IND VS SA | ಹರಿಣಗಳನ್ನು ಮಣಿಸಿ ಸೆಮೀಸ್ ​ಹಾದಿ ಸುಗಮಗೊಳಿಸೀತೇ ರೋಹಿತ್​ ಪಡೆ? - Vistara News

Latest

IND VS SA | ಹರಿಣಗಳನ್ನು ಮಣಿಸಿ ಸೆಮೀಸ್ ​ಹಾದಿ ಸುಗಮಗೊಳಿಸೀತೇ ರೋಹಿತ್​ ಪಡೆ?

ಟಿ20 ವಿಶ್ವಕಪ್​ನ ಸೆಮಿಫೈನಲ್​ ಟಿಕೆಟ್​ ಖಾತ್ರಿ ಪಡಿಸಲು ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪರ್ತ್​: ಐಸಿಸಿ ಟಿ20 ವಿಶ್ವ ಕಪ್‌ನ ಸೂಪರ್ 12 ಹಂತದ ಮೊದಲೆರಡು ಪಂದ್ಯಗಳಲ್ಲಿ ಈಗಾಗಲೇ ಗೆಲುವು ಸಾಧಿಸಿರುವ ಟೀಮ್​ ಇಂಡಿಯಾ, ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಟಿಕೆಟ್​ ಖಾತ್ರಿ ಪಡಿಸುವುದು ರೋಹಿತ್​ ಪಡೆಯ ಯೋಜನೆಯಾಗಿದೆ. ಇನ್ನೊಂದೆಡೆ ಹರಿಣಗಳ ಪಡೆ ಕಳೆದ ಭಾರತ ಪ್ರವಾಸದ ಟಿ20 ಸರಣಿ ಸೋಲಿಗೆ ಇಲ್ಲಿ ಸೇಡು ತೀರಿಸಲು ಕಾಯುತ್ತಿದೆ. ಈ ನಿಟ್ಟಿನಲ್ಲಿ ಈ ಪಂದ್ಯ ಹೈವೋಲ್ಟೇಜ್​ನಿಂದ ಕೂಡಿರಲಿದೆ ಎನ್ನಲಡ್ಡಿಯಿಲ್ಲ.

ಭಾರತ ತಂಡದ ಪರ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧ ಶತಕ ದಾಖಲಿಸುವ ಮೂಲಕ ತಂಡದ ಬ್ಯಾಟಿಂಗ್​ ಬಲವನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧವೂ ಈ ಆಟಗಾರರಿಂದ ಅಂತಹದ್ದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ. ಆದರೆ ಕನ್ನಡಿಗ ರಾಹುಲ್​ ಮಾತ್ರ ಇನ್ನೂ ಬ್ಯಾಟಿಂಗ್​ ಫಾರ್ಮ್​ಗೆ ಮರಳದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರ ಸ್ಥಾನಕ್ಕೆ ಪಂತ್​ ಉತ್ತಮ ಆಯ್ಕೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಬ್ಯಾಟಿಂಗ್​ ಕೋಚ್ ವಿಕ್ರಮ್​ ರಾಠೋಡ್​​ ಈ ಪಂದ್ಯದಲ್ಲಿ ರಾಹುಲ್​ ಆಡಲಿದ್ದಾರೆ ಎಂದು ಪಂದ್ಯಕ್ಕೂ ಮುನ್ನವೇ ತಿಳಿಸಿದ್ದಾರೆ. ಈ ಅವಕಾಶವನ್ನು ರಾಹುಲ್​ ಎರಡೂ ಕೈಗಳಿಂದ ಬಾಚಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ.

ಇತ್ತಂಡಗಳ ಬೌಲಿಂಗ್​ ಬಲಿಷ್ಠ

ಬೌಲಿಂಗ್​ ವಿಚಾರದಲ್ಲಿ ನೋಡುವುದಾದರೆ ಉಭಯ ತಂಡದ ಬೌಲರ್​ಗಳು ಸಮರ್ಥರಿದ್ದಾರೆ. ಭಾರತ ಪರ ಭುವನೇಶ್ವರ್​, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಶಮಿ ಬಲಿಷ್ಠವಾಗಿ ಗೋಚರಿಸಿದರೆ. ಅತ್ತ ಕಗಿಸೊ ರಬಾಡ, ಆನ್ರಿಚ್​ ನೋರ್ಜೆ ಘಾತಕ ಸ್ಪೆಲ್​ ನಡೆಸಬಲ್ಲರು. ಉಳಿದಂತೆ ಸ್ಪಿನ್​ ವಿಭಾಗದಲ್ಲಿ ಆರ್​.ಅಶ್ವಿನ್​, ತಬ್ರೆಜ್​ ಶಂಸಿ, ಕೇಶವ್​ ಮಹಾರಾಜ್​ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಇತ್ತಂಡಗಳ ಬೌಲಿಂಗ್ ವಿಭಾಗ ಹೆಚ್ಚು ಶಕ್ತಿಶಾಲಿ.

