IPL 2023: ಮತ್ತೆ ಕಪ್​ ಗೆಲ್ಲುವುದೇ ಗುಜರಾತ್​; ತಂಡ ನಡೆದು ಬಂದ ಹಾದಿ ಹೇಗಿದೆ? - Vistara News

ಕ್ರಿಕೆಟ್

IPL 2023: ಮತ್ತೆ ಕಪ್​ ಗೆಲ್ಲುವುದೇ ಗುಜರಾತ್​; ತಂಡ ನಡೆದು ಬಂದ ಹಾದಿ ಹೇಗಿದೆ?

ಗುಜರಾತ್​ ಟೈಟನ್ಸ್​ ತಂಡದ ಆಟವನ್ನು ನೋಡುವಾಗ ಈ ಬಾರಿಯು ತಂಡ ಕಪ್​ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ.

VISTARANEWS.COM


on

gujarat titans team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಅತ್ಯಂತ ಸಮರ್ಥ ತಂಡವಾದ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡದ ಆಟವನ್ನು ನೋಡುವಾಗ ಈ ಬಾರಿಯು ಚಾಂಪಿಯನ್​ ಪಟ್ಟ ಉಳಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ. ಇದಕ್ಕೆ ತಂಡದ ಸಂಘಟಿತ ಪ್ರದರ್ಶನೇ ಸಾಕ್ಷಿ. ಗುಜರಾತ್​ ತಂಡ ಐಪಿಎಲ್​ನಲ್ಲಿ ನಡೆದು ಬಂದ ಹಾದಿ ಹೇಗಿದೆ. ಈ ಬಾರಿ ತಂಡದ ಏಳು-ಬೀಳುಗಳ ಮಾಹಿತಿ ಇಲ್ಲಿದೆ.

ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್​

ಕಳೆದ ವರ್ಷ ನಡೆದ ಫೈನಲ್​ ಪಂದ್ಯದಲ್ಲಿ ಗುಜರಾತ್​ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ರಾಯಲ್ಸ್​ ತೀರಾ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶಿಸಿ 9 ವಿಕೆಟ್​ಗೆ 130 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್​ ಕೇವಲ ಮೂರು ವಿಕೆಟ್​ ಕಳೆದುಕೊಂಡು 133 ರನ್​ ಬಾರಿಸಿ ಕಪ್​ ಎತ್ತಿ ಮೆರೆದಾಡಿತ್ತು. ಈ ಬಾರಿಯೂ ಫೈನಲ್​ನಲ್ಲಿ ಚೆನ್ನೈ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದು ಸತತ ಎರಡನೇ ಬಾರಿಗೆ ಚಾಂಪಿಯನ್​ ಆಗುವ ಇರಾದೆಯಲ್ಲಿದೆ.

ಒಂದೇ ಆಟಗಾರನನ್ನು ನಂಬಿ ಕುಳಿತಿಲ್ಲ

ಗುಜರಾತ್​ ತಂಡದ ವಿಶೇಷತೆ ಎಂದರೆ ಈ ತಂಡ ಒಂದೇ ಆಟಗಾರನ ಪ್ರದರ್ಶನವನ್ನು ನಂಬಿ ಕುಳಿತಿಲ್ಲ. ಪ್ರತಿಯೊಬ್ಬ ಆಟಗಾರನು ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶುಭಮನ್​ ಗಿಲ್​ ಅವರು ಪಂದ್ಯದಿಂದ ಪಂದ್ಯಕ್ಕೆ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಅವರು ಈ ಆವೃತ್ತಿಯಲ್ಲಿ ಒಟ್ಟು ಮೂರು ಶತಕ ಬಾರಿಸಿ 851 ರನ್​ ಗಳಿಸಿ ಅತ್ಯಧಿಕ ರನ್​ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರ ಹೊರತಾಗಿಯೂ ತಂಡದಲ್ಲಿ ಆಡುವ ಎಲ್ಲರೂ ಕೂಡ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಮೋಹಿತ್​ ಶರ್ಮ ಅವರಂತು ಯುವ ಬೌಲರ್​ಗಳು ನಾಚುಚಂತೆ ಪ್ರದರ್ಶನ ತೋರುತ್ತಿದ್ದಾರೆ. ಒಟ್ಟಾರೆ ತಂಡ ಪ್ರದರ್ಶನ ಸಮರ್ಥವಾಗಿದೆ.

