Viral video: ತಂದೆ ತಂದೆಯೇ, ಮಗ ಮಗನೇ! ಶಿಖರ್‌ ಧವನ್‌ಗೆ ಅಪ್ಪನ ಒದೆ!! - Vistara News

ಕ್ರಿಕೆಟ್

Viral video: ತಂದೆ ತಂದೆಯೇ, ಮಗ ಮಗನೇ! ಶಿಖರ್‌ ಧವನ್‌ಗೆ ಅಪ್ಪನ ಒದೆ!!

Viral video:ಶಿಖರ್ ಧವನ್‌ ಅವರ ಮತ್ತೊಂದು ವಿಡಿಯೊ ಈಗ ಎಲ್ಲೆಡೆ ವೈರಲ್‌ ಆಗಿದೆ. ಈ ಬಾರಿ ಅವರ ಜತೆ ತಂದೆಯೂ ಸಾಥ್‌ ನೀಡಿ ವಿಭಿನ್ನ ವಿಡಿಯೊ ಮಾಡಿ, ಆಕರ್ಷಕ ಕ್ಯಾಪ್ಶನ್‌ ಹಾಕಿದ್ದಾರೆ.

VISTARANEWS.COM


on

Viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

Viral video: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್ ಶಿಖರ್‌ ಧವನ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊ ಎಲ್ಲರ ಗಮನ ಸೆಳೆದಿದೆ. ಶಿಖರ್‌ ಧವನ್‌ ಈ ಬಾರಿ ಐಪಿಎಲ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಆದರೆ, ಪಂಜಾಬ್‌ ತಂಡ ಪ್ಲೇ ಆಫ್‌ಗೆ ಕ್ವಾಲಿಫೈ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶಿಖರ್‌ ಧವನ್‌ ಅವರ ತಂದೆ ಮಗ ಶಿಖರ್‌ಗೆ ಜಾಡಿಸಿ ಒದೆಯುತ್ತಿರುವ ವಿಡಿಯೊವನ್ನು ಇನ್ಸ್‌ಟಾಗ್ರಾಂನಲ್ಲಿ ಹಂಚಿದ್ದಾರೆ.

ಏನು? ಶಿಖರ್‌ ಧವನ್‌ ತಂದೆ ಒದೆಯುವ ವಿಡಿಯೋನಾ ಎಂದು ನಿಮಗೆ ಅಚ್ಚರಿಯಾದೀತು. ಈ ಬಾರಿ ಐಪಿಎಲ್‌ನಲ್ಲಿ ಧವನ್‌ 14 ಪಂದ್ಯಗಳನ್ನಾಡಿ 460 ರನ್‌ ಗಳಿಸಿದ್ದಾರೆ. ಉತ್ತಮ ಆಟವಾಡಿದರೂ ಅವರ ತಂದೆ ಅವರಿಗೆ ಹೊಡೆದರಾ? ಹೌದು! ಶಿಖರ್‌ ಧವನ್‌ ʼಪ್ಲೇ ಆಫ್‌ ತಲುಪದ್ದಕ್ಕೆ ಜಾಡಿಸಿ ಒದೆಯುತ್ತಿರುವ ತಂದೆʼ ಎಂದು ಕ್ಯಾಪ್ಶನ್‌ ಹಾಕಿ ಒಂದು ವಿಡಿಯೊ ಶೇರ್‌ ಮಾಡಿದ್ದಾರೆ. ಈ ವಿಡಿಯೋ ಹೇಗಿದೆ ಎಂದು ನೀವೇ ನೋಡಬೇಕು!

ಶಿಖರ್‌ ಧವನ್‌ ಎಂದಿಗೂ ತಮ್ಮ ಅಭಿಮಾನಿಗಳಿಗೆ ಮನೋರಂಜನೆ ನೀಡುವಲ್ಲಿ ಸೋತಿಲ್ಲ. ಈ ʼಗಬ್ಬರ್‌ʼ ಅನೇಕ ತಮಾಷೆ ವಿಡಿಯೋ ಮಾಡಿ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಈ ಬಾರಿ ಅವರೊಂದಿಗೆ ತಂದೆಯೂ ಜತೆಯಾಗಿ ಈ ತಮಾಷೆ ವಿಡಿಯೊ ಮಾಡಿದ್ದಾರೆ.

