Adventure tour: ಲಡಾಕ್‌ನಲ್ಲಿ ಪ್ರವಾಸಿಗರಿಗೆ ಝಂಸ್ಕಾರ್‌ ಸಾಹಸ ಕ್ರೀಡಾ ಉತ್ಸವ! - Vistara News

ಪ್ರವಾಸ

Adventure tour: ಲಡಾಕ್‌ನಲ್ಲಿ ಪ್ರವಾಸಿಗರಿಗೆ ಝಂಸ್ಕಾರ್‌ ಸಾಹಸ ಕ್ರೀಡಾ ಉತ್ಸವ!

ಹಿಮಪರ್ವತಗಳಲ್ಲಿ ಚಾರಣ, ಮೈನಡುಗಿಸುವ ಚಳಿಯನ್ನು ಮೆಟ್ಟಿ ನಿಲ್ಲುವ ಕಷ್ಟಸುಖಗಳು, ನೀರ್ಗಲ್ಲ ನದಿಯ ಮೇಲಿನ ನಡಿಗೆ, ಇಲ್ಲಿನ ಬೌದ್ಧವಿಹಾರಗಳ ಶಾಂತಿಯುತ ವಾತಾವರಣ, ದಿನಗಟ್ಟಲೆ ಬೈಕ್‌ ಏರಿ ಬಿಸಿಲು ಚಳಿಯೆನ್ನದೆ ಪ್ರಯಾಣಿಸುವ ನಮ್ಮನ್ನೇ ನಾವು ಸವಾಲಿಗೆ ಒಡ್ಡಿಕೊಳ್ಳುವಾಗಿನ ಅನುಭವ ಎಂದಿಗೂ ಬೇರೆ ಯಾವುದರಿಂದಲೂ ದಕ್ಕದು.

VISTARANEWS.COM


on

adventure tour in ladakh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಡಾಕ್ ಎಂದರೆ ಹಾಗೆಯೇ! ಸಾಹಸಪ್ರಿಯ ಪ್ರವಾಸಿಗರ ಮೈಯಲ್ಲಿ ರೋಮಾಂಚನ. ಕಣ್ಣೆದುರಿಗೆ ಭವ್ಯ ಹಿಮಾಲಯವನ್ನೂ ನೋಡುತ್ತಾ, ನಮಗೇ ನಾವು ಸವಾಲು ಹಾಕುವಂತೆ, ಎಲ್ಲ ಮರೆತು ಬದುಕೆಂದರೆ ಇದೇ ನಿಜ ಎಂಬಷ್ಟು ಆತ್ಮತೃಪ್ತಿ ಕೊಡುವ ಘಳಿಗೆಗಳು ಇಂತಹ ನಾಡಿನಲ್ಲಿ ಬೊಗಸೆ ತುಂಬಾ ಸಿಗುತ್ತದೆ. ಅದಕ್ಕಾಗಿಯೇ, ಪ್ರವಾಸವನ್ನು ನಿಜಾರ್ಥದಲ್ಲಿ ಸವಿಯುವ ಮಂದಿಗೆ ಲಡಾಕ್‌ ಎಂದರೆ ಸ್ವರ್ಗ.

ಹಿಮಪರ್ವತಗಳಲ್ಲಿ ಚಾರಣ, ಮೈನಡುಗಿಸುವ ಚಳಿಯನ್ನು ಮೆಟ್ಟಿ ನಿಲ್ಲುವ ಕಷ್ಟಸುಖಗಳು, ನೀರ್ಗಲ್ಲ ನದಿಯ ಮೇಲಿನ ನಡಿಗೆ, ಇಲ್ಲಿನ ಬೌದ್ಧವಿಹಾರಗಳ ಶಾಂತಿಯುತ ವಾತಾವರಣ, ದಿನಗಟ್ಟಲೆ ಬೈಕ್‌ ಏರಿ ಬಿಸಿಲು ಚಳಿಯೆನ್ನದೆ ಪ್ರಯಾಣಿಸುವ ನಮ್ಮನ್ನೇ ನಾವು ಸವಾಲಿಗೆ ಒಡ್ಡಿಕೊಳ್ಳುವಾಗಿನ ಅನುಭವ ಎಂದಿಗೂ ಬೇರೆ ಯಾವುದರಿಂದಲೂ ದಕ್ಕದು ಎಂದು ಈ ಅನುಭವದ ರುಚಿ ಕಂಡವರಷ್ಟೇ ಬಲ್ಲರು. ಲಡಾಕ್ ಎಂಬ ಶೀತ ಮರುಭೂಮಿ, ಹೀಗೆ ಬದುಕಿಗೆ ಬೇಕಾಗುವ ಎಲ್ಲ ಅನುಭವಗಳನ್ನೂ ಧಾರೆಯೆರೆದು ಕೊಡುತ್ತದೆ. ಇಂಥಾ ಲಡಾಕ್‌ನಲ್ಲಿ ಝಂಸ್ಕಾರ್‌ ಚಳಿಗಾಲದ ಸಾಹಸಕ್ರೀಡಾ ಹಾಗೂ ಪ್ರವಾಸೋದ್ಯಮ ಉತ್ಸವ ನಡೆಯಲಿದೆ ಎಂದರೆ ಕೇಳಬೇಕೇ? ಸಾಹಸಪ್ರಿಯರ ಪಾಲಿಗದು ಹಬ್ಬ.

adventure tour in ladakh

ಇದೇ ಜನವರಿ ೨೮ರಿಂದ ಫೆಬ್ರವರಿ ೧೫ರವರೆಗೆ ಎರಡನೇ ಝಂಸ್ಕಾರ್‌ ಸಾಹಸಕ್ರೀಡೆ ಹಾಗೂ ಪ್ರವಾಸೋದ್ಯಮ ಉತ್ಸವ ನಡೆಯಲಿದೆ. ಇಲ್ಲಿ ನಿಮ್ಮನ್ನು ನೀವು ಒರೆಗೆ ಹಚ್ಚಲು ಬೇಕಾದ ಎಲ್ಲ ಬಗೆಯ ಸಾಹಸಕ್ರೀಡೆಗಳೂ ಜೊತೆಯಾಗಿ ಸಿಗಲಿವೆ. ಸ್ಕೀಯಿಂಗ್‌, ಐಸ್‌ ಕ್ಲೈಂಬಿಂಗ್‌, ಹಿಮದಲ್ಲಿ ಯೋಗಾಭ್ಯಾಸ, ಬೈಕಿಂಗ್ ಸೇರಿದಂತೆ ಹತ್ತು ಹಲವು ಬಗೆಯ ಕ್ರೀಡೆಗಳು ಇಲ್ಲಿ ಲಭ್ಯವಾಗಲಿವೆ.‌ ಲಡಾಕ್‌ಗೆ ಈಗಾಗಲೇ ಪ್ರವಾಸ ಮಾಡಿದ ಮಂದಿಗೆ ಅಲ್ಲಿನ ವಿಶೇಷ ಬಗೆಯ ಸಾಂಪ್ರದಾಯಿಕ ಉತ್ಸವಗಳನ್ನು ನೋಡಿ ಕೇಳಿ ತಿಳಿದಿರುತ್ತದೆಯಾದರೂ, ಈ ಉತ್ಸವ ಮಾತ್ರ ಸರ್ಕಾರ ಆಯೋಜಿಸುವುದಾದ್ದರಿಂದ ಸಂಪೂರ್ಣವಾಗಿ ಪ್ರವಾಸಿಗರನ್ನು ಉದ್ದೇಶವಾಗಿಟ್ಟುಕೊಂಡು ಪ್ರವಾಸೋದ್ಯಮ ವಿಸ್ತರಣೆಗಾಗಿ, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಉತ್ಸವವಾಗಿದೆ.

ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

ಝಂಸ್ಕಾರ್‌ನ ಈ ಉತ್ಸವಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿದ್ದು ಇದರಲ್ಲಿ ಸಾಕಷ್ಟು ಮಂತ್ರಿ ಮಹೋದಯರೂ ರಾಜಕಾರಣಿಗಳೂ ಭಾಗವಹಿಸಲಿದ್ದಾರೆ. ಈ ಉತ್ಸವದ ಪ್ರಯತ್ನ ಈ ಹಿಂದೆಯೂ ಒಮ್ಮೆ ನಡೆದಿದ್ದು, ಇದು ಅದರ ಎರಡನೇ ಅವತರಣಿಕೆಯಾಗಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಸಭೆಗಳೂ ನಡೆದಿದ್ದು, ಮುಂಜಾಗರೂಕತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಉತ್ಸವವನ್ನು ಯುವಜನ ಕ್ರೀಡಾ ಹಾಗೂ ಮಾಹಿತಿ ಹಾಗೂ ಪ್ರಸಾರ ಕೇಂದ್ರ ಸಚಿವ ಅನುರಾಗ್‌ ಠಾಕುರ್‌ ಉದ್ಘಾಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಪ್ರವಾಸೋದ್ಯಮವನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಸ್ಥಳೀಯ ಮಂದಿಗೆ ಈ ನಿಟ್ಟಿನ ಕೆಲಸಗಳಲ್ಲಿ ಇನ್ನೂ ಹೆಚ್ಚಿನ ಅವಕಾಶ ಸಿಗುವಂತಾಗಲು, ಹಿಮಕ್ರೀಡೆಗಳು ಹಾಗೂ ಹಲವು ಬಗೆಯ ಸಾಹಸಕ್ರೀಡೆಗಳಿಗೆ ಸ್ಥಳೀಯ ಮಂದಿಗೇ ಹೆಚ್ಚು ಅವಕಾಶ ನೀಡಲಾಗುತ್ತಿದ್ದು, ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯರಿಗೆ ಇದು ನೆರವಾಗಲಿದೆ.

ಈ ಉತ್ಸವದಲ್ಲಿ ಸಾಹಸಕ್ರೀಡೆಯ ಜೊತೆಗೆ ನಿತ್ಯವೂ ಮನರಂಜನಾ ಕಾರ್ಯಕ್ರಮವೂ ನಡೆಯಲಿದ್ದು, ಇದರ ಹೊರತಾಗಿ ಭಾಗವಹಿಸುವ ಮಂದಿಗೆ ಅನುಕೂಲವಾಗಿರಲೆಂದು ಎಲ್ಲ ರೀತಿಯ ಸೌಲಭ್ಯಗಳ ತಯಾರಿಯೂ ನಡೆದಿದೆ. ವೈದ್ಯಕೀಯ ತುರ್ತು ನೆರವು, ನೀರು ಸರಬರಾಜು, ಉಳಿದುಕೊಳ್ಳುವ ವ್ಯವಸ್ಥೆ, ವ್ಯಾಪಾರಕ್ಕಾಗಿ ವಿವಿಧ ಸ್ಟಾಲ್‌ಗಳು, ಆಹಾರ ಮಳಿಗೆಗಳು ಎಲ್ಲವೂ ಇಲ್ಲಿರಲಿದೆ.

ಇದನ್ನೂ ಓದಿ: Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್​ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Hampi Tour: ಹಂಪಿ ಪ್ರವಾಸದ ವೇಳೆ ಈ 10 ಸ್ಥಳಗಳಲ್ಲಿ ರಾಮಾಯಣದ ಕುರುಹುಗಳನ್ನು ಹುಡುಕಿ!

ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಹಂಪಿಯ (Hampi Tour) ಕಣಕಣದಲ್ಲೂ ಅದರ ಸೌಂದರ್ಯ ಅಡಗಿದೆ. ಪ್ರತಿಯೊಂದು ಹಾದಿಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ನಾವು ಶೋಧಿಸುತ್ತಾ ಹೋದಂತೆ ಮತ್ತಷ್ಟು ಹೊಸಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ.

VISTARANEWS.COM


on

By

Hampi Tour
Koo

ಧುಮ್ಮಿಕ್ಕುವ ತುಂಗಭದ್ರೆಯ (Tungabhadra) ಪಕ್ಕದಲ್ಲಿ ಗ್ರಾನೈಟ್ ಬಂಡೆಗಳ ಕಣಿವೆಗಳ ನಡುವೆ ಸುತ್ತುವರೆದಿರುವ ಹಂಪಿಯ (Hampi Tour) ಅವಶೇಷಗಳು ಇಂದಿಗೂ ಶ್ರೀಮಂತ ವಿಜಯನಗರ (vijayanagar) ಪರಂಪರೆಯನ್ನು ಪ್ರದರ್ಶಿಸುತ್ತಿವೆ. ವಿಠ್ಠಲ ದೇವಾಲಯ ಮತ್ತು ಪುರಾತನ ಕಲ್ಲಿನ ರಥದಂತಹ ಸಾಂಪ್ರದಾಯಿಕ ಆಕರ್ಷಣೆಗಳು ದೀರ್ಘಕಾಲಿಕ ಪ್ರವಾಸಿಗರನ್ನು ಸೆಳೆದರೂ ಇಲ್ಲಿ ಹಲವಾರು ಗುಪ್ತ ರತ್ನಗಳಿದ್ದು ಸಂಶೋಧಕ ಮನವುಳ್ಳವರನ್ನು ಬರ ಸೆಳೆಯುವುದು.

ಹಸಿರು ತೋಪುಗಳು, ಅಸ್ಪಷ್ಟವಾದ ಹಳ್ಳಿಯ ಗೂಡುಗಳು ಮತ್ತು ರಮಣೀಯ ಜಲಮೂಲಗಳು ಭವ್ಯವಾದ ಸಂಪತ್ತು ಇಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಹಲವಾರು ಕಲ್ಲಿನ ಗುಹೆಗಳಿಂದ ಹಿಡಿದು ಪಾಕಶಾಲೆಯ ರಹಸ್ಯಗಳು ಇನ್ನೂ ಇಲ್ಲಿ ಜೀವಂತವಾಗಿವೆ. ಹಂಪಿಯ ಆಕರ್ಷಣೆಯನ್ನು ಹೆಚ್ಚಿಸುವ ಇಲ್ಲಿ ಹಲವು ತಾಣಗಳಿದ್ದು, ಅವುಗಳಲ್ಲಿ ಹತ್ತು ಹೆಚ್ಚು ಸಂತೋಷವನ್ನು ಕೊಡುತ್ತದೆ.


ಅಂಜನಾದ್ರಿ ಬೆಟ್ಟ

ತುಂಗಭದ್ರಾ ನದಿಗೆ ಅಡ್ಡಲಾಗಿ ನೆಲೆಗೊಂಡಿರುವ ಅಂಜನಾದ್ರಿಯು ಒಂದು ಪವಿತ್ರ ಯಾತ್ರಾಸ್ಥಳ. ಇದು ಒಂದು ತುಲನಾತ್ಮಕವಾಗಿ ಅನಿಯಂತ್ರಿತ ಆಕರ್ಷಣೆಯನ್ನು ಶಾಶ್ವತವಾದ ಸಿದ್ಧಾಂತದೊಂದಿಗೆ ವಿಲೀನಗೊಳಿಸುವ ಪ್ರಕೃತಿಯ ಸೌಂದರ್ಯವನ್ನು ವಿವರಿಸುತ್ತದೆ. ರಾಮಾಯಣದ ಪ್ರಕಾರ ಇದು ಶಿವ- ವಾಯುವಿನ ಶಕ್ತಿ ರೂಪವಾದ ಹನುಮಂತನು ಅಂಜನಿ ದೇವಿಯ ಗರ್ಭದಿಂದ ಜನಿಸಿದ ಕ್ಷೇತ್ರವಿದು. ಸೀತಾ ದೇವಿ ಇಲ್ಲಿಗೆ ಬಂದ ಬಳಿಕ ಈ ಕ್ಷೇತ್ರ ಹೆಚ್ಚು ಪ್ರಸಿದ್ಧವಾಯಿತು ಎನ್ನಲಾಗುತ್ತದೆ. ಇದು ಇನ್ನೂ ಇಲ್ಲಿ ಗುಪ್ತವಾಗಿಯೇ ಉಳಿದಿದೆ. ಕೇವಲ ಹತ್ತು ನಿಮಿಷಗಳ ಮೋಟಾರು ದೋಣಿಯ ಮೂಲಕ ನೀರಿನಲ್ಲಿ ಸಂಚರಿಸಿ ಈ ಬೆಟ್ಟವನ್ನು ಕಾಣಬಹುದು.


