Monsoon Drive: ಡ್ರೈವಿಂಗ್‌ ಪ್ರಿಯರೇ, ಮಳೆಗಾಲದಲ್ಲಿ ಮರೆಯದೆ ಮಾಡಬೇಕಾದ ರೋಡ್‌ಟ್ರಿಪ್‌ಗಳಿವು! - Vistara News

ಪ್ರಮುಖ ಸುದ್ದಿ

Monsoon Drive: ಡ್ರೈವಿಂಗ್‌ ಪ್ರಿಯರೇ, ಮಳೆಗಾಲದಲ್ಲಿ ಮರೆಯದೆ ಮಾಡಬೇಕಾದ ರೋಡ್‌ಟ್ರಿಪ್‌ಗಳಿವು!

ಕರ್ನಾಟಕದ ತುಂಬ ಮಳೆಗಾಲದಲ್ಲಿ ಆನಂದವಾಗಿ ಡ್ರೈವ್‌ ಮಾಡಬಹುದಾದ ಸ್ವರ್ಗಸದೃಶ ಹಾದಿಗಳಿವೆ.  ಮಳೆಗಾಲದಲ್ಲೊಂದು ಇಂಥದ್ದೇ ಡ್ರೈವ್‌ ಮಾಡಬೇಕು, ಆ ದಾರಿಯೇ ಸ್ವರ್ಗದ ಹಾಗಿರಬೇಕು ಎಂದು ಬಯಸುವ ರೋಡ್‌ಟ್ರಿಪ್‌ ಪ್ರೇಮಿಗಳು ಮಳೆಗಾಲದಲ್ಲಿ ಮಾಡಲೇಬೇಕಾದ ಕೆಲವು ರೋಡ್‌ಟ್ರಿಪ್‌ಗಳು (monsoon drive) ಇಲ್ಲಿವೆ.

VISTARANEWS.COM


on

best monsoon drive roads in karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Monsoon Focus

ಬೇಸಗೆ ರಜೆ ಎಂದರೆ ಪ್ರವಾಸ ಎಂಬ ನಂಬಿಕೆ- ಆಚರಣೆಯೊಂದು ನಮ್ಮ ಜೀವನದ ಜೊತೆ ಮಿಳಿತವಾದರೂ, ಬೇಸಗೆಯಲ್ಲಿ ಹೋಗಿ ಬಂದ ಪ್ರವಾಸಕ್ಕಿಂತಲೂ ಮೈಮನಕ್ಕೆ ಖುಷಿ ನೀಡುವುದು ಮಳೆಗಾಲದ ಪಯಣಗಳು (Monsoon Drive). ಮಳೆಗಾಲದಲ್ಲಿ ಇಂಥದ್ದೇ ಒಂದು ಜಾಗಕ್ಕೆ ಎಂದು ಹೋಗುವ ಅವಶ್ಯಕತೆಯಿಲ್ಲ. ಹೋಗುವ ಜಾಗಕ್ಕಿಂತ ಕ್ರಮಿಸುವ ಹಾದಿಯ ನೆನಪುಗಳೇ ಇಲ್ಲಿ ನಮಗೆ ಜೀವನ ಪರ್ಯಂತ ಮಧುರಾನುಭೂತಿಯಂತೆ ಇರುತ್ತದೆ. ಅದಕ್ಕಾಗಿಯೇ ಮಳೆಗಾಲಕ್ಕೊಂದು ಪಯಣ (monsoon ride) ಅತ್ಯಗತ್ಯ. ಬೇಸಿಗೆಯಲ್ಲಿ ಬೆಂದ ಮೈಮನವನ್ನು ಜೀವನಪ್ರೀತಿಯೆಡೆಗೆ ಕೊಂಡೊಯ್ಯಲು ಇಂಥದ್ದೊಂದು ಪಯಣ ಸಾಕು. ʻಧೋ..ʼ ಎಂದು ಸುರಿವ ಮಳೆಯಲ್ಲಿ, ಕಿಟಕಿಗೆ ತಲೆಯಾನಿಸಿಕೊಂಡು ʻಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ…ʼ ಎಂದು ಹಾಡುತ್ತಲೋ, ʻಭೀಗೀ ಭೀಗೀ ರಾತೋಂ ಮೇ…ʼ ಅಂತಲೋ ಅಥವಾ ʻರಿಮ್ ಜಿಮ್‌ ಗಿರೆ ಸಾವನ್‌..‌ʼ ಅಂತಲೋ ಹಾಡು ಕೇಳುತ್ತಾ ಜೊತೆಯಾಗಿ ಗುನುಗುತ್ತಾ ಸ್ಟೇರಿಂಗ್‌ ತಿರುಗಿಸುತ್ತಾ ಡ್ರೈವ್‌ ಮಾಡುತ್ತಾ ಸಾಗುವುದೇ ಮಜಾ!