ಈ ವಿಡಿಯೊ ನೋಡಿ ಹರ್ಭಜನ್ ಸಿಂಗ್‌ ʼಧವನ್‌ ಅವರಿಗಿಂತ ತಂದೆಯೇ ಅದ್ಭುತ ನಟನೆ ಮಾಡುತ್ತಾರೆʼ ಎಂದು ಕಾಮೆಂಟ್‌ ಮಾಡಿದ್ದಾರೆ. ಈ ವಿಡಿಯೊವನ್ನು ಗೌರ್‌ ಗೋಪಾಲ್‌ ದಾಸ್ ಸೇರಿದಂತೆ ಅನೇಕ ಗಣ್ಯರು ಕಾಮೆಂಟ್‌ನಲ್ಲಿ ನಗುವಿನ ಹೊಳೆ ಹರಿಸಿದ್ದಾರೆ.

ಇದನ್ನೂ ಓದಿ: Viral Video: ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿ ನೆರವಿಗೆ ಬಂದ ನಟ ಸೋನು ಸೂದ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

David Warner: ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

David Warner: ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ವಾರ್ನರ್​ ಟಿ20 ವಿಶ್ವಕಪ್​ ಬಳಿಕ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಲಿದ್ದಾರೆ.

VISTARANEWS.COM


on

David Warner
Koo

ಬಾರ್ಬಡೋಸ್‌: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​(David Warner) ಅವರು ಇಂದು(ಗುರವಾರ) ನಡೆದ ಒಮಾನ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ(T20 World Cup 2024) ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್(Chris Gayle)​ ದಾಲೆಯನ್ನು ಮುರಿದಿದ್ದಾರೆ.

ಒಮಾನ್​ ವಿರುದ್ಧ ವಾರ್ನರ್​ 51 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 56 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಇದು ವಾರ್ನರ್​ ಅವರ 111ನೇ ಟಿ20 ಅರ್ಧಶತಕ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ ಕ್ರಿಸ್​ ಗೇಲ್​ ಗೆಸರಿನಲ್ಲಿತ್ತು. ಗೇಲ್​ 110 ಅರ್ಧಶತಕ ಬಾರಿಸಿದ್ದಾರೆ.

ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ವಾರ್ನರ್​ ಟಿ20 ವಿಶ್ವಕಪ್​ ಬಳಿಕ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಲಿದ್ದಾರೆ. ಇದೇ ವರ್ಷ ನಡೆದಿದ್ದ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ಮತ್ತು ಸರಿಯಾಗಿ ಆಡುವ ಅವಕಾಶ ಸಿಗದ ವಾರ್ನರ್​ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್​ ನಡೆಸಿ ಗಮನಸೆಳೆದರು.

ಇದನ್ನೂ ಓದಿ David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

ಡ್ರೆಸ್ಸಿಂಗ್​ ರೂಮ್​ ಮರೆತ ವಾರ್ನರ್​


ಇದೇ ಪಂದ್ಯದಲ್ಲಿ ವಾರ್ನರ್​ ಅವರು ಔಟ್​ ಆಗಿ ತಮ್ಮ ತಂಡದ ಡ್ರೆಸ್ಸಿಂಗ್​ ರೋಮ್​ಗೆ ತೆರಳುವ ಬದಲು ಎದುರಾಳಿ ಒಮಾನ್ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ಪ್ರಸಂಗವೂ ನಡೆಯಿತು. ಮೆಟ್ಟಿಲೇರುತ್ತಾ ಒಮಾನ್​ ಡ್ರೆಸ್ಸಿಂಗ್​ ಕೋಣೆಗೆ ತೆರಳುತ್ತಿದ್ದ ವಾರ್ನರ್​ ಅವರನ್ನು ತಮ್ಮ ತಂಡದ ಸಹ ಆಟಗಾರರು ಜೋರಾಗಿ ಕರೆದು ಅದು ನಮ್ಮ ಕೊಠಡಿಯಲ್ಲ ಎಂದು ಹೇಳಿದ್ದಾರೆ. ಬಳಿಕ ವಾರ್ನರ್​ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದರು. ಇದರ ವಿಡಿಯೊ ವೈರಲ್​ ಆಗಿದೆ.

