ವಿಸ್ತಾರ ಸಂಪಾದಕೀಯ: ಅಲ್ಪಸಂಖ್ಯಾತರ ಹಿತರಕ್ಷಣೆಯಲ್ಲಿ ಭಾರತ ನಂ.1 - Vistara News

ದೇಶ

ವಿಸ್ತಾರ ಸಂಪಾದಕೀಯ: ಅಲ್ಪಸಂಖ್ಯಾತರ ಹಿತರಕ್ಷಣೆಯಲ್ಲಿ ಭಾರತ ನಂ.1

ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ. ಅಲ್ಪಸಂಖ್ಯಾತರು ಭಾರತದಲ್ಲಿ ಗರಿಷ್ಠ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಈಗ ಅಂತಾರಾಷ್ಟ್ರೀಯ ವರದಿಯೇ ಹೇಳಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು (Minority Community) ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಜಾಗತಿಕ ವರದಿ ಹೇಳಿದೆ. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿದೆ. ಭಾರತದ ನಂತರದ 4 ಸ್ಥಾನಗಳಲ್ಲಿ ಪನಾಮಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ದೇಶಗಳಿವೆ.

ಈ ವರದಿಯ ಸಾರಾಂಶ ಭಾರತಕ್ಕೆ ಜಾಗತಿಕವಾಗಿ ಹೆಮ್ಮೆಯ ಸಂಗತಿ. ಆದರೆ ಇದು ಹೊಸ ಸಂಗತಿಯೇನಲ್ಲ. ತಮಾಷೆ ಎಂದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು ಆತಂಕ ಅನುಭವಿಸುತ್ತಿದ್ದಾರೆ ಎಂದು ಪ್ರಚಾರ ಮಾಡಲು ಹೊರಟಿದ್ದ ಬಿಬಿಸಿ ಸುದ್ದಿಸಂಸ್ಥೆಯ ಮಾತೃನೆಲವಾದ ಇಂಗ್ಲೆಂಡ್‌ ಈ ವರದಿಯಲ್ಲಿ 54ನೇ ಸ್ಥಾನದಲ್ಲಿದೆ! ಭಾರತದ ಅಲ್ಪಸಂಖ್ಯಾತ ನೀತಿಯು ವೈವಿಧ್ಯತೆಯನ್ನು ಬೆಳೆಸುವ ಕಾರ್ಯತಂತ್ರದ ಮೇಲೆ ರೂಪಿಸಲ್ಪಟ್ಟಿದೆ. ಉಳಿದ ಯಾವುದೇ ದೇಶಗಳ ಸಂವಿಧಾನವು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬೆಂಬಲಕ್ಕೆ ಸ್ಪಷ್ಟವಾದ ಖಾತರಿಗಳನ್ನು ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಪಸಂಖ್ಯಾತರು ಭಾರತದಲ್ಲಿ ಗರಿಷ್ಠ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಸಾರಲು ಈ ವರದಿಯೇನೂ ಬೇಕಿರಲಿಲ್ಲ.

ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನೂ ಬಹುಸಂಖ್ಯಾತರಂತೆಯೇ ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತ ಹಿತಚಿಂತನೆ ನೋಡಿಕೊಳ್ಳುವುದಕ್ಕಾಗಿಯೇ ಕೇಂದ್ರದಲ್ಲಿ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼ ಇದೆ. ಈ ದೇಶದ ಮುಖ್ಯಮಂತ್ರಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಯನ್ನೂ ಭಾರತೀಯ ಅಲ್ಪಸಂಖ್ಯಾತರು ಜನಮತದಿಂದಲೇ ಅಲಂಕರಿಸಿದ್ದಾರೆ.

ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್ ಕೂಡ ಇತ್ತೀಚೆಗೆ ಹೇಳಿದ್ದರು. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಇನ್ನು ಅಲ್ಲಿಯ ಅಲ್ಪಸಂಖ್ಯಾತರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಆ ದೇಶಗಳಲ್ಲಿ ಅರಾಜಕತೆ ಇದೆ. ಅಲ್ಲಿಯ ಜನ ಎರಡು ಹೊತ್ತಿನ ತುತ್ತಿಗೆ ಪರದಾಡುತ್ತಿದ್ದಾರೆ.