ಡೇಂಜರಸ್​ ರಿಲಿ ರೊಸೊ

ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್​ ರಿಲಿ ರೊಸೊ ಈ ಕೂಟದ ಡೇಂಜರಸ್​ ಬ್ಯಾಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಕಳೆದ ಭಾರತ ಪ್ರವಾಸದ ವೇಳೆಯೂ ಶತಕ ಸಿಡಿಸಿ ಮಿಂಚಿದ್ದರು. ಅವರನ್ನು ಹೆಚ್ಚು ಕಾಲ ಕ್ರೀಸ್​ನಲ್ಲಿ ಇರದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳಬೇಕಿದೆ. ಉಳಿದಂತೆ ಆರಂಭಿಕ ಆಟಗಾರ ಕ್ವಿಂಟನ್​ ಡಿಕಾಕ್​ ಕೂಡ ಉತ್ತಮ ಫಾರ್ಮ್​ನಲ್ಲಿರುವುದು ತಂಡಕ್ಕೆ ಹೆಚ್ಚು ಬಲ ನೀಡಿದೆ. ಜತೆಗೆ ಡೇವಿಡ್​ ಮಿಲ್ಲರ್​ ಅವರನ್ನೂ ಕಡೆಗಣಿಸುವಂತಿಲ್ಲ. ಅವರು ಕೆಲವೊಮ್ಮೆ ಮ್ಯಾಚ್​ ಕಿಲ್ಲರ್​ ಆಗಿ ಕಾಣಿಸಿಕೊಂಡ ಹಲವು ನಿದರ್ಶನವಿದೆ. ಆದ್ದರಿಂದ ಮಿಲ್ಲರ್​ ಮೇಲು ನಿಗಾ ಇರಿಸಬೇಕಿದೆ.

ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 23 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 13 ಪಂದ್ಯವನ್ನ ಜಯಿಸಿದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಗೆಲವು ಸಾಧಿಸಿದೆ. 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.

ಪಂದ್ಯ ಆರಂಭ:

ಸಮಯ: ಸಂಜೆ 04: 30ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ಪರ್ತ್‌ ಸ್ಟೇಡಿಯಂ, ಪರ್ತ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಇದನ್ನೂ ಓದಿ | T20 World Cup | ಗ್ಲೆನ್​ ಫಿಲಿಪ್ಸ್​ ಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್​ ಗೆಲುವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Sachin Birthday: ಬದುಕಿನಲ್ಲಿ ಸಚಿನ್‌ ಅರ್ಧ ಶತಕ; ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Sachin Birthday: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಸಾಕಷ್ಟು ವಿಚಾರಗಳು ನಮಗೆ ತಿಳಿದಿದೆ. ಆದರೂ ಮತ್ತಷ್ಟು ತಿಳಿಯಬೇಕೆನ್ನುವ ಆಸೆಯಂತೂ ಎಲ್ಲರಿಗೂ ಇದೆ. ಇಂದು ೫೦ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ಅವರ ಬಗೆಗಿನ 30 ಪ್ರಮುಖ ಸಂಗತಿಗಳು ಇಂತಿವೆ.

VISTARANEWS.COM


on

By

Sachin Tendulkar
Koo

ಕ್ರಿಕೆಟ್ (Cricket) ದೇವರು ಸಚಿನ್ ತೆಂಡೂಲ್ಕರ್ (Sachin Birthday) ಅವರಿಗೆ ಇಂದು ಐವತ್ತನೇ ಜನ್ಮ ದಿನದ (birthday) ಸಂಭ್ರಮ. ಜೀವನದಲ್ಲಿ ಅರ್ಧಶತಕ ಪೂರೈಸಿದ ಭಾರತದ (india) ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಸಚಿನ್ ಅವರ ಜನ್ಮ ದಿನವನ್ನು ಇಡೀ ಜಗತ್ತೇ ಇಂದು ಆಚರಿಸುತ್ತಿದೆ. ಜೀವನದ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಸಾಧನೆ ಮಾಡಿದ ತೆಂಡೂಲ್ಕರ್ ಅವರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ಭಾರತದ ಪ್ರತಿಷ್ಠಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್‌ ಏಪ್ರಿಲ್ 24ರಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಜೀವನದ 30 ಆಕರ್ಷಕ ವಿಷಯಗಳನ್ನು ತಿಳಿಯೋಣ.

1. ಸಚಿನ್ ತೆಂಡೂಲ್ಕರ್ ರಣಜಿ ತಂಡಕ್ಕೆ ಸೇರಿದಾಗ ಅವರಿಗೆ 14 ವರ್ಷ. ಆಗ ರಣಜಿ ತಂಡಕ್ಕೆ ಸೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ಅವರದಾಗಿತ್ತು.

2. ಸಚಿನ್ ತೆಂಡೂಲ್ಕರ್ 1987ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಾಲ್‌ಬಾಯ್ ಆಗಿದ್ದರು.

3. ಸಚಿನ್ ತೆಂಡೂಲ್ಕರ್ ಅವರು ಕಾಲಿಗೆ ಪ್ಯಾಡ್ ಕಟ್ಟುವಾಗ ಮೊದಲು ಎಡ, ಬಳಿಕ ಬಲ ಬದಿಯ ಪ್ಯಾಡ್ ಅನ್ನು ಹಾಕುತ್ತಾರೆ. ಇದರಿಂದ ಉತ್ತಮವಾಗಿ ಆಡಬಹುದು ಎನ್ನುವ ನಂಬಿಕೆ ಅವರದಾಗಿತ್ತು.