ಇದನ್ನೂ ಓದಿ IPL 2023: ಈ ಬಾರಿ ಆರೆಂಜ್​,ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ; ರೇಸ್​ನಲ್ಲಿರುವ ಪ್ರಮುಖ ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಈ ಬಾರಿ ತಂಡದ ಪ್ರದರ್ಶನ ಹೇಗಿತ್ತು

ಈ ಬಾರಿ ಆಡಿದ 14 ಲೀಗ್​ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿಯೂ 10 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಸಂಪಾದಿಸಿತ್ತು. ಜತೆಗೆ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಬಾರಿಯೂ ತಂಡ ಕಪ್​ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.

ಅವಮಾನಕ್ಕೆ ಒಳಗಾಗಿದ್ದ ಗುಜರಾತ್​

15ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಯಿತು. ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸಲಾಯಿತು. ಹೀಗಾಗಿ ಲಕ್ನೋ ಸೂಪರ್​ಜೈಂಟ್ಸ್​ ಮತ್ತು ಗುಜರಾತ್​ ಟೈಟನ್ಸ್​ ತಂಡಗಳು ಹೊಸದಾಗಿ ಐಪಿಎಲ್​ಗೆ ಕಾಲಿರಿಸಿತು. ಗುಜರಾತ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಅವರಿಗೆ ತಂಡ ನಾಯಕನ ಪಟ್ಟವನ್ನು ನೀಡಲಾಯಿತು. ತಂಡದಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಅನ್​ಕ್ಯಾಪ್ಡ್​ ಮತ್ತು ತೀರಾ ಕಳಪೆ ಪ್ರದರ್ಶನ ತೋರಿ ಇತರ ತಂಡಗಳಿಂದ ಕೈ ಬಿಟ್ಟ ಆಟಗಾರರಾಗಿದ್ದರು. ಈ ತಂಡವನ್ನು ಕಂಡ ಕ್ರಿಕೆಟ್​ ಅಭಿಮಾನಿಗಳು ಇದೊಂದು ಲೆಕ್ಕ ಭರ್ತಿಗೆ ಮಾಡಿದ ತಂಡದಂತಿದೆ. ಇದು ಒಂದು ಪಂದ್ಯ ಗೆದ್ದರೆ ಅಚ್ಚರಿ ಎಂಬಂತೆ ಈ ತಂಡವನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಕಪ್​ ಎತ್ತಿದಾಗ ಈ ತಂಡದ ಸಾಮರ್ಥ್ಯವೇನು ಎಂಬುವುದು ಜಗಜ್ಜಾಹೀರಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

Hardik Pandya : ಹಾರ್ದಿಕ್ ಪಾಂಡ್ಯ ಅವರನ್ನು ಮುಂಬಯಿ ತಂಡದ ನಾಯಕನನ್ನಾಗಿ ಮಾಡಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Hardik Pandya
Koo

ಹೈದರಾಬಾದ್​: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ (Hardik Pandya) 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (mumbai Indians) ಮತ್ತು ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಿದ್ದವು. ಬ್ಯಾಟಿಂಗ್ ಪರಾಕ್ರಮದ ರೋಮಾಂಚಕ ಪ್ರದರ್ಶನದ ಹೊರತಾಗಿಯೂ, ಮುಂಬೈ ಇಂಡಿಯನ್ಸ್ ಪ್ರಸ್ತುತ ನಡೆಯುತ್ತಿರುವ ಮೆಗಾ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಸೋಲನ್ನು ಅನುಭವಿಸಿತು. ಆದರೆ, ಸೋಲಿನ ಬೇಸರದ ಹೊರತಾಗಿಯೂ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ಹಾರ್ದಿಕ್ ಪಾಂಡ್ಯ. (Hardik Pandya)

ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಋತುವಿನ ಪ್ರಾರಂಭದಿಂದಲೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕ್ರೀಡಾಂಗಣದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್​ ಅಭಿಮಾನಿಗಳಿಂದ ಟೀಕೆಗಳು ಹಾಗೂ ಅಪಹಾಸ್ಯವನ್ನು ಎದುರಿಸುತ್ತಿದ್ದಾರೆ. ಅಂತೆಯೇ ಎಸ್​ಆರ್​​ಎಚ್​ ವಿರುದ್ಧದ ಪಂದ್ಯದಲ್ಲಿ, ಹಾರ್ದಿಕ್ 20 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದ ನಂತರ, ಅಭಿಮಾನಿಗಳು “ರೋಹಿತ್ ರೋಹಿತ್” ಎಂದು ಜಪಿಸಲು ಪ್ರಾರಂಭಿಸಿದ್ದರು. ಹಾರ್ದಿಕ್ ಡ್ರೆಸ್ಸಿಂಗ್ ರೂಮ್ಗೆ ಹಿಂದಿರುಗುತ್ತಿದ್ದಂತೆ ಅವರನ್ನು ಅಪಹಾಸ್ಯ ಮಾಡಿದ್ದರು. ಬಳಕೆದಾರರೊಬ್ಬರು ಈ ಘಟನೆಯ ವೀಡಿಯೊವನ್ನು ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ. ಇದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆದವು.

ಇದನ್ನೂ ಓದಿ : IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

277 ರನ್ ಗಳಿಸುವ ಸವಾಲನ್ನು ಗುರುತಿಸಿದ ಹಾರ್ದಿಕ್ ಪಾಂಡ್ಯ, ಎದುರಾಳಿ ತಂಡದ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ತಮ್ಮ ತಂಡದ ಬೌಲರ್​ಗಳು ಎದುರಿಸುತ್ತಿದ್ದ ಕಷ್ಟವನ್ನು ಒಪ್ಪಿಕೊಂಡರು. ಅವರು ತಮ್ಮ ಯುವ ಬೌಲಿಂಗ್ ದಾಳಿಯ ಸುಧಾರಿಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಪದಾರ್ಪಣೆ ಆಟಗಾರ್ತಿ ಕ್ವೆನಾ ಮಾಫಕಾ ಅವರ ಪ್ರದರ್ಶನವನ್ನು ಶ್ಲಾಘಿಸಿದರು.

” ಎಸ್​ಅರ್​​​ಎಚ್​​ 277 ರನ್ ಗಳಿಸುತ್ತದೆ ಎಂದೇ ಭಾವಿಸಲಾಗಿತ್ತು. ಪಿಚ್ ಬ್ಯಾಟಿಂಗ್​ಗೆ ಪೂರಕವಾಗಿತ್ತು. ವೇಳೆ ಎಷ್ಟೇ ಕೆಟ್ಟದಾಗಿರಲಿ ಅಥವಾ ಉತ್ತಮವಾಗಿರಲಿ, ಎದುರಾಳಿ ತಂಡವು ಅಷ್ಟು ಸ್ಕೋರ್ ಮಾಡಬೇಕಾದರೆ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆ ತಂಡದ ಬೌಲರ್​ಗಳು ಉತ್ತಮವಾಗಿದ್ದರು. ಎರಡೂ ತಂಡಗಳು ಸುಮಾರು 500 ರನ್ ಬಾರಿಸಿದ್ದೇವೆ ಎಂದು ಪಾಂಡ್ಯ ಹೇಳಿಕೊಂಡಿದ್ದಾರೆ.

Continue Reading

ಕ್ರೀಡೆ

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

IPL 2024 : ಐಪಿಎಲ್​ನ 17 ನೇ ಸೀಸನ್ ಐಪಿಎಲ್ ಆರಂಭಿಕ ದಿನದಂದು ಅತಿ ಹೆಚ್ಚು ಟಿವಿ ವೀಕ್ಷಣೆಗೆ ಸಾಕ್ಷಿಯಾಯಿತು. ಡಿಸ್ನಿ ಸ್ಟಾರ್ ನೆಟ್ವರ್ಕ್​ನಲ್ಲಿ ಏಕಕಾಲದಲ್ಲಿ ಪ್ರಸಾರವನ್ನು 6.1 ಕೋಟಿ ವೀಕ್ಷಕರು ವೀಕ್ಷಿಸಿದರು.

