ಕೃಷಿ
Bullet Rose | 1ದಿನಕ್ಕೆ 6-7 ಸಾವಿರ ಲಾಭ
ಕರ್ನಾಟಕ
Hosadurga News: ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ; ರೈತರ ಸಮಸ್ಯೆ ಕೇಳೋರಿಲ್ಲ
Hosadurga News: ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ರೈತರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಖರೀದಿ ಕೇಂದ್ರಕ್ಕೆ ರಾಗಿ ತಂದು ನಾಲ್ಕು ದಿನವಾದರೂ ತೂಕಕ್ಕೆ ಹಾಕುತ್ತಿಲ್ಲ. ದಲ್ಲಾಳಿಗಳ ಹಾವಳಿ ಮಿತಿಮೀರಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಹೊಸದುರ್ಗ: ರಾಗಿ ಖರೀದಿ ಕೇಂದ್ರದಲ್ಲಿ (ragi procurement centre) ಸರಿಯಾದ ವ್ಯವಸ್ಥೆಗಳಿಲ್ಲದೆ, ರೈತರು ಪರದಾಡುವಂತಾಗಿದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಉಂಟಾಗಿದೆ. ರೈತರ ಗೋಳು ಕೇಳೋರಿಲ್ಲ ಎನ್ನುವಂತಾಗಿದೆ.
ರಾಗಿ ಮಾರಲು ಬಂದು ನಾಲ್ಕು ದಿನವಾದರೂ ತೂಕ ಹಾಕುವ ಹಾಗಿಲ್ಲ. ಸಂಜೆ 4 ಗಂಟೆಯಾದರೂ ಒಂದು ಚೀಲ ರಾಗಿ ಇಳಿಸಲ್ಲ. ಸೀನಿಯಾರಿಟಿ ಪಾಲನೆ ಮಾಡುತ್ತಿಲ್ಲ. ರೈತರ ಬದಲಾಗಿ ದಲ್ಲಾಳಿಗಳು ರಾಗಿಯನ್ನು ಮೊದಲು ತೂಕ ಮಾಡುತ್ತಾರೆ. ಲಾರಿಗೆ ಲೋಡ್ ಮಾಡಲು ಇಲ್ಲಿ ಹಮಾಲರದ್ದೇ ಪಾರುಪತ್ಯ. ರೈತರ ವಾಹನಗಳಿಗೆ ರಕ್ಷಣೆ ಇಲ್ಲ. ಕುಡಿಯಲು ನೀರಿಲ್ಲ. ಬೀದಿ ದೀಪ ಇಲ್ಲ. ರಾತ್ರಿ ವೇಳೆ ಬ್ಯಾಟರಿ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಅವರು ಕೇಂದ್ರಕ್ಕೆ ಆಗಮಿಸಿದಾಗ ರೈತರು ಮುತ್ತಿಗೆ ಹಾಕಿ ಪ್ರಶ್ನಿಸಿದರು.
ಇದನ್ನೂ ಓದಿ: Weekend With Ramesh: ʻನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದುʼ ಎಂದ ಪ್ರಭುದೇವ: ಹೇಗಿದೆ ಪ್ರೋಮೊ?
“ಸರ್ಕಾರದ ಪ್ರಕಾರ 50 ಕೆ.ಜಿ ರಾಗಿ ತೂಗಬೇಕು. ಆದರೆ 52 ಕೆಜಿ ರಾಗಿ ತೂಗುತ್ತಾರೆ. ತೂಕ ಕಡಿಮೆ ಇದ್ದರೆ ಅನ್ಲೋಡ್ ಮಾಡಲ್ಲ. 50 ಕೆ.ಜಿ ತೂಕ ಚೀಲವನ್ನು ಅನ್ಲೋಡ್ ಮಾಡಿ ಜರಡಿಗೆ ಹಾಕಲು ಹಮಾಲರು ಕಳೆದ ಬಾರಿ 15 ರೂ. ತೆಗೆದುಕೊಳ್ಳುತ್ತಿದ್ದರು. ಈ ಬಾರಿ 40 ರೂ. ಮಾಡಿದ್ದಾರೆ. ಇನ್ನು ಕ್ವಾಲಿಟಿ ಚೆಕ್ ಮಾಡುವವರಿಗೆ 200 ರೂ. ಕೊಡಬೇಕು. ಚೀಟಿ ಕೊಡುವವರಿಗೆ 500 ರೂ. ಕೊಡಬೇಕು. ಒಟ್ಟಾರೆ ಹೆಚ್ಚಿಗೆ ತೂಗಿದ 2 ಕೆಜಿ ರಾಗಿಗೆ ಹಣ ಕೊಡಬೇಕು ಅಥವಾ ರಾಗಿ ವಾಪಸ್ ನೀಡಬೇಕು” ಎಂದು ಕೊಂಡಜ್ಜಿ ಗ್ರಾಮದ ರೈತ ಶಶಿಧರ್ ಹೇಳಿದರು.