ಇಲ್ಲಿನ ಸುರಕ್ಷತೆಯ ಮಾತು ಕ್ರೈಸ್ತರಿಗೂ ಅನ್ವಯಿಸುತ್ತದೆ. ಇಲ್ಲಿನ ಜನಸಂಖ್ಯೆಯ 2.3% (ಸುಮಾರು 2.8 ಕೋಟಿ) ಕ್ರೈಸ್ತರಿದ್ದಾರೆ. ಕ್ರೈಸ್ತ ಮಿಷನರಿಗಳು ತಮ್ಮ ಧರ್ಮ ಪ್ರಚಾರಕ್ಕೆ ಭಾರತಕ್ಕೆ ಬಂದ ಕಾಲದಿಂದಲೂ ಹಿಂದೂಗಳು ಅವರ ಜತೆ ಸಹಿಷ್ಣುತೆಯಿಂದ ಬದುಕಿ ಬಾಳಿದ್ದಾರೆ. ಕ್ರೈಸ್ತರಾದ ಪಾಶ್ಚಾತ್ಯರ ಜ್ಞಾನಶಾಖೆಗಳ ಧಾರಾಳ ಉಪಯುಕ್ತತೆಯನ್ನು ಭಾರತ ಪಡೆದಿದೆ. ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಶತಮಾನಗಳಿಂದಲೂ ನಮ್ಮ ಜನಜೀವನದ ಜತೆ ಹಾಸುಹೊಕ್ಕಾಗಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಕ್ಷಣೆ ಮತ್ತು ಇಂಧನದಲ್ಲಿ ಸ್ವಾವಲಂಬನೆಯತ್ತ ಭಾರತದ ಹೆಜ್ಜೆ

ಈ ವರದಿ ಹಾಗೂ ಅಂಕಿಅಂಶಗಳು ನಮ್ಮ ಕಣ್ಣು ತೆರೆಸಬೇಕು. ಇಷ್ಟಾಗಿಯೂ ಕೆಲವು ಜನ ಆಗಾಗ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿರುವುದು, ತಾವು ಭಾರತದಲ್ಲಿ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಅವಮಾನಿಸಿದಂತೆಯೇ ಸರಿ. ಅಲ್ಪಸಂಖ್ಯಾತರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡ ಕೆಲವರಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೆಲವು ದೇಶಗಳು ಆಗಾಗ ಭಾರತದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಪ್ರಶ್ನೆ ಎತ್ತುತ್ತಿವೆ. ಅಂಥ ದೇಶಗಳು, ಈಗ ಬಿಡುಗಡೆಯಾಗಿರುವ ಸಿಪಿಎ ವರದಿಯಲ್ಲಿ ತಮ್ಮ ದೇಶದ ಸ್ಥಾನ ಯಾವ ಕ್ರಮಾಂಕದಲ್ಲಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಲಿ. ದೇಶದೊಳಗಿದ್ದು ಅಪಪ್ರಚಾರ ಮಾಡುವ ಹಿತಶತ್ರುಗಳೂ ಇದನ್ನು ಗಮನಿಸಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Viral News: ಅಶ್ಲೀಲ ವಿಡಿಯೊ ಮಾಡುವ ಜತೆಗೆ ಹೆಲ್ಮೆಟ್ ಇಲ್ಲದೆ ನೊಯ್ದಾದ ರಸ್ತೆಗಳಲ್ಲಿ ನಿರ್ಲಕ್ಷ್ಯದಿಂದ ಸ್ಕೂಟರ್ ಸವಾರಿ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದವು

VISTARANEWS.COM


on

Viral News: Holi at delhi metro
Koo

ನೋಯ್ಡಾ: ಸಾಮಾಜಿಕ ಮಾಧ್ಯಮ ವೀಡಿಯೊಗಳು ವೈರಲ್ (Viral News) ಆದ ನಂತರ ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಮತ್ತು ಅಶ್ಲೀಲತೆಯನ್ನು ಸೃಷ್ಟಿಸಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ಗುರುವಾರ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಹೆಲ್ಮೆಟ್ ಇಲ್ಲದೆ ನಗರದ ರಸ್ತೆಯಲ್ಲಿ “ನಿರ್ಲಕ್ಷ್ಯದಿಂದ” ಸ್ಕೂಟರ್ ಸವಾರಿ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದವು. ಅದೇ ರೀತಿ ಡೆಲ್ಲಿ ಮೆಟ್ರೋದಲ್ಲಿ ರಂಗಿನ ಓಕುಳಿ ಆಡಿದವರೂ ಜೈಲು ಕಂಬಿ ಎಣಿಸುವಂತಾಗಿದೆ.

ಈ ಎರಡೂ ವಿಡಿಯೊಗಳನ್ನು ನೋಡಿರುವ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು “ಅಶ್ಲೀಲ” ಎಂದು ಟೀಕಿಸಿದರೆ, ನೋಯ್ಡಾ ಸಂಚಾರ ಪೊಲೀಸರು ರಸ್ತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಕೂಟರ್ ಮಾಲೀಕರಿಗೆ ಒಟ್ಟು 80,500 ರೂ.ಗಳ ದಂಡವನ್ನು ವಿಧಿಸಿದ್ದರು.

