ಕಾರಲ್ಲಿ ಕೂಡಿ ಹಾಕಿ ಸ್ಫೋಟಿಸುತ್ತೇನೆ ಎಂದು ಕೆಲಸಗಾರರಿಗೆ ಬೆದರಿಕೆ ಹಾಕಿದ ಸಮಾಜವಾದಿ ಪಕ್ಷದ ನಾಯಕ ಅರೆಸ್ಟ್​ - Vistara News

ದೇಶ

ಕಾರಲ್ಲಿ ಕೂಡಿ ಹಾಕಿ ಸ್ಫೋಟಿಸುತ್ತೇನೆ ಎಂದು ಕೆಲಸಗಾರರಿಗೆ ಬೆದರಿಕೆ ಹಾಕಿದ ಸಮಾಜವಾದಿ ಪಕ್ಷದ ನಾಯಕ ಅರೆಸ್ಟ್​

ಎಸ್​ಪಿ ನಾಯಕ ಸಂಗಮ್​ ಯಾದವ್​ ಕಾರು ಅಪಘಾತಕ್ಕೀಡಾಗಿತ್ತು. ಆದರೆ ದುರಸ್ತಿ ವಿಚಾರಕ್ಕೆ ಯಾದವ್​ ಅವರು ಆಟೋ ಮೊಬೈಲ್​ ಸರ್ವೀಸ್​ ಸೆಂಟರ್​ ಸಿಬ್ಬಂದಿಯನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ.

VISTARANEWS.COM


on

SP leader Arrested For threat to automobile service centre Workers to blow up car
ಎಸ್​ಪಿ ನಾಯಕ ಸಂಗಮ್​ ಯಾದವ್​ ಬಂಧನ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಸಂಗಮ್ ಯಾದವ್ (SP leader Sangam Yadav)​ರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಾನೊಬ್ಬ ರಾಜಕೀಯ ನಾಯಕ ಎಂಬ ದರ್ಪದಲ್ಲಿ ಆಟೋ ಮೊಬೈಲ್​ ಸರ್ವೀಸ್ ಸೆಂಟರ್​​ನಲ್ಲಿನ ಕೆಲಸಗಾರರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಸಂಗಮ್​ ಬಂಧಿತರಾಗಿದ್ದಾರೆ. ಅವರು ಆಟೋ ಮೊಬೈಲ್​ ಸರ್ವೀಸ್​ ಸೆಂಟರ್​​ನ ಕಾರ್ಮಿಕರಿಗೆ ಗಂಭೀರ ಸ್ವರೂಪದ ಬೆದರಿಕೆ ಹಾಕಿದ ಆಡಿಯೋ ಕೂಡ ವೈರಲ್ ಆಗುತ್ತಿದೆ.

ಸಂಗಮ್​ ಯಾದವ್​ರ ಸ್ವಿಫ್ಟ್​ ಕಾರು ಸಣ್ಣ ಪ್ರಮಾಣದ ಅಪಘಾತಕ್ಕೀಡಾಗಿ ಅದರಲ್ಲಿ ಕೆಲ ಭಾಗಗಳು ಹಾಳಾಗಿದ್ದವು. ಅದನ್ನು ದುರಸ್ತಿಗೆಂದು ಅವರು ಉತ್ತರ ಪ್ರದೇಶದ ದೇವರಿಯಾದಲ್ಲಿರುವ ಕ್ಲಾಸಿಕ್​ ಮೋಟಾರ್ಸ್​ ಎಂಬ ಆಟೋಮೊಬೈಲ್​ ಶಾಪ್​​ಗೆ ಕಳಿಸಿದ್ದರು. ಅಲ್ಲಿ ಹೋಗಿ ಸಂಗಮ್​ ಯಾದವ್​ ದರ್ಪ ತೋರಿಸಿದ್ದಾರೆ. ‘ಅಖಿಲೇಶ್​ ಯಾದವ್​ ಸರ್ಕಾರ ಆಡಳಿತದಲ್ಲಿ ಇಲ್ಲದೆ ಇರಬಹುದು. ಆದರೆ ನಾನು ಈಗಲೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ. ನನ್ನ ಕಾರನ್ನು ಒಂದೊಮ್ಮೆ ದುರಸ್ತಿ ಮಾಡದೆ ಇದ್ದರೆ, ಇಲ್ಲಿನ ಎಲ್ಲ ಕೆಲಸಗಾರರನ್ನೂ ಕಾರಿನಲ್ಲಿ ಕೂರಿಸಿ, ಆ ಕಾರನ್ನು ಸ್ಫೋಟಿಸುತ್ತೇನೆ’ ಎಂದು ಹೇಳಿದ್ದಾರೆ.

