ಆಟೋಮೊಬೈಲ್
New Arrival | Tata Nexon EV Max ಮಾರುಕಟ್ಟೆಗೆ
Tata nexon ev max ಎಂಬ ನೂತನ ವಿದ್ಯುತ್ ಚಾಲಿತ ಕಾರ್ ಟಾಟಾ ಸಂಸ್ಥೆಯಿಂದ ಮಾರುಕಟ್ಟೆಗೆ ಬಂದಿದೆ. ಈ ಗಾಡಿಯನ್ನು ಲಾಂಚ್ ಮಾಡುವ ಮೂಲಕ tata ಇ.ವಿ ವಿಭಾಗದಲ್ಲಿ ದೃಢ ಹೆಜ್ಜೆಯಿಟ್ಟಿದೆ.
ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ವಿಭಾಗದಲ್ಲಿ ʼಟಾಟಾ ನೆಕ್ಸಾನ್ ಇ.ವಿ. ಮ್ಯಾಕ್ಸ್ʼ ಹೆಸರಿನ ನೂತನ ಕಾರನ್ನು ಲಾಂಚ್ ಮಾಡಿದೆ. ಈ ಮೂಲಕ ಹೊಸ ಶೈಲಿಯ ಮತ್ತು ಅತ್ಯಾಧುನಿಕ ಕಾರು ಉತ್ಪಾದನೆಯಲ್ಲಿ ಟಾಟಾ ಮೋಟರ್ಸ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಈ ಹೊಸ ಕಾರು ಬುಧವಾರ ಮಾರುಕಟ್ಟೆಗೆ ಕಾಲಿಟ್ಟಿದೆ. ಎರಡು ಮಾದರಿಯ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ. ಬೇಸಿಕ್ ಮಾಡೆಲ್ ಕಾರಿನ ದರ ₹ 17.74 ಲಕ್ಷದಿಂದ ಆರಂಭಗೊಳ್ಳಲಿದೆ.
ದೇಸೀ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರಿನ ಕುರಿತು ವಾಹನ ಪ್ರಿಯರಿಗೆ ಅಪಾರ ನಿರೀಕ್ಷೆ ಇದೆ. ಈ ಹಿಂದೆ ಅವಿನ್ಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಟಾಟಾ ಮೋಟಾರ್ಸ್ ಘೋಷಣೆ ಮಾಡಿತ್ತು. ಈಗಾಗಲೇ ಲಾಂಚ್ ಆಗಿರುವ ಟಾಟಾ ನೆಕ್ಸಾನ್ ಇ.ವಿ. ಕಾರಿನ ಮುಂದಿನ ಆವೃತ್ತಿ ನೆಕ್ಸಾನ್ ಇ.ವಿ ಮ್ಯಾಕ್ಸ್ ಎಂದು ಹೇಳಲಾಗಿದೆ.
ನೆಕ್ಸಾನ್ ಇ.ವಿ. ಮ್ಯಾಕ್ಸ್ | ಚಾರ್ಜಿಂಗ್ ಆಪ್ಷನ್ | ಎಕ್ಸ್-ಶೋರೂಂ ದರ |
XZ+ | 3.3kWh | ₹17,74,000 |
XZ+ | 7.2kWh AC fast charger | ₹18,24,000 |
XZ+ LUX | 3.3kWh | ₹18,74,000 |
XZ+ LUX | 7.2kWh AC fast charger | ₹19,24,000 |
ಏನು ಈ ವಾಹನದ ವಿಶೇಷತೆ?
Battery: ಈ ವಾಹನದ ಬ್ಯಾಟರಿ ಸಾಮರ್ಥ್ಯವನ್ನು ಈ ಹಿಂದೆ ಚಲಾವಣೆಯಲ್ಲಿದ್ದ ನೆಕ್ಸಾನ್ ಇ.ವಿ ಕಾರಿಗಿಂತ 30% ಅಧಿಕಗೊಳಿಸಲಾಗಿದೆ. ಆದರೆ, ಬ್ಯಾಟರಿಯ ಗಾತ್ರ ಹೆಚ್ಚಿರಬಹುದು. ಇದರಿಂದ ವಾಹನದ ಬೂಟ್ ಕೆಪ್ಯಾಸಿಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಇದ್ದ 350 ಲೀಟರ್ ಟ್ಯಾಂಕ್ ಈ ವಾಹನದಲ್ಲೂ ಇದೆ.
