ಟೆನಿಸ್‌ಗೆ ವಿದಾಯ ಹೇಳುವರೇ ರೋಜರ್‌ ಫೆಡರರ್‌ - Vistara News

ಕ್ರೀಡೆ

ಟೆನಿಸ್‌ಗೆ ವಿದಾಯ ಹೇಳುವರೇ ರೋಜರ್‌ ಫೆಡರರ್‌

ಮಾಜಿ ವಿಶ್ವ ನಂಬರ್‌ ಒನ್‌ ಟೆನಿಸ್‌ ಆಟಗಾರ ರೋಜರ್‌ ಫೆಡರ್‌ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ.

VISTARANEWS.COM


on

ರೋಜರ್‌ ಫೆಡರರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಸ್ವಿಜರ್ಲೆಂಡ್‌ನ ಟೆನಿಸ್‌ ಪ್ರತಿಭೆ ರೋಜರ್‌ ಫೆಡರರ್‌ ವೃತ್ತಿ ಟೆನಿಸ್‌ಗೆ ವಿದಾಯ ಹೇಳುವರೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಡಚ್‌ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಸುಳಿವು ನೀಡಿದ್ದಾರೆ.

೪೦ ವರ್ಷದ ಹಿರಿಯ ಆಟಗಾರ ಕಳೆದ ವಿಂಬಲ್ಡನ್‌ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಗ್ರಾಸ್‌ ಕೋರ್ಟ್‌ ಸ್ಪೆಷಲಿಸ್ಟ್‌ (ಒಟ್ಟಾರೆ ೮ ವಿಂಬಲ್ಡನ್‌ ಪ್ರಶಸ್ತಿ) ಎನಿಸಿಕೊಂಡಿರುವ ಅವರಿಗೆ ಈ ಆವೃತ್ತಿಯಲ್ಲೂ ವಿಂಬಲ್ಡನ್‌ಗೆ ಮರಳಲು ಸಾಧ್ಯವಾಗಿಲ್ಲ. ಹೀಗಾಗಿ ನಿವೃತ್ತಿ ಬಗ್ಗೆ ಚಿಂತನೆ ನಡೆಸಿರಬಹುದು ಎನ್ನಲಾಗಿದೆ.

೨೦ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳ ಒಡೆಯನಾಗಿರುವ ಫೆಡರರ್‌ ಕಳೆದ ಒಂದು ವರ್ಷದಿಂದ ಟೆನಿಸ್‌ ಅಂಗಣದಿಂದ ಹೊರಗಿರುವ ಕಾರಣ ೧೦೦೦ಕ್ಕಿಂತಲೂ ಕೆಳಗಿನ ಶ್ರೇಯಾಂಕ ಹೊಂದಿದ್ದಾರೆ. ಇದು ಕಳೆದ ೨೫ ವರ್ಷಗಳ ಅವರ ಟೆನಿಸ್‌ ವೃತ್ತಿಯಲ್ಲಿ ಕನಿಷ್ಠ ಶ್ರೇಯಾಂಕ. ಇದೂ ಕೂಡ ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ

ಏನು ಹೇಳಿದರು ಫೆಡರರ್‌?

ಡಚ್‌ ಪತ್ರಿಕೆಯೊಂದರ ಜತೆ ಮಾತನಾಡಿದ ಫೆಡರರ್‌, ನನಗೆ ಗೆಲುವೆಂದರೆ ಬಲು ಪ್ರೀತಿ. ಆದರೀಗ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ನಿಲ್ಲಿಸುವುದೇ ಉತ್ತಮ. ಹೀಗಾಗಿ ನನಗಿನ್ನು ಟೆನಿಸ್‌ ಬೇಕಾಗಿಲ್ಲ ಎಂದು ಅನಿಸುತ್ತಿದೆ. ನನಗೆ ಖುಷಿ ಪಡಲು ಈಗ ಸಾಕಷ್ಟು ವಿಷಯಗಳಿವೆ. ಮಗ ಒಳ್ಳೆಯ ವಿಚಾರ ತೆಗೆದುಕೊಂಡು ಬಂದರೆ, ಮಗಳು ಒಳ್ಳೆಯ ಮಾರ್ಕ್‌ ಪಡೆದರೆ ಖುಷಿ ಪಡುವೆ,ʼʼ ಎಂದು ಹೇಳಿದ್ದಾರೆ.

