Rashmika Mandanna danced to the song Sami Sami on the IPL stage and impressed the cricket lovers. IPL 2023 : ಐಪಿಎಲ್​ ವೇದಿಕೆಯಲ್ಲಿ ಸಾಮಿ ಸಾಮಿ ಹಾಡಿಗೆ ಕುಣಿದು ಕ್ರಿಕೆಟ್​ ಪ್ರೇಮಿಗಳ ಮನತಣಿಸಿದ ರಶ್ಮಿಕಾ ಮಂದಣ್ಣ - Vistara News

ಕ್ರಿಕೆಟ್

IPL 2023 : ಐಪಿಎಲ್​ ವೇದಿಕೆಯಲ್ಲಿ ಸಾಮಿ ಸಾಮಿ ಹಾಡಿಗೆ ಕುಣಿದು ಕ್ರಿಕೆಟ್​ ಪ್ರೇಮಿಗಳ ಮನತಣಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಐಪಿಎಲ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡಿಗೂ ನೃತ್ಯ ಮಾಡಿದರು.

VISTARANEWS.COM


on

Rashmika Mandanna danced to the song Sami Sami on the IPL stage and impressed the cricket lovers.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​ ​​: ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡತಿ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಹಾಡುಗಳಿಗೆ ಕುಣಿದು ಕ್ರಿಕೆಟ್​ ಪ್ರೇಮಿಗಳ ಮನ ತಣಿಸಿದರು. ಸಾಮಿ ಸಾಮಿ ಹಾಡಿಗೆ ಅವರು ಕುಣಿಯುತ್ತಿದ್ದಂತೆ ಕ್ರಿಕೆಟ್​ ಪ್ರೇಮಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದರು. ಈ ಮೂಲಕ ಕ್ರಿಕೆಟ್​ನ ಸವಿ ಉಣಲು ಕಾಯುತ್ತಿದ್ದ ಅಭಿಮಾನಿಗಳು ಮೋಹಕ ತಾರೆಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಅರಿಜಿತ್​ ಸಿಂಗ್ ಅವರು ಗಾನ ಲಹರಿ ನಡೆಯಿತು. ಜನಪ್ರಿಯ ಹಾಡುಗಳಿಗೆ ಧ್ವನಿಯಾದ ಅವರು ಐಪಿಎಲ್​ ಶುಭಾರಂಭಕ್ಕೆ ಕಿಚ್ಚು ಹಚ್ಚಿದರು. ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಿಳು, ಪಂಜಾಬಿ ಸೇರಿದಂತೆ ಹಲವು ಹಾಡುಗಳಿಗೆ ಡಾನ್ಸ್ ಮಾಡಿದರು. ಬಳಿಕ ವೇದಿಕೆಗೆ ರಶ್ಮಿಕಾ ಅವರ ಆಗಮನವಾಯಿತು. ರಶ್ಮಿಕಾ ಬರುತ್ತಿದ್ದಂತೆ ಸ್ಟೇಡಿಯಮ್​ನಲ್ಲಿ ನೆರೆದಿದ್ದ ಕ್ರಿಕೆಟ್​ ಪ್ರೇಮಿಗಳ ಸಂಭ್ರಮ ಹೆಚ್ಚಾಯಿತು.

ಮೊದಲಿಗೆ ತಮಿಳು ಹಾಗೂ ಗುಜರಾತಿ ಭಾಷೆಯಲ್ಲಿ ಎಲ್ಲರಿಗೂ ಶುಭ ಹಾರೈಕೆ ತಿಳಿಸಿದ ರಶ್ಮಿಕಾ ಮಂದಣ್ಣ ಬಳಿಕ ನೃತ್ಯ ಶುರು ಮಾಡಿದರು. ಪುಷ್ಪ ಚಿತ್ರದ ಸಾಮಿ ಸಾಮಿ ಹಾಡಿನ ಮೂಲಕ ಮೈ ಬಳುಕಿಸಲು ಆರಂಭಿಸಿದ ಅವರು, ಅದೇ ಸಿನಿಮಾದ ಶ್ರೀವಲ್ಲಿ ಹಾಡಿಗೂ ಡಾನ್ಸ್​ ಮಾಡಿದರು. ಬಳಿಕ ಆಸ್ಕರ್​ ಪ್ರಶಸ್ತಿ ವಿಜೇತ ಹಾಡು ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ಕಾಲು ಕುಣಿಸಿದರು.