ಬ್ಯಾಟರಿ ಚಾರ್ಜ್ ಮಾಡಲು 3.3 kWhನ ಸ್ಟಾಂಡರ್ಡ್ ಚಾರ್ಜಿಂಗ್ ಯುನಿಟ್ ದೊರಕಲಿದೆ. ಇನ್ನೂ ಹೆಚ್ಚಿನ ಯುನಿಟ್ ಬೇಕಾದವರು ಅಧಿಕ ಮೊತ್ತ ನೀಡಿ 7.2 kWhನ ಯುನಿಟ್ ಖರೀದಿಸಬಹುದು. ಸುಮಾರು 6 ಗಂಟೆಗಳಲ್ಲಿ ಕಾರ್‌ನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು.
ಯಾವ ವೇಗದಲ್ಲಿ ಕಾರು ಚಲಾಯಿಸಬಹುದು?
ಸಾಮಾನ್ಯವಾಗಿ ವಿದ್ಯುತ್ ಚಾಲಿತ ಕಾರುಗಳ ಪವರ್ ಇಂಧನವು ಸಾಮನ್ಯ ಕಾರುಗಳಿಗಿಂತ ಕಡಿಮೆಯಿರುತ್ತದೆ. ಈ ಕಾರಣದಿಂದ ಜನರ ಗಮನ ಸೆಳೆಯುವಲ್ಲಿ ಎಲೆಕ್ಟ್ರಿಕ್ ಗಾಡಿಗಳು ವಿಫಲವಾಗುತ್ತವೆ. ಈ ಕಾರಿನ ಪವರ್, ಟಾರ್ಕ್ ಹಾಗೂ ಟಾಪ್ ಸ್ಪೀಡ್ ಆಕರ್ಷಮಯವಾಗಿದೆ.
ಪವರ್: 143hp
ಟಾರ್ಕ್: 250nm
ಟಾಪ್ ಸ್ಪೀಡ್: 140kmph
ಗಾಡಿಯನ್ನು ನಿಲ್ಲಿಸಲು ಈ ಪವರ್‌ಗೆ ತಕ್ಕಂತೆ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ.
ಕಾರಿನ ರೇಂಜ್ ಏನು?
ಕಾರನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಎಷ್ಟು ದೂರ ಸಾಗಬಹುದು ಎಂಬುದು ರೇಂಜ್. ನೆಕ್ಸಾನ್ ಇ.ವಿ. ಮ್ಯಾಕ್ಸ್ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಐಡಿಯಲ್ ವಾತಾವರಣದಲ್ಲಿ ಸುಮಾರು 400 ಕಿ.ಮೀ ಸಾಗಬಹುದು. ಹಾಗೂ ವಾಸ್ತವಿಕ ಸನ್ನಿವೇಶದಲ್ಲಿ ಸುಮಾರು 300 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.
ಉಳಿದ ಫೀಚರ್ ಏನೇನು?
ಸುಖವಾಗಿ ಕೂರಲು ಅನುಕೂಲವಾಗುವಂತಹ ವೆಂಟಿಲೇಟೆಡ್ ಲೆದರ್ ಸೀಟುಗಳು, ಏರ್ ಪ್ಯೂರಿಫೈಯರ್, ಹರ್ಮನ್ ಡಿಸ್ಪ್‌ಲೇ ಹಾಗೂ ಸೌಂಡ್ ಸಿಸ್ಟಮ್, ಫೋನ್ ಚಾರ್ಜ್ ಮಾಡಲು ವೈಯರ್‌ಲೆಸ್ ವ್ಯವಸ್ಥೆ ಇತರ ಕೆಲವು ಆಕರ್ಷಕ ಫೀಚರ್‌ಗಳು.
ಆಟೋಮೊಬೈಲ್
Mansoon 2023 : ಮಳೆಗಾಲದ ಸೇಫ್ ಜರ್ನಿಗೆ ನಿಮ್ಮ ವಾಹನಗಳನ್ನು ಈ ರೀತಿ ಮೇಂಟೇನ್ ಮಾಡಿ
ಮಳೆಗಾಲದಲ್ಲಿ ಕಾರನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದು ವಿಷಯವಾಗಿದೆ. ಅಸಮರ್ಪಕ ನಿರ್ವಹಣೆಯಿಂದ ವಾಹನದ ಹಾಗೂ ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಕಾರು ಸರಿಯಾಗಿ ಕೆಲಸ ಮಾಡಲು ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಲೇಬೇಕು.