ಐಪಿಸಿ ಸೆಕ್ಷನ್ 279 (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಅತಿವೇಗದ / ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕ ಉಪದ್ರವ), 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ), 336 ಮತ್ತು 337 (ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಅಥವಾ ಅದರಿಂದ ನೋವನ್ನುಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದ) ಅಡಿಯಲ್ಲಿ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಏನಿದು ಪ್ರಕರಣ?

ನೋಯ್ಡಾದಲ್ಲಿ ಕಳೆದ ಸೋಮವಾರ (ಮಾರ್ಚ್‌ 25) ಯುವಕನು ಸ್ಕೂಟರ್ ಚಾಲನೆ ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ವಿಡಿಯೊವನ್ನು ಚಿತ್ರೀಕರಿಸಿದ್ದಾನೆ, ಆದಾಗ್ಯೂ, ವಿಡಿಯೊ ಚಿತ್ರೀಕರಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ : Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್​ನ ಹಿಂಭಾಗ ಕುಳಿತು ಬಾಲಿವುಡ್ ಹಾಡು “ಮೊಹೆ ರಂಗ್ ಲಗಾಡೆ” ಗೆ ನೃತ್ಯ ಮಾಡಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದಾರೆಯೇ, ಅಶ್ಲೀಲ ಕೆಲಸದಲ್ಲಿ ತೊಡಗಿದ್ದಾರೆಯೇ ಅಥವಾ ಪ್ರಣಯದಲ್ಲಿ ತೊಡಗಿದ್ದಾರೆಯೇ ಎಂದು ವಿವರಿಸುವುದು ಅಸಾಧ್ಯ. ವಿಡಿಯೊ ನೋಡಿಯೇ ನಿರ್ಧಾರ ಮಾಡಬೇಕಾಗುತ್ತದೆ. ಆದರೆ, ಯಾರು ಕೂಡ ಈ ಯುವತಿಯರ ವರ್ತನೆಯನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ.

ದೆಹಲಿ ಮೆಟ್ರೋದಲ್ಲೂ ಯುವತಿಯರ ಹುಚ್ಚಾಟ

ದೆಹಲಿಯ ಮೆಟ್ರೋದಲ್ಲಿಯೂ ಇಬ್ಬರು ಯುವತಿಯರು ಹೋಳಿ ಆಚರಣೆ ಮಾಡುವ ನೆಪದಲ್ಲಿ ರೊಮ್ಯಾನ್ಸ್‌ ಮಾಡಿದ ವಿಡಿಯೊ ವೈರಲ್‌ ಆಗಿದೆ. ಚಲಿಸುವ ಮೆಟ್ರೋದಲ್ಲಿಯೇ ಪರಸ್ಪರ ಬಣ್ಣ ಹಚ್ಚುವ ಯುವತಿಯರು, ತಬ್ಬಿ ಮುದ್ದಾಡಿದ ವಿಡಿಯೊ ವೈರಲ್‌ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಇಬ್ಬರು ಯುವತಿಯರು ದೆಹಲಿ ಮೆಟ್ರೋ ಹತ್ತಿದ್ದಾರೆ. ರೈಲು ಚಲಿಸುತ್ತಲೇ ಕೆಳಗೆ ಕುಳಿತ ಅವರು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದಾರೆ. ಆಕೆಯ ಕೆನ್ನೆಗೆ ಈಕೆ, ಈಕೆಯ ಕೆನ್ನೆಗೆ ಆಕೆ ಬಣ್ಣ ಹಚ್ಚುವುದು, ಇಬ್ಬರೂ ಮಲಗಿ ರೊಮ್ಯಾನ್ಸ್‌ ಮಾಡುವುದು, ಮುದ್ದಾಡುವುದು, ಮುತ್ತು ಕೊಡುವುದು ಸೇರಿ ಬಹಿರಂಗವಾಗಿಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹುಚ್ಚಾಟವನ್ನು ಕಂಡ ಪ್ರಯಾಣಿಕರು, ಮನಸ್ಸಲ್ಲೇ ಹಿಡಿ ಶಾಪ ಹಾಕಿದ್ದಾರೆ. ಆದರೆ, ಪ್ರಯಾಣಿಕರು ಏನೆಂದುಕೊಳ್ಳುತ್ತಾರೋ, ಅವರಿಗೆ ತೊಂದರೆಯಾಗುತ್ತದೆಯೋ ಎಂಬುದರ ಪರಿವೇ ಇಲ್ಲದೆ ಇಬ್ಬರು ಯುವತಿಯರು ಹುಚ್ಚಾಟ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

