ಮೂತ್ರ ವಿಸರ್ಜನೆ ಪ್ರಕರಣ: ‘ನೀ ನನ್ನ ಸುದಾಮ’ ಎಂದು ಆದಿವಾಸಿ ಕಾರ್ಮಿಕನಿಗೆ ಹೇಳಿದ ಸಿಎಂ ಚೌಹಾಣ್​ - Vistara News

ದೇಶ

ಮೂತ್ರ ವಿಸರ್ಜನೆ ಪ್ರಕರಣ: ‘ನೀ ನನ್ನ ಸುದಾಮ’ ಎಂದು ಆದಿವಾಸಿ ಕಾರ್ಮಿಕನಿಗೆ ಹೇಳಿದ ಸಿಎಂ ಚೌಹಾಣ್​

MP Urination Case: ಆದಿವಾಸಿ ಕಾರ್ಮಿಕ ದಶಮತ್​ ರಾವತ್​ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ಸಿಧಿ ಜಿಲ್ಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

VISTARANEWS.COM


on

Dashmat Rawat Shivraj Singh Chauhan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕ (Tribal Man) ದಶಮತ್ ರಾವತ್​ ಮೇಲೆ ಬಿಜೆಪಿ ಶಾಸಕರೊಬ್ಬರ ಆಪ್ತ ಪ್ರವೇಶ್​ ಶುಕ್ಲಾ ಮೂತ್ರ ವಿಸರ್ಜನೆ (MP Urination Case) ಮಾಡಿದ್ದು, ಅಲ್ಲಿನ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​​ (Chief Minister Shivraj Chouhan)ರನ್ನು ತೀವ್ರವಾಗಿ ಕೆರಳಿಸಿದೆ. ಆರೋಪಿ ಪ್ರವೇಶ್​ ಶುಕ್ಲಾ ಮನೆಯನ್ನು ಈಗಾಗಲೇ ಬುಲ್ಡೋಜರ್​ ಮೂಲಕ ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲ, ಆದಿವಾಸಿ ಕಾರ್ಮಿಕ ದಶಮತ್​ ರಾವತ್​ ಅವರ ಪಾದಪೂಜೆಯನ್ನು ಕೂಡ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾಡಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಆದರೆ ಇವಿಷ್ಟೇ ಅಲ್ಲ, ಆದಿವಾಸಿ ಕಾರ್ಮಿಕ ದಶಮತ್​ ರಾವತ್​ ಅವರನ್ನು ‘ಸುದಾಮ’ (ಕೃಷ್ಣನ ಆಪ್ತ ಸ್ನೇಹಿತ) ಎಂದು ಕರೆದಿದ್ದಾರೆ. ದಶಮತ್​ ಅವರ ಪಾದಪೂಜೆ ಮಾಡಿದ ಬಳಿಕ ಅವರನ್ನು ತಮ್ಮ ಮನೆಯ ಹಾಲ್​ಗೆ ಕರೆದುಕೊಂಡು ಬಂದು ಸೋಫಾ ಮೇಲೆ ಕೂರಿಸಿಕೊಂಡು, ತಿನ್ನಲು ತಿಂಡಿಗಳನ್ನು ಕೊಟ್ಟ ಮುಖ್ಯಮಂತ್ರಿ ಶಿವರಾಜ್​ ಸಿಂಗ್, ‘ನಿಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ನನ್ನನ್ನು ತೀವ್ರವಾಗಿ ನೋಯಿಸಿದೆ. ಯಾಕೆಂದರೆ ನೀವು ನನಗೆ ಸುದಾಮನಿದ್ದಂತೆ’ ಎಂದು ಹೇಳಿದ್ದಾರೆ. ಅಂದರೆ ಬಡ ಬ್ರಾಹ್ಮಣನಾಗಿದ್ದ ಸುದಾಮ, ಶ್ರೀಮಂತನಾದ ಶ್ರೀಕೃಷ್ಣನಿಗೆ ಎಷ್ಟು ಆಪ್ತ ಸ್ನೇಹಿತನಾಗಿದ್ದನೋ, ಅಷ್ಟೇ ಆಪ್ತರು ನೀವು ನನಗೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: MP Urinating Case: ಮೂತ್ರ ವಿಸರ್ಜನೆ ಕೇಸ್;‌ ಆದಿವಾಸಿ ವ್ಯಕ್ತಿಯ ಕಾಲು ತೊಳೆದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್;‌ ವಿಡಿಯೊ ವೈರಲ್