ಬೆಂಗಳೂರು: ಮಾನ್ಸೂನ್ ಶೀಘ್ರದಲ್ಲೇ ಭಾರತದಾದ್ಯಂತ ಆವರಿಸಲಿದೆ. ಬಳಿಕ ಎಲ್ಲಿ ನೋಡಿದರೂ ಮುಂಗಾರು ಮಳೆಯ ಹನಿಯ ಲೀಲೆ ಕಾಣಲಿದೆ. ನೀವೇನಾದರೂ ಕಾರು ಅಥವಾ ಇನ್ಯಾವುದಾದರೂ ವಾಹನದ ಮಾಲೀಕ ಅಥವಾ ಚಾಲಕರಾಗಿದ್ದರೆ ಮಳೆಗಾಲದಲ್ಲಿ ಕಾರಿನ ನಿರ್ವಹಣೆ ಹೇಗೆ ಎಂಬ ಚಿಂತೆ ಶುರುವಾಗಿರುತ್ತದೆ. ದೂರದ ಪ್ರಯಾಣವೇ ಆಗಲಿ ಸಿಟಿಯೊಳಗಿನ ಜರ್ನಿಯೇ ಆಗಿರಲಿ ಮಳೆಗಾಲದಲ್ಲಿ ವಾಹನ ಓಡಿಸುವಾಗ ಅಪಾಯ ಹೆಚ್ಚು. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಕೆಲವೊಂದು ಕನಿಷ್ಠ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದ್ದು ಮಳೆಗಾಲಕ್ಕೆ ಮೊದಲು ವಾಹನವನ್ನು ಪೂರ್ತಿಯಾಗಿ ಸರ್ವಿಸ್ ಮಾಡಿಸುವುದು. ಹಾಗಾದರೆ ಮಾನ್ಸೂನ್ ಪ್ರಾರಂಭವಾಗುವ ಮೊದಲು ನೀವು ಪರಿಶೀಲಿಸಬೇಕಾದ ಅಥವಾ ಸರಿಪಡಿಸಬೇಕಾದ ಕೆಲವು ಪ್ರಮುಖ ಸಂಗತಿಗಳು ಈ ಕೆಳಗಿನಂತಿವೆ.
ಟೈರ್ಗಳನ್ನು ಪರೀಕ್ಷಿಸಿ
ಟೈರ್ಗಳ ಬಗ್ಗೆ ಕಾರಿನ ಮಾಲೀಕರು ನಿರ್ಲಕ್ಷ್ಯ ತಾಳುತ್ತಾರೆ. ಆದರೂ ಅವು ಬಹಳ ಮುಖ್ಯ ಮತ್ತು ಕಾರು ಚಾಲನೆ ಮಾಡುವ ವಿಧಾನದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಮಳೆಗಾಲದಲ್ಲಿ ಸವಾರಿ ಮಾಡುವಾಗ ಸೂಕ್ತ ಪ್ರಮಾಣದಲ್ಲಿ ಥ್ರೆಡ್ ಹೊಂದಿರುವ ಟೈರ್ಗಳು ಇರಲೇಬೇಕು. ಒಣಗಿರುವ ರಸ್ತೆಗಳಿಗೆ ಹೋಲಿಸಿದರೆ ಒದ್ದೆಯಾದ ರಸ್ತೆಗಳಲ್ಲಿ ಜಾರುವಿಕೆ ಜಾಸ್ತಿ. ಸರಿಯಾದ ಥ್ರೆಡ್ ಇಲ್ಲದಿದ್ದರೆ ಬ್ರೇಕ್ ಹಿಡಿಯವ ವೇಳೆ ಜೋರಾಗಿ ತಿರುಗಿಸಿದಾಗ ಕಾರು ಜಾರಿಕೊಂಡು ಹೋಗಿ ಅಪಘಾತಕ್ಕೆ ಒಳಗಾಗಬಹುದು. ಉತ್ತಮ ಥ್ರೆಡ್ ಇದ್ದರೆ ರಸ್ತೆಯ ಮೇಲೆ ನಿಮ್ಮ ಕಾರಿನ ಹಿಡಿತ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಟೈರ್ಗಳಲ್ಲಿ ಥ್ರೆಡ್ವೇರ್ ಇಂಡಿಕೇಟರ್ ಇರುತ್ತದೆ. ಥ್ರೆಡ್ಗಳ ನಡುವೆ ಒಂದು ಸಣ್ಣ ರಬ್ಬರ್ ಬಾರ್ ಇಟ್ಟಿರುತ್ತಾರೆ . ಟೈರ್ ರಬ್ಬರ್ ಸವೆದು ಹೋದ ಬಳಿಕ ಇಂಡಿಕೇಟರ್ ಕೂಡ ತೆಳುವಾಗುತ್ತದೆ. ಇದು ಟೈರ್ಗಳನ್ನು ಬದಲಾಯಿಸುವ ಸಮಯ. ಹೀಗಾಗಿ ಮಳೆಗಾಲಕ್ಕೆ ಮೊದಲು ಸವೆದ ಟೈರ್ಗಳನ್ನು ಬದಲಾಯಿಸಲೇಬೇಕು.
