Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು! - Vistara News

ಪ್ರಮುಖ ಸುದ್ದಿ

Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!

ರೋಮಾಂಚಕಾರೀ, ಅಷ್ಟೇ ಅಪಾಯಕಾರೀ ರಸ್ತೆಗಳು ಭಾರತದಲ್ಲೇನೂ ಕಡಿಮೆ ಸಂಖ್ಯೆಯಲ್ಲೇನಿಲ್ಲ. ಭಾರತದ ಇಂತಹ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸಲೆಂದೇ ಪ್ರವಾಸೀ ಪ್ರಿಯರು ನಮ್ಮ ದೇಶಕ್ಕೆ ಬರುತ್ತಾರೆ. ಇಲ್ಲಿನ ಅನುಭವ ಮೊಗೆದುಕೊಂಡು ಹೋಗುತ್ತಾರೆ. ಅಂತಹ ಅತ್ಯಂತ ಅಪಾಯಕಾರಿ ರಸ್ತೆ ಮಾರ್ಗಗಳ ವಿವರ ಇಲ್ಲಿದೆ.

VISTARANEWS.COM


on

zozila pass
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಹಸದಲ್ಲಿ ಆಸಕ್ತಿ ಇರುವ ಮಂದಿಗೆ, ಸಾಹಸೀ ಪ್ರವಾಸಗಳನ್ನು ಮಾಡುವ ಬಯಕೆಯುಳ್ಳ ಮಂದಿಗೆ ಯಾವತ್ತಿಗೂ ಸೆಳೆಯುವುದು ಬೈಕ್‌ ರೈಡ್‌. ಅದರಲ್ಲೂ, ಅತ್ಯಂತ ಅಪಾಯಕಾರೀ ರಸ್ತೆಗಳಲ್ಲಿ, ಎತ್ತರೆತ್ತರ ಪರ್ವತಗಳಲ್ಲಿ ಹಾವಿನಂತೆ ತೆವಳುವ ರಸ್ತೆಗಳಲ್ಲಿ ಬೈಕ್‌ ಚಲಾಯಿಸಿಕೊಂಡು ಹೋಗಿ ಜಾಗ ನೋಡಿ ಬರುವ ರೋಮಾಂಚಕಾರೀ ಪ್ರವಾಸದ ಕಲ್ಪನೆ ಮಾಡಿದೊಡನೆಯೇ ಮೈ ನವಿರೇಳುತ್ತದೆ. ಇಲ್ಲಿ ಹೋಗಿ ತಲುಪುವ ಜಾಗ ಅದ್ಭುತವಾಗಿರುವುದಕ್ಕಿಂತಲೂ ಹೋಗಿ ತಲುಪಿದ ರಸ್ತೆಯೇ ನೀಡುವ ಅನುಭವ ಬಹಳ ದೊಡ್ಡದು. ಇಂತಹ ರೋಮಾಂಚಕಾರೀ, ಅಷ್ಟೇ ಅಪಾಯಕಾರೀ ರಸ್ತೆಗಳು ಭಾರತದಲ್ಲೇನೂ ಕಡಿಮೆ ಸಂಖ್ಯೆಯಲ್ಲೇನಿಲ್ಲ. ಭಾರತದ ಇಂತಹ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸಲೆಂದೇ ಪ್ರವಾಸೀ ಪ್ರಿಯರು ನಮ್ಮ ದೇಶಕ್ಕೆ ಬರುತ್ತಾರೆ. ಇಲ್ಲಿನ ಅನುಭವ ಮೊಗೆದುಕೊಂಡು ಹೋಗುತ್ತಾರೆ. ಅಂತಹ ಅತ್ಯಂತ ಅಪಾಯಕಾರಿ ರಸ್ತೆ ಮಾರ್ಗಗಳ ವಿವರ ಇಲ್ಲಿದೆ. ಗುಂಡಿಗೆ ಗಟ್ಟಿ ಇರುವ ಪ್ರವಾಸೀ ಪ್ರಿಯರು ಬದುಕಿನಲ್ಲೊಮ್ಮೆ ಪ್ರಯಾಣ ಮಾಡಲೇಬೇಕಾದ ರಸ್ತೆಗಳಿವು.

