Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ - Vistara News

ಕ್ರೀಡೆ

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

Neeraj Chopra: ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

VISTARANEWS.COM


on

neeraj chopra kashinath naik 1
ಕೋಚ್‌ ಕಾಶಿನಾಥ್‌ ನಾಯ್ಕ್‌ ಜೊತೆಗೆ ನೀರಜ್‌ ಚೋಪ್ರಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

ಕೋಚ್‌ ಕಾಶಿನಾಥ ನಾಯ್ಕ್‌

2022ರ ಕಾಮನ್ ವೇಲ್ತ್ ಗೇಮ್ಸ್ ಬಳಿಕ ಅರ್ಷದ್ ನದೀಮ್ ಗಾಯದ ಸಮಸ್ಯೆಗೊಳಗಾಗಿದ್ದರು. ಗಾಯದಿಂದ ವಾಪಸಾದ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿಯೂ 88 ಮೀಟರ್ ಎಸೆದಿದ್ರು. ಆದ್ರೆ ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಅವರಿಗೆ ಧೈರ್ಯ ತುಂಬಿತು. ಒಂದು ವೇಳೆ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆದಿದ್ರೆ ಆತ ನರ್ವಸ್ ಆಗಿಬಿಡುತ್ತಿದ್ದ. ನೀರಜ್ ಮೊದಲ ಎಸೆತ ಫೌಲ್ ಆಗಿದ್ರಿಂದಲೇ ಆತನ ಆತ್ಮವಿಶ್ವಾಸ ಹೆಚ್ಚಾಯ್ತು ಎಂದು ಕಾಶೀನಾಥ್‌ ಹೇಳಿದ್ದಾರೆ.

ಯಾವಾಗಲೂ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆಯುತ್ತಿದ್ದ. ಆದರೆ ಈ ಬಾರಿ ಪೌಲ್ ಆಗಿದ್ದು ಅರ್ಷದ್ ನದೀಮ್‌ಗೆ ವರವಾಯ್ತು. ನದೀಮ್ ಒಲಿಂಪಿಕ್ಸ್ ರೆಕಾರ್ಡ್ಸ್ ಮಾಡುತ್ತಿದ್ದಂತೆ ನೀರಜ್ ನರ್ವಸ್ ಆಗಿಬಿಟ್ಟ. ಆದರೂ ನೀರಜ್ ತನ್ನ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿದ್ದಾನೆ. ಅಥ್ಲೆಟಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ತಮ್ಮ ಶಿಷ್ಯನನ್ನು ಕಾಶೀನಾಥ್ ನಾಯ್ಕ ಶ್ಲಾಘಿಸಿದ್ದಾರೆ.

ಪೌಲ್‌ ಮಾಡಿದ ನೀರಜ್

ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ನಿರಾಸೆಯ ಆರಂಭವಾಯಿತು. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್​ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್​ 92. ಮೀಟರ್​ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್​ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್​ ತಮ್ಮ ಕೊನೇ ಎಸೆತವನ್ನೂ 91. 79 ಮೀಟರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!

ಇದನ್ನೂ ಓದಿ: Neeraj Chopra : ನೀರಜ್​ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್​ಗೆ ಒಲಿಂಪಿಕ್​ ದಾಖಲೆಯ ಬಂಗಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

Paris Olympics: ಗುರುವಾರ ನಡೆದಿದ್ದ ಪ್ರಿ-ಕಾರ್ಟರ್‌ ಫೈನಲ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದ ಅಮನ್‌, ಸೆಮಿಫೈನಲ್‌ನಲ್ಲಿ ತಾಂತ್ರಿಕ ಹಿನ್ನಡೆಯಿಂದಲೇ ಸೋಲನುಭವಿಸಿದ್ದರು

VISTARANEWS.COM


on

Paris Olympics
Koo

ಪ್ಯಾರಿಸ್​: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗಿರುವ ಭಾರತದ ಏಕೈಕ ಪುರುಷ ಕುಸ್ತಿಪಟು, 21 ವರ್ಷದ ಅಮನ್‌ ಸೆಹ್ರಾವತ್‌(Aman Sehrawat) ಇಂದು ನಡೆಯುವ ಕಂಚಿನ ಪದಕದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೇರಿಯನ್ ಕ್ರೂಜ್. ಈ ಪಂದ್ಯ ರಾತ್ರಿ 10.45ಕ್ಕೆ ನಡೆಯಲಿದೆ. ನಿನ್ನೆ(ಗುರುವಾರ) ನಡೆದಿದ್ದ ಪ್ರೀ ಕ್ವಾರ್ಟರ್​ ಮತ್ತು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿದ್ದ ಅಮನ್​ ಬಳಿಕ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡಿದ್ದರು. ಹಿಗುಚಿ ರಿಯೊ ಒಲಿಂಪಿಕ್ಸ್‌ನಲ್ಲಿ (2016) ಬೆಳ್ಳಿ ಗೆದ್ದ ಸಾಧಕನಾಗಿದ್ದರು.