ಬ್ಯಾಟರಿ ಚಾರ್ಜ್ ಸರಿಯಾಗಿದೆಯಾ ಚೆಕ್ ಮಾಡಿ
ಸರಿಯಾಗಿ ಕೆಲಸ ಮಾಡುವ ಬ್ಯಾಟರಿಯನ್ನು ಹೊಂದಿರುವುದು ವರ್ಷದುದ್ದಕ್ಕೂ ಅಗತ್ಯವೇ ಆಗಿರುತ್ತದೆ. ಆದರೂ ಇದು ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಆದ್ಯತೆ ಪಡೆಯುತ್ತದೆ. ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಚಾಲಕನ ಗೋಚರತೆ ಕಡಿಮೆಯಾಗುತ್ತದೆ. ಹೀಗಾಗಿ ಇತರ ಸಮಯಕ್ಕಿಂಗ ಹೆಚ್ಚಾಗಿ ವೈಪರ್ ಹಾಗೂ ಹೆಡ್ಲೈಟ್ ಸೇರಿದಂತೆ ಇತರ ಲೈಟ್ಗಳನ್ನು ಬಳಬೇಕಾಗುತ್ತದೆ. ಇದು ಬ್ಯಾಟರಿಯ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ಯಾಟರಿ ಚಾರ್ಜಿಂಗ್ ಸಾಮರ್ಥ್ಯ ಹಾಗೂ ಬಾಳಿಕೆಯನ್ನು ಪರೀಕ್ಷೆ ಮಾಡಿಕೊಳ್ಳಲೇಬೇಕು. ಸರಿಯಾಗಿರದಿದ್ದರೆ ಕಡ್ಡಾಯವಾಗಿ ಬದಲಾಯಿಸಬೇಕು.
ವೈರಿಂಗ್ಗಳ ಪರೀಕ್ಷೆ ಮಾಡಿಸಿಕೊಳ್ಳಿ
ಮಳೆಗಾದಲ್ಲಿ ನಿಮ್ಮ ವಾಹದ ವೈರಿಂಗ್ಗಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅಸಮರ್ಪಕ ವೈರಿಂಗ್ ಅಥವಾ ಇನ್ಸುಲೇಷನ್ ಟೇಪ್ ಜಾರಿ ಹೋಗಿರುವ ಸಾಧ್ಯತೆಗಳು ಇದ್ದರೆ ತಕ್ಷಣ ರಿಪೇರಿ ಮಾಡಿಸಬೇಕು. ವೈರ್ಗಳ ತೆರೆದ ಭಾಗವು ನೀರಿನ ಸಂಪರ್ಕಕ್ಕೆ ಬಂದಾಗ ಶಾರ್ಟ್ ಸರ್ಕೀಟ್, ಶಾಕ್ ಸೇರಿದಂತೆ ನಾನಾ ರೀತಿಯ ಅಪಾಯಗಳು ಉಂಟಾಗಬಹುದು. ಆದ್ದರಿಂದ ಎದ್ದು ಕಾಣುತ್ತಿರುವ ಕೇಬಲ್ಗಳನ್ನು ರಿಪೇರಿ ಮಾಡಿಸಬೇಕು. ಆಫ್ಟರ್ ಮಾರ್ಕೆಟ್ ಫಿಟ್ಮೆಂಟ್ಗಳಿದ್ದರೆ ವೈರ್ಗಳು ಹೊರಗೆ ಕಾಣಿಸದಂತೆ ಸರಿಪಡಿಸಿಕೊಳ್ಳಬೇಕು.
ಲೈಟ್ಗಳ ರಿಪೇರಿ ಕಡ್ಡಾಯ ಮಾಡಿಸಿ
ಹೆಡ್ ಲೈಟ್ ಗಳು, ಟೈಲ್ಲೈಟ್ಗಳು ಫಾಗ್ ಲೈಟ್ಗಳು ಮತ್ತು ಟರ್ನ್ ಇಂಡಿಕೇಟರ್ಗಳು ಸೇರಿದಂತೆ ನಿಮ್ಮ ವಾಹನದ ಎಲ್ಲ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಮಳೆಗಾಲಕ್ಕೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಹವಾಮನಕ್ಕೆ ಸಂಬಂಧಿಸದ ವಿಚಾರವಾಗಿದ್ದರೂ ಮಳೆಗಾಲದಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರಿ ಮಳೆ ಮತ್ತು ಮೋಡ ಕವಿದ ವಾತಾವರಣವು ಗೋಚರತೆಗೆ ತೊಂದರೆ ಮಾಡಿದರೆ, ಇತರ ವಾಹನಗಳ ಸವಾರರಿಗೆ ನಿಮ್ಮ ಇರುವಿಕ ಕಾಣಿಸಲು ದೀಪಗಳು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ : Coastal Karnataka travel: ಮಳೆ ಬಂದಾಗ ಈ ಕರಾವಳಿ ತೀರದ ತಾಣಗಳಿಗೆ ನೀವು ಒಂದು ಟ್ರಿಪ್ ಹೋಗ್ಲೇಬೇಕು!
