ಬಾಲಿವುಡ್
Brahmastra trailer ಔಟ್, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್ ಇಂಡಿಯಾ ಚಿತ್ರ ಬರಲಿದೆಯಾ?
ಬಹುನಿರೀಕ್ಷಿತ ಬಾಲಿವುಡ್ ಫಿಲಂ brahmastra trailer ಬಿಡುಗಡೆ ಆಗಿದೆ. ಮೇಕಿಂಗ್ ರಿಚ್ ಆಗಿದ್ದು, ಕಡೆಗೂ ಹಿಂದಿಯಿಂದ ಒಂದು ಪ್ಯಾನ್ ಇಂಡಿಯಾ ಮೂವಿ ನಿರೀಕ್ಷೆ ಮಾಡುವಂತಿದೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ ʻಬ್ರಹ್ಮಾಸ್ತ್ರ, ಪಾರ್ಟ್ ಒನ್- ಶಿವʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸೆಪ್ಟೆಂಬರ್ 9ಕ್ಕೆ ಬಿಡುಗಡೆಯಾಗಲು ಸಜ್ಜಾಗಿರುವ ಆಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಅವರಂತಹ ದಿಗ್ಗಜರ ತಾರಾಗಣವೂ ಇದೆ.
ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ದೇಶದೆಲ್ಲೆಡೆ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ, ಟ್ರೈಲರ್‌ನಲ್ಲಿ ತನ್ನ ಅದ್ದೂರಿತನದಿಂದ ಹಾಗೂ ಬೆರಗುಗೊಳಿಸುವ ಮೇಕಿಂಗ್‌ನಿಂದ ಕುತೂಹಲ ಹುಟ್ಟು ಹಾಕಿದ್ದು, ಈ ಚಿತ್ರದ ಬಗೆಗಿದ್ದ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಬೇಕಾದಂಥ ಮೇಕಿಂಗ್ ತೋರಿಸಿದೆ.
ಮೂರು ನಿಮಿಷದ ಟ್ರೈಲರ್ ತುಂಬ ಸಾಕಷ್ಟು ಮೈ ನವಿರೇಳಿಸುವ ದೃಶ್ಯಗಳಿದ್ದು, ಬೆರಗುಗೊಳಿಸುವ ವಿಎಫ್‌ಎಕ್ಸ್ ಕೂಡಾ ಇದೆ. ಬಾಲಿವುಡ್‌ನಲ್ಲಿ ಈವರೆಗೆ ತೆರೆ ಕಾಣುತ್ತಿದ್ದ ಪ್ರೇಮ ಕಥಾನಕಗಳಿಂದ ಈ ಚಿತ್ರ ಭಿನ್ನ ಲೋಕವನ್ನು ಪರಿಚಯಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿರುವುದು, ಸಿನಿಪ್ರಿಯರಲ್ಲಿ ಕುತೂಹಲ ಉಳಿಸಿಕೊಂಡಿದೆ. ಇಂಥದ್ದೊಂದು ಕಥಾಹಂದರ ಅದ್ಭುತ ಮೇಕಿಂಗ್ ಜೊತೆಗೆ ಹೊರಬರುತ್ತಿರುವುದು ಬಾಲಿವುಡ್ ಪಾಲಿಗೆ ಹೊಸತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮಿತಾಭ್ ಬಚ್ಚನ್ ಧ್ವನಿಯಿಂದ ಟ್ರೈಲರ್ ಆರಂಭವಾಗುತ್ತದೆ. ʼʼಪುರಾತನ ಕಾಲದಿಂದಲೂ ಜಲ, ವಾಯು ಅಗ್ನಿಗಳಂಥ ಪಂಚತತ್ವಗಳ ಶಕ್ತಿಗಳು ಅಸ್ತ್ರಗಳಲ್ಲಿದ್ದು, ಈ ಅಸ್ತ್ರಗಳೆಲ್ಲವುಗಳ ಮುಖ್ಯ ದೇವರ ಕಥೆ ಇದಾಗಿದೆ. ಅದುವೇ ಬ್ರಹ್ಮಾಸ್ತ್ರ” ಎಂಬ ಪೀಠಿಕೆಯಿದೆ. ಚಿತ್ರದಲ್ಲೊಬ್ಬ ಯುವಕ ಶಿವ, ಆತನಿಗೊಬ್ಬಳು ಪ್ರೇಯಸಿ, ಈಶಾ ನಡುವಿನ ಪ್ರೇಮ ಕಥಾನಕ ಹಾಗೂ ಈ ಶಿವ ಹಾಗೂ ಬ್ರಹ್ಮಾಸ್ತ್ರದ ನಡುವಿನ ಸಂಬಂಧ ಕಥೆಯ ಎಳೆಯಾಗಿದೆ. ಈಗಷ್ಟೇ ಪತಿ ಪತ್ನಿಯರಾಗಿ ಬಡ್ತಿ ಹೊಂದಿದ ರಣಬೀರ್ ಆಲಿಯಾ ಜೋಡಿ ತೆರೆ ಮೇಲೂ ತಮ್ಮ ಲವ್ ಕೆಮೆಸ್ಟ್ರಿ ಮೂಲಕ ಸಿನಿರಸಿಕರನ್ನು ಮೋಡಿ ಮಾಡಲಿದೆ.