VISTARANEWS.COM


on

IPL 2024-CSKRCB
Koo

ಮುಂಬೈ ಐಪಿಎಲ್ ನ 2024ರ (IPL 2024) ಅಧಿಕೃತ ಪ್ರಸಾರಕ ಡಿಸ್ನಿ ಸ್ಟಾರ್ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ದಾಖಲೆಯೊಂದಿಗೆ ಆರಂಭಿಸಿದೆ. ಐಪಿಎಲ್ 2024 ರ ಮೊದಲ ದಿನದಂದು 16.8 ಕೋಟಿ ವಿಶಿಷ್ಟ ವೀಕ್ಷಕರು 1276 ಕೋಟಿ ನಿಮಿಷಗಳ ವೀಕ್ಷಣೆಯ ಸಮಯವನ್ನು ದಾಖಲಿಸಿದೆ. ಐಪಿಎಲ್​ನ 17 ನೇ ಸೀಸನ್ ಐಪಿಎಲ್ ಆರಂಭಿಕ ದಿನದಂದು ಅತಿ ಹೆಚ್ಚು ಟಿವಿ ವೀಕ್ಷಣೆಗೆ (TV viewers) ಸಾಕ್ಷಿಯಾಯಿತು. ಡಿಸ್ನಿ ಸ್ಟಾರ್ ನೆಟ್ವರ್ಕ್​ನಲ್ಲಿ ಏಕಕಾಲದಲ್ಲಿ ಪ್ರಸಾರವನ್ನು 6.1 ಕೋಟಿ ವೀಕ್ಷಕರು ವೀಕ್ಷಿಸಿದರು.

ಸ್ಟಾರ್ ಸ್ಪೋರ್ಟ್ಸ್ ವಕ್ತಾರರು “ಇದು ಒಂದು ಸ್ಮರಣೀಯ ಸಾಧನೆಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ಮೇಲಿನ ಅಭಿಮಾನಿಗಳ ಪ್ರೀತಿಯ ಪ್ರತಿಫಲನವಾಗಿದೆ. ಇದು ನೆಟ್ವರ್ಕ್​ ಅಚಲ ಬದ್ಧತೆಗೆ ಸಾಧ್ಯವಾಗಿದೆ. ಕ್ರಿಕೆಟ್ ಮತ್ತು ಐಪಿಎಲ್ ಅನ್ನು ಬೆಳೆಸಲು ಸ್ಟಾರ್ ಸ್ಪೋರ್ಟ್ಸ್ ನಿರಂತರವಾಗಿ ಕೈಗೊಂಡಿರುವ ವ್ಯಾಪಕ ಶ್ರೇಣಿಯ ಉಪಕ್ರಮಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾವು ನಮ್ಮ ಎಲ್ಲಾ ಪಾಲುದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಬಿಸಿಸಿಐಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವೇಗವನ್ನು ಮುಂದುವರಿಸಲು ಮತ್ತು ಅಭೂತಪೂರ್ವ ವೀಕ್ಷಕರನ್ನು ತಲುಪಲು ನಾವು ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ನಮ್ಮ ಸಾಮರ್ಥ್ಯವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ವೀಕ್ಷಕ ವಿವರಣೆ ತಂಡದಲ್ಲಿರುವ ಸ್ಟಾರ್​ಗಳು ಇವರು

ನವಜೋತ್ ಸಿಂಗ್ ಸಿಧು ಅವರು ಭಾರತದ ವಿಶ್ವ ಚಾಂಪಿಯನ್ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್. ಸ್ಟೀವ್ ಸ್ಮಿತ್ ಮತ್ತು ಸ್ಟುವರ್ಟ್ ಬ್ರಾಡ್, ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಜಾಕ್ ಕಾಲಿಸ್ ಮತ್ತು ಡೇಲ್ ಸ್ಟೇನ್ ಅವರೊಂದಿಗೆ ಟಾಟಾ ಐಪಿಎಲ್ 2024 ಅನ್ನು ಪ್ರಸ್ತುತಪಡಿಸಿದರು. ಸಿಎಸ್ಕೆಯ ಮಾಜಿ ತಾರೆಗಳಾದ ಅಂಬಾಟಿ ರಾಯುಡು, ಮುರಳಿ ವಿಜಯ್, ಎಲ್ ಬಾಲಾಜಿ ಮತ್ತು ಸುಬ್ರಮಣ್ಯಂ ಬದ್ರಿನಾಥ್, ಐಪಿಎಲ್ ಚಾಂಪಿಯನ್​ಗಳಾದ ವಿನಯ್ ಕುಮಾರ್ ಮತ್ತು ವೇಣುಗೋಪಾಲ್ ರಾವ್ ಅವರು ಡಿಸ್ನಿ ಸ್ಟಾರ್​ನ 9 ಭಾಷೆಗಳಲ್ಲಿ ಪ್ರಾದೇಶಿಕ ಫೀಡ್​ನ ಮುಂಚೂಣಿಯಲ್ಲಿದ್ದರು.

ಜಿಯೊಗೆ 11.3 ಕೋಟಿ ವೀಕ್ಷಕರು

ಡಿಜಿಟಲ್​ನಲ್ಲಿ ಜಿಯೋ ಸಿನೆಮಾ ಐಪಿಎಲ್​ನ ಮೊದಲ ದಿನದಂದು 11.3 ಕೋಟಿ ವೀಕ್ಷಕರನ್ನು ಗಳಿಸಿದೆ. ಐಪಿಎಲ್ 2023 ರ ಮೊದಲ ದಿನಕ್ಕಿಂತ ಇದು 51% ಜಿಗಿತವನ್ನು ದಾಖಲಿಸಿದೆ ಎಂದು ಜಿಯೊ ಹೇಳಿಕೊಂಡಿದೆ. ಮೊದಲ ದಿನ ಜಿಯೋ ಸಿನೆಮಾದಲ್ಲಿ ಒಟ್ಟು ವೀಕ್ಷಣೆಯ ಸಮಯ 660 ಕೋಟಿ ನಿಮಿಷಗಳು.

ಇದನ್ನೂ ಓದಿ : IPL 2024 : ಅಪ್ಪನ ಸಿಕ್ಸರ್​​ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ

ಸ್ಟಾರ್ ಸ್ಪೋರ್ಟ್ಸ್ ಪ್ರಮುಖ ಡಿಟಿಎಚ್ ಪ್ಲಾಟ್ ಫಾರ್ಮ್ ಗಳಲ್ಲಿ ಅಟ್ಮೋಸ್ ಸೌಂಡ್ ನೊಂದಿಗೆ 4 ಕೆ ನಲ್ಲಿ ಐಪಿಎಲ್ ಪ್ರಸಾರ ಪ್ರಾರಂಭಿಸಿದೆ.

ಸ್ಟಾರ್ ಸ್ಪೋರ್ಟ್ಸ್ ವಿಶೇಷ ಚೇತನರಿಗಾಗಿ, ದೃಷ್ಟಿಹೀನರು, ಕಿವುಡರು ಅಥವಾ ಶ್ರವಣದೋಷವುಳ್ಳ ಅಭಿಮಾನಿಗಳಿಗಾಗಿ ಕಾಮೆಂಟರಿ ಮತ್ತು ಸಂಜ್ಞೆ ಭಾಷೆಯ ವಿಶೇಷ ಫೀಡ್ ಅನ್ನು ಪ್ರಾರಂಭಿಸಿದೆ. ಇದು ಈ ಐಪಿಎಲ್ ಅನ್ನು ನಿಜವಾಗಿಯೂ ಒಳಗೊಳ್ಳುವಂತೆ ಮಾಡುತ್ತದೆ. ವಿಶ್ವದ ಯಾವುದೇ ಪ್ರಮುಖ ಕ್ರೀಡಾಕೂಟವು ವಿಕಲಚೇತನರಿಗೆ ಲೈವ್ ಫೀಡ್ ಹೊಂದಿರುವುದು ಇದೇ ಮೊದಲು.

Continue Reading

ಪ್ರಮುಖ ಸುದ್ದಿ

IPL 2024 : ಅಪ್ಪನ ಸಿಕ್ಸರ್​​ಗೆ ಚಿಯರ್ಸ್ ಹೇಳಿದ ಕ್ಲಾಸೆನ್ ಪುತ್ರಿ, ಇಲ್ಲಿದೆ ವಿಡಿಯೊ

IPL 2024 : ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್​ 34 ಎಸೆತಗಳಲ್ಲಿ 80 ರನ್ ಬಾರಿಸುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು.