ಕರ್ನಾಟಕದೊಳಗೆ ಹಾಗೂ ಹೊರಗೆ ಇಂಥ ರೋಡ್‌ಟ್ರಿಪ್‌ಗಳಿಗೇನೂ ಕೊರತೆಯಿಲ್ಲ. ಮೂಡಿಗೆರೆ, ಶೃಂಗೇರಿ, ಕಳಸದ ಹಾದಿ, ಚಾರ್ಮಾಡಿ ಘಾಟ್‌ ರಸ್ತೆ, ಕಾರವಾರ, ಮುರುಡೇಶ್ವರದ ಸುತ್ತ, ಶಿರಸಿಯ ಆಸುಪಾಸು, ದಾಂಡೇಲಿಯ ಕಡೆ, ಮಡಿಕೇರಿಯ ತಿರುವುಗಳು ಹೀಗೆ ಕರ್ನಾಟಕದ ತುಂಬ ಮಳೆಗಾಲದಲ್ಲಿ ಆನಂದವಾಗಿ ಡ್ರೈವ್‌ ಮಾಡಬಹುದಾದ ಸ್ವರ್ಗಸದೃಶ ಹಾದಿಗಳಿವೆ.  ಮಳೆಗಾಲದಲ್ಲೊಂದು ಇಂಥದ್ದೇ ಡ್ರೈವ್‌ ಮಾಡಬೇಕು, ಆ ದಾರಿಯೇ ಸ್ವರ್ಗದ ಹಾಗಿರಬೇಕು ಎಂದು ಬಯಸುವ ರೋಡ್‌ಟ್ರಿಪ್‌ ಪ್ರೇಮಿಗಳು ಮಳೆಗಾಲದಲ್ಲಿ ಮಾಡಲೇಬೇಕಾದ ಕೆಲವು ರೋಡ್‌ಟ್ರಿಪ್‌ಗಳು ಇಲ್ಲಿವೆ.

1. ಬೆಂಗಳೂರಿಂದ ಸಕಲೇಶಪುರ: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಸಕಲೇಶಪುರ ಸುತ್ತಮುತ್ತಲ ಜಾಗಗಳಿಗೆ ಡ್ರೈವ್‌ ಹೋಗುವುದು ಒಂದು ಅದ್ಭುತ ಅನುಭವ. ಶಿರಾಢಿ ಘಾಟ್‌ನಲ್ಲಿ ಮಳೆಯಲ್ಲಿ ಡ್ರೈವ್‌ ಮಾಡುತ್ತಾ, ಕಾಫಿ ಎಸ್ಟೇಟ್‌ಗಳಲ್ಲಿ ಹನಿ ತೊಟ್ಟಿಕ್ಕುವುದನ್ನು ನೋಡುತ್ತಾ, ಕೆಂಪುಹೊಳೆಯಲ್ಲಿ ನೀರು ಕೆಂಪಾಗಿ ಹರಿಯುವ ಸೊಬಗನ್ನು ಕಣುಂಬಿಕೊಳ್ಳುತ್ತಾ, ಮೋಡಗಳು ಕೈಗೆಟಕುವಂತೆ ಮರಗಳೆಡೆಯಲ್ಲಿ ಸಾಗುವುದನ್ನು ನೋಡುವುದೇ ಸೊಗಸು. ಸಕಲೇಶಪುರದ ಬಳಿಯ ಮಂಜರಾಬಾದ್‌ ಕೋಟೆಯನ್ನು ಸಿನಿಮಾದಲ್ಲಷ್ಟೇ ಅಲ್ಲ, ಸಿನಿಮಾದಲ್ಲಿ ಕಂಡಂತೆ ಹಸಿರಸಿರಾಗಿ ಕಣ್ತುಂಬಿಕೊಂಡು ನೀವು ವಾಪಾಸಾಗಬಹುದು. ಎರಡು ಮೂರು ದಿನಗಳಿದ್ದರೆ ಸಾಕು, ಈ ಡ್ರೈವ್‌ ಅದ್ಭುತ ಅನುಭವವಾಗಬಹುದು.