ಮಳೆಗಾಲಕ್ಕೆ ಮೊದಲು ಎಲ್ಲ ಲೈಟ್ಗಳನ್ನು ಒಟ್ಟಿಗೆ ಆನ್ ಮಾಡಿ. ಹೆಡ್ಲೈಟ್ ಸೇರಿದಂತೆ ಯಾವುದಾದರೂ ಲೈಟ್ಗಳು ಮಸುಕಾಗಿದೆ ಎಂದು ಅನಿಸಿದರೆ ಬಲ್ಟ್ ಅಥವಾ ಲೈಟ್ ಅನ್ನೇ ಬದಲಿಸಿ. ಲೈಟ್ಗಳನ್ನು ಏಕಕಾಲಕ್ಕೆ ಚಾಲನೆ ಮಾಡುವ ಮೂಲಕ ಬ್ಯಾಟರಿ ಲೈಫ್ ಅನ್ನೂ ಪರೀಕ್ಷಿಸಬಹುದು. ಕೆಲವೊಂದು ಬಾರಿ ಲೈಟ್ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಳವಡಿಕೆ ವೇಳೆ ಬಿರುಕ ಉಂಟಾಗಿದ್ದರೆ ಅಥವಾ ಕ್ಯಾಪ್ ಸರಿಯಾಗಿ ಕೂತಿರದಿದ್ದರೆ ಇಂಥ ಸಮಸ್ಯೆ ಇರುತ್ತದೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಇವೆಲ್ಲವೂ ರಿಪೇರಿ ಆಗಲೇಬೇಕು.
ಬ್ರೇಕ್ ಪ್ಯಾಡ್ಗಳು ಬದಲಿಸಿ
ಒದ್ದೆಯಾದ ರಸ್ತೆಗಳು ಕಾರಿನ ಬ್ರೇಕಿಂಗ್ ಅಂತರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಬ್ರೇಕ್ಗಳು ಎಲ್ಲ ಋತುವಿನಲ್ಲಿಯೂ ಚೆನ್ನಾಗಿರಬೇಕು ಎಂಬುದು ನಿಯಮ. ಆದರೆ, ಮಳೆಗಾದಲ್ಲಿ ಇದರ ಅಗತ್ಯ ಇನ್ನಷ್ಟು ಹೆಚ್ಚು. ಬ್ರೇಕ್ ಪ್ಯಾಡ್ಗಳು ಅಥವಾ ಶೂಗಳು ಸವೆದು ಹೋಗಿದ್ದರೆ ನಿರೀಕ್ಷಿತ ಅಂತರದಲ್ಲಿ ವಾಹನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದೇ ರೀತಿ ಚಲನೆ ಏರುಪೇರಾಗಿ ಸ್ಕಿಡ್ ಆಗುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಮಳೆಗಾಲಕ್ಕೆ ಮೊದಲು ಬ್ರೇಕ್ ಚೆನ್ನಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಖಾಲಿ ರಸ್ತೆಯಲ್ಲಿ ಒಂದು ಬಾರಿ ವೇಗವಾಗಿ ಕಾರು ಚಲಾಯಿಸಿ ಜೋರಾಗಿ ಬ್ರೇಕ್ ಒತ್ತಿ ನೋಡಿ. ಬ್ರೇಕ್ ಪೆಡಲ್ ಒಳಕ್ಕೆ ಹೋಗುತ್ತಿದೆ ಎಂದಾದರೆ ಸಮಸ್ಯೆ ಇದೆ ಎಂದರ್ಥ. ನಿಮ್ಮ ವಾಹನದ ಬ್ರೇಕಿಂಗ್ ಸಿಸ್ಟಮ್ ಅನ್ನು ವೃತ್ತಿಪರರ ಬಳಿ ಮಳೆಗಾಲಕ್ಕೆ ಮೊದಲು ಪರಿಶೀಲಿಸಿ. ಬೇಗ ಹಾಳಾದ ಭಾಗಗಳನ್ನು ಬದಲಿಸಿ.
