Encounter in UP: ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಎನ್‌ಕೌಂಟರ್‌ಗೆ ಬಲಿ! ಯೋಗಿ ನಾಡಿನಲ್ಲಿ ಮತ್ತೆ ಗುಂಡಿನ ಸದ್ದು - Vistara News

ದೇಶ

Encounter in UP: ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಎನ್‌ಕೌಂಟರ್‌ಗೆ ಬಲಿ! ಯೋಗಿ ನಾಡಿನಲ್ಲಿ ಮತ್ತೆ ಗುಂಡಿನ ಸದ್ದು

Encounter in UP: ನೀಲೇಶ್‌ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.

VISTARANEWS.COM


on

Encounter in UP
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಕ್ನೋ: ಚುನಾವಣೆ ಮುಗಿಯುತ್ತಿದ್ದಂತೆ ಯೋಗಿ(Yogi adityanath)ನಾಡು ಉತ್ತರಪ್ರದೇಶ(Uttar Pradesh)ದಲ್ಲಿ ಗುಂಡಿನ ಸದ್ದು ಮೊಳಗಿದೆ. ಗ್ಯಾಂಗ್‌ಸ್ಟರ್‌(Gangster)ವೊಬ್ಬನನ್ನು ಎನ್‌ಕೌಂಟರ್‌(Encounter in UP) ಮಾಡಲಾಗಿದೆ. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ವಿಶೇಷ ಕಾರ್ಯಪಡೆಗಳು ಜಂಟೀ ಕಾರ್ಯಾಚರಣೆ ನಡೆಸಿ ನೀಲೇಶ್‌ ರೈ ಎಂಬಾತನನ್ನು ಹೊಡೆದುರುಳಿಸಿದೆ. ಮುಜಾಫರ್‌ನಗರದ ರತನ್‌ಪುರಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಇನ್ನು ನೀಲೇಶ್‌ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.

ಇನ್ನು ಈತ ರತನ್‌ಪುರಿ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬಿಹಾರ, ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರ ಗುಂಡೇಟು ಬಿದ್ದು ನೀಲೇಶ್‌ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.

ಐದು ತಿಂಗಳ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌, ಶಾರ್ಪ್‌ ಶೂಟರ್‌ ವಿನೋದ್‌ ಕುಮಾರ್‌ ಉಪಾಧ್ಯಾಯ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಸುಲ್ತಾನ್‌ಪುರದ ದೆಹತ್ ಕೊಟ್ವಾಲಿ ಪ್ರದೇಶದ ಎಸ್‌ಟಿಎಫ್‌ ಪ್ರಧಾನ ಕಚೇರಿಯ ಡಿವೈಎಸ್ಪಿ ದೀಪಕ್ ಕುಮಾರ್ ಸಿಂಗ್ ನೇತೃತ್ವದ ತಂಡ ಈ ಎನ್‌ಕೌಂಟರ್‌ ನಡೆಸಿತ್ತು.

ವಿನೋದ್‌ ಕುಮಾರ್‌ ವಿರುದ್ಧ ಲಕ್ನೋ ಮತ್ತು ಗೋರಖ್‌ಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಅಪಹರಣ, ದರೋಡೆ, ಸುಲಿಗೆಯ ಅನೇಕ ಪ್ರಕರಣಗಳು ದಾಖಲಾಗಿವೆ. ಆತನನ್ನು ಬಂಧಿಸುವವರಿಗೆ ಗೋರಖ್‌ಪುರ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು. ಈತ ಗೋರಖ್‌ಪುರ, ಬಸ್ತಿ, ಸಂತ ಕಬೀರ್ ನಗರ ಮತ್ತು ಲಕ್ನೋದಲ್ಲಿ ಆತ ಹಲವು ಕೊಲೆಗಳನ್ನು ನಡೆಸಿದ್ದ. ಇದಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್‌ಪುರದ ಗೋರಖನಾಥ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ವಿನೋದ್ ಕುಮಾರ್‌ ಹೆಸರಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 31 ಪ್ರಕರಣಗಳಿವೆ.