ಪಂದ್ಯ ಗೆದ್ದ ಆಸ್ಟ್ರೇಲಿಯಾ


ಮಾಜಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಒಮಾನ್​ ವಿರುದ್ಧ 39 ರನ್​ಗಳ ಪ್ರಯಾಸದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 164 ರನ್​ ಬಾರಿಸಿತು. ಆಸೀಸ್​ ತಂಡದ ಸಾಮರ್ಥ್ಯಕ್ಕೆ ಇದು ಕನಿಷ್ಠ ಮೊತ್ತ. ಜವಾಬಿತ್ತ ಒಮಾನ್​ ಉತ್ತಮ ಪೈಪೋಟಿ ನೀಡಿ 9 ವಿಕೆಟ್​ಗೆ 125 ರನ್​ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು.

ಒಮಾನ್​ ಉತ್ತಮ ಬೌಲಿಂಗ್​ ದಾಳಿ ನಡೆಸಿದರೂ ಕೂಡ ಬ್ಯಾಟಿಂಗ್​ನಲ್ಲಿ ವಿಫಲವಾಯಿತು. ಸೋಲು ಕಂಡರೂ ಕೂಡ ಬಲಿಷ್ಠ ಆಸ್ಟ್ರೇಲಿಯಾದಂತಹ ತಂಡಕ್ಕೆ ತೀವ್ರ ಪೈಪೋಟಿ ನೀಡಿದನ್ನು ಮಾತ್ರ ಮೆಚ್ಚಲೇ ಬೇಕು. ಒಮಾನ್​ ಪರ ಮೆಹ್ರಾನ್ ಖಾನ್ 2 ವಿಕೆಟ್​ ಕಿತ್ತರು. ಆಸೀಸ್​ ಪರ ಸ್ಪಿನ್ನರ್​ ಝಾಂಪ (20), ಮಾರ್ಕಸ್​ ಸ್ಟೋಯಿನಿಸ್​(3) ಮಿಚೆಲ್​ ಸ್ಟಾರ್ಕ್​(2) ಮತ್ತು ನಥಾನ್​ ಎಲ್ಲಿಸ್​(2) ವಿಕೆಟ್​ ಕಿತ್ತರು.

Continue Reading

ಕ್ರೀಡೆ

T20 World Cup 2024: ನಸೌ ಪಿಚ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಟೀಮ್​ ಇಂಡಿಯಾ ಆಟಗಾರರು

T20 World Cup 2024: ಡ್ರಾಪ್​ ಇನ್​ ಪಿಚ್​ ಅಷ್ಟು ಯೋಗ್ಯವಾಗಿಲ್ಲ. ಬಿರುಕುಗಳು ಅಧಿಕವಾಗಿದೆ. ಬೌಲರ್​ಗಳಿಗೆ ಅನುಕೂಲಕರವಾಗಿದ್ದರೂ ಕೂಡ ಬ್ಯಾಟರ್​ಗಳಿಗೆ ಇದು ಸೂಕ್ತವಾಗಿಲ್ಲ. ಚೆಂಡಿನ ಚಲನೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಗಾಯಗೊಂಡೆ ಎಂದು ರೋಹಿತ್​ ಈ ಪಿಚ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಐರ್ಲೆಂಡ್​(India vs Ireland) ವಿರುದ್ಧ ಗೆದ್ದು ಶುಭಾರಂಭ ಕಂಡಿರುವ ಭಾರತ ತಂಡ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರಿಗೆ(T20 World Cup 2024) ಅಪಾಯಕಾರಿ ನಸೌ ಪಿಚ್​ ಬಗ್ಗೆ ಭೀತಿ ಕಾಡಿದೆ. ಈಗಾಗಲೇ ಈ ಪಿಚ್​ ಬಗ್ಗೆ ಹಲವುರು ಅಸಮಾಧಾನ ಹೊರಹಾಕಿದ್ದರು. ನಿನ್ನೆ(ಬುಧವಾರ) ನಡೆದ ಪಂದ್ಯದಲ್ಲಿ ನಾಯಕ ರೋಹಿತ್(Rohit Sharma) ​ತೋಳಿನ ಮಾಂಸಖಂಡಕ್ಕೆ ಚೆಂಡು ತಗುಲಿ ಅರ್ಧದಲ್ಲೇ ಬ್ಯಾಟಿಂಗ್​ ಮೊಟಕುಗೊಳಿಸಿದ್ದರು. ಸದ್ಯ ಗಾಯದ ಪ್ರಮಾಣ ಸಣ್ಣ ಮಟ್ಟದಿಂದ ಕೂಡಿದ್ದು ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್​ ಶರ್ಮ, ಇಲ್ಲಿನ ಡ್ರಾಪ್​ ಇನ್​ ಪಿಚ್​ ಅಷ್ಟು ಯೋಗ್ಯವಾಗಿಲ್ಲ. ಬಿರುಕುಗಳು ಅಧಿಕವಾಗಿದೆ. ಬೌಲರ್​ಗಳಿಗೆ ಅನುಕೂಲಕರವಾಗಿದ್ದರೂ ಕೂಡ ಬ್ಯಾಟರ್​ಗಳಿಗೆ ಇದು ಸೂಕ್ತವಾಗಿಲ್ಲ. ಚೆಂಡಿನ ಚಲನೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಗಾಯಗೊಂಡೆ. ಈಗ ಚೇತರಿಸಿಕೊಂಡಿದ್ದೇನೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡದ್ದು ಕೂಡ ಪಿಚ್​ ವರ್ತನೆಯನ್ನು ಅರಿಯುವ ಉದ್ದೇಶದಿಂದ. ಆದರೆ ಈ ಪಿಚ್​ ವರ್ತನೆ ಅರ್ಥೈಸುವುದು ಅಷ್ಟು ಸುಲಭವಾಗಿಲ್ಲ” ಎಂದರು.