ಆದಿವಾಸಿ ಕಾರ್ಮಿಕ ದಶಮತ್​ ರಾವತ್​ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ಸಿಧಿ ಜಿಲ್ಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ ಅನೇಕರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಶೋಷಣೆಗೂ ಮಿತಿ ಬೇಡವಾ ಎನ್ನುತ್ತಿದ್ದಾರೆ. ಪ್ರವೇಶ್ ಶುಕ್ಲಾ ಬಿಜೆಪಿ ಶಾಸಕ ಕೇದಾರ್​ ಶುಕ್ಲಾನ ಆಪ್ತ ಎಂದು ಹೇಳಲಾಗಿದೆ. ಇದೇ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಕೂಡ ವಾಗ್ದಾಳಿ ನಡೆಸುತ್ತಿದೆ. ಹೀಗೆ ಮಧ್ಯಪ್ರದೇಶದಲ್ಲಿ ಈ ಕೇಸ್​ ದೊಡ್ಡದಾಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಕ್ರಮ ಕೈಗೊಂಡಿದ್ದಾರೆ. ಪ್ರವೇಶ್ ಶುಕ್ಲಾ ಮನೆಯನ್ನು ಕೆಡವಲಾಗಿದೆ. ತಾವು ದಶಮತ್ ಅವರ ಕಾಲು ತೊಳೆದು ಪೂಜೆ ಮಾಡಿದ ವಿಡಿಯೊವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

CM Siddaramaiah: ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಜ್ಯದಿಂದ ಯಾರೂ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ. ನಾನು ಪಿಎಂ ಸ್ಥಾನದ ಆಕಾಂಕ್ಷಿಯಲ್ಲ. ನಾನೇ ಅಲ್ಲ , ನಮ್ಮ ರಾಜ್ಯದಲ್ಲಿ ಯಾರೂ ಸಹ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ” ಎಂದು ಹೇಳಿದ್ದಾರೆ. ಇದರ ಮೂಲಕ, ಖರ್ಗೆ ಕೂಡ ಪಿಎಂ ಆಗುವುದಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