ಸುಲ್ತಾನ್‌ಪುರ ಜಿಲ್ಲೆಯ ಕೊಟ್ವಾಲಿ ಪ್ರದೇಶದಲ್ಲಿ ವಿನೋದ್ ಕುಮಾರ್‌ ಮತ್ತು ಯುಪಿ ಎಸ್‌ಟಿಎಫ್ ನಡುವೆ ಎನ್ ಕೌಂಟರ್ ನಡೆದಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ವಿನೋದ್‌ ಕುಮಾರ್‌ನನ್ನು ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದರು. ನಿಖರವಾದ ಗುರಿಗೆ ಹೆಸರುವಾಸಿಯಾದ ವಿನೋದ್ ಕುಮಾರ್‌ ಅಪರಾಧ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದ. ಹೀಗಾಗಿ ಈತನ ಹತ್ಯೆ ಎಸ್‌ಟಿಎಫ್ ಸಿಕ್ಕ ಯಶಸ್ಸು ಎಂದು ಪರಿಗಣಿಸಲಾಗಿದೆ. ಎನ್‌ಕೌಂಟರ್‌ ಬಳಿಕ 30 ಚೀನಿ ಕಂಪನಿ ನಿರ್ಮಿತ ಪಿಸ್ತೂಲ್, ಕಾರ್ಖಾನೆ ನಿರ್ಮಿತ 9 ಎಂಎಂ ಸ್ಟೆನ್ ಗನ್ ಮತ್ತು ಖಾಲಿ ಕಾರ್ಟಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪೊಲೀಸರು ಸ್ವಿಫ್ಟ್ ಕಾರನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Narendra Modi: ಜೂ.8ರಂದು ಮೋದಿ ಪ್ರಮಾಣವಚನ; ದೇಶ ವಿದೇಶಗಳ ಗಣ್ಯರು ಭಾಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ

Serial Killer: ಬಂಧಿತನನ್ನು ಕುಲದೀಪ್‌ ಎಂದು ಗುರುತಿಸಲಾಗಿದ್ದು, ಈ ಪೊಲೀಸರ ಎದುರು ತಾನು ಹೇಗೆ ಕೊಲೆ ಮಾಡುತ್ತಿದೆ ಎಂಬುದನ್ನು ವಿವರಿಸಿದ್ದಾನೆ. ಶಾಹಿ-ಶೀಶ್‌ಗಢ ಪ್ರದೇಶದಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿದ್ದು, 45 ರಿಂದ 55 ವರ್ಷ ವಯಸ್ಸಿನ ಒಂಬತ್ತು ಮಹಿಳೆಯರನ್ನು ತಮ್ಮ ಸೀರೆಯಿಂದ ಕತ್ತು ಹಿಸುಕಿ ಹಂತಕ ಕೊಲೆಗೈದಿದ್ದಾನೆ.

