ಇನ್ನೆರಡು ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಪ್ರವೇಶಿಸಲಿದೆ ನೈಋತ್ಯ ಮುಂಗಾರು - Vistara News

ದೇಶ

ಇನ್ನೆರಡು ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಪ್ರವೇಶಿಸಲಿದೆ ನೈಋತ್ಯ ಮುಂಗಾರು

Southwest Monsoon: ಕರ್ನಾಟಕ್ಕೆ ನೈಋತ್ಯ ಮುಂಗಾರು ಪ್ರವೇಶ ಈಗಾಗಲೇ ಆಗಿದ್ದರೂ ಅದರ ಚಲನೆ ವೇಗಗತಿ ಪಡೆದುಕೊಂಡಿಲ್ಲ. ಹೀಗಾಗಿ ಮಳೆ ಪ್ರಮಾಣವೂ ತಗ್ಗಿದೆ.

VISTARANEWS.COM


on

Weather Forecast
ಸಾಂಕೇತಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನೈಋತ್ಯ ಮಾನ್ಸೂನ್‌ ಮುಂದಿನ ಎರಡು ದಿನಗಳಲ್ಲಿ ಗೋವಾ, ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರಪ್ರದೇಶಕ್ಕೆ ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರ್ನಾಟಕದ ಕರಾವಳಿ ತೀರ ಪ್ರವೇಶಿಸಿರುವ ಮಾನ್ಸೂನ್‌ ರಾಜ್ಯದ ದಕ್ಷಿಣ ಒಳನಾಡಿನ ಭಾಗಗಳಿಗೆ ಆವರಿಸಲು ಅನುಕೂಲಕರ ಸನ್ನಿವೇಶ ಇದೆ. ಇದರೊಂದಿಗೆ ತಮಿಳುನಾಡು, ಮಧ್ಯ ಅರೇಬಿಯನ್‌ ಸಮುದ್ರ, ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿ ಪ್ರದೇಶಗಳ ಹೆಚ್ಚಿನ ಭಾಗಗಳಿಗೆ ನೈಋತ್ಯ ಮಾನ್ಸೂನ್‌ ಲಗ್ಗೆಯಿಡಬಹುದು ಎಂದೂ ಐಎಂಡಿ ವಿವರಿಸಿದೆ. ಕರ್ನಾಟಕದಲ್ಲಿ ಕರಾವಳಿ ತೀರದ ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆಯಾಗಬಹುದು ಮತ್ತು ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಪ್ರದೇಶಗಳಲ್ಲೂ ಚದುರಿದ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ ಈಗಾಗಲೇ ರೂಪುಗೊಂಡಿದೆ. ಇದು ಮುಂಗಾರು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಆರ್‌.ಕೆ.ಜೇನಾಮನಿ ತಿಳಿಸಿದ್ದಾರೆ. ʼಮುಂಗಾರು ಮಾರುತ ಹಂತಹಂತವಾಗಿ ಚಲನೆಯಾಗುತ್ತದೆ. ಒಮ್ಮೊಮ್ಮೆ ನಿಧಾನವಾಗಿ ಚಲಿಸಿದರೆ, ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತದೆ. ಮಾನ್ಸೂನ್‌ ನಿಧಾನವಾಗಿ ಚಲಿಸುತ್ತಿದೆ ಎಂದಾಕ್ಷಣ ಅದು ದುರ್ಬಲಗೊಂಡಿದೆ ಎಂದು ಅರ್ಥವಲ್ಲ ಎಂದು ವಿವರಿಸಿದ್ದಾರೆ. ಸದ್ಯ ಕರ್ನಾಟಕದಲ್ಲೂ ಮುಂಗಾರು ಚಲನೆ ಸ್ವಲ್ಪ ನಿಧಾನಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ವೇಗಪಡೆದುಕೊಳ್ಳಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರಿನ ಅಬ್ಬರ ಹೆಚ್ಚುವ ನಿರೀಕ್ಷೆ, 4 ದಿನ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಟ್