೧೯೯೯ರಲ್ಲಿ ಟೆನಿಸ್‌ ಕ್ಷೇತ್ರಕ್ಕೆ ಧುಮುಕಿದ್ದ ಫೆಡರರ್‌ ಇದೇ ಮೊದಲ ಬಾರಿಗೆ ವಿಂಬಲ್ಡನ್‌ಗೆ ಅಲಭ್ಯರಾಗಿದ್ದಾರೆ. ಹೀಗಾಗಿ ನಿವೃತ್ತಿ ಬಗ್ಗೆ ಚಿಂತಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Wimbeldon : ಜೊಕೊವಿಕ್‌ಗೆ 21ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

IPL 2024 : ರಿಯಾನ್ ಪರಾಗ್​ ಬಾರಿಸಿದ ಅಮೋಘ ಅರ್ಧ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ತನ್ನದಾಗಿಸಿಕೊಂಡಿತು.

VISTARANEWS.COM


on

IPL 2024- Riyan Parag
Koo

ಜೈಪುರ: ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್​ನಲ್ಲಿ (IPL 2024) ಸತತವಾಗಿ ಎರಡನೇ ಜಯ ತನ್ನದಾಗಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 20 ರನ್​ಗಳ ಗೆಲುವು ಸಾಧಿಸಿತ್ತು ಸಂಜು ಸ್ಯಾಮ್ಸನ್​ ಪಡೆ. ಇದೇ ವೇಳೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ತಂಡ ಮತ್ತೊಂದು ಸೋಲಿಗೆ ಒಳಗಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಅದು ಪಂಜಾಬ್ ಕಿಂಗ್ಸ್​ಗೆ ಮಣಿದಿತ್ತು.

ಇಲ್ಲಿನ ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಡೇವಿಡ್​ ವಾರ್ನರ್ ಅಬ್ಬರದ ಬ್ಯಾಟಿಂಗ್ ಮೂಲಕ 34 ಎಸೆತಗಳಲ್ಲಿ 49 ರನ್ ಬಾರಿಸಿದರು. ಮಿಚೆ್ಲ್ ಮಾರ್ಷ್​ ಕೂಡ 12 ಎಸೆತಗಳಲ್ಲಿ 23 ರನ್​ ಬಾರಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್​ಗೆ 30 ರನ್ ಬಾರಿಸಿತು. ಆದರೆ, ಆ ಬಳಿಕ ಆಡಲು ಬಂದ ರಿಕಿ ಭುಯಿ ಶೂನ್ಯಕ್ಕೆ ಔಟಾದರು.

ಬಳಿಕ ನಾಯಕ ರಿಷಭ್ ಪಂತ್​ 28 ರನ್​ಗಳ ಕೊಡುಗೆ ಕೊಟ್ಟರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 44 ಹಾಗೂ ಅಕ್ಷರ್ ಪಟೇಲ್​ 15 ರನ್ ಬಾರಿಸಿದರು.

ರಾಜಸ್ಥಾನ್​ ಕೆಟ್ಟ ಆರಂಭ

ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ ತಂಡದ ಆರಂಭ ಚೆನ್ನಾಗಿರಲಿಲ್ಲ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್​ 5 ರನ್​ಗೆ ಔಟಾದರೆ ಮತ್ತೊಬ್ಬ ಆರಂಭಿಕ ಆಟಗಾರ ಜೋಸ್ ಬಟ್ಲರ್​ 11 ರನ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ಸಂಜ ಸ್ಯಾಮ್ಸನ್ ಕೊಡುಗೆಯೂ 15 ರನ್. 36 ರನ್​ಗೆ 3 ವಿಕೆಟ್​ ಕಳೆದುಕೊಂಡ ರಾಜಸ್ಥಾನ್​ ಪೇಚಿಗೆ ಸಿಲುಕಿತು.

ರಿಯಾನ್​ ಅಬ್ಬರದ ಆಟ

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರಿಯಾನ್ ಪರಾಗ್​ ಅಮೋಘ ಇನಿಂಗ್ಸ್ ಆಡಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಕೊನೇ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ವಿಕೆಟ್​ಗಳು ಸತತವಾಗಿ ಬೀಳುತ್ತಿದ್ದ ಕಾರಣ ಅತಿ ವೇಗದಲ್ಲಿ ರನ್ ಗಳಿಸಲು ಆರಂಭದಲ್ಲಿ ತಿಣುಕಾಡಿದ ಅವರು ಕೊಣೇ ಹಂತದಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅವರು 45 ಎಸೆತದಲ್ಲಿ 7 ಫೋರ್​ ಹಾಗೂ 6 ಸಿಕ್ಸರ್​ ಸಮೇತ 84 ರನ್ ಬಾರಿಸಿದರು.