VISTARANEWS.COM


on

Mallikarjuna Kharge siddaramaiah
Koo

ಬೆಂಗಳೂರು: ಈ ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದಲ್ಲಿ ಕಾಂಗ್ರೆಸ್ (congress) ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಪ್ರಧಾನ ಮಂತ್ರಿ (Prime minister) ಆಗಬಹುದು ಎಂಬ ಒಂದು ಸಣ್ಣ ಆಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಿವುಟಿ ಹಾಕಿದ್ದಾರೆ. “ರಾಜ್ಯದ ಯಾವ ನಾಯಕನೂ ಪಿಎಂ ಆಗಲ್ಲ” ಎನ್ನುವ ಮೂಲಕ ಅವರು ಈ ಚರ್ಚೆಗೆ ತೆರೆ ಎಳೆದಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಜ್ಯದಿಂದ ಯಾರೂ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ. ನಾನು ಪಿಎಂ ಸ್ಥಾನದ ಆಕಾಂಕ್ಷಿಯಲ್ಲ. ನಾನೇ ಅಲ್ಲ , ನಮ್ಮ ರಾಜ್ಯದಲ್ಲಿ ಯಾರೂ ಸಹ ಪಿಎಂ ಸ್ಥಾನದ ಆಕಾಂಕ್ಷಿಗಳಿಲ್ಲ” ಎಂದು ಹೇಳಿದ್ದಾರೆ. ಇದರ ಮೂಲಕ, ಖರ್ಗೆ ಕೂಡ ಪಿಎಂ ಆಗುವುದಿಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಹಾಗಾದರೆ ರಾಜ್ಯದಿಂದ ಪಿಎಂ ಸ್ಥಾನದ ಅರ್ಹರು, ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಯಾರು ಇಲ್ಲವೇ? ಸ್ವತಃ ಎಐಸಿಸಿ ಅಧ್ಯಕ್ಷರೇ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸಿದೆ. ಕಾಂಗ್ರೆಸ್ ಒಕ್ಕೂಟ ಅಧಿಕ ಸ್ಥಾನ ಗೆದ್ದರೆ ಪಿಎಂ ರೇಸ್‌ನಲ್ಲಿ‌‌ ಖರ್ಗೆಯೂ ಪರಿಗಣನೆಗೆ ಒಳಗಾಗುವವರೇ. ರೇಸ್‌ನಲ್ಲಿ ನಾನಿಲ್ಲ ಎಂದು ಅವರು ಹೇಳಿಲ್ಲ. ಆದರೆ ರಾಹುಲ್‌ ಗಾಂಧಿಯವರನ್ನು ಓವರ್‌ಟೇಕ್‌ ಮಾಡಿ ಮುಂದೆ ಹೋಗಲು ಸ್ವತಃ ಖರ್ಗೆಯವರೇ ತಯಾರಿಲ್ಲ.

ಇನ್ನು ಸಿದ್ದರಾಮಯ್ಯ. ಸ್ವತಃ ಅವರು ರಾಜ್ಯದ ರಾಜಕಾರಣ ಬಿಟ್ಟು ಹೋಗಲು ತಯಾರಿಲ್ಲ. ಬೇರೆ ರಾಜ್ಯಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವುದು ಕೂಡ ನನ್ನಿಂದ ಸಾಧ್ಯವಿಲ್ಲ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಸ್ವತಃ ರಾಜ್ಯದ ಕಾಂಗ್ರೆಸ್‌ ನಾಯಕತ್ವವನ್ನು ಗಟ್ಟಿಯಾಗಿ ಹಿಡಿದಿರುವ ಸಿದ್ದರಾಮಯ್ಯ, ಅದನ್ನು ಸುತರಾಂ ಬಿಟ್ಟುಕೊಡಲು ಸಿದ್ಧರಿಲ್ಲ. ಇದನ್ನೇ ಅವರು ʼನಾನು ಪಿಎಂ ಸ್ಥಾನ ಆಕಾಂಕ್ಷಿಯಲ್ಲʼ ಎನ್ನುವ ಮೂಲಕ ತಿಳಿಸಿದ್ದಾರೆ.

ಸಿದ್ದು ಹೇಳಿಕೆ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದ ಚೆಕ್‌ಮೇಟ್‌ ಕೂಡ ಎಂದು ವಿಶ್ಲೇಷಿಸಲಾಗುತ್ತಿದೆ. ಪಿಎಂ ಸ್ಥಾನಕ್ಕೆ ಹೋಗಬಹುದಾದ ಖರ್ಗೆಯವರನ್ನು ಹೆಸರಿಸಿ, ಆ ಮೂಲಕ ಇನ್ನೊಂದು ಶಕ್ತಿ ಕೇಂದ್ರವನ್ನು ಪಕ್ಷದೊಳಗೆ ಬೆಂಬಲಿಸಲು ಸಿದ್ದು ಸಿದ್ಧರಿಲ್ಲ. ಹಾಗೆಯೇ ಅವರು ಈ ಮಾತು ರಾಹುಲ್ ಗಾಂಧಿಗೆ ಬೆಂಬಲ ಕೂಡ ಇರಬಹುದು ಅಂತಿದಾರೆ ವಿಶ್ಲೇಷಕರು. ಯಾಕೆಂದರೆ ಸದ್ಯ ಕಾಂಗ್ರೆಸ್‌ನಲ್ಲಿ ರಾಷ್ಟ್ರಮಟ್ಟದ ಹಲವು ನಾಯಕರು ರಾಹುಲ್‌ ಅವರನ್ನೇ ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ: CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