ಚಿತ್ರದಲ್ಲಿ ಶಾರುಖ್ ಖಾನ್ ಕೂಡ ವಿಶೇಷ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸುಮಾರು 20 ನಿಮಿಷಗಳ ಪಾತ್ರ ಇದಾಗಿದ್ದು, ವಿಜ್ಞಾನಿಯ ಪಾತ್ರದಲ್ಲಿ ಅವರು ಮಿಂಚಲಿದ್ದಾರೆ. ಇದು ಚಿತ್ರದ ನಿರ್ಣಾಯಕ ಪಾತ್ರವೂ ಆಗಿದೆ ಎನ್ನಲಾಗಿದೆ.
ವೇಕ್ ಅಪ್ ಸಿದ್, ಯೇ ಜವಾನಿ ಹೇ ದಿವಾನಿಯಂತಹ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅಯಾಯ್ ಮುಖರ್ಜಿ ಪಾಲಿಗೆ ಇದು ಕನಸು ನನಸಾದ ಕ್ಷಣ ಎಂದು ಅವರು ಭಾವುಕರಾಗಿದ್ದಾರೆ. ಇದು ನನ್ನ ಕನಸಿನ ಕೂಸು. ಈ ಚಿತ್ರ ಖಂಡಿತ ನಮ್ಮ ದೇಶದ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣಗಳನ್ನು ದೊರಕಿಸಿಕೊಡಲಿದೆ. ನಮ್ಮ ಶ್ರೀಮಂತ ಸಂಸ್ಕೃತಿಯ ಬೇರುಗಳ ಆಳಕ್ಕಿಳಿವ ಕಥಾ ಹಂದರವಿರುವ ಚಿತ್ರ ಇದಾಗಿದ್ದು, ಕಲ್ಪನಾ ಲೋಕಕ್ಕೆ ಸಿನಿಮಾಲೋಕದ ಮೂಲಕ ಕೊಂಡೊಯ್ಯಬಲ್ಲ ಶಕ್ತಿಯನ್ನು ನೀಡಲಿದೆ. ಕೇವಲ ಹಿಂದಿನ ಬೇರಷ್ಟೇ ಅಲ್ಲದೆ, ಆಧುನಿಕ ಜಗತ್ತಿನ ತಂತ್ರಜ್ಞಾನ, ವಿಜ್ಞಾನ ಲೋಕದ ಸಂಬಂಧ ಈ ಚಿತ್ರದಲ್ಲಿದ್ದು, ಆ ಮೂಲಕ ಪ್ರೇಕ್ಷಕರನ್ನು ಅನೂಹ್ಯ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ತಾಂತ್ರಿಕವಾಗಿಯೂ ಅತ್ಯಂತ ಶ್ರೀಮಂತವಾಗಿ ಚಿತ್ರವನ್ನು ಮಾಡಲಾಗಿದೆ ಎಂದಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಈಗಾಗಲೇ ಟ್ರೈಲರ್ ವೀಕ್ಷಿಸಿದ ಮಂದಿ ಪ್ರತಿಕ್ರಿಯೆಗಳ ಸುರಿಮಳೆ ಸುರಿಸುತ್ತಿದ್ದು, ಬಾಲಿವುಡ್ ಕೊನೆಗೂ ತನ್ನ ಪ್ರೇಮ ಕಥಾನಕಗಳಿಂದ ಹೊರ ಬಂದು ಹೊಸತೊಂದು ಪ್ರಯತ್ನಕ್ಕೆ ಕೈಹಾಕಿದ್ದು ಸಂತಸ ತಂದಿದೆ ಎಂದಿದ್ದಾರೆ.
South Cinema
Nawazuddin Siddiqui: ಬಾಯ್‌ಫ್ರೆಂಡ್ ಪರಿಚಯಿಸಿದ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ; ಆತ ಭಾರತದವನಲ್ಲ!
ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ ಆಲಿಯಾ (Aaliya) ಅವರು ತಮ್ಮ ಸ್ನೇಹಿತನೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ ಆಲಿಯಾ (Aaliya) ಅವರು ತಮ್ಮ ಸ್ನೇಹಿತನೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ಆಲಿಯಾ ತಾವು ಹೊಸ ನಿರ್ಧಾರಕ್ಕೆ ಬಂದಿರುವ ಬಗ್ಗೆ ಹಾಗೂ ಬಾಯ್‌ಫ್ರೆಂಡ್ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ʻʻನನಗೆ ನನ್ನದೇ ಆದ ಜೀವನವಿದೆ, ನಾನು ನನ್ನ ಮಕ್ಕಳೊಂದಿಗೆ ಬದುಕಬೇಕು ಮತ್ತು ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆಗಳನ್ನು ನೀಡಲು ನಾನು ಬಯಸುವುದಿಲ್ಲʼʼ ಎಂದು ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಫೋಟೊ ವೈರಲ್ ಆಗುತ್ತಿದ್ದಂತೆ ಆಲಿಯಾ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ ʻʻಹೌದು, ನಾನು ಹಳೆಯ ಸಂಬಂಧದಿಂದ ಹೊರಗಡೆ ಬರಲು ನಿರ್ಧರಿಸಿದ್ದೇನೆ. ನನ್ನ ಈ ಸಂಬಂಧವು ಸ್ನೇಹಕ್ಕಿಂತ ಹೆಚ್ಚಾಗಿದೆ. ನನಗೆ ನನ್ನದೇ ಆದ ಜೀವನವಿದೆ. ನಾನು ನನ್ನ ಮಕ್ಕಳೊಂದಿಗೆ ಬದುಕಬೇಕು ಮತ್ತು ನನ್ನ ಮಕ್ಕಳಿಗೆ ಯಾವುದೇ ಸಮಸ್ಯೆಗಳನ್ನು ನೀಡಲು ನಾನು ಬಯಸುವುದಿಲ್ಲ. ಇದು ಗೌರವಯುತ ಸಂಬಂಧ. ನೀವು ಒಳ್ಳೆಯದನ್ನೂ ಮಾಡಿದರೂ ಕೂಡ ಜನರು ಇನ್ನೂ ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾರೆ.”ಎಂದರು.
ʻʻಹಣವು ನಿಮಗೆ ಸಂತೋಷವನ್ನು ನೀಡುವುದಿಲ್ಲ ಆದರೆ ವ್ಯಕ್ತಿ ನೀಡಬಲ್ಲ. ಅವರು ಭಾರತದವರಲ್ಲ. ಇಟಲಿಯವರು. ನಾವು ದುಬೈನಲ್ಲಿ ಭೇಟಿಯಾಗಿದ್ದೇವೆ. ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾವು ದೀರ್ಘಕಾಲ ಸ್ನೇಹಿತರಾಗಿದ್ದೇವೆ. ಅವರನ್ನು ಅರ್ಥ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತುʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Nawazuddin Siddiqui: ಪತ್ನಿ ಆರೋಪಕ್ಕೆ ಫಸ್ಟ್‌ಟೈಮ್ ಪ್ರತಿಕ್ರಿಯಿಸಿದ ನವಾಜುದ್ದೀನ್ ಸಿದ್ದಿಕಿ: ಇದು ಎಮೋಷನ್ ಅಂದಿದ್ಯಾಕೆ?
ಸಂಬಂಧಗಳು ಸ್ನೇಹಕ್ಕಿಂತಲೂ ಮಿಗಿಲಾದದ್ದು!
ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಹೊಸ ಬಾಯ್‌ಫ್ರೆಂಡ್ ಜತೆಗಿನ ಫೋಟೊ ಹಂಚಿಕೊಂಡುʻ ನಾನು ಅಮೂಲ್ಯವಾದ ಸಂಬಂಧದಿಂದ ಹೊರಬರಲು 19 ವರ್ಷಗಳನ್ನು ತೆಗೆದುಕೊಂಡೆ. ಆದರೆ ನನ್ನ ಜೀವನದಲ್ಲಿ, ನನ್ನ ಮಕ್ಕಳು ನನ್ನ ಮೊದಲ ಆದ್ಯತೆ. ಜೀವನದಲ್ಲಿನ ಕೆಲವು ಸಂಬಂಧಗಳು ಸ್ನೇಹಕ್ಕಿಂತಲೂ ಮಿಗಿಲಾದವು. ಈ ಸಂಬಂಧ ಕೂಡ ಇದೇ ರೀತಿ ಆಗಿರುವಂಥದ್ದು. ಇದರಲ್ಲಿ ನಾನು ಖುಷಿಯಾಗಿದ್ದೇನೆ. ಹಾಗಾಗಿ ಈ ಖುಷಿಯ ವಿಷಯವನ್ನು ನಿಮ್ಮ ಜತೆ ಹಂಚಿಕೊಂಡಿದ್ದೇನೆ. ಖುಷಿಯಾಗಿ ಬದುಕುವ ಹಕ್ಕು ನನಗೆ ಇಲ್ಲವೇ’ ಎಂದು ಆಲಿಯಾ ಸಿದ್ದಿಕಿ ಅವರು ಪ್ರಶ್ನೆ ಮಾಡಿದ್ದಾರೆ.