ಪುರಂದರ ದಾಸ ಗುಹಾ ದೇವಾಲಯ

ಪುರಂದರ ದಾಸ ಗದ್ದಿಯಲ್ಲಿರುವ ಅಸ್ಪಷ್ಟವಾದ ಗುಹೆ ದೇವಾಲಯವು ಪಾರಂಪರಿಕ ಸಂಗೀತ ಸ್ಮಾರಕವಾಗಿದೆ. ಇದು ಸಂತ ಪುರಂದರ ದಾಸರು ಇಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದರು ಎಂದು ನಂಬಲಾಗಿದೆ. 15ನೇ ಶತಮಾನದ ಈ ತಾಣವು ನೈಸರ್ಗಿಕವಾಗಿ ರೂಪುಗೊಂಡ ಗ್ರಾನೈಟ್ ಗುಹೆಗಳನ್ನು ಜೊತೆಗೆ ಪ್ರಾಚೀನ ಲಿಂಗದ ಅವಶೇಷಗಳನ್ನು ಹೊಂದಿದೆ. ಸಾಧುಗಳು ಮತ್ತು ಸಂಗೀತಗಾರರು ಆಗಾಗ್ಗೆ ಇಲ್ಲಿಗೆ ಭೇಟಿ ಮಾಡುತ್ತಾರೆ.


ಅಚ್ಯುತರಾಯ ದೇವಸ್ಥಾನ

ಅಚ್ಯುತರಾಯ ದೇವಾಲಯದ ಸಂಕೀರ್ಣದ ಕಥೆಯು ನಿರಂತರ ರಾಜವಂಶದ ಭಕ್ತಿಯ ಸುತ್ತ ಸುತ್ತುತ್ತದೆ. ತುಂಗಭದ್ರಾ ನದಿಯಿಂದ ಸುತ್ತುವರಿದಿರುವ 16ನೇ ಶತಮಾನದ ಸಂಕೀರ್ಣವಾದ ಇದು ಸಹೋದರ ಲಕ್ಷ್ಮಣನ ಜೊತೆಯಲ್ಲಿ ಭಗವಾನ್ ರಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಅನನ್ಯವಾದ ಅವಳಿ ಗರ್ಭಗುಡಿಯ ದೇವಾಲಯವಾಗಿದೆ. ಧರ್ಮನಿಷ್ಠ ವಿಜಯನಗರ ಚಕ್ರವರ್ತಿ ಅಚ್ಯುತದೇವ ರಾಯರಿಂದ ಸ್ಥಾಪಿಸಲ್ಪಟ್ಟಿದೆ. ವಿಟ್ಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಸಣಾಪುರ ಸರೋವರ

ಹೆಚ್ಚಿನ ನಗರ ಪ್ರದೇಶಗಳು ಕಾಂಕ್ರೀಟ್ ಉದ್ಯಾನಗಳ ಮೂಲಕ ಪ್ರಕೃತಿಯ ಆನಂದವನ್ನು ಮಿತಿಗೊಳಿಸುತ್ತವೆ. ಆದರೆ ಗಮನಾರ್ಹವಾಗಿ ರಾಜಮನೆತನದ ಹಂಪಿ ಅರಮನೆಯ ಒಳ ನೋಟಗಳು ಹಳ್ಳಿಗಾಡಿನ ವಿಹಾರದ ಆನಂದವನ್ನು ಒದಗಿಸುತ್ತದೆ. ಸಣಾಪುರವು ವಿಟ್ಲ ದೇವಸ್ಥಾನದ ಹಿಂದೆ ಕೇವಲ ಎರಡು ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ಪಾದಯಾತ್ರೆಯ ಹಾದಿ ಮರದ ಏರಿಳಿತಗಳೊಂದಿಗೆ ಭಾಗಶಃ ಸಂತೋಷಕರ ಪಿಕ್ನಿಕ್ ವಲಯವಾಗಿ ಮಾರ್ಪಡಿಸಲಾಗಿದೆ. ಸ್ಥಳೀಯ ಇತಿಹಾಸ, ಪುರಾತನ ಜಲಮೂಲ ಇಲ್ಲಿ ಪ್ರವಾಸಕ್ಕೆ ಮತ್ತಷ್ಟು ಸಂತೋಷವನ್ನು ತುಂಬಿಕೊಡುತ್ತದೆ. ಗ್ರೋವ್ ಹೂವುಗಳ ಸುವಾಸನೆ ತಂಗಾಳಿಯಲ್ಲಿ ದೋಣಿ ಸವಾರಿ, ಹಠಾತ್ತನೆ ಕಾಣಿಸುವ ಬೆಳ್ಳಕ್ಕಿಗಳು ಆಕರ್ಷಕ ಚಿತ್ರವನ್ನು ಮನದಲ್ಲಿ ಕೆತ್ತಿಸುತ್ತದೆ. ಮಾನವ ನಿರ್ಮಿತ ಆಕ್ವಾ ವಾಸ್ತುಶಿಲ್ಪಗಳ ಸೌಂದರ್ಯವನ್ನು ಇಲ್ಲಿ ಕಾಣಬಹುದು.


ಮಾತಂಗ ಬೆಟ್ಟಗಳು

ರಾಯಲ್ ಸೆಂಟರ್‌ನ ಪೂರ್ವದ ಮಾತಂಗ ಬೆಟ್ಟ ನೈಸರ್ಗಿಕ ಗ್ರಾನೈಟ್ ಬಂಡೆಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಪೌರಾಣಿಕ ಋಷಿ ಮಾತಂಗನ ಹೆಸರನ್ನು ಈ ಸ್ಥಳ ನೆನಪಿಸುತ್ತದೆ. ಪಕ್ಷಿಗಳು ಮತ್ತು ಲಾಂಗೂರ್ ಕೋತಿಗಳ ಗುಂಪುಗಳು ಗಮನ ಸೆಳೆಯುತ್ತವೆ. ಚಾರಣಪ್ರಿಯರು ಇಷ್ಟಪಡುವ ತಾಣವಿದು. ಕೆಲವು ಗಂಟೆಗಳಲ್ಲಿ ಹತ್ತಿ ಇಳಿಯಬಹುದು.


ಕಮಲಾಪುರ ಗ್ರಾಮ

ಮಾರುಕಟ್ಟೆ ಬೀದಿಗಳ ಆಚೆಗೆ ಇರುವ ಈ ಹಳ್ಳಿ ಇನ್ನೂ ಪುರಾತನ ದಿನಗಳನ್ನು ನೆನಪಿಸುತ್ತದೆ. ಮುಖ್ಯ ಪಟ್ಟಣದಿಂದ 14 ಕಿಲೋಮೀಟರ್ ದೂರದಲ್ಲಿರುವ ಕಮಲಾಪುರ ಕೃಷಿ ವಸಾಹತು, ಮಧ್ಯಕಾಲೀನ ಯುಗದ ಮಾಂತ್ರಿಕ ದೇವಾಲಯದ ಗೋಪುರಗಳನ್ನು ಹೊಂದಿದೆ. ಪಚ್ಚೆ ಹೊಲಗಳ ನಡುವೆ ವಾರ್ಷಿಕ ಜಾತ್ರೆಗಳು ಇಲ್ಲಿ ಸೌಂದರ್ಯವನ್ನು ಸಾರುತ್ತದೆ. ಇಲ್ಲಿನ ಹಿರಿಯರು ಸುಮಾರು ಒಂದು ಶತಮಾನದ ಹಿಂದೆ ತಮ್ಮ ಬಾಲ್ಯದಿಂದಲೂ ಹಾಳಾದ ಕೋಟೆಗಳ ಬಗ್ಗೆ ಆಸಕ್ತಿದಾಯಕ ಕಥೆಗಳನ್ನು ವಿವರಿಸುತ್ತಿದ್ದರೆ ಕೇಳುವುದೇ ಚಂದ. ಹಳ್ಳಿಯ ಪಾಕಪದ್ಧತಿಯು ಇಲ್ಲಿ ಎಲ್ಲರ ತನುಮನವನ್ನು ಸಂತೃಪ್ತಗೊಳಿಸುವುದು.