4. ನಿದ್ದೆಯಲ್ಲಿ ಮಾತನಾಡುವುದು, ನಡೆಯುವುದು ಸಚಿನ್ ತೆಂಡೂಲ್ಕರ್ ಅವರ ಅಭ್ಯಾಸವಾಗಿತ್ತು. ಸಂದೀಪ್ ಪಾಟೀಲ್ ಮತ್ತು ಕ್ಲೇಟನ್ ಮುರ್ಜೆಲ್ಲೊ ಅವರ ಪುಸ್ತಕ ಕ್ಯಾಟ್ ಟೋಲ್ಡ್: ಹ್ಯೂಮರಸ್ ಕ್ರಿಕೆಟಿಂಗ್ ಅನೆಕ್ಡೋಟ್ಸ್‌ ನಲ್ಲಿ ಇದನ್ನು ಹೇಳಲಾಗಿದೆ.

5. ಪ್ರಸಿದ್ಧ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ 1987ರಲ್ಲಿ ಚೆನ್ನೈನ ಎಂಆರ್ ಎಫ್ ಪೇಸ್ ಅಕಾಡೆಮಿಯಲ್ಲಿ ಭಾಗಿಯಾಗುವ ಸಚಿನ್ ತಂಡೂಲ್ಕರ್ ಅವರ ಆಸೆಯನ್ನು ತಿರಸ್ಕರಿಸಿದ್ದರು!


6. ಸಚಿನ್ ತೆಂಡೂಲ್ಕರ್ ಅವರು ಬಾಂಬೆ ರಣಜಿ ತಂಡದೊಂದಿಗೆ ಪ್ರವಾಸದಲ್ಲಿದ್ದಾಗ ಓದಲು ತಮ್ಮ ಪಠ್ಯಪುಸ್ತಕಗಳನ್ನು ತಂದಿದ್ದರು!

7. ಸೋತ ತಂಡದ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ಆರು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವುದು ದಾಖಲೆಯಾಗಿದೆ.

8. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 1990ರಲ್ಲಿ ಸಚಿನ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದಾಗ ಅವರ ವಯಸ್ಸು 18. ಆಗ ಅವರಿಗೆ ಷಾಂಪೇನ್ ಬಾಟಲಿಯನ್ನು ಪಂದ್ಯಶ್ರೇಷ್ಠ ಟ್ರೋಫಿಯಾಗಿ ನೀಡಲಾಯಿತು. ಕಾನೂನುಬದ್ಧವಾಗಿ ಕುಡಿಯಬಹುದಾದ ವಯಸ್ಸಿನಲ್ಲಿದ್ದ ಸಚಿನ್ ಗೆ ಅದನ್ನು ತೆರೆಯಲು ಬರಲಿಲ್ಲ. 1998ರಲ್ಲಿ ಅವರ ಮಗಳು ಸಾರಾ ತಮ್ಮ ಮೊದಲ ಹುಟ್ಟುಹಬ್ಬದಂದು ಅದನ್ನು ಅಂತಿಮವಾಗಿ ತೆರೆದರು!


9. 1988ರಲ್ಲಿ ಇಂಟರ್-ಸ್ಕೂಲ್ ಪಂದ್ಯದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಭಾರತದ ಮಾಜಿ ಸ್ಟಾರ್ ಆಟಗಾರ ವಿನೋದ್ ಕಾಂಬ್ಳಿ 664 ರನ್‌ಗಳ ಜೊತೆಯಾಟದ ಮೂಲಕ ದಾಖಲೆಯನ್ನು ಬರೆದಿದ್ದರು.

10. 1992ರಲ್ಲಿ ಯಾರ್ಕ್‌ಷೈರ್‌ಗೆ ಮೊದಲ ವಿದೇಶಿ ಕ್ರಿಕೆಟಿಗರಾಗಿದ್ದ ಸಚಿನ್ ತೆಂಡೂಲ್ಕರ್ 19ನೇ ವಯಸ್ಸಿಗೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯರು.

11. ಟಿವಿ ವಿಮರ್ಶೆಯ ಅನಂತರ ಮೂರನೇ ಅಂಪೈರ್‌ನಿಂದ ವಜಾಗೊಂಡ ಮೊದಲ ಆಟಗಾರ ಸಚಿನ್ ತೆಂಡೂಲ್ಕರ್. ಇದು ಭಾರತದ 1992-1993 ರ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ನಡೆದಿತ್ತು.

12. ಎಲ್ಲಾ ಮೂರು ಪ್ರಮುಖ ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಗಳಾದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕಗಳನ್ನು ಗಳಿಸಿದ್ದರು.

13. ಭಾರತದ ಐಕಾನ್ ಸುನಿಲ್ ಗವಾಸ್ಕರ್ ಅವರು ಪಂದ್ಯದುದ್ದಕ್ಕೂ ಧರಿಸಿದ್ದ ಬ್ಯಾಟಿಂಗ್ ಪ್ಯಾಡ್‌ಗಳನ್ನು ಕರಾಚಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಯಿತು.

14. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸಚಿನ್ ತೆಂಡೂಲ್ಕರ್ 90ರ ದಶಕದಲ್ಲಿ 23 ಬಾರಿ ಔಟಾದರು. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 200 ವಿಕೆಟ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ಟೆಸ್ಟ್ ನಲ್ಲಿ 45, ಓಡಿಐ ಗಳಲ್ಲಿ 154 ಮತ್ತು ಟಿ20 ಗಳಲ್ಲಿ ಒಂದು.

15. ಸಚಿನ್ ತೆಂಡೂಲ್ಕರ್ ಅವರು 2010ರ ಸೆಪ್ಟೆಂಬರ್ 3ರಂದು ಭಾರತೀಯ ವಾಯುಪಡೆಯಿಂದ ಗ್ರೂಪ್ ಕ್ಯಾಪ್ಟನ್ ಗೌರವ ಶ್ರೇಣಿಯನ್ನು ಪಡೆದ ಮೊದಲ ಆಟಗಾರರಾಗಿದ್ದಾರೆ.