ಇದನ್ನೂ ಓದಿ : IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

ರವಿಚಂದ್ರನ್ ಅಶ್ವಿನ್​ ಸ್ಫೋಟಕ 29 ರನ್ ಬಾರಿಸಿದರೆ ದ್ರುವ್ ಜುರೆಲ್ 20 ರನ್ ಕೊಡುಗೆ ಕೊಟ್ಟರು. ಶಿಮ್ರೋನ್ ಹೆಟ್ಮಾಯರ್ ಅಂತಿಮವಾಗಿ ಅಜೇಯ 14 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

IPL 2024 : ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​ ಆರ್​ಆರ್​ ತಂಡವನ್ನು ಸೇರಿಕೊಂಡಿದ್ದರೆ ಅಲ್ಲಾ ಘಜನ್ಫರ್​​ ಕೆಕೆಆರ್​ ತಂಡಕ್ಕೆ ಮೂಲ ಬೆಲೆ 20 ಲಕ್ಷ ರೂಪಾಯಿಯೊಂದಿಗೆ ಸೇರಿಕೊಂಡಿದ್ದಾರೆ.

VISTARANEWS.COM


on

Rajasthan Royals
Koo

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (Rajasathan Royals) ಕ್ರಮವಾಗಿ ಮುಜೀಬ್ ಉರ್ ರೆಹಮಾನ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಹೊಸ ಆಟಗಾರರನ್ನು ಘೋಷಿಸಿವೆ. ಇಬ್ಬರೂ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಫೆಬ್ರವರಿ 23, 2024 ರಂದು ಎಡ ಪ್ರಾಕ್ಸಿಮಲ್ ಕ್ವಾಡ್ರಿಸೆಪ್ಸ್ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪ್ರಸಿದ್ಧ್ ಕೃಷ್ಣ ಐಪಿಎಲ್ 2024 ರಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಈ ತಿಂಗಳ ಆರಂಭದಲ್ಲಿ ದೃಢಪಡಿಸಿತ್ತು.

ಬೌಲರ್ ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತನ್ನ ಪುನಶ್ಚೇತನವನ್ನು ಪುನರಾರಂಭಿಸಲಿದ್ದಾರೆ ಎಂದು ಮಂಡಳಿ ತಿಳಿಸಿತ್ತು. ಗಾಯದಿಂದಾಗಿ ಪ್ರಸಿದ್ಧ್ ಕೃಷ್ಣ ಸತತ ಎರಡನೇ (IPL 2024) ಐಪಿಎಲ್ ಋತುವಿನಿಂದ ಹೊರಗುಳಿಯುವಂತಾಗಿದೆ. ಅವರು ಇಡೀ ಐಪಿಎಲ್ 2023 ರಿಂದ ಹೊರಗುಳಿದಿದ್ದರು. ಐಪಿಎಲ್ 2022 ರಲ್ಲಿ, ಅವರು 19 ವಿಕೆಟ್​​ಗಳನ್ನು ಪಡೆಯುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2008 ರ ನಂತರ ಮೊದಲ ಬಾರಿಗೆ ಫೈನಲ್ಸ್​ಗೆ ಅರ್ಹತೆ ಪಡೆಯಲು ಸಹಾಯ ಮಾಡಿದ್ದರು.

ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಟ್ಟಿರುವುದರಿಂದ ಆರ್​ಆರ್​​ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅನುಭವಿ ಸ್ಪಿನ್ನರ್ ಆಗಿರುವ ಮಹಾರಾಜ್ ಇನ್ನೂ ಐಪಿಎಲ್​​ನಲ್ಲಿ ಆಡಿಲ್ಲ. 27 ಟಿ20, 44 ಏಕದಿನ ಹಾಗೂ 50 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 237 ವಿಕೆಟ್ ಕಬಳಿಸಿದ್ದಾರೆ. 130 ಟಿ20 ಪಂದ್ಯಗಳಲ್ಲಿ 130 ವಿಕೆಟ್ ಪಡೆದಿದ್ದಾರೆ. ಆರ್​ಆರ್​​ ಅವರನ್ನು ಮೂಲ ಬೆಲೆ 50 ಲಕ್ಷ ರೂ.ಗೆ ಖರೀದಿಸಿದೆ.