sakaleshpur in rain

2. ಬೆಂಗಳೂರಿನಿಂದ ಹೋರ್ಸ್ಲೆ ಹಿಲ್ಸ್‌: ವೀಕೆಂಡ್‌ ಬಿಟ್ಟರೆ ನಮಗೆ ಪುರುಸೊತ್ತಿಲ್ಲ ಎಂದು ಕೈಚೆಲ್ಲುವ ಜೀವಗಳಿಗೆ ಹೇಳಿ ಮಾಡಿಸಿದ ರೋಡ್‌ಟ್ರಿಪ್‌ ಇದು. ಆಂದ್ರಪ್ರದೇಶದಲ್ಲಿದ್ದರೂ ಬೆಂಗಳೂರಿನಿಂದ 144 ಕಿಮೀ ದೂರದಲ್ಲಿರುವ ಇದೊಂದು ಚೆಂದನೆಯ ಊರು. ಅಷ್ಟಾಗಿ ಪ್ರವಾಸಿಗರಿಂದ ಕಿಕ್ಕಿರಿಯದ, ಬೆಟ್ದ ತುದಿಯಲ್ಲಿ ನಿಂತರೆ ಚಂದನೆಯ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗ. ಮಳೆಗಾಲದಲ್ಲಿ ಹಸಿರಸಿರಾಗಿ ಕಂಗೊಳಿಸುವ ಇಲ್ಲಿಗೆ ಡ್ರೈವ್‌ ಮಾಡುವುದು ರಿಲ್ಯಾಕ್ಸಿಂಗ್‌ ಅನುಭವವಾಗಬಹುದು.

horsely hills in rain

3. ಬೆಂಗಳೂರಿನಿಂದ ಆಗುಂಬೆ, ಕುಂದಾದ್ರಿ: ಮಳೆಗಾಲದಲ್ಲಿ ಆಗುಂಬೆ ನೋಡದಿದ್ದರೆ ಕರ್ನಾಟಕದಲ್ಲಿದ್ದೂ ಏನು ಪ್ರಯೋಜನ. ಜೀವನದಲ್ಲಿ ಒಮ್ಮೆಯಾದರೂ ಆಗುಂಬೆಯನ್ನು, ಆಗುಂಬೆಯ ದಾರಿಯನ್ನು ಅಕ್ಷರಶಃ ಅನುಭವಿಸಬೇಕು ಎಂದರೆ, ಆಗುಂಬೆಯ ಕಡೆಗೆ ಡ್ರೈವ್‌ ಮಾಡಿ. ಕುಂದಾದ್ರಿ, ಕುಪ್ಪಳ್ಳಿ, ಕೊಲ್ಲೂರು, ವಿಶ್ವವಿಖ್ಯಾತ ಜೋಗ ಜಲಪಾತ, ಶರಾವತಿ ಹಿನ್ನೀರು ಇತ್ಯಾದಿ ಇತ್ಯಾದಿ ಸಾಕಷ್ಟು ತಾಣಗಳು ನಿಮ್ಮನ್ನು ಕರೆಯಬಹುದು. ಈ ಎಲ್ಲ ತಾಣಗಳಿಗೆ ಹೋಗುವುದೇ ಒಂದು ಅನುಭವ.

kundadri in rain

4. ಬೆಂಗಳೂರಿನಿಂದ ವಾಲ್ಪರೈ: ತಮಿಳುನಾಡಿನ ಕೊಯಂಬತ್ತೂರಿನ ಬಳಿ ಇರುವ ವಾಲ್ಪರೈ ಅದ್ಭುತ ತಾಣ. ಇದಕ್ಕೆ ಹೋಗುವ ರಸ್ತೆಯೂ ಸ್ವರ್ಗದ ಹಾದಿಯೇ. ನಿಮ್ಮ ಬಳಿ ಸುಮಾರು ನಾಲ್ಕೈದು ದಿನವಾದರೂ ಇದ್ದರೆ ಸುಮಾರು 460 ಕಿಮೀ ದೂರದಲ್ಲಿರುವ ವಾಲ್ಪರೈಗೆ ಹೋಗಿ ಬರಬಹುದು. ಹಸಿರು ಹಸಿರಾದ ದಟ್ಟ ಕಾನನ, ಮಂಜು ಕವಿದ ಬೆಟ್ಟಗಳು, ಚಹಾ ತೋಟಗಳು ಕಣ್ಣಿಗೆ ಹಬ್ಬ.