‘ಇದು ಹೊಸ ಪಿಚ್ ಆಗಿದ್ದು, ಉತ್ತಮವಾದ ಹುಲ್ಲಿನ ಹೊದಿಕೆ ಇದೆ. ಆದರೆ, ಅದರೊಂದಿಗೆ ದೊಡ್ಡ ಬಿರುಕುಗಳೂ ಇವೆ. ಇದರಿಂದ ಚೆಂಡಿನ ಬೌನ್ಸ್ ಕುಗ್ಗುತ್ತದೆ. ಈ ರೀತಿಯ ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಿ ಇದನ್ನು ಸೆಟ್ ಮಾಡಬೇಕು​. ಬಳಿಕ, ದೊಡ್ಡ ಪಂದ್ಯಗಳನ್ನು ಆಯೋಜಿಸಬೇಕು. ಎಲ್ಲ 4 ಪಿಚ್‌ಗಳು ಇದೇ ರೀತಿ ಆಗಿದ್ದು, ಟಿ-20 ಟೂರ್ನಿಗೆ ಯೋಗ್ಯವಲ್ಲ’ ಎಂದು ಕ್ರಿಕೆಟ್​ ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್‌ ಇದಾಗಿದೆ.

ಇದನ್ನೂ ಓದಿ India vs Ireland: ಪಂಜಾಬಿ ಪುಟ್ಟ ಪೋರನಿಂದ ಚಿನ್ನದ ಪದಕ ಪಡೆದ ಮೊಹಮ್ಮದ್​ ಸಿರಾಜ್

ಪಾಕಿಸ್ತಾನ ಮತ್ತು ಭಾರತ ತಂಡದ ಪರ ಘಾತಕ ಬೌಲರ್​ಗಳು ಇರುವ ಕಾರಣ ಉಭಯ ತಂಡಗಳ ಬ್ಯಾಟರ್​ಗಳಿಗೆ ಇಲ್ಲಿ ಆಡುವುದೇ ಸವಾಲಾಗಿ ಪರಿಣಮಿಸಿದೆ. ಬ್ಯಾಟರ್​ಗಳು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅದರಲ್ಲೂ ಸ್ಟಾರ್​ ಬ್ಯಾಟರ್​ಗಳು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಎಲ್ಲ ತಂಡದ ಬ್ಯಾಟರ್​ಗಳು ಕೂಡ ಜಾಗರೂಕರಾಗಿ ಆಡಬೇಕಿದೆ. ಈ ಸ್ಟೇಡಿಯಂ ಅನ್ನು ಕೇವಲ ಮೂರು ತಿಂಗಳಲ್ಲಿ ನಿರ್ಮಾಣ ಮಾಡಲಾಗಿತ್ತು.