ಕಾರು ಅಪಘಾತಕ್ಕೀಡಾದಾಗ ಅದರ ಇನ್ಶೂರೆನ್ಸ್​ ಮಾಡಿದ್ದ ಕಂಪನಿ ವಾಹನವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ, ಅದರ ಮುಂಭಾಗವನ್ನು ದುರಸ್ತಿ ಮಾಡಲು ಮಾತ್ರ ವಿಮೆ ಅನ್ವಯ ಆಗುತ್ತದೆ ಎಂದು ಹೇಳಿತ್ತು. ಆದರೆ ಸಂಗಮ್​ ಯಾದವ್​ ಇಡೀ ಕಾರಲ್ಲಿ ಎಲ್ಲೆಲ್ಲಿ ಏನೆಲ್ಲ ಹಾಳಾಗಿದೆಯೋ ಅದೆಲ್ಲವನ್ನೂ ದುರಸ್ತಿ ಮಾಡಬೇಕು ಎಂದು ಆಟೋ ಮೊಬೈಲ್​ ಶಾಪ್​ಗೆ ಹೇಳಿದ್ದಾರೆ. ಅಂದರೆ ಕೇವಲ ಮುಂಭಾಗವನ್ನು ಬದಲಿಸಲು ಇನ್ಶೂರೆನ್ಸ್ ಕಂಪನಿ ನೀಡುವ ಹಣದಲ್ಲೇ, ಕಾರಿನ ಇತರ ಭಾಗಗಳನ್ನೂ ಸರಿಪಡಿಸಬೇಕು ಎಂಬುದು ಅವರ ಆಗ್ರಹ. ​

‘ಇಲ್ಲ, ಹಾಗೆಲ್ಲ ವಿಮೆ ಅನ್ವಯ ಆಗುವುದೇ ಇಲ್ಲ’ ಎಂದು ಇನ್ಶೂರೆನ್ಸ್ ಏಜೆನ್ಸಿಯ ಸೇವಾ ಸಲಹೆಗಾರ ವಿಕ್ರಮ್​ ಪಟೇಲ್​ ಅವರು ಸಂಗಮ್ ಯಾದವ್​ಗೆ ಕರೆ ಮಾಡಿ ಹೇಳುತ್ತಿದ್ದಂತೆ ಅವರನ್ನೂ ಯಾದವ್​ ನಿಂದಿಸಿದ್ದಾರೆ. ಒಮ್ಮೆಲೇ ಕೋಪಗೊಂದು ಬೈದಾಡಿದ್ದಾರೆ. ‘1 ಲಕ್ಷ ರೂಪಾಯಿಯನ್ನು ಕಳಿಸುವಂತೆ ನಿನ್ನ ಬಾಸ್​ಗೆ (ಇನ್ಶೂರೆನ್ಸ್ ಕಂಪನಿಯ ಮುಖ್ಯಸ್ಥ) ಹೇಳು. ಕಳಿಸದೆ ಇದ್ದರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ವಿಕ್ರಮ್​ ಪಟೇಲ್​ಗೂ ಬೆದರಿಕೆ ಹಾಕಿದ್ದರು. ಇದರಿಂದ ಬೇಸರಗೊಂಡ ಪಟೇಲ್​ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದೇ ವೇಳೆ ಆಟೋ ಮೊಬೈಲ್​ ಸರ್ವೀಸ್ ಸೆಂಟರ್​ ಸಿಬ್ಬಂದಿ ಕೂಡ ಯಾದವ್ ವಿರುದ್ಧ ಆರೋಪ ಮಾಡಿದ್ದರು.