hill stations of south india in rain

5. ಮಾಲ್ಶೇಜ್‌ ಘಾಟ್‌, ಮಹಾರಾಷ್ಟ್ರ: ಮಳೆ ಪ್ರೇಮಿಯಾಗಿದ್ದುಕೊಂಡು ಡ್ರೈವಿಂಗ್‌ ಪ್ರಿಯರೂ ನೀವಾಗಿದ್ದರೆ ನಿಮ್ಮ ಬಳಿ ಒಂದಿಷ್ಟು ದಿನಗಳೂ ಇವೆ ಎಂದಾದಲ್ಲಿ ಮರೆಯಲೇಬಾರದ ಜಾಗವೊಂದಿದೆ. ಅದು ಮಾಲ್ಶೇಜ್‌ ಘಾಟ್‌. ಮಳೆಗಾಲದಲ್ಲಿ ಮಾಲ್ಶೇಜ್‌ ಘಾಟ್‌ ಅಕ್ಷರಶಃ ಸ್ವರ್ಗವಾಗಿಬಿಡುತ್ತದೆ. ಎಲ್ಲಿ ನೋಡಿದರೂ ಸುರಿವ ಜಲಪಾತಗಳು, ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿ, ಮಂಜಿನೊಂದಿಗೆ ಕಣ್ಣಮುಚ್ಚಾಲೆಯಾಡುವ ಇಲ್ಲಿ ಪ್ರತಿಯೊಬ್ಬ ಭಾವಜೀವಿಯೂ ಕವಿಯಾಗಬಹುದು. ಮುಂಬೈಯಿಂದ 126 ಕಿಮೀ ದೂರದಲ್ಲಿರುವ ಇದು ಬೆಂಗಳೂರಿನಿಂದ 940 ಕಿಮೀ ದೂರದಲ್ಲಿದೆ. ಹಾಗಾಗಿ ಸಮಯ ಹಾಗೂ ಕಸುವು ಎರಡೂ ಇದ್ದವರು ಇದಕ್ಕೂ ರೋಡ್‌ ಟ್ರಿಪ್‌ ಮಾಡಬಹುದು!

ಇದನ್ನೂ ಓದಿ: Home Remedies For Monsoon: ಮಳೆಗಾಲದ ಕಿರಿಕಿರಿಗೆ ಇಲ್ಲಿದೆ ಉಪಯುಕ್ತ ಮನೆಮದ್ದು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

Hassan Pen Drive Case: PSI, AE ಹೀಗೆ ವಿಡಿಯೋದಲ್ಲಿರುವ ಸುಮಾರು ಅರ್ಧದಷ್ಟು ಮಹಿಳೆಯರು ಸರ್ಕಾರಿ ಮಹಿಳಾ ಅಧಿಕಾರಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರೊಂದಿಗೆ ಕೆಲಸ ಕೊಡಿಸುವ, ವರ್ಗಾವಣೆ ವಿಚಾರದಲ್ಲೂ ಈ ದಂಧೆ ಭಾಗಿಯಾಗಿರಬಹುದು ಎಂಬ ವ್ಯಾಪಕ ಅನುಮಾನ ವ್ಯಕ್ತವಾಗಿದೆ.

VISTARANEWS.COM


on

Hassan Pen Drive Case
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ 18 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಯಿದ್ದು, ವಿಡಿಯೋದಲ್ಲಿರುವ ಮಹಿಳೆಯರ ತನಿಖೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ವಿಶೇಷ ತನಿಖಾ ತಂಡದಿಂದ ತನಿಖೆ ಚುರುಕಾಗುತ್ತಿದ್ದು, ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ಟೀಂ ಮಾಡಲಾಗಿದೆ. ಇನ್‌ಸ್ಪೆಪಕ್ಟರ್ ಸೇರಿ ನಾಲ್ವರ ಪ್ರತ್ಯೇಕ ತಂಡದಿಂದ ವಿಡಿಯೋ ಪರಿಶೀಲನೆ ಮಾಡಲಾಗುತ್ತಿದೆ. ಪೆನ್ ಡ್ರೈವ್‌ನಲ್ಲಿರುವ ಅಷ್ಟೂ ವಿಡಿಯೋ ಪರಿಶೀಲನೆ ಮಾಡಿ ಎಸ್ಐಟಿ ಮುಖ್ಯಸ್ಥರಿಗೆ ತಂಡ ವರದಿ ಕೊಡಲಿದೆ. ವಿಶೇಷ ಎಂದರೆ, ಪ್ರಾಥಮಿಕ ವರದಿಗಳ ಪ್ರಕಾರ, ವಿಡಿಯೋಗಳಲ್ಲಿರುವ ಮಹಿಳೆಯರಲ್ಲಿ ಬಹುತೇಕರು ಸರ್ಕಾರಿ ಅಧಿಕಾರಿಗಳು ಎಂಬ ಚಕಿತಗೊಳಿಸುವ ಅಂಶ ಬಯಲಾಗಿದೆ.