Continue Reading

ದೇಶ

Jayant Sinha: ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Jayant Sinha:ಈ ಬಾರಿ ಜಯಂತ್‌ ಸಿನ್ಹಾ ಬದಲಿಗೆ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದ ಜಯಂತ್ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು.

VISTARANEWS.COM


on

Jayant Sinha
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಈ ಬಾರಿ ಟಿಕೆಟ್‌ ಸಿಗದೇ ಬೇಸರಗೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾ(Jayant Sinha)ಗೆ ಬಿಜೆಪಿ ಶೋಕಾಸ್‌ ನೊಟೀಸ್(Show cause Notice) ಜಾರಿ ಮಾಡಿದೆ. ಜಯಂತ್‌ ಸಿನ್ಹಾ ನಿನ್ನೆ ನಡೆದಿದ್ದ 5 ನೇ ಹಂತದ ಚುನಾವಣೆ(Fifth phase Election) ವೇಳೆ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಅದೂ ಅಲ್ಲದೇ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಪಕ್ಷದ ವರಿಷ್ಠರು ಕಾರಣ ವಿವರಿಸುವಂತೆ ಒತ್ತಾಯಿಸಿ ನೊಟೀಸ್ ಜಾರಿಗೊಳಿಸಿದೆ.

ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಕಳೆದ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿ ಆಗಿದ್ದ ಸಿನ್ಹಾ ಅವರಿಗೆ ಈ ಬಾರಿ ಪಕ್ಷ ಟಿಕೆಟ್‌ ನೀಡಿರಲಿಲ್ಲ. ಈ ಬಾರಿ ಜಯಂತ್‌ ಸಿನ್ಹಾ ಬದಲಿಗೆ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದ ಜಯಂತ್ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ಮಾದರಿಯಲ್ಲಿ ದೆಹಲಿಯ ಸಂಸದ ಗೌತಮ್ ಗಂಭೀರ್ ಸಹ ತಮ್ಮನ್ನು ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಅಲ್ಲದೇ ಚುನಾವಣಾ ಪ್ರಚಾರ ಕಾರ್ಯದಲ್ಲೂ ಅವರು ಭಾಗಿಯಾಗಿರಲಿಲ್ಲ.

ಇದೀಗ ಅವರಿಗೆ ನೊಟೀಸ್‌ ಜಾರಿಗೊಳಿಸಿರುವ ಬಿಜೆಪಿ, ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಮತ ಚಲಾಯಿಸುವ ಅಗತ್ಯವಿದೆ ಎಂದೆನಿಸಲೂ ಇಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಬಗ್ಗೆ ತಕ್ಷಣ ಕಾರಣ ಸಮೇತ ವಿವರಿಸುವಂತೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಅದೂ ಅಲ್ಲದೇ ಕೇವಲ ಎರಡು ದಿನಗಳಲ್ಲಿ ತಮ್ಮ ನಿಲುವನ್ನು ವಿವರಿಸುವಂತೆ ಪಕ್ಷ ಸಿನ್ಹಾ ಅವರನ್ನು ಕೇಳಿದೆ. ಇನ್ನು ಪಕ್ಷದ ವರಷ್ಠರು ಕಳಿಸಿರುವ ಈ ನೊಟೀಸ್‌ಗೆ ಸಿನ್ಹಾ ಇನ್ನೂ ಪ್ರತಿಕ್ರಿಯಿಸಿಲ್ಲ. ಸಿನ್ಹಾ ಅವರು 2019 ರಲ್ಲಿ ಕಾಂಗ್ರೆಸ್‌ನ ಗೋಪಾಲ್ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ: Lok Sabha Election: 5ನೇ ಹಂತದಲ್ಲಿ ಕೇವಲ ಶೇ.57.5ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Continue Reading