ಇದನ್ನೂ ಓದಿ: Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

ಮತ್ತೊಂದೆಡೆ, ಕೆಕೆಆರ್ ಮುಜೀಬ್ ಉರ್ ರೆಹಮಾನ್ ಬದಲಿಗೆ ಅವರ ಸಹ ಆಟಗಾರ ಅಲ್ಲಾ ಘಜನ್ಫರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಜೀಬ್ ಅವರ ಬಲ ಫಲಾಂಕ್ಸ್ ನಲ್ಲಿ ಉಳುಕು ಆಗಿದ್ದು ಅವರೂ ಆಡುತ್ತಿಲ್ಲ. ಕಳೆದ ಹರಾಜಿನಲ್ಲಿ ಕೆಕೆಆರ್ ಅವರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತ್ತು.

ವಿಶ್ವದ ಪ್ರಮುಖ ಟಿ 20 ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ಮುಜೀಬ್ 2021 ರಿಂದ ಐಪಿಎಲ್​ನಲ್ಲಿ ಆಡಿಲ್ಲ. ಅವರು 2018 ರಲ್ಲಿ ಪಂಜಾಬ್ ಕಿಂಗ್ಸ್ ಪರ ಐಪಿಎಲ್​​​ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ, ಅವರು 11 ಪಂದ್ಯಗಳಲ್ಲಿ 14 ವಿಕೆಟ್​ ಉರುಳಿಸಿದ್ದರು. 7 ಕ್ಕಿಂತ ಕಡಿಮೆ ಎಕಾನಮಿ ರೇಟ್ ಅನ್ನು ಕಾಯ್ದುಕೊಂಡಿದ್ದರು.

ಅಲ್ಲಾ ಘಜನ್ಫರ್ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಘಝಾನ್ಫರ್ ಈವರೆಗೆ 3 ಟಿ 20 ಮತ್ತು 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಕೆಕೆಆರ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದೆ.

Continue Reading

ಕ್ರೀಡೆ

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Rishabh Pant : ರಿಷಭ್​ ಪಂತ್​ 2021ರಲ್ಲಿ ಡೆಲ್ಲಿ ತಂಡದ ನಾಯಕತ್ವವನ್ನು ಹೆಗಲೇರಿಸಿಕೊಂಡಿದ್ದಾರೆ. ತಮ್ಮ ಫ್ರಾಂಚೈಸಿಗಾಗಿ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

VISTARANEWS.COM


on

Rishabh Pant -IPL 2024
Koo

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ (Rishabh Pant) ತಮ್ಮ ಐಪಿಎಲ್ ವೃತ್ತಿಜೀವನದ 100ನೇ ಐಪಿಎಲ್​ ಪಂದ್ಯವನ್ನು ಆಡಿದ್ದಾರೆ. ಮಾರ್ಚ್ 28ರಂದು ಜೈಪುರದ ಸವಾಯಿ ಮಾನ್​ಸಿಂಗ್​ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ವಿರುದ್ದ ಕಣಕ್ಕೆ ಇಳಿಯುವ ಮೂಲಕ ಅವರು ಈ ಮೈಲುಗಲ್ಲು ದಾಟಿದ್ದಾರೆ. ಪಂತ್ 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಕ್ಯಾಪಿಟಲ್ಸ್​) ಪರ ಪಾದಾರ್ಪಣೆ ಮಾಡಿದ್ದರು. ತಮ್ಮ ಫ್ರಾಂಚೈಸಿಗಾಗಿ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

2022 ರ ಡಿಸೆಂಬರ್​ನಲ್ಲಿ ಅಪಘಾತದಿಂದ ಬದುಕುಳಿದ ನಂತರ 26 ವರ್ಷದ ಪಂತ್​​ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದ ಸಮಯದಲ್ಲಿ ಕ್ರಿಕೆಟ್​ ಮೈದಾನಕ್ಕೆ ಪುನರಾಗಮನ ಮಾಡಿದ್ದರು. ತಮ್ಮ ಪುನರಾಗಮನದ ಪಂದ್ಯದಲ್ಲಿ ಅವರು 18 (13 ಎಸೆತ) ರನ್ ಗಳಿಸಿದರು. ಒಂದು ಸ್ಟಂಪಿಂಗ್ ಮಾಡಿದ್ದರು ಮತ್ತು ಅದ್ಭುತ ಕ್ಯಾಚ್ ಪಡೆದಿದ್ದರು. ಆದಾಗ್ಯೂ, ಅವರು ತಮ್ಮ ತಂಡವನ್ನು ನಾಲ್ಕು ವಿಕೆಟ್ ಸೋಲಿನಿಂದ ಕಾಪಾಡಲು ಅವರಿಗೆ ಸಾಧ್ಯವಾಗಲಿಲ್ಲ.