ಜನ ಸ್ವಯಂಪ್ರೇರಿತರಾಗಿ ನೀರನ್ನು ಉಳಿಸಲು, ಹಿತಮಿತವಾಗಿ ಬಳಸಲು ಮುಂದಾಗುವುದೇ ನೀರಿನ ಕೊರತೆಗೆ ಸರಿಯಾದ ಪರಿಹಾರ. ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸದಿರುವುದು, ಪಾತ್ರೆ ತೊಳೆದ ನೀರನ್ನು ಗಾರ್ಡನ್‌ಗೆ ಬಳಸುವುದು, ಮನೆ ಮತ್ತು ಕಚೇರಿಯಲ್ಲಿ ನೀರನ್ನು ದಕ್ಷವಾಗಿ ಬಳಸುವ ಸಲಕರಣೆಗಳ ಬಳಕೆ, ತ್ಯಾಜ್ಯ ನೀರಿನ ಮರುಬಳಕೆ ಹೀಗೆ ಹಲವು ಕ್ರಮಗಳ ಮೂಲಕ ಜನರೇ ಅಮೂಲ್ಯ ನೀರನ್ನು ಉಳಿಸಬೇಕಿದೆ.

VISTARANEWS.COM


on

Water Crisis
Koo

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Water Crisis) ಜೋರಾಗುತ್ತಿದೆ. ಇದೀಗ ಬೇಸಿಗೆಯ ಮೊದಮೊದಲ ತಿಂಗಳು ಎನ್ನಬಹುದು. ಬೇಸಿಗೆಯಲ್ಲಿ ಇನ್ನೂ ಎರಡು ತಿಂಗಳುಗಳು ಬಾಕಿ ಇವೆ, ಈಗಲೇ ಜನತೆ ಕುಡಿಯುವ ನೀರಿನ ಕೊರತೆಯಿಂದ ತತ್ತರಿಸುತ್ತಿದ್ದಾರೆ. ನಗರದಲ್ಲಿ ಕೆಲವೆಡೆ 6000 ಲೀ. ಟ್ಯಾಂಕರ್‌ನೀರನ್ನು 2500 ಕೊಟ್ಟು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿ ಹೇಳುತ್ತಿದ್ದರೂ, ನೀರಿನ ಪೂರೈಕೆ ಸಾಕಷ್ಟು ಕಡಿಮೆಯಾಗಿದೆ ಎಂದು ನಗರವಾಸಿಗಳು ಆರೋಪಿಸುತ್ತಿದ್ದಾರೆ. ಇದರಿಂದಲೇ ಖಾಸಗಿ ಟ್ಯಾಂಕರ್‌ಗಳ ಮಾಫಿಯಾ ಶುರುವಾಗಿದೆ. ಬೆಂಗಳೂರಿನ ಆರ್‌.ಆರ್‌.ನಗರದಲ್ಲಿ 6000 ಲೀ. ಟ್ಯಾಂಕರ್‌ 2500 ರೂ., ಕೆ.ಆರ್‌.ಪುರದಲ್ಲಿ 1500 ರೂ., ನಾರಾಯಣಪುರದಲ್ಲಿ 1500 ರೂ., ಹಾಗೂ ವರ್ತೂರಿನಲ್ಲಿ 4000 ಲೀ.ಟ್ಯಾಂಕರ್ 800 ರೂ. ಇದೆ. ಟ್ಯಾಂಕರ್‌ಗಳ ನೋಂದಣಿಯನ್ನು ಜಲಮಂಡಳಿ ಕಡ್ಡಾಯ ಮಾಡಿದ್ದರೂ ಅರ್ಧದಷ್ಟೂ ನೋಂದಣಿಯಾಗಿಲ್ಲ. ಬೆಂಗಳೂರಿನ ಒಳಭಾಗಕ್ಕೇ ಹೆಚ್ಚಿನ ಕಾವೇರಿ ನೀರು ಬೇಕಾಗುವುದರಿಂದ ಹೊರಭಾಗಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿದೆ. ಕೆಆರ್‌ಎಸ್‍ನಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಗಳಿಗೆ ಕಾವೇರಿ ನೀರೇ ಬೇಕು.