VISTARANEWS.COM


on

Serial Killer
Koo

ಲಖನೌ: ಕಳೆದೊಂದು ವರ್ಷದಲ್ಲಿ ಬರೋಬ್ಬರಿ 9 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದ ಪಾತಕಿಯನ್ನು(Serial Killer) ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಉತ್ತರ ಪ್ರದೇಶ(Uttar Pradesh)ದ ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈತ ಸರಣಿ ಕೊಲೆ ಹೇಗೆ ಮಾಡುತ್ತಿದ್ದ ಎಂಬುದನ್ನು ಪೊಲೀಸರ ಎದುರು ಪ್ರಾತ್ಯಕ್ಷಿಕೆ ಸಮೇತ ವಿವರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ಬಂಧಿತನನ್ನು ಕುಲದೀಪ್‌ ಎಂದು ಗುರುತಿಸಲಾಗಿದ್ದು, ಈ ಪೊಲೀಸರ ಎದುರು ತಾನು ಹೇಗೆ ಕೊಲೆ ಮಾಡುತ್ತಿದೆ ಎಂಬುದನ್ನು ವಿವರಿಸಿದ್ದಾನೆ.. ಶಾಹಿ-ಶೀಶ್‌ಗಢ ಪ್ರದೇಶದಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ಈ ಕೊಲೆಗಳು ನಡೆದಿದ್ದು, 45 ರಿಂದ 55 ವರ್ಷ ವಯಸ್ಸಿನ ಒಂಬತ್ತು ಮಹಿಳೆಯರನ್ನು ತಮ್ಮ ಸೀರೆಯಿಂದ ಕತ್ತು ಹಿಸುಕಿ ಹಂತಕ ಕೊಲೆಗೈದಿದ್ದಾನೆ. ಕೊಲೆಯಾದ ಮಹಿಳೆಯರ ಶವಗಳು ಬಹುತೇಕ ಹೊಲಗಳಲ್ಲಿ ಪತ್ತೆ ಮಾಡಲಾಗಿವೆ. ಸಾಮಾನ್ಯವಾಗಿ ಮಧ್ಯಾಹ್ನದ ಸುಮಾರಿಗೇ ಈತ ಕೃತ್ಯ ಎಸಗುತ್ತಿದ್ದ. ಇದಕ್ಕೂ ಮುನ್ನ ಅವರನ್ನು ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡುತ್ತಿದ್ದ ಎಂಬುದನ್ನು ಕುಲದೀಪ್‌ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.

ಇನ್ನು ಕೊಲೆಗಳು ಎರಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದೆ. ಈ ಭಯಾನಕ ಘಟನೆಗಳು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಕೆಲವು ತಿಂಗಳ ಹಿಂದೆ ಸರಣಿ ಅತ್ಯಾಚಾರಿ, ಹಂತಕ ರವೀಂದರ್​ ಕುಮಾರ್ ಎಂಬಾತ​​ನಿಗೆ, ಎಂಟು ವರ್ಷಗಳ ಹಿಂದಿನ ಕೇಸ್​ವೊಂದರಲ್ಲಿ ದೆಹಲಿ ನ್ಯಾಯಾಲಯ (Delhi Court) ಈಗ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ರವೀಂದರ್ ಕುಮಾರ್​ನ ಭಯಾನಕ ಸ್ಟೋರಿಯನ್ನು ಇತ್ತೀಚೆಗೆಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು. 2008ರಿಂದ 2015ರವರೆಗೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೊಂದಿದ್ದ. ಅವನಿಗೆ ಹೆಣ್ಣು-ಗಂಡು ಎಂಬ ಭೇದವಿರಲಿಲ್ಲ. 2015ರಲ್ಲಿ, ದೆಹಲಿಯ ಬೇಗಂಪುರ ಎಂಬಲ್ಲಿ, 6 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಂದಿದ್ದ. ಆ ಕೇಸ್​​ನಡಿ ರವೀಂದರ್​ ಅರೆಸ್ಟ್ ಆಗಿದ್ದ. ಇದೀಗ ಅದೇ ಕೇಸ್​​ನಲ್ಲಿ ದೆಹಲಿ ನ್ಯಾಯಾಲಯ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Serial Killer | ಕೆಜಿಎಫ್ ಸಿನಿಮಾ ಪ್ರೇರಿತ ಯುವಕ ಆದ ಸೀರಿಯಲ್ ಕಿಲ್ಲರ್, ಕಲ್ಲಿನಿಂದ ಜಜ್ಜಿ ಐವರನ್ನು ಕೊಂದೇ ಬಿಟ್ಟ!