ನಿರೀಕ್ಷೆಗೂ ಮೀರಿ ನೃತ್ಯ ಪ್ರದರ್ಶನ ನೀಡಿದ ರಶ್ಮಿಕಾ ಮಂದಣ್ಣ ಅವರು ನೆರೆದಿದ್ದ ಪ್ರೇಕ್ಷಕರಿಗೆ ಖುಷಿ ನೀಡಿದರು. ಅವರು ಡಾನ್ಸ್​ ಮಾಡುವು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಯಿತು.

ಗಣ್ಯರೊಂದಿಗೆ ಸಮಾಗಮ

ಗಾಯಕ ಅರಿಜಿತ್​ ಸಿಂಗ್​, ನಟಿ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್​ಶಾ, ಖಜಾಂಜಿ ಅರುಣ್​ ಧುಮಾಲ್​ ಸೇರಿದಂತೆ ಗಣ್ಯರು ಅಭಿನಂದಿಸಿದರು.

ಪಂದ್ಯಗಳ ಮಾದರಿ

ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ಬಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅಂದರೆ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಇದೇ ಮಾದರಿ ಇತರ ತಂಡಗಳಿಗೂ ಈ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ.

ಇದನ್ನೂ ಓದಿ IPL 203 : ಐಪಿಎಲ್​ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ

ಇಂಪ್ಯಾಕ್ಟ್ ಪ್ಲೇಯರ್‌

ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್‌ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಈ ಬಾರಿ ಐಪಿಎಲ್​ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್​ ಇಲೆವನ್​ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್‌ ಆರಂಭಕ್ಕೂ ಮುನ್ನ, ಒಂದು ಓವರ್‌ ಮುಗಿದ ಮೇಲೆ, ವಿಕೆಟ್‌ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

T20 World Cup 2024: ಜಮೈಕಾದ ಉಸೇನ್‌ ಬೋಲ್ಟ್(Usain Bolt) ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಮಾಡಲಾಗಿದೆ.

VISTARANEWS.COM


on

T20 World Cup 2024
Koo

ದುಬೈ: ಖ್ಯಾತ ಸ್ಟ್ರಿಂಟರ್‌, 8 ಒಲಿಂಪಿಕ್​ ಚಿನ್ನದ ಪದಕ ವಿಜೇತ,​ ಜಮೈಕಾದ ಉಸೇನ್‌ ಬೋಲ್ಟ್(Usain Bolt) ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕಮಾಡಲಾಗಿದೆ. ವಿಶ್ವಕಪ್​ ಟೂರ್ನಿ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ.

‘ಕ್ರಿಕೆಟ್ ಜೀವನದ ಭಾಗವಾಗಿರುವ ಕೆರಿಬಿಯನ್‌ನಿಂದ ಬಂದಿರುವ ಈ ಕ್ರೀಡೆಯು ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿದೆ ಮತ್ತು ಅಂತಹ ಪ್ರತಿಷ್ಠಿತ ಪಂದ್ಯಾವಳಿಯ ಭಾಗವಾಗಿರಲು ನನಗೆ ಗೌರವವಿದೆ’ ಎಂದು ಬೋಲ್ಟ್ ಐಸಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ವಿಶ್ವಕಪ್‌ಗೆ ನನ್ನ ಶಕ್ತಿ ಮತ್ತು ಉತ್ಸಾಹವನ್ನು ತರಲು ಮತ್ತು ಜಾಗತಿಕವಾಗಿ ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿ ಬೋಲ್ಟ್​ ಹೇಳಿದರು.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ; ರಣಜಿ ತಂಡ ಕಾಣಲ್ಲವೇ ಎಂದ ಮೋಹನ್‌ದಾಸ್‌ ಪೈ