ನೀರಿನ ಪೋಲು ತಡೆಗಟ್ಟಲು ಜಲಮಂಡಳಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸ್ವಿಮ್ಮಿಂಗ್‌ ಪೂಲ್‌ಗಳಿಗೆ ಕುಡಿಯುವ ನೀರಿನ ಬಳಕೆಗೆ ಕಡಿವಾಣ, ಬೇಕಾಬಿಟ್ಟಿ ಹೋಳಿ ಆಚರಣೆಗೆ ನಿರ್ಬಂಧ, ಐಷಾರಾಮಿ ರೆಸಾರ್ಟ್‌ಗಳಲ್ಲಿ ರೈನ್‌ ಡ್ಯಾನ್ಸ್‌ಗಳಿಗೆ ನಿಷೇಧ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಕೆ, ಬೃಹತ್‌ ಸಂಸ್ಥೆಗಳಿಗೆ ನೀರಿನ ಪೂರೈಕೆಯಲ್ಲಿ ಶೇ.20 ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರು ಬಳಸಿದರೆ ಭಾರಿ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ಹೀಗೆ 1 ಲಕ್ಷ ರೂಪಾಯಿಗೂ ಅಧಿಕ ದಂಡವನ್ನು ಜಲಮಂಡಳಿ ವಸೂಲಿ ಮಾಡಿದೆ. ನೀರಿನ ಸಮಸ್ಯೆ ಆಲಿಸಲು ಕಂಟ್ರೋಲ್ ರೂಮ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ದೂರು‌ಗಳು ಬಂದ ತಕ್ಷಣ ಸ್ಪಂದಿಸಿ, ನೀರು ಸರಬರಾಜು ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ನ್ಯಾಯಪ್ರಕ್ರಿಯೆಯಲ್ಲಿ ಅಮೆರಿಕದ ಹಸ್ತಕ್ಷೇಪ ಅಧಿಕ ಪ್ರಸಂಗತನ

ಇವೆಲ್ಲವೂ ಸರ್ಕಾರದ ಕಡೆಯಿಂದ ಆಗಿರುವ ಕ್ರಮಗಳು. ಆದರೆ ಇದು ಸಾಲದು ಜನ ಸ್ವಯಂಪ್ರೇರಿತರಾಗಿ ನೀರನ್ನು ಉಳಿಸಲು, ಹಿತಮಿತವಾಗಿ ಬಳಸಲು ಮುಂದಾಗುವುದೇ ನೀರಿನ ಕೊರತೆಗೆ ಸರಿಯಾದ ಪರಿಹಾರ. ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸದಿರುವುದು, ಪಾತ್ರೆ ತೊಳೆದ ನೀರನ್ನು ಗಾರ್ಡನ್‌ಗೆ ಬಳಸುವುದು, ಮನೆ ಮತ್ತು ಕಚೇರಿಯಲ್ಲಿ ನೀರನ್ನು ದಕ್ಷವಾಗಿ ಬಳಸುವ ಸಲಕರಣೆಗಳ ಬಳಕೆ, ತ್ಯಾಜ್ಯ ನೀರಿನ ಮರುಬಳಕೆ, ಪಾತ್ರೆಗಳನ್ನು ತೊಳೆಯುವಾಗ ನಲ್ಲಿ ನೀರು ಆಫ್‌ ಮಾಡುವುದು, ಕಡಿಮೆ ಅವಧಿಯಲ್ಲಿ ಸ್ನಾನ ಮುಗಿಸುವುದು, ಬಳಕೆ ಮಾಡದಿದ್ದಾಗ ನಲ್ಲಿ ಆಫ್‌ ಮಾಡುವುದು, ಕಡಿಮೆ ಫ್ಲಶ್ ಮಾಡುವ ಟಾಯ್ಲೆಟ್‌ಗಳನ್ನು ಬಳಸುವುದು, ಫುಲ್‌ ಲೋಡ್‌ಗಳಿಗೆ ಮಾತ್ರ ಅಟೊಮ್ಯಾಟಿಕ್ ವಾಶಿಂಗ್ ಮಶಿನ್ ಬಳಸುವುದು, ಕೈತೋಟದಲ್ಲಿ ಕಡಿಮೆ ನೀರನ್ನು ಬಳಸುವ ಸಸ್ಯಗಳನ್ನು ಬೆಳೆಸುವುದು, ಮಳೆಕೊಯ್ಲು ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದು- ಇನ್ನೂ ಮುಂತಾದ ಜಾಣ್ಮೆಯ ಕ್ರಮಗಳ ಮೂಲಕ ನೀರನ್ನು ಉಳಿಸಿಕೊಳ್ಳಬೇಕು.

ಇಂದು ಪ್ರತಿಯೊಬ್ಬರೂ ನೀರಿನ ಮಿತ ಬಳಕೆಯ ಬಗ್ಗೆ ಕೆಲಸ ಮಾಡಲೇಬೇಕಾದ ಕಾಲ ಬಂದಿದೆ. ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ. ಈಗಲೇ ಎಚ್ಚೆತ್ತುಕೊಂಡರೆ ಬೆಂಗಳೂರಿನ ಭವಿಷ್ಯದ ದಿನಗಳು ಸುಖಕರವಾದಾವು. ಇಲ್ಲವಾದರೆ ನಮ್ಮ ಮುಂದಿನ ತಲೆಮಾರು ನೀರಿಲ್ಲದೆ ನರಳುವುದನ್ನು ಕಾಣುವ ದುರ್ಭರ ಸ್ಥಿತಿ ನಮ್ಮದಾಗಲಿದೆ.