Continue Reading

ವಿದೇಶ

Bangladesh Unrest: ಹಿಂದೂಗಳ ಮೇಲಿನ ದಾಳಿ ಖಂಡಿಸಿ ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆ; ಅಮೆರಿಕ, ಯುಕೆಯಲ್ಲೂ ಧರಣಿ

Bangladesh Unrest: ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಆಗಸ್ಟ್ 5 ರಂದು Ms ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205 ಕ್ಕೂ ಹೆಚ್ಚು ದಾಳಿಯ ಘಟನೆಗಳನ್ನು ಎದುರಿಸಿದ್ದಾರೆ. ನೂರಾರು ಹಿಂದೂಗಳು ತಮ್ಮ ಮನೆಗಳು ಮತ್ತು ವ್ಯವಹಾರಗಳ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ.

VISTARANEWS.COM


on

Bangladesh Unrest
Koo

ನವದೆಹಲಿ: ಶೇಖ್ ಹಸೀನಾ(Sheikh Hasina) ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ(Resignation) ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರ ಬಾಂಗ್ಲಾದೇಶದ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ(Bangladesh Unrest)ಯನ್ನು ವಿರೋಧಿಸಿ ಲಕ್ಷಾಂತರ ಹಿಂದೂಗಳು ಶನಿವಾರ ಬೀದಿಗಿಳಿದಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ದೇಶದ ಎರಡನೇ ಅತಿದೊಡ್ಡ ನಗರವಾದ ಚಿತ್ತಗಾಂಗ್, ಬೃಹತ್ ರ್ಯಾಲಿಗಳಲ್ಲಿ ಲಕ್ಷಾಂತರ ಜನರು ಭಾಗಿಯಾದರು.

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಆಗಸ್ಟ್ 5 ರಂದು Ms ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205 ಕ್ಕೂ ಹೆಚ್ಚು ದಾಳಿಯ ಘಟನೆಗಳನ್ನು ಎದುರಿಸಿದ್ದಾರೆ. ನೂರಾರು ಹಿಂದೂಗಳು ತಮ್ಮ ಮನೆಗಳು ಮತ್ತು ವ್ಯವಹಾರಗಳ ಮೇಲಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ. ಹಲವಾರು ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಗಿದೆ ಮತ್ತು Ms ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕನಿಷ್ಠ ಇಬ್ಬರು ಹಿಂದೂ ನಾಯಕರು ಹಿಂಸಾಚಾರದಲ್ಲಿ ಬಲಿಯಾಗಿದ್ದಾರೆ.

ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಬಾಂಗ್ಲಾದೇಶಿ ಹಿಂದೂಗಳು ನೆರೆಯ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವವರ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಮಂಡಳಿಗಳು, ಅಲ್ಪಸಂಖ್ಯಾತರಿಗೆ ಶೇಕಡಾ 10 ರಷ್ಟು ಸಂಸದೀಯ ಸ್ಥಾನಗಳನ್ನು ಹಂಚಿಕೆ ಮತ್ತು ಇತರರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಜಾರಿಗೆ ಒತ್ತಾಯಿಸಿ, ಹಿಂದೂಗಳು ರ್ಯಾಲಿ ನಡೆಸಿ ಉಗ್ರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮುಸ್ಲಿಂ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಪರವಾಗಿ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

ಚಿತ್ತಗಾಂಗ್‌ನಲ್ಲಿ ಐತಿಹಾಸಿಕ ಚೆರಗಿ ಪಹಾರ್ ಚೌಕದಲ್ಲಿ ಬೃಹತ್ ಸಮಾವೇಶ ನಡೆಯಿತು. ಕೆಲವು ವರದಿಗಳ ಪ್ರಕಾರ, ಏಳು ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