ಮೇಘಾಲಯ, ಅಸ್ಸಾಂನಲ್ಲಿ ವಿಪರೀತ ಮಳೆ
ಇನ್ನೊಂದೆಡೆ ಮೇಘಾಲಯ, ಆಸ್ಸಾಂನಲ್ಲಿ ಇನ್ನೂ ಐದು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅರುಣಾಚಲ ಪ್ರದೇಶದಲ್ಲಿ ಜೂ.10-11ರಂದು ಭಾರಿ ಪ್ರಮಾಣದಲ್ಲಿ ಅಂದರೆ 204 ಎಂಎಂ ಗೂ ಅಧಿಕ ಮಳೆಯಾಗಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇಘಾಲಯದಲ್ಲಿ ಈಗಾಗಲೇ ಭೀಕರ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹ ಪರಿಸ್ಥಿತಿ ಇದೆ.

ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ನಲುಗಿದ ಮೇಘಾಲಯ, ನೋಡನೋಡುತ್ತಿದ್ದಂತೆ ಕೊಚ್ಚಿ ಹೋದ ಸೇತುವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

Reliance Disney Merger: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ವಯಾಕಾಮ್‌ 18, ವಾಲ್ಟ್‌ ಡಿಸ್ನಿಯ ಸ್ಟಾರ್‌ ಇಂಡಿಯಾ ವಿಲೀನಕ್ಕೆ ಒಪ್ಪಂದ ನಡೆದಿದೆ. ಇದು ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಎಂದು ಹೇಳಲಾಗುತ್ತಿದೆ.

VISTARANEWS.COM


on

Reliance Disney
Koo

ಮುಂಬೈ: ದೇಶದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮುಕೇಶ್‌ ಅಂಬಾನಿ ಒಡೆತನದ ರಿಲಿಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (Reliance Industries Limited) ಹಾಗೂ ಅಮೆರಿಕದ ವಾಲ್ಟ್‌ ಡಿಸ್ನಿ ಕಂಪನಿಯು (Walt Disney Company) ವಿಲೀನಗೊಂಡಿದ್ದು, ದೇಶದ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಸುಮಾರು 70,352 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ರಿಲಯನ್ಸ್‌ ಹಾಗೂ ಡಿಸ್ನಿ ವಿಲೀನದ ಸಂಸ್ಥೆಗೆ ನೀತಾ (Nita Ambani) ಅಂಬಾನಿಯವರೇ ಮುಖ್ಯಸ್ಥರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಒಪ್ಪಂದದಂತೆ ರಿಲಯನ್ಸ್‌ ಕಂಪನಿಯ ವಯಾಕಾಮ್‌ 18 ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹಾಗೂ ವಾಲ್ಟ್‌ ಡಿಸ್ನಿ ಕಂಪನಿಯ ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿಲೀನಗೊಳ್ಳಲಿವೆ. ಜಾಯಿಂಟ್‌ ವೆಂಚರ್‌ನಲ್ಲಿ ರಿಲಯನ್ಸ್‌ ಕಂಪನಿಯು ಮೊದಲು 11,500 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಒಟ್ಟು 70,352 ಕೋಟಿ ರೂ. ಹೂಡಿಕೆಯಾಗಲಿದೆ. ಹೂಡಿಕೆ ಪ್ರಕ್ರಿಯೆ ಮುಗಿದ ಬಳಿಕ ಇಡೀ ಜಾಯಿಂಟ್‌ ವೆಂಚರ್‌ನ ನಿಯಂತ್ರಣವು ರಿಲಯನ್ಸ್‌ ಬಳಿಯ ಇರಲಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.

