Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್‌ - Vistara News

ಕೋರ್ಟ್

Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್‌

ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ (V Senthil Balaji) ಅವರಿಗೆ ವೈದ್ಯಕೀಯ ಜಾಮೀನು (Medical bail) ನೀಡಲು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ನಿರಾಕರಿಸಿದೆ.

VISTARANEWS.COM


on

v senthil balaji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement directorate) ಬಂಧನಕ್ಕೊಳಗಾಗಿದ್ದ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ (V Senthil Balaji) ಅವರಿಗೆ ವೈದ್ಯಕೀಯ ಜಾಮೀನು (Medical bail) ನೀಡಲು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ನಿರಾಕರಿಸಿದೆ.

“ನಿಮ್ಮ ಅನಾರೋಗ್ಯವು ಗಂಭೀರ ಅಥವಾ ಜೀವಕ್ಕೆ ಅಪಾಯಕಾರಿ ಎಂದು ತೋರುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಎಸ್‌.ಸಿ ಶರ್ಮಾ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಬಾಲಾಜಿ ಅವರ ವೈದ್ಯಕೀಯ ಸ್ಥಿತಿಯು “ಜೀವ ಬೆದರಿಕೆ” ಅಥವಾ “ಗಂಭೀರ” ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗದ ಕಾರಣ ವೈದ್ಯಕೀಯ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತು.

ನ್ಯಾಯಾಲಯವು ಸೂಕ್ತ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯಲು ಬಾಲಾಜಿಗೆ ಅನುಮತಿ ನೀಡಿದೆ. ವೈದ್ಯಕೀಯ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಮಾಡಿದ ಅವಲೋಕನಗಳು ಇದರಲ್ಲಿ ಅನ್ವಯವಾಗುವುದಿಲ್ಲ. ಅರ್ಜಿದಾರರ ವಿರುದ್ಧ ಈ ಆದೇಶದಲ್ಲಿ ಮಾಡಿದ ಯಾವುದೇ ಅವಲೋಕನವು ಸಾಮಾನ್ಯ ಜಾಮೀನು ಅರ್ಜಿಯನ್ನು ಸಲ್ಲಿಸುವಲ್ಲಿ ಅರ್ಜಿದಾರರಿಗೆ ಅಡ್ಡಿಯಾಗುವುದಿಲ್ಲ ಎಂದು ಪೀಠ ಹೇಳಿದೆ.

ಈ ಹಿಂದೆ ಬಾಲಾಜಿ ಅವರ ವೈದ್ಯಕೀಯ ವರದಿಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಬಾಲಾಜಿ ಅವರ ಆರೋಗ್ಯ ವರದಿಯಿಂದ ಇದು ಗಂಭೀರ ವೈದ್ಯಕೀಯ ಸ್ಥಿತಿಯಂತೆ ತೋರುತ್ತಿಲ್ಲ. ಜಾಮೀನಿನ ಮೇಲೆ ಬಿಡುಗಡೆಯಾದರೆ ಬೇಕಾದ ಕಾಳಜಿ ವಹಿಸಬಹುದು ಎಂದು ಹೇಳಿತ್ತು. ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ, ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿ ಬಾಲಾಜಿ ಅವರನ್ನು ಜೂನ್ 14ರಂದು ಇಡಿ ಬಂಧಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

NEET-UG Row: ನೀಟ್‌ ಕೌನ್ಸೆಲಿಂಗ್‌ಗೆ ತಡೆ ಇಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್

NEET-UG Row: ಕಳೆದ ವಾರ, ನೀಟ್‌ ಪರೀಕ್ಷೆಯಲ್ಲಿ ಆಗಿರಬುದಾದ ಸಣ್ಣ ನಿರ್ಲಕ್ಷ್ಯವನ್ನು ಸಹ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗುಡುಗಿತ್ತು. ಆದರೆ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತ್ತು. “ಯಾರದಾದರೂ ಕಡೆಯಿಂದ 0.001% ನಿರ್ಲಕ್ಷ್ಯವಿದ್ದರೆ ಸದ ಅದನ್ನು ಸಂಪೂರ್ಣವಾಗಿ ಬಗೆಹರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