ರಘುನಾಥಸ್ವಾಮಿ ದೇವಾಲಯ

ಗತಕಾಲದ ವಾಸ್ತುಶೈಲಿ ಇನ್ನೂ ಅಖಂಡವಾಗಿರುವ ದೇವಾಲಯವಿದು. ರಘುನಾಥಸ್ವಾಮಿ ದೇವಾಲಯವು ಅಚ್ಚರಿಯ ವಾಸ್ತುಶಿಲ್ಪದೊಂದಿಗೆ ಇತಿಹಾಸ ಹಿನ್ನೋಟವನ್ನು ಅದ್ಭುತವನ್ನು ವಿವರಿಸುತ್ತದೆ. ಸುಂದರವಾದ ಬಂಡೆಗಳಿಂದ ಸುತ್ತುವರಿದಿರುವ 16ನೇ ಶತಮಾನದ ಈ ಸ್ಥಳ ಅದ್ಭುತವಾಗಿದೆ. ಸಾಂಪ್ರದಾಯಿಕ ದೀಪದ ಕಲ್ಲಿನ ಕಂಬಗಳು, ರಾಮ-ಸೀತೆಯ ಕಪ್ಪು ಗ್ರಾನೈಟ್ ವಿಗ್ರಹಗಳು ಸೊಗಸಾಗಿವೆ. ವಿಠಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಹಂಪಿ ಬಜಾರ್

ಹಳ್ಳಿಗಾಡಿನ ಮೋಜು ಮಸ್ತಿಗಳು ಜೀವಂತವಾಗಿರುವುದನ್ನು ಕಾಣಬೇಕಾದರೆ ಹಂಪಿ ಬಜಾರ್‌ಗೆ ಭೇಟಿ ನೀಡಬೇಕು. ಪ್ರಾದೇಶಿಕ ಜನಾಂಗೀಯ ವೈವಿಧ್ಯತೆಯನ್ನು ವೈಭವಯುತವಾಗಿ ವ್ಯಕ್ತಪಡಿಸುವ ಹಂಪಿ ಬಜಾರ್ ಜನವರಿಯ ಪೊಂಗಲ್ ಹಬ್ಬಗಳ ಸಮಯದಲ್ಲಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಭಾವಪೂರ್ಣವಾದ ಜಾನಪದ ನೃತ್ಯಗಳು, ಜಾನುವಾರು ಓಟಗಳು ಮತ್ತು ವರ್ಣರಂಜಿತ ರಂಗೋಲಿ ಸ್ಪರ್ಧೆಗಳು ಬಯಲು ರಂಗದಲ್ಲಿ ನಡೆಯುತ್ತವೆ. ಬಿದಿರು ಚಿಗುರು ಪುಲಾವ್ ಅಥವಾ ತೆಂಗಿನಕಾಯಿ-ಬೆಲ್ಲದ ಲಡ್ಡೂಗಳಂತಹ ರುಚಿಕರವಾದ ಪ್ರಾದೇಶಿಕ ಖಾದ್ಯಗಳನ್ನು ಇಲ್ಲಿ ಸವಿಯಬಹುದು.


ವಿರೂಪಾಕ್ಷ ಗುಹೆ

ಇಲ್ಲಿಯ ವಿರೂಪಾಕ್ಷನ ಗುಹೆ ಪುರಾತನ ಕಥೆಗಳನ್ನು ವರ್ಣಿಸುತ್ತದೆ. ಶಿಲಾಯುಗದ ರಾಕ್ ಕಲೆಯೊಂದಿಗೆ ನವಶಿಲಾಯುಗದ ಅವಶೇಷಗಳೊಂದಿಗೆ ಸಮಾಧಿ ಕೋಣೆಗಳು, ಬಾಗಿದ ಗುಹೆಯ ಗೋಡೆಗಳು ಅಥವಾ ಗ್ರಾನೈಟ್ ಬಂಡೆಯ ಮೇಲ್ಮೈಗಳಾದ್ಯಂತ ಪ್ರಾಣಿಗಳು, ಬುಡಕಟ್ಟು ಆಚರಣೆಗಳು ಗಮನ ಸೆಳೆಯುತ್ತವೆ. ಆಧುನಿಕ ಹಂಪಿ ಬಳಿ ನದಿ ಕಣಿವೆಯ ಉದ್ದಕ್ಕೂ ವಿಭಿನ್ನ ಸಂಸ್ಕೃತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಪ್ಯಾಲಿಯೊಲಿಥಿಕ್ ವಸಾಹತು ವಲಯ ಎದ್ದು ಕಾಣುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?


ಆನೆಗುಂದಿ

ನದಿಯ ದಡದ ಆನೆಗುಂದಿಯ ಸುಂದರವಾದ ಪ್ರದೇಶ ಇಲ್ಲಿಯ ಮತ್ತೊಂದು ಆಕರ್ಷಣೆ. ಇದು ರಾಮಾಯಣ ಕಾಲದಲ್ಲಿ ಸುಗ್ರೀವ ವಾಸವಾಗಿದ್ದ ಪವಿತ್ರ ಸ್ಥಳವೆಂದು ನಂಬಲಾಗಿದೆ. ವಿಜಯನಗರ ಶೈಲಿಯು ಗುಪ್ತ ಪ್ರಾಂಗಣಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಹಂಪಿಯ ಆಕರ್ಷಣೆ ಅಲ್ಲಿನ ಪ್ರತಿಯೊಂದು ಕಣಕಣದಲ್ಲೂ ಇದೆ.

Continue Reading

ಪ್ರವಾಸ

Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಮಂಗಳೂರು ಎಂದಾಗ ನೆನಪಾಗುವುದೇ ಸಮುದ್ರ ಮತ್ತು ಸಮುದ್ರಾಹಾರ. ಇಲ್ಲಿ ಕೇವಲ ಇದಿಷ್ಟೇ ಅಲ್ಲ ಇನ್ನೂ ಹಲವು ಪ್ರವಾಸಿಗರ (Mangalore Tour) ನೆಚ್ಚಿನ ತಾಣಗಳಿವೆ. ಹೀಗಾಗಿ ಇಲ್ಲಿ ಭೇಟಿ ನೀಡಿದಾಗ ಮಿಸ್ ಮಾಡಲೇಬಾರದ ಕೆಲವು ತಾಣಗಳ ಕುರಿತು ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

By

Mangalore Tour
Koo

ನೇತ್ರಾವತಿ (netravati) ಮತ್ತು ಗುರುಪುರ (Gurupur) ನದಿಗಳ ಮುಖಜ ಭೂಮಿಯಲ್ಲಿ ಕುಳಿತಿರುವ ಮಂಗಳೂರು ಬೀಚ್ (mangaluru beach) ಪ್ರಿಯರಿಗೆ ಸೂಕ್ತ ತಾಣ. ಚಿನ್ನದ ಬಣ್ಣದ ಮರಳು ಮತ್ತು ಆಕಾಶ ನೀಲಿ ಸಮುದ್ರದ ನೋಟವನ್ನು ಕಣ್ತುಂಬಿಕೊಳ್ಳುವ ಜೊತೆಗೆ ಸಮುದ್ರಾಹಾರವನ್ನು (see food) ಸವಿಯಲು ಇಷ್ಟಪಡುವವರಿಗೆ ಮಂಗಳೂರಿನಲ್ಲಿ (Mangalore Tour) ಸಾಕಷ್ಟು ವೆರೈಟಿಗಳಿವೆ.

ನಗರದ ಸಮೀಪದಲ್ಲಿ ಹಲವಾರು ಗಿರಿಧಾಮಗಳಿವೆ. ದಕ್ಷಿಣ ಭಾರತದ (south india) ಇತರ ನಗರಗಳಂತೆ ಮಂಗಳೂರು ಆಧ್ಯಾತ್ಮಿಕ ಭಾವನೆಯನ್ನು ಹೊಂದಿದೆ. ಇಲ್ಲಿ ಎಲ್ಲರೂ ಇಷ್ಟಪಡುವ ಹಲವಾರು ತಾಣಗಳಿದ್ದು, ಅವುಗಳಲ್ಲಿ ಕೆಲವು ಅತ್ಯುತ್ತಮ ಸ್ಥಳಗಳು ಇಂತಿವೆ.


ಮಂಗಳಾದೇವಿ ದೇವಸ್ಥಾನ

ಮಂಗಳೂರು ಜನತೆಯ ಆರಾಧ್ಯ ದೈವ ಮಂಗಳಾದೇವಿ ದೇವಾಲಯದಿಂದಾಗಿಯೇ ಮಂಗಳೂರನ್ನು ಹಿಂದೆ ಮಂಗಳಾಪುರ ಎಂದು ಕರೆಯಲಾಗುತ್ತಿತ್ತು. ಬೋಳಾರ್‌ನಲ್ಲಿರುವ 19ನೇ ಶತಮಾನದ ದೇವಾಲಯವನ್ನು ಅಹೇಪಾ ರಾಜವಂಶದ ರಾಜ ಸ್ಥಾಪಿಸಿದ ಎನ್ನಲಾಗುತ್ತದೆ. ಮಂಗಳೂರಿನಲ್ಲಿ ನೋಡಬಹುದಾದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಇದು ಒಂದಾಗಿದೆ. ದಸರಾದ ಮೊದಲು, ನವರಾತ್ರಿಯ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ. ರಾತ್ರಿ 9 ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ.