Continue Reading

ವೈರಲ್ ನ್ಯೂಸ್

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Dolly Chaiwala: ತಮ್ಮ ವಿಶಿಷ್ಟ ಶೈಲಿಯಿಂದಲೇ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುವ ನಾಗ್ಪುರದ ಡಾಲಿ ಚಾಯ್‌ವಾಲಾ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಸ್ಥಳೀಯರೊಂದಿಗೆ ಪೋಸ್‌ ನೀಡುತ್ತಿರುವ ಫೋಟೊ ವೈರಲ್‌ ಆಗಿದೆ.

VISTARANEWS.COM


on

Dolly Chaiwala
Koo

ನವದೆಹಲಿ: ಅದೃಷ್ಟ ಯಾವಾಗ ಯಾರಿಗೆ ಒಲಿಯುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ತನ್ನ ವಿಶಿಷ್ಟ ಉಡುಗೆ, ಹೇರ್‌ ಸ್ಟೈಲ್‌, ಚಹಾ ಮಾಡುವ ರೀತಿಯಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ನಾಗ್ಪುರದ ಡಾಲಿ ಚಾಯ್‌ವಾಲಾ (Dolly Chaiwalla) ಅವರನ್ನು ಇತ್ತೀಚೆಗೆ ಮೈಕ್ರೋಸಾಫ್ಟ್‌ನ (Microsoft) ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ (Bill Gates) ಭೇಟಿಯಾಗಿದ್ದರು. ಡಾಲಿ ಚಾಯ್‌ವಾಲಾ ಅವರ ಚಹಾ ಅಂಗಡಿಗೆ ಬಿಲ್‌ ಗೇಟ್ಸ್‌ ಆಗಮಿಸಿದ ವಿಡಿಯೊ ಭಾರೀ ವೈರಲ್‌ ಆಗಿತ್ತು. ಆ ಮೂಲಕ ಡಾಲಿ ಚಾಯ್‌ವಾಲಾ ಹೆಸರು ಮತ್ತಷ್ಟು ಜನಪ್ರಿಯವಾಗಿತ್ತು. ಇದೀಗ ಅವರ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಡಾಲಿ ಚಾಯ್‌ವಾಲಾ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಬಾಲಿವುಡ್ ನಟ ಸೊಹೈಲ್ ಖಾನ್ ಅವರೊಂದಿಗೆ ಫೋಟೊಕ್ಕೆ ಪೋಸ್‌ ನೀಡಿದ್ದು, ಮತ್ತೊಮ್ಮೆ ವೈರಲ್‌ ಆಗಿದ್ದಾರೆ (Viral News).

ಪ್ರವಾಸಿಗರೊಂದಿಗೆ ಪೋಸ್‌

ಇದರ ಜತೆಗೆ ಡಾಲಿ ಚಾಯ್‌ವಾಲಾ ದ್ವೀಪ ರಾಷ್ಟ್ರದ ನಿವಾಸಿಗಳೊಂದಿಗೆ ಪೋಸ್‌ ನೀಡುತ್ತಿರುವ ಫೋಟೊಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅನೇಕರು ಈ ಪೋಟೊಗಳಿಗೆ ಕಮೆಂಟ್‌ ಕೂಡ ಮಾಡಿದ್ದಾರೆ. ಕೆಲವರು ಡಾಲಿಯ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರೆ, ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. “ಡಾಲಿ ಸದ್ಯದಲ್ಲೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಡಾಲಿ ಚಾಯ್‌ವಾಲಾ ಮತ್ತು ಬಿಲ್ ಗೇಟ್ಸ್ ಸ್ನೇಹಿತರು” ಎಂದು ಬರೆದಿದ್ದಾರೆ.

