ವಿಡಿಯೋ
Groundnut Oil | ಒಂದು ಗಾಣದಿಂದ ತಿಂಗಳಿಗೆ 30,000 ಲಾಭ
ಕರ್ನಾಟಕ
Video Viral: ಜಗದ ಪರಿವೇ ಇಲ್ಲದೆ ರೋಡಿನ ಮಧ್ಯೆ ಬಂದಳು; ವೇಗವಾಗಿ ಬಂದ ಬಸ್ ಇನ್ನೇನು ಗುದ್ದೇ ಬಿಡ್ತು?
Viral News: ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಅಪಘಾತದಿಂದ ಪಾರಾಗಿದ್ದಾರೆ. ಬಸ್ ಚಾಲಕನ ಸಮಯಪ್ರಜ್ಞೆ ಈ ಮಹಿಳೆಯನ್ನು ಕಾಪಾಡಿದೆ. ರಸ್ತೆ ದಾಟುವಾಗ ಸುತ್ತಮುತ್ತ ನೋಡದೆ ಇದ್ದರೆ ಇಂತಹ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ, ಈ ಪ್ರಕರಣದಲ್ಲಿ ಮಾತ್ರ ಆ ಮಹಿಳೆಯ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಸ್ವಲ್ಪದರಲ್ಲಿಯೇ ಬಚಾವಾಗಿದ್ದಾಳೆ.
ಉಳ್ಳಾಲ: ಪಾದಚಾರಿ ಮಹಿಳೆ ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಇತ್ತೀಚೆಗೆ ನಡೆದಿದೆ. ಇದರ ಸಿಸಿಟಿವಿ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಆಕೆ ಬಚಾವ್ ಆಗಿ ಬಂದ ವಿಡಿಯೊ ಈಗ ಸಖತ್ ವೈರಲ್ (Video Viral) ಆಗಿದೆ.
ಮಂಗಳೂರಿನ ತೌಡುಗೋಳಿಯ ನರಿಂಗಾನದ ಬಳಿ ಈ ಘಟನೆ ನಡೆದಿದೆ. ಗೋಪಾಲಕೃಷ್ಣ ಖಾಸಗಿ ಬಸ್ ಚಾಲಕನ ಚಾಣಾಕ್ಷತನದಿಂದ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ: Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್ ಅಂದುಬಿಟ್ಟ!
ಏನಿದು ಘಟನೆ?
ಮುಡಿಪು ಬಳಿಯ ರಸ್ತೆಯಲ್ಲಿ ಮಹಿಳೆಯೊಬ್ಬರು ಯಾವುದೋ ಯೋಚನೆಯಲ್ಲಿ ದಾಟಲು ಮುಂದಾಗಿದ್ದಾರೆ. ಮೊದಲಿಗೆ ರಸ್ತೆ ಪಕ್ಕ ನಿಲ್ಲಿಸಿದ್ದ ಆಟೊವನ್ನು ದಾಟಿದ್ದಾರೆ. ಅವರ ಮುಂದೆ ಹಾಗೇ ಒಂದು ಓಮ್ನಿ ಸಹ ಹಾದುಹೋಗಿದೆ. ಆದರೆ, ತಮ್ಮ ಎಡಭಾಗದಲ್ಲಿ ಯಾವ ವಾಹನ ಬರುತ್ತಿದೆ ಎಂಬುದನ್ನೂ ನೋಡದೇ ಅರ್ಧ ರಸ್ತೆಗೆ ಬಂದು ಬಿಟ್ಟಿದ್ದಾರೆ. ಆ ಕಡೆಯಿಂದ ಖಾಸಗಿ ಬಸ್‌ವೊಂದು ವೇಗವಾಗಿ ಬರುತ್ತಿತ್ತು. ಇನ್ನೇನು ಆಕೆಗೆ ಡಿಕ್ಕಿ ಹೊಡೆದೇ ಬಿಟ್ಟಿತು ಎಂದೇ ಅಲ್ಲಿದ್ದವರು ಅಂದುಕೊಂಡರು. ಆ ಮಹಿಳೆ ಸಹ ಒಮ್ಮೆ ಅವಕ್ಕಾದಳು. ಆದರೆ, ಚಾಲಕನ ಸಮಯಪ್ರಜ್ಞೆ ಮಹಿಳೆಯನ್ನು ಉಳಿಸಿತು.
