಪ್ರಿಲ್ 19ರಂದು 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುವ ಮೊದಲು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ 1.9 ಮಿಲಿಯನ್ ಎಲೆಕ್ಟ್ರಾನಿಕ್ ಮತಯಂತ್ರಗಳು ಕಾಣೆಯಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿದ ವಿಶ್ವಸ್ ನ್ಯೂಸ್ ಈ ಹೇಳಿಕೆ ಸುಳ್ಳು ಎಂದು ಪತ್ತೆ ಹಚ್ಚಿದೆ. ಚುನಾವಣಾ ಆಯೋಗವೂ ಕೂಡ ಇದೊಂದು ನಕಲಿ ಸುದ್ದಿ ಎಂದು ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ ಇವಿಎಂ ನಾಪತ್ತೆಯಾಗಿರುವ ಆರೋಪಗಳನ್ನು ತಳ್ಳಿಹಾಕಿತ್ತು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!


ಸುಳ್ಳು ಸುದ್ದಿ

ಸಾಮಾಜಿಕ ಮಾಧ್ಯಮ ಬಳಕೆದಾರ ನಿಹಾಲ್ ಸಿಂಗ್ ನಿಗಮ್ ಅವರು, 1.9 ಮಿಲಿಯನ್ ಇವಿಎಂ ಯಂತ್ರಗಳನ್ನು ಕಳವು ಮಾಡಲಾಗಿದೆ ಮತ್ತು ಈ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.


ತನಿಖೆಯಲ್ಲೇನಿದೆ?

ದಿ ಎಕನಾಮಿಕ್ ಟೈಮ್ಸ್ ನ ಮಾರ್ಚ್ 15 ವರದಿಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು 2016 ಮತ್ತು 2019 ರ ನಡುವೆ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ 1.9 ಮಿಲಿಯನ್ ಇವಿಎಂಗಳು ನಾಪತ್ತೆಯಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿತ್ತು. 1.9 ಮಿಲಿಯನ್ ಇವಿಎಂಗಳು ಕಾಣೆಯಾಗಿದೆ ಎಂದು ಐಎನ್‌ಸಿ ಹೇಳಿರುವುದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

2019ರಲ್ಲಿಯೂ ನಾಪತ್ತೆಯಾದ ಇವಿಎಂಗಳ ವರದಿಗಳು ಬಂದಿದ್ದವು. ಫ್ರಂಟ್‌ಲೈನ್ ಮತ್ತು ಟಿವಿ9 ಭಾರತ ವರ್ಷ್ ಈ ಕುರಿತು ವರದಿಗಳನ್ನು ಪ್ರಕಟಿಸಿತ್ತು. ಇದನ್ನೂಚುನಾವಣಾ ಆಯೋಗವು ಆಧಾರ ರಹಿತ ಎಂದು ಹೇಳಿ ಟ್ವಿಟ್ ಮಾಡಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ FAQ ವಿಭಾಗದಲ್ಲಿಯೂ ಈ ಸಮಸ್ಯೆಯನ್ನು ಉಲ್ಲೇಖಿಸಲಾಗಿದೆ. ವೈರಲ್ ಹಕ್ಕು ಕುರಿತು ಚುನಾವಣಾ ಆಯೋಗದ ಅಧಿಕಾರಿಗಳನ್ನು ಸಂಪರ್ಕಿಸಿರುವ ವಿಶ್ವಸ್ ನ್ಯೂಸ್ ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಷಯದ ಕುರಿತು ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂದು ತಿಳಿಸಿರುವುದಾಗಿ ತಿಳಿದು ಬಂದಿದೆ.

Continue Reading

ತಂತ್ರಜ್ಞಾನ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಇ
ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ನೋಡಿಕೊಳ್ಳಲು ಎಂಬವರನ್ನು ಒಪನ್ ಎಐ ನೇಮಕ ಮಾಡಿಕೊಂಡಿದೆ. ಒಪನ್ ಎಐ ನ ಭಾರತದ ಮೊದಲ ಉದ್ಯೋಗಿಯಾಗಿರುವ ಇವರು ಯಾರು ಗೊತ್ತೇ ?