ವೈಪರ್ಗಳು, ವಾಷರ್ಗಳು ಸರಿಯಾಗಿರಲಿ
ಮಾನ್ಸೂನ್ ಬರುವ ಮೊದಲ ವಾಹನದ ವೈಪರ್ಗಳು ಮತ್ತು ವಾಷರ್ ವ್ಯವಸ್ಥೆಯನ್ನು ಪರೀಕ್ಷಿಸಬೇಕು. ಇವೆರಡನ್ನೂ ಮಳೆಗಾಲದಲ್ಲಿ ಆಗಾಗ ಬದಲಿಸಬೇಕಾಗುತ್ತದೆ. ಕನ್ನಡಿಗೆ ಸ್ವಲ್ಪ ನೀರು ಹಾಕಿ ವೈಪರ್ ಚಾಲನೆ ಮಾಡಿ ನೋಡಿ. ವಿಂಡ್ ಸ್ಕ್ರೀನ್ ಮೇಲೆ ಯಾವುದೇ ಕೆಸರು ಅಥವಾ ನೀರಿನ ಸಾಲುಗಳನ್ನು ಒರೆಸುತ್ತಿಲ್ಲ ಎಂದಾದರೆ ವೈಪರ್ ಬ್ಲೇಡ್ ಕೆಟ್ಟು ಹೋಗಿದೆ ಎಂದರ್ಥ. ತಕ್ಷಣವೇ ಬದಲಿಸಿ. ಬೇಸಿಗೆಯ ಬಿಸಿಗೆ ವೈಪರ್ ಬ್ಲೇಡ್ನ ರಬ್ಬರ್ನಲ್ಲಿ ಬಿರುಕು ಬಿಟ್ಟಿರುತ್ತದೆ. ಇಂಥ ಬ್ಲೇಡ್ಗಳು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.
ವಾಷರ್ಗಳು ವಿಂಡ್ಶೀಲ್ಡ್ ಗೆ ನೀರನ್ನು ಸರಿಯಾಗಿ ಸಿಂಪಡಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ. ಈ ವಾಷರ್ಗಳ ತೂತಿನಲ್ಲಿ ಕೊಳೆ ನಿಂತು ಕಟ್ಟಿಕೊಂಡಿರುವ ಸಾಧ್ಯತೆಗಳಿರುತ್ತದೆ. ಹಾಗಿದ್ದರೆ ನೀರು ಸರಿಯಾಗಿ ಪಂಪ್ ಆಗುವುದಿಲ್ಲ. ಮಳೆಗಾಲಕ್ಕೆ ಮೊದಲು ಇದನ್ನೂ ಬದಲಿಸಬೇಕು ಹಾಗೂ ವಾಷರ್ನ ನೀರಿನ ಮಟ್ಟವೂ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಿ..
ವಾಹನದಲ್ಲಿ ಸೋರಿಕೆ ಇದೆಯಾ ಪರೀಕ್ಷಿಸಿ
ಸನ್ರೂಫ್ ಗಳು, ಕಿಟಕಿಗಳು ಅಥವಾ ವಿಂಡ್ಶೀಲ್ಡ್ನಂತಹ ಗಾಜಿನ ಭಾಗಗಳನ್ನು ವಾಹನಗಳಿಗೆ ಅಳವಡಿಸಲು ಸುತ್ತಲೂ ರಬ್ಬರ್ಗಳನ್ನು ಹಾಕಿರುತ್ತಾರೆ. ಬೇಸಿಗೆಯ ಬಿಸಿಗೆ ಇದು ಒಡೆದು ಹೋಗಿ ಮಳೆಗಾಲದಲ್ಲಿ ಸೋರಿಕೆಯಾಗಲು ಪ್ರಾರಂಭಿಸುವುದು ಅಸಾಮಾನ್ಯವೇನಲ್ಲ. ಹೀಗಾಗಿ ಮಳೆಗಾಲಕ್ಕೆ ಮೊದಲು ಸರ್ವಿಸ್ ಮಾಡುವಾಗ ಈ ಭಾಗಗಳ ಬಗ್ಗೆ ಗಮನ ಇಡಿ.
ವಾಹನದ ಸುತ್ತಲೂ ಇರುವ ಡ್ರೈನೇಜ್ ರಂಧ್ರಗಳು ಮುಚ್ಚಿಹೋಗಿರಬಹುದು. ಈ ಜಾಗದಲ್ಲಿ ನೀರು ಸಂಗ್ರಹವಾದರೆ ತುಕ್ಕು ಹಿಡಿಯಲು ಕಾರಣವಾಗಬಹುದು. ಸರ್ವಿಸ್ ಮಾಡಿಸುವ ಸಮಯದಲ್ಲಿ ಸೋರಿಕೆಯ ಮೂಲವನ್ನು ಆದಷ್ಟು ಬೇಗ ಗುರುತಿಸಿ ಅವುಗಳನ್ನು ಸರಿಪಡಿಸುವುದು ಒಳ್ಳೆಯದು.