ಆಲಿಯಾ ಸಿದ್ದಿಕಿ ಮಾಡಿದ ಈ ಪೋಸ್ಟ್ಗೆ ಅನೇಕ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ‘ನಿಮ್ಮ ಸರ್ನೇಮ್ ಬದಲಾಯಿಸಿಕೊಳ್ಳಿ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಅದಕ್ಕೆ ಉತ್ತರಿಸಿರುವ ಆಲಿಯಾ ಅವರು ‘ಅತಿ ಶೀಘ್ರದಲ್ಲಿ’ ಎಂದು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಕೂಡ ಅವರು ಬರೆದುಕೊಂಡಿದ್ದರು. ಅಧಿಕೃತವಾಗಿ ವಿಚ್ಛೇದನ ಪಡೆದ ಬಳಿಕ ‘ಆಲಿಯಾ ಸಿದ್ಧಿಕಿ’ ಎಂಬ ಹೆಸರನ್ನು ‘ಅಂಜನಾ ಕಿಶೋರ್ ಪಾಂಡೆ’ ಎಂದು ಬದಲಾಯಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು.
ಇದನ್ನೂ ಒದಿ: Nawazuddin Siddiqui : ನವಾಜುದ್ದೀನ್ ನೀವು ಕಂಡಂತಲ್ಲ; ನಟನ ಬಗ್ಗೆ ಗಂಭೀರ ಆರೋಪ ಮಾಡಿದ ಸಹೋದರ!
ವಿಚ್ಛೇದನದ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದವರು ಕಿರುಕುಳ ನೀಡಿದ್ದಾರೆ ಎಂದು ಆಲಿಯಾ ಈ ಹಿಂದೆ ಆರೋಪಿಸಿದ್ದರು. ನಂತರ, ಮಾರ್ಚ್‌ನಲ್ಲಿ, ನಟ ನವಾಜುದ್ದೀನ್ ತನ್ನನ್ನು ಮತ್ತು ಅವರ ಇಬ್ಬರು ಮಕ್ಕಳನ್ನು ತನ್ನ ಮನೆಯಿಂದ ಹೊರಹಾಕಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ. ಈ ಹಿಂದೆ ಬಾಂಬೆ ಹೈಕೋರ್ಟ್ ದಂಪತಿ ತಮ್ಮ ಮಕ್ಕಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸೂಚಿಸಿತ್ತು.
South Cinema
Big Boss OTT 2: ಜೂನ್ 17ಕ್ಕೆ ಬಿಗ್‌ಬಾಸ್ ಒಟಿಟಿ 2 ಪ್ರಸಾರ, ಇಲ್ಲೂ ನಿರೂಪಕ ಸಲ್ಲೂ!
BigBoss OTT 2: ಹಿಂದಿಯ ಬಿಗ್‌ಬಾಸ್ ಒಟಿಟಿ ಎರಡನೇ ಆವೃತ್ತಿಯನ್ನು ಈ ಬಾರಿ ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಈ ಶೋ ಜೂನ್ 17ರಿಂದ ಆರಂಭವಾಗಲಿದೆ.
ಮುಂಬೈ: ಕಿರು ತೆರೆ ಜಗತ್ತಿನ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್‌ಬಾಸ್ ಮತ್ತೆ ಪ್ರಸಾರವಾಗಲು ಸಜ್ಜಾಗಿದೆ. ಬಿಗ್‌ಬಾಸ್ ಒಟಿಟಿ ಎರಡನೇ ಆವೃತ್ತಿಯ (Big Boss OTT 2) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶೋ ಪ್ರಸಾರವಾಗುವ ದಿನಕ್ಕೆ ಸಂಬಂಧಿಸಿದಂತೆ ಪ್ರೋಮೋ ಬಿಡುಗಡೆ ಮಾಡಲಾಗಿದ್ದು ಜೂನ್ 17ರಿಂದ ಪ್ರಸಾರವಾಗಲಿದೆ. ಅಂದ ಹಾಗೆ ಈ ಬಿಗ್‌ಬಾಸ್ ಶೋವನ್ನೂ ಸಲ್ಮಾನ್ ಖಾನ್ (Salman Khan) ಅವರು ನಡೆಸಿಕೊಡುತ್ತಿದ್ದಾರೆ. ನಟ ಸಲ್ಮಾನ್ ಖಾನ್ ಅವರನ್ನು ಅವರ ಅಭಿಮಾನಿಗಳು ಸಲ್ಲೂ ಎಂದೂ ಕರೆಯುತ್ತಾರೆ. ಜಿಯೋಸಿನಿಮಾ ವೇದಿಕೆಯಲ್ಲಿ ಈ ಶೋ ಲೈವ್ ಸ್ಟ್ರೀಮ್ ಆಗಲಿದೆ.