ಇದನ್ನೂ ಓದಿ: SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಶಿವಮೊಗ್ಗ, ದಾವಣಗೆರೆಯಲ್ಲಿ ಪ್ರತಿಭಟನೆ ಬಿಸಿ
ಇದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಶಿವಕುಮಾರ್, “ಹೆಚ್ಚಿಗೆ ತೂಕ ಮಾಡಲು ಹಾಗೂ ಹಣ ತೆಗೆದುಕೊಳ್ಳಲು ನಾವು ಹೇಳಲಿಲ್ಲ. ನಮಗೂ ಹಮಾಲರಿಗೂ ಸಂಬಂಧವಿಲ್ಲ. ಹಾಗೇನಾದರೂ ಹಣ ಸುಲಿಗೆ ಮಾಡಿದ್ದರೆ ಅಂತಹವರನ್ನು ಸಸ್ಪೆಂಡ್ ಮಾಡುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: DCGI : ನಕಲಿ ಔಷಧ ತಯಾರಿಸಿದ 18 ಕಂಪನಿಗಳ ಲೈಸೆನ್ಸ್ ರದ್ದು
ಕರ್ನಾಟಕ
Challakere News: ಬರದ ನಾಡಲ್ಲಿ ಬಂಪರ್ ಕಾಫಿ ಬೆಳೆ ಬೆಳೆದ ರೈತ; ಅಡಿಕೆ ತೋಟದ ಮಧ್ಯೆ ಕಾಫಿ ವಿಥ್ ಕಾಳಮೆಣಸು ಯಶಸ್ವಿ
Challakere News: ರೈತ ತಿಪ್ಪೇಸ್ವಾಮಿ ಅವರು ಬಯಲು ಸೀಮೆಯಲ್ಲೂ ಕಾಫಿ ಮತ್ತು ಕಾಳು ಮೆಣಸು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಪರಿಶ್ರಮದಿಂದ ಹಾಗೂ ಹೂಡಿಕೆ ಮೂಲಕ ಬಹುಬೆಳೆ ಬೆಳೆದರೆ ಲಾಭದಾಯಕವಾಗಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸುರೇಶ ಬೆಳೆಗೆರೆ, ಚಳ್ಳಕೆರೆ
ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ. ಬಯಲು ನಾಡು ಬರೆದ ನಾಡು ಎಂದೇ ಪ್ರಖ್ಯಾತಿ ಗಳಿಸಿರುವ ಚಳ್ಳಕೆರೆ ತಾಲೂಕಿನ ಭರಮಸಾಗರದ (Bharamsagar) ರೈತರೊಬ್ಬರು ಅಡಿಕೆ ಬೆಳೆಗಳ ನಡುವೆ ಕಾಫಿ ಬೆಳೆದಿದ್ದಾರೆ.
ರೈತ ಎಚ್.ಎಸ್. ತಿಪ್ಪೇಸ್ವಾಮಿ ಹೊಸಮನೆ ತಮ್ಮ 30 ಎಕರೆ ಭೂಮಿಯನ್ನು ಸಮಗ್ರ ಕೃಷಿಗೆ ಅಳವಡಿಸಿಕೊಳ್ಳುವ ಮೂಲಕ ಬಯಲು ಸೀಮೆಯಲ್ಲೂ ಕಾಫಿ ಮತ್ತು ಕಾಳು ಮೆಣಸು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ ನಗರದಿಂದ 10 ಕಿ.ಮೀ. ದೂರವಿರುವ ಭರಮಸಾಗರ ಸಮೀಪದ ಜಮೀನಿನಲ್ಲಿ ಸುಮಾರು 12-15 ವರ್ಷದ 300 ತೆಂಗಿನ ಗಿಡಗಳು, 11500 ಅಡಿಕೆ ಮರಗಳ ಕೃಷಿ ಬೆಳೆಗೆ 5 ಬೋರ್‌ವೆಲ್‌ಗಳ ನೀರಿನ ಆಶ್ರಯವಿದೆ. ಸಮಗ್ರ ಕೃಷಿಗೆ ತೊಡಗಿಕೊಂಡಿರುವ ರೈತ ಒಂದು ಸಾವಿರ ಗಿಡಗಳ ದಾಳಿಂಬೆ, ಒಂದಿಷ್ಟು ಮಾವು, ಸಪೋಟೋ ಸೇರಿದಂತೆ ವಿವಿಧ ಬೆಳೆಗಳನ್ನು ಸಮೃದ್ಧಿಯಾಗಿ ಪೋಷಣೆ ಮಾಡಿಕೊಂಡಿದ್ದಾರೆ.
ಕಾಫಿ ಬೆಳೆ
11500 ಅಡಿಕೆ ಗಿಡಗಳ ಬೆಳೆಯ ನಡುವೆ 8×8 ಅಂತರ ಬೆಳೆಯಾಗಿ 6 ಸಾವಿರ ಕಾಫಿ ಗಿಡ ಮತ್ತು 6 ಸಾವಿರ ಕಾಳು ಮೆಣಸು ನೆಡಲಾಗಿದೆ. ಈಗಾಗಲೇ 3 ವರ್ಷ ಕಳೆದಿರುವ ಕಾಫಿ ಗಿಡಗಳು ಸಮೃದ್ಧಿಯಾಗಿ ಬೆಳೆದುಕೊಂಡು ಹೂ ಕಟ್ಟಿವೆ. ಇದರ ನಡುವೆ ಅಡಿಕೆ ಗಿಡಗಳ ಆಶ್ರಯಿಸಿ ಬಹು ಎತ್ತರಕ್ಕೆ 6 ಸಾವಿರ ಕಾಳು ಮೆಣಸು ಬಳ್ಳಿ ಬೆಳೆದುಕೊಂಡಿದೆ. ಎರಡೂ ಬೆಳೆಗಳನ್ನು ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸುವಲ್ಲಿ ಪೋಷಣೆ ಮಾಡಿಕೊಂಡು ಉತ್ತಮ ಫಸಲಾಗುವಂತೆ ನೋಡಿಕೊಳ್ಳಲಾಗಿದೆ. ಒಂದು ವರ್ಷ ಅವಧಿಯೊಳಗೆ ಲಾಭದಾಯಕ ಫಸಲು ಕೈಗೆ ಸಿಗುವ ನಿರೀಕ್ಷೆ ರೈತನದಾಗಿದೆ.