VISTARANEWS.COM


on

Henrich Klasen- IPL
Koo

ಹೈದರಾಬಾದ್​: ಬುಧವಾರ ನಡೆದ ಸನ್​ರೈಸರ್ಸ್​​ ಹೈದರಾಬಾದ್ (Sun Risers Hyderabad​​) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಐಪಿಎಲ್ 2024 ರ 8 ನೇ ಪಂದ್ಯವು ಹಲವು ದಾಖಲೆಗಳಿಗೆ ಕಾರಣವಾಗಿದ್ದವು. ಇದು ಟಿ20 ಮಾದರಿಯಲ್ಲಿ ತಂಡವೊಂದರ ಗರಿಷ್ಠ ಸ್ಕೋರ್​, ಐಪಿಎಲ್​ನಲ್ಲಿ (IPL 2024) ಪಂದ್ಯವೊಂದರ ಒಟ್ಟು ಅತ್ಯಧಿಕ ಸ್ಕೋರ್ ಸೇರಿದಂತೆ ಹಲವು ದಾಖಲೆಗಳಿಗೆ ಕಾರಣವಾದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್​ ಹೆನ್ರಿಚ್ ಕ್ಲಾಸೆನ್​ 34 ಎಸೆತಗಳಲ್ಲಿ 80 ರನ್​ ಬಾರಿಸಿದ್ದರು. ಆದಾಗ್ಯೂ, ಎಲ್ಲಾ ಕ್ರಿಕೆಟ್ ಚಟುವಟಿಕೆಗಳ ನಡುವೆ, ಕ್ಲಾಸೆನ್ ಅವರ 14 ತಿಂಗಳ ಪುತ್ರಿ ಲಯಾ ಸ್ಟ್ಯಾಂಡ್​ನಲ್ಲಿ ತಂದೆಯವನ್ನು ಬೆಂಬಲಿಸುವ ಅಪರೂಪದ ಕ್ಷಣ ವೈರಲ್ ಆಗಿದೆ.

ಎಸ್ಆರ್​ಎಚ್​ನ ಬ್ಯಾಟರ್​ಗಳು ಆರು ಹೊಡೆತಗಳ ಉತ್ಸಾಹದಲ್ಲಿದ್ದಾಗ ಕ್ಲಾಸೆನ್ ಕೇವಲ 34 ಎಸೆತಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಏಳು ಅತ್ಯುನ್ನತ ಸಿಕ್ಸರ್​ಗಳನ್ನು ಒಳಗೊಂಡಂತೆ 80* ರನ್ ಗಳಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ಆಟಗಾರನನ್ನು ಸ್ಥಳೀಯ ಅಭಿಮಾನಿಗಳು ಹುರಿದುಂಬಿಸುವ ನಡುವೆ ಅವರ ಮಗಳು ಎಸ್​ಆರ್​ಎಚ್​ ಬಾವುಟ ಬೀಸಿ ಅವರಿಗೆ ಬೆಂಬಲ ನೀಡಿದರು.

ಎಸ್​ಆರ್​​ಎಚ್​ ಅಪರೂಪದ ದಾಖಲೆ

ಸನ್​ರೈಸರ್ಸ್​ ಹೈದರಾಬಾದ್​ ತಂಡ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ : IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 277 ರನ್​ ಬಾರಿಸಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್​ 11 ವರ್ಷಗಳ ಬಳಿಕ ಮೀರಿ ನಿಂತಿದೆ.
10 ಓವರ್​ನಲ್ಲಿ ಗರಿಷ್ಠ ಮೊತ್ತ

ಹೈದರಾಬಾದ್​ ತಂಡ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್​ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್​ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.

ಅತಿ ಕಡಿಮೆ ಓವರ್​ನಲ್ಲಿ 100 ರನ್​​

7 ಓವರ್​ನಲ್ಲಿ 100 ರನ್​ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದ ಅತಿ ಕಡಿಮೆ ಓವರ್​ನಲ್ಲಿ 100 ರನ್​ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್​ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ ಮುಂಬೈ ಕೇವಲ 6 ಓವರ್​ನಲ್ಲಿ ಈ ಸಾಧನೆ ಮಾಡಿತ್ತು. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.