VISTARANEWS.COM


on

By

Pragya Misra
Koo

ಚಾಟ್ ಜಿಪಿಟಿ (ChatGPT ) ಮಾರ್ಕರ್ ಒಪನ್ ಎಐ (OpenAI) ಭಾರತದಲ್ಲಿ (india) ತನ್ನ ಮೊದಲ ಉದ್ಯೋಗಿಯನ್ನು (first employee) ನೇಮಕ ಮಾಡಿದೆ. ಸಾರ್ವಜನಿಕ ನೀತಿ ವ್ಯವಹಾರ ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು 39 ವರ್ಷದ ಪ್ರಗ್ಯಾ ಮಿಶ್ರಾ (Pragya Misra) ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಕೃತಕ ಬುದ್ಧಿಮತ್ತೆ (AI) ನಿಯಮಾವಳಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಈ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ಸಿದ್ಧತೆಯಲ್ಲಿರುವಾಗ ಈ ಬೆಳವಣಿಗೆ ನಡೆದಿದೆ.ಮೈಕ್ರೋಸಾಫ್ಟ್ ಕಾರ್ಪ್ ಬೆಂಬಲಿತ ಕಂಪೆನಿಯು ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿಕೊಂಡಿದೆ. ಈ ತಿಂಗಳ ಅಂತ್ಯದಿಂದ ಮಿಶ್ರಾ ಅವರು OpenAI ನಲ್ಲಿ ಕೆಲಸ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ: ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಸರ್ಕಾರಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಕೂಲಕರವಾಗಿ ನಿಯಮಗಳನ್ನು ರೂಪಿಸಲು AI ಕಂಪೆನಿಯು ಈ ನೇಮಕಾತಿಯನ್ನು ನಡೆಸಿದೆ. OpenAI ನ ಮೊದಲ ಭಾರತೀಯ ಉದ್ಯೋಗಿ ಪ್ರಗ್ಯಾ ಮಿಶ್ರಾ ಅವರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಪ್ರಗ್ಯಾ ಮಿಶ್ರಾ ಅವರ ಪಾತ್ರ?

OpenAI ಯು ಸರ್ಕಾರಿ ಸಂಬಂಧಗಳ ಮುಖ್ಯಸ್ಥರನ್ನಾಗಿ ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿದೆ. ಈ ಮೂಲಕ ಕಂಪೆನಿಗೆ ಮೊದಲ ಭಾರತೀಯರ ನೇಮಕವಾಗಿದೆ. ಕಂಪೆನಿಯು ಈ ನೇಮಕಾತಿಯ ಬಗ್ಗೆ ಇನ್ನೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಬ್ಲೂಮ್‌ಬರ್ಗ್ ತಿಳಿಸಿದ್ದು, ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಜ್ಞಾ ಮಿಶ್ರಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಯಾರು ಪ್ರಗ್ಯಾ ಮಿಶ್ರಾ ?

2021ರ ಜುಲೈ ನಿಂದ ಪ್ರಗ್ಯಾ ಮಿಶ್ರಾ ಅವರು ಟ್ರೂಕಾಲರ್‌ಗಾಗಿ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಅವರು ಸರ್ಕಾರಿ ಸಚಿವಾಲಯಗಳು, ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ಮಾಧ್ಯಮ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕೆಲಸ ಮಾಡಿದ್ದಾರೆ. ಮೂರು ವರ್ಷಗಳ ಮೊದಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನೊಂದಿಗೆ ಕೆಲಸ ಮಾಡಿರುವ ಅವರು 2018 ರಲ್ಲಿ ತಪ್ಪು ಮಾಹಿತಿಯ ವಿರುದ್ಧ WhatsApp ಅಭಿಯಾನವನ್ನು ಮುನ್ನಡೆಸಿದರು. ಅನ್ ಸ್ಟಾರ್ ಆಂಡ್ ಯಂಗ್ ಮತ್ತು ನವದೆಹಲಿಯ ರಾಯಲ್ ಡ್ಯಾನಿಶ್ ರಾಯಭಾರ ಕಚೇರಿಯಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ.

ಶಿಕ್ಷಣ

ಪ್ರಗ್ಯಾ ಮಿಶ್ರಾ ಅವರು 2012ರಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸ್ ಟಿಟ್ಯೂಟ್ ನಿಂದ ತಮ್ಮ ಎಂಬಿಎ ಪದವಿ ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವೀಧರರಾಗಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಬಾರ್ಗೇನಿಂಗ್ ಮತ್ತು ನೆಗೋಷಿಯೇಷನ್ಸ್‌ನಲ್ಲಿ ಡಿಪ್ಲೊಮಾವನ್ನೂ ಹೊಂದಿದ್ದಾರೆ.