ಶೃಂಗೇರಿ ಕೊಪ್ಪದಿಂದ ರಬೋಸ್ಟ್ ತಳಿಯ ಕಾಫಿ ಒಂದು ಗಿಡಕ್ಕೆ 10 ರೂ.ನಂತೆ 6 ಸಾವಿರ, ಪನೀಯೂರ್ ಗಿಡಗಳನ್ನು ಒಟ್ಟು 2.5 ಲಕ್ಷಕ್ಕೆ ಖರೀದಿ ಮಾಡಿಕೊಂಡು ಬರಲಾಗಿದೆ. ತೋಟದಲ್ಲಿ ನಾಟಿ ಮಾಡಲು ಮತ್ತು ಅಡಿಕೆ ಗಿಡಗಳ ನಡುವೆ ತುಂತುರು ಹನಿ ಸಾಮಗ್ರಿಗಳ ಅಳವಡಿಕೆ ಸೇರಿದಂತೆ ತೋಟದ ಮಧ್ಯದಲ್ಲಿ ಮಳೆ ನೀರು ನಿಲ್ಲದಂತೆ ಹೊರ ಹರಿದು ಹೋಗಲು ಮಾಡಿರುವ ವ್ಯವಸ್ಥೆಗೆ ಒಟ್ಟು 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ಇದನ್ನೂ ಓದಿ: BJP Karnataka: ʼಅಪ್ಪನನ್ನು ಮರೆತʼ ಬಿಜೆಪಿ ವಿರುದ್ಧ ಅನಂತಕುಮಾರ್ ಪುತ್ರಿ ಅಸಮಾಧಾನ
ಪಶು ಸಾಕಾಣಿಕೆ
ಸುಮಾರು 30 ಎಕರೆ ಸಮಗ್ರ ಬೆಳೆಯನ್ನು ಕಾಪಾಡಿಕೊಳ್ಳಲು ಪ್ರತಿ ಬೆಳೆಗೆ 100 ರಿಂದ 150 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಬೇಕಾಗುತ್ತದೆ. ಇದರ ಅನುಕೂಲಕ್ಕೆ ಪ್ರತ್ಯೇಕ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು 25 ರಾಸುಗಳನ್ನು ಸಾಕಲಾಗಿದೆ. ಇದನ್ನು ಹೈನುಗಾರಿಕೆಗೆ ಬಳಕೆ ಮಾಡಿಲ್ಲ. ಕೇವಲ ಸಗಣಿ ಮತ್ತು ಗಂಜಲ ಸಂಗ್ರಹಕ್ಕೆ ಸಾಕಲಾಗಿದೆ. ರಾಸುಗಳಿಂದ ಸಂಗ್ರಹವಾಗುವ ಸಗಣಿ ಮತ್ತು ಗಂಜಲವನ್ನು ಗೋಬರ್ ಗ್ಯಾಸ್ ಬಳಕೆ ಮೂಲಕ ಮಿಶ್ರಣ ಮಾಡಿ, ಸಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟು ಕಲಬೆರಿಕೆ ಮಾಡಿದ ಜೀವಾಮೃತ ಸೇರಿಸಿ ದೊಡ್ಡದಾದ ತೊಟ್ಟಿಯಲ್ಲಿ ಸಂಗ್ರಹ ಮಾಡಿದ ಪರಿಸರದ ಸೊಪ್ಪು ಮತ್ತು ಕೊಟ್ಟಿಗೆ ಗೊಬ್ಬರಕ್ಕೆ ಹರಿಬಿಡಲಾಗುತ್ತದೆ. ಇದರಿಂದ ಪ್ರತಿದಿನ 15 ರಿಂದ 18 ಸಾವಿರ ಲೀಟರ್ ಜೀವಾಮೃತ ಬಳಕೆಯಲ್ಲಿ ಗಿಡಗಳಿಗೆ ಯಾವುದೇ ರೋಗಬಾಧೆ ಆಗದಂತೆ ಸಮೃದ್ಧಿಯಾಗಿ ಬೆಳಸಿದ್ದಾರೆ. ಅಲ್ಲಲ್ಲಿ ಗಿಡಗಳ ನಡುವೆ ಜೇನು ಸಾಕಾಣಿಕೆ ಕೃಷಿಯೂ ಮಾಡಲಾಗಿದೆ. ತೋಟದ ಬೆಳೆ ಪೋಷಣೆಗೆ ಪ್ರತಿದಿನ 10 ಕಾರ್ಮಿಕರ ಶ್ರಮ ಇಲ್ಲಿದೆ.
ಇದನ್ನೂ ಓದಿ: Ram Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ
ನೀರಿನ ಸಂಗ್ರಹ
ಬರಗಾಲದ ಪರಿಸ್ಥಿತಿಯಲ್ಲೂ ತೋಟವನ್ನು ಹಾಳಾಗದಂತೆ ನೋಡಿಕೊಂಡಿರುವ ಇವರು 120×90 ಅಡಿ ಉದ್ದದ ಸುಸಜ್ಜಿತ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 70 ಸಾವಿರ ರೂ. ಬೆಲೆಯ ದೊಡ್ಡದಾದ ತಾಡಪಲ್ ಬಳಕೆ ಮಾಡಲಾಗಿದೆ. ನೀರಿನ ತೊಟ್ಟಿಗೆ ಟ್ರ್ಯಾಕ್ಟರ್ ನೀರು ಸಂಗ್ರಹಿಸಿ ತೋಟದ ಬೆಳೆ ರಕ್ಷಣೆ ಮಾಡಿಕೊಂಡಿದ್ದಾರೆ. ಪ್ರಸ್ತುತ 5 ಬೋರ್‌ವೆಲ್‌ಗಳಿಂದ ಸಮೃದ್ಧಿಯಾಗಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಬಯಲುಸೀಮೆಯ ಮಣ್ಣಿನ ನೆಲದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆ ಅಷ್ಟಾಗಿ ಫಸಲು ನೀಡುವುದಿಲ್ಲ ಎನ್ನುವ ಆಂತಕ ಇತ್ತು. ಆದರೂ, ಪ್ರಯತ್ನ ಮಾಡಿ ನಾಟಿ ಮಾಡಲಾಗಿದೆ. ಈ ಭಾಗದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮನಸ್ಸಿರಲಿಲ್ಲ. 3 ವರ್ಷದ ಬಳಿಕ ಸಮೃದ್ಧಿಯಾಗಿ ಬೆಳೆ ಬೆಳೆದಿರುವ ಕಾರಣ, ನಮ್ಮ ಭೂಮಿಯಲ್ಲೂ ಕಾಫಿ ಬೆಳೆ ದಕ್ಕುತ್ತದೆ ಎನ್ನುವ ವಿಶ್ವಾಸ ಮೂಡಿದಂತಾಗಿದೆ ಎಂದು ರೈತ ತಿಪ್ಪೇಸ್ವಾಮಿ ಹೇಳಿದ್ದಾರೆ. ಗುಟ್ಕಾ ಪದಾರ್ಥಗಳ ನಿಷೇಧದಿಂದ ಕೆಲವೊಮ್ಮೆ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತದೆ. ಸುಮಾರು 15-20 ವರ್ಷ ಅಡಿಕೆ ಬೆಳೆಯನ್ನು ಸೀಮಿತ ನಿರೀಕ್ಷೆ ಇಟ್ಟುಕೊಳ್ಳದೆ ಅಂತರ ಬೆಳೆ ಬೆಳೆಯುವ ಮೂಲಕ ಕಾಫಿ ಮತ್ತು ಕಾಳುಮೆಣಸು ಬೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: IPL 2023: ಗೆಳೆಯ ಕೊಹ್ಲಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಬಿಡಿ; ವಿಡಿಯೊ ವೈರಲ್
ರೈತ ತಿಪ್ಪೇಸ್ವಾಮಿ ಸುಮಾರು 15 ಎಕರೆ ಅಡಿಕೆ ಫಸಲು ನಡುವೆ ಕಾಫಿ ಮತ್ತು ಕಾಳುಮೆಣಸು ಬೆಳೆದು ಬಯಲುಸೀಮೆಯಲ್ಲಿ ಕಾಫಿ ಬೆಳೆಯ ಯಶಸ್ವಿ ಕಂಡಿದ್ದಾರೆ. ಉತ್ತಮ ಇಳುವರಿ ಬಂದಲ್ಲಿ ಕಾಫಿ ಬೆಳೆಯು ಕ್ವಿಂಟಾಲ್‌ಗೆ 15 ಸಾವಿರ ರೂಪಾಯಿ, ಒಂದು ಕೆಜಿ ಕಾಳುಮೆಣಸಿಗೆ 400 ರೂ.ನಂತೆ ಬೆಲೆ ಸಿಗುತ್ತದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಅಂಕಣ
ಗೋ ಸಂಪತ್ತು: ಬೆಣ್ಣೆಯೆಂಬ ನವನೀತದ ಅನಿಯಮಿತ ಉಪಯೋಗ!
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ದೇಶಿ ಗೋವಿನ ಬೆಣ್ಣೆಯ ಪ್ರಾಮುಖ್ಯತೆಯನ್ನು (importance of homemade butter) ತಿಳಿಸಿಕೊಡಲಾಗಿದೆ.
ದಿನೆ ದಿನೆ ಯತ್‌ನವತಾಮುಪೈತಿ ಇತಿ ನವನೀತಮ್ |
ಇದರರ್ಥ ಯಾವುದು ಪ್ರತಿ ದಿನ ಹೊಸ ಉತ್ಪತ್ತಿಯನ್ನು ಮಾಡುತ್ತದೆಯೋ ಮತ್ತು ಹೊಸದೆನಿಸುತ್ತದೆಯೋ ಅದನ್ನು ನವನೀತ ಎಂದು ಹೇಳಲಾಗುತ್ತದೆ. ನಿಮಗೆ ತಿಳಿದಿರಲಿ ಬೆಣ್ಣೆಗೆ ನವನೀತ ಎಂಬ ಬದಲಿ ಶಬ್ದವಿದೆ.
ಇಂತಹ ಬೆಣ್ಣೆಯು ಪ್ರತಿ ದಿನ ಶರೀರದಲ್ಲಿ ಸೇರಿದ ಹೊಸ ಮತ್ತು ತರುಣ ಧಾತುಗಳ ಉತ್ಪತ್ತಿಯನ್ನು ಮಾಡುತ್ತದೆ ಮತ್ತು ಶರೀರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿಯೇ ಇದಕ್ಕೆ ನವನೀತ ಎಂದು ಹೇಳುತ್ತಿರುವುದು.
ಆಯುರ್ವೇದದಲ್ಲಿ ಹಲವು ರೀತಿಯ ಹಾಲು, ಹಾಲಿನ ಉತ್ಪನ್ನಗಳು, ಮೊಸರು, ಮಜ್ಜಿಗೆ, ಬೆಣ್ಣೆಯ ಬಗ್ಗೆ ವಿವರಿಸಲಾಗಿದೆ. ಹೀಗೆ ಬೆಣ್ಣೆಯ ಬಗ್ಗೆಯೂ ಸವಿಸ್ತಾರವಾದ ವಿವರಣೆಯೊಂದಿಗೆ ಅದನ್ನು ಔಷಧದ ರೂಪದಲ್ಲಿ ಬಳಸುವ ಬಗೆಯನ್ನು ತಿಳಿಸುತ್ತಾ ʻವಿಶೇಷನಾ ಬಲನಾಮ್ ಪ್ರಶ್ಯತೆ ʼಎಂಬುದಾಗಿ ಹೇಳಲಾಗಿದೆ. ಇದರ ಅಭಿಪ್ರಾಯಕ್ಕನುಸಾರ ಬೆಣ್ಣೆಯು ಅಗ್ನಿದೀಪಕ ಮತ್ತು ರುಚಿಕರವಾಗಿದೆ. ಹೊಸ ಸಂಶೋಧನೆಗನುಸಾರ ಬೆಣ್ಣೆಯಿಂದಾಗಿ ಅನೇಕ ವಿಧದ ರೋಗಾಣುಗಳಿಂದ ಜೀರ್ಣಾಂಗವ್ಯೂಹದ ಸಂರಕ್ಷಣೆಯಾಗುತ್ತದೆ. ಬೆಣ್ಣೆಯಲ್ಲಿ ಉತ್ತಮವಾಗಿರುವಂತಹ ರೋಗಾಣು ವಿರೋಧಿ ಪ್ರಕ್ರಿಯೆ ಅಂದರೆ ಆಂಟಿ ಫಂಗಲ್ ಆಕ್ಟಿವಿಟಿ ಇದೆ. ಆದುದರಿಂದ ಚಿಕಿತ್ಸೆಗೆ ಕಠಿಣವೆನಿಸುವ ಗಜಕರ್ಣವನ್ನು ನಿರ್ಮಾಣ ಮಾಡುವ ಅಂಟುರೋಗದ ಅಂದರೆ ಫಂಗಲ್ ಇನ್‌ಫೆಕ್ಷನ್‌ಗೆ ಪ್ರತಿರೋಧವನ್ನು ಬೆಣ್ಣೆಯು ಮಾಡುತ್ತದೆ.