16. 2012ರ ಜೂನ್ 4ರಂದು ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಅಧಿಕೃತವಾಗಿ ಸಂಸತ್ತಿನ ಸದಸ್ಯರಾದರು.

17. 1975ರಿಂದ 1996ರವರೆಗೆ ಪ್ರತಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಜಾವೇದ್ ಮಿಯಾಂದಾದ್ 1992 ಮತ್ತು 2011 ರ ನಡುವೆ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆರು ಬಾರಿ ಕಾಣಿಸಿಕೊಂಡಿದ್ದಾರೆ.

18. ಕೊಚ್ಚಿಯಲ್ಲಿ ಎರಡು ಬಾರಿ ಸಚಿನ್ ತೆಂಡೂಲ್ಕರ್ ಓಡಿಐನಲ್ಲಿ ತಲಾ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಅದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5/32 ಮತ್ತು 2005ರಲ್ಲಿ ಪಾಕಿಸ್ತಾನದ ವಿರುದ್ಧ 5/50.

19. ಸಚಿನ್ ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳಲ್ಲಿ 20 ಜಯ, 11 ಸೋಲು. ಉಳಿದ ಇಪ್ಪತ್ತು ಡ್ರಾ ಪರೀಕ್ಷೆಗೆ ಬಂದಿತ್ತು.


20. ಸಚಿನ್ ತೆಂಡೂಲ್ಕರ್ ಜಿಂಬಾಬ್ವೆಯಲ್ಲಿ ಟೆಸ್ಟ್ ಶತಕ ದಾಖಲಿಸಿಲ್ಲ.

21. ಸಚಿನ್ ತೆಂಡೂಲ್ಕರ್ ಅವರ ಓಡಿಐ ಶತಕಗಳಲ್ಲಿ 33 ಗೆಲುವಿಗೆ ಕಾರಣವಾಗಿವೆ. 14 ಸೋಲು, ಒಂದು ಟೈನಲ್ಲಿ ಕೊನೆಗೊಂಡಿದ್ದು, ಒಂದು ಪಂದ್ಯ ಡ್ರಾ ಆಗಿದೆ.

22. ಓಡಿಐಗಳಲ್ಲಿ ಮೂರು ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು 99 ರನ್‌ಗಳಿಗೆ ಔಟ್ ಆಗಿದ್ದು ಇವೆಲ್ಲವೂ 2007ರಲ್ಲಿ ನಡೆದಿತ್ತು.

23. ವಿಶ್ವಕಪ್ ಕ್ರಿಕೆಟ್‌ನಲ್ಲಿ 2,000 ಕ್ಕಿಂತ ಹೆಚ್ಚು ರನ್ ಮಾಡಿದ ಏಕೈಕ ಬ್ಯಾಟರ್ ಸಚಿನ್ ತೆಂಡೂಲ್ಕರ್. 45 ಪಂದ್ಯಗಳಲ್ಲಿ ಅವರು 2,278 ರನ್ ಗಳಿಸಿದ್ದಾರೆ.

24. 1995ರಲ್ಲಿ ವೇಷ ಹಾಕಿಕೊಂಡು ರೋಜಾ ಚಲನಚಿತ್ರವನ್ನು ನೋಡಲು ಹೋದರು. ಆದರೆ ಥಿಯೇಟರ್ನಲ್ಲಿ ಪ್ರೇಕ್ಷಕರು ಅವರನ್ನು ಗುರುತಿಸಿದ್ದರಿಂದ ಅವರು ತೊಂದರೆ ಅನುಭವಿಸಬೇಕಾಯಿತು.

25. ಲೆಜೆಂಡರಿ ಟೆನಿಸ್ ಆಟಗಾರ ಜಾನ್ ಮೆಕೆನ್ರೋ ಅವರ ಶ್ರೇಷ್ಠ ಅನುಯಾಯಿಯಾದ ತೆಂಡೂಲ್ಕರ್ ಅವರು ತಮ್ಮ ಕೂದಲನ್ನು ಬೆಳೆಸಿ ಅವರಂತೆ ಕಾಣುವ ಪ್ರಯತ್ನ ಮಾಡಿದ್ದರು.


26. ಸೌರವ್ ಗಂಗೂಲಿ ಅವರು ಸಚಿನ್ ಅವರನ್ನು “ಬಾಬು ಮೋಶಾಯ್” ಎಂದು ಉಲ್ಲೇಖಿಸುತ್ತಾರೆ. ಆದರೆ ಗಂಗೂಲಿ ಅವರನ್ನು “ಛೋಟಾ ಬಾಬು” ಎಂದು ಸಚಿನ್ ಹೇಳುತ್ತಾರೆ.

27. ತೆಂಡೂಲ್ಕರ್ ಅವರನ್ನು ಮೆಚ್ಚಿದ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರ ಡಿಯಾಗೋ ಮರಡೋನಾ, ಟೆನಿಸ್ ಆಟಗಾರರಾದ ಪೀಟ್ ಸಾಂಪ್ರಾಸ್ ಮತ್ತು ಬೋರಿಸ್ ಬೆಕರ್ ಮತ್ತು ಅನೇಕರು ಸೇರಿದ್ದಾರೆ.

28. ಒಂಬತ್ತು ಓಡಿಐ ಶತಕಗಳೊಂದಿಗೆ ಸಚಿನ್ 1998ರ ಒಂದು ವರ್ಷದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.