ಕಿತ್ತು ಹೋಗಿದ್ದರೆ ಪೇಂಟಿಂಗ್ ಮಾಡಿ
ವಾಹನದ ಮೇಲೆ ನಿರಂತರವಾಗಿ ತೇವಾಂಶ ನಿಂತಿದ್ದರೆ ತುಕ್ಕು ಹಿಡಿಯಲು ಕಾರಣವಾಗುತ್ತದೆ. ಕಾರಿನ ಸುತ್ತಲಿನ ರಬ್ಬರ್ ಸೀಲ್ಗಲ್ಲಿ ಉಂಟಾಗುವ ಸೋರಿಕೆ ತುಕ್ಕು ಹಿಡಿಯುವ ಮೂಲ. ಪೇಂಟ್ ಕೋಟ್ ಹಾನಿಗೊಳಗಾದ ಸ್ಥಳಗಳಲ್ಲೂ ತುಕ್ಕು ಹಿಡಿಯಬಹುದು. ಇಂಥ ಜಾಗಗಳು ಇದ್ದರೆ ಮಳೆಗಾಲಕ್ಕೆ ಮೊದಲು ಬೇಗ ದುರಸ್ತಿ ಮಾಡುವುದು ಉತ್ತಮ. ನಿಮ್ಮ ಕಾರಿನ ಕೆಳಭಾಗವನ್ನು ಸ್ವಚ್ಛವಾಗಿ ಮತ್ತು ರಸ್ತೆಯ ಧೂಳು ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಏಕೆಂದರೆ ಇವು ಚಾಸಿಸ್ ಸವೆತಕ್ಕೆ ಕಾರಣವಾಗಬಹುದು. ಕಾರು ತೊಳೆದ ನಂತ ಪಾಲಿಶ್ ಹಾಕಬೇಕು. ಇದು ನಿಮ್ಮ ಕಾರನ್ನು ಹೊಳೆಯುವ ಮತ್ತು ಹೊಸದಾಗಿ ಕಾಣುವಂತೆ ಮಾಡುತ್ತದೆ ಹಾಗೂ ತುಕ್ಕು ಹಿಡಿಯಂತೆ ನೋಡಿಕೊಳ್ಳುತ್ತದೆ.
ನಿಯಮಿತ ಕಡ್ಡಾಯ ಸರ್ವಿಸ್ ಮಾಡಿಸಿ
ನಿಮ್ಮ ಕಾರನ್ನು ಮಳೆಗಾಲಕ್ಕೆ ಮೊದಲು ಕಡ್ಡಾಯ ಸರ್ವಿಸ್ ಮಾಡಿಸಿ. ಮೇಲೆ ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಸರ್ವಿಸ್ ಸ್ಟೇಷನ್ನಲ್ಲಿ ಪತ್ತೆ ಮಾಡಬಹುದು. ನಿಮ್ಮ ಕಣ್ಣಿಗೆ ಬೀಳದ ಅಥವಾ ಗುರುತಿಸಲ ಸಾಧ್ಯವಾಗದ ಸಮಸ್ಯೆಗಳು ಇಲ್ಲಿ ಗೋಚರವಾಗುತ್ತವೆ. ವೃತ್ತಿಪರವಾಗಿ ಕಾರನ್ನು ಮಳೆಗಾಲಕ್ಕೆ ಸಿದ್ಧಪಡಿಸಿಕೊಳ್ಳಬಹುದು. ಅಂತಿಮವಾಗಿ ಉತ್ತಮ ಗುಣಮಟ್ಟದ ಪಾಲಿಶ್ ಹಾಗೂ ಅಂಡರ್ಕೋಟ್ಗಳೂ ಸಿಗಬಹುದು.