ದೇಶಿ ಗೋವಿನ ಹಾಲಿನ ಶೇಕಡಾ 90ರಷ್ಟು ಕೊಬ್ಬು, ಸ್ವಲ್ಪ ಭಾಗ ಪ್ರೋಟೀನ್, 50 ರಿಂದ 60 ಶೇಕಡಾ ಕ್ಯಾಲ್ಸಿಯಂ ಬೆಣ್ಣೆಯಲ್ಲಿರುತ್ತದೆ. ಇದರಲ್ಲಿರುವ ಕೊಬ್ಬು ಅತ್ಯಂತ ಶ್ರೇಷ್ಠಮಟ್ಟದ್ದು ಎಂದು ಸಾಬೀತಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದು ಸ್ವಾದದಲ್ಲಿ ರುಚಿಕರವಾಗಿದ್ದು, ಸಾಧಾರಣ ತುಪ್ಪದಂತೆ ಇದರ ಗುಣವಿರುತ್ತದೆ. ಇದರಲ್ಲಿ ಶೀತ ಗುಣವಿದ್ದು ಬುದ್ಧಿವರ್ಧಕವಾಗಿದೆ. ಹಾಗೆಯೇ ಇದರಲ್ಲಿ ನೇತ್ರ ರೋಗನಾಶಕ, ಕಫಕಾರಕ, ದಾಹನಾಶಕ ಗುಣವಿದ್ದು, ಧಾತುವರ್ಧಕವಾಗಿದೆ.
ಹೃದಯ ಸಂಬಂಧಿತ ಕಾಯಿಲೆ ದೂರ
ಬೆಣ್ಣೆ ಮತ್ತು ತುಪ್ಪದ ಕಣವು ಮನುಷ್ಯನ ರಕ್ತದೊಡನೆ ಸುಲಭವಾಗಿ ಬೆರೆತು ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಕುರುಡು, ಕಿವುಡು, ಮರೆವು ಮತ್ತು ಮೆದುಳಿಗೆ ಸಂಬಂಧಿಸಿದ ರೋಗಗಳಿಗೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ದೇಶಿ ಗೋವಿನ ಬೆಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಕಿಡ್ನಿ ಸದೃಢವಾಗುತ್ತದೆ. ಮಾನವನ ದೇಹದಲ್ಲಿ ಕೆರೋಟಿನ್ ಕೊರತೆಯಿಂದಾಗಿಯೇ ಅತ್ಯಂತ ಭಯಾನಕ ಕ್ಯಾನ್ಸರ್ ಬರುವ ಸಂಭವ ಹೆಚ್ಚಾಗಿದೆ. ಆದರೆ ದೇಶಿ ಗೋತಳಿಗಳ ತುಪ್ಪದಲ್ಲಿ ʻಕೆರೋಟಿನ್ʼ ಎಂಬ ಮಹತ್ವಪೂರ್ಣ ಅಂಶವಿದ್ದು, ಅದರ ಸೇವನೆಯಿಂದ ದೇಹದಲ್ಲಿ ವಿಟಮಿನ್ ʻಎʼ ವೃದ್ಧಿಯಾಗುತ್ತದೆ. ಇದು ಕಣ್ಣಿನ ಮತ್ತು ಚರ್ಮಕ್ಕೆ ಅತ್ಯವಶ್ಯಕವಾದುದಾಗಿದೆ.
ದೇಶಿ ಗೋವಿನ ಬೆಣ್ಣೆಯಲ್ಲಿ ಸಮೃದ್ಧವಾಗಿರುವ ಚಿಕ್ಕ ಮತ್ತು ಮಧ್ಯಮ ಚೇನ್ ಫ್ಯಾಟಿ ಆಸಿಡ್‌ನಿಂದಾಗಿ ಅದರಲ್ಲಿ ಕ್ಯಾನ್ಸರ್ ರೋಗದ ವಿರುದ್ಧ ಕಾರ್ಯ ಮಾಡುವ ಶಕ್ತಿ ಇರುತ್ತದೆ. ಇದರಲ್ಲಿನ ಕಾಂಜೂಗೇಟೆಡ್ ಲಿನೊಲಿಕ್ ಆಸಿಡ್‌ನಿಂದಲೂ ಶರೀರಕ್ಕೆ ಕ್ಯಾನ್ಸರ್ ರೋಗದ ವಿರುದ್ಧ ಉತ್ತಮ ಪ್ರತಿರೋಧ ಕ್ಷಮತೆಯು ಪ್ರಾಪ್ತವಾಗುತ್ತದೆ. ಇದರಲ್ಲಿನ ವಿಟಮನ್ ʻಎʼ ಮತ್ತು
ʻಇ’ ಎಂಬ ಎರಡು ಘಟಕಗಳು ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್ಸ್‌ನ ಪೂರೈಕೆ ಮಾಡುತ್ತವೆ ಮತ್ತು ಇದರಲ್ಲಿರುವ ಸೆಲೆನಿಯಮ್ ಮತ್ತು ಕೊಲೆಸ್ಟ್ರಾಲ್ ಸಹ ಕ್ಯಾನ್ಸರ್ ರೋಗದ ವಿರುದ್ಧ ಉತ್ತಮ ಪ್ರತಿರೋಧವನ್ನು ಮಾಡುವುದು ಕಂಡುಬಂದಿದೆ.