kishtwar kailash

೧. ಕಿಶ್ತವಾರ್‌ ಕೈಲಾಶ್‌ ರಸ್ತೆ: ಜಮ್ಮು ಹಾಗೂ ಕಾಶ್ಮೀರದ ಕಿಶ್ತವಾರ್‌ ಜಿಲ್ಲೆಯಲ್ಲಿರುವ ಈ ರಸ್ತೆ ಭಾರತದ ಅತ್ಯಂತ ದುರ್ಗಮ ರಸ್ತೆಗಳಲ್ಲೊಂದು. ಸುಮಾರು ನೂರು ಕಿಮೀಗಳಿಗೂ ಹೆಚ್ಚು ಜಾಗ ಯಾವುದೇ ತಡೆಗೋಡೆಯೂ ಇಲ್ಲದೆ ಅತ್ಯಂತ ಸಪೂರವಾದ ರಸ್ತೆ. ಒಂದೇ ವಾಹನ ಒಮ್ಮೆ ಹೋಗಬಹುದಾದ, ತೆವಳಿಕೊಂಡೇ ಚಲಾಯಿಸುವ ಅನುಭವ ನೀಡುವ ರೋಮಾಂಚಕ ತಿರುವುಗಳ, ಸೀಟಿನ ತುದಿಯಲ್ಲಿ ನಮ್ಮನ್ನು ಕುಳ್ಳಿರಿಸುವ ತಾಕತ್ತು ಇರುವ ಮಾರ್ಗವಿದು. ಇಂತಹ ಸಾಹಸಗಳನ್ನೆಲ್ಲ ಮಾಡಿದರಷ್ಟೇ ಜೀವನ ಎಂಬ ಸಿದ್ಧಾಂತ ನಂಬುವ ಅನುಭವಿ ಡ್ರೈವರುಗಳಿಗಷ್ಟೇ ಈ ದಾರಿ!

khardungla pass

೨. ಖರ್ದುಂಗ್ಲಾ ಪಾಸ್‌: ಭಾರತ ಮತ್ತು ಚೀನಾದ ಸಿಲ್ಕ್‌ ರೂಟ್‌ ಎಂದೇ ಪ್ರಸಿದ್ಧವಾದ ಖರ್ದುಂಗ್ಲಾ ರಸ್ತೆ ಮೈಜುಂ ಎನಿಸುವ ಪ್ರಯಾಣದ ಅನುಭವ ನೀಡಬಲ್ಲುದು. ಬೈಕ್‌ ರೈಡಿಂಗ್‌ನಲ್ಲಿ ಆಸ್ತಿ ಇರುವ ಸಾಹಸೀ ಮನೋಭಾವದ ಮಂದಿ ಜೀವನದಲ್ಲೊಮ್ಮೆ ಪಡೆಯಲೇಬೇಕಾದ ಅನುಭವವಿದು. ಇದು ಲಡಾಕ್‌ನಿಂದ ನುಬ್ರಾ ಕಣಿವೆಗೆ ಪ್ರವೇಶ ಒದಗಿಸುವ ಮಾರ್ಗ. ಅಕ್ಟೋಬರ್‌ ತಿಂಗಳಿಂದ ಮೇ ತಿಂಗಳವರೆಗೆ ಇದು ಹಿಮದಿಂದ ಮುಚ್ಚಿಹೋಗುವ ದಾರಿ.

kinnnaur

೩. ಕಿನೌರ್‌ ರಸ್ತೆ: ಹಿಮಾಚಲ ಪ್ರದೇಶದಲ್ಲಿರು ಕಿನ್ನೌರ್‌ ಪ್ರಾಂತ್ಯಕ್ಕೆ ಪ್ರವೇಶ ಒದಗಿಸುವ ದುರ್ಗಮ ರಸ್ತೆ. ಕಡಿದಾದ ಪರ್ವತಗಳ ನಡುವೆ, ಎಚ್ಚರ ತಪ್ಪಿದರೆ ಕಣಿವೆಯ ಭಾರೀ ಕಂದಕಗಳಿಗೆ ಉರುಳುವ ಅಪಾಯವುಳ್ಳ ಅತ್ಯಂತ ಕಿರಿದಾದ ರಸ್ತೆಯಿದು. ಬಂಡೆಗಳನ್ನೇ ಕೊರೆದು ಮಾಡಿರುವ ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಮಾತ್ರ ಗುಂಡಿಗೆ ಗಟ್ಟಿ ಇರಬೇಕು.

ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

೪. ಜೋಝಿಲಾ ಪಾಸ್‌: ಒಂದರೆಕ್ಷಣ ಎಚ್ಚರ ತಪ್ಪಿದರೂ ಕಣಿವೆಯಲ್ಲಿ ಎಲುಬಿನ ಹಂದರವೂ ಸಿಗದಂತೆ ಮಣ್ಣುಪಾಲಾಗುವ ಅಪಾಯವನ್ನು ಹೊತ್ತುಕೊಂಡೇ ಪ್ರಯಾಣ ಮಾಡಬೇಕಾದ ಯಮಕಂಟಕ ರಸ್ತೆಯಿದು. ಲಡಾಕ್‌ ಹಾಗೂ ಕಾಶ್ಮೀರವನ್ನು ಸೇರಿಸುವ ಈ ರಸ್ತೆ ಅತ್ಯದ್ಭುತ ಹಿಮಶಿಖರಗಳ ದೃಶ್ಯಾವಳಿಗಳನ್ನೂ ದರ್ಶನ ಮಾಡಿಸುತ್ತದೆ. ಮನೋಹರದಷ್ಟೇ, ರೋಮಾಂಚಕಾರಿಯೂ, ಅಪಾಯಕಾರಿಯೂ ಆದ ರಸ್ತೆಯಿದು.

NH22

೫. ಎನ್‌ಎಚ್‌ ೨೨: ರಾಷ್ಟ್ರೀಯ ಹೆದ್ದಾರಿ ೨೨ ಕೂಡಾ ಭಾರತದ ಅತ್ಯಂತ ಅಪಾಯಕಾರೀ ರಸ್ತೆಯೆಂಬ ಹೆಗ್ಗಳಿಕೆ ಪಾತ್ರವಾದ ರಸ್ತೆಗಳಲ್ಲೊಂದು. ಇದು ಯಾವ ಸುಳಿವನ್ನೂ ನೀಡದೆ, ಅತ್ಯಂತ ಅಪಾಯಕಾರೀ ತಿರುವುಗಳನ್ನೂ ದರ್ಶನ ಮಾಡಿಸುತ್ತದೆ. ಬೈಕರುಗಳಿಗೆ ಅತ್ಯಂತ ಪ್ರಿಯವಾದ ರಸ್ತೆಗಳಲ್ಲಿ ಇದೂ ಒಂದು. ಜಾರ್ಖಂಡ್‌ ಹಾಗೂ ಬಿಹಾರದ ನಡುವಿನ ಈ ಸಂಪರ್ಕ ರಸ್ತೆ ಭಾರತ ಹಾಗೂ ಟಿಬೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಎಂದೂ ಪ್ರಸಿದ್ಧ.

೬. ರೋಹ್ತಂಗ್‌ ಪಾಸ್‌: ಬೈಕರುಗಳ ಅತ್ಯಂತ ಪ್ರಿಯವಾದ ರಸ್ತೆಗಳಲ್ಲಿ ಇದೂ ಒಂದು. ಕುಲು ಕಣಿವೆ ಹಾಗೂ ಸ್ಪಿತಿ ಕಣಿವೆಯ ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮೇ ತಿಂಗಳಿಂದ ನವೆಂಬರ್‌ವರೆಗೆ ಮಾತ್ರ ತೆರೆದಿರುತ್ತದೆ. ಅತ್ಯಂತ ರಮಣೀಯ ದೃಶ್ಯಗಳನ್ನು ಕಾಣಬಹುದಾದ, ಎತ್ತರೆತ್ತರ ಹಿಮಚ್ಛಾದಿತ ಬೆಟ್ಟಗಳನ್ನು ನೋಡುತ್ತಾ ಮೈಮರೆಯಬಹುದಾದ ರಸ್ತೆಯಿದು. ಆದರೂ ಮೈಮರೆತರೆ ಪ್ರಪಾತದಲ್ಲಿರುವ ಅಪಾಯವೂ ಹೆಚ್ಚು.