VISTARANEWS.COM


on

NEET UG row Result 2024 supreme court
Koo

ಹೊಸದಿಲ್ಲಿ : ವೈದ್ಯಕೀಯ ಪ್ರವೇಶ ಪರೀಕ್ಷೆಯ (NEET-UG 2024) ನಡಾವಳಿಯ ಅಕ್ರಮಗಳ ಕುರಿತು ಎದ್ದಿರುವ ಕೋಲಾಹಲದ (NEET-UG Row) ನಡುವೆ, NEET-UG 2024 ಕೌನ್ಸೆಲಿಂಗ್‌ಗೆ (NEET-UG 2024 counselling) ತಡೆ ನೀಡಲು ಸುಪ್ರೀಂ ಕೋರ್ಟ್ (Supreme Court) ಮತ್ತೊಮ್ಮೆ ನಿರಾಕರಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (NTA) ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬಾಕಿ ಉಳಿದಿರುವ ಅರ್ಜಿಗಳ ಜೊತೆಗೆ ಹೊಸ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಟ್ಯಾಗ್ ಮಾಡಿ ಜುಲೈ 8ರಂದು ವಿಚಾರಣೆಗೆ ಮುಂದೂಡಿದೆ. ಗುರುವಾರ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2024ರ ನಡವಳಿಯನ್ನು ಪ್ರಶ್ನಿಸಿ, ಪೇಪರ್ ಸೋರಿಕೆ ಮತ್ತು ಗ್ರೇಸ್ ಮಾರ್ಕ್‌ಗಳನ್ನು ಒಳಗೊಂಡಿರುವ ಅವ್ಯವಹಾರಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿ ಮೂರು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಎನ್‌ಇಇಟಿ-ಯುಜಿ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿದ ವರ್ಗಾವಣೆ ಅರ್ಜಿಗಳು ಮತ್ತು ಇದೇ ರೀತಿಯ ಕುಂದುಕೊರತೆಗಳನ್ನು ಎತ್ತುವ ಇತರ 11 ಅರ್ಜಿಗಳನ್ನೂ ಸೇರಿಸಿ ನೋಟಿಸ್ ಜಾರಿ ಮಾಡಿದೆ. ಜುಲೈ 8 ರಂದು ವಿಚಾರಣೆಗೆ ಬರಲಿರುವ ಇದೇ ವಿಷಯದ ಕುರಿತು ಬಾಕಿ ಉಳಿದಿರುವ ಪ್ರಕರಣಗಳ ಜೊತೆಗೆ ಈ ವಿಷಯವನ್ನು ಸೇರಿಸಲಾಗಿದೆ.

ಕಳೆದ ವಾರ, ನೀಟ್‌ ಪರೀಕ್ಷೆಯಲ್ಲಿ ಆಗಿರಬುದಾದ ಸಣ್ಣ ನಿರ್ಲಕ್ಷ್ಯವನ್ನು ಸಹ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗುಡುಗಿತ್ತು. ಆದರೆ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತ್ತು. “ಯಾರದಾದರೂ ಕಡೆಯಿಂದ 0.001% ನಿರ್ಲಕ್ಷ್ಯವಿದ್ದರೆ ಸದ ಅದನ್ನು ಸಂಪೂರ್ಣವಾಗಿ ಬಗೆಹರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ನೀಟ್‌ ಪರೀಕ್ಷೆಯನ್ನು ಮೇ 5ರಂದು ನಡೆಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಫಲಿತಾಂಶಗಳು ಬಂದವು. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾದ ನೀಟ್ ಪರೀಕ್ಷೆಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದರು. ನಂತರ, ಪ್ರವೇಶ ಪರೀಕ್ಷೆಯ ನಡವಳಿಯಲ್ಲಿ ಅಕ್ರಮಗಳಾಗಿವೆ ಎಂದು ವೈದ್ಯಕೀಯ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳ ಬಗ್ಗೆಯೂ ಕೋಲಾಹಲ ಉಂಟಾಗಿತ್ತು. ಪ್ರತಿಭಟನೆಯ ನಂತರ, NTA 1500ಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳಿಗೆ ಪರೀಕ್ಷೆಯನ್ನು ಮರುಪಡೆಯಲು ಕೇಳಿಕೊಂಡಿತು.