ಗುರುವಾರ ನಡೆದಿದ್ದ ಪ್ರಿ-ಕಾರ್ಟರ್‌ ಫೈನಲ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದ ಅಮನ್‌, ಸೆಮಿಫೈನಲ್‌ನಲ್ಲಿ ತಾಂತ್ರಿಕ ಹಿನ್ನಡೆಯಿಂದಲೇ ಸೋಲನುಭವಿಸಿದ್ದರು. 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ನಿರೀಕ್ಷೆಯಲ್ಲಿದ್ದಾರೆ.

ಇಂದಿನಾ ವೇಳಾಪಟ್ಟಿ

ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.

ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧಿಗಳ ಕಾದಾಟ; ಯಾವ ಪದಕ ನಿರೀಕ್ಷೆ? ಇಲ್ಲಿದೆ ವೇಳಾಪಟ್ಟಿ

ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.

ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್​ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.

ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.

5 ಪದಕ ಗೆದ್ದ ಭಾರತ


ಭಾರತ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸದ್ಯ 5 ಪದಕ ಗೆದ್ದು ಪದಕ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ. 1, ಬೆಳ್ಳಿ ಮತ್ತು 4 ಕಂಚುಗಳು ಒಳಗೊಂಡಿದೆ. ಇಂದು ನಡೆಯುವ ಪುರುಷರ ಕುಸ್ತಿಯಲ್ಲಿ ಅಮನ್​ ಕಂಚು ಗೆದ್ದರೆ ಪದಕದ ಸಂಖ್ಯೆ 6ಕ್ಕೆ ಏರಲಿದೆ.

Continue Reading

ಕ್ರೀಡೆ

Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

Vinesh Phogat: ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರು ಸಲ್ಲಿದ್ದ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿತ್ತು. ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ.

VISTARANEWS.COM


on

Vinesh Phogat
Koo

ನವದೆಹಲಿ: ನಿಗದಿತ ತೂಕಕ್ಕಿಂತ ಅಧಿಕ ತೂಕ ಹೊಂದಿದ್ದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ( ಅನರ್ಹಗೊಂಡು ಪದಕ ಕಳೆದುಕೊಂಡ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat) ಅವರಿಗೆ ‘ಭಾರತ ರತ್ನ’ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ಒತ್ತಾಯಿಸಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ನೆಟ್ಟಿಗರು ಸವಾಲೊಂದನ್ನು ಹಾಕಿದ್ದಾರೆ. ಭಾರತ ರತ್ನ ನೀಡುವ ಮುನ್ನ ವಿನೇಶ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದಾರೆ.

ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ವಿನೇಶ್​, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನೇನು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅವರನ್ನು ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವ ಕಾರಣ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಅವರು ಐತಿಹಾಸಿಕ ಪದಕವೊಂದನ್ನು ಗೆಲ್ಲುವ ಅವಕಾಶ ಕಳೆದುಕೊಂಡರು. ಪದಕ ಗೆಲ್ಲದಿದ್ದರೂ ಕೂಡ ವಿನೇಶ್​ ಸಾಧನೆಗೆ ಇಡೀ ದೇಶವಾಸಿಗಳು ಮೆಚ್ಚುಗೆ ಸೂಚಿಸಿದ್ದರು.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ವಿನೇಶ್​ ಸಾಧನೆಯನ್ನು ಕೊಂಡಾಡಿದ್ದರು. ಜತೆಗೆ ವಿನೇಶ್​ ಅವರ ಅಸಾಮಾನ್ಯ ಪ್ರದರ್ಶನವನ್ನು ಗುರುತಿಸಿ ಅವರಿಗೆ ಭಾರತ ರತ್ನ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸಲು ಸರ್ಕಾರ ಹಾಗೂ ವಿಪಕ್ಷಗಳು ಒಮ್ಮತವನ್ನು ಕಂಡುಕೊಳ್ಳಬೇಕು. ಅವರು ಎದುರಿಸಿದ ಕಷ್ಟಗಳಿಗೆ ನಾವು ಕನಿಷ್ಠ ಪಕ್ಷ ಇಷ್ಟಾದರೂ ಮಾಡಬೇಕು ಎಂದು ಒತ್ತಾಯಿಸಿದ್ದರು.