Continue Reading

ಕ್ರೀಡೆ

IPL 2024 : ಕೊಹ್ಲಿ- ಗಂಭೀರ್ ಮುಖಾಮುಖಿಯಲ್ಲಿ ವಿಜಯ ಯಾರಿಗೆ?

IPL 2024 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಮತ್ತೊಂದು ರನ್​ ಸಂಭ್ರಮಕ್ಕೆ ಕಾರಣವಾಗಲಿದೆ.

VISTARANEWS.COM


on

RCB team
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಋತುವಿನ ಆರಂಭಿಕ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋಲನ್ನು ಅನುಭವಿಸಿದ ಆರ್​ಸಿಬಿ. ಪಂಜಾಬ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಖಾತೆ ತೆರೆದಿದೆ.. ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ 77 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆ ಸಿದ್ದರು. ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ಉತ್ತಮ ಫಿನಿಶರ್ ಎನಿಸಿಕೊಂಡಿದ್ದರು. ಈ ಪಂದ್ಯವನ್ನು ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಕೆಕೆಆರ್ ತಂಡದ ನೂತನ ಕೋಚ್​ ಗೌತಮ್ ಗಂಭೀರ್ ನಡುವಿನ ಪ್ರತಿಷ್ಠೆಯ ಹಣಾಹಣಿ ಎಂದು ಹೇಳಲಾಗಿದೆ. ಪಂದ್ಯ ಬ್ಯಾಟಿಂಗ್ ಸ್ವರ್ಗವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದಲ್ಲಿ ಅಲ್ಪ ಗೆಲುವು ಸಾಧಿಸಿದ ಕೆಕೆಆರ್, ಮೆಗಾ ಈವೆಂಟ್​ನ ಆರಂಭದಲ್ಲಿಯೇ ತಮ್ಮ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವೆಸ್ಟ್ ಇಂಡೀಸ್​ನ ಆಲ್ರೌಂಡರ್ ಆಂಡ್ರೆ ರಸೆಲ್ 64 ರನ್ ಗಳಿಸುವ ಮೂಲಕ ವಿಶ್ವದ ಅತ್ಯಂತ ಅಪಾಯಕಾರಿ ಟಿ 20 ಬ್ಯಾಟರ್ ತಾವೆಂಬುದನ್ನು ತೋರಿಸಿಕೊಟ್ಟರು. ಯುವ ಆಟಗಾರ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ ಮಿಂಚಿ 4 ರನ್​ಗಳ ವಿರೋಚಿತ ಜಯಕ್ಕೆ ಕಾರಣರಾಗಿದ್ದರು.

ಕೊಹ್ಲಿಯ ಫಾರ್ಮ್​ ಮುಂದುವರಿಕೆ

ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವಿರಾಟ್ ಕೊಹ್ಲಿ ಮುಂಬರುವ ಪಂದ್ಯದಲ್ಲಿ ಮತ್ತೆ ಪಂದ್ಯದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್​​ಸಿಬಿಯನ್ನು ಈ ಋತುವಿನ ಮತ್ತೊಂದು ಗೆಲುವಿನತ್ತ ಮುನ್ನಡೆಸುವ ಗುರಿಯನ್ನು ಅವರು ಹೊಂದಿದ್ದಾರೆ.