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

Continue Reading

ಕ್ರಿಕೆಟ್

India vs Ireland: ಪಂಜಾಬಿ ಪುಟ್ಟ ಪೋರನಿಂದ ಚಿನ್ನದ ಪದಕ ಪಡೆದ ಮೊಹಮ್ಮದ್​ ಸಿರಾಜ್

India vs Ireland: ಐರ್ಲೆಂಡ್(India vs Ireland)​ ವಿರುದ್ಧದ ಪಂದ್ಯದಲ್ಲಿ ಉತ್ತಮ ಫೀಲ್ಡಿಂಗ್(Best Fielder Award)ಪ್ರಶಸ್ತಿ ಮೊಹಮ್ಮದ್​ ಸಿರಾಜ್​ಗೆ ಲಭಿಸಿದೆ. ಪುಟ್ಟ ಅಭಿಮಾನಿ ಡ್ರೆಸ್ಸಿಂಗ್​ ರೋಮ್​ಗೆ ಬಂದು ಸಿರಾಜ್​ಗೆ(Siraj Wins Best Fielder Award) ಚಿನ್ನದ ಪದಕ ನೀಡಿದ್ದು ವಿಶೇಷವಾಗಿತ್ತು.

VISTARANEWS.COM


on

India vs Ireland
Koo

ನ್ಯೂಯಾರ್ಕ್​: ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮ್ಯಾನೆಜ್​ಮೆಂಟ್​ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಇದೀಗ ಟಿ20 ವಿಶ್ವಕಪ್​ನಲ್ಲಿಯೂ(T20 World Cup 2024) ಈ ಪ್ರಕ್ರಿಯೆ ಮುಂದುವರಿದಿದೆ. ಐರ್ಲೆಂಡ್(India vs Ireland)​ ವಿರುದ್ಧದ ಪಂದ್ಯದಲ್ಲಿ ಈ ಪ್ರಶಸ್ತಿ ಮೊಹಮ್ಮದ್​ ಸಿರಾಜ್​ಗೆ ಲಭಿಸಿದೆ. ಪುಟ್ಟ ಅಭಿಮಾನಿ ಡ್ರೆಸ್ಸಿಂಗ್​ ರೋಮ್​ಗೆ ಬಂದು ಸಿರಾಜ್​ಗೆ(Siraj Wins Best Fielder Award) ಚಿನ್ನದ ಪದಕ ನೀಡಿದ್ದು ವಿಶೇಷವಾಗಿತ್ತು. ತಂಡದ ಫೀಲ್ಡಿಂಗ್​ ಕೋಚ್​ ಟಿ.ದಿಲೀಪ್​ ಅವರು ಈ ಪ್ರಶಸ್ತಿ ಘೋಷಣೆ ಮಾಡಿದರು. 


ಐರ್ಲೆಂಡ್​ ಬ್ಯಾಟರ್​ ಡೆಲಾನಿಯನ್ನು ರನೌಟ್ ಮಾಡುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಸಿರಾಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಡೆಲಾನಿ 26 ರನ್​ ಬಾರಿಸಿದರು. ಪಂದ್ಯದ ವೇಳೆ ರಾಷ್ಟ್ರೀಯ ಗೀತೆಯ ಹಾಡುವ ವೇಳೆ ಕಾಣಿಸಿಕೊಂಡಿದ್ದ ಪಂಜಾಬಿ ಬಾಲಕನನ್ನು ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಡ್ರೆಸ್ಸಿಂಗ್ ರೂಮ್​ಗೆ ಆಹ್ವಾನಿಸಿ ಪ್ರಶಸ್ತಿ ಪ್ರಧಾನ ಮಾಡಿಸಿದರು. ಕಳೆದ ಬಾರಿ ಏಕದಿನ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಮೊದಲ ಚಿನ್ನದ ಪದಕ ಜಯಿಸಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ ಮೊದಲ ಚಿನ್ನದ ಪದಕ ಸಿರಾಜ್​ಗೆ ಒಲಿದಿದೆ.

ಇದನ್ನೂ ಓದಿ India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

ಭಾರತಕ್ಕೆ ಗೆಲುವು


ಇಲ್ಲಿನ ನಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನಾಯಕ ರೋಹಿತ್​ ಶರ್ಮಾ ಅವರ ಆಯ್ಕೆಯನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಹಾರ್ದಿಕ್​ ಪಾಂಡ್ಯ, ಅರ್ಶದೀಪ್​, ಜಸ್​ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್​​ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್​ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಅಕ್ಷರ್​ ಪಟೇಲ್​ ಅವರು ಒಂದು ವಿಕೆಟ್​ ಕೀಳುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಮೈಲುಗಲ್ಲು ತಲುಪಿದರು.