ಗೋಕರ್ಣನಾಥೇಶ್ವರ ದೇವಸ್ಥಾನ

ಶಿವನಿಗೆ ಅರ್ಪಿತವಾಗಿರುವ ಗೋಕರ್ಣನಾಥೇಶ್ವರ ದೇವಾಲಯವು ಮಂಗಳೂರಿನಲ್ಲಿ ನೋಡಲೇಬೇಕಾದ ಮತ್ತೊಂದು ತಾಣ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಕೊಡಿಯಾಲ್ ಬೈಲ್‌ನ ಕುದ್ರೋಳಿಯಲ್ಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಎಂದೂ ಕರೆಯಲ್ಪಡುವ ಈ ದೇವಾಲಯವು 60 ಅಡಿ ಎತ್ತರದ ಚಿನ್ನದ ಬಣ್ಣದ ಗೋಪುರವನ್ನು ಹೊಂದಿದೆ ಮತ್ತು ಗಾರೆ ಆಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸುವ ಕೆಲವು ಸೊಗಸಾದ ರಾಕ್ ಕೆತ್ತನೆ ಮತ್ತು ಶಿಲ್ಪಗಳನ್ನು ಪ್ರದರ್ಶಿಸುತ್ತದೆ. ದೇವಾಲಯದ ಗೋಪುರವನ್ನು ಹಿಂದೂ ದಂತಕಥೆಗಳ ದೃಶ್ಯಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.

ನವರಾತ್ರಿಯ ಸಮಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಯಾಕೆಂದರೆ ಇಲ್ಲಿ ದಸರಾ ಹಬ್ಬವನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ. ದೇವಾಲಯವು ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.


ಪಣಂಬೂರು ಬೀಚ್

ಮಂಗಳೂರಿನಿಂದ 13 ಕಿಲೋಮೀಟರ್ ದೂರದಲ್ಲಿರುವ ಪಣಂಬೂರು ಬೀಚ್ ಅತ್ಯಂತ ಜನಪ್ರಿಯ ತಾಣವಾಗಿದೆ. ಸೂರ್ಯೋದಯ, ಸೂರ್ಯಾಸ್ತಗಳನ್ನು ವೀಕ್ಷಿಸಲು ಪರಿಪೂರ್ಣ ಸ್ಥಳಗಳಲ್ಲಿ ಇದು ಒಂದಾಗಿದೆ. ಇಲ್ಲಿ ಜಲಕ್ರೀಡೆಯನ್ನು ಮಾಡಬಹುದು. ಬೀಚ್‌ಗೆ ಭೇಟಿ ನೀಡಲು ಪ್ಯಾರಾಸೈಲಿಂಗ್, ಜೆಟ್ ಸ್ಕೀಯಿಂಗ್, ದೋಣಿ ಸವಾರಿ ನಡೆಸಬಹುದು.
ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳ ನಡುವಿನ ಮುಂಜಾನೆ ಅಥವಾ ತಡ ಮಧ್ಯಾಹ್ನ ಪಣಂಬೂರು ಬೀಚ್‌ಗೆ ಭೇಟಿ ನೀಡಲು ಉತ್ತಮ ಸಮಯ.


ಸುರತ್ಕಲ್ ಬೀಚ್

ಕಡಲತೀರದ ಪ್ರವಾಸಿಗರಿಗೆ ಅನ್ವೇಷಿಸಲು ಮತ್ತೊಂದು ಸ್ಥಳವೆಂದರೆ ಸುರತ್ಕಲ್ ಬೀಚ್. ತನ್ನ ಪ್ರಾಚೀನ ಪರಿಸರಕ್ಕೆ ಹೆಸರುವಾಸಿಯಾದ ಸುರತ್ಕಲ್ ಮುಖ್ಯ ನಗರದಿಂದ 18 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಮತ್ತೊಂದು ಆಕರ್ಷಣೆ ಕಡಲತೀರದ ದೀಪಸ್ತಂಭ. ಇದು ಬೆಟ್ಟದ ಮೇಲೆ ಇದೆ ಮತ್ತು ಸಮುದ್ರ ಮತ್ತು ಗ್ರಾಮಾಂತರದ ಕೆಲವು ಉತ್ತಮ ನೋಟವನ್ನು ಒದಗಿಸುತ್ತದೆ. ಈ ಬೀಚ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ಮತ್ತು ಫೆಬ್ರವರಿ ನಡುವೆ. ಲೈಟ್‌ಹೌಸ್ ಸಂಜೆ 4ರಿಂದ 5 ಗಂಟೆಯವರೆಗೆ ಮಾತ್ರ ತೆರೆಯುತ್ತದೆ.


ಪಿಲಿಕುಳ ನಿಸರ್ಗಧಾಮ

ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಪಿಕ್ನಿಕ್‌ಗಳಿಗೆ ಸಾಕಷ್ಟು ಸೂಕ್ತವಾಗಿದೆ. ಅಂತಹ ಒಂದು ಪರಿಪೂರ್ಣ ಸ್ಥಳವೆಂದರೆ ಪಿಲಿಕುಳ ನಿಸರ್ಗಧಾಮ. ಇದು ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. 370 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಪಿಲಿಕುಳ ನಿಸರ್ಗಧಾಮ ಅಥವಾ ಪಿಲಿಕುಳವು ನಗರದ ಸಮೀಪವಿರುವ ಅತ್ಯಂತ ಆದ್ಯತೆಯ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ವನ್ಯಜೀವಿ ಪ್ರಭೇದಗಳು, ಬೊಟಾನಿಕಲ್ ಗಾರ್ಡನ್, ಮೃಗಾಲಯದಲ್ಲಿ ಹುಲಿ, ಚಿರತೆ, ಕರಡಿ ಮತ್ತು ವಿವಿಧ ಸರೀಸೃಪಗಳು ಮತ್ತು ಹಾವುಗಳನ್ನು ಕಾಣಬಹುದು. ಆವರಣದಲ್ಲಿ ಗಾಲ್ಫ್ ಕೋರ್ಸ್ ಅನ್ನು ಸಹ ಕಾಣಬಹುದು.

ಅಕ್ಟೋಬರ್ ಮತ್ತು ಫೆಬ್ರುವರಿ ನಡುವೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯ. ಪಿಲಿಕುಳ ನಿಸರ್ಗಧಾಮ ಸೋಮವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ತೆರೆದಿರುತ್ತದೆ.


ಸೇಂಟ್ ಅಲೋಶಿಯಸ್ ಚರ್ಚ್

ಮಂಗಳೂರಿನ ಸೇಂಟ್ ಅಲೋಶಿಯಸ್ ಚರ್ಚ್ ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಈ ಚರ್ಚ್ 1880 ರಲ್ಲಿ ನಿರ್ಮಿಸಲಾಯಿತು. ಇಟಾಲಿಯನ್ ಕಲಾವಿದ ಆಂಟೋನಿಯೊ ಮೊಸ್ಚೆನಿ ಅವರ ವಿಶಿಷ್ಟ ವರ್ಣಚಿತ್ರಗಳು ಇಲ್ಲಿನ ಹೆಚ್ಚಿನ ಗೋಡೆಗಳನ್ನು ಅಲಂಕರಿಸಿದೆ. ಪೇಂಟಿಂಗ್‌ಗಳು ಅಲೋಶಿಯಸ್ ಅವರ ಜೀವನವನ್ನು ಚಿತ್ರಿಸುತ್ತವೆ. ಸ್ವಲ್ಪ ಕಾಲ ಶಾಂತವಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಸೂಕ್ತ ತಾಣ.

ಚಳಿಗಾಲವು ಸೇಂಟ್ ಅಲೋಶಿಯಸ್ ಚರ್ಚ್‌ಗೆ ಭೇಟಿ ನೀಡಲು ಉತ್ತಮ ಸಮಯ. ಈ ಸಂದರ್ಭದಲ್ಲಿ ಚರ್ಚ್ ಬೆಳಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ.


ಸುಲ್ತಾನ್ ಬತ್ತೇರಿ

ಮಂಗಳೂರಿನಿಂದ ಸುಮಾರು 4 ಕಿಲೋ ಮೀಟರ್ ದೂರದಲ್ಲಿರುವ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಕ್ರಿ.ಶ. 1784 ರಲ್ಲಿ ಚಕ್ರವರ್ತಿ ಟಿಪ್ಪು ಸುಲ್ತಾನನ ಕಾಲದಲ್ಲಿ ನಿರ್ಮಿಸಲಾಗಿದೆ. ಟಿಪ್ಪು ಸುಲ್ತಾನ್ ನಾಶಪಡಿಸಿದ 23 ಚರ್ಚ್‌ಗಳ ಅದೇ ಕಲ್ಲುಗಳಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಗಡಿಯಾರ ಗೋಪುರವಾಗಿದ್ದರೂ ಫಿರಂಗಿಗಳನ್ನು ಸ್ಥಾಪಿಸುವ ಸ್ಥಳಗಳನ್ನು ಹೊಂದಿರುವ ಕೋಟೆಯಂತೆ ಕಾಣುತ್ತದೆ. ಗೋಪುರದ ಅಡಿಯಲ್ಲಿ ಭೂಗತ ಶೇಖರಣಾ ಪ್ರದೇಶವಿದೆ. ಇದನ್ನು ಒಮ್ಮೆ ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುತ್ತಿತ್ತು. ಇದರ ಮೇಲೇರಿದರೆ ಅರಬ್ಬಿ ಸಮುದ್ರದ ವಿಹಂಗಮ ನೋಟವನ್ನು ಕಾಣಬಹುದು.