US,UK ಗಳಲ್ಲೂ ಪ್ರೊಟೆಸ್ಟ್‌

ಇನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲೂ ಪ್ರತಿಭಟನೆ ನಡೆದಿದೆ. ವಾಷಿಂಗ್ಟನ್‌ ಮತ್ತು ಲಂಡನ್‌ನ ಬಿಬಿಸಿ ಪ್ರಧಾನ ಕಚೇರಿ ಎದುರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿ ಹಿಂದೂಗಳ ಮೇಲಿನ ದಾಳಿಗೆ ಖಂಡನೆ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ಮೇಲಿನ ದಾಳಿಯ ಕುರಿತು ಬಾಂಗ್ಲಾದೇಶದ ಹಂಗಾಮಿ ನಾಯಕ ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಹಿಂಸಾಚಾರ ಪೀಡಿತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ, ಅವರನ್ನು “ಹೇಯ ಕೃತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ

Continue Reading

ದೇಶ

Kejriwal Bungalow Case: ಕೇಜ್ರಿವಾಲ್‌ ಬಂಗಲೆ ನವೀಕರಣ ಅಕ್ರಮ; ಮೂವರು ಇಂಜಿನಿಯರ್‌ಗಳು ಸಸ್ಪೆಂಡ್‌

Kejriwal Bungalow Case: ಅರವಿಂದ ಕೇಜ್ರಿವಾಲ್ ಅವರ ಸೂಚನೆಗಳ ಮೇರೆಗೆ ಬಂಗಲೆಯಲ್ಲಿ ಉನ್ನತ ಮಾರ್ಪಾಡುಗಳ ಹೆಸರಿನಲ್ಲಿ ನಿಯಮ ಉಲ್ಲಂಘನೆ ಮತ್ತು ವೆಚ್ಚವನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನಾಲ್ವರನ್ನು ಅಮಾನತು ಮಾಡಲಾಗಿದೆ. ಪರ್ಮಾರ್ ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ನಿಯೋಜನೆಗೊಂಡಿದ್ದಾರೆ, ರಾಜ್ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.

VISTARANEWS.COM


on

Kejriwal Bungalow Case
Koo

ನವದೆಹಲಿ: ದಿಲ್ಲಿ ಮುಖ್ಯಮಂತ್ರಿ(Delhi CM) ಅರವಿಂದ್‌ ಕೇಜ್ರಿವಾಲ್‌(Arvind Kejriwal) ಅವರ ಅಧಿಕೃತ ಮನೆಯನ್ನು ನವೀಕರಿಸುವಲ್ಲಿ ಅಕ್ರಮ ಎಸಗಿರುವ ಆರೋಪ(Kejriwal Bungalow Case)ದಲ್ಲಿ ಮೂವರು ಇಂಜಿನಿಯರ್‌ಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಅಮಾನತುಗೊಳಿಸಿದೆ. ಮೂವರು ಇಂಜಿನಿಯರ್‌ಗಳಾದ ಪ್ರದೀಪ್ ಕುಮಾರ್ ಪರ್ಮಾರ್, ಅಭಿಷೇಕ್ ರಾಜ್ ಮತ್ತು ಅಶೋಕ್ ಕುಮಾರ್ ರಾಜ್‌ದೇವ್ ಅವರು ಕೇಜ್ರಿವಾಲ್ ಅವರ ಬಂಗಲೆಯನ್ನು ನವೀಕರಿಸುವಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅರವಿಂದ ಕೇಜ್ರಿವಾಲ್ ಅವರ ಸೂಚನೆಗಳ ಮೇರೆಗೆ ಬಂಗಲೆಯಲ್ಲಿ ಉನ್ನತ ಮಾರ್ಪಾಡುಗಳ ಹೆಸರಿನಲ್ಲಿ ನಿಯಮ ಉಲ್ಲಂಘನೆ ಮತ್ತು ವೆಚ್ಚವನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನಾಲ್ವರನ್ನು ಅಮಾನತು ಮಾಡಲಾಗಿದೆ. ಪರ್ಮಾರ್ ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ನಿಯೋಜನೆಗೊಂಡಿದ್ದಾರೆ, ರಾಜ್ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಇಂಜಿನಿಯರ್‌ಗಳಿಗೆ ದೆಹಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವರು ಕೈಜೋಡಿಸಿದ್ದು, ಮತ್ತು ಸಿಎಂ ಬಂಗಲೆ ತುರ್ತಾಗಿ ನವೀಕರಣಗೊಳಿಸುವ ಅವಶ್ಯಕತೆ ಇದೆ ಎಂದು ಈ ಕಾರ್ಯಕ್ಕೆ ಕೈ ಹಾಕಿದ್ದರು. ಆದರೆ ಇಡೀ ದೇಶವೇ ಕೋವಿಡ್‌ ಎದುರಿಸುತ್ತಿದ್ದ ಸಂದರ್ಭದಲ್ಲಿ ಅಂತಹ ಯಾವುದೇ ಅವಶ್ಯಕತೆ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ಇಲಾಖೆಯು ಹಣಕಾಸಿನ ನಿರ್ವಹಣೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಕುರಿತು ಆದೇಶಗಳನ್ನು ನೀಡುತ್ತಿರುವಾಗ, PWD ಸಚಿವರು ಹೊಸ ಬಂಗಲೆ ನಿರ್ಮಾಣದ ಪ್ರಸ್ತಾವನೆಯನ್ನು ಇಟ್ಟಿದ್ದರು ಎನ್ನಲಾಗಿದೆ.