ಕೊಲೆಸ್ಟ್ರಾಲ್‌ಗೆ ಉತ್ತಮ ಮೂಲ
ದೇಶಿ ಗೋವಿನ ಬೆಣ್ಣೆಯಲ್ಲಿ ಲೆಸಿಥೀನ್ ಎಂಬ ಹೆಸರಿನ ಘಟಕವಿರುತ್ತದೆ. ಇದು ಶರೀರದಲ್ಲಿನ ಕೊಲೆಸ್ಟ್ರಾಲ್‌ನ ಚಯಾಪಚಯವನ್ನು ಉತ್ತಮ ರೀತಿಯಲ್ಲಿ ಕಾಪಾಡುತ್ತದೆ. ಇದರಿಂದ ಶರೀರದ ಫ್ರಿರ‍್ಯಾಡಿಕಲ್ಸ್‌ನಿಂದ ರಕ್ಷಣೆಯಾಗುತ್ತದೆ. ಫ್ರಿರ‍್ಯಾಡಿಕಲ್ಸ್‌ನಿಂದ ರಕ್ತನಾಳಗಳಿಗಾಗುವ ತೊಂದರೆಯಿಂದ ಬೆಣ್ಣೆಯ ಕವಚವು ರಕ್ತನಾಳಗಳನ್ನು ಕಾಪಾಡುತ್ತದೆ. ಸೆಲೆನಿಯಮ್ ಇದು ಆ್ಯಂಟಿ ಆಕ್ಸಿಡೆಂಟ್‌ನ ಬೆಣ್ಣೆಯಲ್ಲಿನ ಪ್ರಮಾಣವು ಇತರ ಪದಾರ್ಥಗಳಿಗಿಂತ ಹೆಚ್ಚಿರುತ್ತದೆ. ಶರೀರಕ್ಕೆ ಅವಶ್ಯಕವಿರುವ ಒಳ್ಳೆಯ ಕೊಲೆಸ್ಟ್ರಾಲ್‌ಗೆ ಬೆಣ್ಣೆಯು ಒಂದು ಉತ್ತಮ ಮೂಲವಾಗಿದೆ.
ಸಂಧಿವಾತದ ತೊಂದರೆಯನ್ನು ತಡೆಗಟ್ಟಲು ಬೆಣ್ಣೆಯು ಅತಿ ಉಪಯುಕ್ತವಾದುದು ಎಂಬುದು ಸಾಬೀತಾಗಿದೆ.
ಮನುಷ್ಯನ ವಯಸ್ಸು ಹೆಚ್ಚಾದ ನಂತರ ಸಂದುಗಳು ಶುಷ್ಕವಾಗ ತೊಡಗುತ್ತವೆ. ಅವುಗಳ ಒಂದರ ಮೇಲೊಂದರ ಘರ್ಷಣೆಯಿಂದ ಸಂದುಗಳಲ್ಲಿನ ಎಲುಬುಗಳು ಸವೆಯತೊಡಗುತ್ತವೆ. ಶುಷ್ಕತೆಯಿಂದಾಗಿ ಸಂದುಗಳಿಗೆ ರಕ್ತ ಪೂರೈಕೆಯನ್ನು ಮಾಡುವ ರಕ್ತನಾಳಗಳು ಬಿರುಸಾಗುತ್ತವೆ. ಎಲುಬುಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಿ ಅವು ಮೃದುವಾಗಿರಬೇಕು. ಆದರೆ ವಯಸ್ಸಾದಂತೆ ಇಂತಹ ಭಾಗವು ಹೆಚ್ಚು ಗಟ್ಟಿಯಾಗುತ್ತದೆ ಮತ್ತು ಎಲುಬುಗಳು ಟೊಳ್ಳಾಗುತ್ತವೆ. ಇವುಗಳ ಪೈಕಿ ಯಾವುದೇ ವಿಕೃತಿಯಾದರೂ, ಸಂದು ನೋವು ಪ್ರಾರಂಭವಾಗುತ್ತದೆ. ನಿಯಮಿತವಾಗಿ ಬೆಣ್ಣೆ ತಿನ್ನುವುದರಿಂದ ಎಲ್ಲಾ ವಿಕೃತಿಗಳನ್ನು ತಡೆಗಟ್ಟಬಹುದು.
ಹಾಲಿನ ಪಾಶ್ಚರೈಸೇಷನ್ ಮಾಡುತ್ತಿರುವಾಗ ಹಾಲಿನಲ್ಲಿನ ಜಿಡ್ಡು ನಾಶವಾಗುತ್ತದೆ. ಇಂತಹ ಹಾಲನ್ನು ಕುಡಿದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಸಂದು ನೋವಿನ ತೊಂದರೆಯಾಗಬಹುದು. ಆದರೆ ಆಹಾರದಲ್ಲಿ ಬೆಣ್ಣೆಯನ್ನು ಸೇರಿಸಿದರೆ ಈ ಅಪಾಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಬೆಣ್ಣೆಯಲ್ಲಿಯೂ ಆಯೋಡಿನ್ ಉಂಟು!