ಇದನ್ನೂ ಓದಿ: Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

VISTARANEWS.COM


on

Jos Butler
Koo

ಬೆಂಗಳೂರು: ಬಲಗೈ ಬ್ಯಾಟರ್​ ಜೋಸ್ ಬಟ್ಲರ್ ಆಧುನಿಕ ಪೀಳಿಗೆಯ ಅತ್ಯುತ್ತಮ ವೈಟ್-ಬಾಲ್ ಬ್ಯಾಟರ್​ಗಳಲ್ಲಿ ಒಬ್ಬರು. ಅವರು ಜೂನ್ 2 ರಿಂದ ಪ್ರಾರಂಭವಾಗಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ವಿಶ್ವ ಕಪ್​ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸಲಿದೆ. ಹಿಂದಿನ ಬಾರಿ ಬೆನ್​ಸ್ಟೋಕ್ಸ್ ನೇತೃತ್ವದಲ್ಲಿ ಇಂಗ್ಲೆಂಡ್​ ತಂಡ ಹಿಂದಿನ ಆವೃತ್ತಿಯಲ್ಲಿ ಕಪ್​ ಗೆದ್ದಿತ್ತು. ಅವರೀಗ ಟಿ20ಐನಲ್ಲಿ 3000 ರನ್ ಗಡಿ ದಾಟಿದ ಇಂಗ್ಲೆಂಡ್​ನ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 2 ನೇ ಟಿ 20 ಪಂದ್ಯದಲ್ಲಿ ಜೋಸ್ ಬಟ್ಲರ್ ಕೇವಲ 51 ಎಸೆತಗಳಲ್ಲಿ 84 ರನ್ ಗಳಿಸಿ ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್ ಈಗ ಟಿ 20 ಪಂದ್ಯಗಳಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 106 ಇನ್ನಿಂಗ್ಸ್​ಗಳಲ್ಲಿ 35.42 ಸರಾಸರಿ ಮತ್ತು 145.10 ಸ್ಟ್ರೈಕ್ ರೇಟ್​ಪ್ರಕಾರ 3011 ರನ್ ಗಳಿಸಿದ್ದಾರೆ.

ಬಟ್ಲರ್ ಟಿ 20 ಪಂದ್ಯಗಳಲ್ಲಿ ತಮ್ಮ ಹೆಸರಿನಲ್ಲಿ ಒಂದು ಶತಕದ ದಾಖಲೆಯನ್ನೂ ಹೊಂದಿದ್ದಾರೆ. ಈ ಬಾರಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರುವ ಕಾರಣ ಅವಕಾಶ ಹೆಚ್ಚಿದೆ.

ಇದನ್ನೂ ಓದಿ: Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

ಐಪಿಎಲ್ಗೂ ಮುನ್ನ ಬಟ್ಲರ್ ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಅಲ್ಲಿ ಅವರು ಎರಡು ಶತಕಗಳನ್ನು ಬಾರಿಸಿದ್ದರು. ಲೀಡ್ಸ್​​ನಲ್ಲಿ ನಡೆದ ಮೊದಲ ಪಂದ್ಯ ರದ್ದಾದ ನಂತರ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಕಾರ್ಡಿಫ್​​ನಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ನಾಯಕ ತನ್ನ ಬ್ಯಾಟಿಂಗ್ ಪ್ರದರ್ಶನ ಹೇಗೆ ನೀಡುತ್ತಾರೆ ಎಂದು ಕಾದು ನೋಡಬೇಕಷ್ಟೆ.

ಐಪಿಎಲ್​ ನಡುವೆಯೇ ಹೆಸರು ಬದಲಾಯಿಸಿಕೊಂಡ ಜೋಸ್ ಬಟ್ಲರ್​

ಮುಂಬಯಿ: ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ತಪ್ಪು ಹೆಸರನ್ನು ಕರೆದ ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಕ್ಕೆ ನಿರ್ಧರಿಸಿಕೊಂಡರು. ಇಂಗ್ಲೆಂಡ್ ಪರ 57 ಟೆಸ್ಟ್, 181 ಏಕದಿನ ಹಾಗೂ 114 ಟಿ20 ಪಂದ್ಯಗಳನ್ನು ಆಡಿದ್ದಾರೆ ಜೋಸ್ ಬಟ್ಲರ್​. ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್​ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರೀಗ ಏಕಾಏಕಿ ಹೆಸರನ್ನು ಬದಲಿಸಿಕೊಂಡಿದ್ದಾರೆ.

ನಾನು ಇಂಗ್ಲೆಂಡ್ ತಂಡದ ವೈಟ್ ಬಾಲ್ ನಾಯಕ. ಇಲ್ಲಿಯವರೆಗೆ ನನ್ನನ್ನು ತಪ್ಪು ಹೆಸರಿನೊಂದಿಗೆ ಕರೆಯಲಾಗುತ್ತಿತ್ತು . ನನ್ನ ಹುಟ್ಟುಹಬ್ಬದ ಕಾರ್ಡ್ ನಲ್ಲಿ ಬೀದಿಯಲ್ಲಿರುವ ಜನರಿಂದ ಹಿಡಿದು ನನ್ನ ತಾಯಿಯವರೆಗೆ. ಪ್ರಿಯ ಜೋಶ್ ಎಂದು ಕರೆಯಬೇಕು. ಇಂಗ್ಲೆಂಡ್ ಪರ 13 ವರ್ಷಗಳ ಕಾಲ ಆಡಿದ ನಂತರ ಮತ್ತು ಎರಡು ವಿಶ್ವಕಪ್ ಪಂದ್ಯಗಳನ್ನು ಗೆದ್ದ ನಂತರ, ನಾನು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ. ನಾನು ಅಧಿಕೃತವಾಗಿ ಜೋಶ್ ಬಟ್ಲರ್​ ಎಂದು ಹೇಳಿಕೊಂಡಿದ್ದಾರೆ.