ಅದ್ಭುತವಾದ ಸೂರ್ಯಾಸ್ತವನ್ನು ಇಲ್ಲಿ ವೀಕ್ಷಿಸಬಹುದು. ಈ ಸ್ಥಳವು ಬೆಳಗ್ಗೆ 9 ರಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ.


ಮೂಲ್ಕಿಯಲ್ಲಿ ಸರ್ಫಿಂಗ್

ಮೂಲ್ಕಿಯಲ್ಲಿರುವ ಸರ್ಫಿಂಗ್ (ಜಲ ಕ್ರೀಡೆ) ಕೇಂದ್ರವು ಸರ್ಫರ್‌ಗಳ ಸ್ವರ್ಗವಾಗಿದೆ. ಮಂಗಳೂರಿನ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ವರ್ಷಪೂರ್ತಿ ಸರ್ಫ್ ಮಾಡಬಹುದಾದರೂ ಮೇನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್‌ವರೆಗೆ ಉತ್ತಮ ಸಮಯ.

ಇದನ್ನೂ ಓದಿ: Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಸ್ವಾದಿಷ್ಟ ಆಹಾರ ಸವಿಯಲು, ಶಾಪಿಂಗ್‌ಗೆ ಸೂಕ್ತ ತಾಣ

ಮಂಗಳೂರಿಗೆ ಭೇಟಿ ನೀಡಿದರೆ ಸ್ವಾದಿಷ್ಟ ಆಹಾರ ಗ್ಯಾರಂಟಿ. ಕೆಲವು ರುಚಿಕರವಾದ ಸಮುದ್ರಾಹಾರವನ್ನು ಸವಿಯಬಹುದು. ಫಿಶ್ ಪುಲಿಮುಂಚಿ ಮತ್ತು ಏಡಿ ಘೀ ರೋಸ್ಟ್ ಇಲ್ಲಿನ ಜನಪ್ರಿಯ ಖಾದ್ಯ. ಮಂಗಳೂರಿನಲ್ಲಿ ಜನಪ್ರಿಯವಾಗಿರುವ ಇತರ ಭಕ್ಷ್ಯಗಳೆಂದರೆ ನೀರ್ ದೋಸೆ ಮತ್ತು ಚಿಕನ್ ಕರಿ. ಸಸ್ಯಾಹಾರಿಗಳು ಅಧಿಕೃತ ಮಂಗಳೂರಿನ ಸಸ್ಯಾಹಾರಿ ಆಹಾರಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಬಹುದು.

ಶಾಪಿಂಗ್ ಪ್ರಿಯರಿಗೆ ಮಂಗಳೂರು ನಗರದಲ್ಲಿ ಹಲವು ತಾಣಗಳಿವೆ. ಸೆಂಟ್ರಲ್ ಮಾರುಕಟ್ಟೆ ಹಂಪನಕಟ್ಟಾ ಮಾರುಕಟ್ಟೆ ಬಡಂಗ್‌ಪೇಟ್ ಮಾರುಕಟ್ಟೆ ಸಮುದ್ರಾಹಾರ ಮಾರುಕಟ್ಟೆ ದುಬೈ ಮಾರ್ಕೆಟ್ ಎಂಪೈರ್ ಮಾಲ್‌ಗೆ ಭೇಟಿ ನೀಡಬಹುದು.

Continue Reading

ಪ್ರವಾಸ

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

ನಿತ್ಯದ ಬದುಕಿನ ಒತ್ತಡದಲ್ಲಿ ದಂಪತಿಗೆ ಪರಸ್ಪರ ಸಮಯ ಕೊಡಲು ಅವಕಾಶವೇ ಸಿಗುವುದಿಲ್ಲ. ಇಂತವರು ಬಿಡುವು ಮಾಡಿಕೊಂಡು ಒಮ್ಮೆ ತಿರುಚಿರಾಪಳ್ಳಿಗೆ (Trichy Tour) ಬಂದರೆ ಬದುಕಿನಲ್ಲಿ ಮತ್ತೆ ಪ್ರೀತಿ ಹುಟ್ಟದೇ ಇರಲು ಸಾಧ್ಯವೇ ಇಲ್ಲ. ಅಂತಹ ರೊಮ್ಯಾಂಟಿಕ್ ಸ್ಥಳಗಳು ಇಲ್ಲಿವೆ.

VISTARANEWS.COM


on

By

Trichy Tour
Koo

ಒಟ್ಟಿಗೆ ಇದ್ದರೂ ಕೆಲಸದ ಒತ್ತಡವನ್ನೆಲ್ಲ ಬದಿಗೊತ್ತಿ ವರ್ಷದಲ್ಲೊಮ್ಮೆಯಾದರೂ ಪತಿ – ಪತ್ನಿ (Couple) ಏಕಾಂತವಾಗಿ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ಇಂಥವರಿಗೆ ಸೂಕ್ತವೆನಿಸುವ ಹಲವಾರು ತಾಣಗಳು ಭಾರತದಲ್ಲಿ (india) ಇದೆ. ಅದರಲ್ಲಿ ತಿರುಚಿರಾಪಳ್ಳಿ (Trichy Tour) ಕೂಡ ಒಂದು.

ತಿರುಚಿರಾಪಳ್ಳಿ ಅಥವಾ ತಿರುಚಿ ಗಡಿಬಿಡಿಯ ಜೀವನದಿಂದ ದೂರವಿರಲು ಬಯಸುವ ದಂಪತಿ ಖಂಡಿತವಾಗಿಯೂ ಭೇಟಿ ನೀಡಬೇಕಾದ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳು, ಶಾಂತವಾದ ನದಿ, ರುಚಿಕರವಾದ ಆಹಾರ, ಆಳವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು. ರೋಮ್ಯಾಂಟಿಕ್ ಮತ್ತು ಸಾಹಸಮಯ ಪ್ರವಾಸಗಳಿಗೆ ಸೂಕ್ತವಾಗಿರುವ ತಿರುಚಿಯಲ್ಲಿ ಯಾವುದಾದರೂ ಹಳೆಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೈ ಹಿಡಿದುಕೊಂಡು ಹೋಗುತ್ತಿರುವಾಗ ಅಥವಾ ನದಿಯ ದಡದಲ್ಲಿ ಒಟ್ಟಿಗೆ ವಿವಿಧ ಭಕ್ಷ್ಯಗಳನ್ನು ಸವಿಯುತ್ತಿರುವಾಗ ನಿಮ್ಮ ಪ್ರೇಮ ಕಥೆಯ ಪ್ರಾರಂಭದ ದಿನಗಳ ನೆನಪು ಚಿಗುರೊಡೆಯದೆ ಇರಲಾರದು.

ತಿರುಚಿ ಎಂದೂ ಕರೆಯಲ್ಪಡುವ ತಿರುಚಿರಾಪಳ್ಳಿಯು ಇತಿಹಾಸ, ಸಂಸ್ಕೃತಿ ಮತ್ತು ಸೌಂದರ್ಯದ ನಗರವಾಗಿದೆ. ಇದು ಭಾರತದ ಅತ್ಯುತ್ತಮ ಪ್ರಣಯ ವಿಹಾರ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡಿನ ದಕ್ಷಿಣ ರಾಜ್ಯದಲ್ಲಿರುವ ಪ್ರಾಚೀನ ವಾಸ್ತುಶೈಲಿಯು ಶಾಂತವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ರುಚಿಕರವಾದ ಆಹಾರದೊಂದಿಗೆ ಬೆರೆತಿರುವ ಕೆಲವು ಕ್ಷಣಗಳನ್ನು ಜೀವಂತಗೊಳಿಸುತ್ತದೆ.