ಏತನ್ಮಧ್ಯೆ, ಯುಜಿಸಿ-ನೆಟ್ ಪೇಪರ್ ಇಂಟರ್‌ನೆಟ್‌ನಲ್ಲಿ ಸೋರಿಕೆಯಾದ ನಂತರ ಪರೀಕ್ಷೆ ರದ್ದತಿಗೆ ಕಾರಣವಾಯಿತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎನ್‌ಟಿಎಯಲ್ಲಿ ಸುಧಾರಣೆಗಳ ಕುರಿತು ಶಿಫಾರಸುಗಳನ್ನು ಮಾಡಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

“ಎನ್‌ಟಿಎಯಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಿದೆ. ಸಮಿತಿಯು ಎನ್‌ಟಿಎ, ಅದರ ರಚನೆ, ಕಾರ್ಯನಿರ್ವಹಣೆ, ಪರೀಕ್ಷಾ ಪ್ರಕ್ರಿಯೆ, ಪಾರದರ್ಶಕತೆ ಮತ್ತು ಡೇಟಾ ಭದ್ರತಾ ಪ್ರೋಟೋಕಾಲ್‌ಗಳನ್ನು ಇನ್ನಷ್ಟು ಸುಧಾರಿಸಲು ಶಿಫಾರಸುಗಳನ್ನು ಮಾಡುವ ನಿರೀಕ್ಷೆಯಿದೆ. ಶೂನ್ಯ-ದೋಷ ಪರೀಕ್ಷೆಯು ನಮ್ಮ ಬದ್ಧತೆ. ಸಮಿತಿಯು ಜಾಗತಿಕ ತಜ್ಞರನ್ನೂ ಹೊಂದಿರುತ್ತದೆ” ಎಂದು ಅವರು ಹೇಳಿದರು.

ಏನಿದು ಹಗರಣ?

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.

ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.

ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.

Continue Reading

ಕರ್ನಾಟಕ

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Darshan Arrested: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಾತ್ರ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ದರ್ಶನ್‌ ಸೇರಿ ನಾಲ್ವರನ್ನೇ ಕಸ್ಟಡಿಗೆ ಪಡೆದಿರುವ ಪೊಲೀಸರು ಯಾವೆಲ್ಲ ತನಿಖೆ ನಡೆಸಲಿದ್ದಾರೆ. ಕೇಸ್‌ನಲ್ಲಿ ಇನ್ನೂ ಯಾವೆಲ್ಲ ರೀತಿಯ ತನಿಖೆ ಬಾಕಿ ಇದೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Darshan Arrested
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಇನ್ನು ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡ ಸೇರಿ ಒಟ್ಟು 11 ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನು ನ್ಯಾಯಾಲಯಕ್ಕೆ ಪೊಲೀಸರು ಎರಡು ರಿಮ್ಯಾಂಡ್‌ ಅರ್ಜಿಗಳನ್ನು ಸಲ್ಲಿಸಿತ್ತು. ದರ್ಶನ್‌ ಸೇರಿ ಆರು ಆರೋಪಿಗಳನ್ನು ಮಾತ್ರ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂಬುದಾಗಿ ಕೋರಿತ್ತು. ಈಗ ಇಷ್ಟೇ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದು ಏಕೆ ಎಂಬುದೇ ರೋಚಕವಾಗಿದೆ.