ಅತ್ತ ಸುನಿಲ್ ನರೈನ್ ಅವರ ಸ್ಪಿನ್ ಬೌಲಿಂಗ್ ಕೆಕೆಅರ್​ಗೆ ನಿರ್ಣಾಯಕವಾಗಿದೆ. ಮುಂಬರುವ ಮುಖಾಮುಖಿಯಲ್ಲಿ ಅವರು ಅತ್ಯುತ್ತಮ ಬೌಲರ್ ಆಗಬಹುದು. ಕಳೆದ ಪಂದ್ಯದಲ್ಲಿ ಅವರ ಬೌಲಿಂಗ್ ಎಕಾನಮಿ ಉತ್ತಮವಾಗಿತ್ತು. ಅದೂ ಅಲ್ಲದೆ, ಆರ್​ಸಿಬಿ ವಿರುದ್ಧ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್​ಗೆ ಹೆಸರುವಾಸಿಯಾಗಿದೆ. ಇದು ಸಾಮಾನ್ಯವಾಗಿ ಹೆಚ್ಚಿನ ಸ್ಕೋರಿಂಗ್​​ ಹಣಾಹಣಿಗಳನ್ನು ಕಂಡಿದೆ. ಸಣ್ಣ ಬೌಂಡರಿಗಳು ಮತ್ತು ಮಿಂಚಿನ ವೇಗದ ಔಟ್​ಫೀಲ್ಡ್​​ ಕಾರಣದಿಂದಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಎಷ್ಟೇ ದೊಡ್ಡ ಗುರಿ ಪೇರಿಸಿದರೂ ನಿರಾಳವಾಗಿಲ್ಲ. ಇದು ಕಠಿಣ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಪಂದ್ಯದಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು 200 ಕ್ಕೂ ಹೆಚ್ಚು ರನ್ ಗಳಿಸುವ ಗುರಿ ಹೊಂದಿರಬೇಕು. ‘

ಇದನ್ನೂ ಓದಿ : IPL 2024 Points Table: ಮುಂಬೈ ವಿರುದ್ಧ ಹೈದರಾಬಾದ್‌ ಗೆದ್ದ ಬಳಿಕ ಅಂಕಪಟ್ಟಿ ಹೇಗಿದೆ?

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್): ಶ್ರೇಯಸ್ ಅಯ್ಯರ್ (ನಾಯಕ), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆ್ಯಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇತ್ತಂಡಗಳ ಮುಖಾಮುಖಿ

ಆಡಿದ ಪಂದ್ಯಗಳು: 32
ಆರ್​ಸಿಬಿ- 14 ಗೆಲುವು
ಕೆಕೆಆರ್- 18 ಗೆಲುವು
ಫಲಿತಾಂಶ ಇಲ್ಲ- 0
ಮೊದಲ ಪಂದ್ಯ- 18/04/2008
ಕೊನೆಯ ಬಾರಿ ಆಡಿದ್ದು- 26/04/2023

ಪಂದ್ಯದ ವಿವರ

ಐಪಿಎಲ್ 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ದಿನಾಂಕ ಮತ್ತು ಸಮಯ: ಶುಕ್ರವಾರ, ಮಾರ್ಚ್ 29, ಸಂಜೆ 7:30 (ಭಾರತೀಯ ಕಾಲಮಾನ)
ಲೈವ್ ಬ್ರಾಡ್ಕಾಸ್ಟ್ ಮತ್ತು ಸ್ಟ್ರೀಮಿಂಗ್ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ಚಾನೆಲ್​​ಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್

Continue Reading
Advertisement
Lok Sabha Election 202414 mins ago

Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

Health Tips
ಬೆಂಗಳೂರು18 mins ago

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Anurag Thakur
ಕ್ರೀಡೆ22 mins ago

Anurag Thakur : 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್​​; ಅನುರಾಗ್ ಠಾಕೂರ್​

Side Effects Of Pillow
ಆರೋಗ್ಯ34 mins ago

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Naveen Polishetty
ಸಿನಿಮಾ39 mins ago

Naveen Polishetty: ಅಮೆರಿಕದಲ್ಲಿ ಬೈಕ್‌ ಅಪಘಾತ; ಅನುಷ್ಕಾ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ನಟನಿಗೆ ಗಾಯ

Hardik Pandya
ಕ್ರೀಡೆ54 mins ago

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

money guide
ಮನಿ-ಗೈಡ್1 hour ago

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

IPL 2024-CSKRCB
ಕ್ರೀಡೆ1 hour ago

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

Prithviraj Sukumaran
ಸಿನಿಮಾ1 hour ago

Prithviraj Sukumaran: ಪೃಥ್ವಿರಾಜ್ ಸುಕುಮಾರನ್‌ ಅಭಿನಯದ ‘ಆಡುಜೀವಿತಂ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ!

Lok Sabha Election 2024 DK Shivakumar Suresh assetsworth Rs 598 crore and 259.19 crore Increase in 5 years
Lok Sabha Election 20242 hours ago

Lok Sabha Election 2024: ಡಿ.ಕೆ. ಸುರೇಶ್‌ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20245 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20246 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ14 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