ಪ್ರಾಚೀನ ದೇವಾಲಯಗಳು

ಸ್ಥಳದ ಸುತ್ತಲೂ ಹರಡಿರುವ ಹಲವಾರು ದೇವಾಲಯಗಳಿಗಿಂತ ಹೆಚ್ಚು ಆಕರ್ಷಕವಾದದ್ದು ಯಾವುದು? ತಿರುಚ್ಚಿಯು ಅನೇಕ ಪವಿತ್ರ ದೇವಾಲಯಗಳೊಂದಿಗೆ ಅಗಾಧವಾದ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಅವುಗಳಲ್ಲಿ ದೈವಿಕ ವೈಭವ ಮತ್ತು ವಾಸ್ತುಶಿಲ್ಪದ ಅದ್ಭುತಗಳ ಸಾರಾಂಶವಾಗಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವೂ ಒಂದು. ಭಗವಾನ್ ವಿಷ್ಣುವಿನ ರಂಗನಾಥ ಅವತಾರದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣವು ತನ್ನ ಸಂಕೀರ್ಣವಾದ ಕೆತ್ತನೆಗಳು, ಎತ್ತರದ ಗೋಪುರಗಳು ಮತ್ತು ಪವಿತ್ರ ತೊಟ್ಟಿಗಳಿಂದ ಭಕ್ತರನ್ನು ಮೋಡಿಮಾಡುತ್ತದೆ. ಇಲ್ಲಿನ ವಿಸ್ಮಯಕಾರಿ ರಚನೆಗಳ ಮಧ್ಯೆ ದಂಪತಿ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮನ್ನು ತಾವು ನೆನೆಯಬಹುದು.


ರಾಕ್‌ಫೋರ್ಟ್ ಟೆಂಪಲ್

ತಪ್ಪಿಸಿಕೊಳ್ಳಬಾರದ ಮತ್ತೊಂದು ದೇವಾಲಯ ರಾಕ್‌ಫೋರ್ಟ್ ಟೆಂಪಲ್. ನಗರದ ಮೇಲೆ ಪಕ್ಷಿನೋಟವನ್ನು ನೀಡುವ ಬೃಹತ್ ಬಂಡೆಯ ಮೇಲೆ ಕುಳಿತಿರುವ ಈ ದೇಗುಲ 437 ಕಲ್ಲು ಮೆಟ್ಟಿಲುಗಳನ್ನು ಒಟ್ಟಿಗೆ ಹತ್ತುವುದು ಪ್ರೀತಿಯ ಸಂಬಂಧವನ್ನು ಪರೀಕ್ಷಿಸುತ್ತದೆ; ಅಕ್ಕಪಕ್ಕದಲ್ಲಿ ಸವಾಲುಗಳನ್ನು ಎದುರಿಸುವ ಮೂಲಕ ದಂಪತಿ ತಮ್ಮ ಸಂಬಂಧವನ್ನು ಬಲಪಡಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ಅವರ ಉತ್ತುಂಗದಲ್ಲಿ ಗಣಪತಿ ಮತ್ತು ನಟರಾಜನಿಗೆ ಸಮರ್ಪಿತವಾದ ಪ್ರಾಚೀನ ಪಲ್ಲವ-ಯುಗದ ದೇವಾಲಯಗಳಿವೆ. ಅಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ಜೀವನದಲ್ಲಿ ಶಾಂತಿಗಾಗಿ ಪ್ರಾರ್ಥಿಸಬಹುದು.

ಕಾವೇರಿ ನದಿ ತೀರ

ಕಾವೇರಿ ನದಿಯ ದಡವು ರಮಣೀಯ ಸೌಂದರ್ಯದೊಂದಿಗೆ ಶಾಂತಿಯನ್ನು ನೀಡುತ್ತದೆ. ಗದ್ದಲದ ಸ್ಥಳಗಳಿಂದ ಸ್ವಲ್ಪ ದೂರವಾಗಿ ಶಾಂತತೆವಾಗಿ ಪ್ರಕೃತಿಯ ಮಧ್ಯೆ ಸುತ್ತಲು ಬಯಸಿದರೆ ಈ ತೀರದಲ್ಲಿ ನಿಧಾನವಾಗಿ ನಡೆಯಿರಿ. ದಂಪತಿ ಮೌನವಾಗಿ ದೋಣಿ ವಿಹಾರಕ್ಕೆ ಹೋಗಬಹುದು ಅಥವಾ ನದಿಯ ಪಕ್ಕದಲ್ಲಿ ಹಾಕಲಾದ ಬೆಂಚುಗಳ ಮೇಲೆ ಕುಳಿತುಕೊಳ್ಳಬಹುದು. ದೂರದ ಪರ್ವತಗಳ ಹಿಂದೆ ಸೂರ್ಯ ಮುಳುಗಿದ ಅನಂತರ ಕಿತ್ತಳೆ ಬಣ್ಣದ ಆಕಾಶವನ್ನು ವೀಕ್ಷಿಸಬಹುದು.


ಪಾಕಶಾಲೆ

ರೊಮ್ಯಾಂಟಿಕ್ ಗೆಟ್‌ವೇಗಳ ವಿಷಯಕ್ಕೆ ಬಂದಾಗ ಸ್ಥಳೀಯ ಆಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರುವುದು ಹೇಗೆ? ತಿರುಚಿ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಸಾಂಪ್ರದಾಯಿಕ ತಮಿಳುನಾಡಿನ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಾಕಪದ್ಧತಿಗಳವರೆಗೆ ರೆಸ್ಟೋರೆಂಟ್‌ಗಳು ಇಲ್ಲಿ ವಿಭಿನ್ನ ರುಚಿ ಮೊಗ್ಗುಗಳನ್ನು ಪೂರೈಸುತ್ತವೆ. ದಂಪತಿಗಳು ಸ್ಥಳೀಯ ತಿನಿಸುಗಳಲ್ಲಿ ದೋಸೆ, ಇಡ್ಲಿ ಮತ್ತು ಬಿರಿಯಾನಿಯನ್ನು ಪ್ರಯತ್ನಿಸಬೇಕು ಅಥವಾ ನದಿಯ ನೋಟವನ್ನು ಆನಂದಿಸುತ್ತಿರುವಾಗ ಉನ್ನತ ಮಟ್ಟದ ರೆಸ್ಟೋರೆಂಟ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಬಹುದು.

ಸಾಂಸ್ಕೃತಿಕ ಪ್ರದರ್ಶನ

ಸಂಸ್ಕೃತಿಗೆ ಹತ್ತಿರವಾಗುವುದು ನಿಮ್ಮ ಪ್ರೀತಿಪಾತ್ರರೊಂದಿಗಿನ ಯಾವುದೇ ಪ್ರವಾಸದ ಪ್ರಮುಖ ಭಾಗವಾಗಿದೆ ಮತ್ತು ಈ ನಿಟ್ಟಿನಲ್ಲಿ ತಿರುಚಿಯು ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಪ್ರದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಶಾಸ್ತ್ರೀಯ ಸಂಗೀತ ಕಛೇರಿಗಳು ಮತ್ತು ನೃತ್ಯ ಕಾರ್ಯಕ್ರಮಗಳಿಗೆ ಹಾಜರಾಗಿ ಅಥವಾ ಪ್ರದೇಶದ ವಿಶಿಷ್ಟವಾದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ರೋಮಾಂಚಕ ಮಾರುಕಟ್ಟೆಗಳಿಗೆ ಭೇಟಿ ನೀಡಿ. ಯಾಕೆಂದರೆ ಮನೆಗೆ ಮರಳಿದ ಸ್ಮಾರಕಗಳು ಶಾಶ್ವತವಾಗಿ ಹತ್ತಿರದಲ್ಲಿ ಉಳಿಯುತ್ತವೆ. ಮಸಾಲೆಯುಕ್ತ ಗಾಳಿಯ ನಡುವೆ ಕೈ- ಕೈ ಹಿಡಿದು ಬಿಡುವಿಲ್ಲದ ಬೀದಿಗಳಲ್ಲಿ ನಡೆಯುವುದು ದಂಪತಿ ಹೃದಯದಲ್ಲಿ ದೀರ್ಘಕಾಲ ಬದುಕುವ ನೆನಪುಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ಪ್ರಕೃತಿಯ ನಡುವೆ ಒಂದಷ್ಟು ಹೊತ್ತು

ನಮ್ಮ ರಜಾದಿನಗಳಲ್ಲಿ ಬೇಕಾಗಿರುವುದು ಶಾಂತಿ. ನಗರಗಳು ಕೆಲವೊಮ್ಮೆ ನಮ್ಮನ್ನು ಬ್ಯುಸಿಯಾಗಿರುವಂತೆ ಮಾಡುತ್ತದೆ. ಆದ್ದರಿಂದ ತಿರುಚ್ಚಿಗೆ ಬಂದರೆ ಹೊರವಲಯವನ್ನು ನೋಡಬೇಡಿ. ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಪ್ರಶಾಂತ ವಾತಾವರಣವನ್ನು ನೋಡಿ. ಜಲಪಾತಗಳ ಶಬ್ದಗಳನ್ನು ಕಿವಿಕೊಟ್ಟು ಆಲಿಸಿ. ದಂಪತಿಗಳು ಪರಸ್ಪರ ಜೊತೆಯಾಗಿ ಪ್ರಕೃತಿಯೊಂದಿಗೆ ಇರಲು ಇದಕ್ಕಿಂತ ಹೆಚ್ಚು ನೆಮ್ಮದಿಯ ತಾಣ ಬೇರೆ ಇರಲಾರದು ಎಂದೆನಿಸಿದರೆ ತಪ್ಪಿಲ್ಲ.