ಗಾಲ್ಫ್ ಆಟಗಾರರು

ಪ್ರಗ್ಯಾ ಮಿಶ್ರಾ ಅವರು 1998 ಮತ್ತು 2007 ರ ನಡುವೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗಾಲ್ಫ್ ಆಟಗಾರರಾಗಿದ್ದಾರೆ. ಅವರು ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತುದಾರರಾಗಿದ್ದು, ಪ್ರಗ್ಯಾನ್ ಪಾಡ್‌ಕ್ಯಾಸ್ಟ್ ನಿಂದ ಅದನ್ನು ಆಯೋಜಿಸುತ್ತಾರೆ.

ಯಾಕೆ ಈ ನೇಮಕ ?

1.4 ಶತಕೋಟಿ ಜನರು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಭಾರತದಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶವಿದೆ. ವಿಶ್ವಾದ್ಯಂತ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸಬೇಕೆಂದು ಪರಿಗಣಿಸುತ್ತಿರುವಾಗ ಅನುಕೂಲಕರವಾದ ನಿಯಮಗಳನ್ನು ರೂಪಿಸಲು AI ಕಂಪೆನಿಯ ಪ್ರಯತ್ನಗಳನ್ನು ಈ ನೇಮಕಾತಿಯು ಎತ್ತಿ ತೋರಿಸಿದೆ. ಹೀಗಾಗಿ ಪ್ರಗ್ಯಾ ಮಿಶ್ರಾ ಅವರಿಗೆ ಇದೊಂದು ಸಾಕಷ್ಟು ಸವಾಲಿನ ಕೆಲಸವಾಗಿರಲಿದೆ.

Continue Reading

ದೇಶ

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Drunken Groom ತನ್ನನ್ನು ವರಿಸುವ ವರ ಬರಲಿದ್ದಾನೆ ಎಂದು ವಧು ಕನಸು ಕಾಣುತ್ತಿದ್ದಾರೆ ವರ ಮಹಾಶಯ ಸಿಕ್ಕಾಪಟ್ಟೆ ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾನೆ. ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ.

VISTARANEWS.COM


on

Drunken Groom
Koo

ಮಧ್ಯಪ್ರದೇಶ: ‘ಒಂದು ಗಂಡಿಗೊಂದು ಹೆಣ್ಣು ಹೇಗೋ ಏನೋ ಹೊಂದಿಕೊಂಡು/ ದುಃಖ ಹಗುರ ಏನುತಿರೆ/ ಪ್ರೇಮವೇನು ಹಾಸ್ಯವೇ?’ ನರಸಿಂಹ ಸ್ವಾಮಿಯವರ ಈ ಕವಿತೆಯ ಸಾಲು ಕೇಳುತ್ತಿದ್ದರೆ ಮದುವೆ ಆಗದಿದ್ದವರಿಗೂ ಒಮ್ಮೆ ಮದುವೆಯಾಗಿಬಿಡೋಣ ಅನಿಸುತ್ತದೆ. ಸಂಗಾತಿಯ ಬಗ್ಗೆ, ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಈ ಕವಿತೆ ಹಸಿ ಎದೆಯಲ್ಲಿ ಪ್ರೇಮಾಂಕುರದ ಬೀಜ ಬಿತ್ತುತ್ತದೆ. ತಮ್ಮ ಮದುವೆಯನ್ನು ಹಾಗೇ ಆಚರಿಸಬೇಕು, ಈ ರೀತಿಯಾಗಿ ಮಾಡಬೇಕು ಎಂದು ಈಗಿನವರು ತಿಂಗಳಾನುಗಟ್ಟಲೆಯಿಂದ ತಯಾರಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ವರ ಮಹಾಶಯ ಸಿಕಾಪಟ್ಟೆ ಕುಡಿದು (Drunken Groom) ನಡೆಯಬೇಕಿದ್ದ ತನ್ನ ಮದುವೆಯನ್ನೇ ಮುರಿದುಕೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.