ಪಿಡಬ್ಲ್ಯುಡಿ ಸಚಿವರ ನಿರ್ದೇಶನದ ಮೇರೆಗೆ ಹಳೆಯ ಕಟ್ಟಡವನ್ನು ಕೆಡವಿ ಹೊಸದನ್ನು ನಿರ್ಮಿಸುವುದು ಮತ್ತು ಅದರ ವೆಚ್ಚ ಹೆಚ್ಚಳ ಮಾಡಲಾಗಿದೆ. ಹೆಚ್ಚುವರಿ ಕಲಾತ್ಮಕ ಮತ್ತು ಅಲಂಕಾರಿಕ ಕೆಲಸಗಳು, ಅತ್ಯುತ್ತಮ ಗುಣಮಟ್ಟದ ಕಲ್ಲಿನ ನೆಲಹಾಸುಗಳು, ಉನ್ನತ ಮರದ ಬಾಗಿಲುಗಳು ಮತ್ತು ಸ್ವಯಂಚಾಲಿತ ಜಾರುವ ಗಾಜಿನ ಬಾಗಿಲುಗಳು ಮುಂತಾದ ಬದಲಾವಣೆಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣವನ್ನು ಈಗಾಗಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಸ್ವಾತಿ ಮಾಲಿವಾಲ್‌ ಕೇಸ್‌ನಲ್ಲೂ ಸಿಎಂ ವಿರುದ್ಧ ಚಾರ್ಜ್‌ಶೀಟ್!

ಅಬಕಾರಿ ನೀತಿ ಹಗರಣದಲ್ಲಿ ತಿಹಾರ ಜೈಲುಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯಸಭೆಯ ಆಪ್‌ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಭವ್‌ ಕುಮಾರ್‌ ವಿರುದ್ಧ ದೆಹಲಿ ಪೊಲೀಸರು (Delhi Police) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿದೆ. ಇದು ಈಗ ಸಿಎಂಗೆ ಮತ್ತೊಂದು ಕಂಟಕವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

Continue Reading

ದೇಶ

MNS v/s Shiv Sena: MNS ಕಾರ್ಯಕರ್ತರ ಪುಂಡಾಟ; ಉದ್ಧವ್‌ ಠಾಕ್ರೆ ಬೆಂಗಾವಲು ವಾಹನದ ಮೇಲೆ ದಾಳಿ