Continue Reading

ಪ್ರವಾಸ

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಭಾರತೀಯರು ರಷ್ಯಾಕ್ಕೆ ವೀಸಾ ಇಲ್ಲದೇ (Russia Tourism) ತೆರಳಬಹುದು. ಈ ಕುರಿತು ಮಾತುಕತೆ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ರಷ್ಯಾ ಮತ್ತು ಭಾರತವು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯದ ಮೂಲಕ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

By

Russia Tourism
Koo

ವಿಶ್ವವನ್ನು ಸುತ್ತಬೇಕು (world tour) ಎನ್ನುವ ಆಸೆ ಉಳ್ಳ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು (indians) ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ (Russia Tourism) ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯಾಣದ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಯೋಜನೆ ರೂಪಿಸುತ್ತಿವೆ.

ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮಾನದಂಡಗಳನ್ನು ಅಂತಿಮಗೊಳಿಸಲು ಸಮಾಲೋಚನೆಗಳನ್ನು ಜೂನ್‌ ನಿಂದ ಪ್ರಾರಂಭಿಸಲಿದೆ. ವೀಸಾ ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸಿದ ಅನಂತರ ಭಾರತೀಯರು ರಷ್ಯಾಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕಿ ನಿಕಿತಾ ಕೊಂಡ್ರಾಟ್ಯೆವ್, ಭಾರತವು ಆಂತರಿಕ ರಾಜ್ಯ ಸಮನ್ವಯದ ಅಂತಿಮ ಹಂತದಲ್ಲಿದೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.

ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

ರಷ್ಯಾ ಮತ್ತು ಭಾರತದ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಜೂನ್‌ನಲ್ಲಿ ಪ್ರಯಾಣವನ್ನು ಸರಾಗಗೊಳಿಸುವ ದ್ವಿಪಕ್ಷೀಯ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಸಮಾಲೋಚನೆಗಳನ್ನು ಪ್ರಾರಂಭಿಸುತ್ತವೆ. ಅಂತಿಮಗೊಳಿಸುವಿಕೆಯ ಅನಂತರ ರಷ್ಯಾ ಮತ್ತು ಭಾರತವು ಒಟ್ಟಾಗಿ ವೀಸಾ- ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸುತ್ತದೆ ಎಂದು ರಷ್ಯಾದ ಸಚಿವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಯಾವಾಗ ಸಾಧ್ಯವಾಗುತ್ತದೆ?

ಕಜಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ “ರಷ್ಯಾ- ಇಸ್ಲಾಮಿಕ್ ವರ್ಲ್ಡ್: ಕಜಾನ್‌ಫೋರಮ್ 2024” ಭಾಗದಲ್ಲಿ ಸಚಿವರು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

“ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವಂತೆ ರಷ್ಯಾ ಮತ್ತು ಭಾರತವು ತಮ್ಮ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ಸಜ್ಜಾಗಿದೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಸುತ್ತಿನ ಸಮಾಲೋಚನೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ. ಇದು ದ್ವಿಪಕ್ಷೀಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಯಾರಿಗಿದೆ ಅವಕಾಶ?

ರಷ್ಯಾ ಈಗ ಚೀನಾ ಮತ್ತು ಇರಾನ್‌ನ ಜನರಿಗೆ ತನ್ನ ವೀಸಾ ಮುಕ್ತ ಪ್ರವಾಸಿ ವಿನಿಮಯ ಕಾರ್ಯಕ್ರಮದ ಮೂಲಕ ವೀಸಾ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುತ್ತದೆ. ಸಚಿವರ ಪ್ರಕಾರ, ಕಾರ್ಯಕ್ರಮದ ಯಶಸ್ಸನ್ನು ಭಾರತದೊಂದಿಗೆ ಪುನರಾವರ್ತಿಸುವ ಗುರಿಯನ್ನು ದೇಶ ಹೊಂದಿದೆ. ರಷ್ಯಾ ಮತ್ತು ಚೀನಾ ನಡುವೆ ಮತ್ತು ರಷ್ಯಾ ಮತ್ತು ಇರಾನ್ ನಡುವೆ ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯವು 2023ರ ಆಗಸ್ಟ್ 1ರಂದು ಪ್ರಾರಂಭವಾಯಿತು.

Continue Reading
Advertisement
Prajwal Revanna Case HD Revanna visit to Gangapur and special pooja to Dattatreya
ಕಲಬುರಗಿ7 mins ago

Prajwal Revanna Case: ಗಾಣಗಾಪುರಕ್ಕೆ ಎಚ್‌ಡಿ ರೇವಣ್ಣ ಭೇಟಿ; ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ

Ration Card Officials who gave new ration card to poor Family
ವಿಜಯನಗರ14 mins ago

Ration Card : ಸಾವಿನ ಎಡವಟ್ಟು ಸರಿಪಡಿಸಿದ ಆಹಾರ ಇಲಾಖೆ! ಮನೆ ಬಾಗಿಲಿಗೆ ಬಂತು ರೇಷನ್‌ ಕಾರ್ಡ್‌; ಇದು ವಿಸ್ತಾರ ನ್ಯೂಸ್‌ ಇಂಪ್ಯಾಕ್ಟ್‌

Aadhaar Card Fact Check
ವೈರಲ್ ನ್ಯೂಸ್27 mins ago

Aadhaar Card Fact Check: 10 ವರ್ಷಗಳ ಹಿಂದಿನ ಆಧಾರ್ ಕಾರ್ಡ್‌ ಜೂ. 14ರ ಬಳಿಕ ರದ್ದಾಗುತ್ತದೆಯೆ?

cm siddaramaiah meet
ಪ್ರಮುಖ ಸುದ್ದಿ34 mins ago

CM Siddaramaiah: ಕಾಲರಾ ಕಂಡು ಬಂದರೆ ಅಧಿಕಾರಿಗಳು ಸಸ್ಪೆಂಡ್‌; ಸಿಎಂ ಖಡಕ್‌ ವಾರ್ನಿಂಗ್

Job Alert
ಉದ್ಯೋಗ40 mins ago

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

SRH vs RR
ಕ್ರೀಡೆ47 mins ago

SRH vs RR: ರಾಜಸ್ಥಾನ್​-ಹೈದರಾಬಾದ್​ ಐಪಿಎಲ್​ ದಾಖಲೆ, ಹವಾಮಾನ ವರದಿ ಹೇಗಿದೆ?

Self Harming
ಚಿಕ್ಕೋಡಿ49 mins ago

Self Harming : ಮದುವೆಗೆ ವಧು ಸಿಕ್ಕಿಲ್ಲವೆಂದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Viral Video
ವೈರಲ್ ನ್ಯೂಸ್58 mins ago

Viral Video: ವಿವಾಹ ಮಂಟಪದಲ್ಲಿ ನಾಗವಲ್ಲಿ ಅವತಾರ ತಾಳಿದ ವಧು; ವರ ಈಗ ಕೋಮಾದಲ್ಲಿದ್ದಾನೆ ಎಂದ ನೆಟ್ಟಿಗರು

ರಾಜಕೀಯ1 hour ago

Diplomatic passport: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

Weather Report
ದೇಶ1 hour ago

Weather Updates: ಬಿಸಿಗಾಳಿ ಶಾಖಕ್ಕೆ ಕುಲುಮೆಯಂತಾದ ಉತ್ತರ ಭಾರತ..ದಕ್ಷಿಣದಲ್ಲಿ ವರುಣಾರ್ಭಟ- ಕೇರಳದಲ್ಲಿ ನಾಲ್ವರ ದುರ್ಮರಣ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ9 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