29. ಸಚಿನ್‌ ಅವರು ಪ್ರಸಿದ್ಧ ಸಾಹಿತ್ಯ ಸಹವಾಸ್ ನ ಬಾಂದ್ರಾ ಪೂರ್ವ ಆವರಣದ ಹಿಂದೆ ಹರಿಯುವ ತೊರೆಯಲ್ಲಿ ಗೊದಮೊಟ್ಟೆ ಮತ್ತು ಗಪ್ಪಿ ಮೀನುಗಾರಿಕೆಗೆ ಹೋಗುತ್ತಿದ್ದರು.

30. ತೆಂಡೂಲ್ಕರ್ ಅವರು ತಮ್ಮ ಫೆರಾರಿಯಲ್ಲಿ ಪತ್ನಿ ಅಂಜಲಿಯನ್ನು ಕರೆದುಕೊಂಡು ಹೋಗುವುದಿಲ್ಲ.

Continue Reading

ಸಿನಿಮಾ

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

Kanguva Budget: ಭಾರತೀಯ ಚಿತ್ರರಂಗದಲ್ಲಿ ಅತೀ ದೊಡ್ಡ ಬಜೆಟ್ ನ ಚಿತ್ರ ಕಂಗುವ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ತಮಿಳು ನಟ ಸೂರ್ಯ ಶಿವಕುಮಾರ್ ಹಾಗೂ ಬಾಲಿವುಡ್ ಸ್ಟಾರ್ ಬಾಬಿ ಡಿ’ಯೋಲ್‌ ಅಭಿನಯದ ಈ ಚಿತ್ರ ಈಗಾಗಲೇ ಸಿನಿ ರಸಿಕರನ್ನು ಮೋಡಿ ಮಾಡಿದೆ.

VISTARANEWS.COM


on

By

Kanguva Budget
Koo

ಚೆನ್ನೈ: ಹೊಸ ವರ್ಷದಂದು (new year) ಪೋಸ್ಟರ್ (poster) ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಕಂಗುವ (Kanguva). ತಮಿಳು (tamil) ನಟ (actor) ಸೂರ್ಯ (surya), ದಿಶಾ ಪಟಾನಿ (disha patani) ಅಭಿನಯದ ಈ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಚಿತ್ರದ ಕುರಿತು ಹೊಸಹೊಸ ಮಾಹಿತಿಗಾಗಿ ವೀಕ್ಷಕರು ಕಾಯುವಂತೆ ಮಾಡಿದೆ.

ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಕಂಗುವ ಬಗ್ಗೆ ಭಾರಿ ಚರ್ಚೆ

ಸ್ಟುಡಿಯೋ ಗ್ರೀನ್ ಮತ್ತು ಸೂರ್ಯ ಶಿವಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಕಂಗುವ” ದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಣ್ಣಿಗೆ ಹಬ್ಬದಂತಿರುವ ಚಿತ್ರದ ದೃಶ್ಯಗಳು, ಬೆರಗುಗೊಳಿಸುವ ವಿನ್ಯಾಸ, ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅದ್ಬುತ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ದೇಶದಾದ್ಯಂತ ಸಾಕಷ್ಟು ಮಂದಿ ಇದನ್ನು ನೋಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ


ಶಕ್ತಿಶಾಲಿ ನಾಯಕನಾಗಿ ಸೂರ್ಯ ಮತ್ತು ಖಳನಾಯಕನಾಗಿ ಬಾಬಿ ಡಿ’ಯೋಲ್‌ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಬಾರಿ ಚಿತ್ರ

ಕಂಗುವವರ ಮಹತ್ವಾಕಾಂಕ್ಷೆಯ ಕಥೆಯ ಹಂದರವನ್ನು ಒಳಗೊಂಡಿರುವ ಈ ಚಿತ್ರದ ಬಜೆಟ್ 350 ಕೋಟಿಗೂ ಮೀರಿದೆ ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.


ಚಿತ್ರದ ಪ್ಯಾನ್-ವರ್ಲ್ಡ್ ಪ್ರಾಜೆಕ್ಟ್ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸುಂದರ ದೃಶ್ಯಗಳು, ಭವ್ಯವಾದ ಛಾಯಾಗ್ರಹಣ ಮತ್ತು ವಿಸ್ತಾರವಾದ ಈ ಚಿತ್ರ ಚಲನಚಿತ್ರ ನಿರ್ಮಾಪಕರು ಅದರ ಸೃಷ್ಟಿಗೆ ಸುರಿದ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ. 2024 ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Continue Reading

ರಾಜಕೀಯ

Lok Sabha Election 2024: ಬಿಜೆಪಿ, ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳು ಯಾವುವು? ಇಲ್ಲಿದೆ ಅಂತಿಮ ಚಿತ್ರಣ

Lok Sabha Election 2024: ಏಕತೆಯನ್ನು ತೋರ್ಪಡಿಸಲು ದೇಶದ ಎರಡು ಬಲಿಷ್ಠ ಪಕ್ಷಗಳು ತನ್ನದೇ ಆದ ಮೈತ್ರಿ ಕೂಟವನ್ನು ರಚಿಸಿಕೊಂಡಿದೆ. ಈ ಬಾರಿ ಲೋಕಸಭೆ ಚುನಾವಣೆ- 2024ಕ್ಕೆ ಮುಂಚಿತವಾಗಿ ಎನ್ ಡಿಎ ಮತ್ತು ಕಾಂಗ್ರೆಸ್ ತನ್ನ ಸಾಮರ್ಥ್ಯ ತೋರ್ಪಡಿಸಲು ಮೈತ್ರಿಗೆ ಹೆಚ್ಚಿನ ಗಮನ ಹರಿಸಿ ಶಕ್ತಿ ಪ್ರದರ್ಶನ ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳ ಪಟ್ಟಿ ಇಲ್ಲಿದೆ.