ಬಿಗ್ ಬಾಸ್ ಒಟಿಟಿ 2 ತಯಾರಕರು ಕಾರ್ಯಕ್ರಮದ ಮೊದಲ ಪ್ರೋಮೋವನ್ನು ಹಂಚಿಕೊಂಡ ಕೆಲವು ದಿನಗಳ ನಂತರ ಈ ಸುದ್ದಿ ಹೊರ ಬಿದ್ದಿದೆ. ಕರಣ್ ಜೋಹರ್ ಅವರ ಬದಲಾಗಿ ಸಲ್ಮಾನ್ ಖಾನ್ ಹೋಸ್ಟ್ ಆಗಿ ನೇಮಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಮೇ ಲೆಕರ್ ಆ ರಹಾ ಹೂಂ, ಬಿಗ್ ಬಾಸ್ ಒಟಿಟಿ. ತೋ ದೇಖ್ತಾ ಜಾಯೇ ಇಂಡಿಯಾ ಎಂದು ಸಲ್ಮಾನ್ ಖಾನ್ ಅವರು ಪ್ರೋಮೋದಲ್ಲಿ ಹೇಳಿದ್ದಾರೆ.
ಬಿಗ್ ಬಾಸ್ ಒಟಿಟಿ 2 ಪ್ರೋಮೋ
ಅರ್ಚನಾ ಗೌತಮ್ ಅವರ ಸಹೋದರ ಗುಲ್ಶನ್ ಕೂಡ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಇದೆ. ಈ ಹಿಂದೆ ಕಾತೆಲಾಲ್ ಅಂಡ್ ಸನ್ಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಜಿಯಾ ಶಂಕರ್ ಮತ್ತು ಪರಾಸ್ ಅರೋರಾ ಕೂಡ ಸಲ್ಮಾನ್ ಖಾನ್ ಅವರ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಆವೇಜ್ ದರ್ಬಾರ್, ಮಹೇಶ್ ಪೂಜಾರಿ, ಫೈಸಲ್ ಶೇಖ್, ಅಂಜಲಿ ಅರೋರಾ ಮತ್ತು ಅನುರಾಗ್ ದೋವಲ್ ಅವರನ್ನು ರಿಯಾಲಿಟಿ ಶೋಗಾಗಿ ಪದೇ ಪದೇ ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ. ವಾಹಿನಿಯು ಯಾವುದೇ ಸ್ಪರ್ಧಾಳುಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಹಾಗಾಗಿ, ಜೂನ್ 17ಕ್ಕೆ ಯಾರೆಲ್ಪ ಸ್ಪರ್ಧಿಗಳಿದ್ದಾರೆಂದು ಗೊತ್ತಾಗಲಿದೆ.
ಇದನ್ನೂ ಓದಿ: Bigg Boss Kannada | ಕರಾವಳಿ ಕುವರ ರೂಪೇಶ್ ಶೆಟ್ಟಿ ಮುಡಿಗೆ ಬಿಗ್‌ಬಾಸ್ ಕಿರೀಟ
ಒಟಿಟಿ ಮಾತ್ರವಲ್ಲದೇ ಕಲರ್ಸ್ ಟಿವಿಯಲ್ಲೂ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿಕೊಡಲಾಗುತ್ತದೆ. ಇಲ್ಲೂ ಸಲ್ಮಾನ್ ಖಾನ್ ಅವರೇ ಹೋಸ್ಟ್ ಆಗಿರುತ್ತಾರೆ. ಹಿಂದಿ ಮಾತ್ರವಲ್ಲದೇ, ಕನ್ನಡ, ಮಲಯಾಳಂ, ತಮಿಳು, ಮರಾಠಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ಬಿಗ್‌ಬಾರ್ ರಿಯಾಲಿಟಿ ಶೋ ನಡೆಯುತ್ತದೆ.
ಸಿನಿಮಾದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬಾಲಿವುಡ್
Bollywood : ಬೇಬಿ ಬಂಪ್ ತೋರಿಸುವ ಸರದಿಯಲ್ಲಿ ಸ್ವರಾ; ಪತಿ ಫಹಾದ್ ಜತೆ ಫೋಟೊ ಹಂಚಿಕೊಂಡ ನಟಿ
ನಟಿ ಸ್ವರಾ ತನ್ನ ಪತಿ ಫಹಾದ್ ಅಹ್ಮದ್ ಅವರೊಂದಿಗೆ ತನ್ನ ಬೇಬಿ ಬಂಪ್ ಪ್ರದರ್ಶಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನವ ದೆಹಲಿ : ಕಳೆದ ಫೆಬ್ರವರಿಯಲ್ಲಿ ನ್ಯಾಯಾಲಯದ ಮದುವೆ ಮದುವೆಯಾಗಿ ಮಾರ್ಚ್‌ನಲ್ಲಿ ಅದ್ಧೂರಿ ಸಮಾರಂಭದೊಂದಿಗೆ ವಿವಾಹವಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಅವರ ಪತಿ ಫಹಾದ್ ಅಹ್ಮದ್ ತಮ್ಮ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಪತಿ ಫಹಾದ್ ಅವರೊಂದಿಗೆ ಬೇಬಿ ಬಂಪ್ನ ಫೋಟೋವನ್ನು ಶೇರ್ ಮಾಡಿರುವ ನಟಿ ಗರ್ಭಧಾರಣೆಯ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿದ್ದಾರೆ.
ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಫೆಬ್ರವರಿ 16, 2023ರಂದು ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ನಾಲ್ಕು ತಿಂಗಳ ನಂತರ ದಂಪತಿ ತಮ್ಮ ದಾಂಪತ್ಯದ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾನು ಮತ್ತು ಫಹಾದ್ ಪೋಷಕರಾಗಲು ಸಜ್ಜಾಗಿದ್ದೇವೆ ಎಂದು ಸ್ವರಾ ಬರೆದುಕೊಂಡಿದ್ದಾರೆ.
Sometimes all your prayers are answered all together! Blessed, grateful, excited (and clueless! ) as we step into a whole new world! 🧿❤️✨🙏🏽 @FahadZirarAhmad #comingsoon #Family #Newarrival #gratitude #OctoberBaby pic.twitter.com/Zfa5atSGRk
— Swara Bhasker (@ReallySwara) June 6, 2023
ಸ್ವರಾ ಭಾಸ್ಕರ್ ಮೂರು ಫೋಟೋಗಳನ್ನು ಹಂಚಿಕೊಂಡಿದ್ದರೆ. ಅದರಲ್ಲಿ ಅವರು ಪತಿ ಫಹಾದ್ ಜತೆ ನಿಂತು ಬೇಬಿ ಬಂಪ್ ತೋರಿಸಿದ್ದಾರೆ. ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವ ಅವರು ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಅಕ್ಟೋಬರ್ನಲ್ಲಿ ತನ್ನ ಮೊದಲ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಒಟ್ಟಿಗೆ ಉತ್ತರ ನೀಡುತ್ತವೆ ಎಂದು ಬರೆದುಕೊಂಡಿದ್ದಾರೆ.
ಸ್ವರಾ ಮತ್ತು ಫಹಾದ್ ಲವ್ ಸ್ಟೋರಿ ಹೀಗಿದೆ
2020 ರ ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಯುವಜನ ಸಭಾದ ರಾಜ್ಯ ಅಧ್ಯಕ್ಷ ಫಹಾದ್ ಅಹ್ಮದ್ ಭೇಟಿಯಾಗಿದ್ದಾರೆ. ಈ ವೇಳೆ ಅವರಿಬ್ಬರು ಸ್ನೇಹಿತರಾಗಿದ್ದರು. ಸ್ವಲ್ಪ ಸಮಯದ ನಂತರ ಪ್ರೀತಿ ಮೊಳಕೆಯೊಡೆದಿತ್ತು. ಹೀಗಾಗಿ ಅವರು ವಿವಾಹವಾಗಲು ನಿರ್ಧರಿಸಿದರು. ಅಂತೆಯೇ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿದರು. ಮಾರ್ಚ್‌ನಲ್ಲಿ ಸಂಭ್ರಮದ ಕಾರ್ಯಕ್ರಮ ಆಯೋಜಿಸಿ ಔತಣಕೂಟ ಏರ್ಪಡಿಸಿದ್ದರು.