ಅಭಿಷೇಕ್ ಬ್ಯಾನರ್ಜಿ ಅವರ ಈ ಹೇಳಿಕೆ ಕಂಡು ಅನೇಕ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿದ್ದಾರೆ. ಭಾರತ ರತ್ನವನ್ನು ಹೀಗೆ ಎಲ್ಲರಿಗೂ ನೀಡುತ್ತಾ ಹೋದರೆ ಆ ಪ್ರಶಸ್ತಿಗೆ ಯಾವುದೇ ಬೆಲೆ ಇರುವುದಿಲ್ಲ. ಅವರ ಸಾಧನೆ ಮೇಲೆ ನಿಮಗ ಅಪಾರ ಗೌರವ ಇದ್ದರೆ ನೀವು ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಸವಾಲ್​ ಹಾಕಿದ್ದಾರೆ. ಇನ್ನು ಕೆಲವರು ನೋಬೆಲ್​ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಎಂದು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಕಮೆಂಟ್​ ಮೂಲಕ ಅಭಿಷೇಕ್ ಬ್ಯಾನರ್ಜಿ ಅವರನ್ನು ರೋಸ್ಟ್​ ಮಾಡಿದ್ದಾರೆ.

ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರು ಸಲ್ಲಿದ್ದ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿತ್ತು. ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ.

ವಿನೇಶ್‌ ಪೋಗಟ್‌ ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸಮ್ಮಾನಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಹೇಳಿದ್ದಾರೆ. ಒಲಿಂಪಿಕ್‌ ಬೆಳ್ಳಿ ಗೆದ್ದವರಿಗೆ ನೀಡುವಷ್ಟು ಬಹುಮಾನವನ್ನು ವಿನೇಶ್‌ ಅವರಿಗೆ ನೀಡಲಾಗುವುದು. ಸರಕಾರದ ಕ್ರೀಡಾ ನೀತಿಯಂತೆ ಒಲಿಂಪಿಕ್‌ ಚಿನ್ನ ಗೆದ್ದವರಿಗೆ ಸರಕಾರ ಆರು ಕೋಟಿ ರೂ. ಬೆಳ್ಳಿಗೆ ನಾಲ್ಕು ಕೋಟಿ ರೂ. ಮತ್ತು ಕಂಚು ಪದಕ ವಿಜೇತರಿಗೆ 2.5 ಕೋಟಿ ರೂ. ನೀಡಲಿದೆ.

ನಮ್ಮ ಧೈರ್ಯಶಾಲಿ ಪುತ್ರಿ ವಿನೇಶ್‌ ಅದ್ಭುತ ನಿರ್ವಹಣೆ ನೀಡಿ ಫೈನಲಿಗೇರಿದ್ದರು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಫೈನಲಿನಲ್ಲಿ ಸ್ಪರ್ದಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ನಮಗೆಲ್ಲ ಚಾಂಪಿಯನ್‌ ಕುಸ್ತಿಪಟು ಆಗಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸರಕಾರವು ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸ್ವಾಗತ ಮತ್ತು ಸಮ್ಮಾನಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

Continue Reading

ಕ್ರೀಡೆ

Neeraj Chopra: ಬೆಳ್ಳಿ ಗೆದ್ದ ಮಗ, ಹೃದಯ ಗೆದ್ದ ತಾಯಿ; ಪಾಕ್​ನ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದ ಚೋಪ್ರಾ ತಾಯಿ

Neeraj Chopra: ಫೈನಲ್​ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.

VISTARANEWS.COM


on

Neeraj Chopra
Koo

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ನಿರೀಕ್ಷೆಯಾಗಿದ್ದ ನೀರಜ್​ ಚೋಪ್ರಾ ಅವರು ಗುರುವಾರ ತಡರಾತ್ರಿ ನಡೆದ ಜಾವೆಲಿನ್ ಥ್ರೋ ಫೈನಲ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ನೀರಜ್​ ಚೋಪ್ರಾ ಅವರ ತಾಯಿ(neeraj chopra mother) ಮಗ ಬೆಳ್ಳಿ ಪದಕ ಗೆದ್ದ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ. ಜತೆಗೆ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದ್ದಾರೆ. ಸದ್ಯ ಈ ವಿಡಿಯೊ ವೈರಲ್​ ಆಗಿದೆ.