ಹೌದು, ನಟ ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್‌ನನ್ನು ನ್ಯಾಯಾಲಯವು 2 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಹಣ ಪಡೆದಿದ್ದೇ ಎ 14 ಪ್ರದೋಷ್.‌ ದರ್ಶನ್‌ ಪರಮಾಪ್ತನಾಗಿರುವ ಈತನು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾನೆ. ಇನ್ನು, ಎ 10 ವಿನಯ್ ಸ್ಟೋನಿ ಬ್ರೂಕ್‌ ರೆಸ್ಟೋರೆಸ್ಟ್‌ನ ಮಾಲೀಕನಾಗಿದ್ದಾನೆ. ವಿನಯ್‌ ಮಾವ ಪಟ್ಟಣಗೆರೆ ಜಯಣ್ಣ ಅವರ ಮಾಲೀಕತ್ವದ ಶೆಡ್‌ನಲ್ಲೇ ಕೊಲೆ ನಡೆದಿದೆ. ಮತ್ತೊಂದೆಡೆ, ರೇಣುಕಾಸ್ವಾಮಿಯ ಮೊಬೈಲ್‌ಅನ್ನು ಧನರಾಜ್‌ ಬಿಸಾಡಿದ್ದಾನೆ. ಹಾಗಾಗಿ, ಪೊಲೀಸರು ನಾಲ್ವರನ್ನು ಕಸ್ಟಡಿಗೆ ಪಡೆದಿದ್ದಾರೆ.

ಪೊಲೀಸರ ಪರವಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್‌, “ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ರೇಣುಕಾಸ್ವಾಮಿಯ ಮೊಬೈಲ್‌ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ ವರದಿ ಬರಬೇಕು. ಮೃತ ವ್ಯಕ್ತಿಯ ಒಳಾಂಗಗಳ ಎಫ್‌ಎಸ್‌ಎಲ್‌ ವರದಿ, ಆರೋಪಿಗಳ ಎಫ್‌ಎಸ್‌ಎಲ್‌ ವರದಿ ಬರಬೇಕು. ಹಾಗಾಗಿ, ದರ್ಶನ್‌ ಸೇರಿ ಕೆಲ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂಬುದಾಗಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾಯಾಧೀಶ ವಿಶ್ವನಾಥ್‌ ಸಿ. ಗೌಡರ್‌ ಅವರು ನಾಲ್ವರನ್ನು ಪೊಲೀಸ್‌ ಕಸ್ಟಡಿಗೆ ವಹಿಸಿದರು. ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲ್‌ಗಳು, ಸ್ಥಳ ಮಹಜರು ವೇಳೆ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.

ಪವಿತ್ರಾ ಗೌಡ ಸೇರಿ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗುತ್ತದೆ. ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ , ರವಿ ಕಾರ್ತಿಕ್‌ ಜೈಲುಪಾಲಾಗಲಿದ್ದಾರೆ. ಜೂನ್‌ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಅದೇ ದಿನ ಪವಿತ್ರಾ ಗೌಡರನ್ನೂ ಬಂಧಿಸಲಾಗಿತ್ತು.

ಇದನ್ನೂ ಓದಿ: Renuka Swamy Murder : ನಟ ದರ್ಶನ್ ಹಲ್ಲೆ ಮಾಡುವುದನ್ನು ವಿಡಿಯೊ ಮಾಡಿದ್ದ ಮೂವರು ಅರೆಸ್ಟ್‌; ಸಿಕ್ಕೇ ಬಿಡ್ತಾ ದೊಡ್ಡ ಸಾಕ್ಷಿ!

Continue Reading

ಮೈಸೂರು

Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ

Mysuru News : ಪತ್ನಿಯ ಶೀಲ ಶಂಕಿಸಿದ ಪಾಪಿ ಪತಿಯೊಬ್ಬ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿದ್ದ. ಗಂಭೀರ ಗಾಯಗೊಂಡಿದ್ದ ಮಹಿಳೆ ನರಳಾಡಿ (Murder case) ಮೃತಪಟ್ಟಿದ್ದಳು. ಇದೀಗ ಕೃತ್ಯ ನಡೆಸಿದ ಆರೋಪಿಗೆ 4 ವರ್ಷದ ನಂತರ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

VISTARANEWS.COM


on

By

Mysuru News
ಸಾಂದರ್ಭಿಕ ಚಿತ್ರ
Koo

ಮೈಸೂರು: ಪತ್ನಿ ಶೀಲ ಶಂಕಿಸಿ ಕೊಲೆ (Murder Case) ಮಾಡಿದ (Mysuru News) ಆರೋಪಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಮೈಸೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ರವಿ ಜೀವಾವಧಿ ಶಿಕ್ಷೆಗೆ ಒಳಗಾದವನು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ನಿವಾಸಿಯಾದ ರವಿ ಎಂಬಾತ ಪತ್ನಿ ಅಮುದಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ.

ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ರವಿಗೆ ಐಪಿಸಿ ಸೆಕ್ಷನ್ 498(ಎ ) ಪ್ರಕಾರ 2 ವರ್ಷ ಕಠಿಣ ಶಿಕ್ಷೆ ಒಂದು ಸಾವಿರ ದಂಡ ಹಾಗೂ ಐಪಿಸಿ ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ಹಾಕಿ ಆದೇಶಿಸಿದೆ. ಮೈಸೂರು 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ತೀರ್ಪು ನೀಡಿದ್ದಾರೆ.

ಮಕ್ಕಳಿಬ್ಬರು ಅನಾಥ

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇಬೂರು ಗ್ರಾಮದ ಸುಬ್ಬ ಅಲಿಯಾಸ್‌ ರವಿ 10 ವರ್ಷದ ಹಿಂದೆ ನಂಜನಗೂಡು ಪಟ್ಟಣದ ರಾಜಾಜಿ ಕಾಲೋನಿಯ ನಂಜುಂಡ ಅವರ ಮಗಳು ಅಮುದಾರವರನ್ನು ಮದುವೆ ಆಗಿದ್ದ. ಈ ದಂಪತಿಗೆ 9 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು.

ಮದುವೆಯಾದ 2-3 ವರ್ಷಕ್ಕೆ ಆರೋಪಿ ರವಿ ತನ್ನ ವಾರೆಸೆ ಶುರು ಮಾಡಿದ್ದ. ಅಮುದಾಳಿಗೆ ನೀನು ಬೇರೆಯವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಶೀಲ ಶಂಕಿಸಿ ಪ್ರತಿದಿನ ಕುಡಿದು ಬಂದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ.

ಹೀಗೆ ಕಳೆದ 2020ರ ಡಿಸೆಂಬರ್‌ 6ರಂದು ಸಂಜೆ 4-30ರ ಸುಮಾರಿಗೆ ಕುಡಿದು ಬಂದ ರವಿ, ಅಮುದಾಳೊಂದಿಗೆ ಜಗಳ ತೆಗೆದಿದ್ದ. ಈ ವೇಳೆ ರವಿಗೆ ಊಟ ಬಡಿಸುತ್ತಿದ್ದಾಗ ಅಮುದಾ ಮೇಲೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಆಮುದಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಮುದಾ ಮೃತಪಟ್ಟಿದ್ದಳು.

ಇದನ್ನೂ ಓದಿ: Hassan Shoot Out : ಹಾಸನದಲ್ಲಿ ಹಾಡಹಗಲೇ ಗುಂಡಿನ ದಾಳಿ; ಇಬ್ಬರ ಹತ್ಯೆಗೈದ ಪಾತಕಿಗಳು!

ಮೃತಳ ಸಹೋದರ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ರವಿ ವಿರುದ್ಧ ಕಲಂ 498(ಎ), 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಮಾಡಿ ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಲಕ್ಷ್ಮೀಕಾಂತ ತಳವಾರ್‌ರವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯು ಅಪರಾಧ ಎಸಗಿರುವುದು ಸಾಬೀತಾಗಿದೆ. ಹೀಗಾಗಿ ಆರೋಪಿಗೆ ಕಲಂ 498(ಎ) ಐಪಿಸಿ ಅಡಿಯ ಅಪರಾಧಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು ರೂ.1.000/- ದಂಡವನ್ನು ವಿಧಿಸಿದ್ದು ಮತ್ತು ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ರೂ.5,000/- ದಂಡವನ್ನು ವಿಧಿಸಿ ತೀರ್ಪು ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

BS Yediyurappa: ಪೋಕ್ಸೊ ಕೇಸ್;‌ ಮಾಜಿ ಸಿಎಂಗೇ ಹೀಗಾದರೆ ಜನರ ಗತಿ ಏನು? ಸರ್ಕಾರಕ್ಕೆ ಕೋರ್ಟ್‌ ಚಾಟಿ!