VISTARANEWS.COM


on

By

Lok Sabha Election-2024
Koo

ಹೊಸದಿಲ್ಲಿ: ಲೋಕಸಭಾ ಚುನಾವಣೆ 2024ರಲ್ಲಿ (Lok Sabha Election 2024) ಈ ಬಾರಿ ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಹೋರಾಡುತ್ತಿದ್ದು, ಸಣ್ಣ ಪಕ್ಷಗಳನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿವೆ. ಹಿಂದಿನ ಚುನಾವಣೆಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಏರಿರುವ ಎನ್‌ಡಿಎಯನ್ನು (NDA) ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ (congress) ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವನ್ನು (India alliance) ರಚಿಸಲಾಗಿದೆ. ಅದೇ ರೀತಿ ಎನ್‌ಡಿಎ ಕೂಡ ತನ್ನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಪಕ್ಷಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ.

ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ಎನ್‌ಡಿಎ ಕೂಡ ಹಳೆಯ ಮತ್ತು ಹೊಸ ಘಟಕಗಳನ್ನು ಸೇರಿಸಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ನವ ಭಾರತವನ್ನು (N-New India), ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ( D-Developed Nation) ಮಾಡಲು ಬಯಸುವ ಆಕಾಂಕ್ಷೆಯುಳ್ಳ ಭಾರತದ ಜನರು (A-Aspiration of People of India) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂಡಿಯಾ ಮೈತ್ರಿ ಕೂಟ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಘೋಷಿದ್ದರು.


ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ


ಇಂಡಿಯಾ

2024ರ ಲೋಕಸಭೆ ಚುನಾವಣೆಗಾಗಿ ವಿರೋಧ ಪಕ್ಷಗಳು ಒಗ್ಗೂಡಿ ರಚಿಸಿದ ಮೈತ್ರಿ ಕೂಟ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಸಂವಿಧಾನವನ್ನು ರಕ್ಷಿಸುವುದು, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಇದರ ಮುಖ್ಯ ಉದ್ದೇಶ ಎಂದು ಘೋಷಿಸಿದೆ.

ಇಂಡಿಯಾ ಒಕ್ಕೂಟದಲ್ಲಿವೆ 26 ಪಕ್ಷಗಳು

ಕಾಂಗ್ರೆಸ್ ನೇತೃತ್ವದಲ್ಲಿ 26 ವಿರೋಧ ಪಕ್ಷಗಳು ಒಗ್ಗೂಡಿವೆ. ಅವುಗಳೆಂದರೆ:

  • – ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ)
  • – ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)
  • – ಆಮ್ ಆದ್ಮಿ ಪಕ್ಷ (ಎಎಪಿ)
  • – ರಾಷ್ಟ್ರೀಯ ಜನತಾ ದಳ (RJD)
  • – ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)
  • – ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಶರದ್ ಪವಾರ್ ಬಣ
  • – ಶಿವಸೇನೆ (UBT)
  • – ಸಮಾಜವಾದಿ ಪಕ್ಷ (SP)
  • – ರಾಷ್ಟ್ರೀಯ ಲೋಕದಳ (RLD)
  • – ಅಪ್ನಾ ದಳ (ಕಾಮೆರವಾಡಿ)
  • – ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್‌ (NC)
  • – ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್
  • – ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP)
  • – ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK)
  • – ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)
  • – ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿ (KMDK)
  • – ಮನಿತನೇಯ ಮಕ್ಕಳ್ ಕಚ್ಚಿ (ಎಂಎಂಕೆ)
  • – ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
  • – ಕೇರಳ ಕಾಂಗ್ರೆಸ್ (ಎಂ)
  • – ಕೇರಳ ಕಾಂಗ್ರೆಸ್ (ಜೋಸೆಫ್)


ಎನ್‌ಡಿಎ ಬಣದಲ್ಲಿ 38 ಪಕ್ಷಗಳು

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಡಳಿತಾರೂಢ ಎನ್‌ಡಿಎಯ 38 ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದೆ. ಮೈತ್ರಿಯಲ್ಲಿ ಭಾರತೀಯ ಜನತಾ ಪಕ್ಷದ ಬಹುದೊಡ್ಡ ಶಕ್ತಿಯಾಗಿದೆ.