Continue Reading

ದೇಶ

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Wagah Border: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ, ಅಮೃತಸರದಲ್ಲಿರುವ ವಾಘಾ ಗಡಿಯನ್ನು ಓಪನ್‌ ಮಾಡಲಾಗುವುದು ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ಚರಣ್‌ಜೀತ್‌ ಸಿಂಗ್‌ ಚನ್ನಿ ಹೇಳಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Wagah Border
Koo

ಚಂಡೀಗಢ: ಲೋಕಸಭೆ ಚುನಾವಣೆಯ (Lok Sabha Election 2024) 6ನೇ ಹಂತದ ಮತದಾನ ಮುಗಿದು, ಚುನಾವಣೆ ಕೊನೆಯ ಹಂತಕ್ಕೆ ಬಂದರೂ ರಾಜಕೀಯ ನಾಯಕರ ಹೇಳಿಕೆಗಳು ಮಾತ್ರ ತಣ್ಣಗಾಗಿಲ್ಲ. ಜಾತಿ, ಧರ್ಮ, ಪಾಕಿಸ್ತಾನ ಸೇರಿ ಹಲವು ವಿಷಯಗಳ ಕುರಿತು ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಜಲಂಧರ್‌ ಕಾಂಗ್ರೆಸ್‌ ಅಭ್ಯರ್ಥಿ ಚರಣ್‌ಜೀತ್‌ ಸಿಂಗ್‌ ಚನ್ನಿ (Charanjit Singh Channi) ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. “ದೇಶದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ-ಪಾಕಿಸ್ತಾನ ನಡುವಿನ ವಾಘಾ ಗಡಿಯನ್ನು (Wagah Border) ಸಂಚಾರಕ್ಕೆ ಮುಕ್ತಗೊಳಿಸಲಾಗುವುದು” ಎಂಬುದಾಗಿ ಅವರು ಹೇಳಿದ್ದಾರೆ.

ಪಂಜಾಬ್‌ನ ಜಲಂಧರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಚರಣ್‌ಜೀತ್‌ ಸಿಂಗ್‌ ಚನ್ನಿ ಮಾತನಾಡಿದರು. “ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದರೆ, ವಾಘಾ ಗಡಿಯನ್ನು ಓಪನ್‌ ಮಾಡುತ್ತೇವೆ. ಇದರಿಂದ ಪಾಕಿಸ್ತಾನದ ನಾಗರಿಕರು ಪಂಜಾಬ್‌ಗೆ ಬಂದು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಹೋಗಬಹುದಾಗಿದೆ. ಇದರಿಂದ ಜಲಂಧರ್‌ ಮೆಡಿಕಲ್‌ ಟೂರಿಸಂ ತಾಣವನ್ನಾಗಿ ಬದಲಾಯಿಸಲು ಸಾಧ್ಯವಾಗುತ್ತದೆ” ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಚರಣ್‌ಜೀತ್‌ ಸಿಂಗ್‌ ಚನ್ನಿ ಅವರು ಪಾಕಿಸ್ತಾನ ಗಡಿ ಕುರಿತು ಮಾತನಾಡುವ ಒಂದು ದಿನ ಮೊದಲು ಪಂಜಾಬ್‌ನಲ್ಲಿ ನರೇಂದ್ರ ಮೋದಿ ರ‍್ಯಾಲಿ ನಡೆಸಿದ್ದರು. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರವಾದವನ್ನು ಪೋಷಣೆ ಮಾಡುವ, ಭಾರತದ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ಸ್ನೇಹದ ಸಂದೇಶಗಳನ್ನು ರವಾನಿಸುತ್ತದೆ. ಆದರೆ, ನಾವು ಮಾತ್ರ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದೇವೆ. ಆ ಮೂಲಕ ದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಿದೇವೆ” ಎಂಬುದಾಗಿ ಮೋದಿ ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಇದು ಬಿಜೆಪಿಯ ಚುನಾವಣಾ ಸ್ಟಂಟ್”‌ ಎಂದು ಆರೋಪಿಸಿದ್ದರು. ಮೇ 4ರಂದು ಪೂಂಚ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ವಾಯುಪಡೆಯ ಒಬ್ಬ ಯೋಧ ಹುತಾತ್ಮರಾಗಿದ್ದರು. “ಚುನಾವಣೆ ಸಮೀಪಿಸುತ್ತಲೇ ಬಿಜೆಪಿಯು ಜನರ ಜೀವನದ ಜತೆ ಆಟವಾಡುತ್ತದೆ. ಉಗ್ರರ ದಾಳಿ ಪ್ರಕರಣಗಳು ಬಿಜೆಪಿಯ ಕುತಂತ್ರದ ಭಾಗವಾಗಿವೆ” ಎಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಚರಣ್‌ಜೀತ್‌ ಸಿಂಗ್‌ ಚನ್ನಿ ಅವರಿಗೆ ಚುನಾವಣೆ ಆಯೋಗವೂ ಖಡಕ್‌ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