ವೈರಲ್ ನ್ಯೂಸ್

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Viral Video: ತೆಲಂಗಾಣದ ಪೆಟ್ರೋಲ್‌ ಬಂಕ್‌ನಲ್ಲಿ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಕೂಡಲೇ ಸಿಬ್ಬಂದಿ ಏಕಾಂಗಿಯಾಗಿ ನಂದಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಹಲವರು ಮುಕ್ತಕಂಠದಿಂದ ಹೊಗಳಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

VISTARANEWS.COM


on

Viral Video
Koo

ಹೈದರಾಬಾದ್‌: ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ತಾಪಮಾನ ಗಣನೀಯವಾಗಿ ಕಡಿಮೆಯಾಗುತ್ತಿಲ್ಲ. ಅತ್ಯಧಿಕ ಉಷ್ಣಾಂಶದ ಕಾರಣದಿಂದ ದೇಶದ ಹಲವೆಡೆ ನಿಲ್ಲಿಸಿದ್ದ, ಚಲಿಸುತ್ತಿರುವ ವಾಹನಗಳು ಬೆಂಕಿಗಾಹುತಿಯಾಗುವ ಘಟನೆ ಪದೇ ಪದೆ ಘಟಿಸುತ್ತಲೇ ಇದೆ. ಸದ್ಯ ಅಂತಹದ್ದೇ ಒಂದು ದುರಂತ ತೆಲಂಗಾಣದಲ್ಲಿ ನಡೆದಿದ್ದು, ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬರ ಸಮಯಪ್ರಜ್ಞೆಯಿಂದ ಬಹು ದೊಡ್ಡ ಅನಾಹುತವೊಂದು ತಪ್ಪಿದೆ. ಸಿಬ್ಬಂದಿ ಬೆಂಕಿ ನಂದಿಸಲು ಏಕಾಂಗಿಯಾಗಿ ನಡೆಸುತ್ತಿರುವ ಪ್ರಯತ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ವೈರಲ್‌ ಆಗಿದೆ (Viral Video).

ತೆಲಂಗಾಣದ ಯಾದಾದ್ರಿ ಭುವನಗಿರಿಯ ಉಪನಗರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಂಧನ ಹಾಕಿಸಿಕೊಳ್ಳಲು ಟ್ರಕ್ಕೊಂದು ಪೆಟ್ರೋಲ್‌ ಬಂಕ್‌ ಪ್ರವೇಶಿಸುತ್ತದೆ. ಬಿಸಿಲಿನ ಝಳಕ್ಕೆ ಇದ್ದಕ್ಕಿದ್ದಂತೆ ಟ್ರಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತದೆ. ಚಾಲಕ ಮತ್ತು ನಿರ್ವಾಹಕ ಕೂಡಲೇ ಟ್ರಕ್‌ನಿಂದ ಜಿಗಿದು ಪಾರಾಗುತ್ತಾರೆ.

ಸ್ಫೋಟದ ಶಬ್ದಕ್ಕೆ ಎಲ್ಲರೂ ದಂಗಾಗಿ ನಿಲ್ಲುತ್ತಾರೆ. ಈ ವೇಳೆ ಕೂಡಲೆ ಎಚ್ಚೆತ್ತುಕೊಳ್ಳುವ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯೋರ್ವರು ಧೈರ್ಯದಿಂದ ಮುನ್ನುಗ್ಗಿ ಅಗ್ನಿಶಾಮಕ ಯಂತ್ರ (Fire extinguisher)ವನ್ನು ಹಿಡಿದು ಉರಿಯುತ್ತಿರುವ ಟ್ರಕ್ ಕಡೆಗೆ ಧಾವಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ.