ನೀರಜ್​ ಬೆಳ್ಳಿ ಪದಕ ಗೆದ್ದ ಸಂತಸದಲ್ಲಿ ಎಎನ್‌ಐ ಜತೆ ಮಾತನಾಡಿದ ನೀರಜ್​ ಅವರ ತಾಯಿ ಸರೋಜ್ ದೇವಿ, “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದರು.

ಟೋಕಿಯೊನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಮೇಲೆ ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿಗೆ ತೃಪ್ತಿಪಟ್ಟರು. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90 ಮೀ ಮಾರ್ಕ್ ದಾಟಿದ್ದ ಅರ್ಷದ್ ನದೀಮ್ ಅತ್ಯುತ್ತಮ ಥ್ರೋ 86.59 ಮೀ ನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್​ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.

ಚೋಪ್ರಾಗೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಹೇಳಿದ್ದೇನು?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

Continue Reading

ಕ್ರೀಡೆ

Paris Olympics 2024: ಒಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧಿಗಳ ಕಾದಾಟ; ಯಾವ ಪದಕ ನಿರೀಕ್ಷೆ? ಇಲ್ಲಿದೆ ವೇಳಾಪಟ್ಟಿ

Paris Olympics 2024 : 1972ರಲ್ಲಿ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿತ್ತು. ಅದೇ ರೀತಿ ಭಾರತ ಹಾಕಿ ತಂಡ ಮತ್ತೊಮ್ಮೆ ಸತತ ಎರಡು ಬಾರಿ ಪದಕವನ್ನು ಗೆದ್ದುಕೊಂಡಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಕಂಚಿನ ಪದಕಕ್ಕೆ ಭಾಜನವಾಗಿದೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಗುರುವಾರ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಹಾಕಿ ತಂಡ ಸ್ಪೇನ್ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಎಲ್ಲವೂ ಕಂಚಿನ ಪದಕಗಳಾಗಿವೆ. ಭಾರತದ ಪಾಲಿಗೆ ಇದು ಖುಷಿಯ ವಿಚಾರವೇ ಸರಿ. ಪುರುಷರ 57 ಕೆ.ಜಿ ವಿಭಾಗದ ಪದಕದ ಸುತ್ತಿಗೆ ಪ್ರವೇಶ ಪಡೆಯುವ ಗುರಿಯೊಂದಿಗೆ ಪ್ರದರ್ಶನ ನೀಡಿದ್ದಾರೆ. ಗುರುವಾರ ನಡೆದ ಆರಂಭಿಕ ಎರಡು ಪಂದ್ಯಗಳಲ್ಲಿ ಅಮನ್ ಅತ್ಯುತ್ತಮ ಪ್ರದರ್ಶನ ನೀಡಿದರು, ತಾಂತ್ರಿಕ ಶ್ರೇಷ್ಠತೆಯೊಂದಿಗೆ ಎರಡನ್ನೂ ಗೆದ್ದಿದ್ದಾರೆ.

1972ರಲ್ಲಿ ಪುರುಷರ ಹಾಕಿ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿತ್ತು. ಅದೇ ರೀತಿ ಭಾರತ ಹಾಕಿ ತಂಡ ಮತ್ತೊಮ್ಮೆ ಸತತ ಎರಡು ಬಾರಿ ಪದಕವನ್ನು ಗೆದ್ದುಕೊಂಡಿದೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಕಂಚಿನ ಪದಕಕ್ಕೆ ಭಾಜನವಾಗಿದೆ.

ಭಾರತ ನಿಯೋಗದ ಕೆಲವು ಸ್ಪರ್ಧಿಗಳು ಆಗಸ್ಟ್​​ 9ರಂದು ಕೆಲವೊಂದು ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಆ ಸ್ಪರ್ಧೆಗಳ ವಿವರ ಈ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: Paris Olympics 2024 : ಕ್ರೀಡಾಗ್ರಾಮಲ್ಲಿ ಮಾದಕ ವಸ್ತು ಕೊಕೇನ್ ಸೇವನೆ, ಆಸ್ಟ್ರೇಲಿಯಾದ ಹಾಕಿ ಆಟಗಾರನ ಬಂಧನ

ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.

ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.

ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.

ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್​ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.

ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.