ಈ ವೇಳೆ ಮೆಹೆಂದಿ ಮತ್ತು ಸಂಗೀತದೊಂದಿಗೆ ಸಂಪೂರ್ಣವಾದ ಸಾಂಪ್ರದಾಯಿಕ ಭಾರತೀಯ ವಿವಾಹ ಕಾರ್ಯಕ್ರಮ ಆಯೋಜಸಿದ್ದರು. ಅದಕ್ಕಿಂತ ಮೊದಲು ತಮ್ಮ ಪ್ರೀತಿಪಾತ್ರರಿಗಾಗಿ ಖವ್ವಾಲಿ ರಾತ್ರಿಯನ್ನು ಸಹ ನಡೆಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಯಾ ಬಚ್ಚನ್ ಅವರು ರಾಷ್ಟ್ರ ರಾಜಧಾನಿ ದೆಹಯಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವರಾ ಇತ್ತೀಚೆಗೆ 2023 ರಲ್ಲಿ ಬಿಡುಗಡೆಯಾದ ಜಹಾನ್ ಚಾರ್ ಯಾರ್ ಚಿತ್ರದಲ್ಲಿ ಕಾಣಿಸಿಕೊಂಡರು.
ತಮ್ಮ ಮದುವೆ ಕುರಿತು ಮಾತನಾಡಿದ್ದ ಫಹಾದ್ ಮತ್ತು ಸ್ವರಾ, ನಾವಿಬ್ಬರು ವಿಭಿನ್ನ ಧರ್ಮಗಳು ಹಾಗೂ ಹಿನ್ನೆಲೆಗೆ ಸೇರಿದವರು. ವಿಭಿನ್ನ ಜೀವನ ಅನುಭವಗಳನ್ನು ಹೊಂದಿರುವವರು. ಆದರೂ ನಾವಿಬ್ಬರೂ ಒಂದು ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ನಮ್ಮ ಮೂಲವನ್ನು ಬದಲಾಯಿಸಿಕೊಳ್ಳಬಾರದು ಅಷ್ಟೇ. ಆರಾಮ ಜೀವನದಿಂದ ಹೊರಗೆ ಬರಬೇಕು ಅಷ್ಟೇ ಎಂದು ಹೇಳಿದ್ದರು.
ಬಾಲಿವುಡ್
Ileana D’cruz: ಇಲಿಯಾನಾ ಬೇಬಿಮೂನ್: ಬೇಬಿ ಬಂಪ್ ಪ್ರದರ್ಶಿಸಿದ ಸುಂದರಿ
ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಇಲಿಯಾನಾ (Ileana D’cruz) ತಿಳಿಸಿದ್ದರು. ಇಲಿಯಾನಾ ತಾವು ಭೇಟಿ ನೀಡಿದ ಬೀಚ್‌ನಿಂದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ನಟಿ ಇಲಿಯಾನಾ ಡಿಕ್ರೂಜ್ (Ileana D’cruz) ಅವರಿಗೆ ಈಗ ʼಬೇಬಿಮೂನ್’ ಸಮಯ. ಪ್ರಕಾಶಮಾನವಾದ ಹಳದಿ ಬಿಕಿನಿ ಧರಿಸಿ ಬೀಚ್‌ನಲ್ಲಿ ಸೂರ್ಯ ಕಿರಣಗಳಲ್ಲಿ ಮೀಯುತ್ತಾ ಬೇಬಿ ಬಂಪ್ (baby bump) ಪ್ರದರ್ಶಿಸುತ್ತಿರುವ ತಮ್ಮ ಚಿತ್ರಗಳನ್ನು ಇಲಿಯಾನ ಡಿಕ್ರೂಜ್ ಹಂಚಿಕೊಂಡಿದ್ದಾರೆ.
ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಇತ್ತೀಚೆಗಷ್ಟೇ ಇವರು ತಿಳಿಸಿದ್ದರು. ಇಲಿಯಾನಾ ತಾವು ಭೇಟಿ ನೀಡಿದ ಬೀಚ್‌ನಿಂದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ತಾವು ʼಬೇಬಿಮೂನ್ʼ ಮಾಡಿದ ಈ ಬೀಚ್ ಯಾವುದು ಅಂತ ಇಲಿಯಾನಾ ತಿಳಿಸಿಲ್ಲ.