ಒಪ್ಪಂದದ ಪ್ರಕಾರ, ಜಾಯಿಂಟ್‌ ವೆಂಚರ್‌ನಲ್ಲಿ ರಿಲಯನ್ಸ್‌ ಷೇರುಗಳ ಪಾಲು ಶೇ.16.34ರಷ್ಟು, ವಯಾಕಾಮ್‌ 18 ಪಾಲು ಶೇ.46.82ರಷ್ಟು ಹಾಗೂ ಶೇ.36.84ರಷ್ಟು ಪಾಲು ಡಿಸ್ನಿಯದ್ದು ಇರಲಿದೆ. ನೀತಾ ಅಂಬಾನಿಯು ಜಾಯಿಂಟ್‌ ವೆಂಚರ್‌ನ ಮುಖ್ಯಸ್ಥೆಯಾದರೆ, ಉದಯ್‌ ಶಂಕರ್‌ ಅವರು ಉಪಾಧ್ಯಕ್ಷರಾಗಿರಲಿದ್ದಾರೆ. ಇದರೊಂದಿಗೆ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಎರಡೂ ಕಂಪನಿಗಳು ಒಗ್ಗೂಡಿ, ಕ್ರಾಂತಿ ಮಾಡಲು ಮುಂದಾಗಿವೆ. ಇದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

ಟಿವಿ, ಡಿಜಿಟಲ್‌ ಸ್ಟ್ರೀಮಿಂಗ್‌, ಮನರಂಜನೆ, ಸ್ಪೋರ್ಟ್ಸ್‌, ಕ್ಷೇತ್ರದಲ್ಲಿ ಈಗಾಗಲೇ ವಯಾಕಾಮ್‌ ಹಾಗೂ ಸ್ಟಾರ್‌ ಇಂಡಿಯಾ ಛಾಪು ಮೂಡಿಸಿವೆ. ಮನರಂಜನೆ ಕ್ಷೇತ್ರದಲ್ಲಿ ಕಲರ್ಸ್‌, ಸ್ಟಾರ್‌ಪ್ಲಸ್‌, ಸ್ಟಾರ್‌ಗೋಲ್ಡ್‌, ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್‌ಸ್ಪೋರ್ಟ್ಸ್‌, ಸ್ಪೋರ್ಟ್ಸ್‌ 18, ಒಟಿಟಿಯಲ್ಲಿ ಜಿಯೋ ಸಿನಿಮಾ ಹಾಗೂ ಹಾಟ್‌ಸ್ಟಾರ್‌ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ ಮನೆಮಾತಾಗಿವೆ. ಈಗ ಎರಡೂ ಕಂಪನಿಗಳು ವಿಲೀನಗೊಂಡಿದ್ದು, ಭಾರತದಲ್ಲಿ ಸುಮಾರು 75 ಕೋಟಿ ಜನರನ್ನು ತಲುಪಲು ಯೋಜನೆ ರೂಪಿಸಿವೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಸುನೀಲ್ ಭಾರ್ತಿ ಮಿತ್ತಲ್‌ಗೆ ಬ್ರಿಟನ್‌ ರಾಜನಿಂದ ನೈಟ್‌ಹುಡ್‌ ಪ್ರಶಸ್ತಿ; ಮೊದಲ ಭಾರತೀಯ ಎಂಬ ಖ್ಯಾತಿ

ಸುನೀಲ್ ಭಾರ್ತಿ ಮಿತ್ತಲ್‌ ಅವರು ಕಿಂಗ್‌ ಚಾರ್ಲ್ಸ್‌ III ಅವರಿಂದ ಆನರರಿ ನೈಟ್‌ಹುಡ್‌ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

VISTARANEWS.COM


on

Sunil Bharti Mittal
Koo

ನವದೆಹಲಿ: ಭಾರ್ತಿ ಎಂಟರ್‌ಪ್ರೈಸಸ್‌ (Bharti Enterprises) ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಸುನೀಲ್‌ ಭಾರ್ತಿ ಮಿತ್ತಲ್‌ (Sunil Bharti Mittal) ಅವರಿಗೆ ಬ್ರಿಟನ್‌ನ ಪ್ರತಿಷ್ಠಿತ ಆನರರಿ ನೈಟ್‌ಹುಡ್‌ (Honorary Knighthood) ಪ್ರಶಸ್ತಿ ದೊರೆತಿದೆ. ಬ್ರಿಟನ್‌ನ ಕಿಂಗ್‌ ಚಾರ್ಲ್ಸ್‌ III (King Charles III) ಅವರು ಸುನೀಲ್‌ ಭಾರ್ತಿ ಮಿತ್ತಲ್‌ ಅವರಿಗೆ ಆನರರಿ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದರೊಂದಿಗೆ ಕಿಂಗ್‌ ಚಾರ್ಲ್ಸ್‌ III ಅವರಿಂದ ಆನರರಿ ನೈಟ್‌ಹುಡ್‌ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಸುನೀಲ್‌ ಭಾರ್ತಿ ಮಿತ್ತಲ್‌ ಭಾಜನರಾಗಿದ್ದಾರೆ.

ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್‌ ಭಾರ್ತಿ ಮಿತ್ತಲ್‌ ಅವರಿಗೆ ಕಿಂಗ್‌ ಚಾರ್ಲ್ಸ್‌ III ಅವರು ‘ನೈಟ್‌ ಕಮಾಂಡರ್‌ ಆಫ್‌ ದಿ ಮೋಸ್ಟ್‌ ಅಕ್ಸಲೆಂಟ್‌ ಆರ್ಡರ್‌ ಆಫ್‌ ದಿ ಬ್ರಿಟಿಷ್‌ ಎಂಪೈರ್‌’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಬ್ರಿಟನ್‌ ನೀಡುವ ಅತ್ಯುಚ್ಚ ಪ್ರಶಸ್ತಿಯಾಗಿದೆ. ಬ್ರಿಟನ್‌ ನಾಗರಿಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಗೌರವಾರ್ಥವಾಗಿ ಬೇರೆ ದೇಶಗಳ ನಾಗರಿಕರಿಗೂ ಆನರರಿ ನೈಟ್‌ಹುಡ್‌ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಸುನೀಲ್‌ ಭಾರ್ತಿ ಮಿತ್ತಲ್‌ ಅವರಿಗೆ ಈ ಗೌರವ ಸಂದಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುನೀಲ್‌ ಭಾರ್ತಿ ಮಿತ್ತಲ್‌, “ಕಿಂಗ್‌ ಚಾರ್ಲ್ಸ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಅತ್ಯಂತ ಸಂತಸದ ಕ್ಷಣವಾಗಿದೆ. ನನಗೆ ಈಗ ಮಾತೇ ಬರುತ್ತಿಲ್ಲ. ತುಂಬ ವಿನಮ್ರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಭಾರತ ಹಾಗೂ ಬ್ರಿಟನ್‌ ಸಂಬಂಧಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅದರಲ್ಲೂ, ಇತ್ತೀಚೆಗೆ ಭಾರತ ಹಾಗೂ ಬ್ರಿಟನ್‌ ದ್ವಿಪಕ್ಷೀಯ ಸಂಬಂಧ, ಸಹಕಾರ, ಸಹಯೋಗವು ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಮುಂದೆಯೂ ಉಭಯ ದೇಶಗಳ ಸಂಬಂಧ ಹೀಗೆಯೇ ಇರಲಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಶಾರುಖ್‌ ಖಾನ್‌; ವಿಜೇತರ ಪಟ್ಟಿ ಇಲ್ಲಿದೆ

ಭಾರತ ಹಾಗೂ ಬ್ರಿಟನ್‌ ನಡುವಿನ ಸಂಬಂಧ ವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸುನೀಲ್‌ ಭಾರ್ತಿ ಮಿತ್ತಲ್‌ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. “ಭಾರತ ಹಾಗೂ ಬ್ರಿಟನ್‌ ಮಧ್ಯೆ ಆರ್ಥಿಕ, ಸಹಕಾರ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಂಬಂಧವಿದೆ. ಬ್ರಿಟನ್‌ನಲ್ಲಿ ಅಪಾರ ಪ್ರಮಾಣದ ಹೂಡಿಕೆಗೆ ಉತ್ತೇಜನ, ಸಹಕಾರ ನೀಡಿದ ಬ್ರಿಟನ್‌ ಸರ್ಕಾರಕ್ಕೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಹೂಡಿಕೆಯ ವಿಚಾರದಲ್ಲಿ ಬ್ರಿಟನ್‌ ಸರ್ಕಾರದ ಪಾತ್ರ ದೊಡ್ಡದಿದೆ” ಎಂದು ಸುನೀಲ್‌ ಭಾರ್ತಿ ಮಿತ್ತಲ್‌ ಮಾಹಿತಿ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Jamtara Train Accident: ಜಾರ್ಖಂಡ್‌ನಲ್ಲಿ ರೈಲು ಡಿಕ್ಕಿಯಾಗಿ 12 ಜನ ಸಾವು; ಸಿನಿಮೀಯ ದುರಂತ