PSI, AE ಹೀಗೆ ವಿಡಿಯೋದಲ್ಲಿರುವ ಸುಮಾರು ಅರ್ಧದಷ್ಟು ಮಹಿಳೆಯರು ಸರ್ಕಾರಿ ಮಹಿಳಾ ಅಧಿಕಾರಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರೊಂದಿಗೆ ಕೆಲಸ ಕೊಡಿಸುವ, ವರ್ಗಾವಣೆ ವಿಚಾರದಲ್ಲೂ ಈ ದಂಧೆ ಭಾಗಿಯಾಗಿರಬಹುದು ಎಂಬ ವ್ಯಾಪಕ ಅನುಮಾನ ವ್ಯಕ್ತವಾಗಿದೆ.

18 ಸಿಬ್ಬಂದಿ ನೇಮಕ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತಂಡಕ್ಕೆ ಸಿಐಡಿಯಿಂದ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದ ‌ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರ ತಂಡ‌ವನ್ನು ರಚಿಸಲಾಗಿದ್ದು, ಇಂದಿನಿಂದಲೇ ಕಾರ್ಯಾಚರಣೆ ಆರಂಭ ಸಾಧ್ಯತೆ ಇದೆ.

ಎಸಿಪಿಗಳಾದ ಪ್ರಿಯದರ್ಶಿನಿ ಈಶ್ವರ್‌ ಸಾನಿಕೊಪ್ಪ, ಸತ್ಯನಾರಾಯಣ ಸಿಂಗ್‌, ಧನ್ಯ ಎನ್‌. ನಾಯ್ಕ್‌, ಪಿಐಗಳಾದ ಸುಮರಾಣಿ ಬಿ.ಎಸ್.‌, ಸ್ವರ್ಣ ಬಿ.ಎಸ್.‌, ಭಾರತಿ, ಹೇಮಂತ್‌ ಕುಮಾರ್‌, ರಾಜಾ ಜಿ.ಸಿ., ಪಿಎಸ್‌ಐಗಳಾದ ವೈಲೆಟ್‌ ಫ್ಲೆಮೀನಾ, ವಿನುತ, ನಂದೀಶ್‌, ಕುಮುದ, ಎಚ್‌ಸಿಗಳಾದ ಸುಮತಿ, ಮನೋಹರ, ಸುನೀಲ್‌ ಬೆಳವಲಗಿ, ಬಸವರಾಜ್‌ ಮೈಗೇರಿ, ಪಿಸಿಗಳಾದ ರಂಗಸ್ವಾಮಿ, ಸಿಂಧುರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಈ ನಡುವೆ ಡಿಜಿ ಅಲೋಕ್ ಮೋಹನ್ ಅವರು, “ಪ್ರಕರಣ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ವೈರಲ್ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಲಾಗಿದೆ. ಇನ್ನು ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ ಅಲ್ಲಿ ಎಲ್ಲಿದ್ದಾರೆ ಎಂಬ ಬಗ್ಗೆ ಎಂಬ ಬಗ್ಗೆ ಎಸ್‌ಐಟಿ ಮಾಹಿತಿಯನ್ನು ಕಲೆಹಾಕುತ್ತಿದೆ. ಹೀಗಾಗಿ ಅವಶ್ಯ ಬಿದ್ದರೆ ಪ್ರಜ್ವಲ್‌ ಇರುವಲ್ಲಿಗೆ ಹೋಗಿ ಕರೆತರಲು ಪ್ಲ್ಯಾನ್‌ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೆಲವು ತಂಡಗಳ ರಚನೆ

ತನಿಖೆ ನಡೆಸಲು ಕೆಲವು ತಂಡಗಳನ್ನು ರಚನೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಹೊಳೆನರಸೀಪುರ ನಗರ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ ಎಸ್‌ಐಟಿ ತಂಡವು ಮೊದಲಿಗೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಪ್ರಕರಣದ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದರೂ ಎಸ್ಐಟಿಗೆ ವರ್ಗಾವಣೆ ಆಗಲಿದೆ, ಹಾಗೆಯೇ ತನಿಖೆ ಭಾಗವಾಗಿ ವೈರಲ್ ವಿಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಎಸ್‌ಐಟಿ ಮುಂದಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಿದೆ.