ಇದನ್ನೂ ಓದಿ: Uttar Pradesh Politics | ಅಖಿಲೇಶ್​ ಯಾದವ್​-ಕೇಶವ್​ ಪ್ರಸಾದ್​ ಮೌರ್ಯ ಮಧ್ಯೆ ‘100 ಶಾಸಕರ’ ವಾಗ್ವಾದ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

Patanjali Case: ಪತಂಜಲಿಯ ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದುಗೊಳಿಸಲಾಗಿದೆ. ಆ ಮೂಲಕ ಆ 14 ಉತ್ಪನ್ನಗಳ ಮಾರಾಟ ಬ್ಯಾನ್‌ ಮಾಡಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

VISTARANEWS.COM


on

Baba Ramdev
Koo

ಉತ್ತರಾಖಂಡ: ಯೋಗಗುರು ಬಾಬಾ ರಾಮದೇವ್‌(Baba Ramdev) ಒಡೆತನದ ಪತಂಜಲಿ ಉತ್ಪನ್ನ(Patanjali Case)ಗಳಿಗೆ ಉತ್ತರಾಖಂಡದಲ್ಲಿ ಭಾರೀ ಸಂಕಷ್ಟ ಎದುರಾಗಿದ್ದು, ಬರೋಬ್ಬರಿ 14 ಉತ್ಪನ್ನಗಳ ಪರವಾನಗಿ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಬಗ್ಗೆ ಸುಪ್ರೀಂಕೋರ್ಟ್‌(Supreme Court)ನಲ್ಲಿ ಅಫಿಡವಿಟ್‌ ಸಲ್ಲಿಕೆಯಾಗಿದ್ದು, ಜಾಹೀರಾತು ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ (Misleading Advertisement) ಮಾಡುತ್ತಿದೆ. ಹೀಗಾಗಿ ಪತಂಜಲಿಯ ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದುಗೊಳಿಸಲಾಗಿದೆ. ಆ ಮೂಲಕ ಆ 14 ಉತ್ಪನ್ನಗಳ ಮಾರಾಟ ಬ್ಯಾನ್‌ ಮಾಡಲಾಗಿದೆ ಎಂದು ತಿಳಿಸಿದೆ.

ಯಾವೆಲ್ಲಾ ಉತ್ಪನ್ನಗಳು ಬ್ಯಾನ್‌?

ದಿವ್ಯ ಫಾರ್ಮಸಿಯ ದೃಷ್ಟಿ ಐ ಡ್ರಾಪ್‌, ಸ್ವಾಸರಿ ಗೋಲ್ಡ್‌, ಸ್ವಾಸರಿ ವಟಿ, ಬ್ರೋಂಛಮ್‌, ಸ್ವಾಸರಿ ಪ್ರವಹಿ, ಸ್ವಾಸರಿ ಆವಲೇಹ್‌, ಮುಕ್ತ್‌ವಟಿ ಎಕ್ಸ್‌ಟ್ರಾ ಪವರ್‌, ಲಿಪಿದಂ, ಬಿಪಿ ಗ್ರಿತ್, ಮಧು ಗ್ರಿತ್‌, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್‌, ಲಿವಮೃತ ಅಡ್ವಾನ್ಸ್‌, ಲಿವೋಗೃತ್‌, ಐಗೃತ್‌ ಗೋಲ್ಡ್‌‌ ಸೇರಿದಂತೆ ಒಟ್ಟು 14 ಉತ್ಪನ್ನಗಳ ಮಾರಾಟವನ್ನು ಬ್ಯಾನ್‌ ಮಾಡಲಾಗಿದೆ. ಇನ್ನು ಈ ಬಗ್ಗೆ ಯೋಗಗುರು ಬಾಬಾ ರಾಮದೇವ್‌ ಮತ್ತು ಅವರ ಸಹಚರ ಆಚಾರ್ಯ ಬಾಲಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ಅವರು ಮಂಗಳವಾರ ಕೋರ್ಟ್‌ ವಿಚಾರಣೆಗೆ ಹಾಜರಾಗಲಿದ್ದಾರೆ.

ಕೋರ್ಟ್‌ ಏನು ಹೇಳಿತ್ತು?