BS Yediyurappa: ಬಿ.ಎಸ್.ಯಡಿಯೂರಪ್ಪ ಅವರು ಜೂನ್‌ 17ರಂದು ವಿಚಾರಣೆಗೆ ಹಾಜರಾಗಲಾಗುವುದು ಎಂದು ತಿಳಿಸಿದರೂ ಕೋರ್ಟ್‌ಗೆ ಹೋಗಿ ಅರೆಸ್ಟ್‌ ವಾರಂಟ್‌ ತರುವ ದರ್ದು ಏನಿತ್ತು ಎಂಬುದಾಗಿ ಸಿಐಡಿ ಪರ ವಾದ ಮಂಡಿಸಿದ ಎಜಿ ಶಶಿಕಿರಣ್‌ ಶೆಟ್ಟಿ ಅವರಿಗೆ ಕೋರ್ಟ್‌ ಚಾಟಿ ಬೀಸಿತು. ಹಾಗೆಯೇ, ಮಾಜಿ ಸಿಎಂಗೇ ಹೀಗಾದರೆ, ಸಾಮಾನ್ಯ ಜನರ ಗತಿ ಏನು ಎಂದು ಕೂಡ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಕಳವಳ ವ್ಯಕ್ತಪಡಿಸಿತು.

VISTARANEWS.COM


on

BS Yediyurappa
Koo

ಬೆಂಗಳೂರು: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೊ ಕೇಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್‌ (Karnataka High Court) ಬಿಗ್‌ ರಿಲೀಫ್‌ ನೀಡಿದೆ. ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸಬಾರದು ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಇದರ ಮಧ್ಯೆಯೇ, ವಿಚಾರಣೆ ವೇಳೆ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿದೆ. “ಒಬ್ಬ ಮಾಜಿ ಮುಖ್ಯಮಂತ್ರಿಯನ್ನೇ ಈ ರೀತಿ ನಡೆಸಿಕೊಂಡರೆ, ಸಾಮಾನ್ಯ ಜನರ ಪಾಡೇನು” ಎಂದು ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಅಡ್ವೊಕೇಟ್‌ ಜನರಲ್‌ (AG) ಶಶಿಕಿರಣ್‌ ಶೆಟ್ಟಿ ಅವರು ಸಿಐಡಿ ಪರ ವಾದ ಮಂಡಿಸಿದರು. “ಜೂನ್‌ 11ರಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಜೂನ್‌ 12ರಂದು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ ನೀಡಿದ್ದಾರೆ. ಹೀಗಿದ್ದರೂ, ಯಡಿಯೂರಪ್ಪ ಅವರು ಸಂಜೆಗೆ ವಿಮಾನದ ಟಿಕೆಟ್‌ ಬುಕ್‌ ಮಾಡಿಕೊಂಡು ದೆಹಲಿಗೆ ತೆರಳಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದೇ ವೇಳೆ ನ್ಯಾಯಾಲಯವು, “ಬಿ.ಎಸ್.ಯಡಿಯೂರಪ್ಪ ಅವರು ಜೂನ್‌ 12ರ ಬದಲು, ಜೂನ್‌ 17ರಂದು ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಹೀಗಿದ್ದರೂ, ಕೋರ್ಟ್‌ಗೆ ಹೋಗಿ ಅರೆಸ್ಟ್‌ ವಾರೆಂಟ್‌ ತರುವ ಅವಶ್ಯಕತೆ ಏನಿತ್ತು? ಅವರು ಒಬ್ಬ ಮಾಜಿ ಮುಖ್ಯಮಂತ್ರಿ. ಅವರೇನೂ ದೇಶ ಬಿಟ್ಟು ಓಡಿ ಹೋಗುತ್ತಿದ್ದರೇ? ನಾಲ್ಕೈದು ದಿನ ತಡವಾಗಿ ವಿಚಾರಣೆಗೆ ಹಾಜರಾದರೆ ಆಕಾಶವೇ ಕಳಚಿ ಬೀಳುತ್ತಿತ್ತೇ? ಒಬ್ಬ ಮಾಜಿ ಮುಖ್ಯಮಂತ್ರಿಗೇ ಹೀಗಾದರೆ, ಸಾಮಾನ್ಯ ಜನರ ಗತಿ ಏನು” ಎಂದು ಚಾಟಿ ಬೀಸಿತು.