“ದೇವರು ನಿಮಗೆ ಹೆಚ್ಚಿನ ಯಶಸ್ಸನ್ನು ನೀಡಲಿ, ಸಹೋದರ” ಎಂದು ನೆಟ್ಟಿಗರೊಬ್ಬರು ಹಾರೈಸಿದ್ದಾರೆ. “ಡಾಲಿಯ ಯಶಸ್ಸು ನನಗೆ ಖುಷಿ ತಂದುಕೊಟ್ಟಿದೆ. ಸಣ್ಣ ವ್ಯಾಪಾರಿಯೊಬ್ಬ ಈ ಮಟ್ಟಕ್ಕೆ ಬೆಳೆದಾಗ ಅದನ್ನು ನೋಡಲು ನನಗೆ ತುಂಬಾ ಸಂತೋಷವಾಗುತ್ತದೆʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ದಾರೆ. ʼʼಡಾಲಿ ಚಾಯ್‌ವಾಲಾ ಅಸಾಧಾರಣ ಪ್ರತಿಭೆ ಹೊಂದಿದ್ದಾರೆ. ಆದ್ದರಿಂದ ಅವರು ಈಗ ಇಲ್ಲಿದ್ದಾರೆ. ಚಹಾದಿಂದಾಗಿ ಅಲ್ಲ, ತಮ್ಮ ವಿಶಿಷ್ಟ ಶೈಲಿಯಿಂದಾಗಿ ಅವರು ಇಷ್ಟು ಯಶಸ್ಸು ದಾಖಲಿಸಿದ್ದಾರೆ” ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಡಾಲಿ ಚಾಯ್‌ವಾಲಾ ಹಿನ್ನೆಲೆ

ಮಹಾರಾಷ್ಟ್ರ ನಾಗಪುರದ ಸರ್ದಾರ್‌ ಏರಿಯಾದ ಹಳೆ ವಿಸಿಎ ಮೈದಾನ (Old VCA stadium)ದ ಬಳಿ ಬೀದಿ ಬದಿಯ ಚಹಾ ಗಾಡಿ ಇಟ್ಟುಕೊಂಡಿರುವ ಡಾಲಿ ಚಾಯ್‌ವಾಲಾ ತಮ್ಮ ವಿಶಿಷ್ಟ ಶೈಲಿಯ ಚಹಾ ತಯಾರಿಯ ಮೂಲಕವೇ ಜನಪ್ರಿಯರಾಗಿದ್ದಾರೆ. ಅವರ ನಿಜ ಹೆಸರು ಯಾರಿಗೂ ತಿಳಿದಿಲ್ಲ. ಆದರೆ ಅವರ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಗಟ್ಟಲೆ ಮಂದಿ ವೀಕ್ಷಿಸುತ್ತಾರೆ. ತಮ್ಮದೇ ಅನನ್ಯ ಶೈಲಿಯಲ್ಲಿ ಚಹಾ ಮಾಡುವ ವಿಡಿಯೊಗಳನ್ನು ಅವರು ಆಗಾಗ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಚಹಾ ಮಾತ್ರವಲ್ಲ ಡಾಲಿ ಚಾಯ್‌ವಾಲಾ ಅಂಗಡಿಯಲ್ಲಿ ಸಿಗರೇಟ್‌ ಕೂಡ ಲಭ್ಯ. ಹೀಗಾಗಿಯೇ ಅವರ ಅಂಗಡಿ ಮುಂದೆ ಯಾವಾಗಲೂ ಜನ ಸಂದಣಿ ಕಂಡು ಬರುತ್ತದೆ. ಇತ್ತೀಚೆಗೆ ಭಾರತದ ಪ್ರವಾಸ ಕೈಗೊಂಡಿದ್ದ ಬಿಲ್ ಗೇಟ್ಸ್ ಅವರು ಬೀದಿ ಬದಿಯ ಡಾಲಿ ಚಾಯ್‌ವಾಲಾ ಅವರ ಚಹಾ ಗಾಡಿ ಬಳಿ ಚಹಾ ಮಾಡಿಸಿಕೊಂಡು ಸವಿಯುತ್ತಿರುವ ವಿಡಿಯೊ ಎಲ್ಲೆಡೆ ಹರಿದಾಡಿ ಸಂಚಲನ ಸೃಷ್ಟಿಸಿತ್ತು. ಅಂದಿನಿಂದ ಅವರ ಅದೃಷ್ಟ ಖುಲಾಯಿಸಿತ್ತು.

ಇದನ್ನೂ ಓದಿ: Viral News: ಬಿಲ್‌ ಗೇಟ್ಸ್ ಮನಗೆದ್ದ ಈ ಡಾಲಿ ಚಾಯ್‌ವಾಲಾ ಯಾರು? ಏನಿವರ ಕಥೆ?

Continue Reading

ಪ್ರಮುಖ ಸುದ್ದಿ

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Mukhtar Ansari : 14 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ಬಿಡುಗಡೆಗೊಂಡ ಬಳಿಕ ಮುಖ್ತಾರ್ ಅನ್ಸಾರಿಗೆ ಹೃದಯಾಘಾತ ಉಂಟಾಗಿತ್ತು.