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

IPL 2024: ಮಂಗಳವಾರ ನಡೆದ ಚೆನ್ನೈ(Chennai Super Kings) ಮತ್ತು ಲಕ್ನೋ(Lucknow Super Giants) ನಡುವಿನ ಪಂದ್ಯದ ಟಿಕೆಟ್​​ಗಳನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 12 ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

IPL 2024
Koo

ಚೆನ್ನೈ: ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ(IPL 2024) ಬ್ಲಾಕ್​ ಟಿಕೆಟ್​ ಮಾರಾಟ ಜಾಲವೊಂದನ್ನು ಭೇದಿಸಿರುವ ತಮಿಳುನಾಡು ಪೊಲೀಸರು 12 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಮಂಗಳವಾರ ನಡೆದ ಚೆನ್ನೈ(Chennai Super Kings) ಮತ್ತು ಲಕ್ನೋ(Lucknow Super Giants) ನಡುವಿನ ಪಂದ್ಯದ ಟಿಕೆಟ್​​ಗಳನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಇವರನ್ನು ಬಂಧಿಸಲಾಗಿದೆ. ಬಂಧಿತರಿಂದ 1,40,396 ರೂಪಾಯಿ ಮೌಲ್ಯದ 56 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 12 ಮಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ತಂಡ 2 ಪಂದ್ಯಗಳ ಬಳಿಕ ತವರಿನಲ್ಲಿ ಆಡಲಿಳಿದಿತ್ತು. ಹೀಗಾಗಿ ಪಂದ್ಯಕ್ಕೆ ಹೆಚ್ಚುವರಿ ಪ್ರೇಕ್ಷಕರನ್ನು ನಿರೀಕ್ಷಿಸಲಾಗಿತ್ತು. ಇದೇ ಕಾರಣದಿಂದ 12 ಮಂದಿ ಕಾಳಸಂತೆಯಲ್ಲಿ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದ್ದರು. ಸೂಕ್ತ ಮಾಹಿತಿಯೊಂದಿಗೆ ಬಲೆ ಬೀಸಿದ ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಅವರು ಸಿವಿಲ್​ ಡ್ರೆಸ್​ನಲ್ಲಿ ಮೈದಾನದ ಸುತ್ತಮುತ್ತ ಕಣ್ಗಾವಲು ಮತ್ತು ಮೇಲ್ವಿಚಾರಣೆಯಲ್ಲಿ ತೊಡಗಿದ್ದರು. ಈ ವೇಳೆ ಆಂಧ್ರಪ್ರದೇಶದ ಟಿ.ಏಳುಮಲೈ, ಹಯಾತ್ ಬಾಷಾ ನೂರ್ ಮೊಹಮ್ಮದ್, ಎಸ್ .ಶ್ಯಾಮ್ , ಎಸ್ .ಕಿಶೋರ್ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಪಂದ್ಯ ಸೋತ ಚೆನ್ನೈ

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು.

88 ರನ್​ಗೆ 3 ವಿಕೆಟ್​ ಕಳೆದುಕೊಂಡ ಲಕ್ನೊ ತಂಡ ಅಪಾಯಕ್ಕೆ ಸಿಲುಕಿತು. ಆದರೆ ಈ ವೇಳೆ ಆಡಲು ಬಂದ ನಿಕೋಲಸ್ ಪೂರನ್ ಹಾಗೂ ಸ್ಪೊಯ್ನಿಸ್​ 70 ರನ್​ಗಳ ಜತೆಯಾಟ ಆಡಿದರು. ಆದರೆ, 15 ಎಸೆತಕ್ಕೆ 34 ರನ್ ಬಾರಿಸಿದ ಪೂರನ್​ ಔಟಾದ ಬಳಿಕ ಮತ್ತೆ ತೊಂದರೆ ಎದುರಾಯಿತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದ ಸ್ಟೊಯ್ನಿಸ್​ 56 ಎಸೆತಕ್ಕೆ ಶತಕ ಪೂರೈಸಿದರು. ಕೊನೇ ತನಕ ನಿಂತು ಆಡಿ ಗೆಲ್ಲಿಸಿದರು. ಕೊನೆಯಲ್ಲಿ ದೀಪಕ್ ಹೂಡಾ 6 ಎಸೆತಕ್ಕೆ 17 ರನ್ ಬಾರಿಸಿದರು. ಚೆನ್ನೈ ಪರ ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Continue Reading