Jamtara Train Accident: ಜಾರ್ಖಂಡ್‌ನ ಜಮ್ತಾರದಲ್ಲಿ ರೈಲು ಡಿಕ್ಕಿಯಾಗಿ ಸುಮಾರು 12 ಜನ ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Jamtara Train Accident
Koo

ರಾಂಚಿ: ಜಾರ್ಖಂಡ್‌ನ ಜಮ್ತಾರ ಜಿಲ್ಲೆಯಲ್ಲಿ ಬುಧವಾರ (ಫೆಬ್ರವರಿ 28) ಸಂಜೆ ಭೀಕರ ರೈಲು (Jamtara Train Accident) ದುರಂತ ಸಂಭವಿಸಿದೆ. ಜಮ್ತಾರ ಜಿಲ್ಲೆಯ ಕಲಝಾರಿಯ (Kalajharia) ರೈಲು ನಿಲ್ದಾಣದ ಬಳಿ ರೈಲು (Train Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ 12 ಮಂದಿ ಮೃತಪಟ್ಟರೆ, ಇನ್ನೂ ಹಲವರು ಗಾಯಗೊಂಡಿದ್ದಾರೆ. ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯೂ ಕೂಡಲೇ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನೂ ಕೆಲವರನ್ನು ರಕ್ಷಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಸಿನಿಮೀಯ ರೀತಿಯಲ್ಲಿ ರೈಲು ಅಪಘಾತ ಸಂಭವಿಸಿದೆ. ಭಾಗಲ್ಪುರಕ್ಕೆ ತೆರಳುತ್ತಿದ್ದ ಆಂಗ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಹರಡಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆತಂಕದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ದುರದೃಷ್ಟವಶಾತ್‌, ಮತ್ತೊಂದು ಕಡೆಯಿಂದ ಬರುತ್ತಿದ್ದ ಝಾಝಾ-ಅಸನೋಲ್‌ ರೈಲು ಅವರಿಗೆ ಡಿಕ್ಕಿಯಾಗಿದೆ. ಝಾಝಾ ಅಸನೋಲ್‌ ರೈಲು ವೇಗವಾಗಿ ಚಲಿಸುತ್ತಿದ್ದ ಕಾರಣ ಪ್ರಯಾಣಿಕರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ರೈಲು ಡಿಕ್ಕಿಯಾದ ರಭಸಕ್ಕೆ 12 ಜನರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಾರು ಜನ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. “ಕಲಝಾರಿಯಾ ರೈಲು ನಿಲ್ದಾಣದ ಬಳಿ ರೈಲೊಂದು ಪ್ರಯಾಣಿಕರ ಮೇಲೆ ಹರಿದಿದೆ. ಕತ್ತಲು ಇದ್ದರೂ ರೈಲ್ವೆ ಸಿಬ್ಬಂದಿಯು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ 12 ಜನ ಮೃತಪಟ್ಟಿರುವ ಶಂಕೆ ಇದೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುವ ಸಾಧ್ಯವಾಗಿದೆ. ಸಾವಿನ ಸಂಖ್ಯೆ ಇಷ್ಟೇ ಎಂದು ಈಗಲೇ ಹೇಳಲು ಆಗುವುದಿಲ್ಲ” ಎಂದು ಜಮ್ತಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಳಿಗಳ ಮೇಲೆ ಬಿದ್ದ ಶವಗಳನ್ನು, ಗಾಯಾಳುಗಳನ್ನು ರಕ್ಷಿಸಲು ಸುತ್ತಮುತ್ತಲಿನ ನಾಗರಿಕರು ಕೂಡ ನೆರವು ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾಮ್‌ನಗರವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Anant Ambani Radhika Merchant
Koo