ಎನ್‌ಡಿಎ ಘಟಕದಲ್ಲಿ ಇವರು ಪಕ್ಷಗಳು ಹೀಗಿವೆ:

-ಭಾರತೀಯ ಜನತಾ ಪಕ್ಷ

  • – ಶಿವಸೇನೆ (ಏಕನಾಥ್ ಶಿಂಧೆ ಬಣ)
  • – ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್‌ಸಿಪಿ (ಅಜಿತ್ ಪವಾರ್ ಬಣ)
  • – ಜನತಾ ದಳ ಸಂಯುಕ್ತ (ನಿತೀಶ್‌ ಕುಮಾರ್‌)
  • – ಜೆಡಿಎಸ್‌ (ದೇವೇಗೌಡ)
  • – ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಸ್ ಬಣ)
  • – ಅಪ್ನಾ ದಲ್ (ಸೋನೆಲಾಲ್)
  • -ನ್ಯಾಷನಲ್ ಪೀಪಲ್ಸ್ ಪಾರ್ಟಿ
  • – ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ನೈಫಿಯು ರಿಯೊ)
  • – ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ
  • – ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ
  • – ಮಿಜೋ ನ್ಯಾಷನಲ್ ಫ್ರಂಟ್‌
  • – ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ
  • – ನಾಗಾ ಪೀಪಲ್ಸ್ ಫ್ರಂಟ್
  • – ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ),
  • -ಅಸೋಮ್ ಗಣ ಪರಿಷತ್
  • – ಪಟ್ಟಾಲಿ ಮಕ್ಕಳ್ ಕಚ್ಚಿ
  • – ತಮಿಳು ಮಾನಿಲ ಕಾಂಗ್ರೆಸ್
  • – ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್
  • – ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಓಂ ಪ್ರಕಾಶ್ ರಾಜಭರ್)
  • – ಶಿರೋಮಣಿ ಅಕಾಲಿ ದಳ (ಸಂಯುಕ್ತ)
  • – ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ
  • – ಜನನಾಯಕ ಜನತಾ ಪಾರ್ಟಿ
  • – ಪ್ರಹಾರ್ ಜನಶಕ್ತಿ ಪಾರ್ಟಿ
  • – ರಾಷ್ಟ್ರೀಯ ಸಮಾಜ ಪಕ್ಷ
  • – ಜನ ಸುರಾಜ್ಯ ಶಕ್ತಿ ಪಾರ್ಟಿ
  • – ಕುಕಿ ಪೀಪಲ್ಸ್ ಅಲೈಯನ್ಸ್ (ಮಣಿಪುರ)
  • – ಯುನೈಟೆಡ್ ಡೆಮಾಕ್ರಟಿಕ್ ಪಕ್ಷ
  • – ಹಿಲ್ ಸ್ಟೇಟ್ ಪೀಪಲ್ಸ್, ಡೆಮಾಕ್ರಟಿಕ್ ಪಾರ್ಟಿ
  • – ನಿಶಾದ್ ಪಾರ್ಟಿ
  • – ಅಖಿಲ ಭಾರತ ಎನ್ ಆರ್ ಕಾಂಗ್ರೆಸ್
  • – ಹಿಂದೂಸ್ತಾನ್ ಅವಾಮ್ ಮೋರ್ಚಾ
  • – ಜನಸೇನಾ ಪಕ್ಷ
  • – ಹರಿಯಾಣ ಲೋಕ್‌ಹಿತ್ ಪಾರ್ಟಿ
  • -ಭಾರತ ಧರ್ಮ ಜನ ಸೇನೆ
  • -ಕೇರಳ ಕಾಮರಾಜ್ ಕಾಂಗ್ರೆಸ್
  • – ಪುಟ್ಟಿಯ ತಮಿಳಗಂ
  • – ಲೋಕ ಜನಶಕ್ತಿ ಪಕ್ಷ
  • – ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್
Continue Reading

ಸಿನಿಮಾ

The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ

The Legend of Hanuman: ರಾಮ ಭಕ್ತ ಹನುಮಂತನ ಕಥೆಯನ್ನು ಎಲ್ಲರೂ ಕೇಳಿದ್ದಾರೆ. ಆದರೆ ಹೊಸ ಪೀಳಿಗೆಯನ್ನು ಆಕರ್ಷಿಸಲು ಬಂದಿರುವ ದಿ ಲೆಜೆಂಡ್ ಆಫ್ ಹನುಮಾನ್ ನ ನಾಲ್ಕನೇ ಸರಣಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

The Legend of Hanuman
Koo

ಹಿಂದೂಗಳ (hindu) ಆರಾಧ್ಯ ದೇವರಾದ ಶ್ರೀ ರಾಮನ (sriram) ಭಕ್ತ ಹನುಮಾನ್ ಜನ್ಮ ದಿನದ ಶುಭ ಸಂದರ್ಭದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney Plus Hotstar) ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಲೆಜೆಂಡ್ ಆಫ್ ಹನುಮಾನ್’ ನ (The Legend of Hanuman) ನಾಲ್ಕನೇ ಸರಣಿಯನ್ನು ಏಪ್ರಿಲ್ 23ರಂದು ಘೋಷಣೆ ಮಾಡಿದೆ. ಹನುಮಾನ್ ಜಯಂತಿಯ ದಿನದಂದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಘೋಷಣೆ ಮಾಡಿರುವುದು ಬಹುತೇಕ ಹನುಮಾನ್ ಭಕ್ತರಲ್ಲಿ ಸಂತಸ ತಂದಿದೆ.

ನಾಲ್ಕನೇ ಸರಣಿಯ ಕಥಾವಸ್ತುವಿನ ಕುರಿತಾದ ವಿವರಗಳನ್ನೂ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಅಭಿಮಾನಿಗಳು ಹನುಮಂತನ ಶೌರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಹೆಚ್ಚಿನ ಕಥೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಹಿಂದಿನ ಸರಣಿಯಲ್ಲಿ ಹನುಮಂತನ ಆರಂಭಿಕ ಜೀವನ, ಭಗವಾನ್ ರಾಮನೊಂದಿಗಿನ ಅವನ ಭೇಟಿ, ಲಂಕಾಕ್ಕೆ ಮಹಾಕಾವ್ಯದ ಪ್ರಯಾಣ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತಿಮ ಯುದ್ಧವನ್ನು ವಿವರಿಸಲಾಗಿತ್ತು.