MNS v/s Shiv Sena:ರಂಗಾಯತನ್‌ ಬಳಿ ಈ ಘಟನೆ ನಡೆದಿದ್ದು, ಪಕ್ಷದ ಕಾರ್ಯಕರ್ತರ ಸಭೆ ಆಯೋಜನೆಗೊಂಡಿತ್ತು. ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಉದ್ಧವ್ ಠಾಕ್ರೆ ಮತನಾಡಲಿದ್ದರು. ಠಾಕ್ರೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಎಂಎನ್‌ಎಸ್ ಕಾರ್ಯಕರ್ತರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರತಿಭಟಿಸಿ ಸಭಾಂಗಣಕ್ಕೆ ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮತ್ತು ಹಲವಾರು MNS ಪ್ರತಿಭಟನಾಕಾರರನ್ನು ಬಂಧಿಸಿದರು

VISTARANEWS.COM


on

MNS v/s Shiv Sena
Koo

ಥಾಣೆ: ರಾಜ್‌ ಠಾಕ್ರೆಯವರ(Raj Thackeray) ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಉದ್ಧವ್ ಠಾಕ್ರೆ(Uddhav Thackeray) ಅವರ ಬೆಂಗಾವಲು ಪಡೆಯ ಮೇಲೆ ಶನಿವಾರ ದಾಳಿ ಮಾಡಿರುವ ಘಟನೆ ವರದಿಯಾಗಿದೆ. MNS ಕಾರ್ಯಕರ್ತರು ಬಳೆಗಳು, ಟೊಮೆಟೊಗಳು ಮತ್ತು ತೆಂಗಿನಕಾಯಿಗಳನ್ನು ಎಸೆದಿದ್ದು, ಉದ್ವಿಗ್ನ ಪರಿಸ್ಥಿತಿ(MNS v/s Shiv Sena) ಉಂಟಾಯಿತು. ಪರಿಣಾಮವಾಗಿ ಶಿವಸೇನೆ (ಯುಬಿಟಿ) ಮುಖ್ಯಸ್ಥರ ಬೆಂಗಾವಲು ಪಡೆಯ ವಾಹನಗಳಿಗೆ ಹಾನಿಯಾಗಿದೆ.

ರಂಗಾಯತನ್‌ ಬಳಿ ಈ ಘಟನೆ ನಡೆದಿದ್ದು, ಪಕ್ಷದ ಕಾರ್ಯಕರ್ತರ ಸಭೆ ಆಯೋಜನೆಗೊಂಡಿತ್ತು. ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಉದ್ಧವ್ ಠಾಕ್ರೆ ಮತನಾಡಲಿದ್ದರು. ಠಾಕ್ರೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಎಂಎನ್‌ಎಸ್ ಕಾರ್ಯಕರ್ತರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರತಿಭಟಿಸಿ ಸಭಾಂಗಣಕ್ಕೆ ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮತ್ತು ಹಲವಾರು MNS ಪ್ರತಿಭಟನಾಕಾರರನ್ನು ಬಂಧಿಸಿದರು

ಠಾಕ್ರೆಯವರ ಬೆಂಗಾವಲು ವಾಹನದ ಮೇಲಿನ ದಾಳಿಯು ಬೀಡ್‌ನಲ್ಲಿ ನಡೆದ ಇದೇ ರೀತಿಯ ಘಟನೆಗೆ ಪ್ರತೀಕಾರ ಎಂದು ವರದಿಯಾಗಿದೆ, ಅಲ್ಲಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಬೆಂಗಾವಲು ಪಡೆಯ ಮೇಲೆ ಅಡಿಕೆ ಮತ್ತು ಟೊಮೆಟೊಗಳಿಂದ ದಾಳಿ ಮಾಡಿದರು.