ಕ್ರೀಡೆ

Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

Sachin Tendulkar Birthday: ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

VISTARANEWS.COM


on

Sachin Tendulkar Birthday
Koo

ಮುಂಬಯಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡೂಲ್ಕರ್‌(Sachin Tendulkar Birthday) ಅವರು ಎಪ್ರಿಲ್​ 24ರಂದು ತಮ್ಮ 51ನೇ ವರ್ಷದ ಹುಟ್ಟು ಹಬ್ಬವನ್ನು ‘ಸಚಿನ್​ ತೆಂಡೂಲ್ಕರ್​ ಫೌಂಡೇಶನ್‌’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar)​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್​ ಅವರಿಗೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಈ ಫೌಂಡೇಶನ್​ನ ಮಕ್ಕಳೊಂದಿದೆ ಕೆಲ ಕಾಲ ಫುಟ್ಬಾಲ್​ ಆಡಿ, ಊಟ ಮಾಡುವ ಜತೆಗೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಬಳಿಕ ಮಕ್ಕಳಿಗೆ ವಿಶೇಷವಾಗಿ ಹಾರೈಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ Sachin Tendulkar : ಕಾಶ್ಮೀರದ ಬಾಲಕಿಯ ಕ್ರಿಕೆಟ್​ ಪ್ರೀತಿ ಸಚಿನ್ ಫಿದಾ; ಇಲ್ಲಿದೆ ವಿಡಿಯೊ

​ಕಳೆದ ವರ್ಷ ಸಚಿನ್​ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದರು.

2020ರಲ್ಲಿ ಹುಟ್ಟುಹಬ್ಬ ಆಚರಿಸದ ಸಚಿನ್​!

ಪ್ರತಿ ವರ್ಷವೂ ಸಂಭ್ರಮದೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿದ್ದ ಸಚಿನ್​ 2020ರಲ್ಲಿ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್​ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರಲಿಲ್ಲ. ಮನೆಯಲ್ಲಿಯೇ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Continue Reading

ಕ್ರೀಡೆ

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

RCB vs SRH: ಆರ್​ಸಿಬಿ(RCB) ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಸನ್​ರೈಸರ್ಸ್(RCB vs SRH)​ ವಿರುದ್ಧ ಪಂದ್ಯ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

VISTARANEWS.COM


on

RCB vs SRH
Koo

ಹೈದರಾಬಾದ್​: ಮೊದಲ ಮುಖಾಮುಖಿಯಲ್ಲಿ ಸನ್​ರೈಸರ್ಸ್(RCB vs SRH)​ ವಿರುದ್ಧ ದಾಖಲೆಯ 287 ರನ್​ ಚಚ್ಚಿಸಿಕೊಂಡು ಸೋಲು ಕಂಡಿದ್ದ ಆರ್​ಸಿಬಿ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ, ಸದ್ಯದ ಆರ್​ಸಿಬಿ ಪರಿಸ್ಥಿತಿ ನೋಡುವಾಗ ಇದು ಅಸಾಧ್ಯವೆನ್ನುವಂತೆ ತೋರುತ್ತಿದೆ. ಏಕೆಂದರೆ ಆರ್​ಸಿಬಿ(RCB) ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇದೊಂದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