ಗಾಂಧಿನಗರ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗೆ ಇಳಿಸಲಾಗಿದೆ. ಮಾರ್ಚ್‌ 1ರಿಂದ ಮೂರು ದಿನಗಳ ಕಾಲ ಗುಜರಾತ್‌ನ ಜಾಮ್‌ನಗರದಲ್ಲಿ (Jamnagar) ಅದ್ಧೂರಿಯಾಗಿ ವಿವಾಹಪೂರ್ವ ಕಾರ್ಯಕ್ರಮ ನಡೆಯಲಿದ್ದು, ದೇಶ-ವಿದೇಶಗಳ ಸಾವಿರಾರು ಗಣ್ಯರು ಆಗಮಿಸಲಿದ್ದಾರೆ. ಇನ್ನು, ಮುಕೇಶ್‌ ಅಂಬಾನಿ ಕುಟುಂಬವು ಮುಂಬೈನಲ್ಲಿ ನೆಲೆಸಿದ್ದರೂ ಜಾಮ್‌ನಗರದಲ್ಲೇ ಏಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆ, ಅನಂತ್‌ ಅಂಬಾನಿ ಅಜ್ಜಿ, ಅಜ್ಜ ಹಾಗೂ ನರೇಂದ್ರ ಮೋದಿ (Narendra Modi) ಅವರ ನಂಟಿದೆ ಎಂಬುದು ಗಮನಾರ್ಹವಾಗಿದೆ.

ಹೌದು, ಈ ಕುರಿತು ಅನಂತ್‌ ಅಂಬಾನಿ ಅವರೇ ಮಾತನಾಡಿದ್ದಾರೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಾನು ಇಲ್ಲಿಯೇ ಬೆಳೆದಿದ್ದೇನೆ. ನನ್ನ ಅಜ್ಜಿಯ ಜನ್ಮಭೂಮಿ, ನನ್ನ ಅಜ್ಜ, ತಂದೆಯ ಕರ್ಮಭೂಮಿಯಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂತಸ ಹಂಚಿಕೊಳ್ಳಲು ತೀರ್ಮಾನಿಸಿದೆವು. ನನ್ನ ತಂದೆಯವರು ಕೂಡ, ಇದು ನನ್ನೂರು, ಇಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದರು. ಮೋದಿ ಅವರು ಕೂಡ, ದೇಶದ ಶ್ರೀಮಂತರು, ಉದ್ಯಮಿಗಳು ವಿದೇಶದಲ್ಲಿ ಮದುವೆಯಾಗುವ ಬದಲು, ದೇಶದಲ್ಲಿಯೇ ಮದುವೆಯಾಗಿ ಎಂಬುದಾಗಿ ಕರೆ ನೀಡಿದರು. ಇದೆಲ್ಲ ಕಾರಣಗಳಿಗಾಗಿ ಜಾಮ್‌ನಗರವನ್ನೇ ಆಯ್ಕೆ ಮಾಡಿಕೊಂಡಿವೆ” ಎಂದು ಹೇಳಿದರು.

ಯಾವ ಗಣ್ಯರಿಗೆಲ್ಲ ಆಹ್ವಾನ?