ಅವರ ಆರಂಭಿಕ ಪ್ರಯತ್ನಗಳ ಹೊರತಾಗಿಯೂ, ಅಗ್ನಿಶಾಮಕ ಸಿಲಿಂಡರ್ ಖಾಲಿಯಾದ ನಂತರ ಬೆಂಕಿ ಮತ್ತೆ ಹೊತ್ತಿಕೊಂಡಿತು. ಕೂಡಲೇ ಅವರು ಮತ್ತೊಂದು ಅಗ್ನಿಶಾಮಕವನ್ನು ತಂದು ಬೆಂಕಿಯನ್ನು ನಿಯಂತ್ರಿಸುವ ಸಾಹಸವನ್ನು ಮುಂದುವರಿಸಿದರು. ಅವರ ಧೈರ್ಯದಿಂದ ಪ್ರೇರಿತರಾಗಿ ಬಂಕ್‌ನಲ್ಲಿದ್ದ ಇತರರು ಸಹ ಕೈ ಜೋಡಿಸತೊಡಗಿದರು. ಎಲ್ಲರ ಪ್ರಯತ್ನದ ಫಲವಾಗಿ, ಸತತ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂತು. ಈ ಮೂಲಕ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿತು. ಅದು ಪೆಟ್ರೋಲ್‌ ಬಂಕ್‌ ಆಗಿರುವ ಕಾರಣ ತುಸು ಹೆಚ್ಚು ಕಡಿಮೆಯಾಗಿದ್ದರೂ ಬಹು ದೊಡ್ಡ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದಾಗಿ ಆಪತ್ತು ಕೂದಲೆಳೆ ಅಂತರದಲ್ಲಿ ತಪ್ಪಿತು.

ನೆಟ್ಟಿಗರಿಂದ ಮೆಚ್ಚುಗೆ

ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಪ್‌ಲೋಡ್‌ ಅದ ಕೆಲವೇ ಕ್ಷಣಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಹಲವು ಲೈಕ್‌ ಬಟನ್‌ ಒತ್ತಿದರೆ ಇನ್ನು ಕೆಲವರು ಸಿಬ್ಬಂದಿಯ ಸಮಯೋಚಿತ ನಿರ್ಧಾರವನ್ನು, ಧೈರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ʼʼಬೆಂಕಿ ನಂದಿಸಲು ಏಕಾಂಗಿಯಾಗಿ ಹೋರಾಡಿದ ಸಿಬ್ಬಂದಿಗೆ ಅತ್ಯಂತ ಶೂರ ಎನ್ನುವ ಅವಾರ್ಡ್‌ ಕೊಡಬೇಕು. ಒಂದು ವೇಳೆ ಸ್ಥಳದಲ್ಲಿ ನಾನು ಇದ್ದಿದ್ದರೆ ಇತರರಂತೆ ಓಡಿ ಹೋಗುತ್ತಿದ್ದೆʼʼ ಎಂದು ಒಬ್ಬರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ʼʼಈ ಸಿಬ್ಬಂದಿಯ ಧೈರ್ಯಕ್ಕೆ ಹ್ಯಾಟ್ಸಾಫ್‌ʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಬೆಂಕಿ ಆಕಸ್ಮಿಕದಿಂದ ಪಾರಾಗುವುದು ಹೇಗೆ ಎನ್ನುವ ಬಗ್ಗೆ ಈತನಿಗೆ ತರಬೇತಿ ಸಿಕ್ಕಿರಬೇಕು. ಅದಕ್ಕೆ ಆತ ಧೈರ್ಯವಾಗಿ ಮುನ್ನುಗ್ಗಿದ್ದಾನೆʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಆತನ ಧೈರ್ಯಕ್ಕೆ ಪ್ರಶಸ್ತಿ ಕೊಡಲೇಬೇಕುʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ. ಈತನೇ ನಿಜವಾದ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:Weight Lose: ತೂಕ ಇಳಿಸಲು ಬಯಸುವಿರಾ? ಈ ಸಂಗತಿ ತಿಳಿದಿರಲಿ