ತನ್ನನ್ನು ವರಿಸುವವನು ಬರುತ್ತಾನೆ ಎಂದು ವಧು ಕನಸು ಕಂಗಳಿನಿಂದ ಕಾಯುತ್ತಿದ್ದರೆ ಅವಳ ಕನಸಿಗೆ ವರನು ತಣ್ಣೀರು ಎರೆಚಿದ್ದಾನೆ. ಭಿಂಡ್ ಜಿಲ್ಲೆಯ ಲಹಾರ್ ಮೂಲದ ವೀರೇಂದ್ರ ರಾಜಾವತ್ ಅವರ ಮಗನ ಮದುವೆಯ ಮೆರವಣಿಗೆ ಬ್ಯಾಂಡ್ ವಾದ್ಯಗಳ ಮೂಲಕ  ವಧುವಿನ ಮನೆಯ ಬಾಗಿಲಿಗೆ ಬಂದಿತ್ತು. ಆದರೆ ವರ ಕುಡಿದ ಮತ್ತಿನಲ್ಲಿದ್ದ. ಕುದುರೆಯಿಂದ ಇಳಿಯುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಅಲ್ಲಿದ್ದವರು ಕೆಳಗೆ ಬಿದ್ದ ವರನನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ಆದರೆ ಆತನಡೆಯುವಾಗ ಮತ್ತೆ ಎಡವಿ ಬಿದ್ದಿದ್ದಾನೆ. ಹಾಗೇ ಅವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದಿದ್ದರು ಎನ್ನಲಾಗಿದೆ.

ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಆಕೆಯ ಮನವೊಲಿಸಲು ಕುಟುಂಬಸ್ಥರು ಹಾಗೂ ವರನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ ಆಕೆ ತನ್ನ ನಿಲುವನ್ನು ಬದಲಾಯಿಸಿದೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ವರನ ಕಡೆಯವರು ಕೋಪಗೊಂಡಿದ್ದು, ಎರಡು ಕುಟುಂಬದ ನಡುವೆ ವಾಗ್ವಾದ ಏರ್ಪಟ್ಟಿದೆ. ಆ ವೇಳೆ ವರನ ಕಡೆಯವರು ವಧುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಧುವಿನ ಕಡೆಯವರು ಹಾಗೂ ವರನ ಕಡೆಯವರು ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕಡೆಯವರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಇರುವಂತಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ವರ ಕುಡಿದ ಅಮಲಿನಲ್ಲಿ ಬಂದಿದ್ದು, ವಧುವಿನ ಮನೆ ಬಾಗಿಲಿಗೆ ಬಂದ ಕೂಡಲೇ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡು ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬಾರಾತ್ ಅನ್ನು ವಾಪಾಸ್ ಕಳುಹಿಸಿದ್ದಾಳೆ. ಇದರಿಂದ ಪರಸ್ಪರ ಹಲ್ಲೆ ಮತ್ತು ಸುಲಿಗೆ ಆರೋಪದಡಿ ಎರಡು ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಅಲ್ಲನ ನಗರ ಠಾಣಾ ಪ್ರಭಾರಿ ರಾಜ್ ಕುಮಾರ್ ತಿಳಿಸಿದ್ದಾರೆ.

Continue Reading
Advertisement
Modi in Karnataka Here live video of Modi rally in Chikkaballapur
Lok Sabha Election 20242 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Modi in Karnataka today Cm Siddaramaiah asks 11 questions to PM Modi
Lok Sabha Election 20246 mins ago

Modi in Karnataka: ಇಂದು ಕರ್ನಾಟಕಕ್ಕೆ ಮೋದಿ; ಪ್ರಧಾನಿಗೆ 11 ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ

Uttarakaanda Movie bande kaaka rangayana Raghu
ಸ್ಯಾಂಡಲ್ ವುಡ್27 mins ago

Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

India Economy
ಪ್ರಮುಖ ಸುದ್ದಿ30 mins ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ33 mins ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು35 mins ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್50 mins ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್51 mins ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Manjummel Boys ott malayalam to premiere on may
ಮಾಲಿವುಡ್56 mins ago

Manjummel Boys: ಕನ್ನಡದಲ್ಲೂ ಬರಲಿದೆ ʻಮಂಜುಮ್ಮೆಲ್ ಬಾಯ್ಸ್ʼ? ಒಟಿಟಿಗೆ ಯಾವಾಗ?

China Missile
ವಿದೇಶ60 mins ago

China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Here live video of Modi rally in Chikkaballapur
Lok Sabha Election 20242 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ3 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ9 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ23 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

ಟ್ರೆಂಡಿಂಗ್‌