ಇದನ್ನೂ ಓದಿ: Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Continue Reading
Advertisement
Duniya Vijay Bheema Movie Release today
ಸ್ಯಾಂಡಲ್ ವುಡ್2 mins ago

Duniya Vijay: ರಾಜ್ಯಾದ್ಯಂತ `ಭೀಮ’ ಸಿನಿಮಾ ರಿಲೀಸ್; ಬ್ಲಾಕ್‌ ಕೋಬ್ರಾಗೆ ಭರ್ಜರಿ ವೆಲ್‌ಕಮ್‌ ಮಾಡಿದ ಫ್ಯಾನ್ಸ್‌!

gold rate today
ವಾಣಿಜ್ಯ5 mins ago

Gold Rate Today: ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಹೀಗಿದೆ

UGCET 2024
ಬೆಂಗಳೂರು11 mins ago

UGCET 2024: ಯುಜಿಸಿಇಟಿ ಮೊದಲ ಅಣಕು ಸೀಟು ಹಂಚಿಕೆ ಫಲಿತಾಂಶ ಇಂದು ಸಂಜೆ 6 ಗಂಟೆಗೆ ಪ್ರಕಟ

dengue fever death bangalore
ಬೆಂಗಳೂರು11 mins ago

Dengue Fever: ಡೆಂಗ್ಯುವಿಗೆ ಬೆಂಗಳೂರಿನಲ್ಲಿ ಹೆಡ್‌ ಕಾನ್ಸ್‌ಟೇಬಲ್‌ ಬಲಿ, 11ಕ್ಕೇರಿದ ಸಾವಿನ ಸಂಖ್ಯೆ

Paris Olympics
ಕ್ರೀಡೆ36 mins ago

Paris Olympics: ಚೊಚ್ಚಲ ಪ್ರಯತ್ನದಲ್ಲೇ ಒಲಿಂಪಿಕ್ಸ್​ ಪದಕ ಗೆಲ್ಲಲು ಸಜ್ಜಾದ ಅಮನ್‌ ಸೆಹ್ರಾವತ್‌

CM Siddaramaiah
ಪ್ರಮುಖ ಸುದ್ದಿ52 mins ago

CM Siddaramaiah: ಇಂದು ಮೈಸೂರಿನಲ್ಲಿ ಜನಾಂದೋಲನ ಸಮಾವೇಶ: ದೋಸ್ತಿಗಳ ವಿರುದ್ಧ ಅಬ್ಬರಿಸಲಿದೆ ಸಿದ್ದರಾಮಯ್ಯ ಪಡೆ, ʼಸಂಚುʼ ಕೃತಿ ಬಿಡುಗಡೆ

Kannada Serials TRP Demand increased for Ramachari serial Amritdhare is not even in the top 5
ಕಿರುತೆರೆ1 hour ago

Kannada Serials TRP: ʻರಾಮಾಚಾರಿʼ ಧಾರಾವಾಹಿಗೆ ಹೆಚ್ಚಾಯ್ತು ಡಿಮ್ಯಾಂಡ್‌; ಟಾಪ್‌ 5ನಲ್ಲೂ ಇಲ್ಲ ʻಅಮೃತಧಾರೆʼ!

Bangladesh Unrest
ವಿದೇಶ1 hour ago

Bangladesh Unrest: ಬಾಂಗ್ಲಾ ದಂಗೆ ಹಿಂದೆ ಇದ್ಯಾ ಪಾಕ್‌ ISI ಕೈವಾಡ? ಶೇಖ್‌ ಹಸೀನಾ ಪುತ್ರ ಹೇಳಿದಿಷ್ಟು!

Rahul Gandhi
ದೇಶ1 hour ago

Rahul Gandhi: ಸಂಸತ್‌‌ನಲ್ಲಿ ವಕ್ಫ್ ಚರ್ಚೆ ವೇಳೆ ನಿದ್ದೆ ಮಾಡುತ್ತಿದ್ದ ರಾಹುಲ್ ಗಾಂಧಿ! ವಿಡಿಯೊ ವೈರಲ್

Vinesh Phogat
ಕ್ರೀಡೆ1 hour ago

Vinesh Phogat: ವಿನೇಶ್​ರನ್ನು ಪ.ಬಂಗಾಳ ಸಿಎಂ ಮಾಡಿ; ಭಾರತ ರತ್ನ ಕೊಡಿ ಎಂದ ಟಿಎಂಸಿ ನಾಯಕನಿಗೆ ಸವಾಲ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ17 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ19 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ20 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