Continue Reading

Lok Sabha Election 2024

Prashant Kishor: ಈ ಬಾರಿ ಮೋದಿಗೆ ಹಿನ್ನಡೆ ಆಗುತ್ತಾ? ಪ್ರಶಾಂತ್ ಕಿಶೋರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Prashant Kishor: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಊಹಿಸಿದ್ದು, 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಯಿಲ್ಲ ಮತ್ತು ಮೊದಲ ಕೆಲವು ಹಂತಗಳ ಮತದಾನ ಆಡಳಿತ ಪಕ್ಷದ ಪರವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಕೆಲವು ವರದಿಗಳು ಇದನ್ನೇ ಊಹಿಸಿರುವ ಮಧ್ಯೆ ಪ್ರಶಾಂತ್‌ ಕಿಶೋರ್‌ ಈ ರೀತಿ ಹೇಳಿಕೆ ನೀಡಿರುವುದು ಕಮಲ ಪಾಳಯಕ್ಕೆ ಕೊಂಚ ಮಟ್ಟಿನ ಸಮಾಧಾನ ತಂದಿತ್ತಿದೆ.

VISTARANEWS.COM


on

Prashant Kishor
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಮೊದಲ 5 ಹಂತಗಳ ಮತದಾನ ಮುಗಿದಿದೆ. ಇನ್ನು ಎರಡು ಹಂತಗಳ ಮತದಾನ ಬಾಕಿ ಇದ್ದು, ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಮಧ್ಯೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಫಲಿತಾಂಶವನ್ನು ಊಹಿಸಿದ್ದು, 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಯಿಲ್ಲ ಮತ್ತು ಮೊದಲ ಕೆಲವು ಹಂತಗಳ ಮತದಾನ ಆಡಳಿತ ಪಕ್ಷದ ಪರವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದು, ಕೆಲವು ವರದಿಗಳು ಇದನ್ನೇ ಊಹಿಸಿರುವ ಮಧ್ಯೆ ಪ್ರಶಾಂತ್‌ ಕಿಶೋರ್‌ ಈ ರೀತಿ ಹೇಳಿಕೆ ನೀಡಿರುವುದು ಕಮಲ ಪಾಳಯಕ್ಕೆ ಕೊಂಚ ಮಟ್ಟಿನ ಸಮಾಧಾನ ತಂದಿತ್ತಿದೆ. ಆದಾಗ್ಯೂ ಅವರು ರಾಜ್ಯವಾರು ಫಲಿತಾಂಶಗಳನ್ನು ಊಹಿಸಲು ನಿರಾಕರಿಸಿದ್ದಾರೆ.

ಮೋದಿ ಬ್ರ್ಯಾಂಡ್‌ ಕುಸಿತ

ಬಿಜೆಪಿಯ ಬಗ್ಗೆ ಈಗಲೂ ಜನರಲ್ಲಿ ಸಕಾರಾತ್ಮಕ ಭಾವನೆ ಇದೆ ಎಂದಿರುವ ಪ್ರಶಾಂತ್‌ ಕಿಶೋರ್‌, ಮೋದಿ ಬ್ರ್ಯಾಂಡ್‌ ಮಾತ್ರ ಕುಸಿಯುತ್ತಿದೆ. ಪ್ರಧಾನಿಯ ಪ್ರಭಾವ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ. ಇತ್ತ ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವಿನ ನಿರ್ಣಾಯಕ ತಿಂಗಳುಗಳು ವ್ಯರ್ಥವಾಗಿದೆ. ಇದು ʼಇಂಡಿಯಾʼ ಬಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಮತ್ತು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಮಲ ಪಡೆಯ ಗೆಲುವಿಗೆ ಇನ್ನಷ್ಟು ಶಕ್ತಿ ನೀಡಲಿದೆ ಎಂದಿದ್ದಾರೆ.