ಕರೆದಾಗ ಬರುತ್ತಾನೆ: ರೇವಣ್ಣ

ಬೆಂಗಳೂರು: ನಾವೆಲ್ಲಾ ಇಲ್ಲೇ ಇದ್ದೇವೆ, ಎಲ್ಲೂ ಓಡಿ ಹೋಗಲ್ಲ. ಹಾಸನ ಪೆನ್‌ ಡ್ರೈವ್ ಪ್ರಕರಣದ (Hassan Pen Drive Case) ಬಗ್ಗೆ ಸದ್ಯ ನಾನು ಏನೂ ರಿಯಾಕ್ಟ್ ಮಾಡಲ್ಲ, ಕಾನೂನು ರೀತಿ ಪ್ರಕರಣವನ್ನು ನಾವು ಎದುರಿಸುತ್ತೇವೆ. ವಿಚಾರಣೆಗೆ ಕರೆದಾಗ ವಿದೇಶದಿಂದ ಪುತ್ರ ಬರುತ್ತಾನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಹಾಸನ ಸಂಸದ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ನಗರದಲ್ಲಿ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 4-5 ವರ್ಷದ ಹಿಂದೆ ಘಟನೆ ನಡೆದಿದೆ ಎಂದು ಈಗ ಕೇಸ್‌ ಹಾಕಿದ್ದಾರೆ. ಇದು ಯಾವ ತರಹದ್ದು ಎಂದು ಏನೂ ಮಾತನಾಡಲ್ಲ. ವಿಡಿಯೊ ಸೇರಿ ಯಾವುದರ ಬಗ್ಗೆಯೂ ಮಾತನಾಡಲ್ಲ ಎಂದು ತಿಳಿಸಿದ್ದಾರೆ.

ಪಕ್ಷದಿಂದ ಉಚ್ಚಾಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ನಿರ್ಧಾರ ಪಕ್ಷಕ್ಕೆ ಸೇರಿದ್ದು, ಎಸ್‌ಐಟಿ ರಚನೆ ಮಾಡಿರುವುದರಿಂದ ತನಿಖೆಗೆ ತೊಂದರೆ ಆಗಬಾರದೆಂದು ನಾನೇನೂ ಮಾತನಾಡಲ್ಲ. ಇದೆಲ್ಲಾ ರಾಜಕೀಯ. ಸರ್ಕಾರ ಅವರದು ಇದೆ, ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಕರಣದ ಬಗೆ ಕಾನೂನು ರೀತಿಯಲ್ಲಿ ತನಿಖೆ ಆಗಲಿ ಎಂದು ಹೇಳಿದ್ದಾರೆ.

ಪ್ರಜ್ವಲ್ ವಿದೇಶಕ್ಕೆ ಹೋಗಿರುವ ವಿಚಾರಕ್ಕೆ ಸ್ಪಂದಿಸಿ, ಚುನಾವಣೆ ಮುಗಿದ ನಂತರ ಅವನು ಹೋಗಿದ್ದಾನೆ. ಯಾವುದೋ ಕೆಲಸಕ್ಕಾಗಿ ಹೋಗ್ಬೇಕಿತ್ತು ಹೋಗಿದ್ದಾನೆ. ಇವರು ಎಫ್‌ಐಆರ್‌ ಹಾಕುತ್ತಾರೆ ಅಂತ ಗೊತ್ತಿತ್ತಾ? ಎಸ್‌ಐಟಿ ತನಿಖೆ ಮಾಡುತ್ತಾರೆ ಅಂತ ಗೊತ್ತಿತ್ತಾ? ವಿಚಾರಣೆಗೆ ಕರೆದಾಗ ಬರುತ್ತಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

Continue Reading

ಕ್ರೀಡೆ

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

Rohit Sharma Birthday: ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ.

VISTARANEWS.COM


on

Rohit Sharma Birthday
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ನಾಯಕ, ಹಿಟ್​ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್​ ಅವರ ಪೂರ್ಣ ಹೆಸರು ರೋಹಿತ್ ಗುರುನಾಥ್ ಶರ್ಮಾ. ಏಕದಿನ ಕ್ರಿಕೆಟ್​​ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ಇವರದ್ದು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರೋಹಿತ್​ಗೆ ಬಿಸಿಸಿಐ, ಮುಂಬೈ ಇಂಡಿಯನ್ಸ್​ ಸೇರಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ನವೆಂಬರ್ 2013 ರಲ್ಲಿ, ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ, ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ 3 ಮಾದರಿಯ ನಾಯಕರಾಗಿದ್ದಾರೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಎಲ್ಲ ಲೀಗ್​ ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಸಾರಥ್ಯದಲ್ಲೇ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್​ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