Continue Reading

ಪ್ರಮುಖ ಸುದ್ದಿ

Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

Virat kohli : ಆರ್​ಸಿಬಿ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ 2024ರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 741 ರನ್​ ಬಾರಿಸಿದ್ದರು ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 15 ಪಂದ್ಯವಾಡಿರುವ ಅವರು ಟಿ20 ಮೋಡ್​ನಲ್ಲಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯ ತಪ್ಪಿಸಲು ಉದ್ದೇಶಿಸಿದ್ದಾರೆ.

VISTARANEWS.COM


on

Virat kohli
Koo

ಬೆಂಗಳೂರು: ವೆಸ್ಟ್​​ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ಕ್ಕೆ (T20 World Cupl 2024) ಮುಂಚಿತವಾಗಿ ಭಾರತ ತಂಡಕ್ಕೆ ಏಕೈಕ ಅಭ್ಯಾಸ ಪಂದ್ಯ ದೊರಕಿದೆ. ಆದರೆ ಆ ಹಣಾಹಣಿಯಿಂದ ವಿರಾಟ್​ ಕೊಹ್ಲಿ(Virat kohli) ಹೊರಕ್ಕೆ ಉಳಿಯುವ ಸಾಧ್ಯತೆಗಳಿವೆ. ಐಪಿಎಲ್ ಮುಗಿದ ಬಳಿಕ ಅವರು ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ. ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಅಭ್ಯಾಸ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಕೊಹ್ಲಿ ಜೊತೆಗೆ, ಸಂಜು ಸ್ಯಾಮ್ಸನ್ ಕೂಡ ನಿಗದಿತ ಸಮಯದಲ್ಲಿ ಹೊರಡುವುದಿಲ್ಲ ಎಂದು ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡ ಸೇರಿಲ್ಲ. ನಾನಾ ಗಾಸಿಪ್​ಗಳ ನಡುವೆ ಅವರೂ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಭಾರತ ತಂಡದ ಮೊದಲ ಬ್ಯಾಚ್ ಆಟಗಾರರು ಶನಿವಾರ ತೆರಳಿದರೆ, ಎರಡನೇ ಬ್ಯಾಚ್ ಸೋಮವಾರ ಹೊರಡಲಿದೆ ಈ ಆಟಗಾರರು ಅಲ್ಲಿ ಆಡಲಿದ್ದಾರೆ.

ಆರ್​ಸಿಬಿ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ 2024ರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 741 ರನ್​ ಬಾರಿಸಿದ್ದರು ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 15 ಪಂದ್ಯವಾಡಿರುವ ಅವರು ಟಿ20 ಮೋಡ್​ನಲ್ಲಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯ ತಪ್ಪಿಸಲು ಉದ್ದೇಶಿಸಿದ್ದಾರೆ. ಇನ್ನು ದುಬೈಗೆ ವೈಯಕ್ತಿಕ ಕೆಲಸಕ್ಕಾಗಿ ತೆರಳಿರುವ ಸಂಜು ಸ್ಯಾಮ್ಸನ್ ಸ್ವಲ್ಪ ದಿನ ಬಿಟ್ಟು ಹೊರಡು ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ.

“ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಲಿದ್ದಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು/ ಅದಕ್ಕಾಗಿಯೇ ಬಿಸಿಸಿಐ ಅವರ ವೀಸಾ ಅವಧಿಯನ್ನು ನಂತರದ ದಿನಾಂಕಕ್ಕೆ ಮುಂದೂಡಿದೆ. ಅವರು ಮೇ 30ರ ಮುಂಜಾನೆ ನ್ಯೂಯಾರ್ಕ್ ಗೆ ಹಾರುವ ನಿರೀಕ್ಷೆಯಿದೆ. ಅವರ ಮನವಿಯನ್ನು ಬಿಸಿಸಿಐ ಒಪ್ಪಿಕೊಂಡಿದೆ, “ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶಿವಂ ದುಬೆ, ಕುಲದೀಪ್ ಯಾದವ್, ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಸಹಾಯಕ ಸಿಬ್ಬಂದಿ ಶನಿವಾರ ರಾತ್ರಿ ಮುಂಬೈನಿಂದ ಹೊರಟರು. ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಐಪಿಎಲ್ 2024 ಅನ್ನು ಪ್ರಾರಂಭಿಸಲಿದ್ದು, ನಂತರ ಜೂನ್ 9 ರಂದು ಪಾಕಿಸ್ತಾನವನ್ನು ಎದುರಿಸಲಿದೆ.

ಇದನ್ನೂ ಓದಿ: Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Continue Reading

ದೇಶ

Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Constables: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ವಿಶೇಷ ಸಶಸ್ತ್ರ ಪಡೆಯ (SAF) ಇಬ್ಬರು ಪೇದೆಗಳು ಬಿಯರ್‌ ಸೇವಿಸಿ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರೇ ಮಾಹಿತಿ ನೀಡಿದ್ದಾರೆ. ಮೃತ ಕಾನ್‌ಸ್ಟೆಬಲ್‌ಗಳನ್ನು ದನಿರಾಮ್‌ ಉಯಿಕೆ (55) ಹಾಗೂ ಪ್ರೇಮ್‌ಲಾಲ್‌ ಕಾಕೋಡಿಯಾ (50) ಎಂಬುದಾಗಿ ಗುರುತಿಸಲಾಗಿದೆ. ಇವರು ಎಸ್‌ಎಎಫ್‌ನ 8ನೇ ಬೆಟಾಲಿಯನ್‌ ಸಿಬ್ಬಂದಿ ಆಗಿದ್ದರು.

VISTARANEWS.COM


on

Constables
Koo

ಭೋಪಾಲ್‌: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರ ಎಂದು ಮದ್ಯದ ಬಾಟಲಿ ಮೇಲೆಯೇ ಬರೆಯಲಾಗಿರುತ್ತದೆ. ಇನ್ನು ಜಾಹೀರಾತುಗಳ ಮೂಲಕವೂ ಮದ್ಯಪಾನದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಜಾಹೀರಾತು, ಜಾಗೃತಿ ಬಿಡಿ, ವೈದ್ಯರು ವೈಯಕ್ತಿಕವಾಗಿ ಹೇಳಿದರೂ ಮದ್ಯಪಾನ ಬಿಡದ ‘ಚಟವಾದಿ’ಗಳು ತುಂಬ ಇರುತ್ತಾರೆ. ಇನ್ನು, ಮಧ್ಯಪ್ರದೇಶದಲ್ಲಿ (Madhya Pradesh) ಇಬ್ಬರು ಪೊಲೀಸ್‌ ಪೇದೆಗಳು (Constables) ಬಿಯರ್‌ ಸೇವಿಸಿ ಮೃತಪಟ್ಟಿರುವುದೇ ಆಲ್ಕೋಹಾಲ್‌ ಹೇಗೆ ಜೀವದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ನಿದರ್ಶನ ಸಿಕ್ಕಿದೆ.

ಹೌದು, ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ವಿಶೇಷ ಸಶಸ್ತ್ರ ಪಡೆಯ (SAF) ಇಬ್ಬರು ಪೇದೆಗಳು ಬಿಯರ್‌ ಸೇವಿಸಿ ಮೃತಪಟ್ಟಿದ್ದಾರೆ ಎಂಬುದಾಗಿ ಪೊಲೀಸರೇ ಮಾಹಿತಿ ನೀಡಿದ್ದಾರೆ. ಮೃತ ಕಾನ್‌ಸ್ಟೆಬಲ್‌ಗಳನ್ನು ದನಿರಾಮ್‌ ಉಯಿಕೆ (55) ಹಾಗೂ ಪ್ರೇಮ್‌ಲಾಲ್‌ ಕಾಕೋಡಿಯಾ (50) ಎಂಬುದಾಗಿ ಗುರುತಿಸಲಾಗಿದೆ. ಇವರು ಎಸ್‌ಎಎಫ್‌ನ 8ನೇ ಬೆಟಾಲಿಯನ್‌ ಸಿಬ್ಬಂದಿ ಆಗಿದ್ದರು. ಶನಿವಾರ (ಮೇ 25) ರಾತ್ರಿ ಇವರು ಬಿಯರ್‌ ಸೇವಿಸಿದ್ದು, ನಂತರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Beer