Continue Reading

ಕ್ರೀಡೆ

Jasprit Bumrah: ಭುವನೇಶ್ವರ್​ ಕುಮಾರ್​ ವಿಶ್ವ ದಾಖಲೆ ಮುರಿದ ಜಸ್​ಪ್ರೀತ್​ ಬುಮ್ರಾ

Jasprit Bumrah: ಅರ್ಧಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್(1015)​ ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಮೂರನೇ ಹಾಗೂ 2ನೇ ಭಾರತೀಯ ಎನಿಸಿಕೊಂಡರು. ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(1142) ಮೊದಲ ಸ್ಥಾನದಲ್ಲಿದ್ದಾರೆ.

VISTARANEWS.COM


on

Jasprit Bumrah
Koo

ನ್ಯೂಯಾರ್ಕ್: ಐರ್ಲೆಂಡ್​(India vs Ireland) ವಿರುದ್ಧದ ಪಂದ್ಯದಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿ 6 ರನ್​ಗೆ 2 ವಿಕೆಟ್​ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟೀಮ್​ ಇಂಡಿಯಾದ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ತನ್ನದೇ ದೇಶದ ಬೌಲರ್​ ಭುವನೇಶ್ವರ್​ ಕುಮಾರ್​ ಅವರ ದಾಖಲೆಯನ್ನೊಂದನ್ನು ಮುರಿದಿದ್ದಾರೆ.

ಐರ್ಲೆಂಡ್ ಎದುರು ನಾಲ್ಕು ಓವರ್​ ಬೌಲಿಂಗ್​ ನಡೆಸಿದ ಬುಮ್ರಾ ಕೇವಲ 6 ರನ್ ನೀಡಿ 2 ವಿಕೆಟ್​ ಪಡೆದರು. ಒಂದು ಓವರ್​ ಮೇಡನ್​ ಆಯಿತು. ಈ ಮೇಡನ್​ ಓವರ್​ ಮೂಲಕ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ 11ನೇ ಮೇಡನ್ ಓವರ್ ದಾಖಲಿಸಿದರು. ಇದರೊಂದಿಗೆ ಟೆಸ್ಟ್ ಆಡುವ ರಾಷ್ಟ್ರದ ಬೌಲರ್‌ಗಳ ಪೈಕಿ ಅತಿ ಹೆಚ್ಚು ಮೇಡನ್​ ಓವರ್‌ ಎಸೆತದ ಮೊದಲ ಬೌಲರ್​ ಎನಿಸಿಕೊಂಡರು. ಈ ಮೂಲಕ ಭುವನೇಶ್ವರ್​(10) ದಾಖಲೆ ಹಿಂದಿಕ್ಕಿದರು.

ಅತಿ ಹೆಚ್ಚು ಮೇಡನ್​ ಓವರ್​ ಮಾಡಿದ ಬೌಲರ್​


ಜಸ್​ಪ್ರೀತ್​ ಬುಮ್ರಾ-11

ಭುವನೇಶ್ವರ್​ ಕುಮಾರ್​-10

ರಿಚರ್ಡ್ ನಾಗರವ-8

ಮುಸ್ತಫಿಜುರ್‌ ರೆಹಮಾನ್‌-7

ಜೋಶ್​ ಹ್ಯಾಲ್​ವುಡ್​-6

ಭಾರತಕ್ಕೆ ಗೆಲುವು


ಇಲ್ಲಿನ ನಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನಾಯಕ ರೋಹಿತ್​ ಶರ್ಮಾ ಅವರ ಆಯ್ಕೆಯನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಹಾರ್ದಿಕ್​ ಪಾಂಡ್ಯ, ಅರ್ಶದೀಪ್​, ಜಸ್​ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್​​ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್​ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಅಕ್ಷರ್​ ಪಟೇಲ್​ ಅವರು ಒಂದು ವಿಕೆಟ್​ ಕೀಳುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಮೈಲುಗಲ್ಲು ತಲುಪಿದರು.

ಇದನ್ನೂ ಓದಿ India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ(Rohit Sharma) ಅವರು ಅರ್ಧಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರ ದಾಖಲೆಯ ಪಟ್ಟಿ ಇಂತಿದೆ.