ಬೆಣ್ಣೆಯು ಆಯೋಡಿನ್‌ನ ಒಂದು ಉತ್ತಮ ಮೂಲವಾಗಿದೆ. ಇದರಲ್ಲಿನ ಆಯೋಡಿನ್ ಶರೀರದಲ್ಲಿ ಪಚನವಾಗಲು ಸಹಾಯಕವಾದುದಾಗಿದೆ. ಸಾಮಾನ್ಯವಾಗಿ ಪರ್ವತ ಪ್ರದೇಶಗಳು ಸಮುದ್ರದಿಂದ ದೂರವಿರುತ್ತವೆ. ಅಲ್ಲಿ ಆಯೋಡಿನ್‌ಯುಕ್ತ ಉಪ್ಪು ಸಹಜವಾಗಿ ಸಿಗುವುದಿಲ್ಲ. ಆದುದರಿಂದ ಆ ಸ್ಥಳದಲ್ಲಿ ಬೆಣ್ಣೆ ಉಪಯುಕ್ತವಾದುದು ಎಂದೇ ಹೇಳಲಾಗಿದೆ.
ಪಾರ್ಶ್ವವಾಯುವಾದಾಗ ಶರೀರದ ಯಾವುದಾದರೂ ಅವಯವ ಅಥವಾ ಯಾವುದಾದರೊಂದು ಬದಿ ಅಥವಾ ಅರ್ಧ ಶರೀರವು ಶಕ್ತಿಗುಂದುತ್ತದೆ. ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಯಲ್ಲಿ ಇದಕ್ಕೆ ಫಿಜಿಯೋಥೆರಪಿ ಬಿಟ್ಟು ಇತರ ಚಿಕಿತ್ಸೆ ಲಭ್ಯವಿಲ್ಲ. ಆದರೆ ಫಿಜಿಯೋಥೆರಪಿ ಮಾಡುವುದಕ್ಕೆ ಸ್ನಾಯುಗಳಲ್ಲಿ ಶಕ್ತಿ ಬರಲು ಯಾವುದೇ ಉಪಾಯವಿಲ್ಲ. ಆದರೆ ಈ ಕೆಲಸವನ್ನು ಬೆಣ್ಣೆಯು ಮಾಡುತ್ತದೆ. ಆದುದರಿಂದ ಪಾರ್ಶ್ವವಾಯು ಪೀಡಿತರ ಆಹಾರದಲ್ಲಿ ಬೆಣ್ಣೆಯನ್ನು ಬಳಸಬೇಕು ಎಂದು ವೈಜ್ಞಾನಿಕರೇ ಹೇಳುವಂತಾಗಿದೆ.
ಜ್ವರದ ಕಾಯಿಲೆಯ ನಂತರ ಶರೀರದಲ್ಲಿನ ಯಾವುದೇ ಭಾಗದಿಂದಾಗುವ ರಕ್ತಸ್ತ್ರಾವಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ರಕ್ತಪಿತ್ತ ಎಂದು ಹೇಳಲಾಗಿದೆ. ಈ ಕಾಯಿಲೆಯಲ್ಲಿ ಬೆಣ್ಣೆಯು ರಕ್ತ ಮತ್ತು ಪಿತ್ತ ಎರಡನ್ನೂ ಶಮನಗೊಳಿಸಿ ರಕ್ತ ಪ್ರವಾಹವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿನ ಜಿಡ್ಡಿನಂಶವು ರೋಗಿಯ ಶಕ್ತಿಯನ್ನು ಉತ್ತಮಪಡಿಸುವುದರೊಂದಿಗೆ ಇದರ ಸೇವನೆಯಿಂದ ಹೊಸ ಕೋಶಗಳ ನಿರ್ಮಾಣಕ್ಕೆ ಸಹಾಯಕವಾಗುತ್ತದೆ.
ಪಾಶ್ಚಾತ್ಯರಿಗೂ ಗೊತ್ತು ಬೆಣ್ಣೆಯ ಮಹತ್ವ
ಡಾ. ವೆಸ್ಟನ್ ಪ್ರಾಯಿಸ್ ಎಂಬ ಒಬ್ಬ ಖ್ಯಾತ ಸಂಶೋಧಕ 1930ನೇ ಇಸವಿಯಲ್ಲಿ ಬೆಣ್ಣೆಯ ಕುರಿತಂತೆ ಅಧ್ಯಯನವೊಂದನ್ನು ಮಾಡಿ ಅದರಲ್ಲಿ ಜಗತ್ತಿನಲ್ಲಿ ಸದೃಢವಾಗಿರುವ ಮತ್ತು ದೀರ್ಘಾಯುಷ್ಯವನ್ನು ಹೊಂದಿರುವ ಬಹುತೇಕ ಜನರ ಆಹಾರ ಪದ್ಧತಿಯಲ್ಲಿ ಬೆಣ್ಣೆ ಎಂಬುದು ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗೆಯೇ ಇವರೆಲ್ಲರ ಸ್ವಾಸ್ಥ್ಯ ರಹಸ್ಯವೇ ಬೆಣ್ಣೆಯ ಸೇವನೆ ಎಂಬುದಾಗಿ ತಿಳಿಸಿದ್ದಾನೆ. ಹೀಗೆ ಪಾಶ್ಚಾತ್ಯರು ಇಂದಿಗೂ ಬೆಣ್ಣೆಯನ್ನು ನಿಯಮಿತವಾಗಿ ತಮ್ಮ ಭೋಜನ ಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.