ಈಗಾಗಲೇ ಈ ಬಗ್ಗೆ ಕ್ಷಮಾಪಣೆ ಪತ್ರವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಸುಪ್ರೀಂಕೋರ್ಟ್‌ ಬಾಬಾ ರಾಮ್‌ದೇವ್‌ ಅವರಿಗೆ ಸೂಚನೆ ನೀಡಿತ್ತು. ಕ್ಷಮಾಪಣೆ ಪತ್ರವನ್ನು ಸರಿಯಾದ ರೀತಿಯಲ್ಲಿ ಪ್ರಕಟಿಸಿಲ್ಲ ಎಂದು ಏ.23ರಂದು ತರಾಟೆಗೆ ತೆಗೆದುಕೊಂಡಿತ್ತು. ಪತ್ರಿಕೆಗಳಲ್ಲಿ ಫುಲ್‌ ಪೇಜ್‌ ಜಾಹೀರಾತಿನ ಅಳತೆಯಲ್ಲೇ ಕ್ಷಮಾಪಣೆ ಪತ್ರ ಪ್ರಕಟಿಸುವಂತೆ ಆದೇಶಿಸಿತ್ತು. ಇದನ್ನು ಉಲ್ಲಂಘಿಸಿದ ಕಾರಣದಿಂದ ಸುಪ್ರೀಂಕೋರ್ಟ್‌ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅದಕ್ಕೆ ಪತಂಜಲಿ ಸಂಸ್ಥೆ ಕೋರ್ಟ್‌ನ ಕ್ಷಮೆಯನ್ನೂ ಕೂಡ ಕೇಳಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್‌ ಮತ್ತೆ ದೊಡ್ಡ ಸೈಜ್‌ನಲ್ಲಿ ಕ್ಷಮಾಪಣಾ ಪತ್ರ ಪ್ರಕಟಿಸುವಂತೆ ಆದೇಶಿಸಿತ್ತು.

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

ನಂತರ ತೀಕ್ಷ್ಣವಾದ ಪದಗಳೊಂದಿಗೆ ನ್ಯಾಯಪೀಠವು ದೇಶದ ಪ್ರಮುಖ ವೈದ್ಯರ ಸಂಘದತ್ತ ಚಾಟಿ ಬೀಸಿತು. “ಪತಂಜಲಿಯನ್ನು ಒಂದು ಬೆಟ್ಟು ಮಾಡಿ ತೋರುವಾಗ ನಾಲ್ಕು ಬೆರಳುಗಳು ಅವರತ್ತಲೂ ತೋರಿಸುತ್ತಿವೆ. ನಿಮ್ಮ (ಐಎಂಎ) ವೈದ್ಯರು ಕೂಡ ಅಲೋಪತಿ ಕ್ಷೇತ್ರದಲ್ಲಿ ದುಬಾರಿ ಮತ್ತು ಅನಗತ್ಯ ಔಷಧಿಗಳನ್ನು ಅನುಮೋದಿಸುತ್ತಿದ್ದಾರೆ. ನಾವು ನಿಮ್ಮ (ಐಎಂಎ) ಕಡೆ ಏಕೆ ಪ್ರಕರಣವನ್ನು ತಿರುಗಿಸಬಾರದು?” ಎಂದು ಸುಪ್ರೀಂ ಕೋರ್ಟ್ ಐಎಂಎಗೆ ಪ್ರಶ್ನಿಸಿದೆ.

Continue Reading

ಪ್ರಮುಖ ಸುದ್ದಿ

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Covishield Vaccine: ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

VISTARANEWS.COM


on

Covishield Vaccine
Koo

ಹೊಸದಿಲ್ಲಿ: ಕೊರೊನಾ (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ.

ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಪ್ರಕರಣದ ಮೊದಲ ದೂರುದಾರರಾದ ಜೇಮೀ ಸ್ಕಾಟ್ ಅವರು ಏಪ್ರಿಲ್ 2021ರಲ್ಲಿ ಲಸಿಕೆಯನ್ನು ಪಡೆದಿದ್ದೇನೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ನಂತರ ಶಾಶ್ವತ ಮಿದುಳಿನ ಗಾಯಕ್ಕೆ ಕಾರಣವಾಯಿತು. ಇದು ಮೆದುಳು ಚುರುಕಾಗಿರುವುದನ್ನು ತಡೆಯಿತು. ಆಸ್ಪತ್ರೆಯು ನಾನು ಸಾಯುತ್ತೇನೆ ಎಂದು ನನ್ನ ಹೆಂಡತಿಗೆ ಮೂರು ಬಾರಿ ಹೇಳಿದೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಟ್ರಾಜೆನೆಕಾ ಈ ಪ್ರಕರಣಗಳನ್ನು ವಿರೋಧಿಸಿದೆ. ಆದರೆ ಫೆಬ್ರವರಿಯಲ್ಲಿ ನ್ಯಾಯಾಲಯದ ದಾಖಲೆಗಳಲ್ಲಿ ಒಂದರಲ್ಲಿ “ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು” ಎಂದು ಹೇಳಿದೆ. TTS (ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್) ಮಾನವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುತ್ತದೆ.