ವಿವಾಹಪೂರ್ವ ಕಾರ್ಯಕ್ರಮಗಳಿಗೆ ಉದ್ಯಮಿಗಳಿಂದ ಹಿಡಿದು ಸಿನಿಮಾ ಸ್ಟಾರ್‌ಗಳವರೆಗೆ ನೂರಾರು ಗಣ್ಯರಿಗೆ ಮುಕೇಶ್‌ ಅಂಬಾನಿ ಕುಟುಂಬಸ್ಥರು ಆಹ್ವಾನಿಸಿದ್ದಾರೆ. ಉದ್ಯಮಿಗಳಾದ ಗೌತಮ್‌ ಅದಾನಿ, ನಂದನ್‌ ನಿಲೇಕಣಿ, ಅದರ್‌ ಪೂನಾವಾಲಾ, ಮಂಗಳಂ ಬಿರ್ಲಾ, ಕ್ರೀಡಾ ತಾರೆಯರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಅವರ ಕುಟುಂಬ, ಎಂ.ಎಸ್.ಧೋನಿ. ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ ಸೇರಿ ಹಲವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಾಲಿವುಡ್‌ ನಟ-ನಟಿಯರಿಗೂ ಅಂಬಾನಿ ಕುಟುಂಬವು ಆಮಂತ್ರಣ ನೀಡಿದೆ. ಅಮಿತಾಭ್‌ ಬಚ್ಚನ್‌ ಹಾಗೂ ಕುಟುಂಬಸ್ಥರು, ಶಾರುಖ್‌ ಖಾನ್‌, ಆಮೀರ್‌ ಖಾನ್‌, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಸೈಫ್‌ ಅಲಿ ಖಾನ್‌, ಚಂಕಿ ಪಾಂಡೆ, ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ, ರಣಬೀರ್‌ ಕಪೂರ್-ಆಲಿಯಾ ಭಟ್‌, ವಿಕ್ಕಿ ಕೌಶಲ್‌-ಕತ್ರಿನಾ ಕೈಫ್‌, ಅನಿಲ್‌ ಕಪೂರ್‌, ಶ್ರದ್ಧಾ ಕಪೂರ್‌ ಸೇರಿ ಹಲವರಿಗೆ ಆಹ್ವಾನಿಸಲಾಗಿದೆ. ಹಾಲಿವುಡ್‌ನ ಖ್ಯಾತ ಪಾಪ್‌ ಗಾಯಕಿ ರಿಹಾನಾ ಅವರನ್ನೂ ಆಮಂತ್ರಿಸಲಾಗಿದೆ ಎಂದು ತಿಳಿದುಬಂದಿದೆ. ಭರ್ಜರಿ ಭೋಜನ, ಪಾಪ್‌ ಗಾಯಕಿ ರಿಹಾನಾ ಅವರ ಗಾಯನ, ಮೋಜು-ಮಸ್ತಿಯೂ ಇರಲಿದೆ.

ಇದನ್ನೂ ಓದಿ: Anant Ambani wedding: 2500 ಐಟಂ, 20 ಲೇಡಿ ಶೆಫ್‌ಗಳು… ಇನ್ನೂ ಇದೆ ಅನಂತ್‌ ಅಂಬಾನಿ- ರಾಧಿಕಾ ಮದುವೆ ವಿಶೇಷ!

ಹೇಗಿದೆ ಕಾರ್ಯಕ್ರಮದ ಸಿದ್ಧತೆ?

ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುವ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವತಃ ನೀತಾ ಅಂಬಾನಿ ಅವರು ಈ ಸಿದ್ಧತೆಯ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂಬಾನಿ ಕುಟುಂಬದಿಂದ ಗುಜರಾತ್‌ನ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳ ಸಮುಚ್ಚಯವನ್ನೇ ನಿರ್ಮಾಣ ಮಾಡಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ತಂಭಗಳು, ಕಲಾಕೃತಿಗಳು, ದೇವ- ದೇವತೆಗಳ ಚಿತ್ರಗಳು, ಮನಮೋಹಕವಾದ ಶಿಲ್ಪಗಳು, ವಾಸ್ತುಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Doctor listens to the human lungs
ಆರೋಗ್ಯ24 mins ago

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

kannada sign boards
ಪ್ರಮುಖ ಸುದ್ದಿ47 mins ago

ಕನ್ನಡ ನಾಮಫಲಕ ಅಳವಡಿಕೆಗೆ ಇಂದೇ ಕೊನೆಯ ದಿನ, ಇಲ್ಲದಿದ್ದರೆ ಬೀಗ ಖಚಿತ

graveyard
ಪ್ರಮುಖ ಸುದ್ದಿ54 mins ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ54 mins ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ1 hour ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ1 hour ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ2 hours ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು8 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