600 ಸಿಕ್ಸರ್​


ಐರ್ಲೆಂಡ್​ ವಿರುದ್ಧ ಮೂರು ಸಿಕ್ಸರ್​ಗಳನ್ನು ಬಾರಿಸುವ ಮೂಲಕ ರೋಹಿತ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 600 (ಏಕದಿನದಲ್ಲಿ 323, ಟಿ20ಯಲ್ಲಿ 193, ಟೆಸ್ಟ್​ನಲ್ಲಿ 84)​ ಸಿಕ್ಸರ್​ ಪೂರೈಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್​ ಎನಿಸಿಕೊಂಡರು. ಕ್ರಿಸ್​ ಗೇಲ್ 553 ಸಿಕ್ಸರ್​, ಶಾಹೀದ್​ ಅಫ್ರೀದಿ 476 ಸಿಕ್ಸರ್​ ಬಾರಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

4 ಸಾವಿರ ರನ್​


ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ದಾಖಲೆಯನ್ನು ಕೂಡ ರೋಹಿತ್(4026)​ ತಮ್ಮ ಹೆಸರಿಗೆ ಬರೆದರು. ಈ ಸಾಧನೆ ಮಾಡಿದ ವಿಶ್ವದ ದ್ವಿತೀಯ ಬ್ಯಾಟರ್​ ಎನಿಸಿಕೊಂಡರು. ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 4038 ರನ್​ ಬಾರಿಸಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಂ(4023) ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಸಾವಿರ ರನ್​


ಅರ್ಧಶತಕ ಬಾರಿಸುವ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್(1015)​ ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಮೂರನೇ ಹಾಗೂ 2ನೇ ಭಾರತೀಯ ಎನಿಸಿಕೊಂಡರು. ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(1142) ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(1016) ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್​ ಮುಂದಿನ ಪಂದ್ಯದಲ್ಲಿ 2 ರನ್​ ಗಳಿಸಿದರೆ ಜಯವರ್ಧನೆ ದಾಖಲೆ ಪತನಗೊಳ್ಳಲಿದೆ.

Continue Reading
Advertisement
Valmiki Corporation Scam
ಪ್ರಮುಖ ಸುದ್ದಿ8 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ; ಸಚಿವ ನಾಗೇಂದ್ರ ರಾಜೀನಾಮೆ

David Warner
ಕ್ರೀಡೆ28 mins ago

David Warner: ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

Modi 3.0 Government
ದೇಶ28 mins ago

Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Amruthadhare Serial goutham bhumika in first night scene
ಕಿರುತೆರೆ28 mins ago

Amruthadhare Serial: ಡುಮ್ಮ ಸರ್ ಎದೆ ಢವ ಢವ! ಗೌತಮ್-ಭೂಮಿಕಾ ಮನಸುಗಳು ಬೆರೆತಾಯ್ತು!

Prajwal Revanna Case
ಕರ್ನಾಟಕ32 mins ago

Prajwal Revanna Case: ಭವಾನಿ ರೇವಣ್ಣ ವಿರುದ್ಧ ಬಂಧನ ವಾರಂಟ್‌ ಹೊರಡಿಸಿದ ಕೋರ್ಟ್

Election Results 2024
Lok Sabha Election 202446 mins ago

Election Results 2024: ಠೇವಣಿ ಕಳೆದುಕೊಂಡ ದೆಹಲಿಯ 148 ಅಭ್ಯರ್ಥಿಗಳು; ಏನಿದು ಠೇವಣಿ ನಷ್ಟ?

rahul gandhi
ಪ್ರಮುಖ ಸುದ್ದಿ57 mins ago

Rahul Gandhi: ನಾಳೆ ಬೆಂಗಳೂರಿನಲ್ಲಿ ಕೋರ್ಟ್‌ ಕಟಕಟೆ ಏರಲಿರುವ ರಾಹುಲ್‌ ಗಾಂಧಿ

NEET UG 2024
ಶಿಕ್ಷಣ59 mins ago

NEET UG 2024: ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು? ಈ ಟಾಪರ್‌ ಹೇಳೋದು ಕೇಳಿ

Valmiki corporation Scam
ಕರ್ನಾಟಕ1 hour ago

Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ

Protest demanding adequate bus facility at govinakovi village
ದಾವಣಗೆರೆ1 hour ago

Davanagere News: ಸಮರ್ಪಕ ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ಹೊನ್ನಾಳಿಯ ಗೋವಿನಕೋವಿ ಗ್ರಾಮಸ್ಥರ ಪ್ರತಿಭಟನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