ಡೆಲ್ಲಿ ಪರ ಅತಿ ಹೆಚ್ಚು ರನ್​

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 98 ಇನ್ನಿಂಗ್ಸ್​ಗಳಲ್ಲಿ 34.41ರ ಸರಾಸರಿಯಲ್ಲಿ 2856 ರನ್ ಗಳಿಸಿದ್ದಾರೆ. 2018ರಲ್ಲಿ ಅವರು 14 ಇನ್ನಿಂಗ್ಸ್​ಗಳಿಂದ 52.61 ಸರಾಸರಿಯಲ್ಲಿ 684 ರನ್ ಮತ್ತು 173.6 ಸ್ಟ್ರೈಕ್​ರೇಟ್​ನೊಂದಿಗೆ ಆವೃತ್ತಿಯ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

2021ರಲ್ಲಿ ರಿಷಭ್​ಗೆ ಡೆಲ್ಲಿ ನಾಯಕತ್ವ

ಹರಿದ್ವಾರ ಮೂಲದ ಕ್ರಿಕೆಟಿಗ 2018 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ (ಎಸ್ಆರ್​ಎಚ್​) ವಿರುದ್ಧ 42 ನೇ ಪಂದ್ಯದಲ್ಲಿ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯುತ್ತಮ ಶತಕ ಗಳಿಸಿದರು. ನಾಲ್ಕು ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದ್ದ ತಂಡವನ್ನು ಪಂತ್ ಏಕಾಂಗಿಯಾಗಿ 128* (63) ರನ್ ಗಳಿಸುವ ಮೂಲಕ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದ್ದರು. ಹರ್ಷಲ್ ಪಟೇಲ್ 24 (17) ರನ್ ಗಳಿಸಿದ್ದು ಡೆಲ್ಲಿ ಪರ ಎರಡನೇ ಗರಿಷ್ಠ ಸ್ಕೋರ್ ಆಗಿದೆ.

ಇದನ್ನೂ ಓದಿ: IPL 2024 : ಐಪಿಎಲ್ ಇತಿಹಾಸದಲ್ಲಿ ವಿಭಿನ್ನ ಸಾಧನೆ ಮಾಡಿದ ಎಸ್​ಆರ್​​ಎಚ್​​ ಬೌಲರ್​ ಉನಾದ್ಕಟ್​

ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಶ್ರೇಯಾಂಕಗಳನ್ನು ಏರಿದ ನಂತರ, ಪಂತ್ ಅವರನ್ನು 2021 ರಲ್ಲಿ ಡಿಸಿ ನಾಯಕನಾಗಿ ನೇಮಿಸಲಾಯಿತು, ಇಲ್ಲಿಯವರೆಗೆ 31 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಅವುಗಳಲ್ಲಿ 17 ರಲ್ಲಿ ಗೆದ್ದಿದ್ದಾರೆ.

Continue Reading

ಕ್ರೀಡೆ

IPL 2024 : ಐಪಿಎಲ್ ಇತಿಹಾಸದಲ್ಲಿ ವಿಭಿನ್ನ ಸಾಧನೆ ಮಾಡಿದ ಎಸ್​ಆರ್​​ಎಚ್​​ ಬೌಲರ್​ ಉನಾದ್ಕಟ್​

IPL 2024- ಜಯದೇವ್ ಉನಾದ್ಕಟ್ ಒಟ್ಟು8 ಫ್ರಾಂಚೈಸಿಗಳಲ್ಲಿ ಆಡುವ ಮೂಲಕ ವಿಭಿನ್ನ ದಾಖಲೆಯೊಂದನ್ನು ಬರೆದಿದ್ದಾರೆ.