“AZ ಲಸಿಕೆಯು ಬಹಳ ಅಪರೂಪದ ಸಂದರ್ಭಗಳಲ್ಲಿ TTSಗೆ ಕಾರಣವಾಗಬಹುದು ಎಂದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ. ಇದಲ್ಲದೆ, AZ ಲಸಿಕೆ (ಅಥವಾ ಯಾವುದೇ ಲಸಿಕೆ) ಅನುಪಸ್ಥಿತಿಯಲ್ಲಿ TTS ಸಹ ಸಂಭವಿಸಬಹುದು. ಯಾವುದೇ ವ್ಯಕ್ತಿಯಲ್ಲಿ ಅಸ್ವಸ್ಥತೆಯ ಕಾರಣವನ್ನು ತಜ್ಞರು ನೀಡುವ ಪುರಾವೆಗಳಿಂದ ದೃಢೀಕರಿಸಬೇಕಿದೆ” ಎಂದು ಅಸ್ಟ್ರಾಜೆನೆಕಾ ಹೇಳಿದೆ.

ಅಸ್ಟ್ರಾಜೆನೆಕಾ ಸ್ಕಾಟ್ಲೆಂಡ್‌ನಲ್ಲಿ ಈ ಕೇಸುಗಳನ್ನು ಎದುರಿಸುತ್ತಿದೆ. ಸಂತ್ರಸ್ತರಿಗೆ ಅದು ಪಾವತಿ ಮಾಡಬೇಕಾಗಬಹುದು. ಇತ್ತೀಚಿನ ಕಂಪನಿಯ ನಿಲುವು 2023ರ ಅದರ ನಿಲುವಿಗೆ ವಿರುದ್ಧವಾಗಿದೆ. ಅದರಲ್ಲಿ ಜೇಮೀ ಸ್ಕಾಟ್ ಅವರ ವಕೀಲರಿಗೆ “ಟಿಟಿಎಸ್ ಸಾಮಾನ್ಯ ಮಟ್ಟದಲ್ಲಿ ಲಸಿಕೆಯಿಂದ ಉಂಟಾಗುತ್ತದೆ ಎಂದು ನಾವು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿತ್ತು. ಲಸಿಕೆಯು “ದೋಷಯುಕ್ತ” ಮತ್ತು ಅದರ ಪರಿಣಾಮಕಾರಿತ್ವವು “ಅಗಾಧವಾಗಿ ಅತಿಯಾಗಿ ಹೇಳಲ್ಪಟ್ಟಿದೆ” ಎಂಬ ವಕೀಲರ ಮಾತುಗಳನ್ನು ಅಸ್ಟ್ರಾಜೆನೆಕಾ ನಿರಾಕರಿಸಿದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು.

ಇದನ್ನೂ ಓದಿ: Guarantee Scheme: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ಕೊಡಲೂ ಸರ್ಕಾರದಲ್ಲಿ ಹಣವಿಲ್ಲ?

Continue Reading

ದೇಶ

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Viral Video: ಅಪಾರ್ಟ್‌ಮೆಂಟ್‌ವೊಂದರ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ನಾಯಿಯೊಂದು ಡೆಡ್ಲಿ ಅಟ್ಯಾಕ್‌ ಮಾಡಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

VISTARANEWS.COM


on

Koo

ಉತ್ತರಪ್ರದೇಶ: ಕೆಲವು ದಿನಗಳ ಹಿಂದೆ ಪಿಟ್‌ಬುಲ್‌ ನಾಯಿ ದಾಳಿ(Viral Video)ಯಿಂದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಬೆನ್ನಲ್ಲೇ ಉತ್ತರಪ್ರದೇಶ(Uttar Pradesh)ದ ಗಾಜಿಯಾಬಾದ್‌ನಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌(Apartment)ವೊಂದರ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌(German Shepherd) ನಾಯಿಯೊಂದು ಡೆಡ್ಲಿ ಅಟ್ಯಾಕ್‌(Dog attack) ಮಾಡಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್‌ ಆಗಿದೆ

ಏನಿದು ಘಟನೆ?