ಈ ಎಲ್ಲ ಸ್ಪೇರ್ಗಳನ್ನು ಜತೆಗಿಟ್ಟುಕೊಳ್ಳಿ
ಮಾನ್ಸೂನ್ ಸಂದರ್ಭದಲ್ಲಿ ಜೋರು ಮಳೆ ಏಕಾಏಕಿ ಬಿಸಿಲು ಇಂಥ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಮಳೆಗಾಲದ ಪ್ರಯಾಣದ ವೇಳೆ ಕೆಲವೊಂದು ಸ್ಪೇರ್ ಪಾರ್ಟ್ಗಳನ್ನು ಜತೆಗಿಟ್ಟುಕೊಳ್ಳುವುದು ಉತ್ತಮ. ವೈಪರ್ ಬ್ಲೇಡ್ಗಳು ಮತ್ತು ಫ್ಯೂಸ್ನಂಥ ಭಾಗಗಳು ಇಟ್ಟುಕೊಳ್ಳಿ. ರಸ್ತೆ ಬದಿ ನಿಲ್ಲಿಸುವಾಗ ರಿಫ್ಲೆಕ್ಟರ್ಗಳನ್ನು ಇಡಲು ಅದನ್ನೂ ತೆಗೆದುಕೊಂಡು ಹೋಗಿ. ವಾಹನಕ್ಕೆ ಸಂಬಂಧಿಸಿದ್ದು ಅಲ್ಲವಾದರೂ ಬಟ್ಟೆಗಳು, ಹೆಚ್ಚುವರಿ ಶೂಗಳು, ಛತ್ರಿ / ರೇನ್ ಕೋಟ್ ಮತ್ತು ಟವೆಲ್ಗಳನ್ನು ಜತೆಗಿಟ್ಟುಕೊಳ್ಳಿ.
ಆಟೋಮೊಬೈಲ್
Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಎಂಟ್ರಿ ಲೆವೆಲ್ ಜಿಮ್ನಿ (Jimny) ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ .
ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.
ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.
ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್
ಜಿಮ್ನಿ ಎಸ್ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್ಪಿ ಪವರ್, ಹಾಗೂ 134 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ನ ಮ್ಯಾನುಯಲ್ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್ ಕೊಟ್ಟರೆ, ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.
ಜಿಮ್ನಿಯ ಆಫ್ರೋಡ್ಗೆ ಸಂಬಂಧಿಸಿ ಹೇಳುವುದಾದರೆ ಆಲ್ಗ್ರಿಪ್ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್ನೊಂದಿಗೆ ನೀಡಲಾಗಿದೆ. ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು
ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್ಗಳನ್ನು ಎಲ್ಲ ವೇರಿಯೆಂಟ್ಗಳಲ್ಲಿ ನೀಡಲಾಗಿದೆ.
ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.
ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್ಬೋರ್ಡ್ ಮೌಂಟೆಡ್ ಗ್ರಾಬ್ ಹ್ಯಾಂಡಲ್ಗಳಿವೆ. ಮಾರುತಿ ಸ್ವಿಫ್ಟ್ನಲ್ಲಿರುವ ಕೆಲವೊಂದು ಫೀಚರ್ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.
ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ
ಮಾರುತಿ ಜಿಮ್ನಿ 5 ಓಡರ್ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್ಬೇಸ್ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್ಗಳು , ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್ಗಳನ್ನು ಬಳಸಲಾಗಿದೆ.
ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ
ಜಿಮ್ನಿ ಭಾರತದಲ್ಲಿ ಆಫ್-ರೋಡರ್ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.
ಆಟೋಮೊಬೈಲ್
Hero MotoCorp 2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ, ರೇಟ್ ಕೊಂಚ ಏರಿಕೆ!
2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಸೆಲ್ಫ್ ಸ್ಟಾರ್ಟ್ ಮತ್ತು ಐ3ಎಸ್ ವೇರಿಯೆಂಟ್ ಹಾಗೂ ಟ್ಯೂಬ್ ಲೆಸ್ ಟೈರ್ನೊಂದಿಗೆ ರಸ್ತೆಗಿಳಿದಿದೆ.
ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್ ಎಚ್ಎಫ್ ಡೀಲಕ್ಸ್ನ 2023ನೇ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.
2023ರ ಎಚ್ಎಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್ ಸಿಗಲಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಹೀರೋ ಎಚ್ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್ಗೆ ಸಿದ್ಧಗೊಂಡಿದೆ. 4 ಸ್ಪೀಡ್ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.
ವೇರಿಯೆಂಟ್ಗಳು ಯಾವುವು?
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.
ಆಟೋಮೊಬೈಲ್
EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
EV Battery Plant: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಅಗರತಾಸ್, ಗುಜರಾತ್‌ನಲ್ಲಿ 13000 ಕೋಟಿ ರೂ. ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಜತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್‌ಗಿಂತ ಇಂಗ್ಲೆಂಡ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್
ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.
ಆಟೋಮೊಬೈಲ್‌ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ13 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema23 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ದೇಶ18 hours ago
ಬದುಕುಳಿಯಲಿಲ್ಲ ಬೋರ್ವೆಲ್ಗೆ ಬಿದ್ದ ಕಂದಮ್ಮ; ಸಾವಿನ ವಿರುದ್ಧ 50 ಗಂಟೆ ಹೋರಾಟದಲ್ಲಿ ಗೆದ್ದಿದ್ದು ವಿಧಿ
-
ದೇಶ21 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ10 hours ago
Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್ ವರ್ಲ್ಡ್ʼ