VISTARANEWS.COM


on

IPL 2024- Jayadev Unadkat
Koo

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟ್ವೆಂಟಿ-20 (T20 Cricket) ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ವೇಗದ ಬೌಲರ್ ಜಯದೇವ್ ಉನಾದ್ಕಟ್ (Jayadev Unadkat) ಹೊಸ ದಾಖಲೆ ಬರೆದಿದ್ದಾರೆ. ಎಡಗೈ ವೇಗಿ ಐಪಿಎಲ್ ಇತಿಹಾಸದಲ್ಲಿ 8 ತಂಡಗಳಿಗಾಗಿ ಆಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯದೇವ್ ಉನಾದ್ಕಟ್ ಐಪಿಎಲ್ 2024 ರಲ್ಲಿ ಹೈದರಾಬಾದ್ (Sunrisers Hyderabad) ತಂಡದ ಸದಸ್ಯರಾಗಿದ್ದಾರೆ.

ಐಪಿಎಲ್ 2024 ರ ಹರಾಜಿನಲ್ಲಿ ಹೈದರಾಬಾದ್​ ಮೂಲದ ಫ್ರಾಂಚೈಸಿ ಉನಾದ್ಕಟ್ ಅವರನ್ನು ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತು. ಹಿಂದಿನ ಋತುವಿನಲ್ಲಿ 34 ವರ್ಷದ ವೇಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಆದಾಗ್ಯೂ, ಐಪಿಎಲ್ 2024 ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿತು.

2010ರಲ್ಲಿ ಕೆಕೆಆರ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು

ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಸೇರಿದ ನಂತರ, ಜಯದೇವ್ ಉನಾದ್ಕಟ್ ಐಪಿಎಲ್​ನಲ್ಲಿ 8 ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. 2010 ರ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​​ ಪಾದಾರ್ಪಣೆ ಮಾಡಿದ ಅವರನ್ನು ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು.

ಇದನ್ನೂ ಓದಿ : SuryaKumar Yadav : ಮುಂಬೈ ತಂಡಕ್ಕೆ ಮತ್ತಷ್ಟು ಸಂಕಷ್ಟ; ಸೂರ್ಯಕುಮಾರ್​ ಸೇರ್ಪಡೆ ಅನುಮಾನ

ಅವರು ಮೂರು ಋತುಗಳಲ್ಲಿ ಫ್ರಾಂಚೈಸಿಯ ಭಾಗವಾಗಿದ್ದರು ಮತ್ತು ಐಪಿಎಲ್ 2012 ರಲ್ಲಿ ಟ್ರೋಫಿಯನ್ನು ಗೆದ್ದರು. ನಂತರ ಐಪಿಎಲ್ 2013 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಐಪಿಎಲ್ 2014 ಮತ್ತು 2015 ರ ಋತುಗಳಲ್ಲಿ, ಭಾರತದ ಹಿರಿಯ ವೇಗಿ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಭಾಗವಾಗಿದ್ದರು.

ಅವರು 2012ರಲ್ಲಿ ಕೇವಲ ಒಂದು ಆವೃತ್ತಿಗಾಗಿ ಕೆಕೆಅರ್​ಗೆ ಮರಳಿದರು. 2017ರ ಐಪಿಎಲ್ ಟೂರ್ನಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಸದಸ್ಯರಾಗಿದ್ದರು. 2018 ರಿಂದ 2021 ರ ಋತುಗಳಲ್ಲಿ ಉನಾದ್ಕಟ್ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ನಾಲ್ಕು ವರ್ಷಗಳನ್ನು ಕಳೆದರು. ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಆಯ್ಕೆ ಮಾಡಿತು ಆದರೆ ನಂತರ ಅವರನ್ನು ಬಿಡುಗಡೆ ಮಾಡಿತು.