ಅಂಜರಾ ಇಂಟಿಗ್ರಿಟಿ ಸೊಸೈಟಿ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಸೈಕಲ್‌ನಲ್ಲಿ ಆಟ ಆಡುತ್ತಿದ್ದ ಆರು ವರ್ಷದ ಬಾಲಕಿ ಮೇಲೆ ಅಲ್ಲೇ ಇದ್ದ ಜರ್ಮನ್‌ ಶಫರ್ಡ್‌ ನಾಯಿ ಏಕಾಏಕಿ ದಾಳಿ ನಡೆಸಿ, ಆಕೆ ತೋಳನ್ನು ಕಚ್ಚಿದೆ. ತಕ್ಷಣ ಅಲ್ಲೇ ಇದ್ದ ಬಾಲಕಿಯ ತಾಯಿ ಓದಿ ಬಂದು ನಾಯಿಯನ್ನು ಓಡಿಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ಆಕೆಯ ಸಹಾಯಕ್ಕೆ ಬರುತ್ತಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇನ್ನು ಸ್ಥಳದಲ್ಲಿ ಅನೇಕ ಮಕ್ಕಳು ಆಟವಾಡುತ್ತಿರುರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆ ಬೆನ್ನಲ್ಲೇ ಬಾಲಕಿ ತಾಯಿ ನಮಿತಾ ಚೌಹಾಣ್‌ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಾಯಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಯಿಯನ್ನು ಹೊರ ಕರೆತರುವ ವೇಳೆ ಅದರ ಬಾಯಿಗೆ ಯಾವುದೇ ಕವಚ ಹಾಕಿರಲಿಲ್ಲ. ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೇ ಅಪಾರ್ಟ್‌ಮೆಂಟ್‌ನಲ್ಲಿ ಆ ನಾಯಿಯನ್ನು ಸಾಕದಂತೆ ನಿಯಮ ಜಾರಿಗೊಳಿಸಬೇಕು ಎಂದು ನಮಿತಾ ಆಗ್ರಹಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಎರಡು ವಾಗಳ ಹಿಂದೆ ಬಾಲಕನೊಬ್ಬನ ಮೇಲೆ ಪಿಟ್‌ಬುಲ್‌ ತಳಿಯ ನಾಯಿಯೊಂದು ದಾಳಿ ನಡೆಸಿದ್ದ ವಿಡಿಯೋ ವೈರಲ್‌ ಆಗಿತ್ತು. 15 ವರ್ಷದ ಅಲ್ತಾಫ್‌ ಎಂಬ ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ ಪಿಟ್‌ಬುಲ್ ದಾಳಿ ನಡೆಸುತ್ತದೆ. ಇನ್ನೇನು ತನ್ನ ಮನೆಯ ಗೇಟ್‌ ತೆರೆಯಬೇಕು ಎನ್ನುವಷ್ಟರಲ್ಲಿ ಆತನ ಮೇಲೆ ಈ ಆಕ್ರಮಣ ನಡೆದಿತ್ತು. ಅನಿರೀಕ್ಷಿತ ಆಘಾತದಿಂದ ಆತ ನಿಯಂತ್ರಣ ತಪ್ಪಿ ನೆಲದ ಮೇಲೆ ಬೀಳುತ್ತಾನೆ. ಜನರು ನೋಡುತ್ತಿದ್ದರೂ ಭಯದಿಂದಾಗಿ ಯಾರೂ ಆತನನ್ನು ರಕ್ಷಿಸಲು ಮುಂದೆ ಬರಲಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದರೂ ಅದು ಶಾಂತವಾಗಲಿಲ್ಲ

ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಅಲ್ತಾಫ್‌ ಕೊನೆಗೂ ಅದರಿಂದ ತಪ್ಪಿಸಿಕೊಂಡು ಗೇಟ್‌ ಬಳಿಗೆ ಓಡುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಪಿಟ್‌ಬುಲ್‌ ಕೂಡ ಬರುತ್ತದೆ. ನಾಯಿ ಮತ್ತೆ ದಾಳಿ ಮಾಡುತ್ತದೆ. ಆಗಲೇ ಅಲ್ಲಿದ್ದ ಬೀದಿ ನಾಯಿಗಳು ತಕ್ಷಣ ಧಾವಿಸಿ ಬಂದು ಪಿಟ್​ಬುಲ್‌ ಅನ್ನು ಕಚ್ಚಿ ಎಳೆದು ಹೊರ ಹಾಕುತ್ತವೆ. ಇದರಿಂದ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ತೆರಳಿತ್ತಾನೆ. ಈ ಮಧ್ಯೆ ಪಿಟ್‌ಬುಲ್‌ನನ್ನು ಓಡಿಸಲು ನೆರೆ ಮನೆಯ ಯುವಕನೊಬ್ಬ ಕೋಲು ಹಿಡಿದು ಮುಂದೆ ಬರುತ್ತಾನೆ. ಬಾಲಕ ತಪ್ಪಿಸಿಕೊಂಡ ರೋಷದಲ್ಲಿ ಅದು ಆತನ ಮೇಲೆ ಎರಗಲು ಮುಂದಾಗುತ್ತದೆ. ಅದೃಷ್ಟವಶಾತ್‌ ಆತ ತಪ್ಪಿಸಿಕೊಂಡು ಮನೆಯೊಳಗೆ ಸೇರಿ ಬಾಗಿಲು ಹಾಕಿಕೊಂಡು ಬಚಾವಾಗುತ್ತಾನೆ.

ಇದನ್ನೂ ಓದಿ:Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

ಕೆಲವು ದಿನಗಳ ಹಿಂದೆಯಷ್ಟೇ ಪಿಟ್‌ಬುಲ್‌ ಹೊಂದಿದ್ದ ಕುಟುಂಬ ಗಾಜಿಯಾಬಾದ್‌ಗೆ ಆಗಮಿಸಿತ್ತು. ಸದ್ಯ ಈ ನಾಯಿಯನ್ನು ಮುನ್ಸಿಪಲ್ ಕಾರ್ಪೊರೇಷನ್ ವಶಪಡಿಸಿಕೊಂಡಿದೆ. ಈ ರೀತಿಯ ನಾಯಿಯನ್ನು ಸಾಕುವುದಕ್ಕೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೂ ಮನೆಯವರು ನಮ್ಮ ಮಾತನ್ನು ಕೇಳಿರಲಿಲ್ಲ ಎಂದು ನೆರೆಮನೆಯವರು ತಿಳಿಸಿದ್ದಾರೆ.

Continue Reading

ಆರೋಗ್ಯ

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Ayushman Bharat Diwas: ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಗುರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ 30 ರಂದು ಭಾರತವು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸುತ್ತದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಈ ಯೋಜನೆಯಿಂದ ಭಾರತ ಸರ್ಕಾರವು ಸುಮಾರು 50 ಕೋಟಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗ್ಗದ ಮತ್ತು ಸುಲಭವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ.

VISTARANEWS.COM


on

By

Ayushman Bharat Diwas
Koo

ಕೋಟ್ಯಂತರ ಭಾರತೀಯರಿಗೆ(indians) ಉಚಿತ ಆರೋಗ್ಯ ಸೇವೆ (free health service) ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ ಕೊನೆಯ ದಿನವಾದ ಏಪ್ರಿಲ್ 30ರಂದು ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas) ಆಚರಿಸಲಾಗುತ್ತದೆ.

ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಅದರ ಗುರಿ ಏನು ಎಂಬುದರ ಕುರಿತು ಜನರಿಗೆ ತಿಳಿಸಲು ಈ ದಿನ ಆಚರಣೆ ನಡೆಸಲು ಕರೆ ನೀಡಿದೆ. ಈ ಯೋಜನೆಯೊಂದಿಗೆ ಭಾರತ ಸರ್ಕಾರವು ಪ್ರತಿಯೊಬ್ಬರೂ ಸರ್ಕಾರದಿಂದ ನಿಭಾಯಿಸಲ್ಪಡುವ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಬಯಸುತ್ತದೆ.