ಡಿಸ್ನಿ+ ಹಾಟ್‌ಸ್ಟಾರ್‌ಗೆ ‘ದಿ ಲೆಜೆಂಡ್ ಆಫ್ ಹನುಮಾನ್’ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಕಾರ್ಯಕ್ರಮದ ಬೆರಗುಗೊಳಿಸುವ ಅನಿಮೇಷನ್, ಆಕರ್ಷಕ ಕಥೆ ಹೇಳುವಿಕೆ ಮತ್ತು ಹಿಂದೂ ಪುರಾಣಗಳ ಚಿತ್ರಣವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

‘ದಿ ಲೆಜೆಂಡ್ ಆಫ್ ಹನುಮಾನ್’ ನ ಹೊಸ ಸೀಸನ್‌ನಲ್ಲಿ ನಟ ಮತ್ತು ರಾವಣನ ಧ್ವನಿ, ಶರದ್ ಕೇಳ್ಕರ್ ಅವರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಲೆಜೆಂಡ್ ಆಫ್ ಹನುಮಾನ್ ನ ಹೊಸ ಸೀಸನ್‌ನಲ್ಲಿ ರಾವಣ ರಾಜನಿಗೆ ಧ್ವನಿ ನೀಡುವುದು ನನಗೆ ಆಳವಾದ ವೈಯಕ್ತಿಕ ಪ್ರಯಾಣವಾಗಿದೆ. ಒಂದು ಪೌರಾಣಿಕ ಸಿದ್ಧಾಂತವನ್ನು ಆಧರಿಸಿ ಮತ್ತು ಇದರ ಮೂಲಕ ನಾನು ಅನೇಕ ಲೇಯರಿಂಗ್ ಕಥೆಗಳನ್ನು ಕಂಡುಹಿಡಿದಿದ್ದೇನೆ. ಇದರಿಂದ ನನಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದಿ ಲೆಜೆಂಡ್ ಆಫ್ ಹನುಮಾನ್‌ನ ಹೊಸ ಸರಣಿ ಇನ್ನಷ್ಟು ಶ್ರೇಷ್ಠವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.


ಸಾಹಸಮಯ, ಭಕ್ತಿಪ್ರಧಾನವಾದ ಹನುಮಂತನ ಜೀವನ ಕಥೆಯನ್ನು ಹೇಳುವ ಮೂರು ಸರಣಿಯನ್ನು ಇಷ್ಟಪಟ್ಟಿರುವವರು ನಾಲ್ಕನೇ ಸರಣಿಗೆ ಕುತೂಹಲದಿಂದ ಕಾಯುವಂತಾಗಿದೆ.

ರಾವಣನ ದುಷ್ಟತನವನ್ನು ಎದುರಿಸಲು, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವನ ದಾರಿಯಲ್ಲಿ ಎದುರಾಗುವ ವಿನಮ್ರ ರಾಮ ಭಕ್ತನಾದ ವಾನರನು ತನ್ನ ಭಕ್ತಿಯಿಂದಾಗಿಯೇ ದೇವರಾಗಿರುವ ಕಥೆಯನ್ನು ಇದು ಒಳಗೊಂಡಿದೆ. ಗ್ರಾಫಿಕ್ ಇಂಡಿಯಾ ರಚಿಸಿರುವ ಈ ಸರಣಿಗೆ ಶರದ್ ದೇವರಾಜನ್, ಜೀವನ್ ಜೆ. ಕಾಂಗ್, ಶರದ್ ಕೇಳ್ಕರ್ ಮತ್ತು ದಮನ್ ಬಗ್ಗನ್ ಧ್ವನಿ ನೀಡಿದ್ದಾರೆ.

Continue Reading
Advertisement
shubman gill
ಕ್ರಿಕೆಟ್22 seconds ago

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಐಪಿಎಲ್​ ಸಾಧನೆ ಹೇಗಿದೆ?

Chitradurga Lok Sabha Constituency BJP candidate Govinda M karajola election campaign in shira
ತುಮಕೂರು5 mins ago

Lok Sabha Election 2024: ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತಯಾಚನೆ

Dhanya Ramkumar reels with Kishen Bilagali
ಸ್ಯಾಂಡಲ್ ವುಡ್6 mins ago

Dhanya Ramkumar: ಕಿಶನ್ ಬಿಳಗಲಿ ಜತೆ ಡಾ. ರಾಜ್​ಕುಮಾರ್ ಮೊಮ್ಮಗಳ ಡ್ಯೂಯೆಟ್‌!

Sachin Tendulkar
ಕ್ರಿಕೆಟ್9 mins ago

Sachin Birthday: ಬದುಕಿನಲ್ಲಿ ಸಚಿನ್‌ ಅರ್ಧ ಶತಕ; ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Viral News
ವೈರಲ್ ನ್ಯೂಸ್30 mins ago

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Rajkumar Birth Anniversary ​​Jaggesh said that Rajkumar blessed him when he was admitted due to suicide attempt
ಸ್ಯಾಂಡಲ್ ವುಡ್34 mins ago

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

World Chess Championship
ಕ್ರೀಡೆ37 mins ago

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

VVPAT Verification
ದೇಶ53 mins ago

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

Sunita Williams
ದೇಶ54 mins ago

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Marcus Stoinis
ಕ್ರಿಕೆಟ್1 hour ago

IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