ಲಕ್ನೋ ಸೂಪರ್ ಜೈಂಟ್ಸ್ ಕಳೆದ ಋತುವಿನಲ್ಲಿ ಅವರನ್ನು ಆಯ್ಕೆ ಮಾಡಿತು. ಆದರೆ ಋತುವಿನ ನಂತರ ಅವರನ್ನು ಕೈಬಿಟ್ಟಿತು. ಈಗ ಅವರು ಐಪಿಎಲ್ 2024 ರಲ್ಲಿ ಎಸ್ಆರ್​ಎಚ್​ನ ಭಾಗವಾಗಿದ್ದಾರೆ. ಐಪಿಎಲ್ 2010 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ, ಉನಾದ್ಕಟ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 8 ಕ್ಕೂ ಹೆಚ್ಚು ತಂಡಗಳಿಗಾಗಿ ಆಡಿದ್ದಾರೆ. ಅವರು ಈ ಎಲ್ಲಾ ತಂಡಗಳಿಗಾಗಿ ಕನಿಷ್ಠ ಒಂದು ಪಂದ್ಯವನ್ನು ಆಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಆರೋನ್ ಫಿಂಚ್ ಐಪಿಎಲ್​​ನಲ್ಲಿ ಅತಿ ಹೆಚ್ಚು ಫ್ರಾಂಚೈಸಿಗಳಿಗಾಗಿ ಆಡಿದ ದಾಖಲೆಯನ್ನು ಹೊಂದಿದ್ದಾರೆ. ಫಿಂಚ್ 2009ರಿಂದ 2022ರ ವರೆಗೆ 9 ಐಪಿಎಲ್ ತಂಡಗಳಿಗಾಗಿ ಆಡಿದ್ದಾರೆ. ಉನಾದ್ಕಟ್ ಈಗ ಒಟ್ಟಾರೆ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ.

2 ವಿಕೆಟ್ ಪಡೆದ ಉನಾದ್ಕಟ್

ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧ ಎಸ್​ಆರ್​​ಎಚ್​​ ಪರ ಮೊದಲ ಪಂದ್ಯವನ್ನು ಆಡಿದ ಜಯದೇವ್ ಉನಾದ್ಕಟ್ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಸೌರಾಷ್ಟ್ರದ ವೇಗಿ 47 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2024 ರ 8 ನೇ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್​ಗಳಿಂದ ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಎಸ್​ಆರ್​ಎಚ್​ ತಂಡ 277 ರನ್​ ಮಾಡಿ 3 ವಿಕೆಟ್​ ಕಳೆದುಕೊಂಡಿತು. ಟ್ರಾವಿಸ್ ಹೆಡ್ (62), ಅಭಿಷೇಕ್ ಶರ್ಮಾ (63) ಮತ್ತು ಹೆನ್ರಿಕ್ ಕ್ಲಾಸೆನ್ (80) ಅರ್ಧಶತಕಗಳನ್ನು ಬಾರಿಸಿದರು. ನಂತರ ಮುಂಬೈ ಇಂಡಿಯನ್ಸ್ 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತ್ತು. ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟವು ಹಲವಾರು ದಾಖಲೆಗಳನ್ನು ಮುರಿದಿದೆ.

Continue Reading
Advertisement
Water Crisis
ಪ್ರಮುಖ ಸುದ್ದಿ1 min ago

ವಿಸ್ತಾರ ಸಂಪಾದಕೀಯ: ನೀರಿನ ಸಮಸ್ಯೆಗೆ ಜನರೇ ಉತ್ತರ ಕಂಡುಕೊಳ್ಳಬೇಕು

IPL 2024- Riyan Parag
ಪ್ರಮುಖ ಸುದ್ದಿ16 mins ago

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

Dolly Chaiwala
ವೈರಲ್ ನ್ಯೂಸ್48 mins ago

Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು

Mukthar Ansari
ಪ್ರಮುಖ ಸುದ್ದಿ1 hour ago

Mukhtar Ansari : ಗ್ಯಾಂಗ್​ಸ್ಟರ್​ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ

Former DCM Govinda Karajola pressmeet
ಬೆಂಗಳೂರು1 hour ago

Bengaluru News: ದೇಶದ ಸರ್ವಾಂಗೀಣ ಅಭಿವೃದ್ಧಿ ಆಗಿದ್ದೇ ಮೋದಿಯಿಂದ: ಗೋವಿಂದ ಕಾರಜೋಳ

crime news
ಕ್ರೈಂ1 hour ago

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Women Slapped
ಪ್ರಮುಖ ಸುದ್ದಿ1 hour ago

Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

Tata Ace vehicle overturned Two persons dead five seriously injured
ಕರ್ನಾಟಕ2 hours ago

Road Accident: ಟಾಟಾ ಏಸ್ ವಾಹನ ಪಲ್ಟಿ; ಇಬ್ಬರ ಸಾವು, ಐವರಿಗೆ ಗಂಭೀರ ಗಾಯ

Xiaomi Car in China
ಪ್ರಮುಖ ಸುದ್ದಿ2 hours ago

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

viral video
ವೈರಲ್ ನ್ಯೂಸ್3 hours ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202410 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 202411 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ19 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