VISTARANEWS.COM


on

Mukthar Ansari
Koo

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಸೇರಿದ್ದ ಗ್ಯಾಂಗ್​ಸ್ಟರ್​ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ (Mukhtar Ansari ) ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾನೆ. ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿ ಬ್ಯಾರಕ್ ನಲ್ಲಿ ಬಿದ್ದಿದ್ದ ಎಂದು ಮೂಲಗಳು ತಿಳಿಸಿವೆ. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾನೆ. ಸಾವಿನ ಹಿನ್ನೆಯಲ್ಲಿ ಲಖನೌ ಮತ್ತು ಮೌ ಸದರ್​ ಮತ್ತು ಗಾಜಿಪುರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ದಿನಗಳಲ್ಲಿ ಎರಡನೇ ಬಾರಿಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ಸಾರಿಯನ್ನು ಮಂಗಳವಾರ ಬಾಂಡಾದಲ್ಲಿ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಏತನ್ಮಧ್ಯೆ. ತನ್ನ ಸಹೋದರನಿಗೆ ಜೈಲಿನಲ್ಲಿ ವಿಷಪ್ರಾಷನ ಮಾಡಲಾಗುತ್ತಿದೆ ಎಂದು ಮುಖ್ತಾರ್ ಸಹೋದರ ಅಫ್ಜಲ್ ಅನ್ಸಾರಿ ಅರೋಪಿಸಿದ್ದಾರೆ.

60 ಹೆಚ್ಚು ಪ್ರಕರಣಗಳ ಆರೋಪಿ, ಎಂಟರಲ್ಲಿ ಅಪರಾಧಿ

ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಯುಪಿಯ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದು, ಅವರನ್ನು ಬಾಂಡಾ ಜೈಲಿನಲ್ಲಿರಿಸಲಾಗಿತ್ತು.

ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್​ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

ಎರಡನೇ ಬಾರಿ ಅನಾರೋಗ್ಯ

ಅಫ್ಜಲ್ ಅನ್ಸಾರಿ ಮಂಗಳವಾರ ಹೇಳಿಕೊಂಡಿದ್ದು, “ಜೈಲಿನಲ್ಲಿ ಆಹಾರದಲ್ಲಿ ವಿಷಕಾರಿ ವಸ್ತುವನ್ನು ನೀಡಲಾಗಿದೆ ಎಂದು ಮುಖ್ತಾರ್ ಹೇಳಿದ್ದಾರೆ. ಇದು ಎರಡನೇ ಬಾರಿಗೆ ಸಂಭವಿಸಿದೆ. ಸುಮಾರು 40 ದಿನಗಳ ಹಿಂದೆಯೂ ಅವರಿಗೆ ವಿಷ ನೀಡಲಾಯಿತು. ಮಾರ್ಚ್ 19 ರಂದು ಮಾರ್ಚ್ 22 ರಂದು, ಅವರಿಗೆ ಮತ್ತೆ ಈ (ವಿಷ) ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

ಮಾರ್ಚ್ 21 ರಂದು ಬಾರಾಬಂಕಿ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವರ್ಚುವಲ್ ವಿಚಾರಣೆಯ ಸಮಯದಲ್ಲಿ, ಮುಖ್ತಾರ್​ನ ವಕೀಲರು ತಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ “ನಿಧಾನ ವಿಷ” ನೀಡಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

1963 ರಲ್ಲಿ ಜನಿಸಿದ ಅನ್ಸಾರಿ ಅವರು ಮೌ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಕೊನೆಯ ಬಾರಿಗೆ ೨೦೧೭ ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ.

Continue Reading
Advertisement
Dina Bhavishya
ಭವಿಷ್ಯ15 mins ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

kea
ಕರ್ನಾಟಕ4 hours ago

KEA: ಕೆಸೆಟ್-‌2023ರ ಪರಿಷ್ಕೃತ ಕೀ ಉತ್ತರ ಪ್ರಕಟ; ಹೀಗೆ ಪರಿಶೀಲಿಸಿ

Viral News: Holi at delhi metro
ದೇಶ5 hours ago

Viral News : ವೈರಲ್​ ವಿಡಿಯೊಗಾಗಿ ಅಸಭ್ಯವಾಗಿ ವರ್ತಿಸಿದ ಡೆಲ್ಲಿ ಯುವತಿಯರು ಅರೆಸ್ಟ್​!

Water Crisis
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ6 hours ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್6 hours ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ6 hours ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Former DCM Govinda Karajola pressmeet
ಬೆಂಗಳೂರು7 hours ago

Bengaluru News: ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಿದ್ದೇ ಮೋದಿಯಿಂದ: ಗೋವಿಂದ ಕಾರಜೋಳ

crime news
ಕ್ರೈಂ7 hours ago

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Women Slapped
ಪ್ರಮುಖ ಸುದ್ದಿ7 hours ago

Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 mins ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202415 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202417 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