ಬಡವರಿಗೆ ಆರೋಗ್ಯ ರಕ್ಷಣೆ ಒದಗಿಸಲು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿದ್ದು ಈ ಮೂಲಕ ಸರ್ಕಾರಿ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯು ಲಕ್ಷಾಂತರ ನಾಗರಿಕರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಉಚಿತವಾಗಿ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ:  Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?


ಇದು ಜಾರಿಯಾಗಿದ್ದು ಯಾವಾಗ?

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಘೋಷಿಸಿದರು. ಇದು ಎರಡು ಮುಖ್ಯ ಸ್ತಂಭಗಳನ್ನು ಹೊಂದಿದೆ.

1. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWCs)
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಜನರ ಮನೆಗಳಿಗೆ ಹತ್ತಿರ ತರುವ ಗುರಿಯನ್ನು ಹೊಂದಿವೆ.

2. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY)
ಇದು ಆರೋಗ್ಯ ವಿಮಾ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ನಗದು ರಹಿತ ಮತ್ತು ಕೈಗೆಟುಕುವ ವೈದ್ಯಕೀಯ ರಕ್ಷಣೆಯನ್ನು ನೀಡುವ ಉದ್ದೇಶ ಹೊಂದಿದೆ.


ಆಯುಷ್ಮಾನ್ ಭಾರತ್ ದಿವಸ್‌ನ ಮಹತ್ವ

ಆಯುಷ್ಮಾನ್ ಭಾರತ್ ದಿವಸ್ ಹಲವಾರು ಉದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ:
1. ಆಯುಷ್ಮಾನ್ ಭಾರತ್ ಯೋಜನೆಯ ಗುರಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಆಯುಷ್ಮಾನ್ ಭಾರತ್ ದಿವಸ್ ಅನ್ನು ಆಚರಿಸಲಾಗುತ್ತದೆ.
2. ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಮಾಡಿದ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ಭಾರತದಲ್ಲಿ 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
3. ಅರ್ಹ ಕುಟುಂಬಗಳು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.
4. ಸರ್ಕಾರವು ಆಯುಷ್ಮಾನ್ ಮಿತ್ರ ಎಂಬ ಹೊಸ ಉದ್ಯೋಗವನ್ನು ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಸಿದೆ. ಇದಕ್ಕಾಗಿ ಸಾಕಷ್ಟು ಯುವಕರನ್ನು ನೇಮಿಸಿಕೊಳ್ಳಲಾಗಿದೆ.
5. ಆಯುಷ್ಮಾನ್ ಭಾರತ್ ಯೋಜನೆಯಡಿ ಯುವಜನರಿಗೆ ಉದ್ಯೋಗ ನೀಡಲು ಆಯುಷ್ಮಾನ್ ಮಿತ್ರರನ್ನು ಆಸ್ಪತ್ರೆಗಳು ನೇಮಿಸಿಕೊಂಡಿವೆ.
6. ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಉತ್ತಮ ಆರೋಗ್ಯ ವಿಮಾ ಯೋಜನೆಯ ಅಗತ್ಯವಿದೆ.

Continue Reading
Advertisement
Rohit Sharma Birthday
ಕ್ರೀಡೆ11 mins ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ17 mins ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Baba Ramdev
ದೇಶ22 mins ago

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

CET exam 2024
ಪ್ರಮುಖ ಸುದ್ದಿ42 mins ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Covishield Vaccine
ಪ್ರಮುಖ ಸುದ್ದಿ1 hour ago

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ದೇಶ1 hour ago

Viral Video: ಆರಾಮಾಗಿ ಆಟವಾಡ್ತಿದ್ದ ಬಾಲಕಿ ಮೇಲೆ ಜರ್ಮನ್‌ ಶೆಫರ್ಡ್‌ ಡೆಡ್ಲಿ ಅಟ್ಯಾಕ್‌!

Ayushman Bharat Diwas
ಆರೋಗ್ಯ2 hours ago

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Onion Benefits
ಆರೋಗ್ಯ2 hours ago

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

rajamarga column srikant bolla
ಅಂಕಣ2 hours ago

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

Karnataka weather
ಕರ್ನಾಟಕ2 hours ago

Karnataka Weather: ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ; ಮೇ 3ರವರೆಗೆ ಹೆಚ್ಚಿರಲಿದೆ ಶಾಖದ ಅಲೆಗಳ ತೀವ್ರತೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ4 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202420 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202421 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