ವೇಗವಾಗಿ ಬಂದರೂ ಚಾಲಕ ಮಹಿಳೆಯನ್ನು ಕಂಡಿದ್ದಾರೆ. ಹೀಗಾಗಿ ತಕ್ಷಣವೇ ರಸ್ತೆಯ ಇನ್ನೊಂದು ಬದಿಗೆ ಹ್ಯಾಂಡಲ್ ತಿರುಗಿಸಿ ಸ್ವಲ್ಪ ತಿರುವು ಪಡೆದು ನಿಲ್ಲಿಸಿದ್ದಾರೆ. ಹೀಗಾಗಿ ಕೂದಲೆಳೆ ಅಂತರದಲ್ಲಿ ಮಹಿಳೆಯನ್ನು ರಕ್ಷಿಸಿದ್ದಾರೆ. ಕೈರಂಗಳ ನಿವಾಸಿ ತ್ಯಾಗರಾಜ್ ಬಸ್ ನಿವಾಸಿಯಾಗಿದ್ದಾರೆ. ಚಾಲಕನ ಸಮಯಪ್ರಜ್ಞೆಗೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: Viral News : ಹೆಂಡತಿಯನ್ನು ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ ಗಂಡ!
ಘಟನೆಯ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಮಹಿಳೆಯನ್ನು ಸುತ್ತುವರಿದ ನಾಗರಿಕರು ಆಕೆಯ ಆರೋಗ್ಯವನ್ನು ವಿಚಾರಿಸಿದ್ದಾರೆ.
ಕರ್ನಾಟಕ
Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್ ವಿಡಿಯೊ ಇಲ್ಲಿದೆ
Abhishek Ambareesh Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು, ಪ್ರಮುಖ ರಾಜಕೀಯ ನಾಯಕರು ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ.
South Cinema
G20 Meeting: ಜಿ20 ಸಭೆಯಲ್ಲೂ ನಾಟು ನಾಟು ಹವಾ; ರಾಮ್‌ಚರಣ್ ಜತೆ ದಕ್ಷಿಣ ಕೊರಿಯಾ ರಾಯಭಾರಿ ಡಾನ್ಸ್
G20 Meeting: ಜಮ್ಮು-ಕಾಶ್ಮೀರದಲ್ಲಿ ಸೋಮವಾರ ಆರಂಭವಾದ ಜಿ-20 ಸಭೆಯಲ್ಲೂ ನಾಟು ನಾಟು ಹಾಡು ಜನಮನ ಸೆಳೆದಿದೆ. ಇದೇ ಹಾಡಿಗೆ ರಾಮ್‌ಚರಣ್ ಹಾಗೂ ದಕ್ಷಿಣ ಕೊರಿಯಾದ ಭಾರತ ರಾಯಭಾರಿ ಕೂಡ ನೃತ್ಯ ಮಾಡಿದ್ದಾರೆ.
ಶ್ರೀನಗರ: ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದು, ಈಗ ಜಾಗತಿಕ ಮಟ್ಟದಲ್ಲಿ ಹಾಡು ಖ್ಯಾತಿ ಗಳಿಸಿದೆ. ನಟರಾದ ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಮಾಡಿದ ನೃತ್ಯವೂ ಮನ್ನಣೆ ಪಡೆದಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದಲ್ಲಿ ನಡೆದ ಜಿ-20 ಸಭೆಯಲ್ಲೂ (G20 Meeting) ನಾಟು ನಾಟು ಹಾಡಿಗೆ ನಟ ರಾಮ್‌ಚರಣ್ ಸೇರಿ ಹಲವರು ಡಾನ್ಸ್ ಮಾಡಿದ್ದಾರೆ.