ದನಿರಾಮ್‌ ಹಾಗೂ ಪ್ರೇಮ್‌ಲಾಲ್‌ ಅವರು ಆಪ್ತರಾಗಿದ್ದು, ಶನಿವಾರ ರಾತ್ರಿ ಇಬ್ಬರೂ ಬಿಯರ್‌ ಪಾರ್ಟಿ ಮಾಡಿದ್ದಾರೆ. ಇಬ್ಬರೂ ಊಟ ಮಾಡಿ ಮಲಗಿದ್ದು, ಕೆಲ ಹೊತ್ತಿನಲ್ಲಿಯೇ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ಇಬ್ಬರ ಸಾವಿಗೆ ಏನು ಕಾರಣ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಯರ್‌ ಎಷ್ಟು ಅಪಾಯಕಾರಿ ಎಂಬ ಕುರಿತು ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆ, ಯುರೋಪಿಯನ್‌ ಯುನಿಯನ್‌ನ ಯುರೋಪಿಯನ್‌ ಫುಡ್‌ ಸೇಫ್ಟಿ ಏಜೆನ್ಸಿಯು ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಬಿಯರ್‌ ಕುರಿತ ಹತ್ತಾರು ಭಯಾನಕ ಅಂಶಗಳನ್ನು ತೆರೆದಿಟ್ಟಿತ್ತು. “ಬಿಯರ್‌ ಹಾಗೂ ಮಾಂಸದಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ರಾಸಾಯನಿಕಗಳಿವೆ. ಅದರಲ್ಲೂ, ನೈಟ್ರೋಸಮೈನ್ಸ್‌ ಎಂಬ ರಾಸಾಯನಿಕವು ಕ್ಯಾನ್ಸರ್‌ಕಾರಕವಾಗಿದೆ. ಬಿಯರ್‌ ಹಾಗೂ ಮಾಂಸದಲ್ಲಿ ಈ ಅಂಶವು ಪತ್ತೆಯಾಗಿರುವುದರಿಂದ ಸೇವಿಸುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ತಿಳಿಸಿತ್ತು.

ಇದನ್ನೂ ಓದಿ: Beer Shortage: ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್; ಇನ್ನೆರಡು ತಿಂಗಳು ಬಿಯರ್‌ ಸಿಗೋದು ಕಷ್ಟ!

Continue Reading
Advertisement
Rain News
ಕರ್ನಾಟಕ16 mins ago

Rain News: ಚಿತ್ತಾಪುರದಲ್ಲಿ ಸಿಡಿಲು ಬಡಿದು ಇಬ್ಬರ ದುರ್ಮರಣ; ಹೊತ್ತಿ ಉರಿದ ತೆಂಗಿನ ಮರ

Jos Butler
ಪ್ರಮುಖ ಸುದ್ದಿ17 mins ago

Jos Butler: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​ ತಂಡದ ನಾಯಕ ಬಟ್ಲರ್​

Wagah Border
ದೇಶ36 mins ago

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Virat kohli
ಪ್ರಮುಖ ಸುದ್ದಿ45 mins ago

Virat kohli : ಬ್ರೇಕ್​ ತೆಗೆದುಕೊಂಡ ಕೊಹ್ಲಿ, ಅಭ್ಯಾಸ ಪಂದ್ಯಕ್ಕೆ ಅನುಮಾನ

FSSAI Warning
ಆರೋಗ್ಯ1 hour ago

FSSAI Warning: ಎದೆಹಾಲು ಮಾರಾಟ ಮಾಡುವಂತಿಲ್ಲ: ಎಫ್‌ಎಸ್‌ಎಸ್‌ಎಐ ಖಡಕ್ ಎಚ್ಚರಿಕೆ

fraud case
ಕರ್ನಾಟಕ1 hour ago

Fraud Case: ಷೇರು ಮಾರ್ಕೆಟ್‌ನಲ್ಲಿ ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿ ದಂಪತಿ ಪರಾರಿ!

Constables
ದೇಶ2 hours ago

Constables: ಬಿಯರ್‌ ಸೇವಿಸಿ ಇಬ್ಬರು ಕಾನ್‌ಸ್ಟೆಬಲ್‌ಗಳ ಸಾವು; ಮದ್ಯ ಪ್ರಿಯರೇ ಇನ್ನಾದರೂ ಎಚ್ಚರ!

Rohit Sharma
ಕ್ರೀಡೆ2 hours ago

Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ2 hours ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