CET Exam: ಸರ್ಕಾರ ರಚಿಸಿದ್ದ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಸಿಇಟಿ ಮರುಪರೀಕ್ಷೆ ನಡೆಸದೇ ಇರಲು ಹಾಗೂ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

VISTARANEWS.COM


on

CET exam 2024
Koo

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET exam 2024) ಪಠ್ಯೇತರ ಪ್ರಶ್ನೆಗಳಿಂದ ಉಂಟಾಗಿದ್ದ ಗೊಂದಲವನ್ನು ಸರ್ಕಾರ ಪರಿಹರಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯುಜಿಸಿಇಟಿ -2024ರ ನಾಲ್ಕು ವಿಷಯದ ಪರೀಕ್ಷೆಗಳಿಗೆ ತಾತ್ಕಾಲಿಕ ಸರಿ ಉತ್ತರಗಳನ್ನು (Key Answers) ಪ್ರಕಟಿಸಿದೆ.

ಮೇ 7ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯದಿಂದ ಹೊರತಾದ 50 ಪ್ರಶ್ನೆಗಳನ್ನು ಕೇಳಿದ್ದು, ಇವುಗಳನ್ನು ಕೀ ಉತ್ತರದ ಪಟ್ಟಿಯಿಂದ ಕೈ ಬಿಡಲಾಗಿದೆ. ಉಳಿದ 190 ಪ್ರಶ್ನೆಗಳಿಗೆ ಕೀ ಉತ್ತರಗಳನ್ನು ಪ್ರಾಧಿಕಾರದ kea.kar.nic.in ವೆಬ್ಸೈಟ್‌ನನಲ್ಲಿ ಪ್ರಕಟಿಸಲಾಗಿದೆ. ಇವುಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಪ್ರಾಧಿಕಾರದ ಆನ್ಲೈನ್ ಪೋರ್ಟಲ್‌ ಮೂಲಕ ಏಪ್ರಿಲ್ 30ರಂದು ಬೆಳಗ್ಗೆ 11ರಿಂದ ಮೇ 7ರ ಬೆಳಗ್ಗೆ 11ರೊಳಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಈ ಮೂಲಕ ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿ ಉಂಟಾಗಿದ್ದ ಗೊಂದಲ, ಮರುಪರೀಕ್ಷೆಗಳ ಆತಂಕ ಬಗೆಹರಿದಿದೆ. ಸರ್ಕಾರ ರಚಿಸಿದ್ದ ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಸಿಇಟಿ ಮರುಪರೀಕ್ಷೆ ನಡೆಸದೇ ಇರಲು ಹಾಗೂ ತಪ್ಪಾದ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ವೇಳೆ ಇನ್ನು ಮುಂದೆ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಈ ರೀತಿಯ ಲೋಪಗಳಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಏ.18 ಮತ್ತು 19ರಂದು ನಡೆಸಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು.

ಇದನ್ನೂ ಓದಿ: CET Exam: ಸಿಇಟಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾರೀ ಗೊಂದಲ, ದೂರು ನೀಡಲು ಏ.27ರವರೆಗೆ ಕಾಲಾವಕಾಶ

Continue Reading

ಪ್ರಮುಖ ಸುದ್ದಿ

Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Covishield Vaccine: ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

VISTARANEWS.COM


on

Covishield Vaccine
Koo

ಹೊಸದಿಲ್ಲಿ: ಕೊರೊನಾ (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿದೆ. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿದೆ.

ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಪ್ರಕರಣದ ಮೊದಲ ದೂರುದಾರರಾದ ಜೇಮೀ ಸ್ಕಾಟ್ ಅವರು ಏಪ್ರಿಲ್ 2021ರಲ್ಲಿ ಲಸಿಕೆಯನ್ನು ಪಡೆದಿದ್ದೇನೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ನಂತರ ಶಾಶ್ವತ ಮಿದುಳಿನ ಗಾಯಕ್ಕೆ ಕಾರಣವಾಯಿತು. ಇದು ಮೆದುಳು ಚುರುಕಾಗಿರುವುದನ್ನು ತಡೆಯಿತು. ಆಸ್ಪತ್ರೆಯು ನಾನು ಸಾಯುತ್ತೇನೆ ಎಂದು ನನ್ನ ಹೆಂಡತಿಗೆ ಮೂರು ಬಾರಿ ಹೇಳಿದೆ ಎಂದು ಅವರು ಆರೋಪಿಸಿದ್ದಾರೆ.