ಬಳಿಕ, ಯಡಿಯೂರಪ್ಪ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸಬಾರದು ಎಂದು ನ್ಯಾ.ಕೃಷ್ಣ ದೀಕ್ಷಿತ್‌ ಅವರು ಆದೇಶ ಹೊರಡಿಸಿದರು. ಹಾಗೆಯೇ, ಜೂನ್‌ 17ರಂದು ತನಿಖಾಧಿಕಾರಿ ಎದುರು ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಎರಡು ವಾರ ಮುಂದೂಡಿದರು.

ಏನಿದು ಪ್ರಕರಣ?

2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್‌ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್‌ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್‌ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್‌ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಇದನ್ನೂ ಓದಿ: BS Yediyurappa: ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪಗೆ ಬಿಗ್‌ ರಿಲೀಫ್‌; ಬಂಧಿಸದಂತೆ ಕೋರ್ಟ್‌ ಆದೇಶ

Continue Reading
Advertisement
Kalki 2898 AD Final Trailer Released
ಕರ್ನಾಟಕ1 hour ago

Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್‌ ಟ್ರೇಲರ್‌ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್

Sonakshi Sinha
ಬಾಲಿವುಡ್2 hours ago

Sonakshi Sinha: ಸೋನಾಕ್ಷಿ ಸಿನ್ಹಾ-ಜಹೀರ್‌ ಇಕ್ಬಾಲ್‌ ಮದುವೆ; ಮೆಹಂದಿ ಶಾಸ್ತ್ರದ ವೇಳೆ ಪತಿ ಜತೆ ನಟಿ ಮಿಂಚಿಂಗ್!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

Suryakumar Yadav
ಪ್ರಮುಖ ಸುದ್ದಿ2 hours ago

Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

Central Government monitoring wheat price stability: Union Minister Pralhad Joshi
ಕರ್ನಾಟಕ2 hours ago

Pralhad Joshi: ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರದ ಕ್ರಮ; ಪ್ರಲ್ಹಾದ್‌ ಜೋಶಿ

regional Laboratory sanctioned to Kims Hubballi
ಕರ್ನಾಟಕ3 hours ago

Pralhad Joshi: ಕಿಮ್ಸ್‌ಗೆ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ” ಮಂಜೂರು

Hinduja Family
ವಿದೇಶ3 hours ago

Hinduja Family: ಮನೆಗೆಲಸದವರ ಮೇಲೆ ದೌರ್ಜನ್ಯ; ಹಿಂದುಜಾ ಕುಟುಂಬದ ನಾಲ್ವರಿಗೆ 4.5 ವರ್ಷ ಜೈಲು!

Gautam Gambhir
ಪ್ರಮುಖ ಸುದ್ದಿ3 hours ago

Gautam Gambhir : ಕೋಚ್​ ಹುದ್ದೆ ಅಂತಿಮವಾಗಿಲ್ಲ; ವರದಿಗಳಿಗೆ ವ್ಯತಿರಿಕ್ತ ಹೇಳಿಕೆ ನೀಡಿದ ಗಂಭೀರ್​!

Rishabh Pant
ಪ್ರಮುಖ ಸುದ್ದಿ4 hours ago

Rishabh Pant : ವಿಶ್ವ ಕಪ್​ನಲ್ಲಿ ವಿನೂತನ ವಿಕೆಟ್​ಕೀಪಿಂಗ್​​ ದಾಖಲೆ ಬರೆದ ರಿಷಭ್​ ಪಂತ್​

Parking Complex
ಬೆಂಗಳೂರು4 hours ago

Parking Complex: ಬೆಂಗಳೂರಿನಲ್ಲಿ ಸುಸಜ್ಜಿತ ಪಾರ್ಕಿಂಗ್‌ ಕಾಂಪ್ಲೆಕ್ಸ್;‌ ಶುಲ್ಕದ ಕುರಿತ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ7 hours ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ13 hours ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 day ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು5 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ5 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ5 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ6 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ6 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