ಹೌದು, ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಕಾಶ್ಮೀರದ ಶ್ರೀನಗರದಲ್ಲಿ ಜಿ-20 ಸಭೆ ನಡೆಯುತ್ತಿದೆ. ಇದೇ ವೇಳೆ, ನಟ ರಾಮ್‌ಚರಣ್ ಅವರು ಕೂಡ ಸಭೆಯಲ್ಲಿ ಪಾಲ್ಗೊಂಡು, ಸಿನಿಮಾ ಹಾಗೂ ಪ್ರವಾಸೋದ್ಯಮದ ಕುರಿತು ಮಾತನಾಡಿದರು. ಅಲ್ಲದೆ, ದಕ್ಷಿಣ ಕೊರಿಯಾದ ಭಾರತ ರಾಯಭಾರಿ ಚಾಂಗ್ ಜೇ ಬೋಕ್ ಅವರು ನಾಟು ನಾಟು ಹಾಡಿಗೆ ವೇದಿಕೆ ಮೇಲೆಯೇ ನೃತ್ಯ ಮಾಡಿದರು. ಇವರು ನೃತ್ಯ ಮಾಡಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೋಟೊ, ವಿಡಿಯೊ ಇಲ್ಲಿವೆ
ಇದನ್ನೂ ಓದಿ: G20 Meeting: ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಸಿದ ಅರಬ್ ಇನ್‌ಫ್ಲುಯೆನ್ಸರ್; ಇಲ್ಲಿದೆ ವಿಡಿಯೊ
ಪ್ರವಾಸೋದ್ಯಮದ ಪ್ರಮುಖ ರಾಜ್ಯವಾಗಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜಿ 20 ಪ್ರವಾಸೋದ್ಯಮ ಸಭೆಯನ್ನು ಆಯೋಜಿಸುವ ಮೂಲಕ ಭಾರತವು ತನ್ನ ಹಕ್ಕುದಾರಿಕೆಯನ್ನು ಪ್ರತಿಷ್ಠಾಪಿಸಿದೆ. ಚೀನಾ ಸೇರಿ ಕೆಲವು ಇಸ್ಲಾಮಿಕ್ ರಾಷ್ಟ್ರಗಳು ಈ ಸಭೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರೂ, ಅದ್ಧೂರಿಯಾಗಿ ಸಭೆ ಆಯೋಜಿಸಿ ಕಣಿವೆಯಲ್ಲಿ ಶಾಂತಿ ನೆಲೆಸಿದೆ ಎಂಬ ಸಂದೇಶ ರವಾನಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಸಭೆ ಆರಂಭವಾಗಿದ್ದು, ವಿದೇಶಿ ಗಣ್ಯರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಗಿದೆ.
ಕಾಶ್ಮೀರವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಲಿಸಿದ ಅರಬ್ ಇನ್‌ಫ್ಲುಯೆನ್ಸರ್
ಜಿ-20 ಸಭೆಗೂ ಮುನ್ನ ಅರಬ್ ಇನ್‌ಫ್ಲುಯೆನ್ಸರ್ ಆಗಿರುವ ಅಮ್ಜದ್ ತಾಹ ಅವರು ಕಣಿವೆಯಲ್ಲಿ ತಾವು ಸುತ್ತಾಡಿದ ಸ್ಥಳಗಳು, ಮನಸೂರೆಗೊಳಿಸಿದ ಸೌಂದರ್ಯದ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಹಾಗೆಯೇ, “ಇದು ಸ್ವಿಟ್ಜರ್‌ಲ್ಯಾಂಡ್ ಅಥವಾ ಆಸ್ಟ್ರಿಯಾ ಅಲ್ಲ. ಇದು ಭಾರತ, ಜಿ-20 ಸಭೆ ನಡೆಯುವ ಕಾಶ್ಮೀರದ ಸೌಂದರ್ಯವಾಗಿದೆ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಇಲ್ಲಿ ಭೂಮಿಯನ್ನು ಸಂರಕ್ಷಿಸಲಾಗಿದೆ, ಪರಿಸರವನ್ನು ಕಾಪಾಡಲಾಗಿದೆ. ಹವಾಮಾನ ಬದಲಾವಣೆಗೆ ಪರಿಹಾರದ ಮೂರ್ತ ರೂಪವಾಗಿ ಕಣ್ಣೆದುರಿಗಿದೆ” ಎಂದು ಒಕ್ಕಣೆ ಬರೆದಿದ್ದಾರೆ.
ದೇಶ
Nirmala Sitharaman : ಬಟ್ಟೆ ದುಬಾರಿ.. ತುಟಿ ಸುಡಲಿದೆ ಸಿಗರೇಟ್
-
ವಿದೇಶ18 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ16 hours ago
PSI Scam : ಪಿಎಸ್‌ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ11 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ12 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ16 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ8 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