ಅಸ್ಟ್ರಾಜೆನೆಕಾ ಈ ಪ್ರಕರಣಗಳನ್ನು ವಿರೋಧಿಸಿದೆ. ಆದರೆ ಫೆಬ್ರವರಿಯಲ್ಲಿ ನ್ಯಾಯಾಲಯದ ದಾಖಲೆಗಳಲ್ಲಿ ಒಂದರಲ್ಲಿ “ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು” ಎಂದು ಹೇಳಿದೆ. TTS (ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್) ಮಾನವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುತ್ತದೆ.

“AZ ಲಸಿಕೆಯು ಬಹಳ ಅಪರೂಪದ ಸಂದರ್ಭಗಳಲ್ಲಿ TTSಗೆ ಕಾರಣವಾಗಬಹುದು ಎಂದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ. ಇದಲ್ಲದೆ, AZ ಲಸಿಕೆ (ಅಥವಾ ಯಾವುದೇ ಲಸಿಕೆ) ಅನುಪಸ್ಥಿತಿಯಲ್ಲಿ TTS ಸಹ ಸಂಭವಿಸಬಹುದು. ಯಾವುದೇ ವ್ಯಕ್ತಿಯಲ್ಲಿ ಅಸ್ವಸ್ಥತೆಯ ಕಾರಣವನ್ನು ತಜ್ಞರು ನೀಡುವ ಪುರಾವೆಗಳಿಂದ ದೃಢೀಕರಿಸಬೇಕಿದೆ” ಎಂದು ಅಸ್ಟ್ರಾಜೆನೆಕಾ ಹೇಳಿದೆ.

ಅಸ್ಟ್ರಾಜೆನೆಕಾ ಸ್ಕಾಟ್ಲೆಂಡ್‌ನಲ್ಲಿ ಈ ಕೇಸುಗಳನ್ನು ಎದುರಿಸುತ್ತಿದೆ. ಸಂತ್ರಸ್ತರಿಗೆ ಅದು ಪಾವತಿ ಮಾಡಬೇಕಾಗಬಹುದು. ಇತ್ತೀಚಿನ ಕಂಪನಿಯ ನಿಲುವು 2023ರ ಅದರ ನಿಲುವಿಗೆ ವಿರುದ್ಧವಾಗಿದೆ. ಅದರಲ್ಲಿ ಜೇಮೀ ಸ್ಕಾಟ್ ಅವರ ವಕೀಲರಿಗೆ “ಟಿಟಿಎಸ್ ಸಾಮಾನ್ಯ ಮಟ್ಟದಲ್ಲಿ ಲಸಿಕೆಯಿಂದ ಉಂಟಾಗುತ್ತದೆ ಎಂದು ನಾವು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿತ್ತು. ಲಸಿಕೆಯು “ದೋಷಯುಕ್ತ” ಮತ್ತು ಅದರ ಪರಿಣಾಮಕಾರಿತ್ವವು “ಅಗಾಧವಾಗಿ ಅತಿಯಾಗಿ ಹೇಳಲ್ಪಟ್ಟಿದೆ” ಎಂಬ ವಕೀಲರ ಮಾತುಗಳನ್ನು ಅಸ್ಟ್ರಾಜೆನೆಕಾ ನಿರಾಕರಿಸಿದೆ.

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು.

ಇದನ್ನೂ ಓದಿ: Guarantee Scheme: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ಕೊಡಲೂ ಸರ್ಕಾರದಲ್ಲಿ ಹಣವಿಲ್ಲ?

Continue Reading
Advertisement
IPL 2024
ಕ್ರೀಡೆ21 mins ago

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

Hassan Pen Drive Case
ಪ್ರಮುಖ ಸುದ್ದಿ22 mins ago

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

T20 World Cup 2024
ಕ್ರೀಡೆ51 mins ago

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

Manipur Violence
ದೇಶ55 mins ago

Manipur Violence:ಮಹಿಳೆಯರ ವಿವಸ್ತ್ರ ಕೇಸ್‌; ಪೊಲೀಸರೆದುರೇ ನಡೆದಿತ್ತು ನೀಚ ಕೃತ್ಯ

taliban writing muniraju
ಕ್ರೈಂ1 hour ago

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

IPL 2024 Points Table
ಕ್ರೀಡೆ1 hour ago

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

Rohit Sharma Birthday
ಕ್ರೀಡೆ2 hours ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ2 hours ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Baba Ramdev
ದೇಶ2 hours ago

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

CET exam 2024
ಪ್ರಮುಖ ಸುದ್ದಿ2 hours ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ5 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202421 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202423 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