ಇಲಿಯಾನಾ ವಿಹಾರದ ಫೋಟೋಗಳಲ್ಲಿ ಒಂದರಲ್ಲಿ ಅವಳ ಪಾದಗಳು ಮರಳಿನಿಂದ ಆವೃತವಾಗಿವೆ. ಇದರಲ್ಲಿ ಅವಳು ಚಿಪ್ಪಿನ ಕಾಲುಂಗುರ ಧರಿಸಿದ್ದಾಳೆ. “ಮರಳುಪೂರಿತ ಕಾಲ್ಬೆರಳುಗಳು, ಸಂತೋಷಪೂರಿತ ಹೃದಯ” ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾಳೆ.
ಇಲಿಯಾನಾ ತಾನು ಅಲೆಗಳ ನಡುವೆ ಇರುವ ಒಂದು ವೀಡಿಯೊ ಸಹ ಬಿಡುಗಡೆ ಮಾಡಿದ್ದಾಳೆ. ಅದರಲ್ಲಿ ಆಕೆ ಹಳದಿ ಬಿಕಿನಿ ಮತ್ತು ಕಂದು ಬಣ್ಣದ ಸನ್‌ಗ್ಲಾಸ್‌ನಲ್ಲಿ ಕಾಣಿಸಿಕೊಂಡಿದ್ದು, ಆಕೆಯ ತುಂಬಿಕೊಂಡ ಹೊಟ್ಟೆ ತುಸು ಗೋಚರಿಸುತ್ತದೆ. “ತನ್ನ ಮಗು ಸೂರ್ಯನ ಬೆಳಕನ್ನು ಆನಂದಿಸುತ್ತದೆʼʼ ಎಂದು ಅವಳು ಕ್ಯಾಪ್ಷನ್ ಹಾಕಿಕೊಂಡಿದ್ದಾಳೆ. ಇತ್ತೀಚೆಗೆ, ಇಲಿಯಾನಾ ತನ್ನ ಕೆಲವು ಚಿತ್ರಗಳನ್ನು Instagramನಲ್ಲಿ ಹಂಚಿಕೊಂಡಿದ್ದಾಳೆ. ಅದರಲ್ಲಿ ಆಕೆ ಹೊಟ್ಟೆ ಉಬ್ಬನ್ನು ನಾನಾ ಕೋನಗಳಲ್ಲಿ ಪ್ರದರ್ಶಿಸಿದ್ದಾಳೆ.
ಇಲಿಯಾನಾ ಇತ್ತೀಚೆಗಷ್ಟೇ ಕಪ್ಪು ಬಣ್ಣದ ಸ್ಲಿಟ್ ಡ್ರೆಸ್ ಧರಿಸಿರುವ ಫೋಟೋಗಳನ್ನೂ ಅಪ್‌ಲೋಡ್ ಮಾಡಿದ್ದಾಳೆ. ತನ್ನ ಹೊಟ್ಟೆಯನ್ನು ಮುದ್ದಾಗಿ ನೋಡುತ್ತಿರುವ ಈ ಕ್ಯಾಮೆರಾ ಪೋಸ್‌ನಲ್ಲಿ, ʼಬಂಪ್ ಅಲರ್ಟ್ʼ ಎಂದು ಕರೆದುಕೊಂಡಿದ್ದಾಳೆ.
ಇಲಿಯಾನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ವಿವರ ಶೇರ್ ಮಾಡುತ್ತಾಳೆ. ಈಗಿನ ಆಕೆಯ ಬರಲಿರುವ ಮಗುವಿನ ತಂದೆ ಯಾರು ಎಂಬುದು ಗೊತ್ತಿಲ್ಲ. ತಾನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಲ್ಲ. ಇತ್ತೀಚೆಗೆ ಒಮ್ಮೆ ಪುರುಷನ ಕೈಯೊಂದಿಗೆ ತನ್ನ ಕೈ ಸೇರಿಸಿದ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಳು.
ಕೆಲವು ವರದಿಗಳ ಪ್ರಕಾರ ಇಲಿಯಾನಾ, ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಲಿಯಾನಾ ಈ ಹಿಂದೆ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಬಹಳ ಕಾಲ ಡೇಟಿಂಗ್ ನಡೆಸಿದ್ದರು.
ಇಲಿಯಾನಾ ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರ ʼದಿ ಬಿಗ್ ಬುಲ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಜಯ್ ದೇವಗನ್ ನಿರ್ಮಾಣದ ಈ ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ರಣದೀಪ್ ಹೂಡಾ ಅವರ ʼಅನ್‌ಫೇರ್ ಅಂಡ್ ಲವ್ಲಿʼಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Bera movie: ಬೇರ: ಕೋಮು ದ್ವೇಷದ ಮೂಲ ಚಿತ್ರಿಸುವ ಕನ್ನಡ ಸಿನಿಮಾ ಜೂನ್ 16ರಂದು ರಿಲೀಸ್
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ24 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?