ಪ್ರತಿ ಐಪಿಎಲ್‌(IPL 2024) ಆರಂಭದ ಸಂದರ್ಭದಲ್ಲಿಯೂ ಆರ್‌ಸಿಬಿ ಒಂದು ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಎಂದು ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ನಮ್ಮದು ಮುದಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ತಲುಪಿದೆ. ಹೊಸ ಅಧ್ಯಾಯ ಅಂತ ಆರ್‌ಸಿಬಿ ಆಟಗಾರರು ಹೇಳಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಆದರೆ, ಇದೀಗ ಆರ್‌ಸಿಬಿ ನಿರಂತರ ಸೋಲು ಅನುಭವಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಇತರ ತಂಡಗಳ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ತವರಿನಲ್ಲೇ ಹೈದರಾಬಾದ್​ ವಿರುದ್ಧ ಸರಿಯಾಗಿ ಚಚ್ಚಿಸಿಕೊಂಡಿದ್ದ ಆರ್​ಸಿಬಿ ಮತ್ತೊಂದು ಪಂದ್ಯ ಆಡುತ್ತದೆ ಎನ್ನುವಾಗಲೇ ಅಭಿಮಾನಿಗಳು ಸೋಲು ಖಚಿತ ಆದರೆ, ಟಾಸ್​ ಗೆದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್​ ನಡೆಸಲಿ ಎಂದು ಹಾರೈಸಿದ್ದಾರೆ. ಏಕೆಂದರೆ ಹೈದರಾಬಾದ್​ ಮೊದಲು ಬ್ಯಾಟಿಂಗ್​ ನಡೆಸಿದೆ 300 ರನ್​ ಬಾರಿಸುವು ನಿಶ್ಚಿತ ಎಂದು ಸ್ವತಃ ಆರ್​ಸಿಬಿ ಅಭಿಮಾನಿಗಳೇ ಹೇಳತೊಡಗಿದ್ದಾರೆ.

ಹೈದರಾಬಾದ್​ ಬಲಿಷ್ಠ


ಈ ಬಾರಿಯ ಐಪಿಎಲ್​ನಲ್ಲಿ ರನ್​ ಮಳೆಯೇ ಹರಿಸುತ್ತಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಇದು ತವರಿನ ಪಂದ್ಯ. ಬಲಿಷ್ಠ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರುವ ಹೈದರಾಬಾದ್​ ಪರ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. 5 ಓವರ್​ನಲ್ಲಿಯೇ 100 ರನ್​ ಬಾರಿಸುವ ಸಾಮರ್ಥ ಇವರಲ್ಲಿದೆ. ಅದರಲ್ಲೂ ಕಳಪೆ ಬೌಲಿಂಗ್​ ಹೊಂದಿರುವ ಆರ್​ಸಿಬಿ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿದರೆ 300 ರನ್​ ಬಾರಿಸುವ ಸಾಮರ್ಥವೂ ತಂಡಕ್ಕಿದೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್,ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಸನ್​ರೈಸರ್ಸ್​ ಹೈದರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್​, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

Continue Reading
Advertisement
Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ10 mins ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ30 mins ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

2nd PUC Exam
ಕರ್ನಾಟಕ30 mins ago

2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

T20 World Cup 2024
ಕ್ರೀಡೆ32 mins ago

T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

DCM D K Shivakumar visit adichunchanagiri mutt
ಕರ್ನಾಟಕ40 mins ago

Lok Sabha Election 2024: ನನ್ನ ಜೀವ, ನನ್ನ ದೇಹ ಇರುವುದೇ ನಮ್ಮ ಜನರಿಗಾಗಿ: ಡಿ.ಕೆ. ಶಿವಕುಮಾರ್

Road Accident
ಕರ್ನಾಟಕ1 hour ago

Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Madrid Open 2024
ಕ್ರೀಡೆ1 hour ago

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Kotak Bank
ದೇಶ1 hour ago

Kotak Bank: ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ

Lok sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರ ಅಂತ್ಯ, ನಾಳೆ ಮನೆ ಮನೆ ಪ್ರಚಾರ

Narsingh Yadav
ಕ್ರೀಡೆ2 hours ago

Narsingh Yadav: ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗಕ್ಕೆ ನರಸಿಂಗ್‌ ಯಾದವ್ ಅಧ್ಯಕ್ಷ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