ಇದನ್ನೂ ಓದಿ: Lok Sabha Election 2024: ಪ್ರತಿಪಕ್ಷಗಳಿಗೆ ರೆಡ್‌ ಅಲರ್ಟ್‌ ನೀಡಿದ ಪ್ರಶಾಂತ್‌ ಕಿಶೋರ್‌; ಏನವರ ಚುನಾವಣಾ ಲೆಕ್ಕಾಚಾರ?

ರಾಹುಲ್‌ ಗಾಂಧಿಗೆ ಸಲಹೆ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ ಪ್ರಶಾಂತ್‌ ಕಿಶೋರ್, ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿಲ್ಲದಿದ್ದರೆ ಐದು ವರ್ಷಗಳ ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಮೂರನೇ ಅವಧಿಯಲ್ಲಿ ಬಿಜೆಪಿಗೆ ಅನೇಕ ಕಠಿಣ ಸವಾಲು ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಭೂ ಮಸೂದೆ ವಿರೋಧಿ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ರೈತರ ಹೋರಾಟವನ್ನು ಉಲ್ಲೇಖಿಸಿ ಅವರು ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಸವಾಲುಗಳಿಂದ ಮೋದಿ ದುರ್ಬಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement
Actress Nayanthara twin sons on auto ride
ಕಾಲಿವುಡ್12 mins ago

Actress Nayanthara: ನಯನತಾರಾ ಅವಳಿ ಮಕ್ಕಳ ಭರ್ಜರಿ ಆಟೋ ಸವಾರಿ!

Mallikarjuna Kharge siddaramaiah
ಪ್ರಮುಖ ಸುದ್ದಿ14 mins ago

CM Siddaramaiah: ಖರ್ಗೆಯೂ ಪಿಎಂ ಆಗಲ್ಲ! ಸಿದ್ದರಾಮಯ್ಯ ಯಾಕಿಂಥಾ ಮಾತಾಡಿದ್ರು?

murder Case in Vijayapura
ವಿಜಯಪುರ23 mins ago

Murder Case : ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ, ಶವದ ಪಕ್ಕದಲ್ಲೇ ನಿದ್ರೆಗೆ ಜಾರಿದ ಕುಡುಕ ಪತಿ

Jayant Sinha
ದೇಶ23 mins ago

Jayant Sinha: ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Katrina Kaif And Vicky Kaushal Together In London
ಸಿನಿಮಾ31 mins ago

Katrina Kaif: ಕತ್ರಿನಾ ಕೈಫ್ ಈಗ ಪ್ರೆಗ್ನೆಂಟ್? ಪತಿ ಜತೆ ಲಂಡನ್‌ನಲ್ಲಿ ಜಾಲಿ ಮೂಡ್‌!

gold rate today sruthi hassan
ಚಿನ್ನದ ದರ41 mins ago

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಗ್ರಾಹಕರಿಗೆ ತುಸು ನಿರಾಳ

India Head Coach
ಕ್ರೀಡೆ49 mins ago

India Head Coach: ಭಾರತ ತಂಡದ ಕೋಚ್​ ಆಗಲು ಫ್ಲೆಮಿಂಗ್​ಗೆ ಮನವೊಲಿಸುವಂತೆ ಧೋನಿಗೆ ಮನವಿ ಮಾಡಿದ ಬಿಸಿಸಿಐ!

Viral Video
ವೈರಲ್ ನ್ಯೂಸ್58 mins ago

Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Contaminated Water
ಮೈಸೂರು1 hour ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Viral video
ವೈರಲ್ ನ್ಯೂಸ್1 hour ago

Chudidar Gang: ಚಡ್ಡಿ ಗ್ಯಾಂಗ್ ಆಯ್ತು, ಈಗ ದರೋಡೆಕೋರರ ಚೂಡಿದಾರ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ; ಹುಷಾರ್! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ23 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