ಥಾಣೆಯ ಎಂಎನ್‌ಎಸ್‌ ಮುಖಂಡ ಅವಿನಾಶ್‌ ಜಾಧವ್‌, ನಮ್ಮ ಎಂಎನ್‌ಎಸ್‌ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ. ನೀವು ವೀಳ್ಯದೆಲೆ ಎಸೆದಿದ್ದೀರಿ, ನಾವು ತೆಂಗಿನಕಾಯಿಯಿಂದ ದಾಳಿ ಮಾಡಿದ್ದೇವೆ. ಉದ್ಧವ್ ಠಾಕ್ರೆ ಅವರ ಬೆಂಗಾವಲು ಪಡೆಯ ಸುಮಾರು 16 ರಿಂದ 17 ವಾಹನಗಳಿಗೆ ತೆಂಗಿನಕಾಯಿಯಿಂದ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Uddhav Thackeray: ಉದ್ಧವ್ ಠಾಕ್ರೆ ಎನ್‌ಡಿಎಗೆ ವಾಪಸ್? ಇಂಡಿ ಒಕ್ಕೂಟದ ಸಭೆಗೆ ಹೋಗದ ಶಿವಸೇನೆ ನಾಯಕ!

Continue Reading
Advertisement
Viral Video
ವೈರಲ್ ನ್ಯೂಸ್34 mins ago

Viral Video: ಸಾಧುಗಳಂತೆ ನಟಿಸಿ ಜನರನ್ನು ದೋಚುತ್ತಿದ್ದ ಖದೀಮರು; ಸಾರ್ವಜನಿಕರಿಂದ ಗೂಸಾ! ವಿಡಿಯೋ ಇದೆ

Maharaja Trophy schedule
ಕ್ರೀಡೆ36 mins ago

Maharaja Trophy schedule: ಮಹಾರಾಜ ಟ್ರೋಫಿಯ ವೇಳಾಪಟ್ಟಿ ಪ್ರಕಟ; ಆಗಸ್ಟ್​ 15ರಿಂದ ಟೂರ್ನಿ ಆರಂಭ

Tungabhadra Dam
ಬೆಂಗಳೂರು44 mins ago

Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್

Hidden camera
ಬೆಂಗಳೂರು50 mins ago

Hidden Camera : ಲೇಡಿಸ್‌ ವಾಶ್‌ರೂಮ್‌ನ ಕಸದ ಬುಟ್ಟಿಯಲ್ಲಿತ್ತು ಮೊಬೈಲ್‌; ರೆಕಾರ್ಡ್‌ ಆಯ್ತು 2 ಗಂಟೆಗಳ ವಿಡಿಯೊ!

Tharun Sudhir - Sonal marriage vibe photos Out
ಸಿನಿಮಾ55 mins ago

Tharun Sudhir – Sonal: ತರುಣ್‌ ಸುಧೀರ್‌ -ಸೋನಲ್‌ ಕಲ್ಯಾಣ; ಹೇಗೆ ಕಾಣ್ತಿದ್ದಾಳೆ ನೋಡಿ ಮದುಮಗಳು!

Kieron Pollard
ಕ್ರೀಡೆ1 hour ago

Kieron Pollard: ರಶೀದ್ ಖಾನ್‌ ಓವರ್​ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಪೊಲಾರ್ಡ್‌; ವಿಡಿಯೊ ಇಲ್ಲಿದೆ

Serial Killer
ದೇಶ1 hour ago

Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ

Tharun Sudhir and Sonal Monteiro tie the knot
ಸ್ಯಾಂಡಲ್ ವುಡ್2 hours ago

Tharun Sudhir: ವೈವಾಹಿಕ ಜೀವನಕ್ಕೆ ಕಾಲಿಟ್ಟ ತರುಣ್‌ ಸುಧೀರ್‌- ಸೋನಲ್‌ ಮೊಂಥೆರೋ!

Tharun Sudhir mother malathi sudheer old video viral
ಸಿನಿಮಾ2 hours ago

Tharun Sudhir: ನನ್ನ ಮಗ ಸುಂದರ ಇಲ್ವಾ, ಒಳ್ಳೆಯ ಗುಣ ಇಲ್ವಾ ಎಂದು ಕಣ್ಣೀರಿಟ್ಟಿದ್ದ ತರುಣ್ ಸುಧೀರ್ ತಾಯಿ!

Gold Rate Today
ಚಿನ್ನದ ದರ2 hours ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ7 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