ಇಂದಿಗೂ ಸ್ವಿರ್ಜಲ್ಯಾಂಡ್‌ನಲ್ಲಿನ ಸಾಕಷ್ಟು ಹಳ್ಳಿಗಳಲ್ಲಿನ ಚರ್ಚಗಳಲ್ಲಿ ಬೆಣ್ಣೆಗೆ ದೈವೀ ಪದಾರ್ಥವೆಂದು ಗೌರವಿಸಲಾಗುತ್ತದೆ. ಅರಬ್ಬಿ ಜನರಲ್ಲಿಯೂ ಬೆಣ್ಣೆಗೆ ಗೌರವ ಸ್ಥಾನವಿದೆ. ಅಮೆರಿಕದ ಒಂದೆರಡು ತಲೆಮಾರಿನ ಹಿಂದಿನವರಲ್ಲಿ, ಬೆಣ್ಣೆ ತಿಂದು ಬೆಳೆದ ಮಕ್ಕಳೇ ಹೆಚ್ಚು ಬಲಿಷ್ಠ ಮತ್ತು ಶಕ್ತಿಶಾಲಿಯಾಗಿರುತ್ತಾರೆ ಎಂಬ ಶ್ರದ್ಧೆಯಿದ್ದುದು ಕಂಡುಬರುತ್ತದೆ. ಹೀಗೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಜಗತ್ತಿನ ಸಾಕಷ್ಟು ದೇಶಗಳಲ್ಲಿ ಇಂದಿಗೂ ಪರಂಪರಾಗತವಾಗಿ ಬೆಣ್ಣೆಗೆ ಮಹತ್ವದ ಸ್ಥಾನವನ್ನು ನೀಡಿರುವುದು ಕಂಡುಬರುತ್ತದೆ.
ಬೆಣ್ಣೆ ಯೋಗ್ಯ, ಬಟರ್ ಅಲ್ಲ!
ಹೀಗೆ ಸಾವಿರಾರು ವರ್ಷಗಳಿಂದ ಮನುಷ್ಯನಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರದ ಪ್ರತಿಕರ ಕ್ಷಮತೆಯನ್ನು ಉತ್ತಮವನ್ನಾಗಿರಿಸಿ ನೂರಾರು ಪ್ರಯೋಜನಗಳನ್ನು ಕೊಟ್ಟ ಜೀವದ್ರವವಿಂದು ಮನುಷ್ಯನ ಸ್ವಾರ್ಥದಿಂದ ಹತ್ತಾರು ಆಪಾದನೆಗಳನ್ನು ತನ್ನ ಮೇಲೆ ಹಾಕಿಕೊಂಡಿದೆ. ಇಂತಹ ಬೆಣ್ಣೆ ಹೊಸತಾದಷ್ಟೂ ಆರೋಗ್ಯಕರವಾದುದು. ಹಾಗೆಯೇ ಹಳೆಯದಾದಲ್ಲಿ ಅದರಲ್ಲಿ ಆಮ್ಲಗುಣ ಹೆಚ್ಚುತ್ತದೆ. ಇದರ ಸೇವನೆ ದೇಹಕ್ಕೆ ಹಿತಕರವಲ್ಲ ಎಂದೇ ಹೇಳಲಾಗಿದೆ. ಹಾಗೆಯೇ ಇಂದು ಬೆಣ್ಣೆಯ ಹೆಸರಿನಲ್ಲಿ ಪೇಟೆಯಲ್ಲಿ ಸಿಗುವ ಬಟರ್ ಇದು ಸೇವನೆಗೆ ಯೋಗ್ಯವಾದುದಲ್ಲ.
ಪೇಟೆಯಲ್ಲಿನ ಬಹುತೇಕ ಬೆಣ್ಣೆಗಳು ವಿದೇಶಿ ಹಸುವಿನ ಹಾಲಿನ ಕ್ರೀಮ್‌ನಿಂದ ಮಾಡಲ್ಪಟ್ಟಿರುತ್ತದೆ. ಸಾಂಪ್ರದಾಯಿಕವಾಗಿ ದೇಶಿ ಗೋವಿನ ಹಾಲಿನ ಕೆನೆಗೆ ಹೆಪ್ಪು ಹಾಕಿ, ಅದನ್ನು ಮೊಸರು ಮಾಡಿ, ಅಂತಹ ಮೊಸರಿನಿಂದ ತಯಾರಿಸಿದ ಬೆಣ್ಣೆಯಲ್ಲಿ ಮಾತ್ರ ಮೇಲೆ ಹೇಳಿರುವ ಅಷ್ಟು ಔಷಧೀಯ ಗುಣಗಳು ಅಡಕವಾಗಿರುತ್ತವೆ. ಹೀಗಾಗಿ ಮನೆಯಲ್ಲಿ ದೇಶಿ ಆಕಳ ಹಾಲಿನಿಂದ ಮೊಸರು ಮಾಡಿ, ಕಡೆದು ಬೆಣ್ಣೆ ತೆಗೆದು ಅದನ್ನು ಸೇವಿಸುವುದು ಒಳಿತು. ಇಲ್ಲವೇ ಅದರಿಂದ ತುಪ್ಪ ತಯಾರಿಸಿ ಅದನ್ನು ಸೇವಿಸುವುದು ಸಹ ಒಳಿತು. ಇಲ್ಲವಾದರೆ ನಂಬಿಕೆಯ ಮೂಲಗಳಿಂದ ಶುದ್ಧ ದೇಶಿ ಗೋವಿನ ಬೆಣ್ಣೆ ಅಥವಾ ತುಪ್ಪ ತರಿಸಿ ಸೇವಿಸುವುದು ಅತ್ಯಂತ ಸೂಕ್ತ.
ಇದನ್ನೂ ಓದಿ : ಗೋ ಸಂಪತ್ತು : ಕೃಷ್ಣನೇಕೆ ಬೆಣ್ಣೆ ಕದ್ದ? ಇಲ್ಲಿದೆ ವೈಜ್ಞಾನಿಕ ಸತ್ಯ!
ಕೃಷಿ
Progressive Farming : ಬಂಡೆಗಲ್ಲಿನ ಮೇಲೆ ಬಂಗಾರದ ಬೆಳೆ
ಸಮಗ್ರ ಕೃಷಿ ಮೂಲಕ ಬಂಡೆಗಲ್ಲು ತುಂಬಿದ ಪ್ರದೇಶದಲ್ಲಿ ಭರ್ಜರಿ ಬೆಳೆ ತೆಗೆಯುತ್ತಿರುವ ಪ್ರಗತಿಪರ ಕೃಷಿಕ.
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!